ಸಿನಿಗನ್ನಡ
ತುಂಟರಗಾಳಿ
ಸ್ಟೈಲಿಷ್, ಗ್ಲಾಮರಸ್ ನಿರ್ದೇಶಕ ಅಂತಲೇ ಹೆಸರು ಮಾಡಿರೋ ಇಂದ್ರಜಿತ್ ಲಂಕೇಶ್ ಕಳೆದ ವಾರ ‘ಗೌರಿ’ ಚಿತ್ರದ ಮೂಲಕ ತಮ್ಮ ಮಗನನ್ನ ಚಿತ್ರರಂಗಕ್ಕೆ ಪರಿಚಯ ಮಾಡಿಸಿದ್ದಾರೆ. ಆದರೆ ತಮ್ಮ ಮಗ ಸಮರ್ಜಿತ್ ಅವರಿಗೆ ಹೊಂದುವ ಸಿನಿಮಾ ಮಾಡಿದ್ದಾರೆಯೇ ಅಂತ ಪ್ರಶ್ನೆ ಬಂದ್ರೆ ‘ಹೌದು’ ಅಂತ ಉತ್ತರ ಹೇಳೋದು ಸ್ವಲ್ಪ ಕಷ್ಟ.
ಹ್ಯಾಂಡ್ಸಮ್ ಲುಕ್ ಜತೆಗೆ ಫಿಸಿಕಲಿ ಫಿಟ್ ಆಗಿರೋ ಸಿಟಿ ಹುಡುಗನ ಇಮೇಜ್‌ನಲ್ಲಿ ಸಮರ್ಜಿತ್ ಲಂಕೇಶ್ ಸಮರ್ಥವಾಗಿ ಫಿಟ್ ಆಗಿದ್ದಾರೆ. ಆದರೆ ಈ ಪಾತ್ರಕ್ಕೆ ಹೊದಿಕೆಯಾಗಿ ಇರೋ ಹಳ್ಳಿ ಹುಡುಗನ ಪಾತ್ರ ಅವರಿಗೆ ಅಷ್ಟಾಗಿ ಹೊಂದಿಕೆ ಆಗಿಲ್ಲ. ಕೆಲವೊಂದು ಕಡೆ ‘ನಮ್ಮ ತವ, ನಿಮ್ ತವ’ ಅನ್ನೋ ಡೈಲಾಗ್‌ಗಳು ಇರೋ ಕಡೆ ಅತ್ತ ಹಳ್ಳಿ ನೇಚರ್‌ನ ಹುಡುಗ ಆಗೋ ತವಕ ಇದ್ದರೂ ಸಮರ್ಜಿತ್ ಅವರ ಬೇಸಿಕ್ ನೇಚರ್‌ನಿಂದಾಗಿ ಅದು ಸರಿಯಾಗಿ ಬ್ಲೆಂಡ್ ಆಗಿಲ್ಲ. ಹಾಗಾಗಿ ಸಿನಿಮಾ ನೋಡೋ ಪ್ರೇಕ್ಷಕನಿಗೆ ‘ಇದು ಇಂಗ್ಲಿಷ್ ಇಳಿಯೋ ಗಂಟಲಲ್ಲಿ ಹಳ್ಳಿ ಕನ್ನಡ ತುರುಕಿದ ಹಾಗೆ’ ಅಂತ ಅನ್ನಿಸಿದರೆ ತಪ್ಪೇನಿಲ್ಲ.
