Friday, 13th December 2024

ಇಂಥ ಶಾಲೆಗಳಿಂದ ದೂರವಿರಿ !

ಹಂಪಿ ಎಕ್ಸ್’ಪ್ರೆಸ್

ದೇವಿ ಮಹೇಶ್ವರ ಹಂಪಿನಾಯ್ಡು

1336hampiexpress1509@gmail.com

ಇನ್ನು ಕೆಲ ಅವಿವೇಕಿಗಳು ಶಾಲೆಗಳಲ್ಲಿ ಭಗವದ್ಗೀತೆ ಕಲಿಸುವುದು ಹಿಂದುತ್ವದ ಹೇರಿಕೆ, ಕೇಸರೀಕರಣವೆಂದು ಬೊಬ್ಬೆಯಿಡುತ್ತಾರೆ. ಆದರೆ ಬೇರೆ ಧರ್ಮಗಳಂತೆ ಸ್ವಧರ್ಮವನ್ನು ಕಲಿಯುವಂತೆ, ಅನ್ಯ ಧರ್ಮವನ್ನು ವಿರೋಧಿಸುವಂತೆ ಭಗವದ್ಗೀತೆಯಲ್ಲಿ ಎಲ್ಲೂ ಹೇಳಿಲ್ಲ. ಅನ್ಯ ಧರ್ಮವೆಂಬ ಮಾತೇ ಅಲ್ಲಿಲ್ಲ.

ಜಗತ್ತಿನಲ್ಲಿ ಶಿಕ್ಷಣದ ಕುರಿತು ಅರಿವು ಮೂಡುವ ಮುನ್ನವೇ ಸನಾತನ ಭಾರತದಲ್ಲಿ ಗುರುಕುಲಗಳೆಂಬ ಮಹಾ ವಿದ್ಯಾಲಯಗಳು ಸ್ಥಾಪಿತವಾಗಿದ್ದವು. ವಿಶ್ವದಲ್ಲಿ ಶಾಲೆಗಳು ರೂಪುಗೊಳ್ಳುವ ಮೊದಲೇ ನಮ್ಮಲ್ಲಿ ನಳಂದ ವಿಶ್ವವಿದ್ಯಾಲಯ ವಿಶ್ವವಿಖ್ಯಾತಿ ಪಡೆದಿತ್ತು.

ಇಂಥ ಅಮೋಘವಾದ ಶಿಕ್ಷಣ ಪದ್ಧತಿಯನ್ನು ಮಕಾಡೆ ಮಲಗಿಸಿದವನು ಬ್ರಿಟಿಷ್‌ನ ಲಾರ್ಡ್ ಮೆಕಾಲೆ. ಯಾವುದಾದರೊಂದು ಮನೆಹಾಳು ಕೆಲಸ ಮಾಡಬೇಕೆಂದರೆ ಭಾರತೀಯರಾದ ನಾವುಗಳು ಹಿಂದೇಟು ಹಾಕು ತ್ತೇವೆ. ಆದರೆ ಭಾರತದಂಥ ಅತಿ ಪುರಾತನ ನಾಗರಿಕತೆಯ ದೇಶದ ವೈಚಾರಿಕತೆಯನ್ನೇ ಹಾಳುಮಾಡಿ ಮಹಾeನಸೌಧವೆನಿಸಿದ್ದ ಗುರುಕುಲ ಪದ್ಧತಿಯನ್ನೇ ನಿರ್ಣಾಮ ಮಾಡಿ ಕಾನ್ವೆಂಟ್ ಪದ್ಧತಿಯನ್ನು ಜಾರಿಗೆ ತಂದು ಯಶಸ್ವಿ ಗೊಳಿಸಿದ ಕುತಂತ್ರಿ ಮತಾಂಧನೀತ. ಅದಕ್ಕಿಂತ ಘೋರವೆಂದರೆ ಆತ ಅಂದು ಮಾಡಿದ ಈ ಸಾಂಸ್ಕೃತಿಕ ಮತ್ತು ಧಾರ್ಮಿಕ ದಾಳಿಯ ಯೋಜನೆ ಇಂದಿಗೂ ಜಾರಿಯಲ್ಲಿದ್ದು ಅದರ ಸಂತತಿಗಳಾಗಿ ಇಂದಿನ ಅನೇಕ ಮತಾಂತರಿ ಶಾಲೆಗಳು ಆತನ ದಾರಿಯ ನಡೆದುಕೊಂಡು ಬರುತ್ತಿವೆ.

