Friday, 20th September 2024

ನ್ಯಾಯದಾನದ ವೇಗ ಹೆಚ್ಚುವುದೇ ?

ವಿಶ್ಲೇಷಣೆ

ಡಾ.ಜಗದೀಶ್ ಮಾನೆ

ಸಮನ್ಸ್ ಕೊಡುವುದಕ್ಕೆ ಮನೆ ಬಾಗಿಲುಗಳಿಗೆ ಪೊಲೀಸರೇ ಬರಬೇಕಂತಿಲ್ಲ, ಬದಲಿಗೆ ವಾಟ್ಸಪ್, ಮೆಸೇಜ್ ಅಥವಾ ಇ-ಮೇಲ್ ಮೂಲಕ ಡಿಜಿಟಲ್ ರೂಪದಲ್ಲಿ ಸಮನ್ಸ್ ಕೊಡುವುದಕ್ಕೆ ಇದೀಗ ಸಾಧ್ಯವಿದೆ. ಮತ್ತು ಡಿಜಿಟಲ್ ಸಾಕ್ಷಿ ಆಧಾರಗಳನ್ನು ಸಾಕ್ಷಿಗಳಾಗಿ ಪರಿವರ್ತಿಸುವ ಅವಕಾಶವನ್ನು ಈ ನೂತನ ಕಾಯ್ದೆಗಳು ನೀಡಿವೆ.

ಕಳೆದ ಆಗ ೧೧- ೨೦೨೩ ರಂದು ಲೋಕಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ‘ಭಾರತೀಯ ನ್ಯಾಯ ಸಂಹಿತೆ’, ‘ಭಾರತೀಯ ನಾಗರಿಕ
ಸುರಕ್ಷಾ ಸಂಹಿತೆ’ ಹಾಗೂ ‘ಭಾರತೀಯ ಸಾಕ್ಷಮಸೂದೆ- ೨೦೨೩’ ಈ ಮೂರು ನೂತನ ಬಿಲ್ ಗಳನ್ನು ಮಂಡಿಸಿದ್ದರು. ಬಳಿಕ ಅದು ಲೋಕಸಭೆ ಹಾಗೂ ರಾಜ್ಯಸಭೆಗಳೆರಡರಲ್ಲೂ ಅಂಗೀಕಾರಗೊಂಡು ರಾಷ್ಟ್ರಪತಿಗಳ ಅಂಕಿತದೊಂದಿಗೆ ಆ ಮಸೂದೆ ಕಾಯ್ದೆಗಳಾಗಿ ಬದಲಾಗಿವೆ. ಭಾರತವೀಗ ೧೪೦  ಕೋಟಿಗಿಂತಲೂ ಅಧಿಕ ಜನಸಂಖ್ಯೆಯನ್ನು ಹೊಂದಿದ ರಾಷ್ಟ್ರ. ಇಂತಹ ದೊಡ್ಡ ದೇಶದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಿನ ಪ್ರಮಾಣದಲ್ಲಿ ನಡೆಯುವುದು ಸಹಜ.

ಹೀಗಿರುವಾಗ ನೂರು ವರ್ಷಗಳ ಹಿಂದಿನ ಕಾನೂನುಗಳನ್ನು ಇಟ್ಟುಕೊಂಡು ಇಂದಿನ ಅಪರಾಧಗಳನ್ನು ನಿಯಂತ್ರಿಸುವುದು ಕಷ್ಟದ ಕೆಲಸ. ಈ ಹಿಂದೆ
ಬ್ರಿಟಿಷರು ತಮ್ಮ ಅನುಕೂಲಕ್ಕೆ ತಕ್ಕಂತೆ ಕಾನೂನುಗಳನ್ನು ರಚಿಸಿಕೊಂಡಿದ್ದನ್ನು ಬವು. ಅದರಲ್ಲಿನ ಬಹುತೇಕ ಕಾನೂನುಗಳು ಇಂದಿನ ಭಾರತಕ್ಕೆ
ಅಪ್ರಸ್ತುತವೆನಿಸುತ್ತವೆ. ಆದ್ದರಿಂದ ಕೆಲವು ಬದಲಾವಣೆ ಆಗಬೇಕಂತ ಸುಪ್ರೀಂಕೋರ್ಟ್ ಹಲವು ಬಾರಿ ಕೇಂದ್ರಸರಕಾರಕ್ಕೆ ಸೂಚನೆ ನೀಡಿತ್ತು. ಇದೀಗ ಬ್ರಿಟಿಷ್ ಕಾಲದ ನ್ಯಾಯ ವ್ಯವಸ್ಥೆಯಲ್ಲಿ ಬದಲಾವಣೆಯೊಂದಿಗೆ ಇಂದಿನ ಅಗತ್ಯಗಳು, ಹಾಗೂ ಆಧುನಿಕರಣವನ್ನು ಗಮನದಲ್ಲಿಟ್ಟುಕೊಂಡು ಇದೇ ಜೂನ್ ೩೦ರ ಮಧ್ಯರಾತ್ರಿ ಯಿಂದ ಜಾರಿಗೊಳಿಸಲಾಗಿದೆ.

