ಹಂಪಿ ಎಕ್ಸ್’ಪ್ರೆಸ್
ದೇವಿ ಮಹೇಶ್ವರ ಹಂಪಿನಾಯ್ಡು
1336hampiexpress1509@gmail.com
ನಮ್ಮ ಕುಟುಂಬದ ಪಿತ್ರಾರ್ಜಿತ ಆಸ್ತಿಯನ್ನು ಸತ್ತ ಆಸ್ತಿ ಎಂದು ಹೇಳಲು ಸಾಧ್ಯವಾಗುತ್ತದೆಯೇ? ಮನೆಯ ಆಸ್ತಿಯ ಹಕ್ಕಿನ ಪ್ರಶ್ನೆ ಬಂದಾಗ ಅವಸರವಾಗಿ ಹೋಗುವ ನಾವು ನಮ್ಮ ಸಂಸ್ಕೃತಿ, ವೈಚಾರಿಕತೆ ಹಾಗೂ ಭಾಷೆಯನ್ನು ಉಳಿಸಿಕೊಳ್ಳಲು ಏಕೆ ಮುಂದಾಗುವುದಿಲ್ಲ?
ಮೊನ್ನೆ ಕಾಳಿಮಠದ ಋಷಿಕುಮಾರ ಸ್ವಾಮೀಜಿ ಶ್ರೀ ರಂಗಪಟ್ಟಣದಲ್ಲಿ ಇಂದು ಇರುವ ಮಸೀದಿಯ ಜಾಗದಲ್ಲಿ ಈ ಹಿಂದೆ ಹಿಂದೂ ದೇವಾಲಯವಿತ್ತು. ಹೀಗಾಗಿ ಈಗ ಮತ್ತೆ ಅಲ್ಲಿ ಹಿಂದೂ ದೇವಾಲಯ ನಿರ್ಮಿಸಬೇಕು ಎಂದು ಕೂಡಲೇ ಅವರನ್ನು ಬಂಽಸಲಾಯಿತು. ಅಮೂಲ್ಯ ದೇಗುಲಗಳನ್ನು ಕಳೆದುಕೊಂಡು ಮತ್ತೆ ಅದನ್ನು ಹಿಂಪಡೆಯುವ ಬಗ್ಗೆ ಮಾತನಾಡಿದರೆ ಈ ಮಟ್ಟದ ಕಾನೂನು ಕಟ್ಟಳೆಗಳಿರಬೇಕಾದರೇ ಸಂಸ್ಕೃತವೆಂಬ ಸನಾತನ ಪರಂಪರೆಯ ಸಕಲ ಭಾಷೆಗಳ ತಾಯಿ ಭಾಷೆಯನ್ನು ಇಂದು ನಾವುಗಳೇ ಸತ್ತಭಾಷೆ ಎಂದು ನಿರ್ಲಕ್ಷಿಸಿದರೆ ಅಂಥ ದೈವಿ ಭಾಷೆಯನು ಇನ್ನಾರೂ ಉಳಿಸಿಕೊಳ್ಳಲು ಸಾಧ್ಯವಿಲ್ಲ.
ಬದಲಾದ ಕಾಲಘಟ್ಟದಲ್ಲಿ ಮನುಷ್ಯ ತನ್ನ ಪೂರ್ವಜರ ಪಿತ್ರಾರ್ಜಿತ ಮನೆ ಜಮೀನು, ತೊಟ, ಹೊಲಗದ್ದೆ, ಬಾವಿ, ಒಡವೆ, ಬಂಗಾರವೆ ತನಗೆ ಸೇರಬೇಕೆಂದು ನ್ಯಾಯಾಲಯಗಳಲ್ಲಿ ದಾವೆ ಹೂಡಿ ಹಕ್ಕನ್ನು ಚಲಾಯಿಸಿ ಅಲೆದಾಡುತ್ತಾನೆ. ಅದೇ ರೀತಿ ತನ್ನ ಪೂರ್ವಜರ ವೈಚಾರಿಕತೆ, ಆಚಾರ ವಿಚಾರ, ಸಂಪ್ರದಾಯಗಳೂ ನನಗೆ ಸೇರಬೇಕೆಂದು ಹಕ್ಕು ಚಲಾಯಿಸುವುದಿಲ್ಲ. ತಾತ ಮುತ್ತಾತರ ಚಿರಾಸ್ಥಿಗಳಂತೆ ಅವರ ಬೌದ್ಧಿಕ ಮೌಲ್ಯಗಳನ್ನು ಮುಂದುವರೆಸಿಕೊಂಡು ಹೋಗುವುದು ನನ್ನ ಹಕ್ಕು ಎಂದು ಏಕೆ ಪ್ರತಿಪಾದಿಸುವುದಿಲ್ಲ? ದೈವೀ ಭಾಷೆ ಸಂಸ್ಕೃತ ನಮ್ಮ ಸನಾತನ ಪರಂಪರೆಯಲ್ಲಿ ನಮ್ಮೊಂದಿಗೆ ಮಿಳಿತಗೊಂಡಿರುವ ಭಾರತೀಯ ಪರಂಪರೆಯ ಗ್ರಂಥಸ್ಥ ಭಾಷೆ ಮತ್ತು ಪಾರಂಪರಿಕ ಧಾರ್ಮಿಕ ಆಸ್ತಿ. ಅದರ ಉಚ್ಚರಣೆಯಲ್ಲೇ ವಿದ್ಯುತ್ ತರಂಗಗಳ ಧನಾತ್ಮಕವಾದ ಶಕ್ತಿಯಿರುವುದು ವೈಜ್ಞಾನಿಕ ಸತ್ಯವಾಗಿದೆ.
