Tuesday, 17th September 2024

ಬಡವರ ಬದುಕಿನ ಆಶಾಕಿರಣ: ಪ್ರಧಾನಮಂತ್ರಿ ಜನೌಷಧಿ ಪರಿಯೋಜನೆ

ಗಂಟಾಘೋಷ

ಗುರುರಾಜ್ ಗಂಟಿಹೊಳೆ

ಭಾರತವು ಬಹಳ ಕಾಲದಿಂದಲೂ ಪಾರಂಪರಿಕ ವೈದ್ಯಪದ್ಧತಿ ಮತ್ತು ಆಯುರ್ವೇದ, ಗಿಡಮೂಲಿಕೆಯ ಸ್ವಯಂವೈದ್ಯ ಚಿಕಿತ್ಸಾ ವ್ಯವಸ್ಥೆಯನ್ನು ಅಳವಡಿಸಿಕೊಂಡಿತ್ತು. ಈ ಹಂತದಲ್ಲಿ ಪರಿಚಯವಾದ ಐರೋಪ್ಯ ಮತ್ತು ಪಶ್ಚಿಮ ವೈದ್ಯಪದ್ಧತಿಯ ಬದಲಾದ ಚಿಕಿತ್ಸಾ ವಿಧಾನದಿಂದ ಇಲ್ಲಿನ ಸಮಾಜವು ಬಹುಬೇಗ ಈ ವಿಧಾನಕ್ಕೆ ತೆರೆದುಕೊಂಡಿತು ಎನ್ನಬಹುದು. ಇಂಥ ಹಲವು ಹಂತಗಳನ್ನು ದಾಟಿ, ಔಷಧ ಬಳಕೆಯ ಆಧುನಿಕ ಯುಗವನ್ನು ಭಾರತವು ಕಂಡಿದೆ ಮತ್ತು ಕಾಣುತ್ತಿದೆ ಕೂಡ.

ಸ್ವಾತಂತ್ರ್ಯಾನಂತರದಲ್ಲಿ ಆಗಾಗ, ಕೆಲ ಸಾಂಕ್ರಾಮಿಕ ರೋಗ ಮತ್ತು ರೋಗಲಕ್ಷಣಗಳಿಗೆ ಸಾರ್ವಜನಿಕ ಲಸಿಕೆಗಳನ್ನು ಹಾಕುವುದೇ ಸರಕಾರದ ಬಹು ದೊಡ್ಡ ಆರೋಗ್ಯ ಸೇವೆ ಎಂದುಕೊಂಡು, ಅದನ್ನೇ ಮುಂದುವರೆಸಿಕೊಂಡು ಕೆಲವೆಡೆ ಜ್ವರದ ಮಾತ್ರೆ, ಕಬ್ಬಿಣಾಂಶದ ಮಾತ್ರೆಗಳನ್ನು ಹಂಚಿದ್ದು ಬಿಟ್ಟರೆ, ಇತರೆ ದೀರ್ಘಕಾಲಿಕ ಚಿಕಿತ್ಸೆಗಳಿಗೆ ಅಪಾರ ವೆಚ್ಚದ ಔಷಧಿಗಳನ್ನು ಖರೀದಿಸಿಯೇ ಬದುಕಬೇಕಾದ ಅನಿವಾರ್ಯತೆ ಜನಸಾಮಾನ್ಯರದಾಗಿತ್ತು.

ಭಾರತದಲ್ಲಿ, ಕ್ಯಾನ್ಸರ್ ಔಷಧಿ ಸೇರಿದಂತೆ ಇತರೆ ಪ್ರಮುಖ ಔಷಧಿಗಳ ವೆಚ್ಚವು ವಿಪರೀತವಾಗಿದೆ ಮತ್ತು ಪೀಡಿತರಿಗೆ ಗಮನಾರ್ಹ ಆರ್ಥಿಕ ಸಂಕಷ್ಟ ವನ್ನು ಉಂಟುಮಾಡುತ್ತಲಿದೆ. ಇದನ್ನು ಕಂಡು ಅಗ್ಗದ ಜೆನರಿಕ್ ಔಷಧಿಗಳನ್ನು ಒದಗಿಸಲೆಂದು ಭಾರತ ಸರಕಾರವು ದೇಶಾದ್ಯಂತ ಜನೌಷಧಿ ಮಳಿಗೆಗಳನ್ನು ಸ್ಥಾಪಿಸಲು ನಿರ್ಧರಿಸಿತು. ಮೋದಿಯವರು ೨೦೧೪ರಲ್ಲಿ ಅಧಿಕಾರಕ್ಕೆ ಬಂದ ನಂತರ, ಬಡಜನರ ಆರೋಗ್ಯ ಮತ್ತು ದಿನಬಳಕೆಯ ಔಷಧಿಗಳ ವಿಚಾರದಲ್ಲಿ ಮಹತ್ತರ ನಿರ್ಧಾರ ಕೈಗೊಂಡು ‘ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನೆ’ ಎಂಬ, ಅತ್ಯಂತ ಕಡಿಮೆ ಬೆಲೆಯಲ್ಲಿ ಔಷಧಿಗಳನ್ನು ವಿತರಿಸುವ ಸರಣಿ ಮಳಿಗೆಗಳ ಯೋಜನೆಯನ್ನು ಆರಂಭಿಸಿದರು.