ಈ ಕಾಯ್ದೆಯ ಪ್ರಕಾರ ಇನ್ನು ಮುಂದೆ ಭಾರತದಲ್ಲಿ ಬ್ರಿಟಿಷ್ ಕಾಲದ ೧೮೬೦ರ ‘ಇಂಡಿಯನ್ ಪೀನಲ್ ಕೋಡ್’, ೧೮೭೨ರ ‘ಇಂಡಿಯನ್ ಎವಿಡೆ ಆಕ್ಟ್’ ಹಾಗೂ ೧೯೭೩ರ ‘ಕ್ರಿಮಿನಲ್ ಪ್ರೊಸೀಜರ್ ಕೋಡ್’ ಗಳಿರುವುದಿಲ್ಲ. ಬದಲಿಗೆ ಇಂಡಿಯನ್ ಪಿನಲ್ ಕೋಡ್ ಸ್ಥಾನವನ್ನು ‘ಭಾರತೀಯ ನ್ಯಾಯ ಸಂಹಿತಾ’
ವಹಿಸಿಕೊಳ್ಳುತ್ತದೆ. ಸಿಆರ್‌ಪಿಸಿಯ ಜಾಗಕ್ಕೆ ‘ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ’ ಹಾಗೂ ಇಂಡಿಯನ್ ಎವಿಡೆ ಆಕ್ಟ್ ಬದಲಿಗೆ ‘ಭಾರತೀಯ ಸಾಕ್ಷ್ಯ ಅಧಿನಿಯಮ’ ಜಾರಿಗೆ ತರಲಾಗಿದೆ. ಮೊದಲಿಗೆ ಇಂಡಿಯನ್ ಪಿನಲ್ ಕೋಡ್ ನಲ್ಲಿ ೨೩ ಅಧ್ಯಾಯಗಳು ೫೧೧ ಸೆಕ್ಷನ್‌ಗಳಿದ್ದವು.

ಇದೀಗ ನೂತನ ಭಾರತೀಯ ನ್ಯಾಯ ಸಂಹಿತೆಯಲ್ಲಿ ಒಟ್ಟು ೩೫೮ ಸೆಕ್ಷನ್‌ಗಳಿವೆ, ಇದರಲ್ಲಿ ೨೦ ಹೊಸ ಅಪರಾಧಗಳನ್ನು ಸೇರ್ಪಡೆ ಮಾಡಿದ್ದಾರೆ. ಇದರಲ್ಲಿ ೩೩ ಕೃತ್ಯಗಳಿಗೆ ಜೈಲುಶಿಕ್ಷೆ ವಿಧಿಸುವುದಕ್ಕೆ ಹೊಸದಾಗಿ ಅವಕಾಶವನ್ನು ಕಲ್ಪಿಸಿದ್ದಾರೆ. ಇದು ಡಿಜಿಟಲ್ ಯುಗ ಆಗಿರುವುದರಿಂದ ಸಾಕಷ್ಟು ಅಪರಾಧಗಳು ಕಂಪ್ಯೂಟರ್ ಆನ್ ಲೈನ್ ಮೂಲಕವೇ ನಡೆಯುತ್ತಿರುತ್ತವೆ. ಈ ಹಂತದಲ್ಲಿ ಡಿಜಿಟಲ್ ಸಾಕ್ಷಾಧಾರಗಳನ್ನು ನಾವು ಪರಿಗಣನೆಗೆ ತೆಗೆದುಕೊಳ್ಳುವುದನ್ನು ಕಲಿಯಬೇಕು. ಇಲ್ಲದಿದ್ದರೆ ತನಿಖಾ ಅಧಿಕಾರಿಗಳು, ನ್ಯಾಯದಾನ ಮಾಡುವವರು ಡಿಜಿಟಲ್ ಬಗ್ಗೆ ಅರ್ಥ ಮಾಡಿಕೊಳ್ಳುವುದಕ್ಕೆ ಸಾಧ್ಯವಾಗದಿದ್ದರೆ ಸರಿಯಾದ ನ್ಯಾಯ ಒದಗಿಸಲು ಕಷ್ಟಸಾಧ್ಯವಾಗುತ್ತದೆ.

