ಹಂಪಿ ಎಕ್ಸ್’ಪ್ರೆಸ್
ದೇವಿ ಮಹೇಶ್ವರ ಹಂಪಿನಾಯ್ಡು
‘ಜಯಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ…’ ರಾಷ್ಟ್ರಕವಿ ಕುವೆಂಪು ಅವರನ್ನು ಇಂದು ಒಂದು ಜಾತಿಗೆ ಸೀಮಿತಗೊಳಿಸಿ ಅವರನ್ನು ಒಬ್ಬ ಎಡ ಪಂಥೀಯರನ್ನಾಗಿ ಬಿಂಬಿಸುವುದಕ್ಕೆ ಕೆಲ ತಿಳಿಗೇಡಿಗಳು ಪ್ರಯತ್ನಿಸುತ್ತಿರಬಹುದು.
ಆದರೆ ನಮ್ಮ ದೇಶದ ಪರಂಪರೆ, ಸಂಸ್ಕೃತಿಯ ಕುರಿತು ಕುವೆಂಪು ಅವರ ಹೃದಯ ನಿಷ್ಕಲ್ಮಶವಾಗಿತ್ತು. ಆದ್ದರಿಂದಲೇ ನಮ್ಮ ದೇಶಕ್ಕೆ ಭಾರತಾಂಬೆಯನ್ನು ಮಾತೆಯಾಗಿ ಆಕೆಯ ಮಗಳಾಗಿ ಕರ್ನಾಟಕ ಮಾತೆಯೆಂದು ವರ್ಣಸಿ ಆಕೆಗೆ ವೇದಗಳ ಘೋಷಣೆಯೇ ಜೋಗುಳವೆಂದು ಸಾರಿದ್ದು. ಇಂಥ ಮಣ್ಣಿನಲ್ಲಿ ‘ರಾಘವ ಮಧುಸೂಧ ನರವತರಿಸಿದ..’ ಅಂದರೆ ಅಯೋಧ್ಯ ಯಲ್ಲಿ ಶ್ರೀರಾಮ ಮಥುರಾದಲ್ಲಿ ಶ್ರೀಕೃಷ್ಣ ಜನಿಸಿದಂಥ ಪುಣ್ಯಭೂಮಿ ಎಂದು ಕೊಂಡಾಡಿದ್ದಾರೆ.
ಅಷ್ಟೇ ಅಲ್ಲದೆ ಶಂಕರಚಾರ್ಯರು, ರಾಮಾನುಜಚಾರ್ಯರು, ವಿದ್ಯಾರಣ್ಯ, ಬಸವಣ್ಣ, ಮಧ್ವರ, ಜಿನ ಜೈನರ ಉದ್ಯಾನ, ರಸಋಷಿಗಳು ಪರಮಹಂಸ ವಿವೇಕನಂದರ ಹೆಸರನ್ನು (ಇಂದಿನ ಬುದ್ಧಿರಹಿತ ಜೀವಿಗಳ ವಿಚಾರವ್ಯಾದಿಗಳ ಕೋಮುವಾದ)
ಸ್ಮರಿಸುವ ಮೂಲಕ ನಮ್ಮ ದೇಶದ ನೈಜ ಮತ್ತು ಸಹಜವಾದ ಪರಂಪರೆಯನ್ನು ಹೆಮ್ಮೆಯಿಂದ ಘೋಷಿಸಿದ್ದಾರೆ. ಇಷ್ಟಾದರೂ ಇಂದಿನ ನಕಲಿ ಹೋರಾಟಗಾರರು ಜಾತಿವಾದಿಗಳು ನಾಡಗೀತೆಯಲ್ಲಿರುವ ಕೊನೆಯ ಎರಡನೇ ಚರಣದಲ್ಲಿರುವ ‘ಸರ್ವ ಜನಾಂಗದ ಶಾಂತಿಯ ತೋಟ, ಹಿಂದೂ ಕೈಸ್ತ ಮುಸಲ್ಮಾನ’ ಎಂಬ ಸಾಲುಗಳನ್ನಷ್ಟೇ ಹೆಕ್ಕಿ ತೆಗೆದು ಅನರ್ಥವಾದ ಕಳಪೆ ಜಾತ್ಯತೀತವಾದವನ್ನು ಬಿತ್ತಿ ತಮಗೆ ಬೇಕಾದ ಹಾಗೆ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡು ಸಾರಸತ್ವ ಲೋಕವನ್ನೂ ಕುಲಗೆಡಿಸುತ್ತಿದ್ದಾರೆ.