ಇನ್ನು ಕಥೆ ವಿಷಯಕ್ಕೆ ಬಂದರೆ ಮಗನಿಗೆ ಮೊದಲ ಚಿತ್ರ ಮಾಡುವಾಗ ಬಾಲಿವುಡ್‌ನ ಹೃತಿಕ್ ರೋಷನ್‌ನಂತೆ ಹ್ಯಾಂಡ್ಸಮ್ ಆಗಿರೋ ತಮ್ಮ ಮಗನಿಗೆ ಹೃತಿಕ್ ರೋಷನ್‌ನ ಮೊದಲ ಸಿನಿಮಾ ‘ಕಹೋ ನಾ ಪ್ಯಾರ್ ಹೈ’ ಥರನೇ ಸಿನಿಮಾ ಮಾಡಬೇಕು ಅನ್ನೋ ಹುಮ್ಮಸ್ಸಿನಲ್ಲಿ ಅದೇ ಧಾಟಿಯ ಡಬಲ್ ಆಕ್ಟಿಂಗ್‌ನ ಡಬಲ್ ಡೋಸ್ ಅನ್ನು ಮಗನ ಮೇಲೆ ಹೇರಿದ್ದಾರೆ ಇಂದ್ರಜಿತ್. ಹೊಸ ನಾಯಕನನ್ನು ಪರಿಚಯ ಮಾಡಿಸೋಕೆ ಅಂತ ೧೫-೨೦ ವರ್ಷ ಹಿಂದೆ ಇಂಥ ಕತೆ ಇರೋ ಸಿನಿಮಾಗಳನ್ನು ಮಾಡ್ತಾ ಇದ್ದಿದ್ದನ್ನ ನಾವು ನೋಡಿದ್ದೇವೆ. ಆದರೆ ಈಗ ಈ ರೀತಿಯ ಕಥೆಗಳು ಎಷ್ಟು ಸೂಕ್ತ ಅನ್ನೋ ಪ್ರಶ್ನೆ ಪ್ರೇಕ್ಷಕನಿಗೆ ಬರದೇ ಇರಲ್ಲ. ಹಾಗಾಗಿ ಇದೊಂಥರಾ ಗಣೇಶನ್ನ ಮಾಡೋಕೆ ಹೋಗಿ ಅವರಮ್ಮನ್ನ ಅಂದ್ರೆ ‘ಗೌರಿ’ನ ಮಾಡಿದ್ದಾರಾ ಇಂದ್ರಜಿತ್ ಲಂಕೇಶ್ ಅನ್ನಿಸಿದರೆ ಅದರಲ್ಲಿ ತಪ್ಪೇನಿಲ್ಲ.
ಒಟ್ಟಾರೆ ಹೇಳೋದಾದ್ರೆ, ‘ಗೌರಿ’ ಚಿತ್ರದಲ್ಲಿ ಒಂದು ಕಮರ್ಷಿಯಲ್ ಚಿತ್ರಕ್ಕೆ ಬೇಕಾಗಿರೋ ‘ಗ್ಲಾಮರಸ’ ಬೇಕಾದಷ್ಟಿದ್ದರೂ ಇಂದಿನ ಪ್ರೇಕ್ಷಕರಿಗೆ ಬೇಕಾದ ಮನರಂಜನೆಯ ‘ರಾಮರಸ’ದ ಕಿಕ್ ಕಮ್ಮಿನೇ.
ಲೂಸ್ ಟಾಕ್: ಎಚ್.ಡಿ. ಕುಮಾರಸ್ವಾಮಿ
ಏನ್ ಸರ್, ಸಿದ್ರಾಮಯ್ಯ ಅವರನ್ನ ತಗ್ಲಾಕೋಕೋಗಿ ನೀವೇ ಎಡವಟ್ಟು ಮಾಡ್ಕೊಂಡ ಹಾಗಿದೆ?
– ಏನ್ ಮಾಡೋದು, ಸ್ಕೂಲಲ್ಲಿ ಮೇಷ್ಟ್ರು ನ್ಯೂಟ ಥರ್ಡ್ ಲಾ ಪಾಠ ಮಾಡುವಾಗ ನಾನು ಆಬ್ಸೆಂಟ್ ಆಗಿದ್ದೆ.
ಓಹ್ ಹಂಗೆ. ಸರಿ, ಈಗ ನಿಮ್ಮ ಪ್ರಜ್ವಲ್ ಕೂಡಾ ತಪ್ಪಿತಸ್ಥ ಅಂತ ಪ್ರೂವ್ ಆಗಿರೋದ್ರ ಬಗ್ಗೆ ಮಾತುಗಳು ಕೇಳ್ತಾ ಇವೆಯಲ್ಲ?
– ಅದು ಪ್ರ‘ಜ್ವಲಂತ’ ಸಮಸ್ಯೆ. ಅದರ ಬಗ್ಗೆ ನಾನು ಏನೂ ಮಾತಾಡಲ್ಲ.
