ವೀಕೆಂಡ್ ವಿತ್ ಮೋಹನ್
camohanbn@gmail.com
ವಾಸ್ತವ ಮರೆಮಾಚಲು ಸಿನೆಮಾಗಳ ಮೂಲಕ ಹಿಂದೂ ಧರ್ಮ ನಿಂದನೆಗೆ ಅಚ್ಚುಕಟ್ಟಾಗಿ ಲೊಡ್ಡೆಗಳ ಜತೆಗೂಡಿ ನಿರ್ದೇಶಕರ ಗ್ಯಾಂಗ್ ಕಾರ್ಯನಿರ್ವಹಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ ಹಿಂದೂ ಧರ್ಮ ಜಾಗೃತಿ ಹೆಚ್ಚಾಗುತ್ತಿರುವುದು ಲೊಡ್ಡೆಗಳಿಗೆ ತಲೆ ನೋವಾಗಿ ಪರಿಣಮಿಸಿದೆ.
ದೂರದ ಕೆನಡಾದಲ್ಲಿ ಕುಳಿತುಕೊಂಡು ನಿರ್ದೇಶಕಿ ಲೀನಾ ಮಣಿಮೇಕಲೈ, ‘ಕಾಳಿ’ ಸಾಕ್ಷ್ಯಚಿತ್ರದ ಪೋಸ್ಟರ್‌ನಲ್ಲಿ ಹಿಂದೂ ದೇವತೆಯ ಬಾಯಿಯಲ್ಲಿ ಸಿಗರೇಟ್ ಹಚ್ಚಿಸುತ್ತಾಳೆ.
ವಾಕ್ ಸ್ವಾತಂತ್ರ್ಯದ ಹೆಸರಿನಲ್ಲಿ ಹಿಂದೂ ದೇವತೆಗಳಿಗೆ ಅಪಮಾನ ಮಾಡುವ ಕೆಲಸ ಮಾಡುತ್ತಾಳೆ. ಈಕೆಯ ಉದ್ದಟತನ ವೆಷ್ಟಿದೆಯೆಂದರೆ ತಾನು ಮಾಡಿರುವ ತಪ್ಪಿಗೆ ಕ್ಷಮೆ ಕೇಳದೇ ಬಹಿರಂಗವಾಗಿ ಸಮರ್ಥಿಸಿಕೊಂಡಿದ್ದಾಳೆ. ಚಲನಚಿತ್ರಗಳ ಮೂಲಕ ಹಿಂದೂ ದೇವತೆಗಳನ್ನು ಅಪಮಾನ ಮಾಡುವ ವಿಷಯ ಇಂದು ನೆನ್ನೆಯದಲ್ಲ.
1980ರ ದಶಕದಲ್ಲಿ ಬಾಲಿವುಡ್ ಅಂಗಳದಲ್ಲಿ ಶುರುವಾದ ಈ ‘ಟೂಲ್ ಕಿಟ್’ ನಾಲ್ಕು ದಶಕಗಳಿಂದ ನಡೆದುಕೊಂಡು ಬಂದಿದೆ. ಆಗಷ್ಟೇ ಬಾಲಿವುಡ್ ಅಂಗಳಕ್ಕೆ ಮುಂಬೈ ಭೂಗತ ಲೋಕದ ಕಪ್ಪು ಹಣ ಹರಿದು ಬರಲು ಶುರುವಾಗಿತ್ತು. ಮುಂಬೈ ಭೂಗತ ಲೋಕವನ್ನು ಆಳುತ್ತಿದ್ದಂತಹ ಹಾಜಿ ಮಸ್ತಾನ್ ಅನ್ಯಾಯದ ದುಡ್ಡನ್ನು ಬಾಲಿವುಡ್ ಸಿನೆಮಾಗಳ ಮೇಲೆ ಹೂಡಿಕೆ ಮಾಡಲು ಶುರುಮಾಡಿದ್ದ.
