Wednesday, 11th December 2024

ಕೊಟ್ಟೋನ್‌ ಕುಮಾರಸ್ವಾಮಿ, ಇಸ್ಕೊಂಡೋಳ್‌ ರಾಧಿಕಾ

ತುಂಟರಗಾಳಿ

ಹರಿ ಪರಾಕ್

ರಾಧಿಕಾ ಕುಮಾರಸ್ವಾಮಿ
ನೀವ್ಯಾಕೆ, ಸ್ವಾಮಿ, ಕುಮಾರಸ್ವಾಮಿ ಬರೀ ಇಂಥವರಿಗೇ ತಗ್ಲಾಕಿಕೊಳ್ಳೋದು?
-ಏನ್ ಮಾಡೋದು, ನಂಗೆ ಸ್ವಲ್ಪ ‘ಸ್ವಾಮಿ’ ನಿಷ್ಠೆ ಜಾಸ್ತಿ.
ರಾಜಕಾರಣಕ್ಕಿಳಿ ರಾಧಿಕಾ ಅಂತ ಮನೇಲಿ ಹೇಳ್ತಿದ್ದಾರೆ ಅಂದ್ರಿ.. ಬರ್ತೀರಾ ಪೊಲಿಟಿಕ್ಸ್‌ಗೆ?
-ಹೌದು ರೀ..ಏನ್ ಮಾಡೋದು..ವಯಸ್ಸಾಯ್ತಲ್ಲ, ಸಿನಿಮಾ ಹೋಗು ಅಂತಿದೆ,
ರಾಜಕಾರಣ ಬಾ ಅಂತಿದೆ.
75 ಲಕ್ಷ ನನ್ನ ಸಿನಿಮಾಗೆ ಅಡ್ವಾನ್ಸ್ ಕೊಟ್ಟಿದ್ದು ಅಂತೀರಲ್ಲ, ನಿಮಗೆ ಸಂಭಾವನೆ ಅಂತನೇ
ಅಷ್ಟೊಂದ್ ಸಿಗಲ್ಲ, ಇನ್ನು ಅಷ್ಟೊಂದ್ ಅಡ್ವಾನ್ಸ್ ಕೊಡ್ತಾರಾ?
-ಏನ್ ಮಾತು ಅಂತ ಆಡ್ತೀರಿ.. ಕೊಟ್ಟೋನ್ ಕುಮಾರ ಸ್ವಾಮಿ, ಇಸ್ಕೊಂಡೋಳ್ ರಾಽಕಾ
ಅನ್ನೋ ಮಾತು ಕೇಳಿಲ್ವಾ
ಅಲ್ರೀ, ನಿಮ್ ಅಕೌಂಟಿಗೆ ಅಷ್ಟೊಂದ್ ಹಣ ಯಾರ್ ಹಾಕಿದ್ದು ಅಂತನೂ ನೀವು ತಲೆ
ಕೆರ್ಕೊಳ್ಳಿಲ್ಲವಾ?
-ಕೆರ್ಕೊಂಡೆ ಕಣ್ರೀ, ಆಮೇಲೆ, ಗೂಗಲ್ ಪೇ ಮಾಡಿದ್ದಕ್ಕೆ ಸಿಕ್ಕಿದ ಸ್ಕ್ರ್ಯಾಚ್ ಕಾರ್ಡ್‌ನ
ಕೆರೆದಿದ್ದಕ್ಕೆ ಬಂದಿರಬೇಕೇನೋ ಅಂದ್ಕೊಂಡು ಸುಮ್ನಾದೆ.
ಆಹಾಹಾ, ನೀವು ನಾಟ್ಯರಾಣಿ ಶಾಂತಲೆ ಬಿಟ್ಟು, ಅಭಿನಯ ಶಾರದೆ ಅಂತ ಸಿನಿಮಾ
ಮಾಡಬಹುದು. ಎಷ್ಟು ಚೆನ್ನಾಗಿ ಆಕ್ಟಿಂಗ್ ಮಾಡ್ತೀರೀ..
– ಹಾಂಗಂತ ಸಿನಿಮಾದ ಇರಿ ಅನ್ಬೇಡಿ. ಪೊಲಿಟಿಕ್ಸ್‌ಗೆ ಹೋಗೋಕ್ ಮುಂಚೆನೇ
ಹಗರಣದಲ್ಲಿ ಸಿಕ್ಕಾಕ್ಕೊಂಡಿದೀನಿ. ಸೋ ರಾಜಕಾರಣಿ ಆಗೋ ಎಲ್ಲಾ ಅರ್ಹತೆ ನಂಗಿದೆ