ಕೇಂದ್ರ ಮಂತ್ರಿ ಆದ್ರೂ ಅಲ್ಲಿ ಕೆಲಸ ನೋಡೋದ್ ಬಿಟ್ಟು, ಬರೀ ರಾಜ್ಯದ ವಿಷಯದ ಜಾಸ್ತಿ ಟೈಮ್‌ಪಾಸ್ ಮಾಡ್ತಾ ಇದ್ದೀರಲ್ವಾ?
– ‘ಕೇಂದ್ರ’ನೋ, ರಾಜ್ಯನೋ, ಒಟ್ನಲ್ಲಿ ನಾನು ‘ಸೆಂಟರ್’ ಆಫ್ ಅಟ್ರಾಕ್ಷನ್ ಆಗಿರ್ಬೇಕು ಅನ್ನೋದಷ್ಟೇ ನನ್ನ ಉದ್ದೇಶ.
ನನ್ನನ್ನ ಅರೆ ಮಾಡೋಕೆ ನೂರ್ ಜನ ಸಿದ್ರಾಮಯ್ಯಗಳು ಬರ್ಬೇಕು ಅಂತ ಹೇಳಿದ್ದೀರಲ್ಲ, ನೀವು ಕುಮಾರಸ್ವಾಮಿನಾ, ಇಲ್ಲಾ ರಜನೀಕಾಂತಾ?
– ಎರಡೂ ಅಲ್ಲ, ‘ಜೋಕು’ಮಾರಸ್ವಾಮಿ ಅಂತಾರೆ ನನ್ನ ಕಂಡರೆ ಆಗದವರು..
ಸುಮ್ನೆ ಇವೆಲ್ಲ ಬಿಟ್ಟು ಮೊದಲಿನ್ ಥರ ಯಾಕೆ ಸಿನಿಮಾ ನಿರ್ಮಾಣ ಮಾಡ್ಕೊಂಡ್ ಇರಬಾರದು ನೀವು?
– ಅದನ್ನೂ ಮಾಡ್ತೀನಿ ರೀ. ಆದ್ರೆ ಚಿತ್ರಮಂದಿರಕ್ಕೆ ಜನ ಬರ್ತಾ ಇಲ್ಲ. ಸೋ, ನಾನ್ ಸಿನಿಮಾ ಮಾಡಿದರೂ ಪೆನ್‌ಡ್ರೈವ ರಿಲೀಸ್ ಮಾಡ್ತೀನಿ.
(ಕಾಲ್ಪನಿಕ ಸಂದರ್ಶನ)
ನೆಟ್ ಪಿಕ್ಸ್
ಖೇಮು ಜಟಕಾಗಾಡಿ ಓಡಿಸ್ತಾ ಜೀವನ ಮಾಡ್ತಾ ಇದ್ದ. ಒಂದಿನ ಅವನು ಹೈವೇನಲ್ಲಿ ಹೋಗುವಾಗ ಅವನ ಗಾಡಿಗೆ ಕಾರೊಂದು ಬಂದು ಗುದ್ದಿ, ಖೇಮು ಗಂಭೀರವಾಗಿ ಗಾಯಗೊಂಡ, ಅವನ ಜಟಕಾದ ಕುದುರೆ ಸತ್ತುಹೋಯಿತು. ಖೇಮುಗೆ ಇದರಿಂದ ತುಂಬಾ ಲಾಸ್ ಆಯ್ತು. ಅದಕ್ಕೆ ಅವನು ಆಸ್ಪತ್ರೆ ಸೇರಿ, ಹುಷಾರಾದ ಮೇಲೆ ಕೋರ್ಟ್‌ಗೆ ಮೊರೆಹೋದ- ‘ನನ್ನ ಗಾಡಿಗೆ ಗುದ್ದಿ ಈ ಕಾರಿನವನು ನಂಗೆ ಲಾಸ್ ಮಾಡಿದ್ದಾನೆ, ನನ್ನ ಆಸ್ಪತ್ರೆ ಬಿಲ್ ಕೂಡ ಸಿಕ್ಕಾಪಟ್ಟೆ
ಆಗಿದೆ, ಹಾಗಾಗಿ ನಂಗೆ ಪರಿಹಾರ ಕೊಡಿಸಿ’ ಅಂತ. ಕೋರ್ಟ್‌ನಲ್ಲಿ ವಿಚಾರಣೆ ಶುರುವಾಯ್ತು. ಕೇಸಿನಲ್ಲಿ ಇನ್‌ವಾಲ್ವ ಆಗಿದ್ದ ಪೊಲೀಸ್ ಇಪೆಕ್ಟರ್ ಕೋರ್ಟಿನಲ್ಲಿ ಬಂದು, ಖೇಮು ಸುಳ್ಳು ಹೇಳ್ತಾ ಇzನೆ. ಆಕ್ಸಿಡೆಂಟ್ ಆಗಿ ಬಿದ್ದಿದ್ದಾಗ ನಾನೇ ಹೋಗಿ ಅವನನ್ನು ‘ಆರ್ ಯೂ ಓಕೆ?’ ಅಂತ ಕೇಳಿದೆ.
