Friday, 13th December 2024

ಜಲಿಯನ್ ವಾಲಾಬಾಗ್ ಕರಾಳ ನೆನಪು

ತನ್ನಿಮಿತ್ತ

ಬಿ.ಎಸ್.ಚೈತ್ರ

ಜಲಿಯನ್ ವಾಲಾಬಾಗ್ ಹತ್ಯಾಕಾಂಡ ನಮ್ಮ ಭಾರತ ಇತಿಹಾಸದಲ್ಲಿ ಕಪ್ಪುಚುಕ್ಕೆಯಾಗಿ ಉಳಿದುಕೊಂಡಿದೆ ಇಂದಿಗೂ ಅಮೃತಸರದಲ್ಲಿ ಜಲಿಯನ್ ವಾಲಾಬಾಗ್ ಗೋಡೆ ಮೇಲಿರೋ ಗುಂಡಿನ ದಾಳಿಯ ಗುರುತುಗಳು ಸಾವಿರಾರು ಜನರ ಆರ್ತ ನಾದದ ಕಥೆಯನ್ನು ಹೇಳುತ್ತವೆ.

ಇದೇ ಏಪ್ರಿಲ್ ೧೩ಕ್ಕೆ ಜಲಿಯನ್ ವಾಲ್‌ಬಾಗ್ ಹತ್ಯಾಕಾಂಡ ನಡೆದ ದಿನ. ಅಂದು ಪಂಜಾ ಬಿನ ಜನರಿಗೆ ಬೈಸಾಕಿ ಹಬ್ಬದ ಸಂಭ್ರಮ ಹಾಗೂ ಹೊಸ ವರ್ಷದ ಆರಂಭವೂ ಹೌದು (ಬೈಸಾಕಿ ಎಂದರೆ ಪಂಜಾಬಿ ಭಾಷೆಯಲ್ಲಿ ಸುಗ್ಗಿ ಎಂದರ್ಥ). ಸುಗ್ಗಿಯ ಹಿಗ್ಗಿನ ದಿನವೇ ಅದರ ಮಣ್ಣಿನಲ್ಲಿ ರಕ್ತದ ಓಕುಳಿ ಹರಿಯಿತು. ಇಂತಹ ಘೋರ ಹತ್ಯಾಕಾಂಡಕ್ಕೆ ಏಪ್ರಿಲ್ ೧೩, ೧೯೧೯ ಸಾಕ್ಷಿಯಾಗಿದೆ.

ಇಂದಿಗೂ ಅದರ ಕರಾಳ ನೆನಪು ಭಾರತೀಯರ ಮನದಲ್ಲಿ ದೇಶಪ್ರೇಮದ ರೋಮಾಂಚನ ಮೂಡಿಸಿ ಮನಸ್ಸಿನ ಅಂತರಾಳ ವನ್ನು ಒತ್ತಿ ನಿಟ್ಟಿಸುರು ಬಿಸಿಯನ್ನು ಹೊರಹೊಮ್ಮಿ ಸುತ್ತದೆ. ಪಂಜಾಬಿನಲ್ಲಿ ಅಂದಿನ ಲೆಫ್ಟಿನೆಂಟ್ ಗೌರ್ನರ್ ಮೈಕಲ್ ಡ್ವಾಯರ್ ದಬ್ಬಾಳಿಕೆಗೆ ಜನರು ರೋಸಿದ್ದರು ಮತ್ತು ರೌಲತ್ ಕಾಯ್ದೆಯ ನಿಷೇಧಕ್ಕೆ ಒತ್ತಾಯಿಸಿ ಏಪ್ರಿಲ್ ೬, ೧೯೧೯ ರಲ್ಲಿ ಪಂಜಾಬಿನ ಪ್ರಮುಖ ಪಟ್ಟಣಗಳಲ್ಲಿ ಪ್ರತಿಭಟನೆಗಳು ಜರುಗಿದವು. ಈ ಕಾಯ್ದೆ ಯನ್ನು ವಿರೋಧಿಸಿ ಚಳುವಳಿ ರೂಪಿಸಿದ್ದ ನಾಯಕರಾದ ಡಾ. ಸತ್ಯಪಾಲ್ ಮತ್ತು ಸೈಫುದ್ದೀನ್ ಕಿಚ್ಲು ಅವರನ್ನು ಏಪ್ರಿಲ್ ೧೦ ರಂದು ಬಂಧಿಸಿ ಅಮೃತಸರದಿಂದ ಗಡಿಪಾರು ಮಾಡಲಾಗಿದೆ ಎಂದು ಸ್ಥಳೀಯ ಆಡಳಿತ ಆದೇಶ ನೀಡಿತ್ತು.