ಅಪರಾಧಗಳು ಎಲ್ಲಿ ನಡೆದಿದೆಯೋ ಅಲ್ಲಿಗೆ ಹೋಗಿ ಕಂಪ್ಲೇಟ್ ಕಾಪಿ ಬರೆದುಕೊಡಿ ಅಂತ ಕೇಳುವುದನ್ನು ನೋಡಿದರೆ, ನಮ್ಮ ಕಾನೂನು ವ್ಯವಸ್ಥೆ ಎಷ್ಟರಮಟ್ಟಿಗೆ ಹಿಂದುಳಿದಿದೆ ಎಂಬದು ಅರಿವಾಗುತ್ತದೆ. ಮತ್ತು ಮಹಿಳೆ ಹಾಗೂ ಮಕ್ಕಳ ಮೇಲಿನ ದೌರ್ಜನ್ಯಗಳು, ಡಿಜಿಟಲ್ ಅ-ಗಳು ಹಾಗೂ ವಂಚನೆ ಪ್ರಕರಣಗಳಿಗೆ ಸಂಬಂಧ ಪಟ್ಟಂತೆ ಕಾನೂನುಗಳಲ್ಲಿ ಸಾಕಷ್ಟು ಬದಲಾವಣೆಗಳ ಅಗತ್ಯತೆ ಕಂಡು ಬರುತ್ತಿತ್ತು. ಇದೆಲ್ಲಕ್ಕಿಂತ ಹೆಚ್ಚಾಗಿ ನಮ್ಮ ನ್ಯಾಯಾಲಯ ದಲ್ಲಿನ ಪೆಂಡಿಂಗ್ ಕೇಸ್‌ಗಳು ಗಾಬರಿಗೊಳಿಸುವ ಮಟ್ಟದಲ್ಲಿದ್ದುದ್ದನ್ನ ನೋಡಿದರೆ ಆಶ್ಚರ್ಯವಾಗುತ್ತದೆ. ನ್ಯಾಯದಾನ ವಿಳಂಬವಾದಾಗ ಅದು ಸಾಕಷ್ಟು ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಈ ನಿಟ್ಟಿನಲ್ಲಿ ಭಾರತದ ಕಾನೂನುಗಳಲ್ಲಿ ಮಹತ್ತರ ಬದಲಾವಣೆ ತರಬೆಕೆನ್ನುವ ಪ್ರಯತ್ನ ಸಾಕಷ್ಟು ವರ್ಷಗಳಿಂದ ನಡೆದೇ ಇತ್ತು. ನೂತನವಾಗಿ ಜಾರಿಯಾದ ಸೆಕ್ಷನ್‌ಗಳ ಪ್ರಕಾರ ಈ ಹಿಂದೆ ಕೊಲೆ ಕೇಸುಗಳನ್ನು ಐಪಿಸಿ ಸೆಕ್ಷನ್ ೩೦೨ರ ಅಡಿಯಲ್ಲಿ ದಾಖಲಿಸಲಾಗುತ್ತಿತ್ತು. ಅದನ್ನೀಗ ಭಾರತೀಯ ನ್ಯಾಯ ಸಂಹಿತೆ ಇದಕ್ಕೆ ೧೦೧ನ್ನು ನಿಗದಿಮಾಡಿದೆ. ಹಾಗೆ ಐಪಿಸಿ ಸೆಕ್ಷನ್ ೩೭೫ ಇದು ಅತ್ಯಾಚಾರದ ಬಗ್ಗೆ ಹೇಳುತ್ತಿತ್ತು, ಇದಕ್ಕೀಗ ನೂತನ ಭಾರತಿಯ
ಸಂಹಿತಾ ಸೆಕ್ಷನ್-೬೩ ನಿಗದಿ ಮಾಡಲಾಗಿದೆ. ಅದೇ ರೀತಿ ಕ್ಲಾಜ-೭೦, ಸಬ್ ಕ್ಲಾಜ್-೨ ಅಪ್ರಾಪ್ತೆಯರ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ವಿಧಿಸುವ ಶಿಕ್ಷೆಯ ಬಗ್ಗೆ ಹೇಳುತ್ತದೆ. ಈ ಅಪರಾಧಕ್ಕೆ ಮರಣದಂಡನೆ ವಿಧಿಸುವ ಅವಕಾಶವನ್ನು ಭಾರತೀಯ ನ್ಯಾಯಸಂಹಿತೆ ಕ್ಲಾಜ- ೭೦ ಸಬ್ ಕ್ಲಾಜ-೨ ಅನ್ವಯಿಸುತ್ತದೆ. ಹೀಗೆ ಕಾನೂನುಗಳನ್ನು ತಿಳಿಸುವ ಅನೇಕ ಸೆಕ್ಷನ್‌ಗಳು ಮತ್ತು ಶಿಕ್ಷೆಯ ಪ್ರಮಾಣದಲ್ಲಿ ಒಂದಿಷ್ಟು ಬದಲಾವಣೆಯನ್ನು ತರಲಾಗಿದೆ.

