ಪ್ರಸ್ತುತ
ರವೀ ಸಜಂಗದ್ದೆ
೧೯೭೬ನೆಯ ಇಸವಿ. ಇಸ್ಕಾನ್ ಸಂಸ್ಥೆ ಸ್ಥಾಪನೆಯಾಗಿ ದಶಕದ ಸಂಭ್ರಮದ ಹಿನ್ನೆಲೆಯಲ್ಲಿ ಅಮೆರಿಕದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರು ಜಗನ್ನಾಥ ರಥಯಾತ್ರೆಯನ್ನು ನ್ಯೂಯಾರ್ಕ್ ಪ್ರದೇಶದ ಸುಪ್ರಸಿದ್ಧ ಫಿಫ್ತ್ ಅವೆನ್ಯೂ ರಸ್ತೆಯಲ್ಲಿ ಮಾಡಿ ಸಂಭ್ರಮಿಸಲು ನಿರ್ಧರಿಸಿದರು. ಮೊದಲಿಗೆ ಸ್ಥಳೀಯಾಡಳಿತ ಮತ್ತು ಪೋಲೀಸ್ ಇಲಾಖೆಯಿಂದ ಅನುಮತಿ ಬೇಕಿತ್ತು. ಸಂಬಂಧಪಟ್ಟ ಅಧಿಕಾರಿಗಳು ಮತ್ತು ಕಛೇರಿಗಳಿಗೆ ಅನುಮತಿ ಕೋರಿ ವಿನಂತಿ ಪತ್ರ ನಿಡುವ ಜವಾಬ್ದಾರಿ ಹರೇಕೃಷ್ಣ ಚಳವಳಿ ಸಮಿತಿಯು ತೋಷನ್ ಕೃಷ್ಣ ದಾಸ್ ಅವರಿಗೆ ವಹಿಸಿತ್ತು.
ಪೋಲಿಸ್ ಇಲಾಖೆ ಅನುಮತಿ ನೀಡಿದರೂ ನ್ಯೂಯಾರ್ಕ್ ಮೇಯರ್ ಅಥವಾ ಮ್ಯಾನ್‌ಹಾಟನ್ ಜಿಡಳಿತದ ಅನುಮತಿ ಇನ್ನೂ ಸಿಗದ ಕಾರಣ ಸ್ಥಳೀಯ ಪೋಲಿಸ್ ಅನುಮತಿಗೆ ಮಾನ್ಯತೆಯಿರಲಿಲ್ಲ. ೧೯೬೩ರ ಇಂಥಾ ಯಾವುದೇ ಯಾತ್ರೆ, ಮೆರವಣಿಗೆಗಳಿಗೆ ಅನುಮತಿ ನಿಡಲು ಸ್ಪಷ್ಟ ಸಕಾರಣಗಳು ಬೇಕೆಂದು ಆದೇಶವಾಗಿತ್ತು. ಈ ಎಲ್ಲ ಅಡೆತಡೆಗಳನ್ನು ಮೀರಿ ಅನುಮತಿ ಸಿಗುವುದು ಅನುಮಾನವಾಗಿತ್ತು. ಕೊನೆಯ ಪ್ರಯತ್ನವಾಗಿ ಮ್ಯಾನ್‌ಹಾಟನ್ ಜಿಡಳಿತದ
ಮುಖ್ಯಸ್ಥರನ್ನು ಭೇಟಿಯಾಗಿ ವಿನಂತಿ ಪತ್ರ ನೀಡಿದೆವು. ಅದನ್ನು ಎರೆಡೆರಡು ಸಲ ಓದಿ, ರಥಯಾತ್ರೆ ನಡೆಸಲು ಷರತ್ತುಬದ್ಧ ಅನುಮತಿ ನೀಡಿದ್ದು ಅಚ್ಚರಿ ಮತ್ತು ಜಗನ್ನಾಥನ ಪ್ರಭಾವ ಎಂದಿದ್ದಾರೆ ತೋಷನ್ ಕೃಷ್ಣ ದಾಸ್.
