ಗಂಟಾಘೋಷ
ಗುರುರಾಜ್ ಗಂಟಿಹೊಳೆ
ಮುಂಬರುವ ಜನವರಿಯಲ್ಲಿ ಅಯೋಧ್ಯೆಯ ರಾಮ ಮಂದಿರ ಉದ್ಘಾಟನೆಗೊಳ್ಳಲಿದ್ದು, ಪ್ರಧಾನಿ ನರೇಂದ್ರ ಮೋದಿ ಈ ಕೈಂಕರ್ಯವನ್ನು ನೆರವೇರಿಸಲಿದ್ದಾರೆ. ದೇವಾಲಯದ ಗರ್ಭಗುಡಿಯಲ್ಲಿ ರಾಮಲಲ್ಲಾ ವಿಗ್ರಹದ ಪ್ರಾಣಪ್ರತಿಷ್ಠೆ ಕಾರ್ಯ ನೆರವೇರಲಿದೆ. ಈ ರಾಮ ಮಂದಿರ ನಿರ್ಮಾಣಕ್ಕೆ ದೇಶದೆಲ್ಲೆಡೆಯ ಪ್ರತಿಯೊಂದು ಮನೆಯವರೂ ದೇಣಿಗೆ ನೀಡಿದ್ದಾರೆ.
ರಾಮ ಮಂದಿರ ಮತ್ತು ಬಾಬ್ರಿ ಮಸೀದಿ ಹೋರಾಟ ನಿನ್ನೆ ಮೊನ್ನೆಯದಲ್ಲ; ಅದು ಶತ ಶತಮಾನಗಳ ಹೋರಾಟವಾಗಿತ್ತು. ರಾಮಮಂದಿರ ವಿಷಯದಲ್ಲಿ ಈ ಹಿಂದೆ ಬಿಜೆಪಿ ಹಿರಿಯ ನಾಯಕ ಎಲ್.ಕೆ. ಆಡ್ವಾಣಿ ಮುಂದಾಳತ್ವದಲ್ಲಿ ರಥಯಾತ್ರೆ ನಡೆದು, ನ್ಯಾಯಾಲಯದಲ್ಲಿ ಹತ್ತಾರು ವರ್ಷಗಳಿಂದ ವ್ಯಾಜ್ಯ ನಡೆಯುತ್ತಲೇ ಇತ್ತು.
ಮುಘಲ್ ದೊರೆ ಬಾಬರ್ ಅಯೋಧ್ಯೆಯಲ್ಲಿ ೧೫೨೮ರಲ್ಲಿ ಹಿಂದೂಗಳ ಪವಿತ್ರ ಮಂದಿರವನ್ನು ಒಡೆದು ಬಾಬ್ರಿ ಮಸೀದಿಯನ್ನು ಕಟ್ಟಿದ್ದ. ಅಯೋಧ್ಯೆ ವಿವಾದ ಹಾಗೂ ಬಿಜೆಪಿಯ ಹೋರಾಟ ಇವರೆಡೂ ದಶಕಗಳಷ್ಟು ಹಿಂದಿನದ್ದು. ೧೯೮೯ರ ಸಂದರ್ಭದಲ್ಲಿ ಬಿಜೆಪಿಯ ಪ್ರಣಾಳಿಕೆಯಲ್ಲಿ ರಾಮಮಂದಿರ ಕಟ್ಟುತ್ತೇವೆ ಎನ್ನುವ ಪ್ರಸ್ತಾಪ ಮಾಡಲಾಗಿತ್ತು. ಭಾರತದ ರಾಜಕೀಯ ಪಕ್ಷಗಳ ಪೈಕಿ ಕಾಂಗ್ರೆಸ್, ತಾನು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ ಪಕ್ಷವೆಂದು ಹೇಳಿಕೊಂಡು ತನ್ನ ಅಸ್ತಿತ್ವವನ್ನು ಬೇರೂರಿಸಲು ಪ್ರಾರಂಭಿಸಿತು. ೧೯೮೪ರಲ್ಲಿ ಇಂದಿರಾ ಗಾಂಧಿಯವರ ಹತ್ಯೆಯಾಯಿತು. ನಂತರದಲ್ಲಿ ಪ್ರಧಾನಿಯಾದವರು ರಾಜೀವ್
ಗಾಂಽ. ಅದೇ ಸಂದರ್ಭದಲ್ಲಿ, ಶಾ ಬಾನೊ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಕೊಟ್ಟ ತೀರ್ಪನ್ನು ರಾಜೀವ್ ಗಾಂಧಿ ರದ್ದುಗೊಳಿಸಿದರು. ಈ ವೇಳೆ ಸಾಕಷ್ಟು ಹಿಂದೂಗಳಲ್ಲಿ ಆಕ್ರೋಶದ ಜ್ವಾಲೆ ಹೊತ್ತಿ ಉರಿಯಲಾರಂಭಿಸಿತು.
