Sunday, 13th October 2024

ಕುತ್ಸಿತ ಮನಕೆ ಜೈ ಭೀಮ್ ಬೂಸ್ಟರ್‌

ರಾವ್ -ಭಾಜಿ

ಪಿ.ಎಂ.ವಿಜಯೇಂದ್ರ ರಾವ್

journocate@gmail.com

ಪ್ರಜಾಪ್ರಭುತ್ವಕ್ಕನುಗುಣ ಮೋದಿಯನ್ನು ಅಲುಗಾಡಿಸಲಾಗದಿರುವಾಗ, ಬೀದಿಗೆ ಬಿದ್ದು ದೊಂಬಿ ಎಬ್ಬಿಸುವುದು ಹಳೆಯ ತಂತ್ರ. ಸಮೂಹ ಮಾಧ್ಯಮಗಳ ಖರೀದಿ ಮತ್ತೊಂದು ತಂತ್ರ. ಸಿನೆಮಾ ಮೂಲಕ ಅಶಾಂತಿ ಮೂಡಿಸುವುದು ಹೆಚ್ಚು ಬಳಕೆಯಲ್ಲಿಲ್ಲದ ತಂತ್ರ.

ಕಾಡುಗಳ್ಳ ವೀರಪ್ಪನ್ನ ದುಷ್ಕೃತ್ಯಗಳು ಹೆಚ್ಚುತ್ತಿದ್ದ ದಿನಗಳವು. ಅವಿಭಾಜ್ಯ ಮೈಸೂರು ಜಿಲ್ಲೆಯ ಪೊಲೀಸ್ ಅಽಕ್ಷರಾಗಿದ್ದ ಬಿಪಿನ್ ಗೋಪಾಲ ಕೃಷ್ಣರ ಜತೆ ಒಂದು ಮಧ್ಯಾಹ್ನ ಸ್ಪೋರ್ಟ್ಸ್ ಕ್ಲಬ್ಬಿಗೆ ಹೋಗಿದ್ದೆ. ಜತೆಗೆ ಹಿರಿಯ ಪತ್ರಕರ್ತ-ಮಿತ್ರ ಕೂಡ್ಲಿ ಗುರುರಾಜ್ ಇದ್ದರು. ಅಲ್ಲಿ, ನಿವೃತ್ತ ಅರಣ್ಯಾಧಿಕಾರಿಯೊಬ್ಬರ ಪರಿಚಯ
ವಾಯಿತು. ವೀರಪ್ಪನ್ ಎಲ್ಲಿದ್ದಾನೆ ಗೊತ್ತಾ? ಕೇಳಿದರು. ಇಲ್ಲವೆಂದೆವು.

ಅವರನ್ನೇನು ಕೇಳುತ್ತೀರಿ, ನನ್ನನ್ನು ಕೇಳಿ, ಎಂದರು. ನಿಮ್ಮನ್ನೇ ಕೇಳುತ್ತೀನಿ, ಎಲ್ಲಿದ್ದಾನೆ, ಹೇಳಿ ಎಂದೆ. ನಿಮಗ್ಯಾಕೆ ಹೇಳಬೇಕು? ಎಂದು ಉತ್ತರಿಸಿದರು. ಗಂಭೀರ ಚರ್ಚೆ ಈ ವ್ಯಕ್ತಿಯ ಜತೆ ಸಾಧ್ಯವಿಲ್ಲ ಎಂದು ಕೊಂಡು ತೆಪ್ಪಗಾದೆವು. ಒಂದೈದು ನಿಮಿಷ ಬಡಬಡಾಯಿಸಿ ಕಳಚಿಕೊಂಡರು. ಅವರೊಬ್ಬ ಹಿರಿಯ ಪತ್ರ ಕರ್ತರು. ಕಮ್ಯುನಿಸ್ಟ್ ಎಂದು ಹೇಳಿಕೊಳ್ಳುತ್ತಿದ್ದರು. (ಹಾಗೇನಲ್ಲ ಅಂತ ನಂತರದಲ್ಲಿ ತಿಳಿದು ಬಂತು.) ಹೋಟೆಲ್‌ನಲ್ಲಿ ಚಹಾ ಕುಡಿಯುವಾಗ ಅದೇಕೋ ವೇದಗಳ ಪ್ರಸ್ತಾವನೆ ಮಾಡಿದೆ. ಅದು ಯೂಸ್ಲೆಸ್ ಎಂದರು. ವೇದ ಓದಿದ್ದೀರಾ, ಕೇಳಿದೆ. ಅದನ್ನು ನಾನೇಕೆ ಓದಬೇಕು? ಎಂದರು.