ಮೊನ್ನೆ ಬೆಂಗಳೂರಿನ ಕ್ಲಾರೆನ್ಸ್ ಶಾಲೆ ತನ್ನ ವಿದ್ಯಾರ್ಥಿಗಳಿಗೆ ಬೈಬಲ್ ಅಧ್ಯಯನ ಕಡ್ಡಾಯ ಮಾಡಿದ್ದು ಇದೀಗ ಹಿಂದೂಪರ ಸಂಘಟನೆಗಳ ಹೋರಾಟದ ಮೂಲಕ ಬಯಲಾಗಿ ಸರಕಾರ ಶಾಲೆಯ ಆಡಳಿತ ಮಂಡಳಿಗೆ ನೋಟಿಸ್ ಜಾರಿಯೂ ಮಾಡಿದೆ. ಸಂವಿಧಾನ, ನ್ಯಾಯಾಲಯ ಮತ್ತು ಕಾನೂನುಗಳ ವಿರುದ್ಧವಾಗಿ ಹೀಗೆ ಅನ್ಯ ಧರ್ಮಿಯ ಮಕ್ಕಳಿಗೆ ಬೈಬಲ್ ಬೋಧನೆ ಯನ್ನು ಕಡ್ಡಾಯಗೊಳಿಸಿ ಸಿಕ್ಕಿ ಬಿದ್ದು ಅದರ ಕುತಂತ್ರ ಬಹಿರಂಗ ವಾಗಿದ್ದರೂ ಅದನ್ನೂ ಮೀರಿ ಶಾಲೆಯಲ್ಲಿ ಬೈಬಲ್ ಕಲಿಯಲು ಆಸಕ್ತಿಯಿಲ್ಲದಿದ್ದರೆ ಬೇರೆ ಧರ್ಮದ ವಿದ್ಯಾರ್ಥಿಗಳಿಗೆ ಸೀಟು ನೀಡುವುದಿಲ್ಲ ಎಂದು ಹೇಳಿಕೊಂಡು ಧಾರ್ಷ್ಟ್ಯ ತೋರಿರುವುದು ಖಂಡನಾರ್ಹಾ.

ಆದರೆ ಇದರಿಂದ ಇನ್ನಷ್ಟು ವಿಷಯಾಂತರವಾಗುತ್ತದೆಂಬ ಭಯದಲ್ಲಿ ಈ ನಿರ್ಧಾರವನ್ನು ಹಿಂಪಡೆದಿರುವುದು ಪತ್ರಿಕೆಯಲ್ಲಿ ವರದಿಯಾಗಿದೆ. ಹಾಗೊಂದು ರೀತಿ ಕ್ರಿಶ್ಚಿಯನ್ ಮಕ್ಕಳಿಗೆ ಮಾತ್ರ ಶಾಲೆಯ ಸೀಟು ಮತ್ತು ಅವರಿಗೆ ಬೈಬಲ್ ಬೊಧನೆ ಎಂದರೆ ಅದೂ ಕೂಡ ನಮ್ಮ ಸಂವಿಧಾನದ ವಿರುದ್ಧದ ನಡೆಯಾಗುತ್ತದೆ. ಏಕೆಂದರೆ ಕ್ರಿಶ್ಚಿಯನ್ ಮಕ್ಕಳಾದರೂ ಅವರ ಮೇಲೆ ಸಾಮಾಜಿಕ ಶೈಕ್ಷಣಿಕ ಪದ್ಧತಿಯಲ್ಲಿ ಧರ್ಮ ಬೋಧನೆ ಮಾಡುವುದು ಅಪರಾಧ.