ಇದೇ ಸಂದರ್ಭದಲ್ಲಿ ರಾಜೀವ್ ಗಾಂಧಿಯವರು ಹಿಂದೂಗಳನ್ನು ಓಲೈಸಲು ಅಯೋಧ್ಯೆ ಮಂದಿರದ ಬಾಗಿಲುಗಳನ್ನು ತೆರೆಸಿದ್ದರು. ಆಗ ಆಡ್ವಾಣಿ, ಆರೆಸ್ಸೆಸ್ ಸರಸಂಚಾಲಕರಾಗಿದ್ದ ಬಾಳಾಸಾಹೇಬ್ ದೇವರಸ್ ಆದೇಶದ ಅನ್ವಯ ಅಯೋಧ್ಯೆ ಹೋರಾಟಕ್ಕೆ ಮುನ್ನುಡಿ ಬರೆದರು. ೧೯೮೯ರಲ್ಲಿ ಸಂಘ ಪರಿವಾರ, ವಿಶ್ವ ಹಿಂದೂ ಪರಿಷತ್ ಜತೆಗೂಡಿ ಆಂದೋಲನಕ್ಕೆ ಹೊರಡಲು ತೀರ್ಮಾನ ಮಾಡಿದರು. ಮುಂಬೈನಲ್ಲಿ ರಾಮರಥವೊಂದನ್ನು ಮಾಡಿಸಿ ೧೦,೦೦೦ ಕಿ.ಮೀ.
ರಥಯಾತ್ರೆಯನ್ನು ಘೋಷಣೆ ಮಾಡಿದರು. ರಥಯಾತ್ರೆಯಲ್ಲಿ ಪಾಲ್ಗೊಂಡ ಮೋದಿ ೧೯೯೦ರಲ್ಲಿ ಸೋಮನಾಥದಿಂದ ರಥಯಾತ್ರೆ ಆರಂಭವಾದ ಸಂದರ್ಭದಲ್ಲಿ ನರೇಂದ್ರ ಮೋದಿಯವರು ಗುಜರಾತ್ ಬಿಜೆಪಿಯ ಸಂಘಟನಾ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.
