ಗ್ರೌಂಡ್ ರಿಪೋರ್ಟ್
ಪೃಥ್ವಿರಾಜ್ ಕುಲ್ಕರ್ಣಿ
೧೯೮೩ ರ ವಿಶ್ವಕಪ್ ಪೂರ್ವದಲ್ಲಿ ಭಾರತಕ್ಕೆ ಕ್ರಿಕೆಟ್‌ನಲ್ಲಿ ಇದ್ದ ಗೌರವ ಕ್ರಿಕೆಟ್ ಅಭಿಮಾನಿಗಳಿಗೆ ಕಹಿ ನೆನಪು ಎನ್ನಬಹುದು. ಅದನ್ನು ಯಾರು ಬಲ್ಲರು, ಭಾರತ ದೇಶದಲ್ಲಿ ಕ್ರಿಕೆಟ್‌ನಲ್ಲಿ ಅಲ್ಪ ಯಶಸ್ಸು ಕಂಡರೆ ಸಾಕು, ಕೆಲವು ದೇಶಗಳ ಕಣ್ಣು ಕೆಂಪಾಗಿ ಬಿಡುತ್ತದೆ. ಇದು ಈಗಿನ ಸಂಪ್ರದಾಯ ಅಲ್ಲ.
೧೯೮೩ರಿಂದಲೂ ಅದೇ ಪದ್ಧತಿ. ಭಾರತ ತನ್ನ ಪ್ರಥಮ ವಿಶ್ವಕಪ್ ಗೆಲ್ಲುವ ಮೊದಲು ನಾವು ವಿಶ್ವಕಪ್ ಗೆಲ್ಲುತ್ತೇವೆ ಎಂಬ ವಿಷಯ ನಮ್ಮ ದೇಶದ ಅಭಿಮಾನಿ ಗಳು ಅಲ್ಲ, ಗೆದ್ದ ಆಟಗಾರರೇ ನಂಬುತ್ತಿರಲಿಲ್ಲ. ಅದನ್ನು ಖ್ಯಾತ ಕಪಿಲ್ ಶರ್ಮ ಶೋನಲ್ಲಿ ೮೩ ರ ತಂಡದ ಆಟಗಾರರೇ ಹೇಳಿದ್ದಾರೆ. ಬೇರೆ ದೇಶದವರಂತೂ ಬಿಡಿ ಭಾರತೀಯರು ಬ್ಯಾಟು-ಬಾಲು ಹಿಡಿದರೆ ನಗುತ್ತಿದ್ದರು. ಇಂಗ್ಲೆಂಡ್, ಆಸ್ಟ್ರೇಲಿಯಾ ಪತ್ರಕರ್ತರು ಭಾರತವನ್ನು ಅಪಹಾಸ್ಯ ಮಾಡುತ್ತಿದ್ದರು. ೮೩ರ ವಿಶ್ವಕಪ್ ಸಂದರ್ಭದಲ್ಲಿ ಇಂಗ್ಲೆಂಡ್ ನ ಖ್ಯಾತ ಕ್ರಿಕೆಟ್ ಪತ್ರಕರ್ತ ಡೇವಿಡ್ ಫ್ರಿತ್ ಒಂದು ವೇಳೆ ಭಾರತ ಈ ಬಾರಿ ವಿಶ್ವಕಪ್ ಗೆದ್ದರೆ, ನಾನು ಬರೆದ ಲೇಖನವನ್ನು ತಿನ್ನುತ್ತೇನೆ ಎಂದು ಬರೆದುಕೊಂಡಿದ್ದರು.
ಅದರಂತೆ ವಿಶ್ವಕಪ್ ಗೆದ್ದ ಮೇಲೆ ತಿಂದಿದ್ದರು. ಈಗಲೂ ಆಗುತ್ತಿರುವುದು ಅದೇ! ಭಾರತ ಟಿ೨೦ ವಿಶ್ವಕಪ್ ಗೆದ್ದಿದ್ದೇ ಸರಿ ಗೆಲುವಿನ ಬಗ್ಗೆ ಅನುಮಾನ, ತಗಾದೆ ತಗೆಯಲು ಆರಂಭಿಸಿದ್ದಾರೆ. ಪಾಕಿಸ್ತಾನ ಪತ್ರಕರ್ತರೊಬ್ಬ ವೇಗಿ ಬುಮ್ರಾ ಅವರ ಬೌಲಿಂಗ್ ಶೈಲಿಯ ಬಗ್ಗೆ ಕ್ಯಾತೆ ತಗೆದಿದ್ದಾನೆ. ಅದು ಪಾಕಿಸ್ತಾನದ ಚಟಾ! ವಿಷಯ ಏನೆಂದರೆ ಆಸ್ಟ್ರೇಲಿಯಾದ ಕೆಲವರೂ ಸಹ ಅಂತಹ ಹುಚ್ಚು ಕಲ್ಪನೆಗೆ ಬಿದ್ದಿದ್ದಾರೆ.
