ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Vishweshwar Bhat Column: ಜಪಾನೀಸ್‌ ಭಾಷೆ ಸುಲಭವೇ ?

ಜಪಾನೀಸ್ ಭಾಷೆಯನ್ನು ಕಲಿಯುವುದು ಕಷ್ಟವೋ ಸುಲಭವೋ ಎಂಬುದು ಬಹಳಷ್ಟು ಸಂಗ ತಿಗಳ ಮೇಲೆ ಅವಲಂಬಿತವಾಗಿದೆ. ಕೆಲವರಿಗೆ ಇದು ಬಹಳ ಕಷ್ಟವಾಗಬಹುದು, ಆದರೆ ಸೂಕ್ತ ವಾದ ಮಾರ್ಗದಲ್ಲಿ ಅಭ್ಯಾಸ ಮಾಡಿದರೆ, ಇದು ತುಂಬಾ ಕಠಿಣವೂ ಅಲ್ಲ ಎಂದು ಹೇಳುವು ದನ್ನು ಕೇಳಿದ್ದೇನೆ

ಜಪಾನೀಸ್‌ ಭಾಷೆ ಸುಲಭವೇ ?

Profile Ashok Nayak Feb 27, 2025 5:49 AM

ಸಂಪಾದಕರ ಸದ್ಯಶೋಧನೆ

ಇಂದು ಮನಸ್ಸು ಮಾಡಿದರೆ ಇನ್ನೊಂದು ವರ್ಷದಲ್ಲಿ ಹಿಮಾಲಯ ಪರ್ವತ ಏರಬಹುದು. ಆದರೆ ಜಪಾನೀಸ್ ಭಾಷೆಯನ್ನು ಕಲಿಯುವುದು ಅಸಾಧ್ಯ.’ ಹಾಗಂತ ಜಪಾನಿಯರೇ ಹೇಳುತ್ತಾರೆ. ಜಪಾನೀಸ್ ಭಾಷೆಯನ್ನು ಕಲಿಸುವುದೂ ಕಷ್ಟವೇ. ಯಾರಾದರೂ ಆ ಭಾಷೆ ಯನ್ನು ಸ್ಥಳೀಯರಂತೆ ಮಾತಾಡುವುದನ್ನು ಕಲಿತರೆ, ಅವರು ಜಗತ್ತಿನಲ್ಲಿ ಏನನ್ನು ಬೇಕಾ ದರೂ ಕಲಿಯಲು ಶಕ್ತರು. ಜಪಾನೀಸ್ ಭಾಷೆ ಕಲಿಯ ಹೊರಟವರಿಗೆ ಒಂದು ಮಾತು ಹೇಳುತ್ತಾರೆ - Learning Japanese is like trying to decipher a cat's meow & it's full of cute sounds that might not actually mean anything . ಇನ್ನು ಜಪಾನೀಸ್ ಲಿಪಿಯನ್ನು ಓದುವುದು ಇನ್ನೂ ಕಷ್ಟ.

ಕೋಳಿ, ಚೇಳು ಮತ್ತು ಇರುವೆಗಳ ಪಾದಗಳನ್ನು ಶಾಯಿಯಲ್ಲಿ ಅದ್ದಿ, ಅವು ಬಿಳಿ ಕಾಗದದ ಮೇಲೆ ನಡೆದರೆ ಹೇಗೆ ಕಾಣುವುದೋ ಅದೇ ಜಪಾನೀಸ್ ಲಿಪಿ. ಅದಕ್ಕಾಗಿ ತಮಾಷೆಗೆ, I'm starting to think that Japanese script is just a secret code invented by the Japan ese to mess with foreigners ಎಂದು ಹೇಳುವುದುಂಟು.

ಇದನ್ನೂ ಓದಿ: ‌Vishweshwar Bhat Column: ವೃದ್ಧರು ಮತ್ತು ಡ್ರೈವಿಂಗ್‌ ಲೈಸೆನ್ಸ್

ಜಪಾನೀಸ್ ಭಾಷೆಯನ್ನು ಕಲಿಯುವುದು ಕಷ್ಟವೋ ಸುಲಭವೋ ಎಂಬುದು ಬಹಳಷ್ಟು ಸಂಗತಿಗಳ ಮೇಲೆ ಅವಲಂಬಿತವಾಗಿದೆ. ಕೆಲವರಿಗೆ ಇದು ಬಹಳ ಕಷ್ಟವಾಗಬಹುದು, ಆದರೆ ಸೂಕ್ತವಾದ ಮಾರ್ಗದಲ್ಲಿ ಅಭ್ಯಾಸ ಮಾಡಿದರೆ, ಇದು ತುಂಬಾ ಕಠಿಣವೂ ಅಲ್ಲ ಎಂದು ಹೇಳುವುದನ್ನು ಕೇಳಿದ್ದೇನೆ.

