Friday, 13th December 2024

ಇದು ಜೀನ್ಸ್ ಹರಿಕಥೆ

ವಿದೇಶ ವಾಸಿ

ಕಿರಣ್ ಉಪಾಧ್ಯಾಯ

dhyapaa@gmail.com

ಇನ್ನೊಂದು ವಿಷಯ ಗೊತ್ತಾ? ಈ ಬಟ್ಟೆಯಲ್ಲಿ ಬಳಸುವ ನೀಲಿ ಬಣ್ಣ ಭಾರತದಿಂದ ಆಮದಾಗುತ್ತಿತ್ತು. ಹತ್ತೊಂಬತ್ತನೆಯ ಶತಮಾನದ ಅಂತ್ಯದಲ್ಲಿ, ಜರ್ಮನಿಯಲ್ಲಿ ಕಂಡುಹಿಡಿದ ಇಂಡಿಗೊ ಸಿಂಥೆಸಿಸ್ ವಿಧಾನದ ಬಳಸುವವರೆಗೂ ಇದು ಜಾರಿಯಲ್ಲಿತ್ತು.

ಜೀನ್ಸ್, ಈಗ ಎಲ್ಲರ ಮನೆಯಲ್ಲೂ ಸಿಗುವ ಅಧುನಿಕ ಉಡುಪು. ಇತ್ತೀಚೆಗೆ ನಾವು ತೊಡುವ ಉಡುಪುಗಳಲ್ಲಿ ಬಹು ದೊಡ್ಡ ಪಾಲು ಇದರದ್ದು. ಒಂದು ಕಾಲದಲ್ಲಿ ಕಾರ್ಮಿಕ ವರ್ಗದವರಿಗೆ ಎಂದು ತಯಾರಿಸಿದ ಜೀನ್ಸ್ ಇಂದು ಶ್ರೀಮಂತರ ಸೊಂಟವನ್ನೂ ಏರಿ ಕುಳಿತಿದೆ. ಅಂದು ಕೂಲಿ ನಾಲಿ ಮಾಡುತ್ತಿರುವಾಗ ಹರಿಯುತ್ತಿದ್ದ ಪ್ಯಾಂಟನ್ನು ಶ್ರಮಜೀವಿಗಳು ಹಾಗೆಯೇ ಧರಿಸುತ್ತಿದ್ದರು.

ಇಂದು ನಾಯಿ ಕಚ್ಚಿ ಹರಿದಂತಿರುವ ಪ್ಯಾಂಟ್ ಫ್ಯಾಷನ್. ಉಲ್ಟಾ, ಸರಿಯಾಗಿರುವು ದಕ್ಕಿಂತ ಹರಿದ ಸರಕಿಗೆ ಕ್ರಯ ಜಾಸ್ತಿ! ಅಮೆರಿಕ ಮತ್ತು ರಷ್ಯಾ ಎಷ್ಟೇ ಕಚ್ಚಾಡಿಕೊಳ್ಳಲಿ, ಕಿತ್ತಾಡಿಕೊಳ್ಳಲಿ, ಈ ವಿಷಯದಲ್ಲಿ ಅಮೆರಿಕನ್ನರು ರಷ್ಯನ್ನರಿಗೆ (ಅಥವಾ ಒಬ್ಬ ರಷ್ಯನ್ ವ್ಯಕ್ತಿಗೆ) ಧನ್ಯವಾದ ಹೇಳಬೇಕು, ಕೃತಜ್ಞತೆ ಸಲ್ಲಿಸಬೇಕು. ಇಲ್ಲವಾದರೆ, ಇಂದು ಅಮೆರಿಕದ ಜನರ ಜೀವವಾಗಿರುವ ಜೀನ್ಸ್ ಅಥವಾ ‘ಡೆನಿಮ್’ ಈ ಪ್ರಪಂಚಕ್ಕೆ ಬರು ತ್ತಿತ್ತೋ ಇಲ್ಲವೋ? ಒಂದು ವೇಳೆ ಬಂದರೂ ಯಾವ ರೂಪದಲ್ಲಿ ಇರುತ್ತಿತ್ತು? ಇತ್ಯಾದಿ ಪ್ರಶ್ನೆಗಳು ಸಹಜ. ಒಂದು ಅಂಕಿ ಅಂಶದ ಪ್ರಕಾರ ಅಮೆರಿಕ ದೇಶವೊಂದರಲ್ಲೇ ಪ್ರತಿ ವರ್ಷ ನಾಲ್ಕುನೂರ ಐವತ್ತು ಮಿಲಿಯನ್ ಅಂದರೆ, ನಲವತ್ತೈದು ಕೋಟಿ ಜೀನ್ಸ್ ಪ್ಯಾಂಟ್ ಮಾರಾಟವಾಗುತ್ತದಂತೆ.

