ಹಂಪಿ ಎಕ್ಸ್’ಪ್ರೆಸ್
ದೇವಿ ಮಹೇಶ್ವರ ಹಂಪಿನಾಯ್ಡು -1336hampiexpress1509@gmail.com
ಇತ್ತೀಚೆಗೆ ಎಬಿಪಿ – ಸಿ ವೋಟರ್ ಮಾಧ್ಯಮವು ಕರೋನಾ ಸಂಕಷ್ಟದಲ್ಲಿ ಮೋದಿಯವರು ಮತ್ತು ರಾಹುಲ್‌ಗಾಂಧಿ ಇಬ್ಬರಲ್ಲಿ ಯಾರು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದಾರೆಂದು ಸಮೀಕ್ಷೆ ನಡೆಸಿ ಅದರ ವರದಿಯನ್ನು ಪ್ರಕಟಿಸಿತು.
ಅದರಲ್ಲಿ ಮೋದಿಯವರು ಶೇ.63 ಮತ್ತು ರಾಹುಲ್‌ಗಾಂಧಿ ಶೇ.22ರಷ್ಟು ಮತಗಳಿಸಿದ್ದಾರೆ ಎಂಬುದು ಮೋದಿಯವರ ಕಾರ್ಯ ದಕ್ಷತೆಗೆ ಸಿಕ್ಕ ಜಯ ಎಂಬಂತೆ ಪರಿಗಣಿಸಲಾಯಿತು. ಆದರೆ ಇದು ನಿಜಕ್ಕೂ ಅವೈಜ್ಞಾನಿಕ ಮತ್ತು ಅಸಂಬದ್ಧ. ಇಂಥ ಸಮೀಕ್ಷೆಗೆ ಒಂದು ತಾರ್ಕಿಕತೆ ಸಿಗಬೇಕಾದರೆ ಇಬ್ಬರು ಸಮಬಲದ ವ್ಯಕ್ತಿಗಳನ್ನು ಒಂದು ವೇದಿಕೆಗೆ ತಂದು ತುಲನೆ ಮಾಡಬೇಕು. ಇಲ್ಲಿದ್ದರೆ ಸಾಹಿತಿ ಎಸ್.ಎಲ್ .ಭೈರಪ್ಪನವರೊಂದಿಗೆ ವೀರಪ್ಪಮೊಯ್ಲಿಗೂ ಸರಸ್ವತಿ ಸಮ್ಮಾನ್ ನೀಡಿದಂತಾಗುತ್ತದೆ. ಹಾಗೆಯೇ ಒಬ್ಬ ಪ್ರಾಮಾಣಿಕ ಸಾಧಕರು ನಡೆದುಬಂದ ಹಾದಿಯನ್ನು ಅವಮಾನಿಸಿದಂತಾಗುತ್ತದೆ.
ನೋಡಿ, ವರನಟ ಡಾ.ರಾಜ್ ಅವರು ರಂಗಭೂಮಿಯಿಂದ ಬಂದು ಸಿನಿಮಾ ಪ್ರವೇಶಿಸಿದಾಗ ಅದಕ್ಕೆ ಒಗ್ಗಿಕೊಂಡು ಪಳಗುವುದಕ್ಕೆ ಸಾಕಷ್ಟುಕಾಲ ಬೇಕಾಯಿತು. ಬರಬರುತ್ತಾ ವ್ಯಾಪಾರಿ ಮಾಧ್ಯಮವಾದ ಚಲನಚಿತ್ರವನ್ನು ಅರ್ಥಮಾಡಿಕೊಂಡು ತೀರಾ ಅದರ ಅನಿವಾರ್ಯತೆಗಳಿಗೆ ಒಳಗಾಗದೆ ತನ್ನದೇ ಆದ ವ್ಯಕ್ತಿತ್ವ, ಮೌಲ್ಯಗಳನ್ನು ಸ್ಥಾಪಿಸಿ, ಅಭಿಮಾನಿ ಸಮೂಹವನ್ನು ಕಟ್ಟಿಕೊಂಡು ಇಡೀ ಕನ್ನಡನಾಡಿಗೆ ಅವರು ಸಾರ್ವಭೌಮರೆನಿಸಿದರು. ಹಾಗೆಯೇ ಕನ್ನಡ ಚಿತ್ರರಂಗಕ್ಕೆ ದೊಡ್ಡ ಘನತೆಯನ್ನು ದೊರಕಿಸಿ ಕೊಟ್ಟರು.
ಈಗಲೂ ಅವರೊಂದಿಗೆ ಯಾವ ನಟರುಗಳನ್ನಾಗಲಿ ಕನ್ನಡಪರ ಹೋರಾಟಗಾರರನ್ನಾಗಲಿ ಹೋಲಿಸಲು ಸಾಧ್ಯವಿಲ್ಲ. ಇದೇ ರೀತಿಯೇ ಸಂಘ ಪರಿವಾರದಿಂದ ಬಂದ ನರೇಂದ್ರ ಮೋದಿಯವರು ರಾಜಕೀಯ ಪ್ರವೇಶಿಸಿ ಮೂರು ಅವಧಿಗೆ ಯಶಸ್ವಿ ಮುಖ್ಯಮಂತ್ರಿ ಅನಿಸಿದರು. ಈ ಯಶಸ್ಸಿನಿಂದಲೇ ಇಡೀ ದೇಶ ಅವರನ್ನು ಒಪ್ಪಿಕೊಂಡು ಪ್ರಧಾನಮಂತ್ರಿ ಸ್ಥಾನದವರೆಗೂ ಕರೆತಂದರು.