ಜತೆಗೆ, ಕಡುಬಡವರು ಆರೋಗ್ಯ ಚಿಕಿತ್ಸೆಯ ವಿಷಯದಲ್ಲಿ ಕಂಗಾಲಾಗಬಾರದೆಂದು ‘ಆಯುಷ್ಮಾನ್ ಭಾರತ’ ಎಂಬ ವಿಶ್ವದ ಬಹುದೊಡ್ಡ ಆರೋಗ್ಯ ವಿಮೆ ಯೋಜನೆಯನ್ನು ಜಾರಿಗೆ ತಂದರು. ಇಂಥ ಕಳಕಳಿಯ ವಿಚಾರದಲ್ಲೂ ಸ್ಥಳೀಯ ಆಡಳಿತ ಸೇರಿದಂತೆ ಪ್ರಭಾವಿಗಳು ಇದನ್ನು ವಿಫಲಗೊಳಿಸಲು ಯತ್ನಿಸುತ್ತಿದ್ದಾರೆ. ಕೆಲ ದೂರದ ಪ್ರದೇಶಗಳಲ್ಲಿ ಸಮರ್ಪಕವಾಗಿ ಔಷಧಿಗಳು ದೊರೆಯದಿರುವ, ಯೋಜನೆ ಕೆಲವೆಡೆ ವಿಫಲವಾದ ಉದಾಹರಣೆ ಗಳಿದ್ದರೂ, ಈಶಾನ್ಯ ರಾಜ್ಯಗಳಲ್ಲಿ ಹೆಚ್ಚು ಯಶಸ್ವಿಯಾಗಿ ಮುನ್ನಡೆಯುತ್ತಿದೆ.

ಇಂದು ‘ಮೆಡಿಕಲ್ ಲಾಬಿ’ ಎನ್ನುವಂಥದ್ದು ಗುಟ್ಟಾಗೇನೂ ಉಳಿದಿಲ್ಲ. ವಿದೇಶಿ ಕಂಪನಿಗಳು ವೈದ್ಯರಿಗೆ,  ದೊಡ್ಡ ಆಸ್ಪತ್ರೆಗಳಿಗೆ ವಿದೇಶ ಪ್ರವಾಸ, ಉಚಿತ
-ಟ್‌ನಂಥ ಆಮಿಷಗಳನ್ನೊಡ್ಡಿ, ತಮ್ಮದೇ ಔಷಧಿಗಳನ್ನು ಜನರಿಗೆ ಬರೆಯುವಂತೆ, ಮಾರುಕಟ್ಟೆಯಲ್ಲಿ ಅದು ಹೆಚ್ಚಾಗಿ ಮಾರಾಟವಾಗುವಂತೆ ನೋಡಿ ಕೊಳ್ಳುವಲ್ಲಿ ಗೆಲುವು ಕಂಡಿವೆ. ಆಯಾ ರಾಜ್ಯ ಸರಕಾರಗಳ ಆರೋಗ್ಯ ಇಲಾಖೆಗಳಿಂದ ಟೆಂಡರ್ ಮೂಲಕ ಮಾರಾಟಹಕ್ಕು ಪಡೆದು ತಮ್ಮದೇ ಮಾರುಕಟ್ಟೆ ಸೃಷ್ಟಿಸಿಕೊಳ್ಳುವ ದೊಡ್ಡ ಪಡೆಯೇ ಇದೆ. ಇಂಥ ಸವಾಲುಗಳ ನಡುವೆ, ಬ್ರ್ಯಾಂಡೆಡ್ ಔಷಽಗಳಿಗೆ ಹೋಲಿಸಿದರೆ ಒಂದನ್ನು (ಮೆಥೋ ಟ್ರೆಕ್ಸೇಟ್) ಹೊರತುಪಡಿಸಿ, ಎಲ್ಲಾ ಜೆನರಿಕ್ ಔಷಽಗಳು ಅಗ್ಗವಾಗಿವೆ.