ಜತೆಗೆ ಯಾತ್ರೆಗೆ ಹೊರಡುವ ಮುನ್ನವೇ ಅತಿಥಿಗೃಹದಲ್ಲಿ ಉಳಿದು ಹೋರಾಟಕ್ಕೆ ಬೇಕಾದ ತಯಾರಿಗಳನ್ನು ಮಾಡುತ್ತಿದ್ದರು. ಆಡ್ವಾಣಿಯವರು ಮೋದಿಯವರ ಸಂಘಟನಾ ಸಾಮರ್ಥ್ಯ ಮತ್ತು ಕೌಶಲವನ್ನು ಗುರುತಿಸಿದ್ದು ಆಗಲೇ. ಯಾತ್ರೆಯ ಸಂದರ್ಭದಲ್ಲಿ ಜುನಾಗಢ ಒಂದರಲ್ಲೇ ೫೦ ಸಾವಿರ ಜನ ಭಾಗವಹಿಸಿ
‘ಮಂದಿರಕ್ಕಾಗಿ ರಕ್ತ ಕೊಟ್ಟೇವು’ ಎಂಬ ಘೋಷಣೆಯನ್ನು ಮೊಳಗಿಸಿದರು. ಇತ್ತ ಕರ್ನಾಟಕದಲ್ಲಿ ಬಿ.ಎಸ್ .ಯಡಿಯೂರಪ್ಪ ಹಾಗೂ ಅನಂತ್ ಕುಮಾರ್ ಅವರು
ರಥಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ದಿನಪೂರ್ತಿ ರಥದಲ್ಲೇ ಕುಳಿತು ಯಾತ್ರೆಯನ್ನು ಮುನ್ನಡೆಸುತ್ತಿದ್ದ ಆಡ್ವಾಣಿಯವರಿಗೆ ವಾಜಪೇಯಿ ಕೂಡ ಸಾಥ್ ನೀಡಿದ್ದರು. ಯಾತ್ರೆಯ ವೇಳೆ ಶೌಚವ್ಯವಸ್ಥೆ ಲಭ್ಯವಾಗದಿರಬಹುದು ಎಂಬ ಕಾರಣಕ್ಕೆ ಆಡ್ವಾಣಿಯವರು ಕಡಿಮೆ ನೀರು ಕುಡಿದು ಯಾತ್ರೆಯನ್ನು ಮುಂದುವರಿಸುತ್ತಿದ್ದರಂತೆ. ಅಷ್ಟೇ ಅಲ್ಲದೆ, ಬೆಳಗ್ಗೆ ೨ ಸ್ಲೈಸ್ ಬ್ರೆಡ್, ಮಧ್ಯಾಹ್ನ ಒಂದು ಚಪಾತಿ ತಿಂದು ಜೀರ್ಣಿಸಿಕೊಳ್ಳುತ್ತಿದ್ದರು.
೬೨ರ ಆ ಹರೆಯದಲ್ಲೂ ಆಡ್ವಾಣಿಯವರು ಬೆಳ್ಳಂಬೆಳಗ್ಗೆ ಎದ್ದು ಯಾತ್ರೆಗೆ ಸಜ್ಜಾಗುತ್ತಿದ್ದ ಪರಿಯು ಯುವಕರಲ್ಲಿ ರಾಷ್ಟ್ರಭಕ್ತಿ ಮೂಡಿಸುತ್ತಿತ್ತು, ಪ್ರೇರಣೆ ನೀಡುತ್ತಿತ್ತು. ಹೀಗೆ ತಮ್ಮ ದಿಟ್ಟ ಹೋರಾಟಕ್ಕೆ ಬದ್ಧರಾಗಿ ಆಡ್ವಾಣಿಯವರು ಯಾತ್ರೆ ನಡೆಸುತ್ತಿದ್ದ ಸಂದರ್ಭದಲ್ಲಿ ದೆಹಲಿಯಲ್ಲಿ ಭಾಗಲಪುರ ಗಲಭೆ ಮುಗಿದಿತ್ತು. ಆ ಸಂದರ್ಭದಲ್ಲಿ ಬಿಹಾರದ ಅಂದಿನ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್, ರಥಯಾತ್ರೆ ಬಿಹಾರಕ್ಕೆ ಬರದಂತೆ ಆಜ್ಞೆ ನೀಡಿದ್ದರಂತೆ. ಇದಕ್ಕೆ ಪ್ರತ್ಯುತ್ತರವಾಗಿ ಆಡ್ವಾಣಿ,
‘ಹಾಲು ಕುಡಿಯುವ ಯಾವನು ನನ್ನನ್ನು ಬಂಧಿಸುತ್ತಾನೆ, ನಾನೂ ನೋಡುತ್ತೇನೆ’ ಎಂದಿದ್ದರಂತೆ.