-ನಲ್ ಪಂದ್ಯದಲ್ಲಿ ಕೊನೆಯಲ್ಲಿ ಸೂರ್ಯಕುಮಾರ್ ಹಿಡಿದಿದ್ದ ಗೇಮ್ ಚಂಜಿಂಗ್ ಕ್ಯಾಚ್ ಬಗ್ಗೆ ಸುಳ್ಳು ಅನುಮಾನ ಒಂದನ್ನು ಒಡ್ಡುತ್ತಿದ್ದಾರೆ. ಹೌದು ವಿಷಯ
ಅಲ್ಪ ವಿವಾದಾತ್ಮಕವಾಗಿತ್ತು. ಆದರೆ ಮೈದಾನದಲ್ಲಿದ್ದ ಕ್ಯಾಮೆರಾಗಳು ಕ್ಯಾಚ್ ಬಗ್ಗೆ ಇದ್ದ ಅನುಮಾನಗಳನ್ನು ದೂರು ಮಾಡುವಂತೆ ತೋರಿಸಿವೆ. ಆದರೆ ಕೆಲವರು ಮಾತ್ರ ಭಾರತವನ್ನು ವಿರೋಽಸುವ ಭರದಲ್ಲಿ ಅದನ್ನೂ ಸಹ ಸುಳ್ಳು ಅಥವಾ ಸತ್ಯ ಕಂಡಿಲ್ಲ ಎನ್ನುತ್ತಿದ್ದಾರೆ. ಆದರೆ ಅದನ್ನು ಗಂಭಿರವಾಗಿ ಗಮನಿಸಿ ದಾಗ ಸೂರ್ಯಕುಮಾರ್ ಯಾದವ್ ಅವರು ಆ ಕ್ಯಾಚ್ ಅನ್ನು ವಿವಾದವಾಗದಂತೆ ಹಿಡಿದಿದ್ದಾರೆ. ಆದರೂ ಕೆಲವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಸೂರ್ಯಕುಮಾರ್ ಯಾದವ್ ಅವರ ಕಾಲು ಬೌಂಡರಿ ಲೈನ್‌ಗೆ ಮುಟ್ಟಿರುವ ವಿಡಿಯೊ ಒಂದನ್ನು ಹಾಕಿ ತಗಾದೆ ತೆಗೆಯಲಾರಂಭಿಸಿದ್ದಾರೆ. ಅದರಲ್ಲೂ ಆಸ್ಟ್ರೇಲಿಯಾದ ಪತ್ರಕರ್ತರು ಭಾರತ ವಿಶ್ವಕಪ್ ಅನ್ನು ಮೋಸ ಮಾಡಿ ಗೆದ್ದಿದೆ ಎನ್ನುವಂತೆ ಹೇಳುತ್ತಿದ್ದಾರೆ.
ಆದರೆ ಸ್ವತಃ ಡೇವಿಡ್ ಮಿಲ್ಲರ್ ಅವರೇ ಈ ನಿರ್ಣಾಯದ ಬಗ್ಗೆ ಬೇಸರವಿಲ್ಲದೇ ಮರಳಿದ್ದರು. ಪ್ರಮುಖವಾಗಿ ಫೈನಲ್ ಪಂದ್ಯವಾಡಿದ್ದ ದಕ್ಷಿಣಾ ಆಫ್ರಿಕಾದಿಂದ ಇಂತಹ ತಗಾದೆ ಬಂದಿಲ್ಲ. ಈ ತಗಾದೆಗೆ ವಿಷಯವೆಂದರೆ, ಆಸ್ಟ್ರೇಲಿಯಾಗೆ ಭಾರತದ ಕ್ರಿಕೆಟ್ ಯಶಸ್ಸನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ. ಇದಕ್ಕೆ ಉದಾಹರಣೆ ಏನೆಂದರೆ, ಭಾರತ ಏನಾದರೂ ಸಾಧಿಸಿದಾಗ ಯಾವುದಾದರೂ ಒಂದು ತಗಾದೆ ಬಂದೆ ಬಂದಿರುತ್ತದೆ. ಒಂದು ಕಾಲದಲ್ಲಿ ಎಲ್ಲಿ ಇದ್ದ ಭಾರತ ಈಗ ಯಾವ ಮಟ್ಟಿಗೆ ಬೆಳೆದು ನಿಂತಿದೆ ಎಂಬ ಸತ್ಯ ಆಸ್ಟ್ರೇಲಿಯಾದ ಕ್ರಿಕೆಟ್ ಅಭಿಮಾನಿಗಳಿಗೆ ನಂಬಲು ಸಾಧ್ಯವಾಗುತ್ತಿಲ್ಲ. ಈ ಕಾರಣದಿಂದಲೇ ಅವರು ಇಂತಹ ತಗಾದೆ ತೆಗೆಯುತ್ತಾ ಕೂತಿದ್ದಾರೆ.