ಯಾವುದೇ ಕಾಯಿಲೆ ಅಥವಾ ಕ್ಯಾನ್ಸರ್ ಚಿಕಿತ್ಸೆಗಾಗಿ ಮಾಡುವ ವೆಚ್ಚವು ಅತ್ಯಽಕವಾಗಿದೆ ಎನ್ನುತ್ತವೆ ಹೆಚ್ಚಿನ ವರದಿಗಳು. ಖಾಸಗಿ ಆಸ್ಪತ್ರೆಗಳಲ್ಲಿ ಜನರು ಮಾಡುತ್ತಿರುವ ಚಿಕಿತ್ಸಾ ವೆಚ್ಚವು, ಸರಕಾರಿ ಆಸ್ಪತ್ರೆಗಳಲ್ಲಿ ಆಗುವುದಕ್ಕಿಂತ ಮೂರು ಪಟ್ಟು ಹೆಚ್ಚಾಗಿರುತ್ತದೆ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ಶೇ.೬೦ಕ್ಕಿಂತ ಹೆಚ್ಚು ಜನರು, ತಮ್ಮ ವಾರ್ಷಿಕ ತಲಾ ವೆಚ್ಚದ ಸುಮಾರು ಶೇ.೨೦ರಷ್ಟನ್ನು ಕುಟುಂಬದ ಕ್ಯಾನ್ಸರ್ ಪೀಡಿತರ ಆರೈಕೆಗಾಗಿ ಖರ್ಚುಮಾಡುತ್ತಾರೆ.

ಭಾರತದಲ್ಲಿ ಕ್ಯಾನ್ಸರ್ ಚಿಕಿತ್ಸೆಯ ಅಗತ್ಯವಿರುವ ಶೇ.೪೦ರಷ್ಟು ಜನರು ಬಂಧು-ಮಿತ್ರರು ಅಥವಾ ದಾನಿ ಸಂಸ್ಥೆಗಳ ಮೂಲಕ ಆರ್ಥಿಕ ನೆರವು ಪಡೆಯುತ್ತಾರೆ; ಆಸ್ಟ್ರೇಲಿಯಾ, ಚೀನಾ, ಇಸ್ರೇಲ್, ದಕ್ಷಿಣ ಆಫ್ರಿಕಾ, ಬ್ರಿಟನ್ ಮತ್ತು ಅಮೆರಿಕಕ್ಕೆ ಹೋಲಿಸಿದರೆ ಭಾರತದಲ್ಲಿ ಭಷಽಗೆ ಮಾಡುವ ವೆಚ್ಚವು ಹೆಚ್ಚು ಎನ್ನುತ್ತವೆ ವರದಿ ಗಳು. ಭಾರತದಲ್ಲಿ ಶೇ.೮೦ರಷ್ಟು ಔಷಧಿಗಳನ್ನು ಬ್ರ್ಯಾಂಡ್ ಅಡಿಯಲ್ಲಿ ಮಾರಲಾ ಗುತ್ತದೆ ಮತ್ತು ಅವು ಜೆನರಿಕ್ ಔಷಧಿ ಗಳಿಗಿಂತ ಹೆಚ್ಚು ದುಬಾರಿಯಾಗಿರುತ್ತವೆ. ಆದಾಗ್ಯೂ ಜೆನರಿಕ್ ಔಷಧಿಗಳು ಬ್ರ್ಯಾಂಡೆಡ್ ಔಷಧಿಗಳಷ್ಟೇ ಪರಿಣಾಮಕಾರಿಯಾಗಿದ್ದು, ಗುಣಮಟ್ಟದ ವಿಷಯದಲ್ಲಿ ಭಾರತೀಯ ಫಾರ್ಮಾ ಕಂಪನಿಗಳ ಮಾನದಂಡಗಳಿಗೆ ಅನುಗುಣವಾಗಿರುತ್ತವೆ ಎಂದು ಅಧ್ಯಯನಗಳು ತೋರಿಸಿವೆ.