ಅದಕ್ಕುತ್ತರವಾಗಿ ಲಾಲು, ‘ನಾನು ತಾಯಿ ಮತ್ತು ಎಮ್ಮೆ ಎರಡರ ಹಾಲು ಕುಡಿದವನು, ಬಿಹಾರಕ್ಕೆ ಬನ್ನಿ ತೋರಿಸುತ್ತೇನೆ’ ಎಂದು ಅತಿರೇಕವಾಗಿ ಮಾತನಾ ಡಿದ್ದರಂತೆ. ಈ ರೋಚಕ ಮಾತಿನ ಕಾಳಗದ ನಡುವೆಯೇ ರಥಯಾತ್ರೆಯು ಬಿಹಾರದ ಸಾಸಾರಾಂಗೆ ಪ್ರವೇಶಿಸಿದ ಸಂದರ್ಭದಲ್ಲಿ ಆಡ್ವಾಣಿಯವರನ್ನು
ಬಂಧಿಸುವಂತೆ ಜಿಲ್ಲಾಽಕಾರಿಗೆ ಲಾಲು ಆದೇಶ ನೀಡಿದ್ದರಂತೆ. ಆದರೆ ಈ ವಿಷಯ ತಿಳಿಯುತ್ತಿದ್ದಂತೆ ರಥಯಾತ್ರೆಯು ಮಾರ್ಗ ಬದಲಿಸಿ ಧನಬಾದ್‌ನತ್ತ ಸಾಗಲು ಪ್ರಾರಂಭಿಸಿತು.
ಧನಬಾದ್‌ನಲ್ಲೂ ಆಡ್ವಾಣಿಯವರನ್ನು ಬಂಧಿಸುವಂತೆ ಪೊಲೀಸರಿಗೆ ಲಾಲು ಆದೇಶಿಸಿದ್ದರು; ಆದರೆ ಆಡ್ವಾಣಿಯವರ ಹೋರಾಟದಿಂದ ಪ್ರೇರಣೆಗೊಂಡ ಅಧಿಕಾರಿ ಗಳು ಅವರನ್ನು ಬಂಧಿಸಲು ಮುಂದಾಗಲಿಲ್ಲವಂತೆ. ಆಡ್ವಾಣಿಯವರ ದೇಶಪ್ರೇಮ ಹಾಗೂ ರಾಮನ ಮೇಲಿನ ಭಕ್ತಿಯು ಅಷ್ಟರ ಮಟ್ಟಿಗೆ ಇಡೀ ದೇಶಕ್ಕೆ ಅರಿವಾಗಿತ್ತು. ಆದರೆ ಲಾಲು ಪ್ರಸಾದ್, ವಿಶೇಷ ಆದೇಶ ಹೊರಡಿಸಿ ಸಮಷ್ಟಿಪುರದಲ್ಲಿ ಆಡ್ವಾಣಿಯವರನ್ನು ಬಂಧಿಸುವಲ್ಲಿ ಕೊನೆಗೂ ಯಶಸ್ವಿಯಾದರು. ಇತ್ತ ಕಾಂಗ್ರೆಸ್, ರಾಮನ ಅಸ್ತಿತ್ವದ ಕುರಿತು ಪ್ರಶ್ನೆಯನ್ನೆತ್ತಿತ್ತು. ಆದರೆ ಈಗ ಕಾಂಗ್ರೆಸ್‌ನವರು ‘ನಾವು ಕೂಡ ರಾಮಭಕ್ತರು’ ಎನ್ನುತ್ತಿರುವುದು ನಿಜಕ್ಕೂ ಆಶ್ಚರ್ಯವೇ ಸರಿ.
