Wednesday, 11th December 2024

ರೌಡಿ – ತಲೆ ಎತ್ಕೊಂಡ್‌ ಬದುಕುವವನು

ತುಂಟರಗಾಳಿ

ಸಿನಿಗನ್ನಡ

ಒಂದು ಸಿನಿಮಾ ಹಿಟ್ ಆದ್ರೆ ಅದೇ ರೀತಿ ಸಿನಿಮಾಗಳು ಬರೋದು ಚಿತ್ರರಂಗದಲ್ಲಿ ಕಾಮನ್. ಅಂಥದ್ರಲ್ಲಿ ಕೆಜಿಎಫ್ ನಂಥ ದೊಡ್ಡ ಹೆಸರು ಮಾಡಿದ
ಚಿತ್ರವನ್ನು ಕಾಪಿ ಮಾಡದೇ ಇರೋಕಾಗುತ್ತದೆಯೇ? ಈ ವಾರ ಬಿಡುಗಡೆ ಆಗಿರೋ ಕಬ್ಜ ಸಿನಿಮಾ ಕೆಜಿಎಫ್ ನ ಕಾಪಿ ಅಲ್ಲದಿದ್ರೂ ಆ ಚಿತ್ರವನ್ನು ಹಲವಾರು ರೀತಿಯಲ್ಲಿ  ನೆನಪಿಸೋದಂತೂ ಸತ್ಯ. Kgf chapter 1, chapte ೨ ನೋಡಿದ್ವಿ. ಅದಾದ ಮೇಲೆ what after that ಅಂತ
ಕನ್ನಡ ಚಿತ್ರರಂಗ ಕಾಯ್ತಾ ಕೂತಿತ್ತು. ಅದಕ್ಕೆ ಉತ್ತರ ಅನ್ನೋ ಥರ ಈಗ ಆರ್.ಚಂದ್ರು ಅವರ ಕಬ್ಜ ಬಂದಿದೆ.

ಕೆಜಿಎಫ್ ನಂತರ ಮಾಳವಿಕಾ ಸ್ಟೈಲ್‌ನಲ್ಲಿ ಮುಂದೇನ್ ಮಾಡುತ್ತೆ ನಿಮ್ಮ ಚಿತ್ರರಂಗ ಅಂತ ಕೇಳ್ತಾ ಇದ್ದ ಪರಭಾಷಿಕರಿಗೂ ಕಬ್ಜ ಉತ್ತರ ಕೊಟ್ಟಿದೆ. ಅದೇ ಧೂಳು, ಕತ್ತಲು ತುಂಬಿದ Background, black n white set, grey shades nodi ಕೆಜಿಎಫ್ ಥರ ಇದೆ ಅನ್ನಿಸಿದ್ರೂ ಕೆಜಿಎಫ್ನಷ್ಟು ಚೆನ್ನಾಗಿದೆ ಅಂತ ಹೇಳೋದು ಸ್ವಲ್ಪ ಕಷ್ಟ. ಬಂಡವಾಳದ ಲೆಕ್ಕದಲ್ಲಿ ಎಲ್ಲರನ್ನೂ ದಂಗು ಬಡಿಸುವ ಮಟ್ಟಕ್ಕಿರುವ ಕಬ್ಜ ಸಿನಿಮಾದ ಬರವಣಿಗೆ ಮಾತ್ರ ಎಲ್ಲರಿಗೂ ಗುಂಗು ಹಿಡಿಸುವಂತಿಲ್ಲ ಅನ್ನೋದು ಸಣ್ಣ ಬೇಸರ.

