ಗಂಟಾಘೋಷ
ಗುರುರಾಜ್ ಗಂಟಿಹೊಳೆ
ಯಾವುದೇ ಯೋಜನೆಗಳನ್ನು ಕೈಗೆತ್ತಿಕೊಂಡಾಗ, ಹಲವು ಜನರು ಭಾಗಿದಾರರಾಗುವುದು ಸಹಜ. ಇಂಥ ಸಂದರ್ಭದಲ್ಲಿ ಕರ್ತವ್ಯಲೋಪ ವೆಸಗುವ ಅಧಿಕಾರಿಗಳನ್ನೋ, ವ್ಯಕ್ತಿಗಳನ್ನೋ ಗುರುತಿಸಿ ಕಠಿಣವಾಗಿ ಶಿಕ್ಷಿಸುವ ಕೆಲಸವಾಗಲಿ. ಇದನ್ನು ಬಿಟ್ಟು ಇಡೀ ಯೋಜನೆಯನ್ನೇ ದೂರುವುದು ಅಥವಾ ಇಂತಹ ನೆಪದಲ್ಲಿ ಯೋಜನೆಯನ್ನೇ ನಿಷ್ಟ್ರೀಯಗೊಳಿಸುವುದು ತರವಲ್ಲ. ಇತರೆ ರಾಜ್ಯಗಳಲ್ಲಿ ಆರಂಭಿಕ ಮೂಲಸೌಕರ್ಯಗಳ ಕೊರತೆಯಿದ್ದರೂ ಜಲ ಜೀವನ್ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದಾರೆ.
ದೇಶವನ್ನು ಕಾಡುತ್ತಿರುವ ಬಹುದೊಡ್ಡ ಸಮಸ್ಯೆಗಳಲ್ಲಿ ಒಂದು ನೀರಿನ ಸಮಸ್ಯೆ. ಕೆಲವು ಪ್ರದೇಶಗಳಲ್ಲಿ ನೀರು ಸಮೃದ್ಧವಾಗಿದ್ದರೆ, ಕೆಲವೆಡೆ ಸಾವಿರ ಅಡಿಗಳಷ್ಟು ಬೋರ್‌ವೆಲ್ ಕೊರೆದರೂ ನೀರಿನ ಸೆಲೆ ಸಿಗದ ಪರಿಸ್ಥಿತಿ ಎದುರಾಗಿದೆ. ನೀರಾವರಿಗೆಂದು ನೂರು ಯೋಜನೆಗಳನ್ನು ದಶಕಗಳಿಂದ ಜಾರಿ ಗೊಳಿಸಿದ್ದರೂ, ಇಂದಿಗೂ ದೇಶದ ಹಲವು ಭಾಗಗಳಲ್ಲಿ ಹನಿ ನೀರಿಗಾಗಿ ಹಾತೊರೆಯುವ ಪರಿಸ್ಥಿತಿ ಇದೆ. ಮೈಲುಗಳಾಚೆಯಿಂದ ಮಹಿಳೆಯರು ನೀರು ಹೊತ್ತು ತರುವ ದೃಶ್ಯವೂ ಕಣ್ಮುಂದಿದೆ.
ಈ ಎಲ್ಲ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿಯವರು ೨೦೧೯ರ ಸ್ವಾತಂತ್ರ್ಯ ದಿನಾಚರಣೆಯಂದು ಪ್ರತಿ ಹಳ್ಳಿಗೂ ಕುಡಿ
ಯುವ ನೀರಿನ ಸೌಲಭ್ಯ ಒದಗಿಸುವ ಆಶಯದೊಂದಿಗೆ ‘ಜಲ ಜೀವನ್ ಮಿಷನ್’ ಯೋಜನೆಯನ್ನು ಘೋಷಿಸಿದರು. ಕರ್ನಾಟಕದ ಹಲವು ಭಾಗದಲ್ಲಿ
ಶುದ್ಧ ಕುಡಿಯುವ ನೀರು ಪಡೆಯುವುದಕ್ಕೆ ಪರದಾಡುವಂತಹ ಪರಿಸ್ಥಿತಿಯಿತ್ತು ಮತ್ತು ಈಗಲೂ ಇದೆ. ಹಾಗಾಗಿ, ಪ್ರತಿಯೊಬ್ಬರಿಗೂ ಶುದ್ಧ, ಸುರಕ್ಷಿತ ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ ನೀರಿನ ಸಮಸ್ಯೆಯಿಂದ ಮುಕ್ತಗೊಳಿಸಲು ಕೇಂದ್ರ ಸರಕಾರ ಜಾರಿಗೆ ತಂದ ಮಹತ್ವಾಕಾಂಕ್ಷೆಯ ಯೋಜನೆ ಜಲ ಜೀವನ್ ಮಿಷನ್ ಯೋಜನೆ.
