Wednesday, 9th October 2024

ಜಸ್ಟಿಸ್ ಸಭಾಹಿತ್ ಜನ್ಮ ಶತಮಾನೋತ್ಸವ: ಸಾಧನೆಯ ನೆನಪು

ಸ್ಮರಣೆ

ನಾಗಶ್ರೀ ಹೆಗಡೆ

ಅತ್ಯಂತ ಪ್ರಾಮಾಣಿಕ ಮತ್ತು ಸಮರ್ಪಣಾ ಭಾವದಿಂದ ಕೆಲಸ ಮಾಡುವ ನ್ಯಾಯಮೂರ್ತಿಗಳು ಎಂದು ಸಭಾಹಿತರು ಜನಪ್ರಿಯರಾಗಿದ್ದರು. ಅನೇಕ
ಗಂಭೀರ ಪ್ರಕರಣಗಳನ್ನು ಕೂಡ ಇವರು ಅತ್ಯಂತ ಶೀಘ್ರವಾಗಿ ಪರಿಹರಿಸುವ ಮೂಲಕ ಸಮಾಜದಲ್ಲಿ ಇವರು ವಿಶೇಷವಾದ ಜನ ಮನ್ನಣೆ ಗಳಿಸಿದ್ದರು. ಹೀಗೆ ಹಲವು ವಿಧಗಳಲ್ಲಿ ಇವರು ನ್ಯಾಯಾಂಗ ವ್ಯವಸ್ಥೆಯಲ್ಲಿ ತಮ್ಮದೇ ಆದ ಮಾದರಿ ಹೆಜ್ಜೆಗಳನ್ನು ಬಿಟ್ಟು ಹೋಗಿದ್ದಾರೆ.

ದಿವಂಗತ ಜಿ. ಎನ್. ಸಭಾಹಿತರು ೧೯೨೩ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿರುವ ಸುಂದರ ಹಳ್ಳಿಯಾದ ಹಳದಿಪುರದಲ್ಲಿ ಜನಿಸಿದರು. ಗಜಾನನ ನಾರಾಯಣ ಸಭಾಹಿತರು ತಮ್ಮ ವಿದ್ಯಾಭ್ಯಾಸವನ್ನು ಹೊನ್ನಾವರ ಬೆಳಗಾವಿ, ಪುಣೆ, ಸಾಂಗ್ಲಿಯಲ್ಲಿ ಪೂರ್ಣಗೊಳಿಸಿದ ಬಳಿಕ ಕೆಲಕಾಲ ಅಧ್ಯಾಪಕರಾಗಿಯೂ ಸೇವೆ ಸಲ್ಲಿಸಿದ್ದರು. ತದನಂತರ ಅವರು ಹೊನ್ನಾವರದಲ್ಲಿ ೧೯೪೯ರಲ್ಲಿ ವಕೀಲ ವೃತ್ತಿಗೆ ಸೇರಿ ಕಾಯ್ದೆ ಕಾನೂನು ಕ್ಷೇತ್ರದಲ್ಲಿ, ನ್ಯಾಯಾಂಗ ವ್ಯವಸ್ಥೆಯಲ್ಲಿ ಅಪಾರ ಪಾಂಡಿತ್ಯ ಗಳಿಸಿ ಆ ಭಾಗದಲ್ಲಿ ಅತ್ಯುತ್ತಮ ನ್ಯಾಯವಾದಿಗಳೆಂದು ಹೆಸರು ಗಳಿಸಿದರು.

ಹೀಗೆ ಹೊನ್ನಾವರದಲ್ಲಿ ಯಶಸ್ವಿ ನ್ಯಾಯವಾದಿಗಳೆಂದು ತಮ್ಮ ಸಾಮರ್ಥ್ಯದಿಂದ ಪ್ರಸಿದ್ಧಿಗೆ ಬಂದ ಸಭಾಹಿತರು ಮುಂದೆ ೧೯೫೬ ರಲ್ಲಿ ಜಿ ಕೇಂದ್ರವಾದ ಕಾರವಾರಕ್ಕೆ ತೆರಳಿ ಅಲ್ಲಿಯೂ ತಮ್ಮ ವೃತ್ತಿಯನ್ನು ಅತ್ಯಂತ ಬದ್ಧತೆಯಿಂದ ಮುಂದುವರಿಸಿದರು. ಕಾನೂನು ಮತ್ತು ನ್ಯಾಯಾಂಗ ವ್ಯವಸ್ಥೆಯಲ್ಲಿ ಇವರ ವಿದ್ವತ್ ಮತ್ತು ಪರಿಪೂರ್ಣ ಪ್ರತಿಭೆಯನ್ನು ಗಮನಿಸಿ ಇವರನ್ನು ಗವರ್ಮೆಂಟ್ ಪ್ಲೀಡರ್ ಮತ್ತು ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ನೇಮಿಸಲಾಯಿತು. ಮುಂದೆ ಸಮಾಜದ ಇತರ ಕ್ಷೇತ್ರಗಳಲ್ಲೂ ಇವರು ಅನನ್ಯ ಸೇವೆ ಸಲ್ಲಿಸಿದ್ದರು. ಆದರೆ ಕಾನೂನು ಮತ್ತು ನ್ಯಾಯಾಂಗ
ವ್ಯವಸ್ಥೆಯ ವೃತ್ತಿಪರತೆಯಿಂದ ಇವರು ಯಾವತ್ತೂ ವಿಮುಖರಾಗಲಿಲ್ಲ ಎಂಬುದು ವಿಶೇಷ.