ಒಬ್ಬ ಅಮೆರಿಕನ್ ಪ್ರಜೆ ಸರಾಸರಿ ಏಳು ಜೀನ್ಸ್ ಪ್ಯಾಂಟ್ ಹೊಂದಿರುತ್ತಾನಂತೆ. ಅಮೆರಿಕದ ಜನಸಂಖ್ಯೆ ಸುಮಾರು ಮೂವತ್ಮೂರು ಕೋಟಿ ಎಂದಾದರೆ, ಜೀನ್ಸ್ ಸಂಖ್ಯೆ ಎಷ್ಟು ಎಂದು ನೀವೇ ಲೆಕ್ಕ ಹಾಕಿಕೊಳ್ಳಿ. ನಾವು ಇಂದು ಜೀನ್ಸ್ ತೊಟ್ಟು ಡೌಲಿನ ನಡಿಗೆ ನಡೆಯ ಬಹುದು. ಆದರೆ ಜೀನ್ಸ್ ಅದಕ್ಕಿಂತ ದೂರದ ದಾರಿ ಸವೆಸಿದೆ. ಕಳೆದ ಹದಿನೈದು ದಶಕ ದಿಂದ, ಅಂದರೆ 1873 ರಿಂದ ಆರಂಭಿಸಿ, ಇಂದಿನವರೆಗೂ ನಿರಂತರ ನಡೆಯುತ್ತಲೇ ಇದೆ. ಅದು ನಡೆಯುವ ಹಾದಿಯಲ್ಲಿ ಸಾಕಷ್ಟು ತಿರುವುಗಳನ್ನು ಕಂಡಿರಬಹುದು, ತಂಗುದಾಣ ದಲ್ಲಿ ಸ್ವಲ್ಪ ಹೊತ್ತು ಕುಳಿತಿರಬಹುದು, ಆದರೆ ಅದು ಶಾಶ್ವತ ವಿಶ್ರಾಂತಿ ತೆಗೆದುಕೊಳ್ಳುವ ಯಾವ ಲಕ್ಷಣಗಳೂ ಸದ್ಯಕ್ಕಂತೂ ಣುತ್ತಿಲ್ಲ.