‘ಮನೆ ಮನೆಗೆ ಗಂಗೆ’ ಎಂಬ ಹೆಸರಿನಲ್ಲಿ ಈ ಯೋಜನೆಯನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸಲಾಯಿತು. ಕರ್ನಾಟಕದಲ್ಲಿ ೯೮ ಲಕ್ಷ ಗ್ರಾಮೀಣ ಕುಟುಂಬಗಳಿದ್ದು, ಈಗಾಗಲೇ ೩೫ ಲಕ್ಷಕ್ಕೂ ಹೆಚ್ಚು ಮನೆಗಳಿಗೆ ನಳ ಸಂಪರ್ಕದ ಮೂಲಕ ನೀರನ್ನು ಒದಗಿಸಲಾಗಿದೆ. ಹಿಂದಿನ ರಾಜ್ಯ ಸರಕಾರದ ಅವಽಯಲ್ಲಿ ಜಾರಿಯಾದ ಈ ೪೯೨ ಬಹುಗ್ರಾಮ ಯೋಜನೆಗಳು ಬಹುತೇಕ ಪೂರ್ಣವಾಗಿದ್ದು, ಇನ್ನು ಕೆಲವು ಪ್ರಗತಿಯಲ್ಲಿವೆ. ಯೋಜನೆಯ ಯಶಸ್ಸಿಗೆ ರಾಜ್ಯ, ಕೇಂದ್ರ ಸರಕಾರಗಳ ಪ್ರಯತ್ನದೊಂದಿಗೆ ಜನರ ಸಹಕಾರವೂ ಮುಖ್ಯ. ಜಲ ಜೀವನ್ ಮಿಷನ್ ಯೋಜನೆಯಲ್ಲಿ ಜನರ ಪಾತ್ರ ಅತ್ಯಂತ ಮುಖ್ಯವಾದದ್ದು. ಹಾಗಾಗಿ ಸಮುದಾಯ ವಂತಿಗೆ ರೂಪದಲ್ಲಿ ಈ ಯೋಜನೆಯಲ್ಲಿ ಜನರಿಗೂ ಪಾಲು ನೀಡಲಾಗಿದೆ.
ಸಮುದಾಯ ವಂತಿಗೆ ಎಂದರೆ ಒಂದು ಗ್ರಾಮದೊಳಗಿನ ನೀರು ಸರಬರಾಜಿನ ಮೂಲಭೂತ ಸೌಕರ್ಯ ಕೈಗೊಳ್ಳಲು ಪ್ರತಿ ಗ್ರಾಮಗಳಿಂದ ವಂತಿಗೆ ರೂಪದಲ್ಲಿ ಹಣವನ್ನು ಸಂಗ್ರಹಿಸಲಾಗುತ್ತದೆ. ಜಲ ಜೀವನ್ ಮಿಷನ್ ಯೋಜನೆಯಲ್ಲಿ ಜನರಿಂದ ಸಮುದಾಯ ವಂತಿಗೆ ರೂಪದಲ್ಲಿ ಹಣವನ್ನು ಪಡೆಯಲಾಗುತ್ತದೆ. ಯೋಜನೆಯ ಅನುಷ್ಠಾನಕ್ಕೆ ಕೇಂದ್ರ ಸರಕಾರವು ಶೇ.೪೨.೫ ಹಣ ನೀಡಿದರೆ, ರಾಜ್ಯ ಸರಕಾರ ಶೇ.೪೨.೫ ಹಣವನ್ನು ನೀಡುತ್ತದೆ. ಇನ್ನುಳಿದಂತೆ ೧೫ನೇ ಹಣಕಾಸು ಆಯೋಗದಿಂದ ಶೇ.೫ ಹಾಗೂ ಸಮುದಾಯ ವಂತಿಗೆ ರೂಪದಲ್ಲಿ ಶೇ.೧೦ರಷ್ಟು ಹಣವನ್ನು ಪ್ರತಿ ಗ್ರಾಮಗಳಿಂದ ಸಂಗ್ರಹಿಸಲಾಗುತ್ತದೆ.