ಸಿನಿಗನ್ನಡ
ಯಶ್ ಅಭಿನಯದ ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಚಾಪ್ಟರ್ 2 ಚಿತ್ರದ ಟೀಸರ್ ಪ್ರೀ ಮೆಚ್ಯೂರ್ ಡೆಲಿವರಿ ಕಂಡಿದೆ. ಆದರೆ ಟೀಸರ್ ಮಾತ್ರ ಮೆಚ್ಯೂರ್ಡ್ ಆಗಿಯೇ ಇದೆ. ನಿರೀಕ್ಷೆಯಂತೆ ಚಿತ್ರದ ಟೀಸರ್ ಪವರ್ ಫುಲ್ ಆಗಿದೆ. ಈ ಹಿಂದೆ ಕೆಜಿಎ-
ಮೊದಲ ಭಾಗದಲ್ಲಿ ಪವರ್ ಫುಲ್ ಪೀಪಲ್ ಬಗ್ಗೆ ಪವರ್ ಫುಲ್ ಡೈಲಾಗ್ ಬರೆದಿದ್ದ ಪ್ರಶಾಂತ್ ನೀಲ್ ಈಗ ಚಾಪ್ಟರ್ 2ರಲ್ಲಿ ಅದನ್ನು ರೀ ಡಿಫೈನ್ ಮಾಡಿ ಪವರ್ ಫುಲ್ ಪೀಪಲ್ ಬಗ್ಗೆ ಹೊಸ ಭಾಷ್ಯ ಬರೆದಿದ್ದಾರೆ. ಪವರ್ ಫುಲ್ ಪೀಪಲ್ ಮೇಕ್ ಪ್ಲೇಸಸ್
ಪವರ್ ಫುಲ್ ಎಂದಿರುವ ಅವರು ಎಂದಿನಂತೆ ಮೇಕಿಂಗ್ ಮತ್ತು ಡೈಲಾಗ್‌ಗಳ  ಮಿಂಚಿದ್ಧಾರೆ. ಆದರೆ, ಈ ಟೀಸರ್ ತನ್ನ ಕಂಟೆಂಟ್‌ಗಿಂತ ಜಾಸ್ತಿ ಆನ್ ಲೈನ್‌ನಲ್ಲಿ ಸುದ್ದಿ ಮಾಡಿದ್ದು ಬೇರೆ ವಿಷಯಕ್ಕೆ. ಆಕ್ಚುವಲಿ, ನಟ ಯಶ್ ಅವರ ಜನ್ಮದಿನದ ಸಂದರ್ಭದಲ್ಲಿ ಈ ಚಿತ್ರದ ಟೀಸರ್ ಬಿಡುಗಡೆ ಆಗಬೇಕಿತ್ತು.

ಆದರೆ ಚಿತ್ರದ ಟೀಸರ್ ಕಿಡಿಗೇಡಿಗಳ ಕೈವಾಡದಿಂದ ಒಂದು ದಿನ ಮುನ್ನವೇ ಆನ್ ಲೈನ್‌ನಲ್ಲಿ ಜನ್ಮ ತಾಳಿತ್ತು. ಹೊಂಬಾಳೆ ಫಿಲ್ಮ್ಸ್ ಬ್ಯಾನರ್‌ಗೆ ಶಾಕ್ ಕೊಟ್ಟು ಆನ್ ಲೈನ್‌ನಲ್ಲಿ ಲೀಕ್ ಆಗಿತ್ತು ಕೆಜಿಎಫ್ ಟೀಸರ್. ಈ ಲೀಕ್ ಮೈಂಡೆಡ್ ಪೀಪಲ್ ಮಾಡಿದ ಅವಸರದಿಂದಾಗಿ ಸಿನಿ ಅಭಿಮಾನಿಗಳಿಗೆ ಟೀಸರ್ ದರ್ಶನ ನಿಗದಿತ ಸಮಯಕ್ಕೆ ಮುನ್ನವೇ ಆಗಿತ್ತು. ಇದರ ಬಗ್ಗೆ ಈಗಾಗಲೇ ಆನ್ ಲೈನ್ ಸಾಕಷ್ಟು ಚರ್ಚೆ ನಡೆಯುತ್ತಿದೆ. ಅಭಿಮಾನಿಗಳಂತೂ ತೀರಾ ಇಡೀ ಚಿತ್ರವೇ ಲೀಕ್ ಆಗಿದೆಯೇನೋ ಎನ್ನುವಷ್ಟರ ಮಟ್ಟಿಗೆ ತಮ್ಮ ಸಿಟ್ಟು ಪ್ರದರ್ಶನ ಮಾಡುತ್ತಿದ್ದರು.