ಅಸಲಿಗೆ ಕುವೆಂಪು ಅವರಿಗೆ ಸರ್ವಶ್ರೇಷ್ಠ ಜ್ಞಾನಪೀಠ ಪ್ರಶಸ್ತಿ ಪ್ರಾಪ್ತವಾಗಿಸಿದ್ದೇ ಅವರ ರಚಿತ ಶ್ರೀರಾಮಾಯಣದರ್ಶನಂ ಕೃತಿ. ಅಂಥ ಪುಣ್ಯಾತ್ಮರ ವೈಚಾರಿಕತೆಯನ್ನು ದಾರಿತಪ್ಪಿಸುವ ಕೆಲಸ ಇಂದಿನ ಎಡಬಿಡಂಗಿಗಳಿಂದ ಆಗುತ್ತಿದೆ. ೨೦೧೧ರ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಡಾ. ಸಿ.ಪಿ. ಕೃಷ್ಣಕುಮಾರ್ ಅವರು ಹಿಂದೆ ಕುವೆಂಪು ಅವರ ಸಂದರ್ಶನ ಮಾಡಿದ್ದರು (ಕುವೆಂಪು ಸಮಗ್ರ ಗದ್ಯ-೨). ಆ ಸಂದರ್ಶನದ ಭಾಗವಾಗಿ ಬಾಂಗ್ಲಾ ವಿಮೋಚನೆ ಕುರಿತು ಕುವೆಂಪು ಅವರು ‘ನಾವು ಹಿಂದೂಗಳು ಧರ್ಮಕ್ಕಾಗಿ ಪ್ರಾಣ ಕೊಡಬೇಕು ಎನ್ನುತ್ತೇವೆ, ಮುಸ್ಲಿಮರು ಧರ್ಮಕ್ಕಾಗಿ ಪ್ರಾಣ ತೆಗೆಯಬೇಕು ಎನ್ನುತ್ತಾರೆ, ಇಷ್ಟೇ
ಅಂತರ!’ ಎಂದು ಸಹಜವಾದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹಾಗಂತ ಯಾರೂ ಅವರನ್ನು ಕೋಮುವಾದಿ ಎಂದು ಕರೆದಿಲ್ಲ. ಏಕೆಂದರೆ ದೇಶ ಸಂಸ್ಕೃತಿ ಪರಂಪರೆ ನಾಡು ನುಡಿಯೆಂದರೆ ಏನೆಂಬ ಅನಂತ ಅನುಭೂತಿ ಅವರಿಗಿತ್ತು. ಆದ್ದರಿಂದಲೇ ಅವರು ನಿರಭಿಮಾನಿ ಕನ್ನಡಿಗರಿಗೆ ಚಾಟಿ ಬೀಸಿದಂತೆ ’ದೇಶ ನನ್ನದು, ನಾಡು ನನ್ನದು ಎನ್ನದ ಮಾನವನೆದೆ ಸುಡುಗಾಡು’ ಎಂದು ತಿಳಿಸಿದ್ದಾರೆ. ಅಂದರೆ ಮೊದಲಿಗೆ ರಾಷ್ಟ್ರೀಯತೆ ನಾಡು, ಸಂಸ್ಕೃತಿ ಎಂಬ ಅಭಿಮಾನ ಸ್ವಾಭಿಮಾನ ಇಲ್ಲದಿದ್ದರೆ ಆತ ಬದುಕಿದ್ದೂ ಸತ್ತಂತೆ’ ಎಂಬುದನ್ನು ಸ್ಪಷ್ಟವಾಗಿ ಹೇಳಿದ್ದಾರೆ.
ಇಂಥ ಧನ್ಯತಾಭಾವ ಸಾರ್ಥಕಭಾವ ಅವರಲ್ಲಿದ್ದಿದ್ದರಿಂದಲೇ ಇಂದು ಅವರು ದೇಶದ ಕನ್ನಡದ ರಾಷ್ಟ್ರಕವಿಯಾಗಿ ಕಂಗೊಳಿಸು ತ್ತಿದ್ದಾರೆ. ಅದೇ ಕನ್ನಡಿಗರ ಹೆಮ್ಮೆ. ಭಾರತಾಂಬೆಯೇ ಕರ್ನಾಟಕ ಮಾತೆಯ ಜನನಿ ಎಂದ ಮೇಲೆ ಮುಗಿದು ಹೋಯಿತು. ದೇಶ, ದೇವರು, ಮಾತೃತ್ವ ಎಂಬುದೆಲ್ಲಾ ಸ್ಮುಲನಗೊಂಡಂತೆ. ಬಹುಶಃ ಕುವೆಂಪು ಅವರಿಗೆ ಇಂಥ ಅನುಭೂತಿಗೆ ಕನ್ನಡ ಕುಲ ಪುರೋಹಿತ ಆಲೂರು ವೆಂಕಟರಾಯರ ವೈಚಾರಿಕತೆಯ ಪ್ರಭಾವವಿದ್ದಿರಬೇಕು. ಏಕೆಂದರೆ ಭುವನೇಶ್ವರಿದೇವಿಗೆ ಕನ್ನಡತಾಯಿ ಕನ್ನಡಾಂಬೆ ಕರ್ನಾಟಕಮಾತೆ ಕನ್ನಡ ಭುವನೇಶ್ವರಿ ಕನ್ನಡ ಕುಲಧರಸಿ ಎಂಬ ಅಲಂಕರಣಗಳು ವಿಜೃಂಭಿಸಿದ್ದು ಅವರ ಕಾಲದಲ್ಲೇ. ಆಲೂರು ವೆಂಕಟರಾಯರ ಸಮಕಾಲೀನರಾದ ಕನ್ನಡದ ಕಣ್ವ ಬಿ.ಎಂ.ಶ್ರೀಕಂಠಯ್ಯನವರೇ ಮೊಟ್ಟಮೊದಲ ಬಾರಿಗೆ ಕನ್ನಡ ತಾಯಿಯನ್ನು ಭುವನೇಶ್ವರಿದೇವಿಗೆ ಹೋಲಿಸಿ ಬರೆದದ್ದು ಎಂಬುದಾಗಿ ತಿಳಿದುಬರುತ್ತದೆ.
