ಪ್ರಸ್ತುತ
ಸಿಂಚನ ಎಂ.ಕೆ., ಮಂಡ್ಯ
ಜಗತ್ತಿನ ಸರ್ವ ಸಂಕುಲಗಳ ಕಲ್ಯಾಣಕ್ಕಾಗಿ ಶಾಂತಿ, ಪ್ರೇಮ, ತ್ಯಾಗ, ಅಹಿಂಸೆಯಂತಹ ಉದಾತ್ತ ಆದರ್ಶಗಳನ್ನು ಬೋಧಿಸುವ ಗುರು ಗಳು ಒಂದು ವೇಳೆ ಇಂತಹ ಉದಾತ್ತತೆಯನ್ನು ರಕ್ಷಿಸಲು ಸಾತ್ವಿಕತೆಯ ದ್ವಾರದ ಮೂಲಕ ಮಾಡಬಹುದಾದ ಕಾರ್ಯಗಳಿಗೆ ಅರ್ಥವಿಲ್ಲ ದಂತಾಗುವ ಅಧರ್ಮದ ಪರಾಕಾಷ್ಠತೆಯ ವಿಪತ್ತಿನ ಕಾಲ ಬಂದೊದಗಿದರೆ ಕ್ಷಾತ್ರತೇಜ, ಶೌರ್ಯ-ಸಾಹಸದ ರಜಸ್ಸಿನ ದ್ವಾರದ ಮೂಲಕ ಧರ್ಮ ರಕ್ಷಣೆಯ ಕಾರ್ಯವನ್ನು ಮಾಡ ಲೇಬೇಕಾಗುತ್ತದೆ ಎಂಬುದಕ್ಕೆ ಜ್ವಲಂತ ಉದಾಹರಣೆ ‘ಗುರು ಗೋವಿಂದ ಸಿಂಗರು’. ಸಿಖ್ಖರ ಹತ್ತನೆಯ ಹಾಗು ನೆಯ ಗುರು ಆಗಿರುವ ಗುರು ಗೋವಿಂದ ಸಿಂಗರ ಬದುಕು ಸಂಪೂರ್ಣವಾಗಿ ಧರ್ಮರಕ್ಷಣೆಯ ಕಾರ್ಯದಲ್ಲಿ ನಿರತವಾಯಿತು.
ಮೊಘಲ್ ಶಾಹಿಯ ಅಧರ್ಮದ ಅಟ್ಟಹಾಸದ ಪೆಟ್ಟಿನಿಂದ ಹಿಂದೂ, ಸಿಖ್‌ನಂತಹ ಔದಾರ್ಯ-ವಿಶ್ವ ಕಲ್ಯಾಣಕಾರಿ ಧರ್ಮಗಳ ಮೇಲಾ ಗುತ್ತಿದ್ದ ಅನ್ಯಾಯ, ದೌರ್ಜನ್ಯ ಹಾಗೂ ಮುಖ್ಯವಾಗಿ ಬಲಾತ್ಕಾರದಿಂದ ಜೀವ ಭಯವನ್ನು ಮುಂದಿರಿಸಿ ಮಾಡಲಾಗುತ್ತಿದ್ದ ಮತಾಂತರವು ಗುರುಗಳನ್ನು ಗಾಢ ಚಿಂತೆಯಲ್ಲಿ ಮುಳುಗಿಸಿ, ಹಿಂದೂಸ್ಥಾನದ ಹಿತಕ್ಕಾಗಿ ಮಹತ್ತರ ಸಂಕಲ್ಪವನ್ನು ಕೈಗೊಳ್ಳುವಂತೆ ಮಾಡುತ್ತದೆ.