ಇವುಗಳೊಂದಿಗೆ ಸಂಸದರ ನಿಧಿ, ಶಾಸಕರ ನಿಧಿ, ದಾನಿಗಳು ಕೊಡುಗೆ ನೀಡಿದ್ರೆ ಅವರು ನೀಡಿದ ಮೊತ್ತದ ಆಧಾರದಲ್ಲಿ ಲೆಕ್ಕಾಚಾರ ಹಾಕಿ ಸಮುದಾಯ
ವಂತಿಗೆಯನ್ನು ಗ್ರಾಮಸ್ಥರಿಂದ ಸಂಗ್ರಹಿಸಲಾಗುತ್ತದೆ. ಕರ್ನಾಟಕದಲ್ಲಿ ೨೦೨೩ ರ ವೇಳೆಗೆ ಈ ಯೋಜನೆಯನ್ನು ಪೂರ್ಣಗೊಳಿಸುವ ಗುರಿಯನ್ನು
ಹೊಂದಲಾಗಿತ್ತು. ಕರ್ನಾಟಕದಲ್ಲಿ ಯೋಜನೆಗೆ ಜನರಿಂದ ಉತ್ತಮ ಬೆಂಬಲ ಕೂಡ ವ್ಯಕ್ತವಾಗಿತ್ತು. ಸಮುದಾಯ ವಂತಿಗೆ ರೂಪದಲ್ಲಿ ಹಣ ನೀಡುತ್ತ ಪ್ರತಿ ಗ್ರಾಮಗಳಲ್ಲೂ ಜನ ಯೋಜನೆಗೆ ಸಹಕರಿಸುತ್ತಿದ್ದರು. ಅದರಂತೆ ರಾಜ್ಯದಲ್ಲಿ ಪ್ರತಿ ಗ್ರಾಮಗಳಲ್ಲೂ ಗ್ರಾಮ ಪಂಚಾಯಿತಿಯ ಮೂಲಕ ಸಮುದಾಯ ವಂತಿಗೆ ಸಂಗ್ರಹಿಸಲಾಗುತ್ತಿತ್ತು.
ಸಮುದಾಯ ವಂತಿಗೆ ನೀಡಿದ ಕೂಡಲೇ ಜನರ ಕರ್ತವ್ಯ ಅಲ್ಲಿಗೆ ಮುಗಿಯುವುದಿಲ್ಲ. ಯೋಜನೆಯ ಯಶಸ್ವಿಗೆ ಸಮುದಾಯದ ಸಹಭಾಗಿತ್ವ ಕೂಡ
ತುಂಬಾ ಮುಖ್ಯವಾಗಿದೆ. ಸ್ಥಳೀಯ ಸಮುದಾಯ ಸರಕಾರದೊಂದಿಗೆ ಕೈಜೋಡಿಸಿದಾಗಲೇ ಆ ಯೋಜನೆ ಯಶಸ್ಸು ಹೊಂದಲು ಸಾಧ್ಯ. ಜಲಶಕ್ತಿ ಇಲಾಖೆಯಿಂದ ಅನುಷ್ಠಾನಗೊಳ್ಳುವ ಜಲ ಜೀವನ್ ಮಿಷನ್ ಯೋಜನೆ, ೨೦೨೧ರ ಅಕ್ಟೋಬರ್ ವೇಳೆಗೆ ದೇಶದ ವಿವಿಧ ರಾಜ್ಯಗಳಲ್ಲಿ ೫.೨೦ ಕೋಟಿಗೂ ಹೆಚ್ಚು ಕುಟುಂಬಗಳಿಗೆ ಯಶಸ್ವಿಯಾಗಿ ನಲ್ಲಿ ನೀರಿನ ಸಂಪರ್ಕ ನೀಡಲಾಗಿದೆ. ಲೇಹ್-ಲಡಾಖ್‌ನಂತಹ ಪ್ರದೇಶದಲ್ಲಿಯೂ ಈ ಯೋಜನೆ ವ್ಯಾಪ್ತಿಗೆ ಒಳಪಟ್ಟಿವೆ. ಗ್ರಾಮದಲ್ಲಿ ವಾಸಿಸುವ ಜನರು ಗ್ರಾಮದ ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿದ ಯೋಜನೆ ಮತ್ತು ನಿರ್ವಹಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದಾಗ ಮಾತ್ರ ಗ್ರಾಮ ಸ್ವರಾಜ್ಯದ ನಿಜವಾದ ಪ್ರಯೋಜನ ಲಭ್ಯವಾಗುತ್ತದೆ. ಈ ಗುರಿಯೊಂದಿಗೆ, ಸರಕಾರವು ಗ್ರಾಮ ಪಂಚಾಯಿತಿಗಳಿಗೆ ವಿಶೇಷವಾಗಿ ನೀರು ಮತ್ತು ನೈರ್ಮಲ್ಯಕ್ಕಾಗಿ ೨.೨೫ ಲಕ್ಷ ಕೋಟಿಗೂ ಹೆಚ್ಚು ಮೊತ್ತವನ್ನು ನೀಡಿದೆ. ಇಂದು ಒಂದೆಡೆ ಗ್ರಾ.ಪಂ.ಗಳಿಗೆ ಹೆಚ್ಚು ಹೆಚ್ಚು ಅಧಿಕಾರ ನೀಡಲಾಗುತ್ತಿದ್ದರೆ, ಇನ್ನೊಂದೆಡೆ ಪಾರದರ್ಶಕತೆಗೂ ಕಾಳಜಿ ವಹಿಸಲಾಗುತ್ತಿದೆ.