ಇದರಲ್ಲಿ ಕ್ಲಾಜ-೬೯ ಲೈಂಗಿಕ ವಂಚನೆಗಳ ಬಗ್ಗೆ ಹೇಳುತ್ತದೆ. ಮದುವೆ ಆಗುವುದಾಗಿ ಹೇಳಿ ಒಪ್ಪಿತ ಲೈಂಗಿಕ ಸಂಪರ್ಕ ನಡೆಸಿದ ನಂತರ ವಂಚಿಸುವ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಅತ್ಯಾಚಾರ ಪ್ರಕರಣಗಳೆ ದಾಖಲಾಗುತ್ತಿದ್ದವು. ಅಲ್ಲಿ ಒಪ್ಪಿತ ಸಂದರ್ಭವಿತ್ತು ಎಂಬ ಕಾರಣಕ್ಕೆ ಬಹಳಷ್ಟು ಬಾರಿ ಆ ಪ್ರಕರಣಗಳು ಮಹತ್ವವನ್ನೇ ಕಳೆದುಕೊಳ್ಳುತ್ತಿದ್ದವು. ಅಲ್ಲಿ ವಂಚಿತ ಮಹಿಳೆಯರಿಗೆ ನ್ಯಾಯ ಸಿಗದೆ ಕೇವಲ ವಂಚನೆ ಪ್ರಕರಣ ಮಾತ್ರ ಅಲ್ಲಿ ದಾಖಲಾಗು
ತ್ತಿತ್ತು.

ಇದೀಗ ಇಂತಹ ಲೈಂಗಿಕ ವಂಚನೆಗಳನ್ನು ಕ್ಲಾಜ- ೬೯ ಅಡಿಯಲ್ಲಿ ಶಿಕ್ಷಾರ್ಹಗೊಳಿಸಲಾಗಿದೆ. ಉದ್ಯೋಗ ಕೇಂದ್ರಗಳಲ್ಲಿ ಕೆಲಸ ಮತ್ತು ಪ್ರಮೋಷನ್ ಕೊಡಿಸುವ ಆಮೀಷದಿಂದ ನಡೆಸುವ ಲೈಂಗಿಕ ದೌರ್ಜನ್ಯಗಳು, ಮದುವೆಯಾಗುವುದಾಗಿ ನಂಬಿಸಿ ಕೈಗೊಳ್ಳುವ ಲೈಂಗಿಕ ವಂಚನೆಗಳು, ಗುರುತು ಮರೆ ಮಾಚಿ ಪ್ರೀತಿಯ ಹೆಸರಲ್ಲಿ ಮಾಡುವ ಮೋಸಗಳನ್ನು ಶಿಕ್ಷಾರ್ಹ ಅಪರಾಧ ಮತ್ತು ೧೦ ವರ್ಷ ಜೈಲುಶಿಕ್ಷೆ ಹಾಗೂ ದಂಡ ವಿಧಿಸುವುದಕ್ಕೆ ಈ ಕಾನೂನಿನಲ್ಲಿ ಅವಕಾಶ ನೀಡಲಾಗಿದೆ.