ಆಗ ಗುರು ತೇಗ ಬಹದ್ದೂರರು ಈ ಮತಾಂತರವನ್ನು ತಪ್ಪಿಸಲು ಯೋಗ್ಯ ವ್ಯಕ್ತಿಗಳ ಬಲಿದಾನವಾಗಬೇಕು ಎಂಬ ನಿರ್ಧಾರಕ್ಕೆ ಬರುತ್ತಾರೆ. ಇಂತಹ ಶ್ರೇಷ್ಠ ಬಲಿದಾನ ನೀಡಲು ನಿಮಗಿಂತ ಯೋಗ್ಯವಾನ್ ವ್ಯಕ್ತಿ ಯಾರಿರುವರು ಎಂದು ತಮ್ಮ ತಂದೆಗೆ ಪ್ರಶ್ನಿಸುವ ಗುರು ಗೋವಿಂದ ಸಿಂಗರು ಅವರ 9ನೇ ವಯಸ್ಸಿನ ತಂದೆಯ ಬಲಿದಾನಕ್ಕೆ ಸಾಕ್ಷಿಯಾಗುವುದರ ಮೂಲಕ ತಮ್ಮ ಮುಂದಿರುವ ಮಹೋತ್ತಮ ಜವಾಬ್ದಾರಿಯನ್ನು ಅರ್ಥೈಸಿ ಕೊಂಡು ಅದರ ನಿರ್ವಹಣೆಗೆ ಕಟಿಬದ್ಧರಾಗುತ್ತಾರೆ.
ಆ ಜವಾಬ್ದಾರಿಯನ್ನು ಹೊರುವ ಸಲುವಾಗಿ 20ನೆ ವಯಸ್ಸಿನವರೆಗೆ ಶಸ-ಶಾಸಗಳ ವಿದ್ಯೆಯಲ್ಲಿ ತರಬೇತಿ ಪಡೆದು ಶಕ್ತಿಯುತರಾಗು ತ್ತಾರೆ. ‘ವಾಹೆ ಗುರೂಜಿ ಕೆ ಖಾಲ್ಸಾ ವಾಹೆ ಗುರೂಜಿ ಕಿ ಫತೆ’ ಎಂಬ ಗೆಲುವಿನ ಮಂತ್ರ ದೀಕ್ಷೆಯನ್ನು ಕೊಟ್ಟು ತಮ್ಮ ಶಿರವನ್ನೇ ಧರ್ಮ ರಕ್ಷಣೆಗಾಗಿ ಬಲಿ ಕೊಡಲು ಸಿದ್ಧರಿದ್ದ ಸಾಹಸ ಸಿಂಹಗಳ ಖಾಲ್ಸಾ ಸೈನ್ಯವನ್ನು ನಿರ್ಮಿಸಿ, ಅಧರ್ಮಿ ಮೊಘಲ್ ಸುಲ್ತಾನರ ಪಾಲಿಗೆ ಅಕ್ಷರಶಃ ಮೃತ್ಯುದೇವ ಯಮರಾಜನ ದೇವಸೇ ನೆಯಾಗಿ ಹೋರಾಡಿ ಶೌರ್ಯಗಾಥೆ ಬರೆಯುತ್ತಾರೆ. ನಮ್ಮ ಕತ್ತಿಯಲ್ಲಿ ಸ್ವಯಂ ದುರ್ಗಾ ಮಾತೆಯ ಶಕ್ತಿಯಿದೆ, ಮಾತೆ ನಮ್ಮ ಶತ್ರುಗಳ ಸಂಹಾರ ಮಾಡಿ ನಮಗೆ ಗೆಲುವು ತಂದುಕೊಡುತ್ತಾಳೆಂದು ಖಾಲ್ಸಾ ಸೈನಿಕರನ್ನು ಹುರಿದುಂಬಿಸು ತ್ತಿದ್ದರು.
ಹಲವಾರು ಯುದ್ಧಗಳನ್ನು ಮಾಡಿ ವಿಜಯಿಯಾದ ಖಾಲ್ಸಾ ಸೇನೆಯ ಪರಾಕ್ರಮವು ಇತಿಹಾಸದ ಪುಟಗಳಲ್ಲಿ ಎಂದೂ ಮರೆಯ ಲಾಗದಂತೆ ಮಾಡಿದ್ದು ಚಮ್ಕೌರ್ ಯುದ್ಧ. ಸಾವಿರಾರು ಸಂಖ್ಯೆಯಲ್ಲಿದ್ದ ಮೊಘಲ್ ಸೈನಿಕರ ವಿರುದ್ಧ ನಲವತ್ತೇ ನಲವತ್ತು ಸಿಖ್ಖರು ಮಹಾಕಾಳನ ರೌದ್ರ ರೂಪವೇ ಮೈದೆಳೆದಂತೆ ಹೋರಾಡುತ್ತಾರೆ.
