ವೀಕೆಂಡ್ ವಿತ್ ಮೋಹನ್
ಮೋಹನ್ ವಿಶ್ವ
camohanbn@gmail.com
1990 ರ ದಶಕದಲ್ಲಿ ಬಾಲಿವುಡ್ ಅಂಗಳದಲ್ಲಿ ‘ಖಾನ್’ ತ್ರಯರದ್ದೇ ದರ್ಬಾರ್. ಶಾರುಖ್ ಖಾನ್, ಅಮಿರ್ಖಾನ್ ಮತ್ತು ಸಲ್ಮಾನ್ ಖಾನ್ ನಟಿಸಿದ ಚಿತ್ರಗಳು ದೇಶದ ಮೂಲೆ ಮೂಲೆಗಳಿಗೆ ತಲುಪುತ್ತಿದ್ದವು. ಚಿತ್ರಗಳ ಮೂಲಕ ತಮ್ಮ ಸಿದ್ಧಾಂತಗಳನ್ನು ನಮಗರಿ ವಿಲ್ಲದೆಯೇ ನಮ್ಮ ತಲೆಗೆ ತುಂಬುತ್ತಿದ್ದರು.
ಅವರು ನಟಿಸಿದ ಬಹುತೇಕ ಚಿತ್ರಗಳು ಪಡ್ಡೆ ಯುವಕ/ ಯುವತಿಯರ ಹೃದಯದಲ್ಲಿ ಆಳವಾಗಿ ಬೇರೂರುತ್ತಿದ್ದವು. ಅವರು ಸಿನಿಮಾದಲ್ಲಿ ತೋರಿಸಿದ್ದ ವಿಷಯವೆಲ್ಲವೂ ನಿಜವೆಂಬಂತೆ ಕನಸು ಕಂಡ ಲಕ್ಷಂತಾರ ಜೋಡಿಗಳಿವೆ. ಈ ತ್ರಿಮೂರ್ತಿಗಳು ಅಭಿನಯಿಸಿರುವ ಚಿತ್ರಗಳ ಹಾಡುಗಳ ಕ್ಯಾಸೆಟ್ಟುಗಳು ಮಾರುಕಟ್ಟೆಯಲ್ಲಿ ಸಿಗುತ್ತಿರಲಿಲ್ಲ. ವಾರಗಟ್ಟಲೆ ಅಂಗಡಿಗಳ ಮುಂದೆ
ಕಾದಿರುವ ಉದಾಹರಣೆಗಳಿವೆ.
’ಖಾನ್’ಗಳನ್ನು ಭಾರತೀಯರು ಎಂದೂ ಒಂದು ಸಮುದಾಯಕ್ಕೆ ಸೀಮಿತರಾಗಿರಿಸಿರ ಲಿಲ್ಲ. ಅವರ ಸಿನಿಮಾಗಳಲ್ಲಿನ ಕಥೆಯ ಮೋಡಿ ಹೇಗಿರು ತ್ತಿತ್ತೆಂದರೆ ಹಿಂದೂ ಧರ್ಮದ ಬಗ್ಗೆ ಅವರ ಸಿನೆಮಾಗಳಲ್ಲಿ ಎಷ್ಟೇ ಕೆಟ್ಟದಾಗಿ ತೋರಿಸಿದರೂ ಪ್ರೇಕ್ಷಕ ಹಿಂದೂ
ಧರ್ಮದ ಅವಹೇಳನವನ್ನು ನಗೆಪಾಟಲಿನ ದೃಶ್ಯದಂತೆ ನೋಡುತ್ತಿದ್ದ. 1991ರ ಬಾಬ್ರಿ ಮಸೀದಿ ಪ್ರಕರಣದ ನಂತರ ದುಬೈ ನಲ್ಲಿದ್ದ ದಾವೂದ್ ಇಬ್ರಾಹಿಂ, ಪರೋಕ್ಷವಾಗಿ ಬಾಲಿವುಡ್ ಸಿನೆಮಾಗಳ ಮೂಲಕ ಹಿಂದೂ ಧರ್ಮವನ್ನು ಮತ್ತಷ್ಟು ಅವಹೇಳನ ಕಾರಿಯಾಗಿ ಬಿಂಬಿಸಲು ಶುರು ಮಾಡಿದ್ದ.