ನಿಧಾನವಾಗಿ ಬಾಲಿವುಡ್ ಸಿನೆಮಾಗಳಲ್ಲಿ ಹಿಂದೂ ಧರ್ಮಕ್ಕೆ ಅವಮಾನವಾಗುವ ವಿಷಯಗಳನ್ನು ಚಿತ್ರಿಸಲಾಗುತ್ತಿತ್ತು. ವಾಸ್ತವ ದಲ್ಲಿ ಮುಂಬೈ ಭೂಗತ ಪ್ರಪಂಚವನ್ನು ಆಳಿದ್ದು ‘ಮುಸ್ಲಿಂ ಡಾನ್’ ಗಳು. ಆದರೆ ಸಿನೆಮಾಗಳಲ್ಲಿ ಡಾನ್ ಪಾತ್ರ ನಿರ್ವಹಿಸು ವವನು ಹಿಂದುವಾಗಿರುತ್ತಾನೆ. ಆತನ ವೇಷಭೂಷಣಗಳೆಲ್ಲವೂ ಹಿಂದೂ ಧರ್ಮದ್ದೇ ಆಗಿರುತ್ತದೆ. ಆತನ ಹಣೆಯ ಮೇಲೆ ಕೇಸರಿ ತಿಲಕವಿರುತ್ತದೆ.
ಕೈಯಲ್ಲಿ ಕೇಸರಿ ಬಣ್ಣದ ದಾರವಿರುತ್ತದೆ. ‘ವಾಸ್ತವ್’ ಸಿನಿಮಾದಲ್ಲಿ ಭೂಗತ ಪಾತಕಿಯಾಗಿ ಅಭಿನಯಿಸಿದ ಸಂಜಯ್ ದತ್ ವೇಷಭೂಷಣದಲ್ಲಿ ಸ್ಪಷ್ಟವಾಗಿ ಇದನ್ನು ಕಾಣಬಹುದು. ಅದೇ ಸಿನಿಮಾದಲ್ಲಿ ಸಂಜಯ್ ದತ್ ಜತೆಯಲ್ಲಿರುವ ಮುಸ್ಲಿಂ ಪಾತ್ರಧಾರಿ ಪರೇಶ್ ರಾವಲ್ ಅಮಾಯಕನಾಗಿ ಇಡೀ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಅಮೆಜಾನ್ ಪ್ರೈಮನಲ್ಲಿ ತೆರೆ ಕಂಡಂತಹ ‘ಮಿರ್ಜಾಪುರ್’ ವೆಬ್ ಸೀರೀಸ್ ಎರಡು ಸೀಸನ್ ಮುಗಿಸಿದೆ. ಈ ಸೀರೀಸ್‌ನಲ್ಲಿ ಒಂದು ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದವ ಡಾನ್ ಆಗಿರುತ್ತಾನೆ. ಆತನ ತಂದೆಯೂ ಒಂದು ಕಾಲದ ಡಾನ್ ಆಗಿದ್ದು, ಭೂಗತ ಲೋಕದ ಕರಾಳ ಅಧ್ಯಾಯ ಗಳನ್ನು ಕ್ರೂರವಾಗಿ ಚಿತ್ರಿಸಲಾಗಿದೆ. ಈ ವೆಬ್ ಸೀರೀಸ್‌ನ ಡಾನ್ ಕೂಡ ಹಣೆಯ ಮೇಲೆ ತಿಲಕವನ್ನಿಟ್ಟುಕೊಂಡಿರುತ್ತಾನೆ.
ತನ್ನ ಕೈಯಲ್ಲಿ ಕೇಸರಿ ಬಣ್ಣದ ದಾರವನ್ನು ಕಟ್ಟಿಕೊಂಡಿರುತ್ತಾನೆ. ಈತನಿಗೂ ಒಬ್ಬ ಅಮಾಯಕ ಮುಸ್ಲಿಂ ಬಲಗೈ ಭಂಟನಿರು ತ್ತಾನೆ. 1990ರ ದಶಕದಲ್ಲಿ ಬಾಲಿವುಡ್ ಅಂಗಳಕ್ಕೆ ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಪ್ರವೇಶವಾಗುತ್ತದೆ. ಅಬು ಸಲೇಂ
ಜತೆಗೂಡಿ ಬಾಲಿವುಡ್‌ನಲ್ಲಿ ಸಿನಿಮಾ ನಿರ್ಮಾಣಕ್ಕೆ ದಾವೂದ್ ಕೈ ಹಾಕುತ್ತಾನೆ. ಆಗ ಹುಟ್ಟಿಕೊಂಡ ನಾಯಕರು ಶಾರುಖ್
ಖಾನ್, ಅಮಿರ್ ಖಾನ್ ಹಾಗೂ ಸಲ್ಮಾನ್ ಖಾನ್. 90ರ ದಶಕದಲ್ಲಿ ಸಂಪೂರ್ಣ ಬಾಲಿವುಡ್‌ಅನ್ನು ಆಳಿದ ಈ ಖಾನ್ ತ್ರಯರು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದರು.