ಅಷ್ಟೊಂದು ದುಡ್ಡು ಖರ್ಚು ಮಾಡಿದವರು ಸ್ವಲ್ಪ ಬುದ್ಧಿಯನ್ನೂ ಖರ್ಚು ಮಾಡಿದ್ದಿದ್ದರೆ ಸಿನಿಮಾ ಬೇರೆ ಹಂತಕ್ಕೆ ಹೋಗ್ತಾ ಇತ್ತು. ಕೆಜಿಎಫ್ ಸಿನಿಮಾದ ಥರಾನೇ ಕಬ್ಜದಲ್ಲೂ ಅನಗತ್ಯ ಹಿಂದಿ ಸಂಭಾಷಣೆಗಳು ಇಲ್ಲೂ ಇವೆ. ಆದ್ರೆ, ಅವುಗಳಲ್ಲಿ ಸಹಜತೆ ಇಲ್ಲ. ಆದರೆ, ಕೆಜಿಎಫ್ ಅನ್ನು ಬಿಟ್ಟು ನೋಡೋ ದಾದ್ರೆ, ಕಬ್ಜ ಒಂದು ಡೀಸೆಂಟ್ ಸಿನಿಮಾ. ಕೆಜಿಎಫ್ ಥರ ಎಲ್ಲ ಮುಖಕ್ಕೆ ಮಸಿ ಬಳಿದು ಕೊಂಡಂತ ಪಾತ್ರಗಳೇ ಈ ಚಿತ್ರದಲ್ಲೂ ಇದ್ರೂ ತೀರಾ ಭಾರತ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ ಕೆಜಿಎಫ್ ಸಿನಿಮಾ ಮುಖಕ್ಕೆ ಮಸಿ ಬಳಿಯೋ ಅಂಥಸಿನಿಮಾಖಂಡಿತಾ ಅಲ್ಲ ಈ ಕಬ್ಜ.

ತುಂಟರಗಾಳಿ
ರೌಡಿ ರಂಗಣ್ಣ (ಕಾಲ್ಪನಿಕ ಸಂದರ್ಶನ)
ಏನು ರೌಡಿ ರಂಗಣ್ಣೋರೆ, ಬರ್ಥ್ ಡೇ ಭಾರೀ ಜೋರಾಗಿ ಸೆಲೆಬ್ರೇಟ್ ಮಾಡ್ಕೊತಾ ಇದ್ದೀರಾ?
-ಹೌದೌದು, ಅದರ ಜೊತೆಗೆ, ಇನ್ಮೇಲೆ ನನ್ನ ಹುಟ್ಟುಹಬ್ಬನ ‘ವೈಲೆಂಟೈ ಡೇ’ ಅಂತ ಸೆಲೆಬ್ರೇಟ್ ಮಾಡ್ಬೇಕು ಅಂತ ಮುಖ್ಯಮಂತ್ರಿಗಳಿಗೆ ಮನವಿ ಕೊಟ್ಟವ್ರೆ ನಮ್ಮುಡುಗ್ರು

ರೀ, ಈ ರೌಡಿಸಂನ ನೀವೇನ್ ಸರಕಾರಿ ನೌಕರಿ ಅಂದ್ಕೊಂಡಿದ್ದೀರಾ. ಇಷ್ಟೊಂದ್ ವೈಲೆಂಟ್ ಆಗಿದ್ರೆ, ಯಾವಾಗ ಪೊಲೀಸ್ನೋರು ನಿಮಗೆ ಲೈಫಿಂದಲೇ ವಾಲೆಂಟರಿ ರಿಟೈರ್ಮೆಂಟ್ ಕೊಡ್ತಾರೋ ಗೊತ್ತಾಗಲ್ಲ.

-ಅಯ್ಯೋ, ಅವರಿಗೆ ವಾರೆಂಟ್ ಇಲ್ದೆ ನಮ್ಮನ್ನ ಅರೆ ಮಾಡೋಕೇ ಆಗಲ್ಲ, ನೀವ್ ಹೇಳ್ದಂಗೆ ನಮ್ಗೆ ಅಷ್ಟು ಸುಲಭವಾಗಿ ರೆ ಇನ್ ಪೀಸ್ ಎಲ್ಲ ಹೇಳೋಕಾಗಲ್ಲ, ಅರೆ ಮಾಡಿ ಜೈಲಿಗ್ ಹಾಕಿದ್ರೂ, ಒಳಗೂ ಆರಾಮಾಗಿ ರೆ ತಗೋತೀವಿ.