ಮಂದಿರ ನಿರ್ಮಾಣಕ್ಕೆ ಅವಕಾಶವಿತ್ತ ಸುಪ್ರೀಂ ಇಡೀ ದೇಶ ಈ ಒಂದು ದಿನಕ್ಕಾಗಿ ಹಂಬಲಿಸುತ್ತಿತ್ತು. ಅಸಂಖ್ಯಾತ ಹಿಂದೂಗಳ ಹೋರಾಟ, ಬಲಿದಾನದ ಫಲವಾಗಿ ೨೦೧೯ರ ನವೆಂಬರ್ ೯ರಂದು ಸುಪ್ರೀಂ ಕೋರ್ಟ್ ರಾಮ ಮಂದಿರ ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್ ನೀಡಿತು. ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, ನ್ಯಾ. ಶರದ್ ಬೊಬ್ಡೆ, ನ್ಯಾ. ಚಂದ್ರಚೂಡ್, ನ್ಯಾ. ಭೂಷಣ್, ನ್ಯಾ. ಅಬ್ದುಲ್ ನಜೀರ್ ಅವರಿದ್ದ ನ್ಯಾಯಪೀಠವು ಈ ಐತಿಹಾಸಿಕ ತೀರ್ಪು ನೀಡುವ ಮೂಲಕ ಅಯೋಧ್ಯೆ ವಿವಾದಕ್ಕೆ ಪೂರ್ಣವಿರಾಮ ಹಾಕಿತು.
ತೀರ್ಪು ಪ್ರಕಟವಾದ ಮೂರು ತಿಂಗಳಲ್ಲೇ, ರಾಮ ಮಂದಿರ ಯೋಜನೆ ಸಿದ್ಧಪಡಿಸಿ ಅದರ ನಿರ್ಮಾಣಕ್ಕೆ ಮೋದಿ ನೇತೃತ್ವದ ಕೇಂದ್ರ ಸರಕಾರ ಮುಂದಾಯಿತು. ಪುರಾತತ್ವ ಇಲಾಖೆಯ ಮಾಹಿತಿಯ ನೆರವಿನಿಂದ, ಜತೆಗೆ ಒಂದಿಷ್ಟು ತನಿಖೆ ನಡೆಸಿದ ನಂತರ, ದೇವಾಲಯವಿದ್ದ ಜಾಗದಲ್ಲೇ ಬಾಬ್ರಿ ಮಸೀದಿ ನಿರ್ಮಿಸಲಾಗಿದ್ದ ಕಾರಣ, ಈ ವಿವಾದಿತ ಜಾಗವನ್ನು ಮಂದಿರ ನಿರ್ಮಾಣಕ್ಕೆ ಬಿಟ್ಟುಕೊಡಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿತು. ೨೦೨೦ರ ಸಂದರ್ಭದಲ್ಲಿ, ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಽಸಿದಂತೆ ಎಲ್.ಕೆ. ಆಡ್ವಾಣಿ, ಉಮಾ ಭಾರತಿ, ಮುರಳಿ ಮನೋಹರ ಜೋಷಿ, ಕಲ್ಯಾಣ್ ಸಿಂಗ್, ಸತೀಶ್ ಪ್ರಧಾನ್, ಗೋಪಾಲ್ ದಾಸ್, ಮಹಂತ್ ಸೇರಿ ೩೨ ಜನ ಆರೋಪಿಗಳನ್ನು ನಿರ್ದೋಷಿಗಳೆಂದು ಕೋರ್ಟ್ ತೀರ್ಪು ಹೊರಡಿಸಿತು.