ಬೇರೊಬ್ಬರನ್ನು ಬೆಳೆಯಲು ಬಿಡದೇ ಇಡೀ ಬಾಲಿವುಡ್ ಅಂಗಳವನ್ನೇ ಆಕ್ರಮಿಸಿಕೊಂಡಿದ್ದರು. ಆಗಿನ ಕಾಲದಲ್ಲಿ ನಾವೂ ಸಹ ಇವರ ದೊಡ್ಡ ಅಭಿಮಾನಿಗಳಾಗಿದ್ದೆವು. ದಶಕಗಳ ನಂತರವಷ್ಟೇ ಬಾಲಿವುಡ್‌ನ ಆಳದ ಅರ್ಥವಾದದ್ದು. ತೀರಾ ಇತ್ತೀಚಿನ ಉದಾಹರಣೆ, ಅಮಿರ್‌ಖಾನ್ ಅಭಿನ ಯದ ‘ಪಿ.ಕೆ’ ಸಿನಿಮಾ. ಅದರಲ್ಲಿ ಹಿಂದೂ ದೇವರುಗಳನ್ನು ಕೆಟ್ಟದಾಗಿ ತೋರಿಸಲಾಗಿದೆ. ಶಿವನ ವೇಷಧಾರಿಯನ್ನು ತೀರಾ ಕೆಳಮಟ್ಟದಲ್ಲಿ ಹಾಸ್ಯಮಿಶ್ರಿತವಾಗಿ ತೋರಿಸಲಾಗಿದೆ. ಚಿತ್ರದಲ್ಲಿ ಹಿಂದೂ ಸ್ವಾಮೀಜಿಗಳನ್ನು ಕೆಟ್ಟದಾಗಿ ತೋರಿಸಲಾಗಿದೆ. ಒಮ್ಮೆಯಾದರೂ ಯೇಸು ಕ್ರಿಸ್ತನನ್ನು ನಗೆಪಾಟಲಿಗೆ ಗುರಿಯಾಗಿಸುವ ಧೈರ್ಯ ಅಮಿರ್‌ಖಾನ್‌ಗೆ ಇದೆಯೇ? ಅಷ್ಟೇ ಯಾಕೆ ತನ್ನದೇ ಧರ್ಮದ ದೇವರನ್ನು ನಗೆಪಾಟಲಿಗೆ ಗುರಿಯಾಗಿಸುತ್ತಾನೆಯೇ? ಅಷ್ಟೇಕೆ ಯೇಸು ಕ್ರಿಸ್ತನನ್ನು
ವಿಮರ್ಷಿಸುವ ಹಲವು ಇಂಗ್ಲಿಷ್ ಸಿನಿಮಾಗಳನ್ನು ಭಾರತದಲ್ಲಿ ಬಿಡುಗಡೆ ಮಾಡಲೇ ಕ್ರಿಶ್ಚಿಯನ್ ಸಂಘಟನೆಗಳು ಬಿಡುವುದಿಲ್ಲ.