ಜಪಾನೀಸ್ ಒಂದು ಅತಿ ವಿಶಿಷ್ಟವಾದ ಭಾಷೆ. ಇದು ಹಳೇ ಚೀನೀ ಭಾಷೆಯ ಪ್ರಭಾ ವವನ್ನು ಹೊಂದಿದೆ. ಈ ಭಾಷೆಯಲ್ಲಿ ಮೂರು ಪ್ರಮುಖ ಲಿಪಿಗಳಿವೆ. ಮೊದಲನೆಯದು, ಹಿರಾಗಾನ. ಇದು ಜಪಾನೀಸ್ ಭಾಷೆಯ ಮೂಲ ಲಿಪಿಯಾಗಿದ್ದು ಇದನ್ನು ಮುಖ್ಯವಾಗಿ ವ್ಯಾಕರಣಾತ್ಮಕ ಪ್ರಯೋಗಗಳಿಗೆ ಬಳಸುತ್ತಾರೆ.

ಎರಡನೆಯದು, ಕಟಕಾನ. ಇದು ಸಾಮಾನ್ಯವಾಗಿ ವಿದೇಶೀ ಪದಗಳನ್ನು ಬರೆಯಲು ಮತ್ತು ಕೆಲವು ಶಬ್ದಗಳನ್ನು ಒತ್ತು ನೀಡಲು ಬಳಸುತ್ತಾರೆ ಹಾಗೂ ಮೂರನೆಯದು, ಕಾಂಜಿ. ಈ ಲಿಪಿಯನ್ನು ಚೀನಾದಿಂದ ಜಪಾನಿಗೆ ತಂದಿದ್ದು, ಇದರಲ್ಲಿ ಸಾವಿರಾರು ಚಿಹ್ನೆಗಳಿವೆ. ಪ್ರತಿ ಚಿಹ್ನೆಗೆ ಒಂದು ವಿಶೇಷ ಅರ್ಥವಿದೆ. ಈ ಮೂರು ಲಿಪಿಗಳನ್ನು ಕಲಿಯುವುದು ಯಾರಿ ಗಾದರೂ ಸವಾಲೇ ಸರಿ.

ಜಪಾನೀಸ್ ವ್ಯಾಕರಣ ಕಬ್ಬಿಣದ ಕಡಲೆ. ಇದು ಇತರ ಭಾರತೀಯ ಅಥವಾ ಪಾಶ್ಚಾತ್ಯ ಭಾಷೆಗಳಿಗಿಂತ ಭಿನ್ನ. ಜಪಾನೀಸ್ ಭಾಷೆಯಲ್ಲಿ Subject-Object-Verb (SOV) ಶೈಲಿ ಯಲ್ಲಿ ವಾಕ್ಯರಚನೆ ಇರುತ್ತದೆ. ಕಾಂಜಿಗಳ ಬಳಕೆ ಅತ್ಯಂತ ಕ್ಲಿಷ್ಟಕರ. ಕಾಂಜಿಗಳನ್ನು ಅರ್ಥೈಸು ವುದು ಮತ್ತು ನೆನಪಿಟ್ಟುಕೊಳ್ಳುವುದು ಸಹ ತುಂಬಾ ಕಷ್ಟ. ಇದನ್ನು ಸರಿಯಾಗಿ ಬಳಸು ವುದನ್ನು ಅರ್ಥ ಮಾಡಿಕೊಳ್ಳಲು ಸಾಕಷ್ಟು ಸಮಯ ಬೇಕು.