ಇದನ್ನು ನಿಘಂಟು ತಜ್ಞ ಪ್ರೊ.ಜಿ. ವೆಂಕಟಸುಬ್ಬಯ್ಯನವರು ಹೇಳುತ್ತಾ, ‘ಕನ್ನಡ ತಾಯಿಯ ನೋಟ’ ಎಂಬ ಪದ್ಯದಲ್ಲಿ ಹಂಪಿಯ ಕಲ್ಲು ಬಂಡೆ ಮೇಲೆ ಮುದುಕಿಯೊಬ್ಬಳು ದುಃಖ ಪಡುತ್ತಾ ಕುಳಿತಿರುವಾಗ, ಮುದುಕಿಯಿದ್ದಲ್ಲಿಗೆ ತೆರಳುವ ಕವಿ ಆಕೆಗೆ
ಬಂದ ಕಷ್ಟವನ್ನು ವಿಚಾರಿಸುತ್ತಾರೆ. ಅದಕ್ಕೆ ಮುದುಕಿ ತನ್ನ ಪೂರ್ವ ವೈಭವವನ್ನು ವಿವರಿಸಿ ನನ್ನನ್ನು ಈಗ ಎಲ್ಲರೂ ಮರೆತಿ ದ್ದಾರೆ ಎಂದು ಹಲುಬುತ್ತಾಳೆ. ಆಗ ಮುದುಕಿಯನ್ನು ಹೊಸ ಉಡುಪುಗಳಿಂದ ಸಿಂಗರಿಸಿ ತೇರಿನಲ್ಲಿ ಕೂರಿಸುತ್ತಾರೆ.
ಆಗ ಪದ್ಯದಲ್ಲಿ ‘ತಾಯಿ ಭುವನೇಶ್ವರಿದೇವಿ ತೇರನ್ನೇರಿದಳು, ಬನ್ನಿ, ಎಲ್ಲರೂ ಬನ್ನಿ, ಒಕ್ಕೊರಲಿನಲಿ ಬನ್ನಿ’ ಎಂದು ಬಿಎಂಶ್ರೀ
ಉಲ್ಲೇಖಿಸುತ್ತಾರೆ ಎಂದಿದ್ದಾರೆ.’ ಇದೇ ಮೊದಲ ಉಲ್ಲೇಖ ಎಂಬುದಾಗಿ ದಾಖಲಿಸುತ್ತಾರೆ. ಒಟ್ಟಿನಲ್ಲಿ ಇಂಥ ಮಹನೀಯರು ವರ್ಣಿಸಿರುವ ಕನ್ನಡತಾಯಿ ಅಥವಾ ಕನ್ನಡಾಂಬೆ ಭುವನೇಶ್ವರಿದೇವಿಯ ಮೂಲ ಹುಡುಕುತ್ತಾ ಹೋದರೆ ಅದಕ್ಕೆ ತಾರ್ಕಿಕವಾದ ತೀರ್ಮಾನ ನೀಡಿದವರು ಮಾತ್ರ ಹಿರಿಯ ಸಂಶೋಧಕರಾದ ನಡೆದಾಡುವ ಶಾಸನವೆಂದೇ ಗೌರವಿಸಲ್ಪಡುವ ನಾಡೋಜ ಡಾ.ಎಂ.ಚಿದಾನಂದಮೂರ್ತಿಗಳು. ಕನ್ನಡತಾಯಿ ಭುವನೇಶ್ವರಿ ದೇವಿಯ ಮೂಲ ನೆಲೆಯೆಲ್ಲಿ?, ಈ ಬಗ್ಗೆ ನಿಖರವಾದ ಆಧಾರ ಯಾವುವು? ಎಂದು ಹುಡುಕುತ್ತಾ ಹೋದರೆ ಇದಕ್ಕೆ ಉತ್ತರವಾಗಿ ಇಂದಿನ ರಾಜಕಾರಣಿಗಳು ಆಳುವ ಮಂತ್ರಿ ಮಹೋದಯರು ಉನ್ನತ ವ್ಯಾಸಂಗ ಮಾಡಿರುವ ಕೆ.ಎ.ಎಸ್, ಐಎಎಸ್ ಅಧಿಕಾರಿಗಳು, ಪತ್ರಾಗಾರ ಇಲಾಖೆ, ಸಾಹಿತ್ಯ ಪರಿಷತ್ತು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳಲ್ಲೂ ದಾಖಲೆಗಳು ಲಭ್ಯವಿಲ್ಲ.