‘ಪಿ.ಕೆ’ಯಲ್ಲಿ ಅನುಷ್ಕಾ ಶರ್ಮ ಪಾಕಿಸ್ತಾನಿ ಹುಡುಗನ ಜತೆ ಪ್ರೀತಿಯಲ್ಲಿ ಬಿದ್ದಾಗ ಆಕೆಯ ಮದುವೆಗೆ ಹುಡುಗನ ಕುಟುಂಬದವರ ತಕರಾರಿಲ್ಲದ ರೀತಿಯಲ್ಲಿ ತೋರಿಸಲಾಗಿದೆ. ವಾಸ್ತವದಲ್ಲಿ ಪಾಕಿಸ್ತಾನದಗುವಷ್ಟು ಮರ್ಯಾದಾ ಹತ್ಯೆಗಳು ಮತ್ತೆಲ್ಲೂ ಆಗುವು ದಿಲ್ಲ. ಅಷ್ಟೇ ಯಾಕೆ ಅಮಿತಾಭ್ ಬಚ್ಚನ್ ಅಭಿನಯದ ‘ದೀವಾರ್ ‘ಸಿನಿಮಾದಲ್ಲಿ ನಾಯಕನು ನಾಸ್ತಿಕನಾಗಿ ಶಿವನನ್ನು
ಬಯ್ಯುವ ಸನ್ನಿವೇಶವನ್ನು ಚಿತ್ರೀಕರಿಸಲಾಗಿದೆ. ಕೆಲ ವರ್ಷಗಳ ಹಿಂದೆ ಪ್ರಿಯಾಂಕಾ ಚೋಪ್ರಾ ನಿರ್ಮಿಸಿದ ವೆಬ್ ಸೀರೀಸ್ ಒಂದರಲ್ಲಿ ಹತ್ಯೆಗೀಡಾದಂತಹ ಭಯೋತ್ಪಾದಕನ ಕುತ್ತಿಗೆಯಲ್ಲಿ ರುದ್ರಾಕ್ಷಿಮಣಿಯನ್ನು ತೋರಿಸಲಾಗಿತ್ತು.
ಈವರೆಗೆ ಜಗತ್ತಿನಲ್ಲಿ ಹತ್ಯೆಗೀಡಾದ ಭಯೋತ್ಪಾದಕರ ಪೈಕಿ ಒಬ್ಬೇ ಒಬ್ಬನ ಕುತ್ತಿಗೆಯಲ್ಲೂ ರುದ್ರಾಕ್ಷಿ ಕಂಡುಬಂದಿಲ್ಲ. ಕನ್ನಡ ಚಿತ್ರರಂಗದಲ್ಲಿ 1997ರಲ್ಲಿ ತೆರೆಕಂಡಂತಹ ಉಪೇಂದ್ರ ನಿರ್ದೇಶನದ ‘ಎ’ ಚಿತ್ರದಲ್ಲಿ ಗಣೇಶನ ನಿಂದನೆ ಮಾಡಲಾಗಿದೆ. ಗಣೇಶನ ಮುಂದೆ ಕುಳಿತು ನಾಯಕ ನಟ ಉಪೇಂದ್ರ ದೇವರಿಗೆ ಬಯ್ಯುವ ದೃಶ್ಯಗಳನ್ನು ಕಂಡು ಪ್ರೇಕ್ಷಕರು ಶಿಳ್ಳೆ ಹೊಡೆಯುತ್ತಿದ್ದರು. ಗಣೇಶನನ್ನು ಪೂಜಿಸುವ ಅರ್ಚಕನ ನಿಂದನೆಯನ್ನು ಕಂಡು ಪ್ರೇಕ್ಷಕರು ನಗುತ್ತಿದ್ದರು.
ವಿಭಿನ್ನ ರೀತಿಯಲ್ಲಿ ಸಿನಿಮಾ ಮಾಡುತ್ತೇನೆಂದು ಚಿತ್ರರಂಗಕ್ಕೆ ಬಂದಂತಹ ಉಪೇಂದ್ರನಿಗೆ ಬೇರೆ ಧರ್ಮದಲ್ಲಿನ ನಾಸ್ತಿಕರು
ಕಾಣಿಸಲಿಲ್ಲವೇ? ನಂತರ ತಾನು ನಟಿಸಿದ ಚಿತ್ರಗಳಲ್ಲಿ ಇತರೆ ಧರ್ಮದ ದೇವರುಗಳ ಬಗ್ಗೆ ಯಾಕೆ ಮಾತನಾಡಲಿಲ್ಲ ? ಲೀನಾ ಕಿರುಚಿತ್ರದ ಪೋಸ್ಟರನ್ನು ಪಶ್ಚಿಮ ಬಂಗಾಳದ ಟಿಎಂಸಿ ಶಾಸಕಿ ಮಹುವಾ ಸಮರ್ಥಿಸಿಕೊಂಡಿದ್ದಾರೆ. ನಾವು ಹಿಂದೂಗಳು ಬಹಳ ಸಹಿಷ್ಣುಗಳು. ಶುಕ್ರವಾರ ನಾವು ಒಂದೆಡೆ ಸಾಮೂಹಿಕವಾಗಿ ಸೇರುವುದಿಲ್ಲ. ನಮ್ಮಲ್ಲಿ ಒಗ್ಗಟ್ಟೆನ್ನುವುದೇ ಇಲ್ಲ. ನಮ್ಮ ದೇವರು ಗಳಿಗೆ ಆದ ಅವಮಾನಗಳನ್ನು ಸಹಿಸಿಕೊಂಡೆ 75 ವರ್ಷ ಕಳೆದಿದ್ದೇವೆ.