ರಥಯಾತ್ರೆಗೆ ಅನುಮತಿಯೇನೋ ಸಿಕ್ಕಿತು. ಈಗ ಅದಕ್ಕಿಂತ ದೊಡ್ಡ ಸವಾಲು ಎದುರಾಯಿತು! ಜನನಿಬಿಡ ನ್ಯೂಯಾರ್ಕ್ ಪ್ರದೇಶದಲ್ಲಿ ಎರಡು-ಮೂರು ದಿನಗಳ ಮಟ್ಟಿಗೆ ಮರದ ಕಟ್ಟಿಗೆ ಮತ್ತಿತರ ವಸ್ತುಗಳನ್ನು ಬಳಸಿ ದೊಡ್ಡ ರಥ ತಯಾರಿಸಲು ಸ್ಥಳಾವಕಾಶ ಬೇಕಿತ್ತು. ಜಾಗಕ್ಕಾಗಿ ಸ್ಥಳೀಯ ಉದ್ಯಮಿಗಳನ್ನು ಪ್ರಭಾವಿ ವ್ಯಕ್ತಿ-ಸಂಸ್ಥೆ ಗಳನ್ನು ಸಂಪರ್ಕಿಸಲಾಯಿತು. ಹೆಚ್ಚಿನವರು ಈ ವಿಷಯದ ಕುರಿತು ಅರಿವು, ಆಸಕ್ತಿ ಇಲ್ಲದಿದುದರಿಂದ ನಯವಾಗಿ ನುಣುಚಿಕೊಂಡರು. ಬೇರೆಡೆ ರಥ ತಯಾರಿಸಿ ಇಲ್ಲಿಗೆ ತರಲೂ ಅಸಾಧ್ಯವಾದ ಮತ್ತು ರಥ ತಯಾರಿಸಲು ಫಿಫ್ತ್ ಅವೆನ್ಯೂ ರಸ್ತೆಯಲ್ಲಿ ಜಾಗ ಸಿಗದ ವಿಷಣ್ಣ ಪರಿಸ್ಥಿತಿ.
ಹೀಗೆ ದಿಕ್ಕು ತೋಚದಿರುವಾಗ ಅದೇ ರಸ್ತೆಯಲ್ಲಿ ಇರುವ ಹಳೆಯ ರೈಲು ಪ್ರಾಂಗಣದ ಜಾಗವನ್ನು ಅಮೆರಿಕದ ರಿಯಲ್ ಎಸ್ಟೇಟ್ ಸಂಸ್ಥೆ ‘ದಿ ಟ್ರಂಪ್ ಆರ್ಗನೈ ಸೇಷನ್’ ಆಗಷ್ಟೇ ಖರೀದಿಸಿದ ಸುದ್ದಿ ತೋಷನ್ ಕೃಷ್ಣ ದಾಸ್ ಗಮನಕ್ಕೆ ಬಂತು. ಕೂಡಲೇ ವಿನಂತಿ ಪತ್ರ ಸಿದ್ಧಪಡಿಸಿ ಅದೇ ದಿನ ಮಧ್ಯಾಹ್ನ ಒಂದು ದೊಡ್ಡ ಡಬ್ಬದಲ್ಲಿ ಅಂದಿನ ಪ್ರಸಾದ ತುಂಬಿಕೊಂಡು ಇಸ್ಕಾನ್ ದೇವಾಲಯದಿಂದ ನಾಲ್ಕು ಮೈಲಿ ದೂರದಲ್ಲಿರುವ ಟ್ರಂಪ್ ಟವರ್‌ಗೆ ತಂಡದೊಂದಿಗೆ ತೆರಳಿದರು. ‘ದಿ ಟ್ರಂಪ್ ಆರ್ಗನೈಸೇಷನ್’ ಮುಖ್ಯಸ್ಥ, ಉದ್ಯಮಿ ಡೊನಾಲ್ಡ್ ಟ್ರಂಪ್ ಅವರನ್ನು ಸಂಪರ್ಕಿಸಿ, ಜಗನ್ನಾಥ ರಥಯಾತ್ರೆಗೆ ರಥ ತಯಾರಿಸಲು ಅವರು ಇತ್ತೀಚೆಗೆ ಖರೀದಿಸಿದ ರೈಲು ಪ್ರಾಂಗಣವನ್ನು ಒಂದೆರಡು ದಿನಗಳಿಗೆ ನೀಡುವಂತೆ ಮನವಿ ಸಲ್ಲಿಸುವ ಇರಾದೆ ಅವರದಾಗಿತ್ತು.