ಜ್ಞಾನದ ಅಪಾರ ನಿಽಯೇ ಆದ ವೇದವನ್ನು ಓದದೇ ಅದರ ಬಗ್ಗೆ ಒಬ್ಬ ಜವಾಬ್ದಾರಿಯುತ ವ್ಯಕ್ತಿ ಬಾಯಿಗೆ ಬಂದದ್ದು ಮಾತಾಡುವುದಾದರೆ, ಮನೆಮುರುಕು ಅಜೆಂಡಾ ಹೊತ್ತ ಒಂದು ಚಿತ್ರ ವೀಕ್ಷಿಸದೇ ಅದರ ಬಗ್ಗೆ ಮಾತನಾಡ ಬಹುದೆಂದು ನಂಬಿದ್ದೇನೆ. ಅವರ ಗೋರಿ ತೋಡುವವರೊಟ್ಟಿಗೆ ಕೈಜೋಡಿಸುವುದು ಹಿಂದೂಗಳ ಹುಟ್ಟು ಗುಣ. ಹಿಂದೂ ಧರ್ಮಗ್ರಂಥಗಳನ್ನು ಉಪೇಕ್ಷಿಸಿ, ಹಿಂದೂ ಧರ್ಮ ಹೀಯಾಳಿಸುತ್ತ, ಹಿಂದೂಗಳನ್ನು ರಕ್ಕಸರೆಂದು ಬಿಂಬಿಸುತ್ತಿದ್ದ ಲಂಕೇಶ್ ಪತ್ರಿಕೆಯನ್ನು ನಿರಂತರವಾಗಿ, ಹಣಕೊಟ್ಟು, ಪೋಷಿಸಿದ ಅಸಂಖ್ಯಾತ ಹಿಂದೂಗಳಲ್ಲಿ ನಾನೂ ಒಬ್ಬ. ಅದೇ ರೀತಿ ಶ್ರೀಧರರ ಅಗ್ನಿ ಪತ್ರಿಕೆಯನ್ನೂ, ಆ ವ್ಯಕ್ತಿಯ ರೀತಿನೀತಿ ಗಳನ್ನು ಒಪ್ಪದಿ ದ್ದರೂ, ಓದಿ ಬೆಳೆಸಿದ ಓದುಗರಲ್ಲಿ ನಾನೂ ಸೇರಿದ್ದೇನೆ.

ಆ ತಪ್ಪಿಗೆ ಪ್ರಾಯಶ್ಚಿತ್ತವಾಗಿ ‘ಜೈ ಭೀಮ’ ಎಂಬ ಚಿತ್ರ ನೋಡದೇ ಅದರ ಬಗ್ಗೆ ಬರೆದರೆ ಅಡ್ಡಿಯಿಲ್ಲ. ಆದರೆ, ಆಧಾರರಹಿತವಾಗಿ ಬರೆದರೆ ಮಾರ್ಕ್ಸಿಸ್ಟರಿಗೂ ನನಗೂ ವ್ಯತ್ಯಾಸವಿರಲಾರದು. ಹಾಗಾಗಿ, ಭವ್ಯ ಭಾರತದ ಸಂರಕ್ಷಣೆಗೆ ಕಟಿಬದ್ಧವಾಗಿದ್ದು, ಸತ್ವಯುತ ಹಾಗೂ ಘನತೆಯುಕ್ತ ಪತ್ರಿಕೋದ್ಯಮಕ್ಕೆ ಹೆಸರಾಗಿರುವ ಸ್ವರಾಜ್ಯ ಪತ್ರಿಕೆಯಲ್ಲಿ ಪ್ರಕಟವಾದ ಜೈ ಭೀಮ್ ಕುರಿತಾದ ಲೇಖನ ಆಧರಿಸಿ ಇದನ್ನು ಬರೆಯುತ್ತಿದ್ದೇನೆ. ಲೇಖಕ ಅರವಿಂದ್ ನೀಲಕಂಡನ್ ಅನುಮತಿಸಿದ್ದಾರೆ. ಸಂಶೋಧನಾತ್ಮಕ ಗುಣ ಅವರ ಪ್ರತಿ ಬರೆಹದಲ್ಲೂ ಕಾಣಸಿಗುತ್ತದೆ. ತೂಕದ ಬರ ವಣಿಗೆ.