ಕನ್ನಡಾಂಬೆ ಭುವನೇಶ್ವರಿದೇವಿಯ ಮೂಲಸ್ಥಾನ ಹುಡುಕುತ್ತಾ ಹೋದರೆ ನಮ್ಮ ನಾಡಿನಲ್ಲಿ ಐದು ಕ್ಷೇತ್ರಗಳಲ್ಲಿ ಭುವನೇಶ್ವರಿ ದೇವಿಯ ಗರ್ಭಗುಡಿಗಳು ಕಾಣಸಿಗುತ್ತದೆ. ಮೊದಲಿಗೆ ಕನ್ನಡದ ಮೊದಲ ದೊರೆ, ಕನ್ನಡಕ್ಕೆ ಗ್ರಂಥಸ್ಥಾನ ಬರೆದ ಮಯೂರ ಶರ್ಮನ ಕದಂಬ ಬನವಾಸಿಯ ಭುವನಗಿರಿ. ಜೈಭುವನೇಶ್ವರಿ ಎಂದೇ ಯುದ್ಧಕ್ಕೆ ಅಣಿಯಾಗುತ್ತಿದ್ದ ಇವರ ವ್ಯಾಪ್ತಿಯ ಸಿದ್ದಾಪುರ
ದಿಂದ ೧೦ ಕಿ.ಮೀ ದೂರದ ಕುಮಟಾ ಮಾರ್ಗದಲ್ಲಿ ೩೦೦ ಅಡಿ ೧೨೫ ಮೆಟ್ಟಿಲುಗಳ ಎತ್ತರದ ಗಿರಿಯಮೇಲಿನ ಗುಡಿಯೇ ಭುವನೇಶ್ವರಿದೇವಿಯ ಮೂಲ ಎಂದು ತರ್ಕಿಸಲಾಗಿತ್ತು. ಆದರೆ ಅದು ೧೬೯೩ರಲ್ಲಿ ಇಮ್ಮುಡಿಗಂಟೆ ಕೇಂದ್ರ ನಿರ್ಮಿಸಿದ್ದಾಗಿ ‘ಐಸೂರು ಶಾಸನ’ ಹೇಳುತ್ತದೆ. ಉತ್ತರ ಕನ್ನಡದ ಗೆಜೆಟಿಯರ್ ೧೮೯೬ ಎಂಬ ಉಲ್ಲೇಖವಿದೆ.
ಆದ್ದರಿಂದ ಇದು ಭುವನೇಶ್ವರಿದೇವಿಯ ಮೂಲಸ್ಥಾನ ಎಂಬುದಕ್ಕೆ ಸ್ಪಷ್ಟತೆ ಸಿಗಲಿಲ್ಲ. ಎರಡನೆಯದಾಗಿ, ತೀರ್ಥಹಳ್ಳಿಯಿಂದ ಇಪ್ಪತ್ತು ಕಿ.ಮೀ ದೂರದ ಕವಲೇದುರ್ಗದಲ್ಲಿರುವ ದೇವಾಲಯ ಈಗ ಮಾರಿಕಾಂಬಾದೇವಿಯಾಗಿದೆ. ಇದು ಭುವನಗಿರಿಯ ಶಾಖೆ ಎಂಬ ವಾದವಿತ್ತು. ವಾಲ್ಮೀಕಿ – ಅಗಸ್ತ್ಯರ ಒಡನಾಟವಿದ್ದು, ಪಾಂಡವರು ಅಜ್ಞಾತವಾಸದ ಸಂದರ್ಭದಲ್ಲಿ ಕೆಲಕಾಲ ತಂಗಿದ್ದ ರೆಂಬುದು ಪ್ರತೀತಿ. ವೆಂಕಟಪ್ಪನಾಯಕನ ಅವಽಯಲ್ಲಿ ಈ ಭುವನಗಿರಿ (ಕಾವಲುದುರ್ಗೆ) ನಿರ್ಮಾಣವಾಗಿದೆ ಎನ್ನಲಾ ಗುತ್ತದೆ.
ಇನ್ನು ಮೂರನೆಯದಾಗಿ ಶಿರಸಿಯ ದಾನಂದಿಯಲ್ಲಿರುವ ದೇವಾಲಯವನ್ನು ನೂರು ವರ್ಷಗಳ ಹಿಂದೆಯಷ್ಟೇ ಭುವನಗಿರಿಯ ಭುವನೇಶ್ವರಿದೇವಿಯ ಉತ್ಸವಮೂರ್ತಿ ತೆಗೆದುಕೊಂಡು ಹೋಗಿ ಸ್ಥಾಪಿಸಲಾಗಿದೆ ಎಂದು ಸ್ಥಳೀಯರ ನಂಬಿಕೆ. ಇನ್ನು ನಾಲ್ಕನೆ ಯದಾಗಿ ಮೈಸೂರಿನ ಅರಮನೆಯ ಪ್ರಾಂಗಣದ ಅಷ್ಟದೇಗುಲಗಳ ಪೈಕಿ ಭುವನೇಶ್ವರಿ ದೇವಾಲಯವೂ ಒಂದಾಗಿದ್ದು, ಅದನ್ನು ೧೯೫೧ರಲ್ಲಿ ಜಯಚಾಮರಾಜೇಂದ್ರ ಒಡೆಯರ್ ಅವರು ಸ್ಥಾಪಿಸಿದ್ದು, ಅಗ್ರಪೂಜೆ ಮಾತ್ರ ಚಾಮುಂಡೇಶ್ವರಿ ದೇವಿಗೆ ಮಾತ್ರ.