ಬಂದಿರುವ ಕಾರಣವನ್ನು ಟ್ರಂಪ್ ಕ್ಯಾಬಿನ್ ಹೊರಗಿರುವ ಆಪ್ತ ಸಹಾಯಕಿಗೆ ವಿವರಿಸಿ, ವಿನಂತಿ ಪತ್ರದ ಜೊತೆಗೆ ಇಸ್ಕಾನ್ ಪ್ರಸಾದದ ಡಬ್ಬಿ ಕೊಟ್ಟರು. ಆಕೆ ವಿವರ ತಿಳಿದು, ಮುಗುಳ್ನಕ್ಕು, ‘ವಿವರ ಅವರ ಮುಂದಿಡುವೆ. ಇಂಥಾ ವಿಷಯಗಳಿಗೆಲ್ಲ ಟ್ರಂಪ್ ಅನುಮತಿ ಕೊಡುವುದಿಲ್ಲ, ಹೆಚ್ಚಿನ ಆಸೆ ಬೇಡ’ ಎಂದರು. ಇದನ್ನು ಕೇಳಿಸಿಕೊಂಡ ದಾಸ್ ಮತ್ತು ತಂಡಕ್ಕೆ ಭರವಸೆ ಉಳಿದದ್ದು ಜಗನ್ನಾಥನ ಮಹಿಮೆಯ ಮೇಲೆ ಮಾತ್ರ.
ಇದಾದ ಮೂರನೇ ದಿನಕ್ಕೆ, ಇಸ್ಕಾನ್ ಕಚೇರಿಯಲ್ಲಿ ರಿಂಗಣಿಸಿದ ಫೋನ್ ಎತ್ತಿಕೊಂಡು ದಾಸ್ ಅವರು ಇತ್ತ ಕಡೆಯಿಂದ ‘ಹರೇಕೃಷ್ಣ’ ಎಂದಾಗ ಆಕಡೆಯ ಹೆಣ್ಣು ಧ್ವನಿ ‘ಜಂಟಲ್ ಮ್ಯಾನ್, ಏನಾಯಿತು, ಹೇಗಾಯಿತು ಗೊತ್ತಿಲ್ಲ! ಟ್ರಂಪ್ ನಿಮ್ಮ ಪತ್ರ ಓದಿ, ನೀವು ಕೊಟ್ಟ ಆಹಾರ (ಪ್ರಸಾದ)ದ ರುಚಿ ನೋಡಿದರು. ಕೂಡಲೇ ಯಾಕಾಗಬಾರದು? ಅವರಿಗೆ ರಥ ತಯಾರಿಸಲು ಜಾಗ ನೀಡಿ ಎಂದಿzರೆ. ಅವರ ಸಹಿಯಿರುವ ಅನುಮತಿ ಪತ್ರ ತಯಾರಿದೆ, ಬಂದು ಸ್ವೀಕರಿಸಿ. ಎಟಟb bZqs!’ ಎಂದು ಹೇಳಿ ಫೋನಿಟ್ಟಳು. ೪೮ ವರ್ಷಗಳ ಹಿಂದೆ, ಅಂದರೆ ೧೯೭೬ರಲ್ಲಿ ನ್ಯೂಯಾರ್ಕ್‌ನ ಫಿಫ್ತ್ ಅವೆನ್ಯೂ ರಸ್ತೆಯಲ್ಲಿ ಜಗನ್ನಾಥನ ಪ್ರಥಮ ರಥಯಾತ್ರೆಯ ಹಾದಿ ಎಲ್ಲ ಅಡೆತಡೆಗಳನ್ನು ಮೀರಿ, ಟ್ರಂಪ್ ಸಹಕಾರದೊಂದಿಗೆ ಸುಗಮವಾಯಿತು, ಸಂಪನ್ನವಾಯಿತು!