ಯಾವುದೇ ವಿಷಯ ಪ್ರತಿಪಾದನೆಯಲ್ಲೂ ಅವರು ನಿರುದ್ವಿಗ್ನ. ಸಿ. ರಾಜಗೋಪಾಲಾಚಾರಿ ಬೆಂಬಲದೊಂದಿಗೆ ಆರಂಭವಾಗಿ, ೭ ವರ್ಷಗಳ ಹಿಂದೆ ಪುನರಾ ರಂಭವಾದ ಸ್ವರಾಜ್ಯ ಪತ್ರಿಕೆಗೆ ಅರವಿಂದ್ Contributing Editor  ಆಗಿದ್ದಾರೆ. ಜೈ ಭೀಮ್ ಚಿತ್ರದ ಅಟಾಪ್ಸಿಗೆ ತಮ್ಮ ಲೇಖನಿಯನ್ನೇ ಸಮರ್ಥವಾಗಿ ಬಳಸಿದ್ದಾರೆ. ಚಿತ್ರ ನಿರ್ಮಾತೃಗಳು ಕುಂದೇರಾನ ಪಾತ್ರವನ್ನು ಆದರ್ಶವಾಗಿಟ್ಟುಕೊಂಡಂತಿದೆ. ವ್ಯತ್ಯಾಸವೇನೆಂದರೆ, ಅವರಿಗೆ ಸುಳ್ಳು ಹೇಳಬೇಕಾದ ಒತ್ತಡ ಆ ಕಾಲ್ಪನಿಕ ಪಾತ್ರ ಕ್ಕಿಂತ ಹೆಚ್ಚಿದ್ದಂತಿದೆ. ಚಿತ್ರದ ಕೊನೆಯಲ್ಲಿ, ನಿರ್ಮಾಣ ಯಾರೆಲ್ಲರ ಕೃಪೆಯಿಂದ ಸಾಧ್ಯವಾಯಿತು ಎಂಬ ಪಟ್ಟಿಯಲ್ಲಿ, ಕ್ಲಾರಿ ಶೀಯನ್
ಮಿಷನರಿ ಗಳನ್ನೂ ನಮೂದಿಸಲಾಗಿದೆ.