ಅಂಥ ಬೋಧನೆಗಾಗಿಯೇ ಚರ್ಚುಗಳಿವೆ ಮತ್ತು ಅಂಥ ಕೆಲಸ ಮಾಡಿಲಿಕ್ಕೆಂದೇ ಮನೆಹಾಳು ಮಿಷನರಿಗಳು ಅಹರ್ನಿಶಿ ಕಾರ್ಯನಿರ್ವಹಿಸುತ್ತಿವೆ. ಅಂಥ
ಕುತಂತ್ರಕ್ಕೆ ಬಲಿಯಾಗುತ್ತಿರುವುದೇ ನಮ್ಮ ಹಿಂದೂಗಳ ಕುಟುಂಬಗಳು ಎಂಬುದೂ ಅಂಗೈಮೇಲಿನ ಗರೆಯಂತೆ ಸ್ಪಷ್ಟವಾಗಿದೆ. ಇದೆಲ್ಲಕ್ಕಿಂತ ದೊಡ್ಡ
ರೋಗವೆಂದರೆ ಭಗವದ್ಗೀತೆಯನ್ನು ವಿರೋಧಿಸುವ ಢೋಂಗಿಗಳು, ಲದ್ದಿಜೀವಿಗಳು, ವಿಚಾರವ್ಯಾದಿಗಳು, ಬರಗೆಟ್ಟ ಸಾಹಿತಿಗಳು ಪ್ರಜ್ಞಾಹೀನರಂತೆ
ಬಿದ್ದುಕೊಂಡಿರುವುದು.

ಇಂಥ ಮತಾಂತರಿ ಶಾಲೆಗಳಿಗೆ ಹೇಳುವವರು ಕೇಳುವವರು ಯಾರೂ ಇಲ್ಲದಿದ್ದರೆ ಬೇಕಾದ ಆಟಗಳನ್ನು ಆಡುವುದಂತೂ ನಿಶ್ಚಿತ. ಈಗಾಗಲೇ ಕುತಂತ್ರ ಆಮಿಷ ಮೌಢ್ಯಗಳ ಮೂಲಕ ಹಿಂದೂಗಳನ್ನು ಮತಾಂತರಿಸುವುವ ಮಿಷನರಿಗಳು ಅಬಾಧಿತವಾಗಿದ್ದರೆ, ಶೈಕ್ಷಣಿಕ ಸಂಸ್ಥೆಗಳೆಂಬ ಮುಖವಾಡ
ಧರಿಸಿರುವ ಇಂಥ ಶಾಲೆಗಳು ಹಿಂದೂ ಮಕ್ಕಳ ಮೇಲೆ ಬೈಬಲ್ ಬಲಪ್ರಯೋಗ ಮಾಡುವುದು, ಹಿಂದೂ ಹಬ್ಬಗಳನ್ನು ನಿಷೇಧಿಸುವುದು, ಕುಂಕುಮ
ತಿಲಕ ಬಳೆ ಹೂ ಕಾಲ್ಗೆಜ್ಜೆ ಧರಿಸುವುದನ್ನು ನಿಷೇಧಿಸುವುದರ ಮೂಲಕ ಮತ್ತೊಂದು ರೀತಿಯ ಮತಾಂತರ ಮಾಡುತ್ತಿರುವುದು ಸಹಜವಾಗಿ ಬಿಟ್ಟಿದೆ.

ಇಂಥವರನ್ನು ಮಟ್ಟಹಾಕಲು ಹೋದವರನ್ನು ಕೋಮುವಾದಿಗಳು, ಅಸಹಿಷ್ಣುಗಳೆನ್ನುವುದು ಮತ್ತು ಇದೇ ವಿಚಾರವನ್ನು ಅಂತಾರಾಷ್ಟ್ರೀಯ
ಮಾಧ್ಯಮಗಳಲ್ಲಿ ಪ್ರಸಾರವಾಗಿ ಭಾರತದ ವಿರುದ್ಧ ಅಪಪ್ರಚಾರವಾಗುವಂತೆ ಮಾಡುವುದು ಇವರ ಮುಂದಿನ ತಂತ್ರವಾಗಿರುತ್ತದೆ. ರಾಜ್ಯ ಸರಕಾರ ಈ
ಮತಾಂತರವೆಂಬ ಸಾಮಾಜಿಕ ಪಿಡುಗನ್ನು ನಿಗ್ರಹಿಸಲು ಮತಾಂತರ ನಿಷೇಧಿತ ಕಾಯ್ದೆಯನ್ನು ವಿಧಾನಸಭೆಯಲ್ಲಿ ಅನುಮೋದನೆ ಪಡೆದು ವಿಧಾನ ಪರಿ
ಷತ್ತಿನಲ್ಲಿ ಮಂಡಿಸುವುದನ್ನೇ ಮರೆತು ಕುಳಿತಿರುವುದು ದುರ್ದೈವ.