ಆದರೆ ಭುವನೇಶ್ವರಿಯ ಮೂಲ ನೆಲೆಯ ದಿಕ್ಕು ಮಾತ್ರ ಜಯನಗರ ಸಾಮ್ರಾಜ್ಯದ ರಾಜಧಾನಿ ಹಂಪಿಯತ್ತ ಸೆಳೆಯುತ್ತದೆ.
೧೩೩೬ರಲ್ಲಿ ಉತ್ತರಭಾರತದ ಇಸ್ಲಾಂ ಆಕ್ರಮಣವನ್ನು ಹಿಮ್ಮೆಟ್ಟಿಸಿ ಹಿಂದೂ ಧರ್ಮವನ್ನು ಸಂರಕ್ಷಿಸು ಏಕಮಾತ್ರ ಉದ್ದೇಶ ದಿಂದ ಸ್ಥಾಪನೆಯಾದ ಹಂಪಿಯಲ್ಲಿ ವಿರೂಪಾಕ್ಷೇಶ್ವರ ದೇವರ ಎಡಭಾಗದಲ್ಲಿ ಪಂಪಾದೇವಿಯ ಸಮೀಪದಲ್ಲಿ ದಕ್ಷಿಣಾಭಿ ಮುಖದಲ್ಲಿರುವ ಭುವನೇಶ್ವರಿ ದೇವಾಲಯವಿದೆ.
ಅಂದು ವಿದ್ಯಾರಣ್ಯರು ಸಂನ್ಯಾಸಿಗಳಾಗಿದ್ದಾಗ ಇಲ್ಲಿ ನೆಲೆಸಿ ತಪಸ್ಸು ಮಾಡಿ ಹರಿಹರರಾಯ ಬುಕ್ಕರಾಯ ಸೋದರರಿಗೆ
ಪ್ರಚೋದನೆ ನೀಡಿ ಸಾಮ್ರಾಜ್ಯದ ಉದಯಕ್ಕೆ ಕಾರಣೀಭೂತ ರಾಗುತ್ತಾರೆ. ಈ ಪ್ರಸಂಗಕ್ಕೆ ಅಗ್ನಿಸಾಕ್ಷಿಯಂತೆ ನಿಂತಿದ್ದೇ ಈ
ಭುವನೇಶ್ವರಿದೇವಿ. ವಿಜಯನಗರ ಕಾಲಕ್ಕೂ ಪುರಾತನವಾದ ಈ ಗುಡಿಗೆ ೧೬ ಕಂಬಗಳಿವೆ. ದೇವಿಯ ಪಾದದ ಕೆಳಗೆ ಶ್ರೀಚಕ್ರ, ಬಾಗಿಲಿನ ಪ್ರಭಾವಳಿಯಲ್ಲಿ ರಾಮಯಣದ ಯುದ್ಧಚಿತ್ರಗಳ ಸೂಕ್ಷ್ಮ ಕೆತ್ತನೆಗಳಿವೆ.
ಒಂದು ಕಡೆ ಸ್ಕಂದ ಪುರಾಣದ ಬ್ರಹ್ಮಚಾರಿಣಿಯಾಗಿ ಶಿವನನ್ನು ವರಿಸಿದ ಪಂಪಾ ದೇವಿಯ ಪೂರ್ವಾಭಿಮುಖದ ಗರ್ಭಗುಡಿ ಯಿದ್ದರೆ, ಪಕ್ಕದಲ್ಲೇ ಪ್ರತ್ಯೇಕವಾಗಿ ಭುವನೇಶ್ವರಿದೇವಿ ಇರುವುದು ಈಕೆ ಸಾಮ್ರಾಜ್ಯದ ಶಕ್ತಿದೇವತೆ ಸುವರ್ಣವೃಷ್ಟಿಯಾಗಿಸಿದ ನಾಡಿನ ಧರ್ಮ ಸಂಸ್ಕೃತಿಯನ್ನು ಪ್ರತಿನಿಽಸುವ ಮತ್ತು ಪ್ರತೀಕ ದೇವಿಯ ರೂಪವಾಗಿದ್ದಾಳೆ. ಏಕೆಂದರೆ ೧೩೩೬ ಆಚೆಗೆ ಇಡೀ
ಉತ್ತರ ಭಾರತವನ್ನು ಆಕ್ರಮಿಸಿ ದಕ್ಷಿಣದತ್ತ ದಾವಿಸುತ್ತಿದ್ದ ಇಸ್ಲಾಂ ಗಂಡಾಂತರದಿಂದ ಸನಾತನ ಧರ್ಮವನ್ನು ಉಳಿಸಲು
ಪಣತೊಟ್ಟು ನಿಂತ ವಿದ್ಯಾರಣ್ಯ- ಹರಿಹರಬುಕ್ಕರಿಗೆ ಭುವನೇಶ್ವರಿದೇವಿಯೇ ಮೊದಲ ಪ್ರಚೋದನೆ. ಆಕೆಯೇ ನಾಡದೇವತೆ ಎಂದೇ ಹೇಳಲಾಗಿದೆ.