ಸುಳ್ಳು- ವಂಚನೆ-ದಗಲ್ಬಾಜಿತನವನ್ನೇ ಬಂಡವಾಳ ಮಾಡಿಕೊಂಡು ಎಗ್ಗಿಲ್ಲದೇ ಭಾರತದ ಸಂಸ್ಕೃತಿಯ ಬುಡಕ್ಕೇ ಕೊಡಲಿ ಪೆಟ್ಟು ನೀಡುತ್ತಿರುವವರ ಕೃಪಾ ಕಟಾಕ್ಷ ಇದೆಯೆಂದ ಮೇಲೆ ಚಿತ್ರದಲ್ಲಿ ಸುಳ್ಳುಗಳನ್ನು ತುರುಕಲು ಹಿಂಜರಿತವೇ? ಕ್ಲಾರೀಶಿಯನ್ ಮಿಷನರಿಗಳ ಉದ್ಯೋಗವೇ ಇರುಳಾ ಪಂಗಡಗಳನ್ನು ಮತಾಂತರ ಮಾಡುವುದು. ಅದಕ್ಕೆ ಬೇಕಾದ ಪ್ರಲೋಭನೆಗೆ ಅವರು ಬಳಸಿಕೊಳ್ಳುತ್ತಿರುವುದು ಕೇಂದ್ರ ಸರಕಾರದ ಯೋಜನೆಗಳನ್ನು. ನಿಮ್ಮ ನಮ್ಮೆಲ್ಲರ ಕಾಸು,
ಮೇರಿಯಮ್ಮನ ಜಾತ್ರೆ. ಕಳ್ಳತನದ ಹುಸಿ ಆರೋಪ ಹೊತ್ತ ಬುಡಕಟ್ಟು ಜನಾಂಗದ ಯುವಕನ ಮೇಲೆ ಭ್ರಷ್ಟ ಪೊಲೀಸ್ ದೌರ್ಜನ್ಯವೆಸಗುವುದು ಚಿತ್ರದ ಕಥಾ ಹಂದರ.

ಅದರನಿದೆ ವಿಶೇಷ, ನಮ್ಮ ವ್ಯವಸ್ಥೆ ಇರೋದೇ ಹಾಗಲ್ಲವೇ ಎಂಬ ನಿರ್ಲಿಪ್ತ, ನಿರ್ಲಜ್ಜ ಧೋರಣೆ ನಮ್ಮಲ್ಲಿ ಮನೆ ಮಾಡಿದೆ. ವಾಸ್ತವದಲ್ಲಿ, ನಾನು ಹೇಳುವಂತೆ, ವ್ಯವಸ್ಥೆ ಯಲ್ಲಿನ ಪೊಲೀಸ್ ದೌರ್ಜನ್ಯ ಪಶ್ಚಿಮ ಯೂರೋಪ್‌ನಿಂದ ವ್ಯಾಪಾರಿ ವೇಷ ತೊಟ್ಟುಬಂದ ಕಿರಿಸ್ತಾನರ ಬಳುವಳಿಯೇ. ಬಡಪಾಯಿ ಯುವಕನ ಮೇಲಿನ ದೌರ್ಜನ್ಯದ ವಿರುದ್ಧ ಏಕಾಂಗಿಯಾಗಿ ಬಡಿದಾಡುವ ಕಮ್ಯುನಿಷ್ಟ್ ಯುವ ವಕೀಲ ಯಶಸ್ಸು ಕಾಣುತ್ತಾನೆ. ಚಿತ್ರದ ಒಟ್ಟಾರೆ ಮೌಲ್ಯದ ಮೊತ್ತ ಇಷ್ಟೇ ಆಗಿದ್ದರೆ, ಯಾರದ್ದೂ ತಕರಾರಿರುತ್ತಿರಲಿಲ್ಲ. ಸತ್ಯ ಘಟನೆಯನ್ನಾಧರಿಸಿ ಹೆಣೆದ ಈ ಚಿತ್ರದಲ್ಲಿ ಮಿಷನರಿಗಳ ಗುಳ್ಳೆ ನರಿ ಬುದ್ಧಿಗೆ ಬಿಡುವೇ ಕೊಟ್ಟಿಲ್ಲ.