೨೦೨೦ರ ಆಗಸ್ಟ್ ೫ರಂದು ರಾಮ ಮಂದಿರದ ಶಂಕುಸ್ಥಾಪನೆ ನಡೆಯಿತು. ಇದರ ನೇರಪ್ರಸಾರ ಇದ್ದುದರಿಂದ ವಿಶ್ವಾದ್ಯಂತದ ಕೋಟ್ಯಂತರ ಮಂದಿ ಇದನ್ನು
ವೀಕ್ಷಿಸಿ, ಆ ವೈಭವದ ಕ್ಷಣಗಳನ್ನು ಕಣ್ತುಂಬಿಕೊಂಡು ಧನ್ಯರಾದರು. ಅದರಲ್ಲೂ ಮುಖ್ಯವಾಗಿ, ಅಮೆರಿಕ ಮತ್ತು ಬ್ರಿಟನ್ ದೇಶಗಳ ಜನರು ಈ ನೇರಪ್ರಸಾರವನ್ನು ಅತಿಹೆಚ್ಚು ಸಂಖ್ಯೆಯಲ್ಲಿ ವೀಕ್ಷಿಸಿದರು. ಮುಂಬರುವ ಜನವರಿಯಲ್ಲಿ ಅಯೋಧ್ಯೆಯ ರಾಮ ಮಂದಿರ ಉದ್ಘಾಟನೆಗೊಳ್ಳಲಿದ್ದು, ಪ್ರಧಾನಿ ನರೇಂದ್ರ ಮೋದಿ ಈ ಕೈಂಕರ್ಯವನ್ನು ನೆರವೇರಿಸಲಿದ್ದಾರೆ.
ಜನವರಿಯಲ್ಲಿ ದೇವಾಲಯದ ಗರ್ಭಗುಡಿಯಲ್ಲಿ ರಾಮಲಲ್ಲಾ ವಿಗ್ರಹದ ಪ್ರಾಣಪ್ರತಿಷ್ಠೆ ಕಾರ್ಯ ನೆರವೇರಲಿದೆ. ರಾಮ ಮಂದಿರಕ್ಕೆ ಉಡುಪಿಯ ಶ್ರೀಕೃಷ್ಣ ಕ್ಷೇತ್ರದಿಂದ ಪವಿತ್ರ ಮಣ್ಣನ್ನು ಕಳುಹಿಸಿಕೊಡಲಾಗಿತ್ತು. ಅಷ್ಟೇ ಅಲ್ಲದೆ, ರಾಮ ಮಂದಿರದ ನಿರ್ಮಾಣಕ್ಕೆ ದೇಶದೆಲ್ಲೆಡೆಯ ಪ್ರತಿಯೊಂದು ಮನೆಯವರೂ ದೇಣಿಗೆ ನೀಡಿದ್ದಾರೆ. ಈ ಮಂದಿರದ ನಿರ್ಮಾಣಕ್ಕೆ ೫೦೦ ಕೋಟಿ ರುಪಾಯಿ ವೆಚ್ಚವಾಗಲಿದ್ದು, ಸರಕಾರದಿಂದ ನೆರವು ಪಡೆಯದೆ ಈ ತೀರ್ಥಕ್ಷೇತ್ರವನ್ನು ನಿರ್ಮಿಸಲು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನಿರ್ಧಾರವನ್ನು ಕೈಗೊಂಡಿತ್ತು. ನಂತರ ಇಡೀ ದೇಶದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅಭಿಯಾನವೇ ನಡೆಯಿತು; ಇದರಲ್ಲಿ ಪಾಲ್ಗೊಂಡ ಹಲವು ಉದ್ಯಮಿಗಳು, ಜನಸಾಮಾನ್ಯರು ದೇಣಿಗೆ ರೂಪದಲ್ಲಿ ಹಣವನ್ನು ನೀಡಲು ನಿರ್ಧರಿಸಿದರು.