ಬಾಲಿವುಡ್ ನಿರ್ಮಾಪಕರು ಈತನ ಕೈಗೊಂಬೆಯಾಗಿದ್ದರು ಅವರಿಗೆ ಬೇಕಿದ್ದ ಕೋಟಿಗಟ್ಟಲೆ ಹಣವನ್ನು ತನ್ನ ತಂಡದ ಮೂಲಕ ತಲುಪಿಸಿ ಬೇನಾಮಿ ಹೆಸರುಗಳಲ್ಲಿ ಸಿನಿಮಾ ಮಾಡುತ್ತಿದ್ದ. ಹಾಜಿ ಮಸ್ತಾನ್ ಬಾಲಿವುಡ್ ಮೇಲಿನ ಹಿಡಿತವನ್ನು ದಾವೂದ್ ಇಮ್ಮಡಿಗೊಳಿಸಿ, ಮೂವರು ಖಾನ್ಗಳು ಬಾಲಿವುಡ್ ಚಿತ್ರರಂಗವನ್ನು ದಶಕಗಳ ಕಾಲ ಆಳುವಂತೆ ಮಾಡಿದ್ದ. ಹಿಂದೂ ನಟರು ಬಾಲಿವುಡ್ ಅಂಗಳ ಪ್ರವೇಶಿಸುವುದು ಬಹಳ ಕಷ್ಟವಾಗಿತ್ತು. ನಟ ಅಕ್ಷಯ್ ಕುಮಾರ್ ತನ್ನ ಚಿತ್ರಗಳ ಮೂಲಕ ಮುನ್ನೆಲೆಗೆ ಬರುತ್ತಿದ್ದರೆ, ಆತನನ್ನು ಸದ್ದಿಲ್ಲದೇ ತೆರೆಮರೆಗೆ ಸರಿಸಲಾಗಿತ್ತು.
ಇಂದಿಗೂ ಸುಶಾಂತ್ನ ಅನುಮಾಸ್ಪದ ಸಾವಿನ ಬಗ್ಗೆ ಎದ್ದಿದ್ದ ಹತ್ತಾರು ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ. ಬಾಲಿವುಡ್ ಚಿತ್ರರಂಗದ ಪ್ರಶಸ್ತಿ ವಿತರಣಾ ಕಾರ್ಯಕ್ರಮಗಳಲ್ಲಿ ಶಾರುಖ್ ಖಾನ್, ತನ್ನ ಎಡಬಿಡಂಗಿ ಸ್ನೇಹಿತ ಕರಣ್ ಜೋಹರ್ ಜತೆಗೂಡಿ ಬಹಿರಂಗ ವಾಗಿ ಸಾವಿರಾರು ಜನರ ಮುಂದೆ ಹಿಂದೂ ನಟರನ್ನು ಅವಮಾನ ಮಾಡುತ್ತಿದ್ದ. ಹಿಂದೂ ಸಮಾಜದಲ್ಲಿ ತಮ್ಮ ಧರ್ಮದ ಬಗೆಗಿನ ಅರಿವು ಕಳೆದ 10 ವರ್ಷಗಳಿಂದ ಹೆಚ್ಚಾಗಿದೆ. ಬಾಲಿವುಡ್ ಸಿನೆಮಾಗಳಲ್ಲಿ ಖಾನ್ ತ್ರಯರು ನಡೆಸುತ್ತಿದ್ದ ಹಿಂದೂ ವಿರೋಧಿ ಅಭಿಯಾನ ಜನರಿಗೆ ಸ್ಪಷ್ಟವಾಗಿ ಅರ್ಥವಾಗಿದೆ.