ಘಟಿಸಿದ ನೈಜ ಪ್ರಕರಣದಲ್ಲಿ, ಪೊಲೀಸ್ ಸಮವಸ ತೊಟ್ಟ ಹಿಂಸಾ-ವಿನೋದಿ ಪೊಲೀಸ್ ಅಽಕಾರಿಯ ಹೆಸರು ಅಂತೋಣಿ ಸಾಮಿ. ಹೆಸರೇ ಸೂಚಿಸುವಂತೆ ಅಪ್ಪಟ ಶಿಲುಬೆಧಾರಿ. ಆದರೆ, ಚಿತ್ರದಲ್ಲಿ ಅವನಿಗೆ ಹಿಂದೂ ಹೆಸರನ್ನು ಬಳಿದು ಮತಾಂತರಿಸಲಾಗಿದೆ. ಕಲ್ಪನೆಯಲ್ಲೂ ವಿಕೃತಿ. ಗುರುಮೂರ್ತಿಯಂತೆ, ಅವರ ಪಿಂಡ. ಗುರುಮೂರ್ತಿ ಎಂಬ ಹೆಸರು ಕೂಡ ಚಮತ್ಕಾರದ ಕಲ್ಪನೆ ಯಿಂದ ಹುಟ್ಟಿದ್ದು. ದಾರ್ಷ್ಟ್ಯ ವಣ್ಣಿಯಾರ್ ನಾಯಕ ಕಡು-ವೇಟ್ಟಿ ಗುರುವಿಗೆ ಗುರಿಯಿಟ್ಟದ್ದು. ಇದು ಉದ್ದೇಶ ಪೂರ್ವಕ ಮಾಡಿದ ಚೇಷ್ಟೆ ಎಂಬುದಕ್ಕೆ ಪುರಾವೆ, ಗುರು ಮೂರ್ತಿ ಪಾತ್ರಧಾರಿಯ ಹಿನ್ನೆಲೆಯಲ್ಲಿ ಕ್ಯಾಲೆಂಡರ್ ನೇತು ಹಾಕಲಾಗಿದ್ದು ವಣ್ಣಿಯಾರ್ ಸಂಘಟನೆ ಹೆಸರು ಅದರಲ್ಲಿ ಎದ್ದು ಕಾಣುತ್ತದೆ.

ತಿಪ್ಪೆ ಸಾರಿಸುವುದಕ್ಕೆ ಪ್ರಯತ್ನಪಟ್ಟವರಲ್ಲಿ, ಅದೇ ಚಿತ್ರದಲ್ಲಿ ನಟಿಸಿದ ಸೂರ್ಯ ಸೇರಿದ್ದಾನೆ. ಹೌದು, ವಣ್ಣಿಯಾರ್ ಕುಲದ ಕ್ಯಾಲೆಂಡರ್ ಇರಬಾರದಿತ್ತು,
ತಪ್ಪಾಗಿದೆ, ಎಂದು ಉಡಾಫೆ ಮಾಡಿದ್ದಾನೆ. ಆದರೆ, ಚಿತ್ರದ ಒಂದು ಸಂಭಾಷಣೆ ಅವನ ಉಡಾಫೆಯನ್ನು ಬಯಲು ಮಾಡಿದೆ. ಧೂರ್ತ ಪೊಲೀಸ್ ಅಧಿಕಾರಿಗೆ ಅವನ ಜಾತಿಯ ಬೆಂಬಲವಿರುವುದನ್ನು ತೋರಿಸಲಾಗಿದೆ. ಅದಕ್ಕೆ ವಿರೋಧಿಸಿ ಕಮ್ಯುನಿಷ್ಟರು ಜನಪರ ಪ್ರತಿಕ್ರಾಂತಿಗೆ ಸಜ್ಜಾಗುತ್ತಾರೆ. ಇದು, ಒಂದು ಜಾತಿ ಯನ್ನು ಕೇಡಿಗಳನ್ನಾಗಿ ಬಿಂಬಿಸಿ, ಆ ಸುಳ್ಳು ಅಡಿಪಾಯದ ಮೇಲೆ ತಮ್ಮ ಆಡಳಿತದ ಭ್ರಮಾಸೌಧವನ್ನು ಕಟ್ಟುವ ಚಾಳಿಎಂದು ಪ್ರತ್ಯೇಕವಾಗಿ ಹೇಳ ಬೇಕಿಲ್ಲವಲ್ಲವೇ? ಕಮ್ಯುನಿಷ್ಟರಿಗೂ, ಹಿಂಸೆಯ ಪ್ರಾಯೋಜಕತ್ವಕ್ಕೂ ಇನ್ನಿಲ್ಲದ ನೆಂಟು.