ಇಂದು ಎZoಠ್ಟಿಟಛ್ಞಿಠಿಛ್ಟಿಟ್ಝಟಜಜಿoಠಿ ಬಳಿ ಚಿಕಿತ್ಸೆಗೆ ಬರುವ ರೋಗಿಗಳು ಕನಿಷ್ಠ ೧೦-೧೨ ವರ್ಷಗಳವರೆಗೆ ನಿಶ್ಚಿತ ಔಷಧಿಗಳನ್ನು ನಿಗದಿತ ಡೋಸ್‌ ನಲ್ಲಿ ತಪ್ಪದೆ ತೆಗೆದುಕೊಳ್ಳಬೇಕಿರುತ್ತದೆ. ರೋಗಿಯ ಆರ್ಥಿಕ ಕಷ್ಟ ನೋಡಿ ವೈದ್ಯರು ತಮ್ಮ ಫೀಸು ಬಿಟ್ಟರೂ, ರೋಗಿಗಳು ಔಷಧಿಗೆ ಲಕ್ಷಾಂತರ ಸುರಿಯ ಬೇಕಿತ್ತು. ಈ ಬವಣೆ ತಪ್ಪಿದ್ದು ಮೋದಿಯವರ ಜನೌಷಧಿ ಮಳಿಗೆ ಬಂದ ಮೇಲೆ. ಇದು ವಯೋವೃದ್ಧರಿಗೆ, ನಿವೃತ್ತ ಜೀವನ ನಡೆಸುವ ಒಂಟಿ ಸದಸ್ಯರಿಗೆ, ಸಮಾಜಕ್ಕೆ ಸಹಕಾರಿಯಾಗಿದೆ.

ಕೈಗೆಟುಕುವ ದರದಲ್ಲಿ ಮಾರಲ್ಪಡುವ ಭಾರತದ ಜೆನರಿಕ್ ಔಷಽಗಳ ಉದ್ಯಮವು ಜಾಗತಿಕವಾಗಿ ಗುರುತಿಸಲ್ಪಟ್ಟಿರುವುದರ ಜತೆಗೆ ಇದರ ಉತ್ಪನ್ನಗಳನ್ನು
ಅಂಗೀಕರಿಸಲಾಗಿದೆ ಕೂಡ. ಭಾರತೀಯ ಜೆನರಿಕ್ ಔಷಧಗಳ ಸುಮಾರು ಐದನೇ ಒಂದು ಭಾಗವು ವಿದೇಶಗಳಿಗೆ ರಫ್ತಾಗುತ್ತಿದೆ. ೨೦೨೪ರ ಜೂನ್ ೩೦ರ ವೇಳೆಗೆ ಲಭ್ಯವಿದ್ದ ಮಾಹಿತಿಯಂತೆ, ದೇಶಾದ್ಯಂತ ೧೨,೬೧೬ ಜನೌಷಧಿ ಕೇಂದ್ರಗಳು ಯಶಸ್ವಿಯಾಗಿ ಕಾರ್ಯನಿರ್ವ ಹಿಸುತ್ತಿವೆ. ಪ್ರೋಟೀನ್ ಪೌಡರ್, ಮಾಲ್ಟ್ ಆಧರಿತ ಆಹಾರ ಪೂರಕಗಳು ಮತ್ತು ಗ್ಲೂಕೋಮೀಟರ್ ಮುಂತಾದ ಹೊಸ ಉತ್ಪನ್ನಗಳು ಬಿಡುಗಡೆಯಾಗಿವೆ.

ಸರಕಾರಿ ಆಸ್ಪತ್ರೆಗಳು ಮತ್ತು ಸಂಬಂಧಿತ ಆವರಣ ಗಳಲ್ಲಿ ಬಾಡಿಗೆಮುಕ್ತ ಸ್ಥಳಗಳನ್ನು ಒದಗಿಸುವ ಮೂಲಕ ಜನೌಷಧಿ ಕೇಂದ್ರಗಳನ್ನು ತೆರೆಯಲು ರಾಜ್ಯ ಆರೋಗ್ಯ ಇಲಾಖೆಗೆ ಮತ್ತು ಸಂಬಂಧಿತ ಅಧಿಕಾರಿಗಳಿಗೆ ವಿನಂತಿಸಲಾಗಿದೆ. ‘ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನೆ’ಯಿಂದ ದೇಶದ ಸಾಮಾನ್ಯ ನಾಗರಿಕರು ಸರಿಸುಮಾರು ೨೮,೦೦೦ ಕೋಟಿ ರು.ಗಿಂತ ಹೆಚ್ಚು ಉಳಿತಾಯವನ್ನು ಸಾಧಿಸಿದ್ದಾರೆ. ಈ ಯೋಜನೆಯಲ್ಲಿ ಒಟ್ಟು ೨೭ ಔಷಧಿಗಳನ್ನು ಪರಿಗಣಿಸಲಾಗಿದ್ದು, ಅವುಗಳಲ್ಲಿ ೧೯ ಸೈಟೋಟಾಕ್ಸಿಕ್ ಔಷಧಿಗಳು, ೫ ಹಾರ್ಮೋನ್ ಸಂಬಂಧಿತ ಔಷಧಿಗಳು, ೨ ಪ್ರತಿರಕ್ಷಣಾ ಮಾಡ್ಯುಲೇಟರ್‌ಗಳು ಮತ್ತು ೧ ಬಿಸಾಸ್ಟೋನೇಟ್ ಸೇರಿವೆ.