ತಮ್ಮ ದೊಡ್ಡ ಮಕ್ಕಳಾದ ಅಜಿತ್ ಸಿಂಗ್(೧೭ ವರ್ಷ), ಜುಝಿರ್ ಸಿಂಗ್(೧೩ ವರ್ಷ)ಅವರ ಬಲಿದಾನದ ಜೊತೆಗೆ ತಮ್ಮ ಹಲವಾರು ಶಿಷ್ಯರ ಬಲಿದಾನವನ್ನು ಕಾಣುವ ಮೂಲಕ ಗುರುಗಳು ಧರ್ಮರಕ್ಷಣೆಯ ಕಾರ್ಯಕ್ಕೆ ಮತ್ತಷ್ಟು ಅಣಿಯಾಗಿ ಮುಂದೆ ಆಗಲಿರುವ ಬಲಿದಾನ ಗಳನ್ನು ಎದುರಿಸಲು ಗಟ್ಟಿಗರಾಗುತ್ತಾರೆ. ಈ ಯುದ್ಧದ ಸಂದರ್ಭದಲ್ಲಿ ತಮ್ಮವರಿಂದ ಬೇರ್ಪಟ್ಟ ಗುರು ಗೋವಿಂದ ಸಿಂಗರ ಚಿಕ್ಕ ಮಕ್ಕಳು ಬಾಬಾ ಜೊರಾವರ್ ಸಿಂಗ್(೯ ವರ್ಷ) ಹಾಗೂ ಬಾಬಾ ಫತೆ ಸಿಂಗ್(೬ ವರ್ಷ)ಅವರಿಂದ ಮೊಘಲರ ಮಾನವೀಯತೆಯ ಗೈರು
ಹಾಜರಿ ಯದ ಬಲಿದಾನವು ಹಾಗೂ ಇದರ ಆಘಾತದಿಂದಾದ ತಮ್ಮ ತಾಯಿಯ ಬಲಿದಾನವು ಇವರ ಧೈರ್ಯವನ್ನು ಮನೋಸ್ಥೈರ್ಯ ವನ್ನು ಒಂದಿನಿತೂ ಕಡಿಮೆ ಮಾಡಲಿಲ್ಲ.
ಗುರುಗಳ ಬೋಧನೆಯಂತೆ ಶಾಂತಿಯಲ್ಲಿ ಸಂತರು ಸಂಘರ್ಷದಲ್ಲಿ ಯೋಧರು ಎಂಬ ಸೂತ್ರ, ಪ್ರೇಮದ ಶಕ್ತಿಯ ಸಾರ, ಮಾನವೀಯ ತೆಯ ಸೇವೆ, ಸಮಾನತೆ, ವಿನಮ್ರತೆ, ಪ್ರಬುದ್ಧ ಮಾತುಗಾರಿಕೆ, ಆದರ್ಶ ವ್ಯಕ್ತಿತ್ವವೆಂಬ ಸುಸಂಸ್ಕೃತಿಯ ಗುಣಗಳು ಸದಾ ಆದರ್ಶ ಪ್ರಾಯವಾಗಿರುವುದು. ಈ ಪುಣ್ಯಭೂಮಿಯ ಘನತೆಗಾಗಿ ಧರ್ಮರಕ್ಷಣೆಯಂತಹ ಮಹಾನ್ ಕಾರ್ಯದಲ್ಲಿ ತಮ್ಮ ತಂದೆ, ತಾಯಿ, ಸಂತಾನ ಎಲ್ಲವನ್ನೂ ಕಳೆದುಕೊಂಡ ದಿವ್ಯಾತ್ಮ ಗುರುಗಳು ತಮ್ಮವರನ್ನು ಕಳೆದುಕೊಳ್ಳುವ ಜೊತೆಗೆ ಕೆಲವು ಸ್ವಾರ್ಥಪರ ಸ್ವದೇಶಿ ಸಾಮ್ರಾಟರ ವಿರೋಧದಿಂದ ತಮ್ಮವರಿಂದಲೇ ವಿರೋಧಕ್ಕೊಳಗಾಗಿ ಗಾಯಗೊಂಡ ವ್ಯಾಘ್ರನಂತೆ ಜೀವನದುದ್ದಕ್ಕೂ ಸಂಘರ್ಷವನ್ನು ಮಾಡುತ್ತಾ ಅಮರರಾದರು.