೨೦೨೩ರಲ್ಲಿ ಚುನಾವಣೆ ನಡೆದು ರಾಜ್ಯದಲ್ಲಿ ಆಡಳಿತ ಸರಕಾರ ಬದಲಾಯಿತು. ಸಹಜವಾಗಿಯೇ ಗ್ಯಾರಂಟಿ ಯೋಜನೆಗಳ ಕಡೆಗೆ ಸಹಜವಾಗಿ ಗಮನ
ಹರಿಸಿದಾಗ, ಈ ಯೋಜನೆ ಕುಂಠಿತಗೊಂಡಿತೆನ್ನಬಹುದು. ಇದರೊಟ್ಟಿಗೆ ಹಿಂದಿಗಿಂತ ಹೆಚ್ಚಿನ ಬೇಸಿಗೆಯ ತಾಪಮಾನ, ಹೀಟ್ ವೇವ್ ಈ ವರ್ಷ ಕಂಡು
ಬಂದದ್ದರಿಂದ ನದಿ, ಕರೆಗಳು, ನೀರಿನ ಮೂಲಗಳು ಸಹಜವಾಗಿಯೇ ಬತ್ತಿಹೋದವು. ಭಿಮನೆ ಮನೆಗೆ ಗಂಗೆಭಿ ಯೋಜನೆಯಲ್ಲಿ ಸಮರ್ಪಕವಾಗಿ ನೀರು
ಪೂರೈಕೆ ಸಾಧ್ಯವಾಗದೆ ಬಹುತೇಕ ಕರ್ನಾಟಕದ ನಲ್ಲಿಗಳಲ್ಲಿ ಬರಬೇಕಾದ ನೀರು ನಿಂತೇ ಹೋಯಿತೆನ್ನಬಹುದು. ರಾಜಧಾನಿಯಲ್ಲಿ ಎಂದೂ ಕಂಡಿರದ ಕುಡಿಯುವ ನೀರಿನ ಸಮಸ್ಯೆ ತಲೆದೋರಿತು. ಕುಡಿಯುವ ನೀರಿಗಾಗಿ ಬೆಂಗಳೂರು ತತ್ತರಿಸಿದ ಸುದ್ದಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿತು.
ಟ್ಯಾಂಕರ್ ಮೂಲಕ ನೀರು ಹಾಕಿಸಿಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣ ವಾಯಿತಲ್ಲದೇ ಸ್ವತಃ ರಾಜ್ಯ ಸರಕಾರವು ಈ ಟ್ಯಾಂಕರ್ ಮಾಫಿಯಾವನ್ನು ತಡೆಗಟ್ಟಲು ಕೆಲ ಸೂಚನೆ, ನಿಬಂಧನೆಗಳನ್ನು ಜಾರಿ ಮಾಡಬೇಕಾದಂತಹ ಸ್ಥಿತಿ ಬಂದೊದಗಿತು. ಮಳೆ ಸುರಿಯಲು ಬಹುದೊಡ್ಡ ಆಧಾರಸ್ಥಂಭ ನಮ್ಮ ಸುತ್ತಮುತ್ತಲಿನ ಕಾಡು ಮತ್ತು ದಟ್ಟ ಅರಣ್ಯಪ್ರದೇಶಗಳು. ಇಂತಹ ಕಾಡಿನ ಸಂಪತ್ತನ್ನು ನಾಶಗೊಳಿಸುತ್ತಿರುವುದೂ ಜಲಮೂಲ ಕಡಿಮೆಯಾಗಲು ಕಾರಣವಾಗಿವೆ. ಕುಡಿಯಲು ನೀರಿನ ಅಭಾವ ತಲೆದೋರಿ, ಪಶುಪಕ್ಷಿಗಳೂ ನದಿ ತೊರೆಗಳನ್ನು ಕಷ್ಟು ಪಟ್ಟು ಹುಡುಕುವಂತಾಗಿದೆ.