೧೯೮೩ರ ಪೂರ್ವದಲ್ಲಿ ಭಾರತದ ಸೋಲಿಗೆ ನಗುತ್ತಿದ್ದ ಆಸ್ಟ್ರೇಲಿಯಾ ಇದೀಗ ತಗಾದೆ ತಗೆಯುತ್ತಿದೆ. ೮೩ರ ಪೂರ್ವದಲ್ಲಿ ಭಾರತಕ್ಕೆ ಕ್ರಿಕೆಟ್‌ನಲ್ಲಿ ಅವಮಾನಿಸ ಲಾಗುತ್ತಿತ್ತು. ಆದರೆ ೨೦೧೧ರ ಏಕದಿನ ವಿಶ್ವಕಪ್ ಗೆದ್ದ ಮೇಲೆ ಭಾರತಕ್ಕೆ ಅದೆಲ್ಲಿಲ್ಲದ ಗೌರವ ಸಿಕ್ಕಿತು. ೮೩ರ ವಿಶ್ವಕಪ್ ಭಾರತಕ್ಕೆ ಬರೀ ವಿಶ್ವಕಪ್ ಆಗಿರಲಿಲ್ಲ ಅದು ಸೋಲಿನ ಸುಳಿಯಲ್ಲಿ ಸಿಲುಕಿ ಅವಮಾನ ತಿಂದಿದ್ದ ಭಾರತಕ್ಕೆ ಹೆಡೆ ಎತ್ತಿ ನಿಲ್ಲುವಂತೆ ಮಾಡಿದ್ದ ಗೆಲುವಾಗಿತ್ತು. ಭಾರತದ ಕ್ರಿಕೆಟ್ ಬಗ್ಗೆ ನೋಡುವಾಗ ಅಥವಾ ಇತಿಹಾಸದ ಬಗ್ಗೆ ಮಾತನಾಡುವಾಗ, ಮಹಾರಾಜ ಪಟಿಯಾಲಾ ಅವರ ಹೆಸರನ್ನು ಪ್ರಸ್ತಾಪಿಸಲೇಬೇಕು.
ಬ್ರಿಟೀಷರ ಆಳ್ವಿಕೆಯಲ್ಲಿ ಭಾರತಕ್ಕೆ ತನ್ನದೇ ಕ್ರಿಕೆಟ್ ತಂಡವನ್ನು ಕಟ್ಟುವ ಶಕ್ತಿ ಇದ್ದರೂ, ಆರ್ಥಿಕ ಶಕ್ತಿ ಇರಲಿಲ್ಲ ಎನ್ನಬಹುದು. ಆದರೆ ಮಹಾರಾಜ ಪಟಿಯಾಲಾ ಅವರು ಪಟಿಯಾಲಾ ೧೧ ಎಂಬ ತಂಡವನ್ನು ನಿರ್ಮಿಸಿ ಸ್ವಂತ ಖರ್ಚಿನಿಂದ ತಂಡವನ್ನು ಹಲವಾರು ಪ್ರವಾಸಕ್ಕೆ ಕರೆದುಕೊಂಡು ಹೋಗಿ ಆಡಿದ್ದರು. ಆದರೆ, ಭಾರತ ತಂಡ ಪ್ರಥಮ ಅಧಿಕೃತ ಟೆ ಪಂದ್ಯವನ್ನು ಆಡಲು ೧೯೩೨ರವರೆಗೂ ಕಾಯಬೇಕಾಯಿತು. ಅದರಂತೆ ಭಾರತ ತನ್ನ ಪ್ರಥಮ ಪಂದ್ಯ ಗೆಲ್ಲಲು ೧೯೫೨ರ ವರೆಗೂ ಕಾಯಬೇಕಾಯಿತು. ಭಾರತ ಕ್ರಿಕೆಟ್ ತಂಡವನ್ನು ಮುಂದೆ ಕಪಿಲ್ ದೇವ್, ಸುನಿಲ್ ಗವಸ್ಕರ್ ಹಾಗೂ ಇನ್ನಿತರ ಆಟಗಾರರು ಬಲಿಷ್ಠಗೊಳಿಸಿದರು.