ಇಷ್ಟೆ ಬಲಿದಾನಗಳ ಕಥೆಗಳಲ್ಲಿ ಗುರು ಗೋವಿಂದ ಸಿಂಗರ ಮಕ್ಕಳಾದ ಜೊರಾವರ್ ಸಿಂಗ್ ಮತ್ತು ಫತೆ ಸಿಂಗ್ ಅವರ ಬಲಿದಾನವು ವಿಶೇಷವಾಗಿ ನಮ್ಮ ಅಂತಃಕರಣವನ್ನು ಮುಟ್ಟುತ್ತದೆ. ಚಮ್ಕೌರ್ ಯುದ್ಧದ ಸಂದರ್ಭದಲ್ಲಿ ತಮ್ಮವರಿಂದ ಬೇರೆಯಾಗಿ ಔರಂಗಜೇಬನ ನವಾಬ ವಜೀರ್ ಖಾನ್‌ನ ಸೆರೆಗೆ ಸಿಕ್ಕಿ ಹಾಕಿಕೊಳ್ಳುತ್ತಾರೆ. ಗುರು ಗೋವಿಂದ ಸಿಂಗರ ಮಕ್ಕಳು ಇವರೇ ಎಂಬುದು ಗೊತ್ತಾಗಿ ಬಿಟ್ಟಿರು ತ್ತದೆ. ಅವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದಾಗ ಅದನ್ನು ಪ್ರವೇಶಿಸುತ್ತಿದ್ದಂತೆಯೇ ಅವರು ಜೋರಾಗಿ ವಾಹೆ ಗುರೂಜಿ ದ ಖಾಲ್ಸಾ ವಾಹೆ ಗುರು ದಿ ಫತೆ ಎಂದು ಘರ್ಜಿಸುತ್ತಾರೆ.
ಅಲ್ಲಿನ ಆಸ್ಥಾನದ ಸಭಾಪತಿಗಳು ನವಾಬನಿಗೆ ತಲೆಬಾಗಿ ನಮಸ್ಕರಿಸುವಂತೆ ತಿಳಿಸುತ್ತಾರೆ. ಎಂದಿಗೂ ಇಲ್ಲ. ನಮಗೆ ಕೇವಲ ದೇವರು ಮತ್ತು ಗುರುವಿಗೆ ಮಾತ್ರ ತಲೆಬಾಗಿ ನಮಸ್ಕರಿಸುವಂತೆ ಕಲಿಸಲಾಗಿದೆ, ನಾವು ನವಾಬನ ಮುಂದೆ ತಲೆ ಬಾಗುವುದಿಲ್ಲ ಎಂದು ಬಾಬಾ ಜೊರಾವರ ಸಿಂಗ್‌ನು ಸಭೆಯ ನಿರ್ಭಯವಾಗಿ ನುಡಿಯುತ್ತಾನೆ. ಇದರಿಂದ ಗಾಬರಿಯಾದ ನವಾಬನು ನಿಮ್ಮ ತಂದೆ, ಇಬ್ಬರು ಅಣ್ಣಂದಿರು ಅದಾಗಲೇ ಯುದ್ಧದಲ್ಲಿ ಅಸುನೀಗಿzರೆ. ಅವರ ವಿಽಲಿಖಿತ ಚೆನ್ನಾಗಿರಲಿಲ್ಲ. ಆದರೆ, ನಿಮ್ಮ ಅದೃಷ್ಟ ಚೆನ್ನಾಗಿದೆ. ನೀವು ಇಸ್ಲಾಮ್‌ಗೆ ಮತಾಂತರವಾಗಿ ನಮ್ಮಬ್ಬರಾಗಿ ಬಿಡಿ. ನಿಮಗೆ ಸಂಪತ್ತು, ಅಧಿಕಾರ, ಸಮ್ಮಾನಗಳನ್ನು ನೀಡಲಾಗುವುದು.