ಅಂದು ತನ್ನ ಭವ್ಯ ರಥ ತಯಾರಿಸಲು ಜಾಗ ನೀಡಿದ್ದ ಡೊನಲ್ಡ ಟ್ರಂಪ್‌ನನ್ನು ಇಂದು ಹತ್ಯಾ ದಾಳಿಯಿಂದ ಕೂದಲೆಳೆಯ ಅಂತರದಲ್ಲಿ ಅದೇ ಸರ್ವೋತ್ತಮ ಜಗನ್ನಾಥ ಭಿಕ್ಷೆ ಮತ್ತು ಅನುಗ್ರಹದ ರೂಪದಲ್ಲಿ ಪಾರು ಮಾಡಿದ್ದಾನೆ ಎಂದೆನಿಸುತ್ತಿದೆ! ಟ್ರಂಪ್ ಬಗೆಗಿನ ಇತರ ಹಲವು ವಿಚಾರಗಳಲ್ಲಿ ಅನೇಕರಿಗೆ ಸಹಮತ ಇಲ್ಲದಿರಬಹುದು. ಆತನ ನಿರ್ಧಾರ, ಹೇಳಿಕೆ, ನಡವಳಿಕೆಗಳ ಬಗ್ಗೆ ತಕರಾರು ಎಡೆ ಇದೆ. ಹಾಗಿದ್ದೂ ಅಂದು ರಥಯಾತ್ರೆಗೆ ಅನುಕೂಲ ಮಾಡಿಕೊಟ್ಟ ಪ್ರತಿಫಲ ವಾಗಿ ಇಂದು ವಯ್ಯನ ಪ್ರಾಣ ಉಳಿದಿರುವುದು ಅಲ್ಲಗಳೆಯಲಾಗದು.
‘ನಂಬಿದವರನ್ನು, ಸಲಹುವವರನ್ನು ಇಂಬುಗೊಟ್ಟು ಕಾಪಾಡುವ ಶಕ್ತಿ’ಯನ್ನು ಅನೇಕ ರೂಪಗಳಲ್ಲಿ ಪೂಜಿಸಿ ಆರಾಧಿಸುವ ನಂಬಿಕೆ ಮತ್ತು ಜನರಿರುವ ದೇಶ ನಮ್ಮದು. ಪ್ರತಿ ಬಾರಿ ಇಂಥಾ ಅಪಘಾತಗಳಿಂದ ಪಾರಾದಾಗ ದೇವರಿಗೆ ಧನ್ಯವಾದ ಹೇಳಿ ಕಾಲಿಗೆರಗುವುದು ನಮ್ಮ ಸನಾತನ ಸಂಸ್ಕೃತಿಯ ಶ್ರೇಷ್ಠತೆ. ಟ್ರಂಪ್‌ಗೂ ಇದೇ ಅನುಭವ ಆಗಿರಬಹುದು. ಹತ್ಯಾ ಪ್ರಯತ್ನದಿಂದ ಪಾರಾದ ಕ್ಷಣದಲ್ಲಿ ತಾನು ನಂಬಿದ ಶಕ್ತಿಯ ನೆನಪನ್ನು ಅವರು ಖಂಡಿತಾ ಮಾಡಿರುತ್ತಾರೆ. ಆ ಶಕ್ತಿಯ ರೂಪ ಜಗದೊಡೆಯ ಜಗನ್ನಾಥನದ್ದೇ ಯಾಕಾಗಿರಬಾರದು?! ಜಗನ್ನಾಥ್ ಕೀ ಜೈ.
(ಲೇಖಕರು ಸಾಫ್ಟ್ ವೇರ್ ಉದ್ಯೋಗಿ ಮತ್ತು ಹವ್ಯಾಸಿ ಬರಹಗಾರರು)