ಆಗ ಅವನು ‘ಐ ಆಮ್ -ನ್’ ಅಂತ ಹೇಳಿದ್ದ. ಈಗ ಮಾತ್ರ ಹಣಕ್ಕಾಗಿ ಅವನು ಸುಳ್ಳು ಹೇಳ್ತಾ ಇದ್ದಾನೆ ಅಂತ ವಾದಿಸಿದ. ಅದಕ್ಕೆ ಖೇಮು, ‘ಅ ಸಾರ್ ನನ್ನ ಕುದುರೆ…’ ಅಂತ ಹೇಳೋಕೆ ಹೊರಟ ತಕ್ಷಣ ಆಪೋಸಿಟ್ ಲಾಯರ್ ಅಥವಾ ಇನ್ಸ್‌ಪೆಕ್ಟರ್ ‘ಬಾಯ್ ಮುಚ್ಚು’ ಅಂತ ಬೈತಾ ಇದ್ರು. ಹಾಗಾಗಿ ಖೇಮು ಎಷ್ಟೇ ಕಷ್ಟಪಟ್ಟರೂ ಹೇಳಬೇಕಾದ್ದನ್ನು ಹೇಳೋಕಾಗಲಿಲ್ಲ. ಆಗ ಅವನ ಪಾಡು ನೋಡಿದ ಜಡ್ಜ್, ‘ಅವನೇನೋ ಹೇಳ್ತಾ ಇದ್ದಾನೆ, ಹೇಳೋಕ್ ಬಿಡಿ’ ಅಂದ್ರು.
ಆಗ ಖೇಮು ಹೇಳೋಕ್ ಶುರುಮಾಡಿದ- “ಮಹಾಸ್ವಾಮಿ, ನಾನು ಆಕ್ಸಿಡೆಂಟ್ ಆಗಿ ಬಿದ್ದಿದ್ದೆ. ನಾನು ಬದುಕ್ತೀನಿ ಅನ್ನೋ ನಂಬಿಕೆನೂ ನನಗಿರಲಿಲ್ಲ. ಆಗಲೋ ಈಗಲೋ ಸಾಯೋ ಥರ ಇದ್ದೆ. ಆ ಸಮಯದಲ್ಲಿ ಈ ಇಪೆಕ್ಟರ್ ಅಲ್ಲಿಗೆ ಬಂದ್ರು. ಮೊದಲು ನನ್ನ ಕುದುರೆ ಹತ್ರ ಹೋಗಿ, ಅದನ್ನ ‘ಆರ್ ಯೂ ಓಕೆ?’ ಅಂತ ಮಾತಾಡಿಸಿದ್ರು. ಅದು ಅಡಲಿಲ್ಲ. ಆದ್ರೆ ಅದು ಉಸಿರಾಡುತ್ತಿತ್ತು. ಮೈ ತುಂಬಾ ಗಾಯ ಆಗಿದ್ವು. ತುಂಬಾ ನರಳಾಡ್ತಾ ಇತ್ತು. ಅದನ್ನು ನೋಡಿದ ಈ ಇಪೆಕ್ಟರ್, ‘ನೀನು ಬದುಕಿದ್ದು ಕಷ್ಟ ಪಡೋಕ್ಕಿಂತ ಸಾಯೋದೇ ಮೇಲು’ ಅಂತ ಅದಕ್ಕೆ ಗುಂಡು ಹಾರಿಸಿ ಕೊಂದರು. ಆ ನಂತರ ನನ್ನತ್ರ
ಬಂದು ‘ಆರ್ ಯೂ ಓಕೆ?’ ಅಂತ ಕೇಳಿದ್ರು. ನೀವೇ ಹೇಳಿ ಮಹಾಸ್ವಾಮಿ ಆ ಸಮಯದಲ್ಲಿ ನನಗೆ ‘ಐ ಆಮ್ ಓಕೆ’ ಅಂತ ಹೇಳದೆ ಬೇರೆ ದಾರಿ ಇತ್ತಾ?”.