ಆದರೂ ಭಾರತ ಒಂದೇ ಒಂದು ವಿಶ್ವಕಪ್ ಪಂದ್ಯವು ಕೂಡ ಗೆದ್ದಿರಲಿಲ್ಲ. ಅದನ್ನು ನೋಡಿ ನಗುತ್ತಿದ್ದ ಆಸ್ಟ್ರೇಲಿಯಾಗೆ ಭಾರತ ನಿರ್ಮಿಸಿರುವ ದಾಖಲೆ ಮತ್ತು
ಯಶಸ್ಸುಗಳನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ೧೯೮೩ರ ವಿಶ್ವಕಪ್ ಸಂದರ್ಭದಲ್ಲಿ ಸೋಲಿನ ಸುಳಿಯಲ್ಲಿ ಸಿಲುಕಿದ್ದ ಭಾರತ ಕ್ರಿಕೆಟ್ ತಂಡಕ್ಕೆ ಅಪಹಾಸ್ಯ
ಮಾಡಲಾಗುತ್ತಿತ್ತು. ಭಾರತ ಬಳಿ ಬಲಿಷ್ಠ ಆಟಗಾರರು ಇದ್ದರೂ, ಸಹ ವೆ ಇಂಡೀಸ್‌ದಂತಹ ವಿಶ್ವ ಚಾಂಪಿಯನ್ ವಿರುದ್ಧ ಆಡುವ ಸಾಮರ್ಥ್ಯ ಇಲ್ಲವೆಂಬ ವದಂತಿ
ಇತ್ತು. ಅದರಲ್ಲೂ ವಿಶ್ವಕಪ್‌ನಲ್ಲಿ ಒಂದು ಪಂದ್ಯವನ್ನು ಭಾರತ ಗೆದ್ದಿರಲಿಲ್ಲ. ನಾಯಕ ಕಪಿಲ್ ದೇವ್ ಲಾರ್ಡ್ಸ ನಲ್ಲಿ , (ವಿ ಆರ್ ಹಿಯರ್ ಟು ವಿನ್) ಎಂದುಬಿಟ್ಟಿದ್ದರು.
ಇದನ್ನು ಕೇಳಿದ ಅಲ್ಲಿದ್ದ ಪತ್ರಕರ್ತರು ನಕ್ಕು ಬಿಟ್ಟಿದ್ದರು. ಅದಲ್ಲದೆ ಖ್ಯಾತ ಕ್ರಿಕೆಟ್ ಪತ್ರಕರ್ತ ಡೇವಿಡ್ ಫ್ರೀಥ್ ಒಂದು ವೇಳೆ ಭಾರತ ವಿಶ್ವಕಪ್ ಗೆದ್ದರೆ ನಾನು ಬರೆದ ಲೇಖನ ತಿನ್ನುತ್ತೇನೆ ಎಂದು ಬರೆದುಕೊಂಡಿದ್ದರು. ಆದರೆ ಚಾಣಾಕ್ಷ ಆಟದಿಂದ ಭಾರತ ಪ್ಲೇ ಆಫ್ ತಲುಪಿಬಿಟ್ಟಿತು.