ತಪ್ಪು ಇಂಥ ಶಾಲೆಗಳದ್ದಲ್ಲ. ಇಂಥ ಶಾಲೆಗಳಿಗೆ ಮುಗಿಬೀಳುವ ಹಿಂದೂ ಕುಟುಂಬಗಳು ಅವರು ಕೇಳಿದಷ್ಟು ಹಣ ತುಂಬಿಸಿ ಮಕ್ಕಳನ್ನು ಅಂಥ ಶಾಲೆ ಗಳಿಗೆ ಕಳಿಸಿ ಬೈಬಲ್ ಬೋಧಿಸಿಕೊಳ್ಳುವ ತಿಕ್ಕಲುತನವಿದೆಯ ಅದೇ ಹಿಂದೂಗಳ ಅವಿವೇಕತನ ಮತ್ತು ದೌರ್ಬಲ್ಯ. ಜನ ಮರುಳೋ ಜಾತ್ರೆ ಮರುಳೋ ಎಂದಂತೆ ಹಿಂದೂ ಪೋಷಕರಿಗೆ ತಮ್ಮ ಮಕ್ಕಳು ಯಾವುದನ್ನು ಕಲಿಯಬೇಕು ಮತ್ತು ಶಾಲೆಗಳಲ್ಲಿ ನಮ್ಮ ಮಕ್ಕಳಿಗೆ ಏನನ್ನು ಕಲಿಸುತ್ತಾರೆ ಎಂಬ ಅಂಶಕ್ಕಿಂತಲೂ ತಮ್ಮ ಮಕ್ಕಳು ಎಂಥ ಪ್ರತಿಷ್ಠಿತ ಶಾಲೆಗಳಲ್ಲಿ ಓದುತ್ತಿದ್ದಾರೆ ಎಂಬುದಕ್ಕೆ ಹೆಚ್ಚು ಮಹತ್ವ ನೀಡುತ್ತಾರೆ.

ಹೀಗಾಗಿ ಅಂಥ ಶಾಲೆಗಳು ಬೈಬಲ್ ಕಲಿಸಿದರೂ ಓಕೆ ಮತಾಂತರ ಮಾಡಿದರೂ ಓಕೆ ಎನ್ನುವಂತೆ ಇಂಥ ಧರ್ಮಾಂಧ ಶಾಲೆಗಳನ್ನು ಒಪ್ಪಿಕೊಂಡು ಅಪ್ಪಿಕೊಂಡುಬಿಡುತ್ತಾರೆ. ಇಂಥ ದೌರ್ಬಲ್ಯವೇ ಈ ಶಾಲೆಗಳನ್ನು ಕೊಬ್ಬಿಸುತ್ತಿದೆ. ಅಸಲಿಗೆ ಈ ಕಾನ್ವೆಂಟ್ ಪದದ ಅರ್ಥವೇ ಬಹಳಷ್ಟು ಪೋಷಕರಿಗೆ
ತಿಳಿದಿಲ್ಲ. ಕಾನ್ವೆಂಟ್ ಎಂದರೆ ಕ್ರಿಶ್ಚಿಯನ್ ಮಹಿಳೆಯರೇ ನಡೆಸುವ ಒಂದು ಮಠ. ಅಂದರೆ ಈ ದೇಶಕ್ಕೆ ಸಂಬಂಧವೇ ಇಲ್ಲದ ಈ ದೇಶದ ಸಾಂಸ್ಕೃತಿಕತೆ ಅಗತ್ಯವಿಲ್ಲದ ಒಂದು ಅಸಂಬದ್ಧ ಪದ್ಧತಿ.