ಅದಿರ್ಲಿ, ನಿಯತ್ತಾಗಿ ಬದುಕೋಕೆ ಏನ್ ಕಷ್ಟ ನಿಮಗೆ?
-ಹಲೋ, ಯಾಕ್ರೀ, ನಿಯತ್ತಾಗಿ ಬದುಕೋಕೆ, ನಾವೇನ್ ನಿಮ್ ಕಣ್ಣಿಗೆ ನಾಯಿಗಳ ಥರ ಕಾಣ್ತೀದೀವಾ?

ಥೋ, ಹಂಗಲ್ಲ, ಈ ರೌಡಿಸಂ ಮಾಡೋದೇನ್ ದೊಡ್ಡ ಕೆಲಸ ಅಂದ್ಕೊಂಡಿದ್ದೀರಾ ಅಂತ ಕೇಳಿದ್ದು?
-ಮತ್ತೆ, ಇನ್ನೇನು, ಈ ಕೆಲ್ಸ ಮಾಡೋಕೂ ‘ಚಾಕು’ ಚಕ್ಯತೆ ಇರಬೇಕು ಗೊತ್ತಾ.

ಅಲ್ಲ ಕಣಪ್ಪಾ, ಎಲ್ಲರ ಹತ್ರ ಉಗಿಸ್ಕೊಂಡು ಬಾಳೋ ಈ ಥರ ಬಾಳು ಬೇಕಾ ನಿಮಗೆ?
-ಹಲೋ, ಯಾಕ್ರೀ, ನಾವೂ ಈ ಸಮಾಜದಲ್ಲಿ ‘ತಲೆ ಎತ್ಕೊಂಡೇ ಬದುಕ್ತಾ ಇರೋದು’ ಗೊತ್ತಾ ?

ನೆಟ್ ಪಿಕ್ಸ್ 
ಖೇಮು ಕಾಲೇಜಲ್ಲಿ ಓದುವಾಗ ಒಂದು ದಿನ ಲೈಬ್ರರಿಗೆ ಅಂತ ಹೋದ. ಅಲ್ಲಿ ತುಂಬಾ ಜನ ಇದ್ರು. ಎಲ್ಲರೂ ಕಾಮ್ ಆಗಿ ಕೂತು ಓದ್ತಾ ಇದ್ರು. ಖೇಮು ಕೂತ್ಕೊಳ್ಳೋಕೆ ಜಾಗ ಹುಡುಕ್ತಾ ಇದ್ದ. ಆದ್ರೆ ಎಲ್ಲೂ ಜಾಗ ಇರಲಿಲ್ಲ. ತುಂಬಾ ಹುಡುಕಿದ ಮೇಲೆ ಅಲ್ಲಿ ಒಂದು ಕಡೆ ಒಂದು ಸುಂದರವಾದ ಹುಡುಗಿ ಕೂತಿದ್ದು ಕಾಣಿಸಿತು. ಅವಳ ಪಕ್ಕದಲ್ಲಿ ಒಂದು ಜಾಗ ಖಾಲಿ ಇತ್ತು. ಆದರೆ ಖೇಮು ಸ್ವಲ್ಪ ನಾಚಿಕೆ ಸ್ವಭಾವದ ಹುಡುಗ. ಅವನಿಗೆ ಹುಡುಗಿಯ ಪಕ್ಕದಲ್ಲಿ ಹೋಗಿ ಕೂರೋದು ಮುಜುಗರ ಅನ್ನಿಸಿತು. ಆದರೆ ಬೇರೆ ದಾರಿ ಇರಲಿಲ್ಲ. ಸ್ವಲ್ಪ ಹೊತ್ತು ಯೋಚನೆ ಮಾಡಿ ನಂತರ ಧೈರ್ಯ ಮಾಡಿ ಆಕೆಯ ಬಳಿ ಹೋದ. ಎಕ್ಸ್ ಕ್ಯೂಸ್ ಮೀ ಅಂತ ಆಕೆಯನ್ನು ಮಾತನಾಡಿಸಿ, ಮೆಲುದನಿಯಲ್ಲಿ, ಲೈಬ್ರೆರಿಯಲ್ಲಿ ಬೇರೆ ಎಲ್ಲೂ ಜಾಗ ಇಲ್ಲ. ಇಫ್
ಯೂ ಡೋಂಟ್ ಮೈಂಡ್, ನಾನು ನಿಮ್ಮ ಪಕ್ಕದಲ್ಲಿ ಕೂತ್ಕೋಬಹುದಾ? ಅಂತ ಕೇಳಿದ.