ಈ ಆದೇಶದ ವಿರುದ್ಧ ಜನರು ಮತ್ತಷ್ಟು ಆಕ್ರೋಶ ಎದ್ದು ತೋಳ್ಬಲವೂ ಪ್ರದರ್ಶನವಾಯಿತು. ಪರಿಣಾಮ ೫ ಬ್ರಿಟಿಷ್ ಅಧಿಕಾರಿ ಗಳು ಸಾವನ್ನಪ್ಪಿದರು. ಆಗ ಜನರ ಹೋರಾಟವನ್ನು ಹತ್ತಿಕ್ಕಲು ನಡೆದ ಗೋಲಿಬಾರ್‌ನಲ್ಲಿ ಸುಮಾರು ೩೦ ಮಂದಿ ಸತ್ತರು. ಗವರ್ನರ್ ಮೈಕಲ್ ಡ್ವಾಯರ್ ಈ ಉದ್ವಿಗ್ನ ಪರಿಸ್ಥಿತಿಯನ್ನು ನಿಭಾಯಿಸಲು ಜಲಂಧರ್‌ನಲ್ಲಿ ತನ್ನ ಸೇನಾಧಿಕಾರಿ ಜನರಲ್ ಡಯರ್‌ನನ್ನು ಕರೆಸಿಕೊಂಡನು. ಜನರಲ್ ಡಯರ್ ಜನರಲ್ಲಿ ಭಯ ಭೀತಿ ಹುಟ್ಟಿಸಲು ಸಭೆ ಸಮಾರಂಭಗಳು ಸೇರದಂತೆ ನಿಷೇಧ ಏರಿದನು. ಏಪ್ರಿಲ್ ೧೩ ಬೈಸಾಕಿ ಹಬ್ಬದ ಸಂಭ್ರಮದಲ್ಲಿದ್ದ ಜನರಿಗೆ ಜಲಿಯನ್ ವಾಲ್ ಬಾಗ್‌ನಲ್ಲಿ ಸಾರ್ವಜನಿಕ ಸಭೆ ಕರೆಯಲಾಗಿತ್ತು.