ಪ್ರಧಾನಿಯಾದ ನಂತರ ರಾಜಕೀಯದ ಪ್ರಧಾನಿಯಂತೆ ಯೋಚಿಸದೆ ತನಗಿಂತ, ಪಕ್ಷ, ರಾಜಕಾರಣಕ್ಕಿಂತ ದೇಶವೇ ಉತ್ಕೃಷ್ಟ, ಸಂವಿಧಾನದ ಆಶಯಗಳ ಅನುಷ್ಠಾನವೇ ಶ್ರೇಷ್ಠ, ಪ್ರಜಾಪ್ರಭುತ್ವದ ಮೌಲ್ಯಗಳೇ ಸರ್ವಶ್ರೇಷ್ಠ ಎಂಬುದಾಗಿ ಮನಗಂಡು
ಆಡಳಿತದಲ್ಲಿ, ಸಮಾಜದಲ್ಲಿ ಒಂದೊಂದೇ ಸುಧಾರಣೆಗಳನ್ನು ತರಲಾರಂಭಿಸಿದರು. ಮನೋಹರ ಪರಿಕ್ಕರ್, ಸುಷ್ಮಾ ಸ್ವರಾಜ್,
ಅರುಣ್ ಜೇಟ್ಲಿ, ಅನಂತಕುಮಾರ್, ಪ್ರಮೋದ ಮಹಾಜನ್, ರಾಜನಾಥಸಿಂಗ್ ಅಲ್ಲದೇ ಅಜಿತ್ ದೋವಲ್‌ರಂಥ ಅಧಿಕಾರಿಗಳು ಮೋದಿಯವರ ಗರಡಿಯಲ್ಲಿದ್ದು ದೇಶದೊಂದಿಗೆ ಮೋದಿಯವರ ಏಳಿಗೆಗೆ ಪಾತ್ರರಾದರು.
ಮೋದಿಯವರಂತೆ ಇನ್ನೂ ಅನೇಕ ದೇಶಭಕ್ತರು ಸಾಲಿನಲ್ಲಿರುವುದು ಸುಳ್ಳಲ್ಲ. ಇದರಿಂದ ಕಂಗಾಲಾದ ಪ್ರತಿಪಕ್ಷಗಳು ಸದಾ
ತಮ್ಮ ಕೈಹಿಡಿಯುತ್ತಿದ್ದ ಹಿಂದಿದ್ದ ಗುಲಾಮಗಿರಿಯ ಪ್ರಜಾಪ್ರಭುತ್ವ ಬದಲಾಗಿ ಮುಂದೆ ತಮ್ಮ ಅಸ್ತಿತ್ವವೇ ನಾಶವಾಗುತ್ತದೆಂಬ ಆತಂಕ, ಹತಾಶೆಯಿಂದ ಸಿಕ್ಕಸಿಕ್ಕಲ್ಲಿ ಮೋದಿಯವರನ್ನು ಹೀಯಾಳಿಸುತ್ತಾ ಶಪಿಸುತ್ತಾ ಯಾವ ಹಂತಕ್ಕೆ ತಲುಪಿzರೆಂದರೆ ಮೋದಿ ಇರಬೇಕು ಅಥವಾ ದೇಶದ್ರೋಹಿಗಳು ಇರಬೇಕು ಎನ್ನುವಂಥ ನಿರ್ಣಾಯಕ ಹಂತಕ್ಕಿಳಿದಿದ್ದಾರೆ.
ಇನ್ನು ರಾಹುಲ್‌ಗಾಂಧಿ ವಿಚಾರಕ್ಕೆ ಬಂದರೆ ಅವರ ಏಳಿಗೆಗೆ ಹೆಗಲು ನೀಡುವುದಕ್ಕಿಂತ ಅವರ ವೈಫಲ್ಯಕ್ಕೆ ಪರೋಕ್ಷ ಕಾರಣ ರಾಗುವ ಮಂದಿಗಳೇ ಹಿಂಬಾಲಕರಾಗಿದ್ದಾರೆ. ಒಬ್ಬ ನಾಯಕನನ್ನು ಅಭಿಮಾನಿಸಿ ಹುರಿದುಂಬಿಸಿದರೆ ಆತ ಇನ್ನಷ್ಟು ಗೆಲುವು ಯಶಸ್ಸನ್ನು ಪಡೆಯುವಂತಿರಬೇಕು. ಆದರೆ ರಾಹುಲ್ ಗಾಂಧಿ ಪ್ರತಿಹಂತದಲ್ಲೂ ಸೋಲು ನಿರಾಶೆಯನ್ನೇ ಪಡೆಯುತ್ತಿದ್ದಾ ರೆಂದರೆ ಅದರ ದೋಷವನ್ನು ಹಿರಿಯ ನಾಯಕರು ಹುಡುಕುವ ಪ್ರಯತ್ನ ಮಾಡುತ್ತಿಲ್ಲ ವೆಂದರ್ಥ.