ಯಾವ ವಿಶ್ವ ಚಾಂಪಿಯನ್ ಎನಿಸಿಕೊಂಡಿದ್ದ ವೆಸ್ಟ್ ಇಂಡೀಸ್ ವಿರುದ್ಧ ಫೈನಲ್‌ನಲ್ಲಿ ಅತಿ ಕಡಿಮೆ ರನ್ ಡಿಫೆಂಡ್ ಮಾಡಿಕೊಂಡು ಗೆದ್ದು ಬಿಗಿತ್ತು. ಅದಾದ ಮೇಲೆ
ಭಾರತ ಕ್ರಿಕೆಟ್ ಲೋಕದಲ್ಲಿ ಅಚ್ಚಳಿಯದ ಇತಿಹಾಸಗಳನ್ನು ಸೃಷ್ಟಿ ಮಾಡುತ್ತಲೇ ಬಂದಿದೆ. ೮೩ರ ವಿಶ್ವಕಪ್ ನಂತರ ಭಾರತ ತಂಡಕ್ಕೆ ಪ್ರಭಾವಿ ನಾಯಕ ಸೌರವ್ ಗಂಗೂಲಿ ಅವರು ಭಾರತ ತಂಡವನ್ನು ಬಲಿಷ್ಠವಾಗಿ ಕಟ್ಟಿ ಆಗಿನ ಸೋಲಿನ ಸುಳಿಯಲ್ಲಿ ಸಿಲುಕಿದ ಭಾರತ ತಂಡವನ್ನು ಸೋಲಿಸುವುದೇ ವಿಶ್ವ ಚಾಂಪಿಯನ್ ತಂಡಗಳಿಗೆ ಸವಾಲಾಗುವಂತೆ ಮಾಡಿದ್ದರು. ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ಆಟ ಇಡೀ ವಿಶ್ವವನ್ನೇ ಭಾರತದತ್ತ ಸೆಳೆದಿತ್ತು. ಇನ್ನು ೨೦೦೪ರಲ್ಲಿ ಪದಾರ್ಪಣೆ ಮಾಡಿದ್ದ ಪ್ರಭಾವಿ ಆಟಗಾರ ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ಜಗತ್ತಿನ ಇತಿಹಾಸವನ್ನೇ ಬದಲಾಯಿಸಿಬಿಟ್ಟರು.
ಯಾವ ಭಾರತ ತಂಡಕ್ಕೆ ಅಪಹಾಸ್ಯ ಮಾಡುತ್ತಿದ್ದರೋ ಅದೇ ಭಾರತ ತಂಡವನ್ನು ಗಗನದೆತ್ತರ ಬೆಳಿಸಿಬಿಟ್ಟರು. ಧೋನಿ ನಾಯಕರಾಗಿದ್ದಾಗ ಆಸ್ಟ್ರೇಲಿಯಾ, ಭಾರತ ಟೆಸ್ಟ್ ಸರಣಿಯೊಂದರಲ್ಲಿ ಭಾರತ ಗೆಲುವು ಸಾಧಿಸಿತ್ತು. ಆಗ ಇಡೀ ವಿಶ್ವವೇ ಈ ಸಾಧನೆಗೆ ಶ್ಲಾಘಿಸಿತ್ತು. ಆದರೆ ಧೋನಿ ಮಾತ್ರ ಏನೂ ಆಗಿಲ್ಲ ಎಂಬಂತೆ ಸುಮ್ಮನಿದ್ದರು. ಅದಲ್ಲದೇ, ತಂಡದ ಆಟಗಾರರನ್ನೂ ಸಹ ಯಾವುದೇ ಸಂಭ್ರಮಾಚರಣೆ ಮಾಡದಂತೆ ಹೇಳಿದ್ದರು. ಇದರ ಸಂದೇಶ ಭಾರತದ ಪಾಲಿಗೆ ಆಸ್ಟ್ರೇಲಿಯಾ ದೊಡ್ಡ ಹೆಮ್ಮರವೇನಲ್ಲ ಎಂಬಂತೆ ಇತ್ತು. ಅದಲ್ಲದೇ ಗಾಬಾ ಕ್ರೀಡಾಂಗಣ ದಲ್ಲಿ ಭಾರತ ಆಸಿಸ್‌ಗೆ ಇದ್ದ ೩೨ ವರ್ಷಗಳ ಸೊಕ್ಕನ್ನು ೨೦೨೧ರಲ್ಲಿ ಮುರಿದು ಹಾಕಿತ್ತು. ಆ ಕಾರಣಕ್ಕೆ ಆಸ್ಟ್ರೇಲಿಯಾ ಭಾರತದ ಯಶಸ್ಸಿಗೆ ತಗಾದೆ ತೆಗೆಯುತ್ತಾ ಬಂದಿದೆ.