ಆದರೂ ಹಿಂದೂ ಪೋಷಕರಿಗೆ ತಮ್ಮ ಮಕ್ಕಳ ವಿಚಾರದಲ್ಲಿ ಪ್ರತಿಷ್ಠೆಯೇ ಗಣ್ಯವಾಗಿರುತ್ತದೆ ಹೊರತು ತಮ್ಮತನವಲ್ಲ, ಸ್ವಾಭಿಮಾನವಲ್ಲ. ಇದು ಮತ್ತೊಂದು ದೌರ್ಭಾಗ್ಯ. ಎಂಥವರೇ ಆಗಿದ್ದರೂ ಈ ದೇಶದ ಕಾನೂನು ಮತ್ತು ಸಂವಿಧಾನವನ್ನು ಗೌರವಿಸಿ ನಡೆಯಬೇಕು. ಮುಸ್ಲಿಂ ಹೆಣ್ಣುಮಕ್ಕಳು ಇದನ್ನು ಮೀರಿ ಧರ್ಮವೇ ಮಿಗಿಲೆಂದು ಹೇಳುವುದು ಎಷ್ಟು ಧಾರ್ಷ್ಟ್ಯವೋ ಅದೇ ರೀತಿ ತಮ್ಮ ಮಕ್ಕಳಿಗೆ ಬೇರೊಂದು ಧರ್ಮವನ್ನು ಬೋಧಿಸುವು ದನ್ನು ಕುರುಡಾಗಿ ಒಪ್ಪಿಕೊಳುವುದು ಮತ್ತು ಅಂಥ ಅನ್ಯ ಧರ್ಮವನ್ನು ಬೋಧಿಸುವುದೂ ಅಷ್ಟೇ ತಪ್ಪಾಗುತ್ತದೆ.

ಅದೇ ಸರಕಾರಿ ಶಾಲೆಗಳನ್ನು ನೋಡಿ, ಅವುಗಳ ಪರ ಸಮಾಜವಲ್ಲದೇ, ಉಚ್ಚ ನ್ಯಾಯಾಲಯ ಮತ್ತು ಸರ್ವೋಚ್ಚ ನ್ಯಾಯಾಲಯಗಳೂ ನಿಲ್ಲುತ್ತದೆ. ಹೀಗೆ
ದೇಶದ ಸಂವಿಧಾನದ ನಿಲುವನ್ನು ಒಪ್ಪಿಕೊಳ್ಳಬೇಕಾದ್ದು ಎಲ್ಲರ ಧರ್ಮ. ಅಂಥ ಧರ್ಮಕ್ಕಿರುವ ಶಕ್ತಿಯಿಂದಲೇ ಇಂದು ಹಿಜಾಬ್ ಧರಿಸಿ ಪರೀಕ್ಷೆ
ಬರೆಯುವ ಮೊಂಡುತನಕ್ಕೆ ಅವಕಾಶವಿಲ್ಲದಂತಾಗಿದೆ. ಹೀಗಿರುವಾಗ ನ್ಯಾಯಾಲಯದ ದೃಷ್ಟಿಯಲ್ಲಿ ತರಗತಿಯೊಳಗೆ ಹಿಜಾಬ್ ಧಾರಣೆ ಮತ್ತು ಬೈಬಲ್
ಬೋಧನೆ ಅಸಂವಿಧಾನಿಕವಾಗುತ್ತದೆ.

ಇನ್ನು ಕೆಲ ಅವಿವೇಕಿಗಳು ಶಾಲೆಗಳಲ್ಲಿ ಭಗವದ್ಗೀತೆ ಕಲಿಸುವುದು ಹಿಂದುತ್ವದ ಹೇರಿಕೆ, ಕೇಸರೀಕರಣವೆಂದು ಬೊಬ್ಬೆಯಿಡುತ್ತಾರೆ. ಆದರೆ ಬೇರೆ
ಧರ್ಮಗಳಂತೆ ಸ್ವಧರ್ಮವನ್ನು ಕಲಿಯುವಂತೆ, ಅನ್ಯ ಧರ್ಮವನ್ನು ವಿರೋಽಸುವಂತೆ ಭಗವದ್ಗೀತೆಯಲ್ಲಿ ಎಲ್ಲೂ ಹೇಳಿಲ್ಲ. ಅನ್ಯ ಧರ್ಮವೆಂಬ
ಮಾತೇ ಅಲ್ಲಿಲ್ಲ. ಏಕೆಂದರೆ ಸನಾತನ ಧರ್ಮ ಪ್ರಕಾಶಿಸುತ್ತಿದ್ದ ಕಾಲದಲ್ಲಿ ಅನ್ಯ ಧರ್ಮಗಳ ಅಸ್ತಿತ್ವವೇ ಇರಲಿಲ್ಲ. ಹೀಗಾಗಿ ಅಲ್ಲಿ ಅನ್ಯಧರ್ಮ ಪರಧರ್ಮ ವೆಂಬ ಅರ್ಥವೇ ಇಲ್ಲ. ಅಸಲಿಗೆ ಹಿಂದೂ ಧರ್ಮವೆಂದರೆ ಸುಪ್ರೀಂಕೋರ್ಟ್ ವ್ಯಾಖ್ಯಾನಿಸಿರುವಂತೆ, ಅದೊಂದು ಸಮುದಾಯವನ್ನು ಗುರುತಿಸುವ ಧರ್ಮವಲ್ಲ. ಅದು ನೀತಿಬದ್ಧವಾದ ಬೌದ್ಧಿಕ ತಳಹದಿಯ ಮೇಲೆ ನಿಂತಿರುವ ನಾಗರಿಕರ ಬದುಕಿನ ರೀತಿ, ಶೈಲಿ ಮತ್ತು ಪದ್ಧತಿ.