ನೀರಿನ ಮೂಲ ಬತ್ತಿ ಹೋಗಿ ಕಾಡಿನ ಜೀವಿಗಳಿಗೂ ಜಲಕ್ಷಾಮದ ಬಿಸಿ ತಟ್ಟುತ್ತಿದೆ. ಇಂತಹ ಸಂದರ್ಭದಲ್ಲಿ ನೀರಿನ ಯೋಜನೆಗಳನ್ನು ಯಶಸ್ವಿಯಾಗಿ ಮತ್ತು ಸಮರ್ಪಕವಾಗಿ ಜನರಿಗೆ ತಲುಪಿಸುವ ಜವಾಬ್ದಾರಿ ಹೊಂದಿದ್ದ ಜನರೇ ರಾಜ್ಯದಲ್ಲಿ ಕೆಲೆವೆಡೆ ಈ ಯೋಜನೆಯಲ್ಲಿ ಭ್ರಷ್ಟಾಚಾರವೆಸಗಿರುವುದು ಕಂಡುಬಂದಿದ್ದು, ಇನ್ನು ಕೆಲವೆಡೆ ಕಳಪೆ ಕಾಮಗಾರಿ ಕೈಗೊಂಡಿರುವುದು ಖೇದಕರ. ನಾಗರೀಕ ಸೇವಾ ನಿಯಮ ಉಲ್ಲಂಘನೆ ಮಾಡಿ ಕರ್ತವ್ಯಲೋಪ ಗೊಳಿಸಿದ ಆರೋಪದ ಮೇರೆಗೆ ಚನ್ನಪಟ್ಟಣದ ಅಧಿಕಾರಿಯೊಬ್ಬರು ಅಮಾನತ್ತುಗೊಂಡಿರುವುದು ತಡವಾಗಿ ಬೆಳಕಿಗೆ ಬಂದಿತು.
ಈ ಹಿಂದೆ ಮಹಾರಾಷ್ಟ್ರದ ಲಾತೂರ್ ಮತ್ತು ಇತರ ಜಿಲ್ಲೆಗಳಲ್ಲಿ ನೀರಿನ ಸಮಸ್ಯೆ ಉಂಟಾದಾಗ, ಇತರ ರಾಜ್ಯಗಳಿಂದ ರೈಲು ಮೂಲಕ ನೀರಿನ ಟ್ಯಾಂಕರ್ ಗಳನ್ನು ಕಳುಹಿಸಲಾಯಿತು. ಇಂತಹ ಪರಿಸ್ಥಿತಿ ಮತ್ತೆ ಬರಬಾರದು, ಇದಕ್ಕಾಗಿ ಪ್ರಧಾನಿ ಮೋದಿ ಈ ಯೋಜನೆಯಡಿಯಲ್ಲಿ ವೇಗವಾಗಿ ಕೆಲಸ ಮಾಡಲು ಒತ್ತು ನೀಡುತ್ತಿದ್ದಾರೆ. ದೇಶದ ಪ್ರತಿ ಹಳ್ಳಿಗೂ ೨೦೨೪ರೊಳಗೆ ನಿರಂತರ ಶುದ್ಧ ಕುಡಿಯುವ ನೀರು ಕಲ್ಪಿಸುವ ಮಹತ್ವಾಕಾಂಕ್ಷಿ ಜಲ್ ಜೀವನ್ ಮಿಷನ್‌ನ ಭಾಗವಾಗಿರುವ ಮೊಬೈಲ್ ಅಪ್ಲಿಕೇಷನ್‌ಗೆ ಪ್ರಧಾನಿ ನರೇಂದ್ರ ಮೋದಿ ೨೦೨೧ರ ಅಕ್ಟೋಬರ್‌ನಲ್ಲಿ ಚಾಲನೆ ನೀಡಿ, ಗ್ರಾಮೀಣ ಭಾಗದ
ಜನರಿಗೆ ಶುದ್ಧ ಕುಡಿಯುವ ನೀರು ಕಲ್ಪಿಸುವ ಕಾರ್ಯಕ್ಕೆ ತಂತ್ರeನದ ಸ್ಪರ್ಷ ನೀಡುವುದೇ ಆಪ್ ನ ಗುರಿಯಾಗಿದ್ದು, ಎಲ್ಲ ಮಾಹಿತಿ ಅಂಗೈಯಲ್ಲಿ
ಸಿಗಲಿದೆ.