ಯಾವುದೇ ಕಾಲಮಾನದಲ್ಲೂ ಬದಲಾಗದ ಸಂಸ್ಕೃತ ಭಾಷೆಯನ್ನು ಭಾರತೀಯರಲ್ಲದೆ ಇನ್ನಾರು ಉಳಿಸಿ ಬೆಳೆಸಲು ಸಾಧ್ಯ? ಅದನ್ನು ಮುಂದಿನ ತಲೆಮಾರುಗಳಿಗೆ ಸಲ್ಲುವಂತೆ ಮಾಡುವುದು ನಮ್ಮ ಕರ್ತವ್ಯ. ಕರ್ನಾಟಕದಲ್ಲಿ ಮಾತ್ರವ ದೇಶದ ಎಲ್ಲಾ ರಾಜ್ಯಗಳಲ್ಲೂ ಸಂಸ್ಕೃತ ಇರಬೇಕಾದ ಸ್ಥಳದಲ್ಲಿ ಇದ್ದೇ
ಇದೆ. ಹಾಗೆಯೇ ಸ್ಥಳಿಯ ಭಾಷೆಯೊಂದಿಗೆ ಅವಿನಾಭಾವ ಸಂಬಂಧ ಇರಿಸಿಕೊಂಡಿದೆ. ಸಂಸ್ಕೃತವು ಬ್ರಾಹ್ಮಿ ಲಿಪಿಯಿಂದ ಟಿಸಿಲೊಡೆದು ದೇವನಾಗರಿ ನಂದಿನಾಗರಿ ಎಂಬ ಎರಡು ಲಿಪಿಗಳಲ್ಲಿ ಹರಿದಿದೆ. ಬ್ರಾಹ್ಮಣ ಕುಲದವನಾದ ಮಯೂರಶರ್ಮ ಕನ್ನಡಿಗರ ಸಾಭಿಮಾನಕ್ಕೆ ಪೆಟ್ಟಾದಾಗ ಜನಿವಾರವನ್ನು
ಕಳಚಿ ಮಯೂರವರ್ಮನಾಗಿ ಕೇವಲ ಆಡುಭಾಷೆಯಾಗದ್ದ ಕನ್ನಡಕ್ಕೆ ಬರವಣಿಗೆ ಲಿಪಿ ರೂಪವನ್ನು ಕಟ್ಟಿಕೊಟ್ಟು ಕನ್ನಡಕ್ಕೆ ಗ್ರಂಥಸ್ಥ , ರಾಜಸ್ಥ ಭಾಷೆಯ ಸ್ಥಾನ ವನ್ನು ಸೃಷ್ಠಿಸುತ್ತಾನೆ.