ಹರಿಹರಬುಕ್ಕರು ವಿಜಯನಗರ ಸಾಮ್ರಾಜ್ಯ ಸ್ಥಾಪಿಸಿ ಸನಾತನ ಸ್ಥಾಪನೆ ಮತ್ತು ಹಿಂದೂ ರಾಜ್ಯ ಪುನರುತ್ಥಾನಕ್ಕಾಗಿ ನಿಂತ ಸಮಯದಲ್ಲಿ ಭುವನೇಶ್ವರಿ ಚಿನ್ನದ ಮಳೆ ಹರಿಸಿ ಹಣದ ಕೊರತೆಯನ್ನು ನೀಗಿಸಿದಳೆಂಬ ಸಾಂಕೇತಿಕ ಪ್ರತೀತಿ ವಿಜಯನಗರ ಸ್ಥಾಪನೆಯ ಆರಂಭದಲ್ಲಿದೆ. ಇದನ್ನೇ ಎತ್ತಿಹಿಡಿದ ಕನ್ನಡಕುಲಪುರೋಹಿತ ಆಲೂರು ವೆಂಕಟರಾಯರು ಹಲವು ವರ್ಷಗಳ ಕಾಲ ಹಂಪಿಯಲ್ಲಿ ಅರ್ಚಕರಾಗಿ ನೆಲೆಸಿ ಪಂಪಾವಿರೂಪಾಕ್ಷ ಭುವನೇಶ್ವರಿ ಕೋದಂಡರಾಮ ಹನುಮದೇವರನ್ನು ಆರಾಧಿಸಿ ಕನ್ನಡಿ ಗರಿಗೆ ಕರ್ನಾಟಕದ ಕನ್ನಡದ ಇತಿಹಾಸ ಗತವೈಭವ ವನ್ನು ಕೃತಿಯಾಗಿ ನೀಡಿ ಕನ್ನಡದ ಕೆಲಸಗಳನ್ನು ಕೈಗೊಂಡಿದ್ದರು.
ಅವರೂ ಸಹ ಕನ್ನಡದೊಂದಿಗೆ ಪ್ರಾಚೀನ ತಳಕು ಹಾಕಿಕೊಂಡವಳು ಹಂಪಿ ಭುವನೇಶ್ವರಿಯೇ’ ಎಂದು ಸಾರಿದ್ದಾರೆ. ಹೀಗಾಗಿ ’ಕನ್ನಡದ ಭುವನೇಶ್ವರಿ ಯಾರೆಂದು ಅನುಮಾನವೇ ಬೇಡ, ಹಂಪಿಯ ಬೌದ್ಧಿಕ ಚಕ್ರವರ್ತಿ ವಿರೂಪಾಕ್ಷನ ಸನ್ನಿಧಿಯಲ್ಲಿರುವ ಭುವೇಶ್ವರಿದೇವಿಯೇ ನಮ್ಮ ಕನ್ನಡ ಭುವನೇಶ್ವರಿದೇಯೆಂದು ಡಾ.ಚಿದಾನಂದ ಮೂರ್ತಿಗಳು ಸ್ಪಷ್ಟಪಡಿಸಿದ್ದಾರೆ. ಜತೆಗೆ ಸರಕಾರದ ಗೆಜೆಟಿಯರ್ ಸಂಪಾದಕರಾಗಿದ್ದ ಹಿರಿಯ ಇತಿಹಾಸ ತಜ್ಞ ಡಾ. ಸೂರ್ಯನಾಥ ಕಾಮತ್ ಅವರೂ ಸಹ, ‘ಬೇರೆ
ಹಲವೆಡೆ ಭುವನೇಶ್ವರಿದೇವಿ ಇರಬಹುದು, ಆದರೆ ಕನ್ನಡದೊಂದಿಗೆ ಸಂಬಂಧ ಹೊಂದಿಸಿಕೊಂಡವಳು ಹಂಪಿಯ ಭುವನೇ ಶ್ವರಿಯೇ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದಿಷ್ಟೂ ನಮ್ಮ ನಾಡಿನ ಸಂಸ್ಕೃತಿ, ಭಾಷೆ, ಸಂಸ್ಕಾರ, ಪಾವಿತ್ರ್ಯತೆಗಳೊಂದಿಗೆ ಬೆರೆತಿರುವ ಭಾರತಾಂಬೆಯ ಹಿರಿಯ ಮಗಳಾದ ಕನ್ನಡಾಂಬೆ ಅಥವಾ ಕರ್ನಾಟಕಮಾತೆಯ ಸ್ವರೂಪಿಣಿಯಾದ ಭುವನೇಶ್ವರಿದೇವಿಯ ಇತಿಹಾಸ. ಆದರೆ ಇಂದಿನ ದುರಾದೃಷ್ಟ ವೆಂದರೆ ಒಂದೊಂದು ಸಂಘಟನೆಗಳು ಒಂದೊಂದು ಜಾತಿಯ, ರಾಜಕೀಯ ಪಕ್ಷದ ಆಂತರಿಕ ಹಿತಾಸಕ್ತಿಗೆ ಒಳಗಾಗುತ್ತಿರುವುದು ನಿಜ ಅರ್ಥದಲ್ಲಿ ಪಕ್ಷಪಾತಿಗಳಾಗಿರುವುದು ತಿಳಿಯದ ವಿಚಾರವೇನಲ್ಲ. ಜಾತಿಯಿಂದ ಪಕ್ಷಗಳನ್ನು ಗುರುತಿಸುವುದು ಜಾತಿಯ ಕನ್ನಡಕ ಧರಿಸಿ ಕನ್ನಡಿಗರನ್ನು ವಿಕೇಂದ್ರಿಕರಣಗೊಳಿಸುವುದು ಗೋಚರಿಸುತ್ತಿದೆ.