ಕ್ರೌರ್ಯವಿದ್ದ ಮೇಲೆ, ಚಿತ್ರವನ್ನು ನೋಡಲಿಕ್ಕೆ ಮುಗಿಬೀಳದಿರುತ್ತಾರೆಯೇ? ಅದೂ ಪೊಲೀಸರನ್ನು ಯಮಕಿಂಕರರನ್ನಾಗಿ ತೋರಿಸುವಾಗ? ಹಿಂಸೆ ಗಹಗ
ಹಿಸಿ ನಗುವ ಅಬ್ಬರದಲ್ಲಿ ಚಿತ್ರದ ಸಂದೇಶ ಸದ್ದಿಲ್ಲದೇ ಪ್ರೇಕ್ಷಕರ ಮನದಾಳಕ್ಕಿಳಿದುಬಿಡುತ್ತದೆ. ನೈಜ ಪ್ರಕರಣದಲ್ಲಿ, ಪೊಲೀಸ್ ದೌರ್ಜನ್ಯಕ್ಕೊಳಗಾದವನ ಹೆಂಡತಿಯ ಹೆಸರು ಪಾರ್ವತಿ. ಪಾರ್ವತಿಯ ಹೆಸರೂ ಬದಲಾಗಿದೆ. ಗೋವಿಂದರಾಜು ಎಂಬ ಮತ್ತೊಬ್ಬ ಸಂತ್ರಸ್ತನ ಹೆಸರನ್ನೂ ಚಿತ್ರದ ರೂವಾರಿಗಳ
ಧೂರ್ತ ಅಜೆಂಡಾಗೆ ತಕ್ಕಂತೆ ಬದಲಾಯಿಸಲಾಗಿದೆ.

ವಾಸ್ತವದಲ್ಲಿ, ಪ್ರಕರಣಕ್ಕೆ ಸಂಬಂಧಿಸಿದ ಹೇಬಿಯಸ್ ಕಾರ್ಪಸ್ ವಿಚಾರಣೆಯನ್ನು ನಡೆಸುವ ನ್ಯಾಯಾಧೀಶರ ಹೆಸರು ಪಿ.ಎಸ್. ಮಿಶ್ರಾ. ಆತ ಒಬ್ಬ ಬ್ರಾಹ್ಮಣ ಮತ್ತು ಗಾಂಧಿವಾದಿ. ಪ್ರಕರಣದಲ್ಲಿ ಅವರ ಪಾತ್ರ ಹಿರಿದಾದದ್ದು, ಆದರೆ ಸಿನೆಮಾದ ಅಜೆಂಡಾಗೆ ಅದು ಒಪ್ಪಬೇಕಲ್ಲ! ಆ ಪಾತ್ರದ ಮಹತ್ವವನ್ನೇ ಕಿರಿದಾಗಿಸ ಲಾಗಿದೆ, ಎನ್ನುತ್ತಾರೆ ಅರವಿಂದ್. ಇನ್ನೊಂದು ಮುಖ್ಯವಾದ ಎಡವಟ್ಟು. ಉದ್ದೇಶಪೂರ್ವಕವೆಂದು ಪುನರುಚ್ಚರಿಸಬೇಕಿಲ್ಲ. ಚಿತ್ರದಲ್ಲಿ, ದೌರ್ಜನ್ಯಕ್ಕೊಳಗಾದ ಪಂಗಡವನ್ನು ಕುರವಾ ಬದಲು ಇರುಳಾ ಎಂದು ತಿರುಚಲಾಗಿದೆ. ಅದಕ್ಕೆ ಕಾರಣವೂ ನಿಚ್ಚಳವಾಗಿದೆ. ಇರುಳಾ ಪಂಗಡಕ್ಕೂ, ಹಿಂದೂ ಧರ್ಮಕ್ಕೂ ಅವಿನಾಭಾವ ಸಂಬಂಧ.