‘ಮಾಡಿ ದ್ದುಣ್ಣೊ ಮಹಾರಾಯ’ ಎಂಬಂತೆ ಅಂದು ಬಾಲಿವುಡ್ ಚಿತ್ರರಂಗದಲ್ಲಿ ತಾವು ಮಾಡಿದ್ದ ಪಾಪದ ಫಲವನ್ನು ಇಂದು
ಖಾನ್ಗಳು ಅನುಭವಿಸುವಂತಾಗಿದೆ. ಶಾರುಖ್ ಖಾನ್ ಅಭಿನಯದ ‘ಪಠಾಣ್’ ಚಿತ್ರ ತೆರೆಗೆ ಬರಲು ಸಜ್ಜಾಗಿದೆ. ಈ ಸಮಯದಲ್ಲಿ ಚಿತ್ರದ ಹಾಡಿನ ಸನ್ನಿವೇಶವೊಂದರಲ್ಲಿ ನಾಯಕಿ ದೀಪಿಕಾ ಪಡುಕೋಣೆ, ಕೇಸರಿ ಬಣ್ಣದ ಬಿಕಿನಿ ತೊಟ್ಟು ನಿಂತಿರುವ ಭಂಗಿ ಹಿಂದೂ ಸಮಾಜವನ್ನು ಕೆರಳಿಸಿದೆ. ಕೇಸರಿಯ ಬಗ್ಗೆ ಶಾರುಖ್ ಖಾನ್ ಈ ಹಿಂದೆ ಡಾನ್ ಚಿತ್ರದಲ್ಲಿ ಕೆಟ್ಟದಾಗಿ ಮಾತನಾಡಿದ್ದ.
ಇತ್ತೀಚಿನ ದಿನಗಳಲ್ಲಿ ಬಾಯ್ಕಾಟ್ ಬಿಸಿಗೆ ಸಿಲುಕಿರುವ ಬಾಲಿವುಡ್ನ ಹಿಂದೂ ವಿರೋಧಿ ಸಿನೆಮಾಗಳ ಪಟ್ಟಿಗೆ ತನ್ನ ಚಿತ್ರ
ಬೀಳಬಹುದೆಂಬ ಭಯ ಈತನನ್ನು ಕಾಡುತ್ತಿದೆ. ಹಿಂದೂಗಳ ಮನವೊಲಿಸಲು ರಾತ್ರೋರಾತ್ರಿ ಶಾರುಖ್ ಖಾನ್ ಕದ್ದುಮುಚ್ಚಿ ಜಮ್ಮುವಿನಲ್ಲಿರುವ ವೈಷ್ಣೋದೇವಿ ದೇವಾಲಯಕ್ಕೆ ಭೇಟಿ ನೀಡಿದ್ದಾನೆ. ಶಕ್ತಿ ದೇವತೆಯ ಅಂಗಳದಲ್ಲಿ ವರ್ಷದ 365 ದಿನವೂ ಕೇಸರಿಮಯವಾಗಿರುತ್ತದೆ. ಅತ್ತ ಕೇಸರಿಗೆ ಅವಮಾನ ಮಾಡಿ ಇತ್ತ ಕೇಸರಿ ಅಂಗಳದಲ್ಲಿಯೇ ಸುತ್ತಿದ್ದಾನೆ.
ಜೆಎನ್ಯುಲ್ಲಿ ನಡೆದ ದೇಶವಿರೋಧಿಗಳ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ನಟಿ ದೀಪಿಕಾ ಪಡುಕೋಣೆ ಈ ಚಿತ್ರದ ನಾಯಕಿ. ಕನ್ನಡ ಚಿತ್ರರಂಗದಿಂದ ಮೇಲೆ ಬಂದು ತನ್ನ ಮಾತೃಭೂಮಿಯನ್ನೇ ಮರೆತಿರುವ ದೀಪಿಕಾ, ಶಾರುಖ್ ಖಾನ್ನ ಹಾಟ್ ಫೇವರಿಟ್ ನಾಯಕಿ. ತನ್ನ ‘ಚಪಾಕ್’ ಚಿತ್ರಕ್ಕೆ ಪ್ರಚಾರ ಸಿಗುತ್ತದೆಯೆಂದು ಭಾವಿಸಿ ಅಂದು ಜೆಎನ್ಯು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕೆ ಪ್ರೇಕ್ಷಕ ಪ್ರಭು ಸರಿಯಾದ ಬುದ್ಧಿಯನ್ನೇ ಕಲಿಸಿದ್ದ. ಇವರ ಈ ನಡವಳಿಕೆಗಳಿಂದ ನಿರ್ಮಾಪಕರು ಇವರ ಮೇಲೆ ಹಣ ಹೂಡಲು ಮುಂದೆ ಬರುತ್ತಿಲ್ಲ.