ಕುಮಟಾದಲ್ಲಿ ೧೯೫೪ ರಲ್ಲಿ ಅಖಿಲ ಕರ್ನಾಟಕ ಸಾಹಿತ್ಯ ಸಮ್ಮೇಳನದ ಅಂಗವಾಗಿ ಏರ್ಪಡಿಸಲಾಗಿದ್ದ ಯಕ್ಷಗಾನ ಸಮ್ಮೇಳನದ ಸಂಚಾಲಕ ರಾಗಿಯೂ ಇವರು ಅನುಪಮ ಸೇವೆ ಸಲ್ಲಿಸಿzರೆ. ಕಾರವಾರದಲ್ಲಿ ೧೯೬೫ ರಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಧಾನ ಕಾರ್ಯದರ್ಶಿ
ಯಾಗಿಯೂ ಇವರು ಕೊಡುಗೆ ನೀಡಿದ್ದಾರೆ.  ಕಾರವಾರದ ರೋಟರಿ ಕ್ಲಬ್ ಮತ್ತು ಜಿಲ್ಲೆ ಗ್ರಂಥಾಲಯದ ಅಧ್ಯಕ್ಷರಾಗಿಯೂ ಇವರು ಬಹುಶ್ರುತವಾಗಿ ಕೆಲಸ ಮಾಡಿದ್ದರು.

ಉತ್ತರ ಕನ್ನಡ ಜಿಲ್ಲಾ ಸಹಕಾರಿ ಬ್ಯಾಂಕಿನ ಸಂಸ್ಥಾಪಕ ಅಧ್ಯಕ್ಷರಾಗಿ ಮತ್ತು ಆಗಿನ ಜಿ ಕೈಗಾರಿಕಾ ಮಂಡಳಿಯ ಉಪಾಧ್ಯಕ್ಷರಾಗಿ ಸಹಕಾರ ಮತ್ತು ಕೈಗಾರಿಕಾ ಕ್ಷೇತ್ರದಲ್ಲಿಯೂ ತಮ್ಮ ಛಾಪನ್ನು ಮೂಡಿಸಿದ್ದರು. ೧೯೬೫ ರಲ್ಲಿ ಜಿ ಮತ್ತು ಸೆಷ ನ್ಯಾಯಾಧೀಶರಾಗಿ ನೇಮಕಗೊಂಡಿದ್ದು ಅವರ ವೃತ್ತಿ ಜೀವನ ಸಾಧನೆಯ ದೊಡ್ಡ ಮೈಲುಗ ಸರಿ. ಈ ಬಹು ಮುಖ್ಯವಾದ ಜವಾಬ್ದಾರಿಯನ್ನು ಅವರು ಬೆಂಗಳೂರು, ತುಮಕೂರು ಧಾರವಾಡಗಳಲ್ಲಿ ಅತ್ಯಂತ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ, ಬುದ್ಧಿವಂತಿಕೆಯಿಂದ ನಿರ್ವಹಿಸುವ ಮೂಲಕ ಅಲ್ಪ ಕಾಲದಲ್ಲಿಯೇ ನ್ಯಾಯಾಂಗ ಕ್ಷೇತ್ರದಲ್ಲಿ
ಹೆಸರುವಾಸಿಯಾಗಿ ಉತ್ತರ ಕನ್ನಡ ಜಿಗೂ ಹೆಮ್ಮೆ ಮೂಡಿಸಿದ್ದರು.