ಸಪ್ತ ಮಾತೃಕಾ, ಶಿವ ಮತ್ತು ರಂಗನಾಥ ಸ್ವಾಮಿ ದೇವರುಗಳನ್ನು ಆರಾಧಿಸುವ ಈ ಬುಡಕಟ್ಟು ಜನಾಂಗ ಬುಡಕಟ್ಟೇತರ ಜನಾಂಗದೊಂದಿಗೂ ಸಂಬಂಧವಿರಿಸಿ ಕೊಂಡಿದ್ದಾರೆ. ಪ್ರಸಿದ್ಧ ಅಲಂಗಾಡು ದೇವಸ್ಥಾನದಲ್ಲಿ ಶಿವನಿಗೆ ಸಲ್ಲಿಸಲಾಗುವ ನೈವೇದ್ಯಕ್ಕೆ ಇರುಳಾ ಪಂಗಡದವರು ಸಿದ್ಧಪಡಿಸುವ ಅಕ್ಕಿಯೇ ಆಗಬೇಕು. ಇಂದು, ದೌರ್ಜನ್ಯಕ್ಕೊಳಪಟ್ಟ ಜನಾಂಗದ ಹಣೆಗೆ ಕ್ರಿಮಿನಲ್ ಪಂಗಡವೆಂದು ಹಣೆಪಟ್ಟಿದವರೇ ಬ್ರಿಟಿಷರೆಂದು ದಡ್ಡತನದಿಂದ ಕರೆಯುವ ಕಿರಿಸ್ತಾನರು. ಮಿಲ್‌ಗಳ ಸ್ಥಾಪಿಸಿ ಹೊಟ್ಟೆಪಾಡಿಗೆ ಸಂಚಕಾರ ತಂದವರೂ ಇದೇ ಬಿಳೀ ಸಮುದಾಯದ ಖೂಳರು.

ಇರುಳಾರರ ಮೂಲಭೂತ ಹಕ್ಕನ್ನು ಮರುಸ್ಥಾಪಿಸಲು ಕಂಕಣಕಟ್ಟಿ ನಿಂತವರಲ್ಲಿ ಕಾಮರಾಜ, ಪಸುಂಪೋನ್ ತೇವರ್ ಮತ್ತು ರಾಜಾಜಿ ಎಂದು ಅಭಿಪ್ರಾಯ ಪಡುತ್ತಾರೆ ಇರುಳಾರರ ಕುರಿತಾದ ಇತಿಹಾಸದ ಪರಿಚಯವಿರುವ ಅರವಿಂದ್. ಹಿಂದೂಗಳ ತಲೆಮೇಲೆ ಗೂಬೆ ಕೂಡಿಸುವ ಪ್ರಯತ್ನದಲ್ಲಿ ಬುಡಕಟ್ಟು ಜನಾಂಗದ ಮೇಲಿನ ಅಧಿಕಾರಶಾಹೀ ದೌರ್ಜನ್ಯವನ್ನು ಹಿಂದೂ ದೌರ್ಜನ್ಯವೆಂದು ತಿರುಚಲಾಗಿದೆ. ಈ ಸುಳ್ಳಿನ ಪ್ರಸರಣಕ್ಕೆ ಸಿನೆಮಾಗಿಂತ ಹೆಚ್ಚು ಪ್ರಭಾವೀ ಮಾಧ್ಯಮ ಇಲ್ಲವಲ್ಲ!