ಇನ್ನೊಂದು ಪ್ರಮುಖ ಸಂಗತಿ ಅಂದ್ರೆ, ಜಪಾನೀಸ್ ಭಾಷೆಯಲ್ಲಿ ಒಂದೇ ಪದಕ್ಕೆ ಹಲವು, ವಿಭಿನ್ನ ಅರ್ಥಗಳಿದ್ದು, ಪ್ರಾಸಂಗಿಕವಾಗಿ ವಿಭಿನ್ನ ರೀತಿಯಲ್ಲಿ ಬಳಸಬೇಕಾಗುತ್ತದೆ. ’ನಾನು’ (ಐ) ಎಂಬ ಪದಕ್ಕೆ ಜಪಾನೀಸ್ ಭಾಷೆಯಲ್ಲಿ ಇಪ್ಪತ್ತೊಂದು ಅರ್ಥಗಳಿವೆ. ’ಅಂತಿ ಮವಾಗಿ ಜಪಾನೀಸ್ ಭಾಷೆ ಕಲಿತೆ ಎಂದು ಬೀಗಬೇಡ’ ಎಂಬ ಮಾತಿದೆ. ಯಾಕೆಂದರೆ, When you finally understand a sentence in Japanese, it's like winning the lottery... but then you realize it just says 'I like to eat rice' ಎಂದು ಹೇಳುವುದುಂಟು. ಜಪಾ ನೀಸ್ ಉಚ್ಚಾರಣೆ ಸಹ ಸುಲಭವಲ್ಲ.

ಒಂದು ಶಬ್ದಕ್ಕೆ ವಿಭಿನ್ನ ಉಚ್ಚಾರಣೆ ಹಾಗೂ ಅರ್ಥಗಳಿರುವುದುಂಟು. ಜಪಾನೀಸ್ ಭಾಷೆ ಯಲ್ಲಿ Pitch Accent ಮಹತ್ವದ್ದಾಗಿದೆ. ಉದಾಹರಣೆಗೆ, ಹಾಷಿ ಎಂದರೆ ’ಪಾಲು’ ಎಂದ ರ್ಥ. ಉಚ್ಚಾರಣೆಯನ್ನು ಬದಲಿಸಿದರೆ ’ಚಮಚ’ ಎಂಬ ಅರ್ಥವೂ ಆಗುತ್ತದೆ. ಅದೇ ರೀತಿ ಅಮೆ ಎಂದರೆ ಮಳೆ, ಅದೇ ಪದವನ್ನು ತುಸು ಒತ್ತು ಕೊಟ್ಟು ಹೇಳಿದರೆ ಕ್ಯಾಂಡಿ (candy) ಎಂದಾಗುತ್ತದೆ.

ಅಂದರೆ ಸರಿಯಾದ ಉಚ್ಚಾರಣೆ ಇಲ್ಲದಿದ್ದರೆ ಅರ್ಥ ವ್ಯತ್ಯಾಸವಾಗಬಹುದು. ಜಪಾನೀಸ್ ನ್ನು ಸುಲಭವಾಗಿ ಕಲಿಯುವುದಂತೂ ಸಾಧ್ಯವೇ ಇಲ್ಲ. ಅದನ್ನು ಕಲಿಯಲು ಏನಿಲ್ಲ ವೆಂದರೂ ಸರಾಸರಿ 2200 ಗಂಟೆಗಳ ಅಭ್ಯಾಸ ಬೇಕು ಎಂಬುದು ಒಂದು ಅಂದಾಜು. ಆದರೆ ಆಸಕ್ತಿ, ನಿರಂತರ ಅಭ್ಯಾಸ, ಶ್ರದ್ಧೆ, ಪರಿಶ್ರಮ ಮತ್ತು ಸರಿಯಾದ ತಂತ್ರಗಳನ್ನು ಬಳಸಿದರೆ ಇದು ಸಾಧ್ಯ.

ಜಪಾನೀಸ್ ಕಲಿಯುವುದು ಕಷ್ಟವೋ? ಖಂಡಿತ ಹೌದು. ಆದರೆ ಅದು ಅಸಾಧ್ಯವಂತೂ ಅಲ್ಲ. ಕೊನೆಗೊಂದು ಮಾತು - ಜಪಾನಿನಲ್ಲಿ ಒಂದು ನಂಬಿಕೆಯಿದೆ. ಅದೇನೆಂದರೆ, ಜಪಾನೀಸ್ ಭಾಷೆಯಲ್ಲಿ ಅತ್ಯುತ್ತಮ ಸಂಭಾಷಣಾಕಾರ ಯಾರು ಅಂದ್ರೆ ಮತ್ತೊಬ್ಬರ ಮಾತುಗಳನ್ನು ಸುಮ್ಮನೆ ಕೇಳುವವ!