ಇಂದು ವಿಶ್ವಾದ್ಯಂತ ಪವಿತ್ರ ಮುಸಲ್ಮಾನರೂ ಅಹೋ ಅಕ್ಬರ್ ಕೂಗುತ್ತಾರೆ. ಹಾಗೆಯೇ ಪೈಶಾಚಿಕ ಧರ್ಮಾಂಧ ಭಯೋತ್ಪಾದಕರೂ ಅಹೋ ಅಕ್ಬರ್ ಎನ್ನುತ್ತಾರೆ. ಹಾಗೆಯೇ ಕ್ರಿಶ್ಚಿಯನ್ನರು ಸಹ ಬೈಬಲ್ ಒಪ್ಪಿಕೊಳ್ಳುವವರಿಗೆ ಕೊರಳಿಗೆ ಶಿಲುಬೆ ನೇತುಹಾಕಿ ಮತಾಂತರ ಮಾಡಿಬಿಡುತ್ತಾರೆ. ಆದರೆ ಭಗವದ್ಗೀತೆ, ವೇದ ಉಪನಿಷತ್ತುಗಳನ್ನು ಓದಿದವರು ಒಂದೋ ಪ್ರಜ್ಞಾವಂತ ನಾಗರಿಕರಾಗುತ್ತಾರೆ, ಇಲ್ಲವಾದರೆ ಸಂತ ಸಂನ್ಯಾಸಿಯಾಗುತ್ತಾರೆ.

ಭಗವದ್ಗೀತೆ ಎಂಬುದು ಹಿಂದೂ ಧರ್ಮಗ್ರಂಥವಲ್ಲ. ಅದು ಬದುಕನ್ನು ಕಲಿಸುವ ಕಷ್ಟ ಕಾರ್ಪಣ್ಯಗಳನ್ನು ಗೆಲ್ಲುವ, ಬದುಕಿನ ಸವಾಲುಗಳನ್ನು ಎದುರಿಸುವ ಮತ್ತು ಜೀವನದ ಮೌಲ್ಯಗಳನ್ನು ಸಂಪಾದಿಸಿಕೊಳ್ಳುವ ಒಂದು ಪಠ್ಯದಂತೆ ನೆರವಾಗುತ್ತದೆ. ಬಸವಣ್ಣನವರ ಸಾಮಾಜಿಕ ಗೊಂದಲಗಳನ್ನು ಸುಧಾರಿಸುವ ವಚನಗಳಂತೆ, ಸರ್ವಜ್ಞಮೂರ್ತಿಯ ಸಾಮಾಜಿಕ ದೋಷಗಳನ್ನು ತಿದ್ದುವ ಕಠೋರ ತ್ರಿಪದಿಗಳಂತೆ ಮತ್ತು ಡಿವಿಜಿಯವರ ಮಂಕತಿಮ್ಮನ ಕಗ್ಗದಂತೆ ಭಗವದ್ಗೀತೆಯೂ ಬದುಕಿನ ಶ್ರೇಷ್ಠತೆ ಮತ್ತು ಸಾರ್ಥಕತೆಯನ್ನು ಸಾರುತ್ತದೆ. ಅದನ್ನು ಬಿಟ್ಟು ಕಾಫೀರರನ್ನು ಕೊಲ್ಲಿ ಎನ್ನುವುದಾಗಲಿ, ಮೂರ್ತಿ ಆರಾಧಕರನ್ನು ಹಿಂಸಿಸಿ ಎಂದಾಗಲಿ, ನಮ್ಮ ದೇವನೊಬ್ಬನೇ ಜಗತ್ತಿಗೆ ದೇವರು ಆತನನ್ನೇ ಸ್ಮರಿಸಬೇಕು, ಆತನಲ್ಲಿಯೇ ನಿಮ್ಮ ಎಲ್ಲಾ ಕಷ್ಟ ಗಳನ್ನು ಹೇಳಿಕೊಳ್ಳಬೇಕು, ನಿಮಗಾಗಿ ಆತನ ಮೈಯಲ್ಲಿ ರಕ್ತ ಸುರಿಯುತ್ತದೆ ಎಂದೆ ಮೌಢ್ಯ ಸೃಷ್ಟಿಸಿ ಉನ್ಮಾದಗೊಳಿಸಿ ಹುಚ್ಚುಚ್ಚಾಗಿ ವಿಕಾರವಾಗಿ ವರ್ತಿಸುವಂತೆ ಭಗವದ್ಗೀತೆ ಮಾಡುವುದಿಲ್ಲ.