ಅವಳು ಒಂದು ಕ್ಷಣ ಇವನ ಮುಖ ನೋಡಿ, ನಂತರ ಲೈಬ್ರೆರಿಯಲ್ಲಿರುವ ಎಲ್ಲರನ್ನೂ ಒಮ್ಮೆ ನೋಡಿ ಎದ್ದು ನಿಂತು ಎಲ್ಲರಿಗೂ ಕೇಳಿಸುವಂತೆ ಹೇಳಿದಳು ಎಷ್ಟು ಧೈರ್ಯ ನಿಂಗೆ, ಎಲ್ಲರ ಮುಂದೆ, ನಿನ್ ಜೊತೆ ಒಂದ್ ನೈಟ್ ಮಲಗಬೇಕು ಅಂತ ಕೇಳ್ತೀಯಾ?. ಖೇಮುಗೆ ಶಾಕ್ ಆಯ್ತು. ಗಾಬರಿಯಾದ. ಲೈಬ್ರರಿಯಲ್ಲಿದ್ದ ಎಲ್ಲರೂ ಇವನನ್ನೇ ಅಸಹ್ಯವಾಗಿ ನೋಡೋಕೆ ಶುರು ಮಾಡಿದ್ರು. ಖೇಮುಗೆ ನಾಚಿಕೆ ಆಗಿ, ಒಂದು ಬುಕ್ ಸ್ಟ್ಯಾಂಡ್ ಬಳಿ ಹೋಗಿ ಒಂದು ಪುಸ್ತಕ ತೆಗೆದು ಮುಖ ಮುಚ್ಚಿಕೊಂಡ. ಸ್ವಲ್ಪ ಹೊತ್ತಾದ ಮೇಲೆ ಆ ಹುಡುಗಿ ಖೇಮು ಹತ್ರ ಬಂದು, ಸಾರಿ, ನಾನೊಬ್ಬ ಸೈಕಾಲಜಿ ಸ್ಟೂಡೆಂಟ್. ಈ ಥರ ಸಂದರ್ಭದಲ್ಲಿ ಗಂಡಸರು ಹೇಗೆ ವರ್ತಿಸ್ತಾರೆ ಅಂತ ನೋಡಬೇಕಿತ್ತು. ಅದಕ್ಕೆ ಹಾಗೆ ಮಾಡಿದೆ ಅಂದಳು. ಅದಕ್ಕೆ ಖೇಮು ಅಲ್ಲಿದ್ದ ಎಲ್ಲರಿಗೂ ಕೇಳುವಂತೆ ಜೋರಾಗಿ ಹೇಳಿದ ಏನು? ಒಂದ್ ನೈಟಿಗೆ ೧೦,೦೦೦ ರುಪಾಯಿನಾ, ನೀನೇನು ತ್ರಿಪುರ ಸುಂದರಿ ಅಂತ ತಿಳ್ಕೊಂಡಿದ್ದೀಯಾ?. ಮತ್ತೆ ಅಲ್ಲಿದ್ದ ಎಲ್ಲರೂ ಇನ್ನಷ್ಟು ಆಶ್ಚರ್ಯದಿಂದ ಆ ಹುಡುಗಿಯನ್ನು ನೋಡಿದರು.