ಮುಖ್ಯವಾಗಿ ಇದನ್ನು ಹೆಣ್ಣು ಮಕ್ಕಳ ರಕ್ಷಣೆಗೋಸ್ಕರವೇ ಮಾಡಿದ ಕಾನೂನು. ಆದರೆ ಮುಂದಿನ ದಿನಮಾನಗಳಲ್ಲಿ ಒಪ್ಪಿತ ಸಂಪರ್ಕಗಳು, ಲಿವಿಂಗ್ ರಿಲೇಶನ್‌ಶಿಪ್‌ಗಳಿಗೆ ಸಂಬಂಧಿಸಿದಂತೆ ಇದು ಭಯಾನಕ ರೀತಿಯಲ್ಲಿ ದುರುಪಯೋಗ ಆಗುವ ಸಾಧ್ಯತೆಗಳನ್ನು ತಳ್ಳಿ ಹಾಕುವುದಕ್ಕೆ ಕಷ್ಟಸಾಧ್ಯ. ಇನ್ನು ಕ್ಲಾಜ-೧೦೩ ಜಾತಿ-ವರ್ಣ ಸಮುದಾಯಗಳನ್ನು ಗುರಿಯಾಗಿಸಿಕೊಂಡು ಮಾಡುವ ಕೊಲೆಗಳ ಬಗ್ಗೆ ಹೇಳುತ್ತದೆ. ಈ ಹಿಂದೆ ಎಲ್ಲ ಕೊಲೆ ಪ್ರಕರಣಗಳನ್ನು ಐಪಿಸಿ ಸೆಕ್ಷನ್ ೩೦೩ರ ಅಡಿಯಲ್ಲಿ ಪರಿಗಣಿಸಲಾಗುತ್ತಿತ್ತು ಆದರೆ ಲಿಂಚಿಂಗ್ ಪ್ರಕರಣಗಳ ಬಗ್ಗೆ ಪ್ರತ್ಯೇಕ ಕಾನೂನಿನ ಅಗತ್ಯವಿದೆ ಅಂತ ಸುಪ್ರೀಂ ಕೋರ್ಟ್ ೨೦೧೮ರ ಹೇಳಿತ್ತು.