ಇಂದು ಹಿಂದೂಗಳಿಗಿಂತ ಹೊರ ದೇಶದ ನಾಗರಿಕರೇ ಭಗವದ್ಗೀತೆಯ ಅನುಭೂತಿ ಪಡೆದು ತಾತ್ವಿಕ ಜೀವನವನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಆದರೆ ಭಾರತದಲ್ಲಿ ಮಾತ್ರ ಭಗವತ್‌ಗೀತೆಗೆ ಬೆಂಕಿ ಹಚ್ಚುವ ವಿಕೃತ ಮನಸ್ಸಿನವರು ಹುಟ್ಟಿಕೊಂಡಿದ್ದಾರೆ. ಖಾಸಗಿ ಸಂಸ್ಥೆಗಳು ತಮ್ಮ ವೈಯಕ್ತಿಕ ಅಜೆಂಡಾ ಗಳನ್ನು ಜಾರಿಗೊಳಿಸುವ ಎನ್‌ಜಿಒಗಳ ತಕ್ಕಂತೆ ಶಾಲೆಗಳನ್ನು ರೂಪಿಸಿಕೊಳ್ಳುತ್ತದೆ. ಆದರೆ ಸಂವಿಧಾನಾತ್ಮಕವಾಗಿ ಎಲ್ಲವನ್ನೂ ನಿಭಾಯಿಸ ಬೇಕಾದ ಸರಕಾರ ಈಗ ಮಾಡಬೇಕಿರುವ ಕೆಲಸವೆಂದರೆ ಬಿಟ್ಟಿ ಭಾಗ್ಯಗಳನ್ನು ನೀಡಿ ಓಟು ಪಡೆಯುವುದನ್ನು ಬಿಟ್ಟು ಪುರಾತನ ಸರಕಾರಿ ಶಾಲೆಗಳ ಗುಣಮಟ್ಟ ವನ್ನು ಕಾಲಕ್ಕೆ ತಕ್ಕಂತೆ ಮೇಲ್ದರ್ಜೆಗೇರಿಸಿ ಖಾಸಗಿ ಶಾಲೆಗಳಿಗೆ ಪೈಪೋಟಿಯಾಗಿ ನಿಲ್ಲಬೇಕಿದೆ.