ಹುಡುಗಿ ಗಾಬರಿಯಾಗಿ ನಿಂತಿದ್ದು ನೋಡಿ ಖೇಮು ಹೇಳಿದ, ನಾನು ಲಾ ಸ್ಟೂಡೆಂಟ, ಒಬ್ಬರು ಹಾಕಿದ ಕೇಸನ್ನ ಅವರಿಗೆ ಉಲ್ಟಾ ತಿರುಗಿಸೋದು ಹೆಂಗೆ ಅಂತ ನನಗೆ ಗೊತ್ತು.

ಲೈನ್ ಮ್ಯಾನ್

ಕಾಡುಪಾಪಗಳ ಫೋಟೋ ತೆಗೆಯೋನು, ವೈಲ್ಡ ಲೈಫ್ ಫೋಟೋಗ್ರಾಫರ್
-ಮನೆಯಲ್ಲಿ ಪಾಪುಗಳ ಫೋಟೋ ತೆಗೆಯೋನು, ಚೈಲ್ಡ್ ಲೈಫ್ ಫೋಟೋಗ್ರಾಫರ್
ಫೋಟೋಗ್ರಾಫರ್ ಒಬ್ಬ ಸತ್ತರೆ, ನ್ಯೂಸ್ ಹೆಡ್ ಲೈನ್
-ಫೊಟೋಗ್ರಾಫರ್ ಫಿನಿಷ್
ಅರ್ಥ ಆಗ್ಲಿಲ್ಲ ಅನ್ನೋದನ್ನ ಫೋಟೋಗ್ರಾಫರ್‌ಗಳು ಹೆಂಗೆ ಹೇಳ್ತಾರೆ?
– ಅಯ್ಯೋ, ನಂಗೆ ಫ್ಲ್ಯಾಷ್ ಆಗ್ಲಿಲ್ಲ
ತುಂಬಾ ಸ್ವಚ್ಛವಾಗಿರೋ ಖಾಸಗಿ ಆಸ್ಪತ್ರೆ
Clean-ik

ಗೊಂಬೆ ಆಡ್ಸೋಕೆ ಇರಬೇಕಾದ ಪ್ರಮುಖ ಅಂಶ
-‘ಕೀ’ -ಕ್ಟರ್
ಇನ್ನೊಬ್ಬರನ್ನ ತುಳಿದು ಚೆನ್ನಾಗಿ ಬದುಕ್ತಾ ಇರೋರನ್ನ ನೋಡಿ ಹುಟ್ಟಿದ ಗಾದೆ
-ತುಳಿದವನು ಬಾಳಿಯಾನು
ಮದುವೆ ಆದ್ಮೇಲೆ ಲೈಫ್ ತುಂಬಾ ಚೆನ್ನಾಗಿರುತ್ತೆ ಅನ್ನೋ ಬ್ಯಾಚುಲರ್ ನಂಬಿಕೆ
-ತಾಳಿ ಕಟ್ಟಿದವನು ಬಾಳಿಯಾನು
ಹುಟ್ಟಿದ ಮಕ್ಕಳನ್ನ ಶಾಲೆಗೆ ಸೇರಿಸೋ ಆತುರ ಇರೋ ಕಾಲ
-‘ಕಲಿ’ಯುಗ
ಮಿತಿಮೀರಿದ ಆಭಾಸ
-ನಿದ್ದೆ ಮಾಡುವಾಗ ಕನಸಲ್ಲೂ ನಿದ್ದೆ ಮಾಡೋ ಥರ ಕನಸು ಬೀಳೋದು.
ಕಾರ್ಡ್ಸ್ ಆಡಿ ತನ್ನ ಸಂಸಾರ ಹಾಳು ಮಾಡಿಕೊಂಡವನನ್ನು ಏನಂತ ಕೇಳ್ಬೇಕು?
-ನೀನಾರಿಗಾದೆಯೋ ‘ಎಲೆ’ ಮಾನವ?
ಬಿಯರ್ ಕುಡಿಯುವುದರಲ್ಲಿ ತಲ್ಲೀನನಾದವನು
-‘ಮಗ್’ ನ