ಒಬ್ಬ ಹವ್ಯಕ ಬ್ರಾಹ್ಮಣನ ಕಿಚ್ಚು ಸ್ವಾಭಿಮಾನದಿಂದಾಗಿ ಪ್ರಪ್ರಥಮ ಕನ್ನಡ ಮನೆತನದ ಕದಂಬ ಸಾಮ್ರಾಜ್ಯ ಸ್ಥಾಪನೆಯಾಗಿ ಮೊಟ್ಟಮೊದಲ ಕನ್ನಡ ಅರಸನಾಗಿ ಕನ್ನಡದ ಪರಂಪರೆಯನ್ನು ಹುಟ್ಟು ಹಾಕಿದ ಮಯೂರಶರ್ಮನಿಗೆ ಎಲ್ಲಾ ಕಾಲಕ್ಕೂ ಕನ್ನಡಿಗರು ಋಣಿಯಾಗಿರಬೆಕು. ಮುಂದೆ ಗಂಗರು, ಚಾಲುಕ್ಯರು, ರಾಷ್ಟ್ರ ಕೂಟರು, ಕಲ್ಯಾಣ ಚಾಲುಕ್ಯರು, ಹೊಯ್ಸಳರು, ವಿಜಯನಗರದ ಅರಸರು, ಮೈಸೂರು ಒಡೆಯರು ಹೀಗೆ ಎಲ್ಲಾ ರಾಜರುಗಳೂ ಕನ್ನಡ ನಾಡನ್ನು ಆಳಿದರೂ ಯಾರೂ ಸಹ ಸಂಸ್ಕೃತವನ್ನು ಕಡೆಗಣಿಸಿದವರಲ್ಲ. ಕನ್ನಡದ ಲಿಪಿ ಬೆಳವಣೆಗೆ ಕಾಣುತ್ತಾ ಬಂದರೂ ರಾಜಾಡಳಿತ- ರಾಜಸಭೆ ಮತ್ತು ವಿದ್ವಾಂಸರ ಮಟ್ಟದಲ್ಲಿ ಲಿಪಿ
ಯನ್ನು ಕನ್ನಡದಲ್ಲಿ ಬರೆದರೂ ಅದರ ಭಾಷೆ ಮಾತ್ರ ಸಂಸ್ಕೃತದಲ್ಲೇ ಹೇಳಲಾಗುತಿತ್ತು. ಈ ಎಲ್ಲಾ ವಂಶಗಳ ಆಡಳಿತದಲ್ಲಿನ ಬಹುತೇಕ ತಾಮ್ರ ಶಾಸನಗಳೂ ಸಂಸ್ಕೃತ ಭಾಷೆಯ ಇದ್ದು ದೇವನಾಗರಿ ಅಥವಾ ನಂದಿ ನಾಗರಿಲಿಪಿಯಲ್ಲಿ ರಚಿತವಾಗಿರುತ್ತದೆ.
ಇನ್ನು ಶಿಲಾಶಾಸನಗಳಲ್ಲಿ ಅನೇಕ ಶಾಸನಗಳು ಕನ್ನಡ ಲಿಪಿಯಲ್ಲಿದ್ದಿರೂ ಭಾಷೆ ಮಾತ್ರ ಸಂಸ್ಕೃತವನ್ನೇ ಹೊಂದಿರುವುದು ಗಮನಾರ್ಹ. ಇಂದು ಸರಕಾರಿ ಗೆಜೆಟಿಯರ್, ನ್ಯಾಯಾಲಯಗಳ ಆದೇಶಗಳನ್ನು ಆಂಗ್ಲ ಭಾಷೆಯಲ್ಲಿ ಹೊರಡಿಸುವ ಪರಿಪಾಠ ದಂತೆ ರಾಜಪರಂಪರೆಯಲ್ಲೂ ಅರಮನೆ, ರಾಜಸಭೆಯಿಂದ
ಹೊರಡಿಸಲಾದ ಆದೇಶಗಳು ಶಾಸನಗಳು ಸಂಸ್ಕೃತ ಭಾಷೆ- ಕನ್ನಡ ಲಿಪಿಯ ರಚಿತವಾಗಿದ್ದವು. ವಿಜಯನಗರ ಸಾಮ್ರಾಜ್ಯದ ವಿಚಾರದಲ್ಲಿ ಹೇಳಬೆಕೆಂದರೆ ವಿದ್ಯಾರಣ್ಯ- ಹರಿಹರರಾಯನ ಪ್ರಥಮ ಶಾಸನ ಸಂಪೂರ್ಣ ಸಂಸ್ಕೃತ ಭಾಷೆ ನಾಗರಿಲಿಪಿಯಲ್ಲದ್ದಿರೂ ಕೊನೆಗೆ ಅಂಕಿತ ಮಾತ್ರಶ್ರೀವಿರೂಪಾಕ್ಷ ಎಂಬ ಪದ ಕನ್ನಡದ ಮುದ್ರಿತವಾಗಿರುವುದು ವಿಜಯನಗರ ಕಟ್ಟುವ ಆರಂಭದಲ್ಲಿ ಕನ್ನಡಕ್ಕೆ ವಿದ್ಯಾರಣ್ಯರು, ಹರಿಹರ, ಬುಕ್ಕರು ಕೊಟ್ಟ ಪ್ರಾಶಸ್ತ್ಯ ಸಾಕ್ಷಿಯಾಗಿದೆ.