ಈ ಬಾರಿ ವಿಶ್ವಕಪ್‌ನಲ್ಲಿ ಭಾರತ ಭರ್ಜರಿ ಪ್ರದರ್ಶನ ತೋರುವ ಮೂಲಕ ಗೆಲುವು ಸಾಽಸಿದೆ. ಸೂರ್ಯಕುಮಾರ್ ಯಾದವ್ ಅವರ ಕ್ಯಾಚ್ ಅನ್ನು ಒಂದು ಬಾರಿ
ಅಲ್ಲ ೧೦ ಬಾರಿ ನೋಡಿದರೂ ಆ ನಿರ್ಣಯ ಸರಿಯಾಗೇ ಇದೆ ಎನ್ನಿಸುತ್ತದೆ. ಮೈದಾನದಲ್ಲಿ ಇದ್ದ ಕ್ಯಾಮೆರಾಗಳನ್ನು ಬಿಟ್ಟರೂ, ಅಲ್ಲಿದ್ದ ಅಭಿಮಾನಿಗಳು ಮಾಡದ್ದ ವಿಡಿಯೊಗಳೂ ಸಹ ಕ್ಯಾಚ್ ಬಗ್ಗೆ ಸ್ಪಷ್ಟತೆ ಕೊಟ್ಟಿವೆ. ಇಷ್ಟಾದರೂ ತಗಾದೆ ತೆಗೆದರೆ ಅದು ಮೂರ್ಖತನ ಎನ್ನಬಹುದು.
ಅಷ್ಟಕ್ಕೂ ಆ ಕ್ಯಾಚ್ ಬಿಟ್ಟಿದ್ದರೆ, ದಕ್ಷಿಣಾ ಆಫ್ರಿಕಾ ವಿಶ್ವಕಪ್ ಗೆದ್ದೇ ಗೆಲ್ಲುತ್ತಿತ್ತು ಎಂದು ಹೇಳಲು ಸಾಧ್ಯವೆ? ಭಾರತ ವಿಶ್ವಕಪ್ ಫೈನಲ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿದೆ. ಆ ಕ್ಯಾಚ್ ಬಿಟ್ಟಿದ್ದರೆ ಗೆಲ್ಲುತ್ತಿತ್ತು ಎಂಬುವುದಾದರೆ, ೩೦ ಎಸೆತಗಳಲ್ಲಿ ೩೦ ರನ್ ಬೇಕಿದ್ದ ಸ್ಕೋರ್ ಅನ್ನು ಭಾರತ ೬ ಬಾಲ್‌ಗಳಲ್ಲಿ ೧೬ ರನ್‌ಗೆ ತಂದಿದ್ದರು. ಈ ಮಟ್ಟದಲ್ಲಿ ಕಮ್‌ಬ್ಯಾಕ್ ಮಾಡಿದ್ದ ಭಾರತ ೫ ಎಸೆತಗಳಲ್ಲಿ ೧೦ ರನ್ ಡೆಫೆಂಡ್ ಮಾಡುತ್ತಿರಲಿಲ್ಲೆವೇ? ಇಡೀ ಟೂರ್ನಿಯಲ್ಲಿ ಒಂದೂ ಪಂದ್ಯ ಸೋಲದೆ ಭರ್ಜರಿ ಪ್ರದಶನ ನೀಡಿ ಭಾರತ ಫೈನಲ್ ಗೆ ಬಂದಿತ್ತು. ಆಸ್ಟ್ರೇಲಿಯಾ, ಪಾಕಿಸ್ತಾನದಂತಹ ತಂಡಗಳನ್ನು ಭಾರತ ಹೀನಾಯವಾಗಿ ಸೋಲಿಸಿತ್ತು. ಹಾಗಾಗಿಯೇ, ಈ ಗೆಲುವಿನ ನಂತರ ತಗಾದೆ ತೆಗೆಯುತ್ತಿದ್ದಾರೆ.
ಅಸಲಿಯತ್ತಾಗಿ, ಆಸ್ಟ್ರೇಲಿಯಾ ಅಥವಾ ಪಾಕಿಸ್ತಾನದಂತ ಕ್ರಿಕೆಟ್ ಅಭಿಮಾನಿಗಳಿಗೆ ಭಾರತದ ಯಶಸ್ಸು ವಿವಾದವಾಗಿತ್ತೇ ಹೊರತು ಆ ಕ್ಯಾಚ್ ಅಲ್ಲ. ಏಕೆಂದರೆ ಭಾರತದ ಆಟಗಾರರು ಎಂದಿಗೂ ಮೋಸ ಮಾಡಿ ಗೆದ್ದಿದ್ದು ಇಲ್ಲ. ಮತ್ತು ಎಂದಿಗೂ ಆಸ್ಟ್ರೇಲಿಯಾದ ಆಟಗಾರರಂತೆ ಬಾಲ್ ಟ್ರಾಂಪಿಂಗ್ ಮಾಡಿ ಸಿಗಿಬಿದ್ದಲ್ಲ.