ಮತ್ತೊಂದು ಸೂಕ್ಷ್ಮ ವಿಚಾರವೆಂದರೆ ಕನ್ನಡ ಮತ್ತು ಸಂಸ್ಕೃತಿ ಎಂದು ಕರೆಯುವುದೇ ಒಂದು ಅಸಂಬದ್ಧವಾದದ್ದು. ಇದರಿಂದಾ ಗಿ ಕೆಲ ಅವಿವೇಕಿ ಸಂಘಟನೆಗಳು ಕನ್ನಡ ಬರಿಯ ಭಾಷೆ ಸಂಸ್ಕೃತಿ ಎಂಬುದು ಕೋಮುವಾದ ಎಂಬ ರೋಗಕ್ಕೆ ಒಳಗಾಗಿದೆ. ಕೆಲ ಎಡವಾದಿಗಳ ಅಡ್ಡಪರಿಣಾಮಗಳಿಂದಾಗಿ ಗೋವನ್ನು ಕೊಲ್ಲುವ ಕಟುಕ ಅಪ್ಪಟ ಕನ್ನಡಾಭಿಮಾನಿಯಾಗಿ ತೋರಿಸಿಕೊಂಡರೆ ಸಾಕು ಸಂಸ್ಕೃತಿ ಎಂಬ ಗೋವು ಸತ್ತರೂ ಪರವಾಗಿಲ್ಲ ಎಂಬ ಅವಿವೇಕಗಳು ಹೆಚ್ಚುತ್ತಿದೆ. ಕುತಂತ್ರ ಆಮಿಷಕ್ಕೆ ಬಲಿಯಾಗಿ ಮತಾಂತರಗೊಂಡು ‘ಜೈಭುವನೇಶ್ವರಿ ದೇವಿ’ ಎಂದು ಘೋಷಣೆ ಕೂಗುವ ಅವಕಾಶವನ್ನು ಕಳೆದುಕೊಂಡವರನ್ನು ಕ್ರಿಶ್ಚಿಯನ್ ಕನ್ನಡಿಗರೆಂದು ಹೆಸರಿಸಿ ಕಿತ್ತುಹೋದ ಜಾತ್ಯತೀತತೆಯನ್ನು ಸಾರಲಾಗುತ್ತಿದೆ.
ನಾಳೆ ನವೆಂಬರ್ ಒಂದು ಕರ್ನಾಟಕ ರಾಜ್ಯೋತ್ಸವದ ದಿನ. ಅಂದು ಸಾಂಕೇತಿಕವಾಗಿ ಕನ್ನಡಿಗರು ಭುವನೇಶ್ವರಿದೇವಿಯನ್ನು ಕನ್ನಡ ಸಂಸ್ಕೃತಿಯ ಪ್ರತೀಕವಾಗಿ ಪೂಜಿಸಿ ಆರಾಧಿಸುವ ದಿನವಾಗಿದೆ. ಆದರೆ ಏಳುಕೋಟಿ ಕನ್ನಡಿಗರ ಕೋಟಾದಲ್ಲಿ ಅದೆಷ್ಟು ಚರ್ಚುಗಳು ಕಾನ್ವೆಂಟ್ಗಳು ಮಸೀದಿಗಳು ಉರ್ದು ಶಾಲೆಗಳು ಸಂಸ್ಥೆಗಳು ಭುವನೇಶ್ವರಿದೇವಿಯ ಪಟವನ್ನಿಟ್ಟು ಅದಕ್ಕೆ ಅರಿಶಿಣ ಕುಂಕುಮವಿಟ್ಟು ಹೂವಿನಿಂದ ಅಲಂಕರಿಸಿ ದೀಪಬೆಳಗಿಸಿ ಜೈಭುವನೇಶ್ವರಿದೇವಿ ಎಂದು ಉದ್ಗರಿಸುತ್ತಾರೆ.