ಮತ್ತೊಂದೆಡೆ ದಕ್ಷಿಣ ಭಾರತದ ಚಿತ್ರಗಳು ಇಂದು ಇಡೀ ದೇಶವನ್ನೇ ತಲುಪುತ್ತಿರುವುದು ಬಾಲಿವುಡ್ ಮಂದಿಗೆ ನುಂಗಲಾರದ ತುತ್ತಾಗಿದೆ. ಬಾಲಿವುಡ್ ಚಿತ್ರರಂಗದಲ್ಲಿ ದೊಡ್ಡ ಸಿಂಡಿಕೇಟ್ ಕಟ್ಟಿಕೊಂಡಿದ್ದ ಖಾನ್ಗಳ ಪತರುಗುಟ್ಟುವ ಪರಿಸ್ಥಿತಿ ಎದುರಾಗಿದೆ.
‘ಪಿ.ಕೆ’ ಸಿನಿಮಾ ಮೂಲಕ ಹಿಂದೂ ದೇವರುಗಳನ್ನು ಅವಮಾನ ಮಾಡಿದ್ದ ಅಮಿರ್ ಖಾನ್ ತನ್ನ ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾ ಬಿಡುಗಡೆಯ ಸಮಯದಲ್ಲಿ ಪಂಜಾಬಿನ ಗೋಲ್ಡನ್ ಟೆಂಪಲ್ಗೆ ಭೇಟಿ ನೀಡಿದ್ದ. ಅತ್ಯಂತ ಬುದ್ಧಿವಂತಿಕೆಯ ಮೂಲಕ ಹಿಂದೂ ಧರ್ಮವನ್ನು ಅವಮಾನಿಸುವ ತಂತ್ರಗಾರಿಕೆ ಈತನಿಗೆ ತಿಳಿದಿದೆ. ‘ಪಿ.ಕೆ’ ಚಿತ್ರದಲ್ಲಿ ಪಾಕಿಸ್ತಾನಿ ಯುವಕನ ಪಾತ್ರ ಮಾಡಿರುವ ಸುಶಾಂತ್ ಸಿಂಗ್ ರಜಪೂತ್ ನ ಕುಟುಂಬವನ್ನು ಅತ್ಯಂತ ಪ್ರಬುದ್ಧರನ್ನಾಗಿ ತೋರಿಸಲಾಗಿದೆ.
ವಾಸ್ತವದಲ್ಲಿ ಪಾಕಿಸ್ತಾನದಲ್ಲಿ ನಡೆಯುವ ಮರ್ಯಾದಾ ಹತ್ಯೆಗಳು ಜಗತ್ತಿನ ಯಾವ ಮೂಲೆಯಲ್ಲೂ ನಡೆಯುವುದಿಲ್ಲ. ನಾಗರಪಂಚಮಿಯಂದು ಹಾವಿಗೆ ಹಾಲೆರೆಯುವುದನ್ನು ಪ್ರಶ್ನಿಸಿದ್ದ ಮಹಾನ್ ನಾಯಕರಿವರು. ಹಿಂದೂ ಧರ್ಮದ ಆಚರಣೆ ಗಳನ್ನು ಮೂಢನಂಬಿಕೆಗಳೆಂದು ತಮ್ಮ ಸಿನೆಮಾಗಳ ಮೂಲಕ ಜನರಿಗೆ ತಲುಪಿಸಿದ್ದ ಅಮೀರ್ ಖಾನ್, ಸಿನಿಮಾ ರಂಗದಿಂದ ಕೆಲದಿನಗಳ ಕಾಲ ವಿಶ್ರಾಂತಿ ಪಡೆಯುವುದಾಗಿ ಹೇಳಿಕೊಂಡಿzನೆ. ತಾನು ಸಿನಿಮಾ ಮೂಲಕ ಹೇಳಿದ್ದನ್ನೆಲ್ಲ ಪ್ರಶ್ನೆ ಮಾಡುವವರು ಯಾರು ಇಲ್ಲವೆಂದುಕೊಂಡಿದ್ದ ಅಮೀರ್ ಖಾನ್ನ ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾ ಮಕಾಡೆ ಮಲಗಿತ್ತು.