ಲೈನ್ ಮ್ಯಾನ್
ಅವ್ನು- ಮಗಾ, ಅವ್ಳು ನನ್ ಪ್ರಪೋಸಲ್ ರಿಜಲ್ಟ್ ಮಾಡಿಬಿಟ್ಲು. ಹೇಗಾದ್ರೂ ಹೆಲ್ಪ್ ಮಾಡೋ
ಇವ್ನು- ಸಾರಿ, ನಿಮ್ಮಿಬ್ಬರ ‘ಇಂಟರ್ನಲ್ ಅಫರ‍್ಸ್’ನಲ್ಲಿ ನಾನು ತಲೆಹಾಕಲ್ಲ.
‘ಒಳ್ಳೆ’ ‘ಟೀ’ ಮಾಡೋನು ನಮ್ಮ ದೇಶದ ‘ಆಸ್ತಿ’
’’Proper-tea’.
‘ಲಿವಿಂಗ್ ಟುಗೆದರ್’ನಲ್ಲಿರೋ ಸ್ನೇಹಿತರನ್ನು ನೋಡಿ ನಾನೂ ಮದ್ವೆ ಆಗಲ್ಲ ಅಂತ ಡಿಸೈಡ್ ಮಾಡೋದು
‘ಸಹ’ವಾಸ’ ದೋಷ.
ಗಾಂಧಿನಗರದ ದುರಂತ
ಕೆಲವು ಸಿನಿಮಾಗಳು ಬಿಡುಗಡೆ ಆಗಿದ್ದು ಗೊತ್ತಾಗೋದು, ಸಕ್ಸಸ್ ಮೀಟ್ ಕರೆದಾಗಲೇ.
ಸೋಡಾಬುಡ್ಡಿಗಳ ಸಮಸ್ಯೆ ಹಾಕ್ಕೊಂಡ್ರೆ ಪ್ರಪಂಚಕ್ಕೆ ಅವರು ಚೆನ್ನಾಗ್ ಕಾಣಲ್ಲ
ತೆಗೆದ್ರೆ ಅವರಿಗೆ ಪ್ರಪಂಚ ಚೆನ್ನಾಗ್ ಕಾಣಲ್ಲ
ಹಳೆಯ ಕಾಲದ ನಾಣ್ಯಗಳನ್ನು ಸಂಗ್ರಹ ಮಾಡುವ ಹವ್ಯಾಸ
‘ ಚಿಲ್ರೆ’ ಶೋಕಿ
ಕಟಿಂಗ್ ಶಾಪ್‌ನಲ್ಲಿ ನೆಲದ ಮೇಲೆ ಬಿದ್ದ ಕತ್ತರಿಸಿದ ಕೂದಲ ರಾಶಿ
‘ಕೂದಲ’ ಸಂಗಮ
ಆಸ್ಪತ್ರೆಗೆ ಹೋಗದೇ ಮನೆಯ ಆಗುವ ಹೆರಿಗೆ
ಹೋಮ್ ‘ಡೆಲಿವರಿ’
ಪೊಲೀಸರೇ ಹೆಚ್ಚಾಗಿ ಇರುವ ಜಾಗ
ಪೊಲೀಸ್ ‘ಬೆಲ್ಟ್’
ಎಲೆಕ್ಷನ್ ಹಿಂದಿನ ದಿನ ಹಾಕಿಸುವ ಊಟ
‘ವೋಟ್’ ಮೀಲ್ಸ್