ಇಂದು ಜೀನ್ಸ್ ಪ್ಯಾಂಟಿನಿಂದ ಮೇಲೇರಿ, ಶಾರ್ಟ್ಸ್, ಸ್ಕರ್ಟ್, ಶರ್ಟ್, ಜ್ಯಾಕೆಟ್ ಇತ್ಯಾದಿ ಎಲ್ಲಾ ಕ್ಷೇತ್ರದಲ್ಲೂ, ಎಲ್ಲಾ ದೇಶದಲ್ಲೂ ಹಬ್ಬಿ ನಿಂತಿದೆ. ಅದಕ್ಕೆ ಕಾರಣೀಭೂತರಾದವರು ಇಬ್ಬರು. ರಷ್ಯಾ ಮೂಲದ ಜೇಕಬ್ ಡೇವಿಸ್ ತನ್ನ ಇಪತ್ಮೂರನೆಯ ವರ್ಷದಲ್ಲಿ ಅಮೆರಿಕಕ್ಕೆ ವಲಸೆ ಬಂದಿದ್ದ. ವೃತ್ತಿಯಲ್ಲಿ ದರ್ಜಿಯಾಗಿದ್ದ ಆತ ಬಾಲ್ಯದ ಆ ಕೆಲಸ ಕಲಿತಿದ್ದ. ಅಮೆರಿಕಕ್ಕೆ ಬಂದ ಬಳಿಕ, ಕುದುರೆಗಳಿಗೆ ಹೊದೆಸುವ ಕಂಬಳಿ, ಟೆಂಟ್, ರೈಲ್ವೆ ವ್ಯಾಗನ್ ಕವರ್ ಇತ್ಯಾದಿ ದಪ್ಪ ವಸ್ತ್ರದ ಹೊಲಿಗೆ ಕೆಲಸ ಮಾಡಿಕೊಂಡಿದ್ದ. ಒಮ್ಮೆ ಆತನ ಅಂಗಡಿಗೆ ಬಡಗಿಯ ಹೆಂಡತಿ ಬಂದು, ತನ್ನ ಗಂಡನ ಪ್ಯಾಂಟ್ ಬೇಗ ಹರಿದು ಹೋಗುತ್ತಿದ್ದು, ಹೆಚ್ಚು ಸಮಯ ಬಾಳಿಕೆ ಬರುವ ಪ್ಯಾಂಟ್ ಹೊಲಿದು ಕೊಡಲು ಸಾಧ್ಯವೇ? ಎಂದು ವಿಚಾರಿಸಿದಳು. ಆಗ ಆಕೆಯ ಗಂಡನಿಗೆ ದಪ್ಪ ವಸದ ಪ್ಯಾಂಟ್ ಹೊಲಿದು ಕೊಟ್ಟಿದ್ದ ಜೇಕಬ್. ಅದು ಬಡಗಿಗಷ್ಟೇ ಅಲ್ಲದೆ, ಉಳಿದ ಬಡಗಿ ಮಿತ್ರರಿಗೂ ಇಷ್ಟವಾಯಿತು.

ಜೇಕಬ್ ನಿಧಾನವಾಗಿ ಕಾರ್ಮಿಕ ವರ್ಗದಲ್ಲಿ ಜನಪ್ರಿಯನಾಗತೊಡಗಿದ. ಆ ಸಂದರ್ಭದಲ್ಲಿ ಅಮೆರಿಕದ ಕ್ಯಾಲಿಫೋರ್ನಿಯಾ ಚಿನ್ನದ ಗಣಿಯಲ್ಲಿ ಸಾಕಷ್ಟು ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಉಡುಪಿನ ವಿಷಯದಲ್ಲಿ ಬಹುತೇಕ ಎಲ್ಲರದ್ದೂ ಒಂದೇ ಸಮಸ್ಯೆಯಾಗಿತ್ತು.
ಅವರ ಪ್ಯಾಂಟ್ ಕೊಳೆಯಾಗುತ್ತಿತ್ತು, ಬೇಗ ಹರಿದುಹೋಗುತ್ತಿತ್ತು. ಅದರಲ್ಲೂ ಕೆಲವು ಸಣ್ಣ ಪುಟ್ಟ ಸಲಕರಣೆಗಳನ್ನು ಕಿಸೆಯಲ್ಲಿ ಇಟ್ಟು ಕೊಂಡು ಕೆಲಸಕ್ಕೆ ತೆರಳುತ್ತಿದ್ದು, ಆಗಾಗ ಕಿಸೆಯಲ್ಲಿ ಕೈ ಹಾಕಬೇಕಾದ ಅನಿವಾರ್ಯತೆ ಇರುತ್ತಿದ್ದುದರಿಂದ, ಕಿಸೆಯ ಭಾಗ ಬಲು ಬೇಗ ಹರಿದುಹೋಗುತ್ತಿತ್ತು.