ಭಾರತೀಯ ಸೈನ್ಯವನ್ನು ಅವಮಾನ ಮಾಡುವ ರೀತಿಯಲ್ಲಿ ಸಿನಿಮಾ ಮಾಡಿದ್ದ ಅಮೀರ್ ಖಾನ್ ತನ್ನ ಸಿನೆಮಾಗಳಲ್ಲಿ ಪಾಕಿಸ್ತಾನವನ್ನು ಟೀಕಿಸುವ ಗೋಜಿಗೆ ಎಂದೂ ಹೋಗಿಲ್ಲ. ಏಕೆಂದರೆ ಭಾರತದಷ್ಟೇ ಅಭಿಮಾನಿಗಳು ಈತನಿಗೆ ಪಾಕಿಸ್ತಾನ ದಲ್ಲಿದ್ದಾರೆ. ಈತ ಹಿಂದೂ ಧರ್ಮ ಟೀಕಿಸುವುದನ್ನು ಕಂಡು ಪಾಕಿಸ್ತಾನಿಗಳು ಖುಷಿ ಪಡುತ್ತಾರೆ. 1990ರ ದಶಕದಲ್ಲಿ ಈತನ ಚಿತ್ರದ ಹಾಡುಗಳು ಪಡ್ಡೆ ಹುಡುಗರ ಮನಸಿನಲ್ಲಿ ಹುಚ್ಚೆಬ್ಬಿಸುತ್ತಿತ್ತು. ಅಂದಿನ ಮಾಧ್ಯಮ ಸಂಪೂರ್ಣ ಲೊಡ್ಡೆಗಳ ಕಪಿಮುಷ್ಟಿ ಯಲ್ಲಿದ್ದ ಕಾರಣ ಚಿತ್ರದ ನಿಜಾಂಶ ಪ್ರೇಕ್ಷಕನಿಗೆ ತಲುಪುತ್ತಿರಲಿಲ್ಲ.
ಬಾಲಿವುಡ್ ದೊರೆಗಳು ಹಣದ ಹೊಳೆ ಹರಿಸಿ ಇವರ ಚಿತ್ರಗಳ ವಿಮರ್ಶೆ ಬರೆಸುತ್ತಿದ್ದರು. ನಾವೂ ಆ ವಯಸ್ಸಿನಲ್ಲಿ ಇವರುಗಳು ಬರೆದ ವಿಮರ್ಶೆಗಳನ್ನೇ ಚಾಚೂ ತಪ್ಪದೆ ಓದಿ ಸಿನಿಮಾ ನೋಡುತ್ತಿದ್ದೆವು. ಇವರ ಸಿನಿಮಾದ ಮತ್ತೊಂದು ಮುಖವಾಡವನ್ನು ಬಯಲು ಮಾಡುವ ಮಾಧ್ಯಮಗಳು ಕೇವಲ ಬೆರಳೆಣಿಕೆಯಷ್ಟಿದ್ದವು. ಮುಂಬೈ ನಗರದಲ್ಲಿ ಬಾಳ ಸಾಹೇಬ್ ಠಾಕ್ರೆಯವರ
ದಿಟ್ಟ ನಿರ್ಧಾರಗಳು ಬಾಲಿವುಡ್ ಖಾನ್ಗಳ ನಿದ್ದೆಗೆಡೆಸಿದ್ದವು. ಅದಕ್ಕೆ ತದ್ವಿರುದ್ಧವಾಗಿ ಹುಲಿಯ ಹೊಟ್ಟೆಯಲ್ಲಿ ಇಲಿಯೊಂದು ಹುಟ್ಟಿದಂತೆ ಅವರ ಮೊಮ್ಮೊಗ ಇದೇ ‘ಖಾನ್ ದಾನ್’ಗಳ ಜೊತೆ ಮುಂಬೈ ನಗರದ ಪ್ರತಿಷ್ಠಿತ ‘ಪಬ’ಗಳಲ್ಲಿ ಪಾರ್ಟಿಗಳನ್ನು
ಮಾಡುತ್ತಿದ್ದ.