ಈ ನೌಟಂಕಿಗಳ ಅಸಲಿಯತ್ತೇನೆಂದು ನೋಡೋಣ. ಕುರವರನ್ನು ಎಸ್‌ಟಿ ಪಟ್ಟಿಗೆ 2016ರಲ್ಲಿ ಸೇರಿಸಲಾಯಿತು. ಅದನ್ನು ಮಾಡಿದ್ದು ಮೋದಿ ಸರಕಾರ. ಮನಮೋಹನ್ ಸಿಂಗ್ ಸರಕಾರ ಮಾಡದ ಸಾಧನೆ ಅದು. ನರಿಕುರುವರನ್ನು ಎಸ್‌ಟಿ ಪಟ್ಟಿಗೆ ಸೇರಿಸುವ ಪ್ರಥಮ ಪ್ರಯತ್ನ 80ರ ದಶಕದಲ್ಲಿ ಎಂಜಿಆರ್ ಸರಕಾರ ಮಾಡಿತಾದರೂ, 2013 ರಲ್ಲಿ ಯುಪಿಎ ಸರಕಾರ ಸಂಬಂಧಿತ ಮಸೂದೆಗೆ ಅಂಗೀಕಾರ ಪಡೆಯಲಾಗಲಿಲ್ಲ. ಮೋದಿ ಖುರ್ಚಿಗೆ ಒಂದಷ್ಟು ಮುಳ್ಳು ಗಳನ್ನು ನೆಡುವುದೇ ಕಾಂಗ್ರೆಸ್-ಕಮ್ಯುನಿಷ್ಟ್ ಅಜೆಂಡಾ ಆಗಿರುವುದರಿಂದ, ಸಿನಿಮಾದಲ್ಲಿ ಸಾಮಾಜಿಕ ಸಾಮರಸ್ಯವನ್ನು ಪ್ರೋತ್ಸಾಹಿಸುವ ಪ್ರಯತ್ನವೇಕೆ ಮಾಡಿಯಾರು? ಪ್ರಜಾಪ್ರಭುತ್ವಕ್ಕನುಗುಣವಾಗಿ ಮೋದಿಯನ್ನು ಅಲುಗಾಡಿಸಲಾಗದಿರುವಾಗ, ಬೀದಿಗೆ ಬಿದ್ದು ದೊಂಬಿ ಎಬ್ಬಿಸುವುದು ಹಳೆಯ ತಂತ್ರ.

ಸಮೂಹ ಮಾಧ್ಯಮಗಳನ್ನು ಸಾರಾಸಗಟಾಗಿ ಖರೀದಿಸುವುದು ಮತ್ತೊಂದು ತಂತ್ರ. ಸಿನೆಮಾ ಮೂಲಕ ಅಶಾಂತಿ ಮೂಡಿಸುವುದು ಹೆಚ್ಚು ಬಳಕೆಯಲ್ಲಿಲ್ಲದ ತಂತ್ರ. ಅದಕ್ಕೆ ಜೈ ಭೀಮ್ ಅನ್ನೋ ಹೆಸರಿನ ಬೂಸ್ಟರ್ ಡೋಸ್ ಹಾಕ್ಸೋದು ಮತ್ತೂ ಒಂದು ತಂತ್ರ. ಅದ್ಸರಿ, ಸಿನೆಮಾದಲ್ಲಿ ಅದೇನೋ ಹಾಡು ಗೀಚ್ಕೊಂಡು,
ಅದಕ್ಕೊಂದಿಷ್ಟು ಸ್ವಂತದ್ದೇ, ಕದ್ದಂತೆ ಕೇಳಿಸುವ ಸಂಗೀತವನ್ನೋ ಜೋಡಿಸಿ ಹೊಟ್ಟೆ ಹೊರೆದುಕೊಳ್ಳುತ್ತಿದ್ದ ಹಂಸಲೇಖಾರಿಗೇನಾಯಿತು? ಹಾಡ್ತಾ ಹಾಡ್ತಾ ರೋಗ ಅಂತೇನಾದರೂನಾ? ಒದರೋದೆ ಒದರಿ ಆಮೇಲೆ ಕ್ಷಮೆ ಕೇಳೋದು ಅಥವಾ ಕೇಳಿದಂತೆ ನಟಿಸೋದು.

ಅವರ ಹಾಡಿನಿಂದ ಪ್ರಭಾವಿತರಾದ ನಾಡಿನ ಜನತೆಗೂ Shut up ಅಂದ್ರೆ ಬಾಯ್ ಮುಚ್ಚೂ ಸಾರ್ ಅಂತ ಗಂಗರಾಜರಿಗೆ ಮುಖಕ್ಕೆ ಹೇಳೋ ಅಧಿಕಾರ ಇದೆ ಅಲ್ವ ಸರ್. ನಾನಂತೂ ಹಾಗೆ ಹೇಳಿದ್ರೆ, ಕ್ಷಮೆಯಂತೂ ಕೇಳೋದಿಲ್ಲ. I am certain.