ಮುಂದೆ ಶ್ರೀಕೃಷ್ಣ ದೇವರಾಯನ ಕಾಲದಲ್ಲಿ ದ್ವಿಭಾಷಾ ಸೂತ್ರದಡಿಯಲ್ಲಿ ಕನ್ನಡ ಸಂಸ್ಕೃತ ಸಮನಾದ ಸ್ಥಾನಮಾನ ಗಳಿಸಿಕೊಂಡು ಮೆರೆಯುತ್ತದೆ. ರಾಯನ ಕಾಲದಲ್ಲಿ ಕನ್ನಡ ಶಾಸನಗಳು ಹೆಚ್ಚಿನ ಸ್ಥಾನಗಳನ್ನು ಪಡೆದರೂ ಶಾಸನದ ಆರಂಭದ ಪ್ರಾರ್ಥನೆ ಶ್ಲೋಕ ಸ್ತುತಿ ಮತ್ತು ಅಂತ್ಯದ ಶಾಪಾಶಯಗಳು ಮಾತ್ರ ಸಂಸ್ಕೃತವೇ ಆಗಿದೆ. ಮುಂದೆ ಹದಿನೆಂಟನೇ ಶತಮಾನದವರೆಗೂ ಕನ್ನಡ-ಸಂಸ್ಕೃತ ತಾಯಿ ಮಗುವಿನಂತೆಯೇ ಇದ್ದು, ನಂತರ ಕನ್ನಡ ತಾಯಿಯ
ಮಡಿಲಿನಿಂದ ಸ್ವತಂತ್ರಗೊಳ್ಳಲು ಸುದೀರ್ಘ ಸಮಯವನ್ನೇ ಪಡೆಯಿತು.
ನಂತರವೂ ಮೈಸೂರು ಸಂಸ್ಥಾನ ಸಂಸ್ಕೃತವನ್ನು ಕಾಪಾಡಿಕೊಂಡು ಬರುವ ಸಲುವಾಗಿ ೧೮೮೫ರಲ್ಲಿ ಸಂಸ್ಕೃತ ಪದವಿ ಹಾಗೂ ಸ್ನಾತಕೋತ್ತರ ಪದವಿ ಕಾಲೇಜನ್ನು ಆರಂಭಿಸಿತು. ಇಂದಿಗೂ ಸಿದ್ದಗಂಗಾ ಮಠದಲ್ಲಿ ಸಂಸ್ಕೃತ ವೇದಪಾಠ ಶಾಲೆಗಳಿವೆ. ಸಂಸ್ಕೃತವನ್ನು ಸತ್ತ ಭಾಷೆಯೆಂದು ಜರಿದು ಅದನ್ನು ದ್ವೇಷಿಸುವ ಅಯೋಗ್ಯರು ಅವಿವೇಕಿಗಳು ಸಂಸ್ಕೃತವೆಂದರೆ ಏನೆಂದು ನಮ್ಮ ಆದಿಚುಂಚನಗಿರಿ ಮತ್ತು ಸಿದ್ದಗಂಗಾ ಮಠದ ವಿದ್ಯಾರ್ಥಿಗಳನ್ನು ಕೇಳಿ ತಿಳಿದುಕೊಳ್ಳಬಹುದು. ಅದೂ ಆಗಲಿಲ್ಲವೆಂದರೆ ಕುಟುಂಬದ ದೇವತಾ ಕಾರ್ಯವೇ ರಾಜಕಿಯದ ದಿಕ್ಸೂಚಿ ಎಂದು ನಂಬಿರುವ ಎಚ್.ಡಿ.ದೇವೆಗೌಡರ ಕುಟುಂಬದವರನ್ನು ಕೇಳಿದರೂ ಸಾಕು.