ಮುಕ್ತ ಮಾರುಕಟ್ಟೆಯಲ್ಲಿ ಬ್ರ್ಯಾಂಡೆಡ್ ಔಷಧಿಗಳಿಗಿಂದ ಶೇ.೫೦-೯೦ರಷ್ಟು ಕಡಿಮೆ ದರದಲ್ಲಿ ಜನೌಷಽಗಳನ್ನು ತಲುಪಿಸುವುದು ಈ ಯೋಜನೆಯ ಮುಖ್ಯೋದ್ದೇಶ. ಈ ಯೋಜನೆಗೆ ಬೇಕಿರುವ ಔಷಧಿಗಳನ್ನು ವಿಶ್ವ ಆರೋಗ್ಯ ಸಂಸ್ಥೆಯಿಂದ ಮಾತ್ರ ಸಂಗ್ರಹಿಸಲಾಗುತ್ತದೆ. ಉತ್ಪನ್ನಗಳ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು, ಉತ್ತಮ ಉತ್ಪಾದನಾ ಅಭ್ಯಾಸಗಳು ಪ್ರಮಾಣೀಕೃತ ಪೂರೈಕೆದಾರರಿಂದ ಅವನ್ನು ಪಡೆಯಲಾಗುತ್ತದೆ. ‘ನ್ಯಾಷನಲ್ ಅಕ್ರೆಡಿಟೇ ಷನ್ ಬೋರ್ಡ್ ಫಾರ್ ಟೆಸ್ಟಿಂಗ್ ಆಂಡ್ ಕ್ಯಾಲಿ ಬ್ರೇಷನ್ ಲ್ಯಾಬೊರೇಟರೀಸ್’ನಿಂದ ಮಾನ್ಯತೆ ಪಡೆದ ಪ್ರಯೋಗಾಲಯಗಳಲ್ಲಿ ಪ್ರತಿ ಬ್ಯಾಚ್‌ನ ಔಷಧಿಯನ್ನು ಪರೀಕ್ಷಿಸಲಾಗುತ್ತದೆ.

ಮಹಿಳೆಯರ ಆರೋಗ್ಯ ಭದ್ರತೆಯನ್ನು ಖಾತ್ರಿಪಡಿಸಲು ‘ಜನೌಷಽ ಸುವಿಧಾ’ ಆಕ್ಸೋ- ಬಯೋಡಿಗ್ರೇಡಬಲ್ ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ೨೦೧೯ರ ಆಗಸ್ಟ್ ೨೭ರಂದು ಬಿಡುಗಡೆ ಮಾಡಲಾಗಿದ್ದು, ೨೦೨೪ರ ಜೂನ್ ವೇಳೆಗೆ ಲಭ್ಯವಿರುವ ಮಾಹಿತಿಯಂತೆ ಇವುಗಳ ಮಾರಾಟವು ೫೭ ಕೋಟಿಗಳಷ್ಟಿದೆ. ‘ಜನೌಷಧಿ ಸುಗಮ್’ ಎಂಬ ಮೊಬೈಲ್ ಅಪ್ಲಿಕೇಷನ್ ಅನ್ನು ೨೦೧೯ರ ಆಗಸ್ಟ್‌ನಲ್ಲಿ ಪ್ರಾರಂಭಿಸಲಾಗಿದೆ.