ಆದ್ದರಿಂದ ಇದೀಗ ಜಾತಿ ಅಥವಾ ಸಮುದಾಯಗಳನ್ನು ಗುರಿಯಾಗಿಸಿಕೊಂಡು ಮಾಡುವ ಹತ್ಯೆಗಳು ಕ್ಲಾಜ- ೧೦೩ರ ಅಡಿಯಲ್ಲಿ ಬರುತ್ತದೆ. ಮತ್ತು ಐಪಿಸಿಯಲ್ಲಿ ಸಂಘಟಿತ ಅಪರಾಧಗಳಿಗೆ ಪ್ರತ್ಯೇಕ ಯಾವುದೇ ಕಾನೂನುಗಳಿರಲಿಲ್ಲ. ಇದಕ್ಕೆ ಒಂದೊಂದು ರಾಜ್ಯಗಳು ತನ್ನದೇ ಆದ ಪ್ರತ್ಯೇಕ ಕಾನೂನು ಗಳನ್ನು ಮಾಡಿಕೊಂಡಿದ್ದವು. ಕರ್ನಾಟಕದಲ್ಲಿ (ಓಇuಇಅ) ’ಓZZಠಿZhZ ಟ್ಞಠ್ಟಿಟ್ಝ ಟ್ಛ ಟ್ಟಜZಜ್ಢಿಛಿb ಜಿಞಛಿ Zಠಿ೨೦೦೦’ ಜಾರಿಯಲ್ಲಿದೆ. ಇದನ್ನು ’IZeZZoeಠ್ಟಿZ ಟ್ಞಠ್ಟಿಟ್ಝ ಟ್ಛ ಟ್ಟಜZಜ್ಢಿಛಿb Zಠಿ೧೯೯೯’ ಆಧಾರದ ಮೇಲೆ ಕರ್ನಾಟಕದಲ್ಲಿ ರಚನೆ ಮಾಡಲಾಗಿದೆ. ಹೀಗೆ ಹಲವು ರಾಜ್ಯಗಳಲ್ಲಿ ಅಲ್ಲಿನ ಕಾಯ್ದೆಗಳ ಅಡಿ ಯಲ್ಲಿ ಸಂಘಟಿತ ಅಪರಾಧಗಳ ಪ್ರಕರಣಗಳನ್ನು ಡೀಲ್ ಮಾಡಲಾಗುತ್ತಿತ್ತು. ಇದೀಗ ಸಂಘಟಿತ ಅಪರಾಧಗಳನ್ನು ಭಾರತೀಯ ನ್ಯಾಯ ಸಂಹಿತೆಯ ಕ್ಲಾಜ-೧೧೧ ಸಬ್ ಕ್ಲಾಜ-೧ರ ಅಡಿ ತರಲಾಗಿದೆ. ಇದರಲ್ಲಿ ಅಪಹರಣ, ರಾಬರಿ, ವಾಹನ ಕಳವು, ಅಕ್ರಮ ಭೂಮಾಫಿಯಾ, ಸುಪಾರಿ ಹತ್ಯೆಗಳು, ಆರ್ಥಿಕ ಅಪರಾಧಗಳು, ಸೈಬರ್‌ ಕ್ರೈಂಗಳು, ಮಾನವ ಕಳ್ಳ ಸಾಗಾಣಿಕೆ, ಮಾದಕ ಪದಾರ್ಥಗಳ ಸಾಗಾಟ, ಆಯುಧಗಳ ಅಕ್ರಮ ಸಾಗಣೆ, ವೇಶ್ಯವಾಟಿಕೆಗೆ ಹೆಣ್ಣುಮಕ್ಕಳ ಮಾರಾಟ ಹೀಗೆ ಮುಂತಾದ ಅಪರಾಧಗಳನ್ನು ಸೇರಿಸಲಾಗಿದೆ.

ಆದರೆ ಇಲ್ಲಿ ಸೈಬರ್ ಕ್ರೈಮ್ ಎಂದರೆ ಯಾವೆಲ್ಲ ಅಪರಾಧಗಳು ಈ ಕ್ಲಾಜ್ ಅಡಿಯಲ್ಲಿ ಬರುತ್ತವೆ ಅನ್ನೋದರ ಬಗ್ಗೆ ಸ್ಪಷ್ಟನೆ ಕೊಟ್ಟಿಲ್ಲ. ಸಾಕಷ್ಟು ರೀತಿಯ ಸೈಬರ್ ಕ್ರೈಂಗಳು ನಡೆಯುತ್ತಲೇ ಇರುತ್ತವೆ, ಅಶ್ಲೀಲ ಸಂದೇಶಗಳನ್ನು ಕಳುಹಿಸುವ ಹಾಗೂ ಸೈಬರ್ ವಂಚನೆಗಳ ಆಧಾರವಾಗಿ ಹಲವಾರು ರೀತಿಯ ಸೈಬರ್ ಅಪರಾಧಗಳಿವೆ. ಅದರಲ್ಲಿ ಯಾವೆಲ್ಲ ಕ್ಲಾಜ- ೧೧೧ ಸಬ್ ಕ್ಲಾಜ-೧ರ ಅಡಿಯಲ್ಲಿ ಬರುತ್ತವೆ ಅನ್ನೋದೇ ಸ್ಪಷ್ಟತೆ ಇಲ್ಲ. ಕಳ್ಳತನಕ್ಕೆ
ಸಂಬಂಧಿಸಿದಂತೆ ಸೆಕ್ಷನ್-೩೦೪ ಸಬ್ ಸೆಕ್ಷನ್-೧ ಹೊಸದಾಗಿ ಸೇರ್ಪಡೆ ಮಾಡಲಾಗಿದೆ. ಇದು ಯಾವುದೇ ವಸ್ತುಗಳನ್ನು ಬಲವಂತವಾಗಿ ಕಿತ್ತುಕೊಳ್ಳು ವುದು ಶಿಕ್ಷಾರ್ಹವೆಂದು ಹೇಳುತ್ತದೆ.