ಉತ್ತರ ಕರ್ನಾಟಕದ ವಲಯದಲ್ಲಿ ನೂತನವಾಗಿ ರಚಿಸಲಾಗಿದ್ದ ಪ್ರಾಸಿಕ್ಯೂಷನ್ ನಿರ್ದೇಶನಾಲಯದ ನಿರ್ದೇಶಕರಾಗಿಯೂ ಇವರು ಮಾದರಿ ಯಾಗಿ ಕಾರ್ಯನಿರ್ವಹಿಸಿದರು. ಇವರು ೧೯೭೭ರಲ್ಲಿ ಕರ್ನಾಟಕ ಹೈಕೋರ್ಟಿನ ಅಡಿಷನಲ್ ನ್ಯಾಯ ಮೂರ್ತಿಗಳಾಗಿ ಪದೋನ್ನತಿ
ಹೊಂದಿದರು. ತಮ್ಮ ಕೊನೆಯ ಉಸಿರು ಇರುವವರೆಗೂ ಅಂದರೆ ಸುಮಾರು ಒಟ್ಟು ಏಳು ವರ್ಷಗಳ ಕಾಲ ಇವರು ನ್ಯಾಯ ಮೂರ್ತಿಗಳಾಗಿ ಅತ್ಯಂತ ಶ್ರದ್ಧಾ ಭಕ್ತಿಯಿಂದ ಅವಿಶ್ರಾಂತವಾಗಿ ಸೇವೆ ಸಲ್ಲಿಸಿ ಉಳಿದವರಿಗೂ ಇವರು ಮಾದರಿಯಾಗಿದ್ದಾರೆ. ೧೯೮೪ ರ ನವೆಂಬರಿನಲ್ಲಿ ಅಕಾಲಿಕ ವಾಗಿ ಇವರು ನಿಧನರಾಗಿದ್ದು ನ್ಯಾಯಾಂಗ ಕ್ಷೇತ್ರದಲ್ಲಿ ತುಂಬಲಾರದ ನಷ್ಟವಾಗಿದೆ.

ಕಾನೂನಿನ ಎಲ್ಲಾ ವಿಭಾಗಗಳಲ್ಲೂ ಇವರು ಪರಿಣಿತರಾಗಿದ್ದರು ಅಷ್ಟೇ ಅಲ್ಲ ಯಾವುದೇ ಕ್ಲಿಷ್ಟಕರ ಕಾನೂನು ಸಮಸ್ಯೆಗಳಿದ್ದರೂ ಕೂಡಾ ಅವುಗಳನ್ನು
ಸಮರ್ಪಕವಾಗಿ, ಸುಲಭವಾಗಿ ಬಗೆಹರಿಸುತ್ತಿದ್ದ ಜಾಣ್ಮೆ ಇವರದ್ದಾಗಿತ್ತು. ಅತ್ಯಂತ ಪ್ರಾಮಾಣಿಕ ಮತ್ತು ಸಮರ್ಪಣಾ ಭಾವದಿಂದ ಕೆಲಸ ಮಾಡುವ ನ್ಯಾಯಮೂರ್ತಿಗಳು ಎಂದು ಸಭಾಹಿತರು ಜನಪ್ರಿಯರಾಗಿದ್ದರು. ಅನೇಕ ಗಂಭೀರ ಪ್ರಕರಣಗಳನ್ನು ಕೂಡ ಇವರು ಅತ್ಯಂತ ಶೀಘ್ರವಾಗಿ ಪರಿಹರಿಸುವ ಮೂಲಕ ಸಮಾಜದಲ್ಲಿ ಇವರು ವಿಶೇಷವಾದ ಜನ ಮನ್ನಣೆ ಗಳಿಸಿದ್ದರು. ಹೀಗೆ ಹಲವು ವಿಧಗಳಲ್ಲಿ ಇವರು ನ್ಯಾಯಾಂಗ ವ್ಯವಸ್ಥೆಯಲ್ಲಿ
ತಮ್ಮದೇ ಆದ ಮಾದರಿ ಹೆಜ್ಜೆಗಳನ್ನು ಬಿಟ್ಟು ಹೋಗಿದ್ದಾರೆ.