ಅಸಲಿಗೆ ಅಂಥ ವಿಚಾರವನ್ನೇ ಯೋಚಿಸದಷ್ಟು ಸ್ವಾಮಿನಿಷ್ಠೆಯ ಪರಾಕಷ್ಠೆ ತಲುಪಿದ್ದಾರೆ. ಮೊದಲಿಗೆ ರಾಹುಲ್‌ಗಾಂಧಿ ಅವರ
ನಡೆ ನುಡಿ, ಭಾಷಣ, ಟ್ವಿಟರ್ ಸ್ಟೇಟ್ಮೆಂಟ್ ನೋಡಿದ ಎಂಥವರಿಗೂ ಅದು ಸಿದ್ಧಸಂಭಾಷಣೆ ಮತ್ತು ಬಾಲಿಶ ಎಂದೆನಿಸುತ್ತದೆ. ಅವರು ವ್ಯಕ್ತಪಡಿಸುವ ಬಹುತೇಕ ಅಭಿಪ್ರಾಯಗಳು ವರ್ತನೆಗಳು ಅವೈಜ್ಞಾನಿಕ, ಹಾಸ್ಯಾಸ್ಪದ ವಾಗಿರುವುದನ್ನು ಸಾಮಾಜಿಕ ಜಾಲತಾಣಗಳು ಎತ್ತಿಹಿಡಿಯುತ್ತಿವೆ.
ರಾಹುಲ್‌ಗಾಂಧಿ ವೇದಿಕೆಗೆ ಬರುತ್ತಾರೆಂದರೆ ಸ್ವಪಕ್ಷಕ್ಕಿಂತ ವಿರೋಧ ಪಕ್ಷಗಳೇ ಹೆಚ್ಚು ಪುಳಕಗೊಳ್ಳುವಂತಾಗಿದೆ. ಇದು ಯಾವ ಮಟ್ಟಕ್ಕಿದೆ ಯೆಂದರೆ ಕಾಂಗ್ರೆಸ್ ಸೋತು ಬಿಜೆಪಿ ಗೆದ್ದಾಗಲೆ ರಾಹುಲ್ ಗಾಂಧಿಯನ್ನು ಬಿಜೆಪಿಯ ಸ್ಟಾರ್ ಪ್ರಚಾರಕ ಎಂದು
ಮೂದಲಿಸಿ ಸಂಭ್ರಮ ಪಡುವಂತಾಗಿದೆ. ರಾಹುಲ್‌ಗಾಂಧಿಗೆ ಇಂಥ ಪರಿಸ್ಥಿತಿ ಬರಲು ನೇರಕಾರಣ ಆ ಪಕ್ಷದ ನಾಯಕರು
ಕಾರ್ಯಕರ್ತರು ಅವರನ್ನು ಕಾಣುತ್ತಿರುವ ದೃಷ್ಟಿಕೋನ.
ಮೊದಲಿಗೆ ಅವರನ್ನು ಒಬ್ಬ ಯುವರಾಜ, ಯುವರತ್ನ, ರಾಜಕುಮಾರ, ರಾಜಾಧಿರಾಜ, ವಂಶದಕುಡಿ, ಪಕ್ಷದ ವಂಶೋದ್ಧಾರಕ ಎಂಬ ಧನ್ಯತಾಭಾವದಲ್ಲಿ ನೋಡಿ ಕೃತಾರ್ತ ರಾಗುವುದು. ಹೀಗಾಗಿ ಅವರ ಸುತ್ತ ಪರಿಕ್ಕರ್, ಜೆಟ್ಲಿ, ಸುಷ್ಮ ಸ್ವರಾಜ್, ದೋವಲ್ ರಂಥ ಪರಿಣಿತರು ಸುಳಿಯದೇ ಬರೀ ಬಹುಪರಾಕ್ ಭಟ್ಟಂಗಿಗಳೇ ನಿಂತು ಚಾಮರವ ಬೀಸುತಿಹರು. ಒಬ್ಬ ಯಶಸ್ವಿ ಪುರುಷನ ಹಿಂದೆ ಮಹಿಳೆ ಇಲ್ಲದಿದ್ದರೂ ಪರವಾಗಿಲ್ಲ. ಆದರೆ ಸರಿಯಾದ ಗುರುಗಳು, ಜ್ಞಾನಿಗಳು ಇರಲೇಬೇಕು. ಕನಿಷ್ಠ ವಿವೇಕವಂತ ಸ್ನೇಹಿತರಾದರೂ ಇರಬೇಕು. ಆದರೆ ರಾಹುಲ್‌ಗಾಂಧಿಗೆ ಅದೂ ಇಲ್ಲದಂತಾಗಿದೆ.