ಇಲ್ಲಿ ಅಪರಾಧ ಪ್ರಕರಣಗಳ ಬಗ್ಗೆ ವಿಚಾರಣೆಗಳು ಪೂರ್ಣಗೊಂಡ ೪೫ ದಿನಗಳ ಒಳಗಾಗಿ ತೀರ್ಪು ಕೊಡಬೇಕಾಗುತ್ತದೆ. ವಿಚಾರಣೆಗಳು ಆರಂಭವಾದ ಅರವತ್ತು ದಿನದ ಒಳಗಾಗಿ ಚಾರ್ಜ್ ಮಾಡಬೇಕು. ಅನಗತ್ಯವಾದ ಸಮಯಹರಣ ಮಾಡುವಂತಿಲ್ಲ, ಹೀಗಾಗಿ ಇದು ನ್ಯಾಯದಾನಕ್ಕೆ ವೇಗ ಕೊಡಬ ಹುದು. ಈ ಮೊದಲು ಯಾವುದೇ ಅಪರಾಧ ಪ್ರಕರಣದಲ್ಲಿ ಆರೋಪಿಗಳನ್ನು ಪೊಲೀಸ್ ಕಷ್ಟಡಿಗೆ ಹೆಚ್ಚೆಂದರೆ ೧೫ ದಿನಗಳ ವರೆಗೆ ಕೊಡಲಾಗುತ್ತಿತ್ತು. ಇದೀಗ ನೂತನ ಕಾಯ್ದೆಯ ಪ್ರಕಾರ ಈ ಅವಽಯನ್ನು ೯೦ ದಿನಗಳ ವರೆಗೆ ಹೆಚ್ಚಿಸುವ ಅವಕಾಶವಿದೆ. ಆದ್ದರಿಂದ ಪೊಲೀಸರಿಗೆ ತನಿಖೆಗೆ ಬೇಕಾದ ಕಾಲಾವಕಾಶವನ್ನು ಹೆಚ್ಚಿಸಿದೆ. ಸಮ ಕೊಡುವುದಕ್ಕೆ ಮನೆ ಬಾಗಿಲುಗಳಿಗೆ ಪೊಲೀಸರೇ ಬರಬೇಕಂತಿಲ್ಲ, ಬದಲಿಗೆ ವಾಟ್ಸಪ್, ಮೆಸೇಜ್ ಅಥವಾ ಇ-ಮೇಲ್ ಮೂಲಕ ಡಿಜಿಟಲ್ ರೂಪದಲ್ಲಿ ಸಮ ಕೊಡುವುದಕ್ಕೆ ಇದೀಗ ಸಾಧ್ಯವಿದೆ. ಮತ್ತು ಡಿಜಿಟಲ್ ಸಾಕ್ಷಿ ಆಧಾರಗಳಾದ ವಿಡಿಯೋ, ಆಡಿಯೋ ರೆಕಾರ್ಡಿಂಗ್ ಮುಂತಾದವುಗಳನ್ನು ಸಾಕ್ಷಿಗಳಾಗಿ ಪರಿವರ್ತಿಸುವ ಅವಕಾಶವನ್ನು ಈ ನೂತನ ಕಾಯ್ದೆಗಳು ನೀಡಿವೆ. ಅಪರಾಧಗಳು ನಡೆದ ಸ್ಥಳದಲ್ಲಿ ವಿಡಿಯೋ ಚಿತ್ರೀಕರಣವನ್ನು ಕಡ್ಡಾಯಗೊಳಿಸಲಾಗಿದೆ ಮತ್ತು ಫಾರೆನ್ಸಿಕ್ ತನಿಖೆಯನ್ನು ನಡೆಸಲು ಹೆಚ್ಚಿನ ಆದ್ಯತೆ ನೀಡಿದೆ ನೂತನ ಕಾಯ್ದೆ.