ಸಮೃದ್ಧ ಜೀವನವು ನಿಮ್ಮದಾಗುವುದು. ಮೊಘಲ್ ದೊರೆಗಳೂ ನಿಮ್ಮ ಸತ್ಕಾರವನ್ನು ಮಾಡುವರು. ಆದರೆ ನೀವು ಇಸ್ಲಾಮ್ ಒಪ್ಪಿ ಕೊಳ್ಳದಿದ್ದರೆ ನಿಮ್ಮನ್ನು ಕಠೋರವಾಗಿ ನಡೆಸಿಕೊಂಡು, ಜೀವವನ್ನೇ ತೆಗೆಯಲಾಗುವುದು ಎಂಬ ಬೆದರಿಕೆಯನ್ನು ಒಡ್ಡುತ್ತಾನೆ.
ಜೊರಾವರ ಸಿಂಗ್ ತನ್ನ ತಮ್ಮನೆಡೆಗೆ ತಿರುಗಿ, ನಮ್ಮ ಬಲಿದಾನದ ಸಮಯ ಬಂದಿದೆ ಸಹೋದರ. ಪ್ರತಿಯಾಗಿ ಹೇಳುವುದರ ಬಗ್ಗೆ ನೀನು ಏನು ಯೋಚನೆ ಮಾಡುತ್ತಿದ್ದೀಯಾ ಎನ್ನುವನು. ಆಗ ಫತೆ ಸಿಂಗನು ಪ್ರೀತಿಯ ಸಹೋದರ, ನಮ್ಮ ಅಜ್ಜ ತೇಗ ಬಹದ್ದೂರರು ಧರ್ಮ ರಕ್ಷಣೆಗಾಗಿ ತಮ್ಮ ತಲೆ ಕತ್ತರಿಸಲು ಒಪ್ಪಿಕೊಂಡು ಬಲಿದಾನ ನೀಡಿದರು.
ನಾವು ಅವರ ಧರ್ಮ ಮಾರ್ಗವನ್ನೇ ಅನುಸರಿಸಬೇಕಿದೆ. ನಾವೇಕೆ ಸಾವಿಗೆ ಹೆದರಬೇಕು? ನಮ್ಮ ಪೂರ್ವಜರ ಶ್ರೇಷ್ಠತೆ, ಪರಂಪರೆ, ಸಾಹಸಗಾಥೆಯೇ ನಮ್ಮ ಶಕ್ತಿ. ನಾವು ನಮ್ಮ ಗುರುವಿನ ಸಿಂಹಗಳು. ನಮ್ಮ ಪ್ರಾಣ ರಕ್ಷಣೆ ಮಾಡಿಕೊಳ್ಳುವುದಕ್ಕಿಂತ ಧರ್ಮ ರಕ್ಷಣೆ
ಮಾಡುವುದೇ ಉತ್ತಮ ಎಂದೇಳುವುದರ ಮೂಲಕ ಕಿರಿಯ ವಯಸ್ಸಿನ ಅಗಾಧ ಪ್ರಬುದ್ಧತನವನ್ನು ಪ್ರದರ್ಶಿಸಿದನು. ಜೊರಾವರ ಸಿಂಗನು ನವಾಬನಿಗೆ ನೀವು ನಮ್ಮ ತಂದೆ ಯನ್ನು ಯುದ್ಧದಲ್ಲಿ ಕೊಲ್ಲಲಾಗಿದೆ ಎಂದು ಹೇಳುತ್ತಿದ್ದೀರಿ.