ಹೀಗೆ ರಾಜಾಽರಾಜರು ವಿದ್ವಾಂಸರು ಮೇದಾವಿಗಳು ಭವ್ಯಮಠಗಳು ಮಠಾಧಿಪತಿಗಳು ಆರಾಽಸಲ್ಪಡುತ್ತಿರುವ ಸಾವಿಲ್ಲದ ದೈವಿಭಾಷೆ ಸಂಸ್ಕೃತವನ್ನು ಯಾರೋ ಅಡ್ಡಕಸುಬಿಗಳು ವಿರೊಧಿಸುತ್ತಾರೆಂದು ಅವರನ್ನು ಹಿಂಬಾಲಿಸುವಷ್ಟು ಕನ್ನಡಿಗರು ಜ್ಞಾನಗೇಡಿಗಳಲ್ಲ. ಅಸಲಿಗೆ ಇಂದು ಸಂಸ್ಕೃತವನ್ನು ವಿರೊಽಸಲು
ಅಸಲಿ ಕಾರಣವೆಂದರೇ ಅದನ್ನು ಹೆಚ್ಚಾಗಿ ಬಳಸುತ್ತಿರುವುದು ಬ್ರಾಹ್ಮಣ ಸಮುದಾಯ. ಅಂದರೆ ಎಡಬಿಡಂಗಿ ಡೊಂಗಿಗಳ ಪಾಲಿನ ಪುರೋಹಿತಶಾಹಿಗಳು, ಮನುವಾದಿಗಳು ಮತ್ತು ಕೊಮುವಾದಿಗಳು(!?). ಹೀಗಾಗಿ ಅದನ್ನುವಿರೋಧಿಸಲು ಕೆಲ ರಾಜಕಿಯ ಪಕ್ಷಗಳ ಬಾಲಬಡುಕರಿಗೆ ಪುಲ್‌ಮಿಲ್ಸ್‌ನಂತಹ
ಕಾರಣ ಸಿಕ್ಕಿಬಿಟ್ಟಿದೆ. ಒಂದೊಮ್ಮೆ ಸಂಸ್ಕೃತವೆಂಬುದು ಇನ್ನಾವುದೇ ಪ್ರಬಲ ಜಾತಿಯೊಂದಿಗೆ ತಳಕು ಹಾಕಿಕೊಂಡದ್ದಿರೆ ಪ್ರಿಪೆಡ್ ಗಿರಾಕಿಗಳು ಸಂಸ್ಕೃತವನ್ನು ಉಳಿಸಿ ಎಂದು ಬೀದಿಗಿಳಿಯುತ್ತಿದ್ದರು.
ಅಷ್ಟೊಂದು ಇಚ್ಛಾಶಕ್ತಿ ಇದ್ದರೆ ಕನ್ನಡವನ್ನೇ ಕಡೆಗಣಿಸಿ ಉರ್ದುಭಾಷೆಯನ್ನು ಆಡಳಿತ ಭಾಷೆಯನ್ನಾಗಿಸಿ ಊರೂರಿನ ಹೆಸರುಗಳನ್ನು ಉರ್ದುಮಯ ಮಾಡಿದ
ಭಾಷಾಂಧ-ಮತಾಂಧ ಟಿಪ್ಪು ಮತ್ತು ಹೈದರಾಲಿಯ ವಿರುದ್ಧ ಹೀಗೆ ಕರೆ ನೀಡಲಿ ನೋಡೋಣ. ಹಾಗೆ ನೋಡಿದರೆ ನಾಡಿನಲ್ಲಿ ಸಂಸ್ಕೃತಕ್ಕಿಂತ ಉರ್ದು ಭಾಷೆಯೆ ಹೆಚ್ಚು ಬಳಕೆಯಲ್ಲಿದೆ. ಸುಮಾರು ನಾಲ್ಕು ಸಾವಿರಕ್ಕೂ ಹೆಚ್ಚು ಉರ್ದು ಶಾಲೆಗಳಿವೆ. ಅದರ ವಿರುದ್ಧ ಧ್ವನಿಯತ್ತಿದರೆ ಇವರ ಎರಡು ತೊಡೆಗಳ ಮಧ್ಯದಲ್ಲಿ ಬಾಲ ಸೇರಿಕೊಂಡು ಬಿಡುತ್ತದೆ. ತಮಿಳುನಾಡು ಕೇರಳ ಅಷ್ಟೆ ಏಕೆ ನಮ್ಮ ಉತ್ತರ ಕರ್ನಾಟಕದಲ್ಲಿ ಒಬ್ಬ ಮುಸಲ್ಮಾನನ್ನು ಬರಿಯ ಭಾಷೆಯಿಂದ ಗುರುತಿಸುವುದು
ಸಾಧ್ಯವೇ ಇಲ್ಲ. ಆ ಮಟ್ಟಿಗೆ ಅವರು ಸ್ಥಳೀಯ ಭಾಷೆಯನ್ನು ಕಲಿತು ನೈಜ ಭಾರತೀಯರಾಗಿರುತ್ತಾರೆ. ಆದರೆ ಬೆಂಗಳೂರಿನಲ್ಲಿ ರಾಜಕೀಯ ಪ್ರೇರಿತ-ಜಾತಿ ಆಧಾರಿತ ಪ್ರತಿಭಟನೆಗಳಿಗೆ ಮಾತ್ರ ಕನ್ನಡ ಜಾಗೃತವಾಗಿ ಬಿಡುತ್ತದೆ. ಇಂಥವರಿಂದ ಕನ್ನಡ ಮತ್ತು ಸಂಸ್ಕೃತ ಕುರಿತು ನೀತಿಗಳನ್ನು ಕಲಿಯುವ ಯಾವ
ದರ್ದು ಕನ್ನಡಿಗರಿಗಿಲ್ಲ.