ಜೇಕಬ್ ಗಣಿ ಕಾರ್ಮಿಕರಿಗೂ ಪ್ಯಾಂಟ್ ಹೊಲಿದು ಕೊಡುವ ಕೆಲಸ ಆರಂಭಿಸಿದ. ದಪ್ಪನೆಯ ಬಟ್ಟೆಯಂತೂ ಇತ್ತು, ಹೊಲಸಾದದ್ದು ಬೇಗ ಕಾಣದೆ ಇರುಲು ಆತ ನೀಲಿ ಬಣ್ಣ ವನ್ನು ಆಯ್ದುಕೊಂಡ. ಕಿಸೆಯ ಭಾಗ ಹರಿಯದಂತೆ, ನಾಜೂಕಿನ ಸ್ಥಳದಲ್ಲಿ ತಾಮ್ರದ ರಿವೆಟ್ ಜೋಡಿ ಸಿದ. ನಿಜ, ಜೀನ್ಸ್ ಪ್ಯಾಂಟಿನಲ್ಲಿ ಕಾಣುವ ಬೆಳ್ಳಿ ಅಥವಾ ತಾಮ್ರದ ಬಣ್ಣದ ರಿವೆಟ್ ಇದೆಯಲ್ಲ, ಅದು ಅಂದು ಕಿಸೆ ಹರಿಯಬಾರ ದೆಂದು ಜೋಡಿಸಿದ್ದು.

ಮೊದಲು ಇದನ್ನು ಹಿಂದಿನ ಕಿಸೆಯಲ್ಲೂ ಜೋಡಿಸುತ್ತಿದ್ದರು. ನಂತರ, ಕುರ್ಚಿಗೆ ಬಟ್ಟೆ ಹರಿಯುತ್ತದೆ, ಕಬ್ಬಿಣದ ಕುರ್ಚಿಗಳನ್ನು ಇವು
ಗೀರುತ್ತವೆ ಎಂಬ ಕಾರಣಕ್ಕೆ ಹಿಂದಿನ ರಿವೆಟ್ ತೆಗೆಯಲಾಯಿತು. ಹಾಗೆಯೇ, ಬಹುತೇಕ ಜೀನ್ಸ್ ಪ್ಯಾಂಟಿನ ಮುಂದಿನ ಜೇಬಿನೊಳಗೆ ಒಂದು ಪುಟ್ಟ ಜೇಬು ಇದೆಯಲ್ಲ, ಅದು ಸ್ಟ್ರ್ಯಾಪ್ ಇಲ್ಲದ ಸಣ್ಣ ಗಡಿಯಾರ ಇಟ್ಟುಕೊಳ್ಳಲು ಮಾಡಿದ ವ್ಯವಸ್ಥೆ!

ನೀಲಿ ಬಣ್ಣದ ಮೇಲೆ ಸ್ವಲ್ಪ ಎದ್ದು ಕಾಣಲಿ ಎಂಬ ಕಾರಣಕ್ಕೆ ಕಿತ್ತಳೆ ಬಣ್ಣದ ನೂಲು ಬಳಸಿದರು. ಅದೇ ಅವರ ಟ್ರೇಡ್ ಮಾರ್ಕ್ ಆಯಿತು. ಆ ಪರಂಪರೆ ಇಂದಿಗೂ ಮುಂದುವರಿದಿದೆ. ದಿನದಿಂದ ದಿನಕ್ಕೆ ಜೇಕಬ್ ಹೊಲಿದು ಕೊಡುತ್ತಿದ್ದ ಪ್ಯಾಂಟಿಗೆ ಬೇಡಿಕೆ ಹೆಚ್ಚುತ್ತಿತ್ತು. ಅದಕ್ಕೆ ತಕ್ಕಷ್ಟು ಪ್ಯಾಂಟ್ ಹೊಲಿದು ಕೊಡುವಷ್ಟು ಹಣ ಜೇಕಬ್ ಬಳಿ ಇರಲಿಲ್ಲ. ಆಗ ಆತ ಬಟ್ಟೆಯ ಸಗಟು ವ್ಯಾಪಾರಿ ಲೆವಾಯ್ ಸ್ಟ್ರಾಸ್‌ನ ಸಹಾಯ ಕೇಳಿದ.