ಆದರೆ ನಮಗೆ ಗೊತ್ತಿದೆ ಅದು ಶುದ್ಧ ಸುಳ್ಳು. ಅವರು ಇನ್ನೂ ಬದುಕಿzರೆ ಮತ್ತು ಸಮಾಜಕ್ಕಾಗಿ ಇನ್ನೂ ಹಲವು ಪುಣ್ಯಕಾರ್ಯ ಮಾಡಲಿzರೆ. ನಿಮ್ಮ ಸಾಮ್ರಾಜ್ಯವನ್ನೇ ಅಲುಗಾಡಿಸಲು ಅವರು ಬರುತ್ತಾರೆ. ನಾವು ನಿಮ್ಮ ಬೇಡಿಕೆ, ಆಮಿಷಗಳನ್ನು ತಿರಸ್ಕರಿಸುತ್ತೇವೆ. ನಮ್ಮ ಪರಂಪರೆ ಜೀವವನ್ನು ತ್ಯಾಗ ಮಾಡಲು ಕಲಿಸಿದೆಯೇ ಹೊರತು ಧರ್ಮವನ್ನಲ್ಲ. ನೀವು ನಮಗೆ ಎಷ್ಟು ಕಷ್ಟವನ್ನು ಕೊಡಬಹುದೊ ಅಷ್ಟೂ ಕಷ್ಟವನ್ನು ಕೊಡಿ ಎಂದು ಆಹ್ವಾನಿಸುತ್ತೇವೆ ಎಂದು ಹೇಳುವುದರ ಮೂಲಕ ತನ್ನ ತಂದೆ ಬದುಕಿರುವ ಆತ್ಮವಿಶ್ವಾಸವನ್ನು ತೋರ್ಪಡಿಸಿ, ಸುಳ್ಳು ಸಾವಿನ ಸುದ್ದಿ ಹೇಳಿ ತಮ್ಮನ್ನು ಭಯಪಡಿಸಲು ಮಾಡಿದ್ದ ಷಡ್ಯಂತರವನ್ನು ಭೇದಿಸುತ್ತಾನೆ ಹಾಗೂ ತಮ್ಮ ಪರಂಪರೆಯ ಆತ್ಮಗೌರವದ ಪಾಠವನ್ನು ಉಚ್ಛರಿಸುತ್ತಾನೆ.
ಇವರ ಶೌರ್ಯದ ನುಡಿಗಳಿಗೆ ದಂಗಾದ ನವಾಬನು ಸಮಯಾವಕಾಶ ನೀಡಿ. ಕೊನೆಗೆ ನವಾಬನು ನನಗೆ ಈಗಲೂ ನಿಮ್ಮಂತಹ ತೇಜಸ್ವಿ ಬಾಲಕರನ್ನು ಕೊಲ್ಲಲು ಇಷ್ಟವಿಲ್ಲ ಎಂದು ಹೇಳಿ, ನಿಮಗೆ ಈಗ ನಾನು ಸ್ವಾತಂತ್ರ್ಯ ಕೊಟ್ಟರೆ ಏನು ಮಾಡುವಿರಿ ಎಂದು ಪ್ರಶ್ನಿಸುತ್ತಾನೆ. ಅದಕ್ಕೆ ಪ್ರತಿಯಾಗಿ ಇಬ್ಬರೂ ಮಕ್ಕಳು ಬಲಿಷ್ಠ ಸೇನೆಯನ್ನು ಕಟ್ಟಿ ನಿಮ್ಮ ಮೇಲೆ ಆಕ್ರಮಣ ಮಾಡಿ, ನಿಮ್ಮನ್ನು ನಾಶ ಮಾಡುವ ಮೂಲಕ ನಮ್ಮ ಜನರನ್ನು ರಕ್ಷಿಸುತ್ತೇವೆ ಎನ್ನುವರು. ಒಂದು ವೇಳೆ ನೀವು ಸೋತು ಹೋದರೆ ಆಗ ಏನು ಮಾಡುವಿರಿ, ನವಾಬನ ಪ್ರಶ್ನೆ.
ಮತ್ತೊಮ್ಮೆ ಸೈನ್ಯ ಕಟ್ಟುತ್ತೇವೆ ಮತ್ತೊಮ್ಮೆ ಯುದ್ಧ ಮಾಡುತ್ತೇವೆ, ನಿಮ್ಮನ್ನೆ ಕೊಲ್ಲುತ್ತೇವೆ ಅಥವಾ ನಾವೇ ಬಲಿದಾನವಾಗುತ್ತೇವೆ, ಮಕ್ಕಳಿಬ್ಬರ ಉತ್ತರ. ಈ ಮಕ್ಕಳು ದೊಡ್ಡವರಾದ ಮೇಲೆ ಖಂಡಿತ ನಮಗೆಲ್ಲ ದೊಡ್ಡ ವಿಪತ್ತುಗಳನ್ನು ತಂದೊಡ್ಡುತ್ತಾರೆ ಎಂದುಕೊಂಡ ನವಾಬನು ಮಾನವೀಯತೆಯನ್ನು ಮರೆತು, ಆ ಮಕ್ಕಳ ಸುತ್ತ ಇಟ್ಟಿಗೆಯ ಗೋಡೆ ಕಟ್ಟಿ ಜೀವಂತವಾಗಿ ಸಮಾಧಿ ಮಾಡುವಂತೆ ಆದೇಶಿಸುತ್ತಾನೆ. ಮಕ್ಕಳ ದೇಹದ ಗಾತ್ರಕ್ಕೆ ಸರಿ ಹೊಂದುವಂತೆ ಸುತ್ತಲೂ ಸ್ವಲ್ಪವೂ ಅಂತರವಿಲ್ಲದಂತೆ ಗೋಡೆಗಳ ಪುಟ್ಟ ಕೋಟೆ ಯನ್ನೇ ನಿರ್ಮಿಸುತ್ತಾರೆ.