ಅಲ್ಲಿರುವ ಮತ್ತೊಂದು ಕೆಟ್ಟ ಸಂಸ್ಕೃತಿಯೆಂದರೆ ರಾಹುಲ್ ಗೆ ನೆರವಾಗುವಂಥ ಸಮಕಾಲೀನ ಯುವ ನಾಯಕರು ಬೆಳೆಯಲಿಲ್ಲ. ಬೆಳೆಯುತ್ತಿದ್ದ ಜ್ಯೋತಿರಾದಿತ್ಯ ಸಿಂಧಿಯಾರಂಥ ನಾಯಕರು ಅಲ್ಲಿ ಉಳಿಯಲಾಗದೆ ಬಿಜೆಪಿ ಸೇರಿಕೊಂಡರು. ಸದ್ಯ ಅಲ್ಲಿರುವ ನಾಯಕರೆಲ್ಲರೂ ಒಂದು ತಲೆಮಾರಿನ ಹಿರಿಯರಾಗಿದ್ದಾರೆ. ಅವರೆಲ್ಲರೂ ನಿವೃತ್ತಿಯ ಅಂಚಿನಲ್ಲಿದ್ದಾರೆ. ಅವರೆಲ್ಲರೂ ಗರುಡ ಇರುವ ತನಕ ನಾವುಗಳು ಆ ಸ್ಥಾನಕ್ಕೆ ಆಸೆ ಪಡೋ ಎಂಬ ಕೆಜಿಎಫ್ನ ಅಽರನಂತೆ ತೀರ್ಮಾನಿಸಿ ತಮ್ಮ ಹಿರಿತನಕ್ಕೆ ಸಹಜವಾಗಿ
ಬರಬೇಕಿದ್ದ ಸ್ಥಾನ – ಮಾನ – ಪದವಿ – ಪುರಸ್ಕಾರಗಳನ್ನೆಲ್ಲಾ ತ್ಯಾಗಮಾಡುತ್ತಾ ಮೌನಿಗಳಾಗಿ ರಾಹುಲ್‌ಗಾಂಧಿಗೆ
ರಾಜಮರ್ಯಾದೆ ಯನ್ನಷ್ಟೇ ನೀಡುತ್ತ ನಿವೃತ್ತಿಯಾಗುತ್ತಿದ್ದಾ
ರಷ್ಟೇ. ಆ ನಂತರವಷ್ಟೇ ಎಸ್.ಎಂ.ಕೃಷ್ಣ, ಗುಲಾಂನಬಿ ಅಜಾದ್‌ರಂಥ ನಾಯಕರು ಪ್ರಾಯಶ್ಚಿತವೆಂಬಂತೆ ಮೋದಿಯವರನ್ನು ಮನಸಾರೆ ಹೊಗಳಿ ತಮ್ಮ ಪ್ರಾಮಾಣಿಕತೆ ತೋರುತ್ತಿದ್ದಾರೆ. ಇದರಿಂದ ಆ ಪಕ್ಷದಲ್ಲಿ ಎರಡನೇ ನಾಯಕ ಸೃಷ್ಟಿಯಾಗದೆ ಆ ಪಕ್ಷಕ್ಕೆ ಹೊಡೆತ ಬೀಳುತ್ತಾ ಅಧೋಗತಿ ತಲುಪುತ್ತಿರುವುದು ಹಿರಿಯ ನಾಯಕರಿಗೆ ಅನುಭೂತಿಯಾಗಿದ್ದರೂ ಅವರೆಲ್ಲರೂ ಮೂಕಿಚಿತ್ರದ ಹೀರೋಗಳಾಗಿದ್ದಾರೆ.
ಹೀಗಾಗಿ ರಾಹುಲ್‌ಗಾಂಧಿ ಆ ಪಕ್ಷದಲ್ಲಿ ಮಾವುತನಿಲ್ಲದ ಒಂಟಿಸಲಗರಾಗಿದ್ದಾರೆ. ಮೊನ್ನಿನ ಅವರ ಒಂದು ಹೇಳಿಕೆಯನ್ನೇ
ಗಮನಿಸಿ. ಕರೋನಾ ಎರಡನೇ ಅಲೆಯು ಶೇ90ರಷ್ಟು ಭಾರತೀಯರನ್ನು ಬಡವರನ್ನಾಗಿ ಮಾಡಿದೆ. ಈ ಬಡತನಕ್ಕೆ ಮೊದಲ ಕಾರಣ ಒಬ್ಬ ಮನುಷ್ಯ ಮತ್ತು ಆತನ ಅಹಂಕಾರ. ಎರಡನೇ ಕಾರಣ ಒಂದು ವೈರಸ್ ಮತ್ತು ಅದರ ರೂಪಾಂತರ, ಮೋದಿ ಸರಕಾರದ ಶೂನ್ಯ ವ್ಯಾಕ್ಸೀನ್ ಭಾರತಮಾತೆಯ ಎದೆಬಗೆಯುವ ಕೆಲಸ ಮಾಡುತ್ತಿದೆ. ಪ್ರಧಾನಿಯನ್ನು ಪ್ರಶ್ನಿಸುವ ಹಕ್ಕು ಪ್ರತಿಯೊಬ್ಬ ಮತದಾರನಿಗೂ ಇದೆ. ಆದರೆ ಅದಕ್ಕೆ ಬೇಕಾದ ಜ್ಞಾನ ನಿಖರತೆ, ವಿಷಯ ಸ್ಪಷ್ಟತೆ, ಬಳಸುವ ಪದಗಳು, ಪ್ರಶ್ನಿಸು ವವನ ನಾಗರಿಕತೆಯ ಮಟ್ಟವನ್ನು ತಿಳಿಸುತ್ತದೆ.