ಪಶ್ಚಿಮ ಬಂಗಾಳದಲ್ಲಿ ದುರ್ಗಾ ಪೂಜೆ ದೊಡ್ಡ ಹಬ್ಬ. ಪ್ರತಿ ವರ್ಷ ದುರ್ಗಾ ಪೂಜೆಯಂದು ಕೋಲ್ಕತಾ ನಗರದ ತುಂಬೆಲ್ಲ
ಮೆರವಣಿಗೆಗಳು ನಡೆಯುತ್ತವೆ. ಅಷ್ಟೊಂದು ವಿಜೃಂಭಣೆಯಿಂದ ನಡೆಯುವ ದುರ್ಗಾ ಪೂಜೆ ಮಾಡುವ ಟಿಎಂಸಿ ನಾಯಕಿಯ ಬಾಯಲ್ಲಿ ಕಾಳಿಯ ಬಗ್ಗೆ ಎಷ್ಟು ಕೆಟ್ಟದಾದ ಮಾತು? ಟಿಎಂಸಿ ಪಕ್ಷ ಆಕೆಯ ಹೇಳಿಕೆಯಿಂದ ದೂರ ಸರಿದಿರುವುದು ಒಂದು ನಾಟಕವಷ್ಟೇ.
ಹಾಜಿ ಮಸ್ತಾನ್ ಜೀವನ ಚರಿತ್ರೆಯನ್ನೊಳಗೊಂಡ ‘ಒನ್ಸ್ ಅಪಾನ್ ಎ ಟೈಮ್ ಇನ್ ಮುಂಬೈ’ ಸಿನಿಮಾದಲ್ಲಿ,ಅಜಯ್ ದೇವ ಗನ್ ಪಾತ್ರದಾರಿಯನ್ನು ತುಂಬಾ ದೊಡ್ಡ ಮಟ್ಟದಲ್ಲಿ ವೈಭವೀಕರಿಸಲಾಯಿತು. ಒಬ್ಬ ಭೂಗತ ಪಾತಕಿಯನ್ನು ಅಷ್ಟೊಂದು ವೈಭವೀಕರಿಸುವ ಅಗತ್ಯವೇ ಇರಲಿಲ್ಲ, ತನ್ನ ಮಾತು ಕೇಳದವರನ್ನು ಅಬು ಸಲೇಂನಂತಹ ಭೂಗತ ರೌಡಿ ಕೊಲ್ಲಿಸಿದ ಹಲವು ಉದಾಹರಣೆಯುಂಟು, ಗುಲ್ಶನ್ ಕುಮಾರ್ ಸಾವನ್ನು ಈತನೇ ಮಾಡಿಸಿzನೆಂಬ ಗುಮಾನಿಯು ಇಂದಿಗೂ ಇದೆ. ಇದು ಇಷ್ಟಕ್ಕೆ ನಿಲ್ಲಲಿಲ್ಲ.