ಜೇಕಬ್ ಮೊದಲಿಂದಲೂ ಸ್ಟ್ರಾಸ್ ಬಳಿ ಬಟ್ಟೆ ಖರೀದಿಸುತ್ತಿದ್ದ. ಜೇಕಬ್ ಮೇಲೆ ಅತೀವ ವಿಶ್ವಾಸವಿಟ್ಟಿದ್ದ ಸ್ಟ್ರಾಸ್ ಅದಕ್ಕೆ ಒಪ್ಪಿದ. ಸ್ಟ್ರಾಸ್ ಕೂಡ ಜೇಕಬ್‌ನಂತೆ ಅಮೆರಿಕಕ್ಕೆ ವಲಸೆ ಬಂದವನೇ. ಆತನ ಅಣ್ಣಂದಿರು ಆಗಲೇ ಅಮೆರಿಕದಲ್ಲಿದ್ದು, ವ್ಯಾಪಾರ ಮಾಡಿಕೊಂಡಿದ್ದರು. ಜರ್ಮನಿ ಮೂಲದ ಸ್ಟ್ರಾಸ್, ತನ್ನ ಹದಿನೆಂಟನೆಯ ವಯಸ್ಸಿನಲ್ಲಿ ಅಣ್ಣಂದಿರನ್ನು ಸೇರಿಕೊಂಡಿದ್ದ. ಅಂದು ಯಾರಾದರೂ, ಮುಂದೊಂದು ದಿನ ಈತ ಜೀನ್ಸ್ ಲೋಕದ ದೊರೆಯಾಗುತ್ತಾನೆಂದು ಎಣಿಸಿದ್ದರೋ ಇಲ್ಲವೋ ಗೊತ್ತಿಲ್ಲ, ಸ್ಟ್ರಾಸ್ ಅಕ್ಷರಶಃ ಜೀನ್ಸ್ ದೊರೆಯಾದದ್ದಂತೂ ನಿಜ.

ಜೇಕಬ್ ಮತ್ತು ಸ್ಟ್ರಾಸ್ ಇಬ್ಬರೂ ಸೇರಿ 1870ರ ಆರಂಭದಲ್ಲಿ Levi’s ಆರಂಭಿಸಿದರು. (ಅದಕ್ಕೂ ಇಪ್ಪತ್ತು ವರ್ಷ ಮೊದಲೇ Stauss Levi ಹೆಸರಿನಲ್ಲಿ ಸಂಸ್ಥೆ ಆರಂಭಿಸಿದ್ದ ಸ್ಟ್ರಾಸ್, ಯುರೋಪ್‌ನಿಂದ ಬಟ್ಟೆ ಆಮದು ಮಾಡಿಕೊಳ್ಳುತ್ತಿದ್ದ.) 1873ರಲ್ಲಿ ಯುನೈಟೆಡ್ ಸ್ಟೇಟ್ಸ್ ಪೇಟೆಂಟ್ ಎಂಡ್ ಟ್ರೇಡ್ಮಾರ್ಕ್ ಕಚೇರಿಯಿಂದ ಪೇಟೆಂಟ್ ಪಡೆದರು. ಮುಂದೇನು? ಅಂದಿನಿಂದ ಕಳೆದ ವರ್ಷದವರೆಗೊ ಅಂದರೆ ಸುಮಾರು ನೂರ ಐವತ್ತು ವರ್ಷ Levi’s ಪ್ಯಾಂಟ್ ಲೋಕದ ದೊರೆ.