ಇದುವರೆಗೆ ಒಟ್ಟು ೩.೨೭ ಕೋಟಿ ಗ್ರಾಮೀಣ ಕುಟುಂಬಗಳಿಗೆ ನೀರಿನ ಸಂಪರ್ಕ ನೀಡಲಾಗಿದೆ. ಈ ಯೋಜನೆಯಲ್ಲಿ ನೀರಿಲ್ಲದ ಪ್ರದೇಶಗಳಲ್ಲಿ ಪೈಪ್‌ಲೈನ್ ಮೂಲಕ ನೀರು ಸರಬರಾಜು ಮಾಡಲಾಗುತ್ತದೆ. ಹಾಗೆ ನೋಡಿದರೆ, ದೇಶದಲ್ಲಿ ಅನುಷ್ಠಾನಗೊಂಡಿರುವ ಎಲ್ಲ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕವು ಬಹಳೇ ಹಿಂದೆ ಉಳಿದಿದೆ ಅಥವಾ ಯೋಜನೆಯನ್ನು ಅನುಷ್ಠಾನಗೊಳಿಸಲು ಇನ್ನೂ ಬಹುದೂರದ ಹಾದಿ ಸವೆಸಬೇಕಿದೆ. ಪ್ರಧಾನಿ ಅವರ ಕನಸಾಗಿರುವ ಮನೆ ಮನೆಗೆ ಕುಡಿಯುವ ಶುದ್ದ ನೀರನ್ನು ಒದಗಿಸಬೇಕೆಂಬ ಜಲ ಜೀವನ್ ಮಿಷನ್ ಕಾಮಗಾರಿ ಸದ್ಯ ಕಳಪೆ ಕಾಮಗಾರಿಯಿದಾಗಿ ಕರ್ನಾಟಕದಲ್ಲಿ ಹಳ್ಳ ಹಿಡಿಯುತ್ತಿರುವ ಲಕ್ಷಣಗಳು ಗೋಚರಿಸುತ್ತಿವೆ.
ಧಾರವಾಡ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಕಳಪೆ ಕಾಮಗಾರಿ ಮತ್ತು ವ್ಯಾಪಕ ಭ್ರಷ್ಟಾಚಾರವಾಗಿದೆ ಎಂದು ಗ್ರಾಮಸ್ಥರ ಅಳಲಾಗಿದೆ. ಗ್ರಾಮಿಣ ಭಾಗದ
ಸಿಸಿ ರಸ್ತೆಗಳನ್ನು ಎಂದರಲ್ಲಿ ಅಗೆದು ಮರಳಿ ರಸ್ತೆ ದುರಸ್ತಿ ಮಾಡದೆ ಹಾಗೆ ಬಿಟ್ಟಿzರೆ ಇದರಿಂದ ಪರದಾಡುವಂತಾಗಿದೆ ಎಂದು ಜನಸಾಮಾನ್ಯರು
ಹಿಡಿಶಾಪವನ್ನ ಹಾಕುತ್ತಿದ್ದಾರೆ. ಧಾರವಾಡ ಜಿಲ್ಲೆಯಲ್ಲಿ ೧೧೦೦ ಕೋಟಿ ವೆಚ್ಚದಲ್ಲಿ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ಗಳು ನಡೆದಿವೆ. ಇನ್ನು ಕೆಲವೆಡೆ ಜೆಜೆಎಂ ಅಡಿಯಲ್ಲಿ ಗ್ರಾಮೀಣ ಭಾಗದಲ್ಲಿ ೬೦ಕ್ಕೂ ಹೆಚ್ಚು ಬೋರ್‌ವೆಲ್ ಗಳನ್ನು ಕೊರೆಸಲಾಗಿದೆ. ಅವುಗಳಿಗೆ ವಿದ್ಯುತ್ ಕನೆಕ್ಷನ್ ನೀಡದೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳ ಕರ್ತವ್ಯಲೋಪವೆಸಗಿರುವುದು ಕಂಡುಬಂದಿದೆ.