ಹಿಂದಿ ಸಿನೆಮಾಗಳಲ್ಲಿ ಹಿಂದೂ ಅರ್ಚಕರನ್ನು ಹಲವು ಬಾರಿ ನಗೆ ಪಾಟಲಿಗೆ ಗುರಿಯಾಗಿಸಲಾಗಿದೆ. ಹಣೆಯ ಮೇಲೆ ಕೆಂಪ
ನೆಯ ದೊಡ್ಡ ಕುಂಕುಮವನ್ನು ಹಾಕಿಕೊಂಡು ಕುಳಿತಿರುವ ಮಂತ್ರವಾದಿಯೊಬ್ಬ ನಾಯಕನಿಗೆ ತೊಂದರೆ ಕೊಡುವುದು,
ನಾಯಕಿಯನ್ನು ಅತ್ಯಾಚಾರ ಮಾಡುವ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. ಒಂದು ಸಂಶೋಧನೆಯ ಪ್ರಕಾರ ಇದುವರೆಗೂ ಬಾಲಿವುಡ್‌ನಲ್ಲಿ ತೆರೆಕಂಡಿರುವ ಸಿನೆಮಾಗಳಲ್ಲಿ ಶೇ.74ರಷ್ಟು ಸಿನಿಮಾಗಳಲ್ಲಿ ಸಿಖ್ಖರನ್ನು ಹಾಸ್ಯನಟರನ್ನಾಗಿ ತೋರಿಸಲಾಗಿದೆ.
ಸ್ವಾತಂತ್ರ್ಯ ಹೋರಾಟ, ಭಾರತೀಯ ಸೈನ್ಯ ಸೇರಿದಂತೆ ಎಲ್ಲೆಡೆ ಅಪ್ರತಿಮ ಸಾಹಸ ಮೆರೆಯುವ ಸಿಖ್ಖರನ್ನು ಹಾಸ್ಯ ನಟರನ್ನಾಗಿ ತೋರಿಸಿ ಜನರ ತಲೆ ಹಾಳುಮಾಡಿದ ಕೀರ್ತಿ ಬಾಲಿವುಡ್‌ನ ಮುಸ್ಲಿಂ ಭೂಗತಲೋಕಕ್ಕೆ ಸಲ್ಲಬೇಕು. ಈ ಅಧ್ಯಯನ ಇಲ್ಲಿಗೇ ನಿಲ್ಲಲಿಲ್ಲ ಶೇ.58ರಷ್ಟು ಭ್ರಷ್ಟ ರಾಜಕೀಯ ನಾಯಕರುಗಳ ಹೆಸರು ಬ್ರಾಹ್ಮಣರದ್ದಾಗಿತ್ತು.
ಶೇ.62ರಷ್ಟು ವೈಶ್ಯರನ್ನು ಭ್ರಷ್ಟ ವ್ಯವಹಾರಸ್ಥರನ್ನಾಗಿ ತೋರಿಸಲಾಗಿತ್ತು. ಆದರೆ ಶೇ.48ರಷ್ಟು ಮುಸಲ್ಮಾನರನ್ನು ಪ್ರಾಮಾ
ಣಿಕ ಹಾಗೂ ಬಲವಾದ ಧಾರ್ಮಿಕ ನಂಬಿಕೆಯಿರುವವರಂತೆ ತೋರಿಸಲಾಗಿತ್ತು. ಸಿನಿಮಾ ಸಂವಹನ ಮಾಧ್ಯಮದ ಮೂಲಕ ತಮ್ಮ ಕಮ್ಯುನಿಸ್ಟ್ ಸಿದ್ಧಾಂತಗಳನ್ನು ಹೇರುವ ತಂತ್ರಗಾರಿಕೆಯನ್ನು ಲೊಡ್ಡೆಗಳು ದಶಕಗಳಿಂದ ಮಾಡುತ್ತ ಬಂದಿದ್ದಾರೆ. ಮಹಿಳಾ
ಸಬಲೀಕರಣದ ಹೆಸರಿನಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಸಿನಿಮಾ, ವೆಬ್ ಸೀರೀಸ್, ಕಿರುಚಿತ್ರಗಳ ಮೂಲಕ ಹಿಂದೂ
ಸಂಸ್ಕೃತಿಯ ಮೇಲೆ ಹೇರುತ್ತಾರೆ. ದಸರಾ ಸಂದರ್ಭದಲ್ಲಿ ಮೈಸೂರಿನಲ್ಲಿ ಲೊಡ್ಡೆಗಳ ಗುಂಪು ಚಾಮುಂಡೇಶ್ವರಿಯನ್ನು ಅವಮಾನಿಸಲು ಮಹಿಷಾಸುರನ ಹೆಸರಿನಲ್ಲಿ ದಸರಾ ಮಾಡಲು ಮುಂದಾಗುತ್ತದೆ.