ಬಳಕೆದಾರ-ಸ್ನೇಹಿ ವೈಶಿಷ್ಟ್ಯಗಳನ್ನು ಇದು ಹೊಂದಿದ್ದು, ಗೂಗಲ್ ಮ್ಯಾಪ್ ಮೂಲಕ ಹತ್ತಿರದ ಜನೌಷಧಿ ಕೇಂದ್ರ/ಔಷಧಿಗಳನ್ನು ಹುಡುಕಲು,
ಜೆನರಿಕ್ ಮತ್ತು ಬ್ರ್ಯಾಂಡೆಡ್ ಔಷಧಿಗಳ ಬೆಲೆಗಳನ್ನು ಹೋಲಿಸಿ ಉಳಿತಾಯ ಮಾಡಲು ಇದನ್ನು ಬಳಸಬಹುದಾಗಿದೆ. ಆಯುಷ್ಮಾನ್ ಭಾರತ್
ಯೋಜನೆಯನ್ನು ೨೦೧೮ರ ಸೆಪ್ಟೆಂಬರ್ ೨೩ರಂದು ಪ್ರಾರಂಭಿಸಲಾಯಿತು. ಇದು ವಿಶ್ವದ ಅತಿದೊಡ್ಡ ಆರೋಗ್ಯ ಭರವಸೆ ಯೋಜನೆಯಾಗಿದ್ದು,
ಕೋಟ್ಯಂತರ ಬಡ ಮತ್ತು ದುರ್ಬಲ ಕುಟುಂಬಗಳಿಗೆ ನೆರವಾಗಿದೆ.

೨೦೨೦-೨೧ರ ಹಣಕಾಸು ವರ್ಷದಲ್ಲಿ ಈ ಯೋಜನೆಯ ಅಡಿಯ ಉತ್ಪನ್ನಗಳಲ್ಲಿ ಒಟ್ಟು ೬೬೫.೮೩ ಕೋಟಿ (ಎಂಆರ್‌ಪಿ ದರದಲ್ಲಿ) ರುಪಾಯಿಯಷ್ಟು
ಮಾರಾಟ ವಹಿವಾಟು ನಡೆಸಲಾಗಿದೆ. ಇದರಿಂದಾಗಿ ದೇಶದ ಸಾಮಾನ್ಯ ಜನರಿಗೆ ಸುಮಾರು ೪ ಸಾವಿರ ಕೋಟಿ ರು. ಹಣದ ಉಳಿತಾಯವಾಗಿದೆ. ಇಷ್ಟೆಲ್ಲ
ರೀತಿಯಲ್ಲಿ ಸಾರ್ವಜನಿಕರ ಹಿತಕಾಯುವ ಮತ್ತು ಜೀವಸಂಜೀವಿನಿಯಾಗಿ ಕೆಲಸ ಮಾಡುವ ಜನೌಷಧಿ ಮಳಿಗೆಗಳಿಗೆ ನಮ್ಮ ವ್ಯಾಪ್ತಿಯಲ್ಲಿ ಜಾಗವಿಲ್ಲ ವೆಂದು ರಾಜ್ಯ ವೈದ್ಯಕೀಯ ಸಚಿವರು ಹೊಸ ಫರ್ಮಾನು ಹೊರಡಿಸಿದ್ದಾರೆ.

ಬಹುಶಃ ನಿವ್ವಳ ಆದಾಯ ಬರದಿರುವ ಯೋಜನೆ ಇದಾಗಿರುವುದರಿಂದ ಸರಕಾರದ ಬೊಕ್ಕಸಕ್ಕೆ ನಷ್ಟವುಂಟಾಗುತ್ತಿರಬಹುದೇನೋ? ಜನಹಿತಕ್ಕಿಂತ ರಾಜಕೀಯ ಅಥವಾ ಆದಾಯವನ್ನೇ ಪ್ರಮುಖವಾಗಿರಿಸಿಕೊಂಡು ಈ ನಿರ್ಧಾರ ತಳೆದರೆ, ಇದೇ ಜಾಗದಲ್ಲಿ ‘ಪಾನ’ಮಳಿಗೆಗಳನ್ನು ತೆರೆದು ಯಥೇಚ್ಛ ಗಳಿಸಬಹುದು! ಜನಸೇವೆಗೆಂದು ಆಯ್ಕೆಯಾದ ಸರಕಾರಗಳು ಆದಷ್ಟು ಬೇಗನೆ ತಮ್ಮ ‘ಪಾನ’ಪ್ರಿಯ ಆಲೋಚನೆ ಬದಿಗೊತ್ತಿ, ‘ಆರೋಗ್ಯ’ಪ್ರಿಯ ಯೋಜನೆಗಳತ್ತ ಗಮನ ಹರಿಸಿದರೆ ಜನರು ಮತ್ತೊಮ್ಮೆ ಹಾರೈಸಿದರೂ ಹಾರೈಸಬಹುದು.

Leave a Reply

Your email address will not be published. Required fields are marked *