ಇದು ಒಂದು ಜಿಲ್ಲೆಯ ಪರಿಸ್ಥಿತಿಯಾದರೆ ರಾಜ್ಯದ ಒಟ್ಟು ಜಿಲ್ಲೆ, ತಾಲೂಕು ಮತ್ತು ಗ್ರಾಮೀಣ ಭಾಗದಲ್ಲಿನ ಬಡವರ, ನೀರಿನ ಮೂಲಗಳಿಂದ ಹತ್ತಾರು ಕಿ.ಮೀ. ದೂರವಿರುವ ಕುಟುಂಬಗಳ ಜೀವನದ ಕತೆಗಳೇನು ಎಂಬುದನ್ನು ನೆನೆಸಿಕೊಂಡರೇ ಭಯವಾಗುತ್ತದೆ. ಸಾವಿರಾರು ಕೋಟಿ ವೆಚ್ಚದ ಜಲಜೀವನ್ ಮಿಷನ್ ಯೋಜನೆಯೊಂದು ಸ್ಥಳಿಯಮಟ್ಟದ ಭ್ರಷ್ಟತೆ, ಕರ್ತವ್ಯಲೋಪದಿಂದ ಅದ್ಹೇಗೆ ಜನರಿಗೆ ಮಾರಕವಾಗಬಲ್ಲದು ಅಥವಾ ಯೋಜನೆಗಳು ಜನರಿಗೆ ತಲುಪದೇ ಭ್ರಷ್ಟಾಚಾರದಲ್ಲಿ ಅಂತ್ಯವಾಗುತ್ತವೆ ಎಂಬುದಕ್ಕೆ ಇವೆಲ್ಲ ಜ್ವಲಂತ ಉದಾಹರಣೆಗಳಾಗಿವೆ.
ಈ ಯೋಜನೆಯಲ್ಲಿ ಅಧಿಕಾರಿಗಳಿಂದ ಹಿಡಿದು ಗುತ್ತಿಗೆದಾರರು ಒಬ್ಬರ ಮೆಲೆ ಮತ್ತೊಬ್ಬರು ಹಾಕಿ, ವಿಳಂಬದ ಜೊತೆಗೆ ಕಳಪೆ ಕಾಮಗಾರಿಯನ್ನು
ಮಾಡುತ್ತಿzರೆ. ಹಾಗಾಗಿ, ಗ್ರಾಮೀಣಾಭಿವೃದ್ಧಿ ಸಚಿವರಿಂದ ಕಾಮಗಾರಿ ತನಿಖೆ ಮಾಡಿಸಲು ಸರ್ಕಾರ ಮುಂದಾಗಿದೆ ಎಂಬ ವರದಿಗಳು ಬರುತ್ತಿವೆ.
ಈ ವಿಚಾರದಲ್ಲಿ ಗೋವಾ, ತೆಲಂಗಾಣ, ಹರಿಯಾಣ, ಹಿಮಾಚಲ ಪ್ರದೇಶ, ಶೇ.೧೦೦ರಷ್ಟು ಯಶಸ್ವಿಯಾಗಿ ಜಾರಿಗೆ ತಂದಿವೆ. ಬಿಹಾರ, ಮಿಜೋರಾಂ, ಉತ್ತರಾಖಂಡ, ಲಡಾಖ್ ಮತ್ತು ಮಹರಾಷ್ಟ್ರ ರಾಜ್ಯಗಳು ಶೇ.೯೦ರಷ್ಟು ಸಾಧಿಸಿದ್ದರೆ, ಪಶ್ಚಿಮ ಬಂಗಾಳ, ಕೇರಳ ಮತ್ತು ಕರ್ನಾಟಕ ರಾಜ್ಯಗಳು ಅತ್ಯಂತ ಕಳಪೆ ಅನುಷ್ಠಾನಗೊಳಿಸಿವೆ ಎನ್ನಬಹುದು.
ಯಾವುದೇ ಯೋಜನೆಗಳನ್ನು ಕೈಗೆತ್ತಿಕೊಂಡಾಗ, ಹಲವು ಜನರು ಭಾಗಿದಾರರಾಗುವುದು ಸಹಜ. ಇಂಥ ಸಂದರ್ಭದಲ್ಲಿ ಕರ್ತವ್ಯಲೋಪವೆಸಗುವ ಅಧಿಕಾರಿಗಳನ್ನೋ, ವ್ಯಕ್ತಿಗಳನ್ನೋ ಗುರುತಿಸಿ ಕಠಿಣವಾಗಿ ಶಿಕ್ಷಿಸುವ ಕೆಲಸವಾಗಲಿ. ಇದನ್ನು ಬಿಟ್ಟು ಇಡೀ ಯೋಜನೆಯನ್ನೇ ದೂರುವುದು ಅಥವಾ ಇಂತಹ ನೆಪದಲ್ಲಿ ಯೋಜನೆಯನ್ನೇ ನಿಷ್ಟ್ರೀಯಗೊಳಿಸುವುದು ತರವಲ್ಲ. ಇತರೆ ರಾಜ್ಯಗಳಲ್ಲಿ ಆರಂಭಿಕ ಮೂಲಸೌಕರ್ಯಗಳ ಕೊರತೆಯಿದ್ದರೂ ಜಲ ಜೀವನ್ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದಾರೆ.