ಸನಾತನ ಭಾರತೀಯ ಪರಂಪರೆಯ ಅಗಾಧತೆ ಮತ್ತು ಅನಂತತೆಯನ್ನು ಅರಿತ ಭಾರತರತ್ನ ಡಾ. ಅಂಬೇಡ್ಕರ್ ಅವರು ೧೯೪೯ ರಲ್ಲಿ ಸಂಸ್ಕೃತವನ್ನು ರಾಷ್ಟ್ರಭಾಷೆಯನ್ನಾಗಿ ಘೊಷಿಸಬೇಕೆಂದು ಬಯಸಿದ್ದರು. ಆದರೆ ಕೆಲವರ ಕಾರಣದಿಂದ ಹಿಂದಿ ರಾಷ್ಟ್ರ ಭಾಷೆಯಾಯಿತು. ಸಂಸ್ಕೃತವನ್ನು ಬೆಳೆಸಬಾರದು ಕನ್ನಡ ಕಡೆಗಣಿಸಬಾರದು ಎಂದು ಯಾವ ಪುಟಗೊಸಿ ನಾಯಕನೂ ಕನ್ನಡಿಗರಿಗೆ ಆದೇಶ ಮಾಡುವ ಅಗತ್ಯವಿಲ್ಲ. ಒಬ್ಬ ಭಾರತೀಯನಾಗಿ ಏಕತೆಯನ್ನು ಗೌರವಿಸಬೇಕೇ ಹೊರತು ದ್ವೇಷಿಸುವುದು ತರವಲ್ಲ. ಕನ್ನಡವೆಂದರೆ ಹೊಟ್ಟಪಾಡಿನ ಭಾಷೆಯಲ್ಲ. ತಲೆ ಮತ್ತು ಹೃದಯವನ್ನು ತುಂಬಿಸಿಕೊಳ್ಳುವ ಶ್ರೀಮಂತ ಭಾಷೆ.
ಕಸ ತಿಂದರೂ ಅಮೃತದಂಥ ಹಾಲನ್ನು ನೀಡುವ ಗೋವಿನ ಹಾಗೆ ಕನ್ನಡಿಗರು ಯಾವುದೇ ಭಾಷೆಗೆ ಅಂಜದೆ ಎಲ್ಲ ಕಡೆಯಲ್ಲೂ ಕನ್ನಡ ಬಳಸಬೇಕು. ಇಂದು ಅನೇಕ ಬಣಗಳಾಗಿರುವ ಕರ್ನಾಟಕ ರಕ್ಷಣಾ ವೇದಿಕೆಯನ್ನು ಮೊದಲಿಗೆ ಸ್ಥಾಪಿಸಿದ ಜಾಣಗೆರೆ ವೆಂಕಟರಾಮಯ್ಯನವರನ್ನು ಸತ್ತನಾಯಕ ಎಂದು ಹೇಳಲು ಸಾಧ್ಯವೇ? ಹಾಗೆಯೇ ಸಂಸ್ಕೃತವೂ ಸಹ ಸತ್ತ ಭಾಷೆಯಲ್ಲ ಸತ್ವಭಾಷೆ. ಅದು ಮನೆಯಲ್ಲಿನ ಹಿರಿಯ ಅಜ್ಜ ಅಜ್ಜಿಯರಂತೆ ಬೆಳಕಾಗಿ ನಮ್ಮೊಂದಿಗಿರಲಿ.