ಸಂತ್ರಸ್ತರಿಗೆ ಅನುಕೂಲ ಮಾಡುವುದಕ್ಕೆ ಈ ಕಾನೂನು ಸಹಾಯಕವಾಗುತ್ತದೆ ಅಂತ ಹೇಳಲಾಗುತ್ತದೆ, ಆದರೆ ಹಲವಾರು ಬಾರಿ ಆರೋಪಿಗಳೆ ಸಂತ್ರಸ್ತ ರಾಗುವ ಸಾಧ್ಯತೆಗಳಿವೆ. ನಮ್ಮಲ್ಲಿ ಸುಳ್ಳು ದೂರುಗಳು, ಅಮಾಯಕರನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸುವ ಪ್ರಕರಣಗಳೇ ಹೆಚ್ಚಾಗಿ ನಡೆಯುವು ದರಿಂದ ಅದನ್ನು ಸರಿಪಡಿಸುವ ಪ್ರಯತ್ನಗಳು ಕಡಿಮೆ. ಜೊತೆಗೆ ಈ ಹೊಸ ಕಾಯ್ದೆಗಳು ನಮ್ಮ ಪೊಲೀಸರಿಗಂತೂ ಹೆಚ್ಚಿನ ಅಧಿಕಾರವನ್ನು ನೀಡಿವೆ. ಈ ಬದಲಾವಣೆ ಒಂದಿಷ್ಟು ದಿನಗಳವರೆಗೆ ವಕೀಲ ಹಾಗೂ ಪೊಲೀಸರಿಗೆ ಗೊಂದಲ ಹುಟ್ಟಿಸಬಹುದು.

ಆದ್ದರಿಂದ ನಮ್ಮ ಪೊಲೀಸರಿಗೆ ಈ ನೂತನ ಕಾಯಿದೆಗಳ ಕೈಪಿಡಿ ಪುಸ್ತಕ ನೀಡುವ ಮೂಲಕ ಕರ್ನಾಟಕ ಹಾಗೂ ಇತರೆ ರಾಜ್ಯಗಳಲ್ಲಿ ಈ ಹೊಸ
ಕಾಯ್ದೆಗಳ ಬಗ್ಗೆ ತರಬೇತಿ ನೀಡುವ ಕಾರ್ಯ ನಡೆದಿದೆ. ವಕೀಲರು ಕೂಡಾ ಸ್ವಲ್ಪ ದಿನದವರೆಗೆ ಇದನ್ನು ಅನುಭವಿಸಬೇಕಾಗುತ್ತದೆ. ಈ ಮೊದಲು
ಸಾಕಷ್ಟು ನ್ಯಾಯವಾದಿಗಳಿಗೆ ಈ ಸೆಕ್ಷೆನ್‌ಗಳು ಸದಾ ನಾಲಿಗೆಯ ಮೇಲೆ ಇರುತ್ತಿದ್ದವು, ಈಗ ಈ ಬದಲಾವಣೆ ಮತ್ತೆ ಅವರನ್ನು ಅಧ್ಯಯನದತ್ತ ಕರೆದೊ ಯ್ದಿದೆ. ಈ ಹಿಂದೆ ದಾಖಲಾಗಿದ್ದ ಪ್ರಕರಣಗಳು ಮಾತ್ರ ಅವು ಹಿಂದಿನ ಸೆಕ್ಷನ್‌ಗಳ ಅಡಿಯ ವಿಚಾರಣೆಗೆ ಒಳಪಡುತ್ತವೆ. ಇಷ್ಟು ಹೊರತು ಪಡಿಸಿದರೆ ಜನ ಸಾಮಾನ್ಯರಿಗೆ ಯಾವುದೇ ಸಮಸ್ಯೆಗಳಿಲ್ಲ. ದೈನಂದಿನ ಜೀವನದ ಮೇಲಂತೂ ಅಂತಹ ಯಾವುದೇ ಪ್ರಭಾವ ಬೀರುವುದಿಲ್ಲ. ಆದರೆ ಈ ನೂತನ ಕಾಯ್ದೆಗಳು ನ್ಯಾಯದಾನದ ವೇಗವನ್ನಂತೂ ಖಂಡಿತವಾಗಿ ಹೆಚ್ಚಿಸುತ್ತದೆ.

(ಲೇಖಕರು: ರಾಜ್ಯಶಾಸ್ತ್ರ ಅಧ್ಯಾಪಕರು ಮತ್ತು
ವಿಶ್ಲೇಷಕರು)