ಆದರೆ ಅನೇಕ ನಾಯಕರು ಮಾತ್ರ ತಮ್ಮತಮ್ಮ ಸ್ಥಾನಕ್ಕೆ ವಾರಸುದಾರರನ್ನು ಬೆಳೆಸಿಕೊಂಡು ಬರುತ್ತಿದ್ದಾರೆ. ನಮ್ಮ ರಾಜ್ಯದ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ರಾಮಲಿಂಗಾ ರೆಡ್ಡಿ, ಜಾರಕಿಹೊಳಿ ಮನೆತನ ಇನ್ನು ಅನೇಕ ನಾಯಕರು ಈಗಾಲೇ ತಮ್ಮ ಕುಡಿಗಳಿಗೆ ರಾಜಕೀಯ ಭವಿಷ್ಯವನ್ನು ರೂಪಿಸುತ್ತಿದ್ದಾರೆ. ಇವರೆಲ್ಲರೂ ತಂದೆಗೆ ತಕ್ಕ ಮಕ್ಕಳಾಗಿ ಬೆಳೆಯುತ್ತಿದ್ದಾರೆ.
ಪ್ರಿಯಾಂಕ ಖರ್ಗೆ ಯತೀಂದ್ರರಂಥ ವಿವೇಕವಂತರನ್ನಾದರೂ ರಾಹುಲ್‌ಗಾಂಧಿಯವರೊಂದಿಗೆ ರಾಜಕೀಯ ಆಪ್ತರಾಗಿ ಬೆರೆಯಲು ಅವಕಾಶ ನೀಡಿದ್ದರೆ ಅದರಿಂದ ರಾಹುಲ್‌ಗಾಂಽಯೇ ಹೆಚ್ಚು ವಿಕಸನ ಹೊಂದುತ್ತಿದ್ದರು. ತಮ್ಮ ಮಕ್ಕಳ ಭವಿಷ್ಯದಲ್ಲಿ ತೋರುವ ಇಂಥ ಪರಮ ಕಾಳಜಿಯನ್ನು ಒಬ್ಬ ದೇಶನಾಯಕನೆಂದೆನಿಸಿದ, ಪಕ್ಷದ ಅದ್ವಿತೀಯ ನಾಯಕನಾದ ರಾಹುಲ್‌ಗಾಂಧಿ ಯವರಲ್ಲೂ ತೋರಬಹುದಿತ್ತಲ್ಲವೇ? ಆ ಕೆಲಸವೂ ಅಸಾಧ್ಯವಾಗಿ ಹೋಗಿದೆ.
ಒಟ್ಟಾರೆ ಸರ್ಕಸ್‌ನಲ್ಲಿ ಹುಲಿಯನ್ನು ಆಡಲು ಬಿಟ್ಟು ಪ್ರದರ್ಶನ ಏರ್ಪಡಿಸಿದಂತೆ ರಾಹುಲ್‌ಗಾಂಧಿಯನ್ನು ಅಭಿಮನ್ಯು
ವನ್ನಾಗಿಸಿ ಚಕ್ರವ್ಯೂಹದಲ್ಲಿ ನುಗ್ಗಿಸಿದ್ದಾರೆ. ಆದರೆ ಪ್ರಜ್ಞಾವಂತರು ಸ್ವಾಭಿಮಾನಿಗಳು ದೇಶಭಕ್ತರುಗಳಿಗೆ ಮಾತ್ರ ಅವರು ಉತ್ತರಕುಮಾರನಂತೆ ಕಾಣುತ್ತಿರುವುದು ಸತ್ಯ. ಒಂದು ಮಗುವನ್ನು ಪ್ರೀತಿಸುವುದೆಂದರೆ ಕೇವಲ ಮುತ್ತಿಟ್ಟು ಮುದ್ದಾಡುವುದಲ್ಲ. ಆ ಮಗುವಿಗೆ ಒಳ್ಳೆಯ ವಿದ್ಯೆ, ವಿವೇಕ, ಸಂಸ್ಕಾರವನ್ನು ನೀಡಿ, ಸಮಾಜದಲ್ಲಿ ಯಶಸ್ವಿ ನಾಯಕ ಅಥವಾ ಕನಿಷ್ಠ ಉತ್ತಮ ಮಾನವ ನಾಗಿಯಾದರೂ ಬೆಳೆಯಲು ನೈತಿಕ ಜವಾಬ್ದಾರಿ ಹೊರಬೇಕು.
ನಮ್ಮ ಸಮಾಜದಲ್ಲಿ ಇಂಥ ಹೊಣೆಗಾರಿಕೆ ಯನ್ನು ಕಡುಬಡವರು, ನಿರ್ಗತಿಕರು ಕೂಡಾ ನಿರ್ವಹಿಸುತ್ತಾರೆ. ಮಕ್ಕಳನ್ನು ಹೆರುವುದೇ ದೊಡ್ಡದಲ್ಲ, ಅದಕ್ಕೆ ತಕ್ಕಂತೆ ವಿದ್ಯೆನೀಡುವುದು ಆ ವಿದ್ಯೆಯಲ್ಲಿ ಕಾಗುಣಿತ, ಗಣಿತ, ಇತಿಹಾಸ, ರಾಸಾಯನಶಾಸ್ತ್ರ, ಭೂಗೋಳ, ರಾಜಕೀಯವೆಂಬ ಪಠ್ಯಗಳನ್ನೇಕೆ ಕಲಿಸುವುದು ಹೇಳಿ? ಮಕ್ಕಳು ನಾಳೆ ಅಸಲಿಗೆ ಮೋದಿ – ರಾಹುಲ್ ಹೋಲಿಕೆಯೇ ಮೂರ್ಖತನ!