ಸಭೆ ಕರೆದು ಅವರಿಗೆ ಜನರಲ್ ಡಯರ್ ಹಾಕಿದ್ದ ಸಮಾರಂಭದ ಹಾಗೂ ನಿಷೇಧ ನಿಯಮಗಳು ತಿಳಿದಿರಲಿಲ್ಲ. ಏಕೆಂದರೆ ಬ್ರಿಟಿಷ್ ಸರ್ಕಾರ ಸಾರ್ವಜನಿಕವಾಗಿ ದೊಡ್ಡ ಪ್ರಚಾರವಾಗಲಿ ಪ್ರಕಟಣೆಯಾಗಲಿ ನೀಡಿರಲಿಲ್ಲ. ಜಲಿಯನ್ ವಾಲ್‌ಬಾಗ್‌ನಲ್ಲಿ ಸುತ್ತಲು ಗೋಡೆಯಿಂದಾವೃತವಾಗಿತ್ತು. ಚಿಕ್ಕ ಏಕ ದ್ವಾರವಿದ್ದು ಒಳಗೆ ವಿಸ್ತಾರವಾದ ಒಳಾಂಗಣ ಪಂಜರದಂತಿತ್ತು. ಹತ್ತು ಸಾವಿರಕ್ಕೂ ಅಽಕ ಜನ ಅಲ್ಲಿ ಸೇರಿದ್ದರು. ಲಾಲಾ ಹಂಸರಾಜ್ ತಮ್ಮ ನಾಯಕರ ಬಂಧನವನ್ನು ಕುರಿತು ಭಾಷಣ ಮಾಡುವಾಗ
ಜನರಲ್ ಡಯರ್ ಅಲ್ಲಿಗೆ ಸಶಸ ಸೇನೆಯನ್ನು ನುಗ್ಗಿಸಿ ಯಾರು ತಪ್ಪಿಸಿಕೊಳ್ಳಬಾರದೆಂದು ಬಾಗಿಲು ಮುಚ್ಚಿ ಮಹಿಳೆಯರು ವೃದ್ಧರು ಎಂದು ನೋಡದೆ ಏಕಾಏಕಿ ಹತ್ತು ನಿಮಿಷಗಳ ಕಾಲ ೧೬೫೦ ಸುತ್ತು ಗುಂಡಿನ ಮಳೆಯನ್ನೇ ಸುರಿಸಿದರು.

ಸ್ವಾತಂತ್ರ್ಯದ ಕನಸು ಹೊತ್ತು ಸಂಭ್ರಮದಲ್ಲಿದ್ದ ಸಾವಿರಾರು ಮಂದಿ ಪ್ರಾಣ ಕಳೆದುಕೊಂಡು ಅಕ್ಷರಶಃ ಸ್ಮಶಾನದ ವಾತಾವರಣ ಆವರಿಸಿತ್ತು. ಬಾಳು ಬೇವು ಬೆಲ್ಲದ ಮಿಶ್ರಣ ಎಂಬ ಮಾತು ಸಾರ್ವಕಾಲಿಕ. ಮಧ್ಯಾಹ್ನ ಬೆಲ್ಲದ ಸವಿಯನುಂಡು ಸಂಭ್ರಮಪಟ್ಟು ಇಳಿಹೊತ್ತಿಗೆ ನಡೆದ ಮಾರಣಹೋಮ ಜೀವನದಲ್ಲಿ ಕಂಡರಿಯದಷ್ಟು ಬೇವಿನ ಕಹಿಯನ್ನು ಉಣಬಡಿಸಿತು.

ಬ್ರಿಟಿಷ್ ಸರ್ಕಾರ ಸತ್ತವರ ಸಂಖ್ಯೆ ಸುಮಾರು ೫೦೦ ಎಂದು ವರದಿ ನೀಡಿದೆ. ಆದರೆ ಈ ಘಟನೆಯಲ್ಲಿ ಸಾವಿರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಇತಿಹಾಸ ಹೇಳುತ್ತದೆ. ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಬೆನ್ನಲ್ಲೇ ಬ್ರಿಟಿಷರು ಜನರಲ್ಲಿ ಶಾಶ್ವತ ಭಯವನ್ನು ಮೂಡಿಸುವ ಉದ್ದೇಶದಿಂದ ತನ್ನ ದೌರ್ಜನ್ಯ ನೀತಿಯನ್ನು ಮತ್ತಷ್ಟು ವಿಸ್ತರಿಸಿತು. ಆದರೆ ದೇಶಾದ್ಯಂತ ಖಂಡನಾ ಸಭೆಗಳು ಹೋರಾಟಗಳು ಜರುಗಿದವು. ಸ್ವಾತಂತ್ರ್ಯ ಸೇನಾನಿಗಳ ವೀರ ಮರಣ ಯುವ ಉತ್ಸಾಹಿಗಳ ಕೆಣಕಿ ಹೋರಾಟ ದ ಚಿಲುಮೆ ಮೂಡಿಸಿ ಹೋರಾಟಕ್ಕೂ ಸೂರ್ತಿಯಾಯಿತು.