ಲೆವಾಯ್ಸ್ ಸಂಸ್ಥೆ ಮೊದಲ ಡೆನಿಮ್ ಜೀನ್ಸ್ ಆರಂಭಿಸಿದ್ದು 1890 ರಲ್ಲಿ. ಅಲ್ಲಿಂದ 1950 ರವರೆಗೂ ಸಂಸ್ಥೆ ಒಂದೇ ನಮೂನೆಯ ಪ್ಯಾಂಟ್ ತಯಾರಿಸುತ್ತಿತ್ತು. ಅದರ ನಂತರ ಬೇರೆ ಬೇರೆ ಮಾಡೆಲ್‌ಗಳತ್ತ ಒಲವು ತೋರಿಸಿದ್ದು. 1962 ರ ವೇಳೆಗೆ ಸಂಸ್ಥೆ ಹದಿನಾರು ಸ್ಥಳಗಳಲ್ಲಿ ಕಾರ್ಖಾನೆ ಹೊಂದಿದ್ದು, 1974 ರ ವೇಳೆಗೆ ಅರವತ್ಮೂರು ಕಾರ್ಖಾನೆ ಹೊಂದಿತ್ತು. ಅದರ ನಂತರ ಜೀನ್ಸ್ ತಯಾರಿಸುವ ಅನೇಕ ಕಂಪನಿ ಗಳು ಹುಟ್ಟಿಕೊಂಡು, ಕಡಿಮೆ ಬೆಲೆಗೆ ಪ್ಯಾಂಟ್ ಮಾರಲು ಆರಂಭಿಸಿದವು.

ಆ ಸಂದರ್ಭದಲ್ಲಿ ಲೆವಾಯ್ಸ್ ವ್ಯಾಪಾರದಲ್ಲಿ ಸ್ವಲ್ಪ ಏರಿಳಿತ ಕಂಡಿತಾದರೂ, ಅದರ ಹೆಸರಿಗೆ, ಘನತೆಗೆ, ಸ್ಥಾನಕ್ಕೆ ಕುಂದು ಉಂಟಾಗ ಲಿಲ್ಲ. ಇಂದಿಗೂ ಸಂಸ್ಥೆ ವಿಶ್ವದಾದ್ಯಂತ ಎರಡು ಸಾವಿರದ ಎಂಟು ನೂರಕ್ಕೂ ಹೆಚ್ಚು ಮಳಿಗೆಗಳನ್ನು ಹೊಂದಿದೆ. ಸಂಸ್ಥೆಯ ಒಟ್ಟೂ ಆದಾಯ ಐದುವರೆ ಬಿಲಿಯನ್ ಡಾಲರ್ ನಷ್ಟಿದ್ದು, ಸುಮಾರು ಮುನ್ನೂರು ಮಿಲಿಯನ್ ಡಾಲರ್ ನಿವ್ವಳ ಲಾಭಗಳಿಸುತ್ತಿದೆ. ಅದರ
ನಂತರದ ಸ್ಥಾನದಲ್ಲಿ Wrangler, Diesel, Lee, Pepe jeans ಇತ್ಯಾದಿ ಸಂಸ್ಥೆಗಳಿವೆ. ಇಲ್ಲಿ ಜೀನ್ಸ್ ಬಟ್ಟೆಯ ಕುರಿತು ಸ್ವಲ್ಪ
ಹೇಳಬೇಕು. ಜೀನ್ಸ್‌ಗೆ ’ಬ್ಲೂ’ ಅಥವಾ ’ಡೆನಿಮ್’ ಎಂದೂ ಹೇಳುವುದಿದೆ. ಮೂಲತಃ ಇದು ಹತ್ತಿ ಮತ್ತು ಉಣ್ಣೆ ನೇಯ್ದು ಮಾಡಿದ ದಪ್ಪ ವಸ್ತ್ರ. 1500 ರ ವೇಳೆಗೆ ಇಟಲಿ ದೇಶದ ಜಿನೋವಾ ಪ್ರದೇಶದಲ್ಲಿ ಮೊದಲು ಈ ರೀತಿಯ ಬಟ್ಟೆ ತಯಾರಿಕೆ ಆರಂಭವಾಯಿತು.