ಸ್ವಾತಂತ್ರ್ಯೋತ್ಸವದ ದಿನದಂದು ಅದೆಷ್ಟು ಮಂದಿ ಭಾರತೀಯರು ಭಾರತಮಾತೆಯ ಭಾವಚಿತ್ರವನ್ನು ಪೂಜಿಸುತ್ತಾರೆ?. ಅಂದು ಮಾತ್ರ ಬಹುತೇಕ ಶಾಲೆಗಳು ಸಂಸ್ಥೆಗಳು ಗಾಂಽಜಿ ಮತ್ತು ನೆಹರು ಹೊರತುಪಡಿಸಿದರೆ ಅನ್ಯರ ಪರಿಜ್ಞಾನವೇ ಇರುವುದಿಲ್ಲ. ಇನ್ನು ರಾಜಕೀಯ ನಾಯಕರುಗಳೇ ದುರ್ಗಾಷ್ಠಾಮಿ ವಿಜಯದಶಮಿಯಂದು ದುರ್ಗೆಯನ್ನು ಪೂಜಿಸುವ ನೆಪದಲ್ಲಿ ಪಕ್ಷದ ಮಾರ್ಜಾಲ
ಮುಖಗಳನ್ನು ಪೂಜಿಸಿ ಗುಲಾಮಗಿರಿಯ ಅಸ್ಮಿತೆಯನ್ನು ಪ್ರದರ್ಶಿಸುತ್ತಾರೆ. ಇದೆಲ್ಲ ಬೆಕ್ಕು ಕಣ್ಣುಮುಚ್ಚಿಕೊಂಡು ಹಾಲುಕುಡಿ ದಂತೆ ಎಂದು ಭಾವಿಸುತ್ತಾರೆ. ಆದರೆ ಇದು ವೋಟಿಗಾಗಿ ಪದವಿಗಾಗಿ ಎಂಥ ಹೇಸಿಗೆ, ಹೊಲಸನ್ನೂ ತಿಂದು ತೇಗುವ ಅವಕಾಶ ವಾದಿಗಳು ನೈತಿಕವಾಗಿ ಬೆತ್ತಲಾದ ದೃಶ್ಯ ಮತ್ತು ಸಂದೇಶ ಗೋಡೆಗೆ ಮೊಳೆ ಹೊಡೆದಷ್ಟೇ ಸ್ಪಷ್ಟವಾಗಿ ಗೋಚರವಾಗುತ್ತದೆ.
ಇಂಥವರಿಗೆ ಕೆಲ ಜಾತಿಗಳು ಅವಿವೇಕಿಗಳು ಗುಲಾಮರುಗಳು ಮತ ನೀಡಬಹುದು. ಆದರೆ ದೇಶದ ಪರಂಪರೆ, ಘನತೆ, ಪಾವಿತ್ರ್ಯತೆ ಯನ್ನು ಹೇಗೆ ಕಾಪಾಡಿಕೊಳ್ಳಬೇಕೆಂಬ ಸ್ಪಷ್ಟತೆ ಮತ್ತು ಗುರಿ ನಿಜವಾದ ದೇಶಭಕ್ತರಿಗೆ ಸಿದ್ಧಿಸಿದೆ. ದಶಕಗಳ ಕಾಲ ಕಾಂಗ್ರೆಸ್ನಲ್ಲಿದ್ದ
ರಾಷ್ಟ್ರಪತಿಗಳಾಗಿದ್ದ ಪ್ರಣವ್ ಮುಖರ್ಜಿ, ಎಸ್.ಎಂ. ಕೃಷ್ಣ ರಂಥ ಮುತ್ಸದ್ದಿಗಳು ತಮ್ಮ ರಾಜಕೀಯ ನಿವೃತ್ತಿ ಕಾಲದಲ್ಲಿ
ಆರ್ಎಸ್ಎಸ್ ಕಚೇರಿಗೆ ತೆರಳಿ ಸಂಘವನ್ನು ಕೊಂಡಾಡಲು ಇದ್ದ ಏಕೈಕ ದಾರ್ಶನಿಕತೆಯೆಂದರೆ ರಾಷ್ಟ್ರೀಯತೆಯ ನಿಜವಾದ ಅನುಭೂತಿ. ಹೀಗಾಗಿ ವಂದೇ ಮಾತರಂ ಭಾರತ ಮಾತೆ ಕರ್ನಾಟಕಮಾತೆ ಭುವನೇಶ್ವರಿದೇವಿ ಎಂಬುದು ನೈಜವಾದ ದೇಶಾಭಿ ಮಾನ ನಾಡಾಭಿಮಾನ ಭಾಷಾಭಿಮಾನ ಮತ್ತು ಇವುಗಳ ಮೂಲ ಸ್ಥಾನಮಾನವೇ ಹೊರತು ಇವುಗಳನ್ನು ನಿರ್ಲಕ್ಷಿಸಿ ಕನ್ನಡ ಮತ್ತು ಸಂಸ್ಕೃತಿಯನ್ನು ಪ್ರತ್ಯೇಕವಾಗಿಸಿ ಕನ್ನಡದ ಕುಲದೇವಿಗೆ ಜಾತ್ಯತೀತವೆಂಬ ಮುಸುಕನ್ನು ತೊಡಿಸದೆ, ಕನ್ನಡ ಸಂಸ್ಕೃತಿ ಯನ್ನು ಕಟ್ಟಿದ ಆಲೂರು ವೆಂಕಟ ರಾಯರು, ಕುವೆಂಪು, ಬಿಎಂಶ್ರೀ, ಚಿಮೂ ಅವರಂಥವರ ಆಶೋತ್ತರಗಳನ್ನು ಕನ್ನಡಿಗರು ಜಾತಿಭೇದ ಗಳಿಲ್ಲದೆ ಸಾರ್ಥಕಗೊಳಿಸಲಿ.
ಭಾರತಮಾತೆ ಹಾಗೂ ಭುವನೇಶ್ವರಿ ಈ ಮಣ್ಣಿನ ಹುಟ್ಟುಸ್ಮರಣೀಯ ದೇವತೆಗಳು. ಭಾವನಾತ್ಮಕ ಶಕ್ತಿ ಸೂರ್ತಿಯ ಪ್ರತೀಕ. ಇವರಿಗೆ ಜೈಕಾರಗಳು ಹೃದಯದಿಂದ ಬರುವ ಘಂಟಾನಾದಗಳು.