ದೊಡ್ಡವರಾಗಿ ದೇಶ ಮುನ್ನಡೆಸುವ ನಾಯಕನಾದರೆ ಇದೇ ದೇಶದ ವೈಚಾರಿಕತೆ ಪರಂಪರೆ ಇತಿಹಾಸ ಚರಿತ್ರೆ ಆಚಾರ, ವಿಚಾರ, ಸಂಸ್ಕೃತಿ, ಸಂಸ್ಕಾರಗಳ ಕನಿಷ್ಠ ಜ್ಞಾನ ವಿರಲೆಂದು. ಅದೆಲ್ಲವೂ ಇರದೆಯೂ ದೊಡ್ಡ ನಾಯಕನಾಗಿ ಕಂಗೊಳಿಸುವ ದರಿದ್ರ ಅವಕಾಶ ಆತನಿಗೆ ಕೂಡಿಬಂದರೆ ಅದು ಹೆತ್ತವರ ಮತ್ತು ಆತನ ಬೆಳವಣಿಗೆಯಲ್ಲಿ ಪಾತ್ರರಾದವರ ದೊಡ್ಡ ಅಪರಾಧವಾಗುತ್ತದೆ. ಡಾ.ರಾಜ್ ಮೂರನೇ ತರಗತಿ ಓದಿದ್ದರೂ ನಮ್ಮ ಮಣ್ಣಿನ ಸಂಸ್ಕೃತಿ ಅವರನ್ನು ಒಬ್ಬ ಮೇಧಾವಿಯನ್ನಾಗಿಸಿತು.
ಆ ವೈಚಾರಿಕತೆ ಅವರಿಗೆ ರಕ್ತದ ಹರಿದಿತ್ತು. ಹಾವಾಡಿಗನ ಮಗ ಏಕಾಏಕಿ ಒಂದು ಹಾವನ್ನು ಹಿಡಿಯಲಾರ. ತನ್ನ ತಂದೆ
ಅದೆಷ್ಟೋ ಹಾವನ್ನು ಹಿಡಿದು ಪಳಗಿಸಿದ್ದನ್ನು ನೋಡಿನೋಡಿಯೇ ಆ ಹುಡುಗನೂ ಯಶಸ್ವಿ ಹಾವಾಡಿಗನಾಗುತ್ತಾನೆಯೇ ಹೊರತು, ಅಂಥ ತಂದೆ ಸಿಗದಿದ್ದರೆ ಆತ ಒಂದು ಕಪ್ಪೆಯನ್ನೂ ಹಿಡಿಯಲಾರ. ಇದು ವಂಶವಾಹಿನಿ ಮತ್ತು ಅನುವಂಶಿಕತೆಯ ಒಂದು ದುಷ್ಟಾಂತವಷ್ಟೇ. ವಿವೇಕವಿಲ್ಲದಿದ್ದರೂ ಮಾಂಸಾಹಾರವನ್ನು ಶಿವನಿಗೆ ಅರ್ಪಿಸಿದ ಬೇಡರ ಕಣ್ಣಪ್ಪನೂ ನಮ್ಮಲ್ಲಿ
ಮಹಾದೈವಭಕ್ತನಾಗಿ ಆರಾಧಿಸಲ್ಪಡುತ್ತಾನೆ. ಹಾಗೆಯೇ ಹತ್ತುತಲೆಗಳಿದ್ದರೂ ವಿವೇಕವಿಲ್ಲದಿದ್ದರೆ ಕೇವಲ ಬಾಲವೇ ಲಂಕೆ ಯನ್ನು ಸುಡುತ್ತದೆ.
ಇನ್ನು ಮೋದಿಯವರ ವಿಚಾರಕ್ಕೆ ಬಂದರೆ ಅವರು ಏಕಾಏಕಿ ಕೈ ಅಡ್ಡವಿಟ್ಟು ಆಟೋರಿಕ್ಷಾ ನಿಲ್ಲಿಸಿ ಚಾಲಕನನ್ನು ದಬ್ಬಿಕೊಂಡು
ಹತ್ತಿಬಂದವರಂತೆ ರಾಜಕೀಯಕ್ಕೆ ಬಂದವರಲ್ಲ. ಕಳೆದ ಏಳು ವರ್ಷಗಳಲ್ಲಿ ಅವರು ಭಾರತವನ್ನು ಬದಲಿಸಿರುವುದು
ಭಾರತೀಯರಿಗಿಂತ ಜಗತ್ತಿನ ಬಹುತೇಕ ದೇಶಗಳಿಗೆ ಅನುಭೂತಿಯಾಗಿದೆ. ದಶಕಗಳಿಂದ ಸಹಿಸಿಕೊಂಡು ಬಂದ ದುರ್ವಿಧಿಯನ್ನೆ ತೊಳೆದು ದೇಶಕ್ಕೆ ಮತ್ತು ಪ್ರಜಾಪ್ರಭುತ್ವಕ್ಕೆ ಪವಿತ್ರವಾದ ಅರ್ಥ ನೀಡುವ ಹಾದಿಯಲ್ಲಿದ್ದಾರೆ.