ಫ್ರೆಂಚ್ ಭಾಷೆಯಲ್ಲಿ ಜೀನ್ಸ್ ಎಂದರೆ ಜಿನೋವಾದಿಂದ ಬಂದದ್ದು ಎಂದ ಅರ್ಥ. ನಂತರ ಜೀನ್ಸನ್ನು ನಕಲು ಮಾಡಿ ಮರು ಉತ್ಪಾದನೆಗೆ
ಪ್ರಾನ್ಸ್ ದೇಶದ ನಿಮೆಸ್ ಹೆಸರಿನ ಪ್ರದೇಶದಲ್ಲಿ ಪ್ರಯತ್ನಗಳು ನಡೆದವು. ಅವರು ತಯಾರಿಸಿದ ಬಟ್ಟೆ ಜೀನ್ಸ್ಗೆ ಹೋಲುತ್ತಿತ್ತಾದರೂ, ಅಸಲಿ ಜೀನ್ಸ್ ರೂಪ ಬರಲಿಲ್ಲ. ಅದು ಡೆನಿಮ್ಸ ಎಂದು ಹೆಸರಾಯಿತು. ಫ್ರೆಂಚ್ ಭಾಷೆಯಲ್ಲಿ ಡೆನಿಮ್ಸ್ ಎಂದರೆ ಡೆನಿಮ್‌ನಿಂದ (ಪ್ರದೇಶ ದಿಂದ) ಎಂಬ ಅರ್ಥ. ಇನ್ನೊಂದು ವಿಷಯ ಗೊತ್ತಾ? ಈ ಬಟ್ಟೆಯಲ್ಲಿ ಬಳಸುವ ನೀಲಿ ಬಣ್ಣ ಭಾರತದಿಂದ ಆಮದಾಗುತ್ತಿತ್ತು. ಹತ್ತೊಂಬತ್ತ ನೆಯ ಶತಮಾನದ ಅಂತ್ಯದಲ್ಲಿ, ಜರ್ಮನಿಯಲ್ಲಿ ಕಂಡುಹಿಡಿದ ಇಂಡಿಗೊ ಸಿಂಥೆಸಿಸ್ ವಿಧಾನದ ಬಳಸುವವರೆಗೂ ಇದು ಜಾರಿಯಲ್ಲಿತ್ತು. ಇರಲಿ, ಇಂದು ವಿಶ್ವದಾದ್ಯಂತ ಜೀನ್ಸ್ ಬಟ್ಟೆ ತಯಾರಿಸಲು ಎಷ್ಟು ನೀಲಿ ಬಣ್ಣ ಬಳಸುತ್ತಾರೆ ಗೊತ್ತಾ? ಪ್ರತಿ ವರ್ಷ ಇಪ್ಪತ್ತು ಸಾವಿರ ಟನ್‌ಗಿಂತಲೂ ಹೆಚ್ಚು.

ಇನ್ನೊಂದು ವಿಶೇಷವೆಂದರೆ, ಇದನ್ನು ಹೆಚ್ಚು ತೊಡುವವರು ಅಮೆರಿಕ, ಪೂರ್ವ ಏಷ್ಯಾ ಮತ್ತು ಯುರೋಪ್ ದೇಶದ ಜನರಾದರೂ, ವಿಶ್ವದಾದ್ಯಂತ ಉತ್ಪಾದನೆಯಾಗುತ್ತಿರುವ ಜೀನ್ಸ್‌ಗಳ ಪೈಕಿ ಅರ್ಧಕ್ಕಿಂತಲೂ ಹೆಚ್ಚು ತಯಾರಾಗುವುದು ಭಾರತ, ಚೀನಾ, ಬಾಂಗ್ಲಾ ದೇಶ ಮೊದಲಾದ ದಕ್ಷಿಣ ಏಷ್ಯಾ ದೇಶಗಳಲ್ಲಿ. ಇನ್ನು ಹರಿದ ಜೀನ್ಸ್ ಕಥೆ ಕೇಳಿ. ಇತ್ತೀಚೆಗೆ ಮೊಣಕಾಲು, ತೊಡೆಯ ಭಾಗದಲ್ಲಿ ಹರಿದಂತಿ ರುವ ಜೀನ್ಸ್ ಪ್ಯಾಂಟ್ ಸಾಮಾನ್ಯ. ಆಗಿನ ಕಾಲದಲ್ಲಿ ಹೊಸ ಬಟ್ಟೆಕೊಳ್ಳಲಾಗದೆ, ಬಡವರು ಹರಿದದ್ದನ್ನೇ ತೊಡುತ್ತಿದ್ದರಾದರೂ, ಎಪ್ಪತ್ತರ ದಶಕದಲ್ಲಿ ಇದು ಸಾಂಪ್ರದಾಯಿಕ ವಿಧಾನಗಳನ್ನು ವಿರೋಽಸುವ ಅಥವಾ ಪ್ರತಿಭಟನೆಯ ಸಂಕೇತವಾಯಿತು. ನಂತರದ ದಿನಗಳಲ್ಲಿ ಇದು ಪಾಪ್ ಸಂಸ್ಕೃತಿಯಾಗಿ ಬೆಳೆಯಿತು.