ವಿನಾಕಾರಣ ರಾಜಕೀಯ ಕಾರಣಗಳಿಂದಲೋ, ಕೆಲ ವ್ಯಕ್ತಿಗಳ ಲೋಪಗಳಿಂದಲೋ ಜನರಿಗೆ ಶಾಶ್ವತವಾಗಿ ಕುಡಿಯುವ ನೀರಿನ ಯೋಜನೆಯೊಂದನ್ನು ನಿಲ್ಲಿಸುವಂತಾಗಬಾರದು. ಸರಕಾರಗಳು ಬರುತ್ತವೆ- ಹೋಗುತ್ತವೆ, ಬದಲಾಗುತ್ತವೆ. ಆದರೆ ಜನೋಪಯೋಗಿ ಯೋಜನೆಗಳನ್ನು ನಿರಂತರವಾಗಿ ಮುಂದು ವರೆಸುವ ಜನಪರ ನೈತಿಕತೆಯನ್ನು ಆಳುವ ಸರ್ಕಾರಗಳು ತೋರಬೇಕಿದೆ. ಈ ಕುರಿತಂತೆ ಇಲಾಖೆಯ ಸಚಿವರು, ಉನ್ನತ ಅಧಿಕಾರಿಗಳು ಕೂಡಲೇ ಈ ಯೋಜನೆಯನ್ನು ರಾಜ್ಯಾದ್ಯಾಂತ ಶೀಘ್ರವಾಗಿ ಜಾರಿಗೊಳಿಸಿ ಯಶಸ್ವಿಗೊಳಿಸಬೇಕೆಂದು ರಾಜ್ಯದ ಜನರ ಹಕ್ಕೊತ್ತಾಯವಾಗಿದೆ.
೨೦೧೯ರ ಆಗಸ್ಟ್‌ನಲ್ಲಿ ಈ ಯೋಜನೆ ಆರಂಭಿಸಿದಾಗಿನಿಂದ ಕೋವಿಡ್-೧೯ ಸಾಂಕ್ರಾಮಿಕ, ಲಾಕ್‌ಡೌನ್‌ಗಳು ಮತ್ತು ಇತರೆ ಕಠಿಣ ಸವಾಲುಗಳ
ನಡುವೆಯೂ ೪.೦೭ಕೋಟಿ ಗ್ರಾಮೀಣ ಕುಟುಂಬಗಳಿಗೆ ಕೊಳಾಯಿ ನೀರಿನ ಸಂಪರ್ಕವನ್ನು ಒದಗಿಸಲಾಗಿದೆ. ಇನ್ನು ನೀರಿನ ಅಗತ್ಯವಿರುವ ಗ್ರಾಮೀಣ ಪ್ರದೇಶಗಳೂ ಸೇರಿದಂತೆ ನಾವು ಇನ್ನಷ್ಟು ವೇಗದಲ್ಲಿ ಈ ಯೋಜನೆಯನ್ನು ರಾಜ್ಯದ ಪ್ರತಿ ಮನೆ ಮನೆಗೂ ತೆಗೆದುಕೊಂಡು ಹೋಗುವ ಅಗತ್ಯವಿದೆ.
ಈ ಮೂಲಕ ಅಧಿಕಾರದಲ್ಲಿರುವ ಸರಕಾರ ತಾನು ಜನಪರ ಎಂಬುದನ್ನು ತೋರಿಸಲಿಕ್ಕಾದರೂ ಮನೆ ಮನೆಗೆ ಗಂಗೆ ಯೋಜನೆಯನ್ನು ಪೂರ್ಣಪ್ರಮಾಣ
ದಲ್ಲಿ ಅನುಷ್ಠಾನಗೊಳಿಸುವ ಹೊಣೆಗಾರಿಕೆ ಹೊಂದಿದೆ ಎಂಬುದನ್ನು ಅರಿತುಕೊಳ್ಳಬೇಕು.