ಅದೇ ಸಂದರ್ಭದಲ್ಲಿ ರವೀಂದ್ರನಾಥ ಠಾಕೂರರವರು ಬ್ರಿಟಿಷ್ ಸರ್ಕಾರ ನೀಡಿದ್ದ ನೈಟ್ ಹುಡ್ ಬಿರುದನ್ನು ಹಿಂತಿರುಗಿಸಿದರು. ಮಹಾತ್ಮ ಗಾಂಧೀಜಿಯವರು ಕೂಡ ರೆಡ್ ಕ್ರಾಸ್ ಸೇವೆಗಾಗಿ ಪಡೆದಿದ್ದ ’ಕೈಸರ್ ಎ ಹಿಂದೂ’ ಪದವಿಯನ್ನು ಹಿಂತಿರುಗಿಸುವುದಾಗಿ ಬ್ರಿಟಿಷ್ ಸರ್ಕಾರಕ್ಕೆ ಪತ್ರ ಬರೆದರು ಮತ್ತು ಶಂಕರ್ ನಾಯಕ್ ಅವರು ವೈಸರಾಯಿ ಕಾರ್ಯಕಾರಿ ಸಮಿತಿಗೆ ರಾಜೀನಾಮೆ
ನೀಡಿದರು.

ಈ ಘಟನೆಯ ನಂತರ ಜನರಲ್ ಡಯರ್ ವಿರುದ್ಧ ಪಂಜಾಬ್ ಸೇರಿದಂತೆ ಇಡೀ ದೇಶದಲ್ಲಿ ಆಕ್ರೋಶದ ಜ್ವಾಲೆ ಕುದಿಯುತ್ತಿತ್ತು. ಆದರೆ ಬ್ರಿಟಿಷ್ ಸರ್ಕಾರ ಈ ಕೆಲಸಕ್ಕಾಗಿ ಶ್ಲಾಘನೆ ವ್ಯಕ್ತಪಡಿಸಿತು. ಯೂರೋಪಿಯನ್ನರ ಸಂಘ ಬ್ರಿಟಿಷ್ ಸಾಮ್ರಾಜ್ಯದ ರಕ್ಷಕ ಎಂದು ಖಡ್ಗ ನೀಡಿ ಪುರಸ್ಕರಿಸಿತು. ಲಂಡನ್ನಿನ ಮಾರ್ನಿಂಗ್ ಪೋಸ್ಟ್ ಪತ್ರಿಕೆ ಮೂವತ್ತು ಸಾವಿರ ಬಹುಮಾನ ಕೊಟ್ಟು ಗೌರವಿಸಿತು. ವ್ಯಾಲೆಂಟೈನ್ ಚಿರೋಲ್ ತನ್ನ ಇಂಡಿಯನ್ ಆಫ್ ರೆಸ್ಟ್ ಕೃತಿಯಲ್ಲಿ ಈ ಘಟನೆಯ ನಂತರ ಡಯರ್  ಪಾಯಿ ಗಳೊಂದಿಗೆ ಮೆರವಣಿಗೆ ಹೋದನು ಎಂದು ತಿಳಿಸಿದ್ದಾರೆ.

ಇದು ಅಂದಿನ ಮುಗ್ಧ ಜೀವಗಳ ಹತ್ಯೆಯ ವಿನೋದದ ಮನಸ್ಥಿತಿಯನ್ನು ಬಿಂಬಿಸುತ್ತದೆ. ಜನರಲ್ ಡಯಾರು ಪಾರ್ಶ್ವ ವಾಯುವಿಗೆ ತುತ್ತಾದ. ಈ ಹತ್ಯಾಕಾಂಡವನ್ನು ಕಣ್ಣಾರೆ ಕಂಡು ಮತ್ತು ತನ್ನವರನ್ನು ಕಳೆದುಕೊಂಡ ಗಾಯಗೊಂಡಿದ್ದ ಉದಮ್ ಸಿಂಗ್ ಈ ಘಟನೆಗೆ ಕಾರಣರಾದ ಅಧಿಕಾರಿ ಮೈಕಲ್ ೧೯೪೦ ಮಾರ್ಚ್ ೧೩ ಲಂಡನ್ನಿನ ಕ್ಯಾಕ್ ಸ್ಟನ್ ಹಾಲ್‌ನ ಕಾರ್ಯಕ್ರಮಕ್ಕೆ ಬಂದಿದ್ದ.