ಬೀಟಲ್, ಸೆಕ್ಸ್ ಪಿಸ್ಟಲ್ ಮುಂತಾದ ರಾಕ್ ಸ್ಟಾರ್‌ಗಳಿಂದಾಗಿ ಇದು ಹೆಚ್ಚಿನ ಪ್ರಚಾರ ಪಡೆಯಿತು. ಈಗಂತೂ ಹರಿದ ಜೀನ್ಸ್ ತೊಟ್ಟರೆ ಅದೇ ಫ್ಯಾಷನ್! ಅಲ್ಲಿ ಒಳ್ಳೆ ಯದೋ, ಕೆಟ್ಟದ್ದೇ ಎಂಬ ಪ್ರಶ್ನೆ ಇಲ್ಲ. ಅದು ಅವರವರ ವಿವೇಚನೆಗೆ ಬಿಟ್ಟದ್ದು. ಒಂದು ವಿಷಯ ತಿಳಿದಿರಲಿ, ಫ್ಯಾಷನ್‌ಗೆ ಯವತ್ತೂ ಬೆಲೆ ಹೆಚ್ಚು! ಅಂದಹಾಗೆ, ವಿಶ್ವದ ಅತಿ ಹೆಚ್ಚು ಬೆಲೆಯ ಜೀನ್ಸ್ ಪ್ಯಾಂಟ್ ತಯಾರಿಸಿದ ಅಗ್ಗಳಿಕೆ ಸಿಕ್ರೆಟ್ ಸರ್ಕಸ್ ಸಂಸ್ಥೆಯದ್ದು.

ಅವರು ತಯಾರಿಸಿದ ಒಂದು ಪ್ಯಾಂಟ್ ಹದಿಮೂರು ಲಕ್ಷ ಡಾಲರ್ ಅಂದರೆ, ಸುಮಾರು ಒಂಬತ್ತು ಕೋಟಿ ಎಪ್ಪತ್ತೈದು ಲಕ್ಷ ರೂಪಾಯಿಗೆ ಮಾರಾಟವಾಯಿತು. ಅಷ್ಟೊಂದು ಹಣ ಕೊಟ್ಟು ಕೊಂಡುಕೊಳ್ಳಲು ಅದರನು ವಜ್ರದ ಹರಳಿದೆಯಾ ಎಂದು ಕೇಳಿದರೆ, ಅದರಲ್ಲಿ ನಿಜಕ್ಕೂ ವಜ್ರದ ಹರಳಿದೆ. ಪ್ಯಾಂಟ್‌ನ ಹಿಂಬದಿಯಲ್ಲಿರುವ ಕಿಸೆಯ ಮೇಲೆ ಹದಿನೈದು ವಜ್ರದ ಹರಳುಗಳನ್ನು ಜೋಡಿಸಲಾಗಿದೆ. ಒಂದಂತೂ ನಿಜ, ಈ ಪ್ಯಾಟ್ ತೊಟ್ಟು ಹೊರಟರೆ, ಜೇಬುಗಳ್ಳರು ಜೇಬಿನ ಒಳಗಿಂದ ಏನನ್ನೂ ತೆಗೆಯುವುದಿಲ್ಲ!