ಬಾಡಿಗೆ ನಿಯಂತ್ರಣ ಕಾಯ್ದೆ, ಮೋಟಾರು ಅಪಘಾತಗಳಲ್ಲಿ ಪರಿಹಾರ ಪಡೆಯುವಿಕೆ, ಟ್ರಿಬ್ಯುನಲ್ ಮತ್ತು ಪರಿಹಾರ, ಸೆಂಟೆನ್ಸಿಂಗ್ ಬೈ ಕೋರ್ಟ್ ಇನ್ ಇಂಡಿಯಾ ಅಂಡ್ ಕರ್ನಾಟಕ ಪ್ರೈವೇಟ್ ಎಜುಕೇಶನಲ್ ಇನ್ಸ್ಟಿಟ್ಯೂಶ (ಡಿಸಿಪ್ಲಿನ್ ಅಂಡ್ ಕಂಟ್ರೋಲ್ ಈ ಮುಂತಾದ ಇವರ ಕೃತಿಗಳು ಉತ್ಕೃಷ್ಟವಾಗಿವೆ ಮತ್ತು ಜನೋಪಯೋಗಿಯಾಗಿವೆ ಎಂದು ಹೆಸರು ಪಡೆದಿವೆ. ಕನ್ನಡ, ಇಂಗ್ಲಿಷ್, ಸಂಸ್ಕೃತ ಈ ಮೂರು ಭಾಷೆಗಳನ್ನು ಅಪಾರ ಪಾಂಡಿತ್ಯ ಹೊಂದಿದ್ದ ಸಭಾಹಿತರು, ಅತ್ಯುತ್ತಮ ವಾಗ್ಮಿ ಎಂದು ಹೆಸರು ಪಡೆದವರಾಗಿದ್ದರು. ಇವೆಲ್ಲವು ಗಳಿಗಿಂತ ಮಿಗಿಲಾಗಿ ಅವರು ಒಬ್ಬ ಆದರ್ಶ ಕರುಣಾ ಮಯಿ, ಬಡವರ ಬಗ್ಗೆ ಅನುಕಂಪ ಹೊಂದಿದ್ದ ಅಪರೂಪದ ವ್ಯಕ್ತಿ ಎಂದು ಲೋಕ ವಿಖ್ಯಾತರಾಗಿರುವುದು ವಿಶೇಷ.

ಜಿ.ಎನ್. ಸಭಾಹಿತರು ತಮ್ಮ ಜೀವಿತದ ಕಾಲದಲ್ಲಿ ಸ್ವಂತ ಮನೆಯನ್ನು ಕಟ್ಟಿರಲಿಲ್ಲ. ಈ ಬಗ್ಗೆ ಅವರ ಸ್ನೇಹಿತರು ಅವರಲ್ಲಿ ಪ್ರಶ್ನೆ ಮಾಡಿದರೆ ಅವರು ನಗುತ್ತಾ ನನ್ನ ಮಕ್ಕಳೇ ನನಗೆ ಆಸ್ತಿ. ನಾನು ಅವರಿಗೆ ಉತ್ತಮ ಶಿಕ್ಷಣ ನೀಡಿದ್ದೇನೆ ಎಂದು ಪ್ರತಿಕ್ರಯಿಸುತ್ತಿದ್ದರು. ಪತಿಗೆ ತಕ್ಕ ಸತಿಯಾಗಿ ಜಾನಕಿಯವರು ಕುಟುಂಬವನ್ನು ಅತ್ಯಂತ ಪ್ರೀತಿ, ವಾತ್ಸಲ್ಯಗಳಿಂದ ಬೆಳೆಸಿದರು. ದಿವಂಗತ ಸಭಾಹಿತರು ಹೇಳಿದಂತೆ ಅವರ ಮಕ್ಕಳೆಲ್ಲರೂ ವಿದ್ಯಾವಂತರು. ಅವರ ಮೊದಲ ಪುತ್ರ ದಿವಂಗತ ನ್ಯಾಯಮೂರ್ತಿಗಳಾಗಿದ್ದ ವಿಷ್ಣು ಬಿಕಾಂ, ಎಲ್ಎಲ್ಎಂ ಪದವೀಧರರಾಗಿದ್ದರು. ದ್ವಿತೀಯ ಪುತ್ರ
ನಾರಾಯಣ ಸಭಾಹಿತರು ಬಿ.ಇ. ಪಿಜಿಡಿಎಂ ಪದವೀಧರರು. ಮೂರನೇ ಪುತ್ರ ಗಣೇಶ್ ಅವರು ಎಂ. ಟೆಕ್ ಪದವೀಧರರು. ನಾಲ್ಕನೇ ಪುತ್ರ ರವಿ ಬಿಎಸ್ಸಿ, ಎಲ್. ಎಲ್.ಬಿ. ಪದವೀಧರರಾದರೆ ಪುತ್ರಿ ಶೋಭಾ ಬಿ. ಎ. ಎಲ್. ಎಲ್. ಬಿ. ಪದವೀಧರರಾಗಿ ತಮ್ಮ ತಂದೆಯ ಕನಸನ್ನು ನನಸು ಮಾಡುತ್ತಿದ್ದಾರೆ.