ಮೈಕಲ್‌ನ ಎದೆಗೆ ಗುಂಡಿಕ್ಕಿ ಕೊಂದು ಪ್ರತೀಕಾರ ತೀರಿಸಿದ. ಇದು ಸ್ವಾತಂತ್ರ್ಯ ಹೋರಾಟಗಾರರಿಗೆ ಸ್ಫೂರ್ತಿಯನ್ನು ತುಂಬಿತು. ೭ ವರ್ಷದ ನಂತರ ೧೯೪೭ ಆಗಸ್ಟ್ ೧೫ ಭಾರತ ಸ್ವತಂತ್ರವಾಯಿತು. ಜಲಿಯನ್ ವಾಲಾಬಾಗ್ ಹತ್ಯಾಕಾಂಡ ನಮ್ಮ ಭಾರತ ಇತಿಹಾಸದಲ್ಲಿ ಕಪ್ಪುಚುಕ್ಕೆಯಾಗಿ ಉಳಿದುಕೊಂಡಿದೆ ಇಂದಿಗೂ ಅಮೃತಸರದಲ್ಲಿ ಜಲಿಯನ್ ವಾಲಾಬಾಗ್ ಗೋಡೆ ಮೇಲಿರೋ
ಗುಂಡಿನ ದಾಳಿಯ ಗುರುತುಗಳು ಸಾವಿರಾರು ಜನರ ಆರ್ತನಾದದ ಕಥೆಯನ್ನು ಹೇಳುತ್ತವೆ. ಭಾರತ ಸ್ವಾತಂತ್ರ ಚಳುವಳಿಯ ಸಂದರ್ಭದಲ್ಲಿ ಇಂತಹ ಕರಳು ಹಿಂಡುವಂಥ ಘಟನೆ ನಡೆದು ಶತಮಾನವೇ ಕಳೆದಿದ್ದರೂ ಯುವ ಜನತೆಗೆ ಇದು ತಿಳಿಯದೇ ಇರುವುದು ದುಃಖಕರ ಸಂಗತಿ.

ಈ ಹತ್ಯಾಕಾಂಡವನ್ನು ನೆನೆದಾಗ ಕಣ್ಣಂಚಿನಲ್ಲಿ ನೀರು ಜಾರುತ್ತದೆ. ಈ ಏಪ್ರಿಲ್ ೧೩ಕ್ಕೆ ಈ ಹತ್ಯಾಕಾಂಡ ನಡೆದು ೧೦೪ ವರ್ಷ ಗಳಾದರೂ ಆ ಮಾರಣಹೋಮದಲ್ಲಿ ಆದ ಗಾಯಗಳು ಮಾತ್ರ ಇನ್ನೂ ಮಾಸಿಲ್ಲ ಅನ್ನೋದು ಸತ್ಯ. ಏನೇ ಆದರೂ ಬದಿಗೊತ್ತಿ ಇಪ್ಪತ್ತೊಂದನೆ ಶತಮಾನದಲ್ಲಿ ಇಂಗ್ಲೆಂಡ್ ಮತ್ತು ಭಾರತ ದೇಶಗಳು ಅಭಿವೃದ್ಧಿಗಾಗಿ ಪರಸ್ಪರ ಸಹಭಾಗಿತ್ವದಲ್ಲಿ ಹೆಜ್ಜೆ ಇಡುತ್ತ ಸಾಗುತ್ತಿರುವುದು ಸಂತಸದ ಸಂಗತಿ.