ಶ್ರೀರಾಮ ನಿಧಿ ಸಮರ್ಪಣೆ ನಡೆಯಿತು, ಗಣ್ಯರು-ಸಂತರ ಮಾರ್ಗದರ್ಶನದಲ್ಲಿ ನಡೆದ ಈ ಅಭಿಯಾನ ಯಶಸ್ವಿಯಾಯಿತು. ದೇಶದ ಒಟ್ಟು ಐದು ಲಕ್ಷ ಗ್ರಾಮಗಳು ಹಾಗೂ ಹನ್ನೊಂದು ಕೋಟಿ ಮನೆಗಳನ್ನು ತಲುಪಲು ಈ ಅಭಿಯಾನ ಸಹಕಾರಿಯಾಯಿತು. ೨೦೨೩ರ ದೀಪಾವಳಿ ಆಚರಣೆಯ ಅಂಗವಾಗಿ,
ಶ್ರೀರಾಮ ಜನ್ಮಭೂಮಿ ಪಥವನ್ನು ದೀಪೋತ್ಸವಕ್ಕಾಗಿ ಸಜ್ಜುಗೊಳಿಸಲಾಗಿತ್ತು. ಜಾರ್ಖಂಡ್‌ನ ಪಾಕು ಜಿಲ್ಲೆಯ ಬುಡಕಟ್ಟು ಜನರು ಸೇರಿದಂತೆ ವಿವಿಧ ಸ್ಥಳಗಳ ಜನರು ಈ ದೀಪೋತ್ಸವದಲ್ಲಿ ಪಾಲ್ಗೊಂಡಿದ್ದರು. ೨೪ ಲಕ್ಷ ಮಣ್ಣಿನ ದೀಪಗಳಿಂದ ಅಲಂಕೃತವಾಗಿದ್ದ ಈ ದೀಪೋತ್ಸವ, ಗಿನ್ನಿಸ್ ವಿಶ್ವದಾಖಲೆಯನ್ನು ಸೃಷ್ಟಿಸಿತು. ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರದಿಂದ ಬಂದಿರುವ ಪವಿತ್ರ ಮಂತ್ರಾಕ್ಷತೆಯನ್ನು ಪೂಜಿಸಿ, ನಗರಗಳ ವಿವಿಧ ಕೇಂದ್ರಗಳಿಗೆ ವಿತರಿಸುವ
ಕಾರ್ಯಕ್ರಮವನ್ನು ಹಮ್ಮಿಕೊಂಡು, ಆ ಮಂತ್ರಾಕ್ಷತೆಯನ್ನು ಸಾರ್ವಜನಿಕರಿಗೆ ನೀಡಲಾಗುತ್ತಿದೆ.
ರಾಜ್ಯದ ಹಲವು ಭಾಗಗಳಲ್ಲಿ ಈ ಮಂತ್ರಾಕ್ಷತೆ ವಿತರಣಾ ಕಾರ್ಯಕ್ರಮ ಯಶಸ್ವಿಯಾಗಿದ್ದು, ಈ ಪ್ರಸಾದವನ್ನು ಸ್ವೀಕರಿಸುವ ಮೂಲಕ ರಾಮ ಭಕ್ತರು ಧನ್ಯರಾಗಿದ್ದಾರೆ. ಹಿಂದೂಗಳ ಹಲವು ವರ್ಷಗಳ ಹೋರಾಟ, ಪರಿಶ್ರಮ ಹಾಗೂ ಅನೇಕರ ಬಲಿದಾನದ ಫಲವಾಗಿ, ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿಂದು ಭವ್ಯ ರಾಮ ಮಂದಿರ ವನ್ನು ಭಕ್ತರು ದರ್ಶಿಸುವ ಕ್ಷಣಗಳು ಸನ್ನಿಹಿತವಾಗಿವೆ. ಭಾರತೀಯರ ಬಹುದಿನಗಳ ಕನಸು ನನಸಾಗಿದ್ದು ಶ್ರೀರಾಮ ನನ್ನು ಕಣ್ತುಂಬಿ ಕೊಳ್ಳಲು ಭಕ್ತರು ಕಾತುರರಾಗಿದ್ದಾರೆ.