ಖಾನ್ಗಳ ಬಹುಪಾಲು ಸಿನಿಮಾಗಳು ಪ್ರೇಮಕಥೆಗಳನ್ನೊಳಗೊಂಡಿವೆ. ಭಾರತೀಯ ಹಿಂದೂ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾಗಳನ್ನು ಇವರು ಮಾಡುವುದಿಲ್ಲ. ತೆಲುಗಿನ ರಾಜಮೌಳಿ ನಿರ್ದೇಶನದ ‘ಬಾಹುಬಲಿ’ ಸಿನಿಮಾ ಬಾಲಿವುಡ್ ಅಂಗಳದಲ್ಲಿ
ನೂರಾರು ಕೋಟಿಯಷ್ಟು ವ್ಯವಹಾರ ಮಾಡಿದ ನಂತರ ಖಾನ್ಗಳ ಸಿನಿಮಾಗಳ ವೀಕ್ಷಕರ ಸಂಖ್ಯೆಯಲ್ಲಿ ಭಾರಿ ಇಳಿಮುಖ ವಾಯಿತು.
ತದನಂತರ ಕನ್ನಡದ ‘ಕೆಜಿಎಫ್’ ಸುಮಾರು ೫೦೦ ಕೋಟಿ ವ್ಯವಹಾರ ಮಾಡಿತು. ದಕ್ಷಿಣ ಭಾರತದ ಸಿನಿಮಾಗಳು ಬಾಲಿವುಡ್ ಮಾರುಕಟ್ಟೆಗೆ ಲಗ್ಗೆಯಿಟ್ಟು ನೂರಾರು ಕೋಟಿಯ ವ್ಯವಹಾರ ಮಾಡುತ್ತಿದ್ದರೆ, ಖಾನ್ಗಳ ಸಿನಿಮಾಗಳು ಪ್ರೇಕ್ಷಕನಿಲ್ಲದೆ ಸೊಳ್ಳೆ ಹೊಡೆಯುತ್ತಿವೆ. ಹಿಂದೂ ಧರ್ಮದ ಕಟ್ಟರ್ ಸಂಪ್ರದಾಯದ ಸಿನಿಮಾ ‘ಕಾಂತಾರ’ವನ್ನು ಬಾಲಿವುಡ್ ಪ್ರೇಕ್ಷಕ ಒಪ್ಪಿಕೊಂಡಿzನೆ. ಮಾಧ್ಯಮ ಲೋಕದ ಲೊಡ್ಡೆಗಳ ಪಟಾಲಂನ ಸದಸ್ಯ ರಾಜದೀಪ್ ಸರದೇಸಾಯಿ, ಕಾಂತಾರ ಚಿತ್ರದ ಬಗ್ಗೆ ರಿಷಬ್ ಶೆಟ್ಟಿಯನ್ನು
ಸಂದರ್ಶಿಸಿದ್ದರು. ಬಹುಶಃ ತನ್ನ ಜೀವನದಲ್ಲಿ ಹೀಗೊಂದು ಶಾಕ್ ನೋಡುತ್ತೇನೆಂದು ರಾಜದೀಪ್ ಕನಸಿನಲ್ಲಿಯೂ ಅಂದು ಕೊಂಡಿರಲಿಕ್ಕಿಲ್ಲ.
ಸದಾ ಖಾನ್ಗಳ ಪಟಾಲಂನಿಂದ ತುಂಬಿರುತ್ತಿದ್ದ ರಾಷ್ಟ್ರೀಯ ಮಾಧ್ಯಮದ ಸ್ಟುಡಿಯೋಗಳು ಇಂದು ದಕ್ಷಿಣ ಭಾರತದ ಸಂಸ್ಕೃತಿಯನ್ನು ಪ್ರತಿನಿಧಿಸುವ ಸಿನಿಮಾ ನಿರ್ದೇಶಕರುಗಳಿಂದ ತುಂಬಿದೆ. ತನ್ನ ಹೆಂಡತಿ ಹಾಗೂ ಮಕ್ಕಳಿಗೆ ಭಾರತದಲ್ಲಿರಲು ಭಯವಾಗುತ್ತಿದೆಯೆಂದು ಹೇಳಿದ್ದ ಅಮಿರ್ ಖಾನ್, ಇದೀಗ ತನ್ನ ಕಚೇರಿಯಲ್ಲಿ ಕಲಶ ಪೂಜೆ ಮಾಡುವ ಮೂಲಕ ಹಿಂದೂಗಳ
ಓಲೈಕೆಗೆ ಮುಂದಾಗಿದ್ದಾನೆ.