ಪ್ರತಿ ಹಂತದಲ್ಲೂ ಇಟ್ಟಿಗೆ ಕಟ್ಟುತ್ತಿರುವಾಗ ಅಲ್ಲಿದ್ದ ಹಲವರು ಇಸ್ಲಾಮ್‌ಗೆ ಮತಾಂತರವಾಗಲು ಒಪ್ಪಿಕೊಳ್ಳುವಂತೆ ಪ್ರಚೋದಿಸುತ್ತಾರೆ. ಅವರ ಭುಜಗಳ ಮಟ್ಟಿಗೆ ಗೋಡೆ ಕಟ್ಟಿ ನಿಲ್ಲಿಸಿದಾಗ, ಮತ್ತೊಮ್ಮೆ ಸ್ವತಃ ನವಾಬನೆ ಬಂದು ಇಸ್ಲಾಮ್ ಒಪ್ಪಿಕೊಂಡು ಜೀವ ಉಳಿಸಿಕೊಳ್ಳಿ ಎನ್ನುತ್ತಾನೆ. ಇಂತಹ ಯಾವುದೇ ಕೊನೆ ಘಳಿಗೆಯಲ್ಲಿ ಜೀವ ಉಳಿಸಿಕೊಳ್ಳುವ ಆಮಿಷದ ಮಾತುಗಳ ಪ್ರಭಾವಕ್ಕೊಳಗಾಗದೆ ತಮ್ಮ ಸಂಕಲ್ಪ ವನ್ನು ಪೂರೈಸುವ ಗುರುಗಳ ಮಕ್ಕಳು ಅವರ ಪೂರ್ವಜರ ಘನತೆಯನ್ನು ಮತ್ತಷ್ಟು ಎತ್ತರಕ್ಕೇರಿಸುವಲ್ಲಿ ಯಶಸ್ವಿಯಾಗುತ್ತಾರೆ.
ಚಿಕ್ಕ ವಯಸ್ಸಿನಲಿಯೇ ಅಷ್ಟೊಂದು ಪ್ರಬುದ್ಧತನವನ್ನು ಹೊಂದಿದ್ದ ಗುರು ಗೋವಿಂದ ಸಿಂಗರ ಮಕ್ಕಳು ದುರಾಚಾರಿ ಮೊಘಲರ ಬಲಾ ತ್ಕಾರದ ಮತಾಂತರದಿಂದ ಸಿಖ್ಖರು, ಹಿಂದೂಗಳನ್ನು ರಕ್ಷಿಸುವಲ್ಲಿ ಹೇಗೆ ಅವರ ಪೂರ್ವಜರು ತಮ್ಮ ಬದುಕನ್ನು ಸಮರ್ಪಿಸಿದರೊ ಹಾಗೆ ಅವರ ದಾರಿಯಲ್ಲಿ ಸಾಗಿ ಅಮರರಾದರು. ಕೊನೆಯಲ್ಲಿ ನಾವೆಂದೂ ಮರೆಯಬಾರದ ಒಂದು ಮಾತು ಯಾವ ರಾಷ್ಟ್ರ ಹುತಾತ್ಮರನ್ನು ಸ್ಮರಿಸಿಕೊಳ್ಳುವುದಿಲ್ಲವೊ ಆ ರಾಷ್ಟ್ರಕ್ಕೆ ಉದ್ಧಾರವಿಲ್ಲ.