ಸರಕಾರಿ ಸವಲತ್ತುಳಿಗೆ ಪರವಾನಗಿಗಳಿಗೆ ಮುಗಿಬೀಳುವಂತೆ ಸರಕಾರಿ ಶಾಲೆಗಳ ಸೀಟಿಗಾಗಿ ಸಾಲು ನಿಲ್ಲುವಂತೆ ಶಾಲೆಗಳನ್ನು ಬದಲಿಸಿ ಕನಿಷ್ಠ ಶುಲ್ಕ ವಿಧಿಸಿ ಮಕ್ಕಳಿಗೆ ನೈಜ ಶಿಕ್ಷಣವನ್ನು ನೀಡುವ ದೊಡ್ಡ ಸಾಹಸಕ್ಕೆ ತೊಡಗಿಸಿಕೊಳ್ಳಬೇಕಿದೆ. ಸಮಾಜದಲ್ಲಿ ಸರಕಾರಿ ಸಂಸ್ಥೆಗಳು ಉತ್ಕೃಷ್ಟ ಮತ್ತು ಪ್ರತಿಷ್ಠಿತ ವಾಗಿರಬೇಕು. ಬೆಂಗಳೂರಿನ ಒಂದು ಪ್ರತಿಷ್ಠಿತ ಖಾಸಗಿ ಶಾಲೆಯಲ್ಲಿ ಮಕ್ಕಳಿಬ್ಬರನ್ನು ಓದಿಸುತ್ತಿರುವ ಸ್ನೇಹಿತನೊಬ್ಬ ಎಲ್‌ಕೆಜಿಯಿಂದ ಹನ್ನೊಂದು ವರ್ಷಗಳು ಓದಿಸಿ ಒಂದು ಪೈಸೆಯನ್ನೂ ಬಾಕಿ ಉಳಿಸಿಕೊಳ್ಳದೆ ಇದ್ದು, ಈ ವರ್ಷ ಹದಿನೈದು ಸಾವಿರ ರೂಪಾಯಿಗಳ ಬಾಕಿ ಶುಲ್ಕ ಪಾವತಿಸಲು ಸೋತಾಗ, ಒಂಬತ್ತನೇ ತರಗತಿಯ ಅಂಕಪಟ್ಟಿಯನ್ನೇ ನೀಡದೆ, ಪೂರ್ತಿ ಹಣ ಪಾವತಿಸಿದರೆ ಮಾತ್ರ ಅಂಕಪಟ್ಟಿ ನೀಡಲಾಗುತ್ತದೆ ಎಂದು ನಿರ್ದಾಕ್ಷಿಣ್ಯ ವಾಗಿ ಹೇಳಿ ಕಳಿಸಲಾಗಿತ್ತು. ಕೊನೆಗೆ ಆತ ಮಕ್ಕಳಿಗೆ ನಿರಾಸೆಯಾಗಬಾರದೆಂದು ಸಾಲಮಾಡಿ ಬಾಕಿ ಪಾವತಿಸಿ ಅದೇ ದಿನ ಮಕ್ಕಳ ಅಂಕ ಪಟ್ಟಿಯನ್ನು ಖರೀದಿಸಿದ. ಹೀಗಿದೆ ನೋಡಿ ಖಾಸಗಿ ಶಾಲೆಗಳ ಅಟ್ಟಹಾಸ.

ಈಗ ಹೊಸ ಶೈಕ್ಷಣಿಕ ವರ್ಷ ಶುರುವಾಗುತ್ತಿದೆ. ಜತೆಗೆ ನಾಲ್ಕನೇ ಅಲೆಯ ಕರೋನಾ ಆಗಮನದ ಮುನ್ನೆಚ್ಚರಿಕೆಯಿದೆ. ಈಗಾಗಲೇ ಅನೇಕ ಖಾಸಗಿ ಶಾಲೆಗಳು ತಮ್ಮ ಉದ್ಯಮವನ್ನು ಬಲಿಷ್ಠಗೊಳಿಸಿಕೊಳ್ಳುವ ಅಖಾಡಕ್ಕಿಳಿದಿವೆ. ಹೀಗಾಗಿ ಕರೋನಾ ನಾಲ್ಕನೇ ಅಲೆ ಅಪ್ಪಳಿಸುವ ಮೊದಲೇ ಎಲ್ಲಾ ರೀತಿಯ ಶಾಲಾ ಶುಲ್ಕಗಳನ್ನು ವಸೂಲಿ ಮಾಡಿಬಿಡಬೇಕೆಂಬ ಹಪಾಹಪಿಯಲ್ಲಿರುವುದು ಗೋಚರಿಸುತ್ತಿದೆ. ಅದನ್ನೇ ಅನೇಕರು ಫೀಸು ಕಟ್ಟಿದ ಮೇಲೆ ಕರೋನಾ ಬರುತ್ತಾ ಎಂದು ಕೇಳುತ್ತಿದ್ದಾರೆ. ಆದರೆ ನೆನಪಿರಲಿ, ಕ್ಲಾರೆನ್ಸ್ ತರಹದ ಮತಾಂತರಿ ಶಾಲೆಗಳು ಕರೋನಕ್ಕಿಂತಲೂ ಅಪಾಯಕಾರಿ!