ತನ್ನ ಬಾಂಧವರು ಶಿವಲಿಂಗವನ್ನು ಕೆಟ್ಟದಾಗಿ ದೇಹದ ಅಂಗವೊಂದಕ್ಕೆ ಹೋಲಿಸಿದಾಗ ಸುಮ್ಮನಿದ್ದ ಅಮಿರ್ ಖಾನ್ಗೆ ಈಗ ಕಳಸದ ಮೇಲಿನ ಡೋಂ ಭಕ್ತಿ ಎದ್ದು ಕಾಣುತ್ತಿದೆ. ಲೊಡ್ಡೆಗಳ ಪಟಾಲಂನ ಮತ್ತೊಬ್ಬ ನಟ ಪ್ರಕಾಶ್ ರಾಜ್, ತನಗೆ ಸಿನೆಮಾ ಗಳಲ್ಲಿ ಈ ಹಿಂದೆ ಸಿಗುತ್ತಿದ್ದ ಅವಕಾಶಗಳು ಈಗ ಸಿಗುತ್ತಿಲ್ಲವೆಂದು ತನ್ನ ನೋವನ್ನು ಹೇಳಿಕೊಂಡಿದ್ದಾರೆ. ಮುಸಲ್ಮಾನರ
ಓಲೈಕೆಯಲ್ಲಿ ತೊಡಗಿರುವ ಪ್ರಕಾಶ್ ರಾಜ್ ಚುನಾವಣೆ ಸಮೀಪಿಸುತ್ತಿದ್ದಂತೆ ಸಕ್ರಿಯರಾಗಿಬಿಡುತ್ತಾರೆ, ತನ್ನ ಕಮ್ಯುನಿಸ್ಟ್ ಮನಃಸ್ಥಿತಿಯನ್ನು ಜನರ ಮುಂದೆ ಹುಚ್ಚು ಟ್ವೀಟ್ಗಳ ಮೂಲಕ ಬಿಚ್ಚಿಡುತ್ತಾರೆ. ಈ ಹಿಂದೆ ಒಮ್ಮೆ ತೆಲುಗು ಚಿತ್ರರಂಗದಿಂದ ಬ್ಯಾನ್ ಆಗಿದ್ದ ಪ್ರಕಾಶ್ ರಾಜ, ಈಗ ಮತ್ತೊಮ್ಮೆ ಪ್ರೇಕ್ಷಕನಿಂದ ಬ್ಯಾನ್ ಆಗುವ ಎಲ್ಲ ಲಕ್ಷಣಗಳು ಕಾಣುತ್ತಿವೆ.
ನಾನಾ ಪಾತ್ರಗಳ ಮೂಲಕ ತಮ್ಮ ಚಿತ್ರಗಳಲ್ಲಿ ಹಿಂದೂ ಧರ್ಮಕ್ಕೆ ಧಕ್ಕೆ ತರುವ ಕೆಲಸವನ್ನು ಬಾಲಿವುಡ್ನ ಹಲವು ನಟರು ದಶಕಗಳಿಂದ ಮಾಡಿಕೊಂಡು ಬಂದಿದ್ದಾರೆ. ತಮ್ಮ ಹಲವು ಚಿತ್ರಗಳಲ್ಲಿ ‘ಡಾನ್’ ಪಾತ್ರದಾರಿಯನ್ನು ಹಿಂದುವೆಂಬಂತೆಯೇ ಬಿಂಬಿಸಿದ್ದಾನೆ. ವೈಶ್ಯರನ್ನು ಜನರಿಗೆ ಮೋಸ ಮಾಡುವವರನ್ನಾಗಿ ತೋರಿಸಲಾಗಿದೆ. ಸ್ವಾಮೀಜಿಗಳನ್ನು ಜನರಿಂದ ಹಣ ವಸೂಲಿ ಮಾಡುವವರನ್ನಾಗಿ ತೋರಿಸಲಾಗಿದೆ.