ಇಷ್ಟಕ್ಕೂ ನಮ್ಮ ದೇಶವನ್ನು ಮುನ್ನಡೆಸಲು ಸಂವಿಧಾನವೆಂಬ ಸಿದ್ಧಯಂತ್ರವಿದೆ. ಯಾವ ಪಕ್ಷ ಅಧಿಕಾರಕ್ಕೆ ಬಂದರೂ ಅದರ
ಹಳಿಯಮೇಲೆ ಸಾಗಿ ದೇಶವನ್ನು ಅಭಿವೃದ್ಧಿ ಪ್ರಗತಿಯೊಂದಿಗೆ ಸಮಾನತೆ, ಸಹಬಾಳ್ವೆಯೊಂದಿಗೆ ನೈಜ ಭಾರತದ ಸಂಸ್ಕೃತಿ,
ಸಂಸ್ಕಾರಗಳನ್ನು ಗೌರವಿಸಿ ಪಾಲಿಸಿಕೊಂಡು ದಿಲ್ಲಿಯಿಂದ ಹಳ್ಳಿಯವರೆಗೂ ಅಭ್ಯುದಯಗೊಳಿಸಿಕೊಂಡು ಹೋಗಬೇಕಾದ
ನಿಗದಿತ ಹೊಣೆಗಾರಿಕೆಯಿದೆ. ಅದನ್ನು ಮೋದಿಯವರು ಹಂತಹಂತವಾಗಿ ಮಾಡಿಕೊಂಡು ಬರುತ್ತಿದ್ದಾರೆ.
ಕೆಲವೊಂದು ರಾಜಿಸೂತ್ರದ ಕಾರಣಗಳಿಂದ ಕೆಲ ಪದಾರ್ಥಗಳ ಬೆಲೆ ಏರಿಕೆಯಾಗಿರಬಹುದು. ಅದರಲ್ಲೂ ಈ ಕರೋನಾ
ದಾಳಿಯಿಂದಾಗಿ ಆರ್ಥಿಕತೆ – ಅಭಿವೃದ್ಧಿ – ನಿರುದ್ಯೋಗದ ಸಮಸ್ಯೆಗಳಿರಬಹುದು. ದಿಢೀರನೇ ಎದುರಾದ ಕರೋನಾ –
ಲಸಿಕೆಗಾಗಿ ಲಕ್ಷಾಂತರ ಕೋಟಿಗಳನ್ನು ವ್ಯಯಿಸಲೇಬೇಕಾದ ಅನಿರೀಕ್ಷಿತ ಸವಾಲು ದೇಶಕ್ಕೆ ತಲೆದೋರಿದೆ. ಅಪ್ಪ ಅಮ್ಮ ಎರಡು
ಮಕ್ಕಳ ಮನೆಯ ತೆರಿಗೆ ಹಣದಲ್ಲಿ ಮೂರ್ನಾಲ್ಕು ಹೆಂಡತಿ ಹದಿನೈದು ಮಕ್ಕಳ ಮನೆಯವರಿಗೂ ಸೇರಿ ನೂರಾ ಮೂವತ್ತು
ಕೋಟಿ ಚಿಲ್ಲರೆ ಮಂದಿಗೆ ಕೆಲವೇ ತಿಂಗಳುಗಳಲ್ಲಿ ವ್ಯಾಕ್ಸಿನ್ ಚುಚ್ಚುವುದು ಟ್ವಿಟರ್‌ನಲ್ಲಿ ತೌಡುಕುಟ್ಟುತ್ತಾ ರಾಜೀನಾಮೆ
ಕೇಳುವಷ್ಟು ಸುಲಭದ ಮಾತಲ್ಲ. ಇದನ್ನು ಮೋದಿಯವರು ವ್ಯವಸ್ಥಿತವಾಗಿ ಮಾಡಿಯೇ ತೀರುತ್ತಾರೆಂಬ ನಂಬಿಕೆ ಜನರಲ್ಲಿದೆ.
ಆದರೆ ಬಹುಸಂಖ್ಯಾತ ಹಿಂದೂಗಳನ್ನು ಕಡೆಗಣಿಸುತ್ತಾ, ಅವರ ಅಸ್ತಿತ್ವ, ನಂಬಿಕೆಗಳನ್ನು ನಾಶಗೊಳಿಸುತ್ತಾ, ದಲಿತರು ಶೋಷಿತ ರೆಂಬ ಜಾತಿಕಾರಣಗಳನ್ನು ಬಳಸಿಕೊಳ್ಳುತ್ತಾ, ಒಂದು ಧರ್ಮದ ಸಮೂಹವನ್ನು ಓಲೈಸಿಕೊಂಡು ಅವರನ್ನು ದಾರಿತಪ್ಪಿಸುತ್ತಾ ಇಡೀ ದೇಶವನ್ನು ಕೆಸರಿಗೆಳೆಯುವ ಎಮ್ಮೆಯಂತೆ ಹುನ್ನಾರ ನಡೆಯುತ್ತಿರುವುದು ಸಾಮಾನ್ಯನಿಗೂ ಸಾಕ್ಷಾತ್ಕಾರ ವಾಗುತ್ತಿದೆ.
ಇಂಥ ವ್ಯೂಹದಲ್ಲಿ ಮೋದಿಯವರನ್ನು ಸಿಲುಕಿಸುವ ಪ್ರಯತ್ನ ಗಳನ್ನು ಟೂಲ್‌ಕಿಟ್ ಗಿರಾಕಿಗಳು ನಿರಂತರ ಮಾಡುತ್ತಿದ್ದಾರೆ.