ಚಲನಚಿತ್ರಗಳಲ್ಲಿ ಖಳನಾಯಕರ ಹೆಸರುಗಳ ಉಪನಾಮದಲ್ಲಿ ಅಯ್ಯರ್, ಹೆಗ್ಡೆ, ಭಂಡಾರಿ ಹೆಸರುಗಳನ್ನು ಸೇರಿಸುವ ಮೂಲಕ ವೀಕ್ಷಕರಿಗೆ ಕೇವಲ ಹಿಂದೂ ಸಮುದಾಯದವರು ಮಾತ್ರ ಸಮಾಜಘಾತಕ ಕೃತ್ಯದಲ್ಲಿ ತೊಡಗಿದ್ದಾರೆಂಬ ಸಂದೇಶ ನೀಡುತ್ತಾರೆ.
ಜಗತ್ತಿನ ಅತ್ಯಂತ ಸಹಿಷ್ಣುತ ಧರ್ಮವೆಂದರೆ ಹಿಂದೂ ಧರ್ಮ, ಅನಾದಿಕಾಲದಿಂದಲೂ ಹಿಂದೂ ಧರ್ಮದ ಆಚರಣೆಗಳು ಹಾಗೂ ದೇವರುಗಳ ಮೇಲೆ ನಿರಂತರ ದಾಳಿಗಳಾದರೂ ಸಹಿಸಿಕೊಂಡು ಹೋಗುವುದು ರೂಢಿಯಾಗಿಬಿಟ್ಟಿದೆ.
ಹಿಂದೂಗಳ ಸಹಿಷ್ಣುತೆಯನ್ನೇ ಬಂಡವಾಳವಾಗಿಸಿಕೊಂಡು ಲೀನಾ ಮಣಿಮೇಕಲೈ ತರಹದ ನಿರ್ದೇಶಕಿಯರು ಬಾಯಿಗೆ
ಬಂದಂತೆ ಮಾತನಾಡುತ್ತಾರೆ. ಹಿಂದೂ ಧರ್ಮದ ಆಚರಣೆಗಳನ್ನು ಮೂಢನಂಬಿಕೆಗಳಂತೆ ತೆರೆಯ ಮೇಲೆ ತೋರಿಸುತ್ತಾರೆ. ಇಳೆಯ ಮೇಲಿನ ಸ್ವರ್ಗವನ್ನು ನಾಶ ಮಾಡಿ ಕಣ್ಣಿಗೆ ಕಾಣದ ಸ್ವರ್ಗಕ್ಕೆ 72 ಕನ್ಯೆಯರ ಕನಸು ಕಾಣುವ ಭಯೋತ್ಪಾದಕರ ಮೂಢನಂಬಿಕೆ ಲೊಡ್ಡೆಗಳ ಕಣ್ಣಿಗೆ ಕಾಣುವುದಿಲ್ಲ.
ರೋಗಗಳನ್ನು ವಾಸಿಮಾಡಿಕೊಡುವ ಶಕ್ತಿಯಿರುವ ಕ್ರಿಶ್ಚಿಯನ್ ಪಾದ್ರಿಗಳಿಗೆ ತಮ್ಮ ಸರ್ವೋಚ್ಚ ಗುರುವನ್ನು ವೀಲ್ ಚೇರ್ ನಿಂದ ಕೆಳಗಿಳಿಸಿ ಓಡಾಡುವಂತೆ ಮಾಡಲಾಗಲಿಲ್ಲ, ಆದರೂ ಅಂತಹ ಪಾದ್ರಿಗಳನ್ನು ನಂಬುವ ಭಕ್ತರಿಗೆ ಅಲ್ಲಿನ ಮೂಢನಂಬಿಕೆಗಳ ಬಗ್ಗೆ ಅರಿವು ಮೂಡಿಸುವ ದೃಶ್ಯಗಳನ್ನು ತೆರೆಯ ಮೇಲೆ ತೋರಿಸುವ ಧೈರ್ಯ ಮಾಡುವುದಿಲ್ಲ.