ಪಂಜಾಬಿನ ಗೋಲ್ಡನ್ ಟೆಂಪಲ್ಗೆ ಹೋಗಿ ಪೂಜೆ ಮಾಡುವ ಅಮೀರ್ ಖಾನ್ ಪಂಜಾಬಿಗಳ ಹೆಸರಿನಲ್ಲಿ ಕೇಳುವ ‘ಸರ್ದಾರ್ ಜೀ’ ಜೋಕ್ಗಳ ಬಗ್ಗೆ ತನ್ನ ಚಿತ್ರಗಳಲ್ಲಿ ಹೇಳಿದ್ದಾನೆ. ಬಾಲಿವುಡ್ ಸಿನಿಮಾದ ಗಾಳಿ ಕನ್ನಡ ಚಿತ್ರರಂಗಕ್ಕೂ ಒಂದು ಕಾಲದಲ್ಲಿ ಬೀಸಿತ್ತು. ಉಪೇಂದ್ರ ನಿರ್ದೇಶನದ ‘ಎ’ ಚಿತ್ರದಲ್ಲಿ ಗಣೇಶನಿಗೆ ಬಯ್ಯುವ ಸನ್ನಿವೇಶವನ್ನು ಕಂಡು ಪ್ರೇಕ್ಷಕರು ಚಪ್ಪಾಳೆ ಹೊಡೆ ದಿದ್ದರು. ‘ಓಂ’ ಚಿತ್ರದಲ್ಲಿ ಶಿವಣ್ಣನನ್ನು ಬಡ ಬ್ರಾಹ್ಮಣ ಕುಟುಂಬದಿಂದ ಬಂದ ‘ಡಾನ್’ ಆಗಿ ತೋರಿಸಲಾಗಿತ್ತು.
ನಿಜವಾದ ಡಾನ್ ಗಳಾದ ಕೊತ್ವಾಲ್ ರಾಮಚಂದ್ರ ಬ್ರಾಹ್ಮಣನಾಗಿರಲಿಲ್ಲ. ಜಯರಾಜ್ ಬ್ರಾಹ್ಮಣನಾಗಿರಲಿಲ್ಲ. ಉಪೇಂದ್ರರ
‘ಉಪೇಂದ್ರ’ ಸಿನಿಮಾದಲ್ಲಿ ಪೂಜಾರಿಯನ್ನು ಹೀನಾಯವಾಗಿ ಬಯ್ಯುವ ಸನ್ನಿವೇಶವನ್ನು ಚಿತ್ರೀಕರಿಸಲಾಗಿತ್ತು. ಅಂದಿನ ಕಾಲಘಟ್ಟದಲ್ಲಿ ಧ್ವನಿ ಎತ್ತಲು ಯಾರೂ ಇಲ್ಲದ ಕಾರಣ ಈ ವಿಷಯಗಳು ಚರ್ಚೆಗೆ ಬಂದಿರಲಿಲ್ಲ. ಈಗ ಕಾಲ ಬದಲಾಗಿದೆ ಸಿನಿಮಾದ ಮೂಲಕ ಸಮಾಜಕ್ಕೆ ಹೇಳುವ ವಿಷಯವನ್ನು ಹಿಂದೂ ಧರ್ಮಕ್ಕೆ ಎಲ್ಲಿಯೂ ಧಕ್ಕೆ ಬರದಂತೆ ಹೇಳಬೇಕಿದೆ. ಹಿಂದೂ
ಎಚ್ಚರಗೊಂಡಿzನೆ ಜನರಲ್ಲಿ ಜಾಗೃತಿ ಮೂಡಿದೆ. ಇದನ್ನರಿತ ಬಾಲಿವುಡ್ ‘ಖಾನ್’ಗಳು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ದೇವಾಲಯಗಳನ್ನು ಸುತ್ತುತ್ತಿದ್ದಾರೆ.