ಇದನ್ನೆ ಸಹಿಸಿಕೊಂಡು ಅಲ್ಪಾಹಾರ, ಅಲ್ಪನಿದ್ರೆಯೊಂದಿಗೆ ದಿನದ ಹದಿನೆಂಟು ಗಂಟೆಗಳ ಕಾಲ ದೇಶಕ್ಕಾಗಿಯೇ ದುಡಿಯುವ
ಮೋದಿಯವರೆಲ್ಲಿ? ಹುಚ್ಚು ಕಲಬೆರಕೆ ಗೂಬೆಗಳೆಲ್ಲಿ? ಕಾಂಗ್ರೆಸ್‌ನಲ್ಲೂ ಗೋಪಾಲಕೃಷ್ಣ ಗೋಖಲೆ, ಮದನ ಮೋಹನ ಮಾಳವೀಯಾ, ಲಾಲಾ ಲಜಪತರಾಯ, ತಿಲಕ್, ವಿಜಯರಾಘವಾಚಾರ್ಯ, ಚಿತ್ತರಂಜನ್ ದಾಸ್, ಸರ್ದಾರ್ ಪಟೇಲ್, ರಾಜೇಂದ್ರ ಪ್ರಸಾದ್, ನೇತಾಜಿ, ಅಂಬೇಡ್ಕರ್, ಶಾಸೀ ಜಿ ಅವರಂಥ ಅನೇಕ ದೇಶಭಕ್ತ ರಾಜಕೀಯ ನಾಯಕರು ತಮ್ಮ ಬದುಕನ್ನು ದೇಶದ ಸ್ವಾಭಿಮಾನಕ್ಕೆ ಧಾರೆಯೆರೆದಿದ್ದಾರೆ ಮತ್ತು ಅಂಥವರನ್ನು ಹೀನಾಯವಾಗಿ ನಡೆಸಿಕೊಂಡು ಕಳೆದುಕೊಂಡಿದ್ದಿದೆ.
ದುರಂತವೆಂದರೆ ಅಂಥ ಮಹಾನುಭಾವರ ಅನುವಂಶಿಕವೆಂಬಂತೆ ಒಂದೇ ಒಂದು ರಕ್ತದಹನಿ ಇಂದಿನ ಯಾವ ನಾಯಕರಲ್ಲೂ ಹರಿದುಬಂದಿಲ್ಲ. ಇನ್ನಾದರೂ ತಮ್ಮ ಪಕ್ಷವನ್ನು ಉಳಿಸಿಕೊಳ್ಳುವ ಇರಾದೆಯೇನಾದರು ಇದ್ದರೆ ರಾಹುಲ್‌ಗಾಂಧಿಯವರನ್ನು ಹಿಂಸಿಸದೆ ಒಂದೈದು ವರ್ಷ ಫಾರಿನ್ ಟೂರ್ ಕಳಿಸಿ, ಇರುವ ಸಮರ್ಥರ ಆಧುನಿಕ ಪಿ.ವಿ.ನರಸಿಂಹರಾವ್ ಒಬ್ಬರನ್ನು ರೂಪಿಸಿದರಷ್ಟೇ ಸಾಕು. ಪಕ್ಷದ ಮತ್ತು ಪ್ರತಿಪಕ್ಷದ ಘನತೆ ಉಳಿಯುತ್ತದೆ. ದೇಶಕ್ಕೂ ಮೋದಿಯವರ ವಿರುದ್ಧ ಸರಿಯಾದ ದ್ರೋಣರು ಭೀಷ್ಮರು ಲಭಿಸುವಂತಾಗುತ್ತದೆ.
ಕೊನೆಯದಾಗಿ, ಚಿತ್ರರಂಗದ ಇತಿಹಾಸ, ಅಭಿನಯದ ಗಂಧಗಾಳಿ ಗೊತ್ತಿರದೆ, ತಾನೇ ನಿರ್ಮಾಪಕನಾಗಿ ತಾನೇ ನಾಯಕ,
ಗಾಯಕನಾಗಿ ತನಿಖೆ ಎಂಬ ಕನ್ನಡ ಚಲನಚಿತ್ರವನ್ನು ನಿರ್ಮಾಸಿ ಅದನ್ನು ಸೊಳ್ಳೆ – ತಿಗಣೆ ಥಿಯೇಟರ್‌ನಲ್ಲಿ 25 ವಾರ ಖಾಲಿ ಓಡಿಸಿ ದೊಡ್ಡ ಹೀರೋ ಎನಿಸಿಕೊಂಡು ವಿಕೃತ ಮನರಂಜನೆ ನೀಡಿದ ಗುಲ್ಜಾರ್ ಖಾನ್‌ಗೂ ಡಾ.ರಾಜ್ ಅವರಿಗೂ ಇರುವ ವ್ಯತ್ಯಾಸ ತಿಳಿಯದಷ್ಟು ಮತಿಹೀನರಲ್ಲ ಪ್ರಜೆಗಳು. ಅದನ್ನು ಎಲ್ಲಾ ಪಕ್ಷದವರೂ ಮನಗಾಣಬೇಕಷ್ಟೆ.