ಯಶ್ ಕೂಡ ಲೀಕ್ ಮಾಡಿದವರಿಗೆ ಅದೇನು ಸಂತೋಷ ಸಿಗುತ್ತೋ ಗೊತ್ತಿಲ್ಲ, ಅವರಿಗೆ ಒಳ್ಳೆಯದಾಗಲಿ ಅಂತ ಕಾಮ್ ಆಗಿಯೇ ತಮ್ಮ ಅಸಮಾಧಾನ ತೋಡಿಕೊಂಡಿದ್ದರು. ಆದರೆ, ಲೀಕ್ ಆದರೂ ವೀಕ್ ಅಲ್ಲ ಎಂಬುದನ್ನು ಟೀಸರ್ ಸಾಬೀತು ಪಡಿಸಿತ್ತು. ಇತ್ತೀಚೆಗೆ ಮದಗಜ ಚಿತ್ರದ ಟೀಸರ್ ಬಿಡುಗಡೆ ಸಂದರ್ಭದಲ್ಲಿ, ಚಿತ್ರದ ಟೀಸರ್ ಬಿಡುಗಡೆಗೆ ಇನ್ನು ಕೆಲವೇ ದಿನಗಳು ಬಾಕಿ,
ಕೌಂಟ್ ಡೌನ್ ಶುರು, 3 ದಿನ ಬಾಕಿ, 2 ದಿನ, 1 ದಿನ, 24 ಗಂಟೆ, 12 ಗಂಟೆ , 8 ಗಂಟೆ ಅಂತ ಇನ್ನೊಂದೇ ಗಂಟೆ ಅಂತೆ ಅಸಂಬದ್ಧ ವಾಗಿ ಪ್ರಚಾರ ಮಾಡಿ ಅನಗತ್ಯ ಪ್ರಚಾರದಲ್ಲಿ ತೊಡಗಿಕೊಂಡಿದ್ದನ್ನು ನೋಡಿದವರಿಗೆ ಇದೊಂಥರಾ ಒಳ್ಳೆಯದೇ ಆಯಿತು ಎನಿಸಿದ್ರೂ ತಪ್ಪಿಲ್ಲ.

ಯಾಕಂದ್ರೆ ಕೆಜಿಎಫ್ ಚಿತ್ರ ತಂಡ ಕೂಡಾ ಯೂಟ್ಯೂಬ್‌ನಲ್ಲಿ ಟೀಸರ್ ಬಿಡುಗಡೆಗೆ ಇನ್ನು 15 ಗಂಟೆಗಳು ಬಾಕಿ ಎಂದು ವರಾತ ಶುರು ಹಚ್ಚಿಕೊಂಡಿತ್ತು. ಹಾಗಾಗಿ, ಅದನ್ನು ನೋಡಿ ಗಾಬರಿಯಾಗಿದ್ದ ಸಿನಿಕರಿಗೆ ಈ ಟೀಸರ್ ಲೀಕ್ ಅಸಮಾಧಾನವನ್ನೇನೂ ಮಾಡಿಲ್ಲ ಬಿಡಿ.

ನೆಟ್ ಪಿಕ್ಸ್
ಇತ್ತೀಚಿಗಷ್ಟೇ ಮದುವೆಯ 10ನೇ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದ ಖೇಮು ಖೇಮು ದಂಪತಿಗಳ ಪಕ್ಕದ ಮನೆಗೆ ಹೊಸದಾಗಿ ಮದುವೆ ಆದ ಜೋಡಿ ಬಾಡಿಗೆಗೆ ಬಂದಿದ್ದರು. ಅವ್ರು ಯಾವಾಗ್ಲೂ ರೊಮ್ಯಾಂಟಿಕ್ ಆಗಿ ಇರ್ತಾ ಇದ್ದರು. ಖೇಮುಶ್ರೀ ಯಾವಾಗ್ಲೂ ಅವರನ್ನ ನೋಡಿ ನನ್ನ ಗಂಡ ಯಾಕೆ ಇಷ್ಟು ರೊಮ್ಯಾಂಟಿಕ್ ಆಗಿ ಇರಲ್ಲ ಅಂತ ಬೇಜಾರು ಮಾಡ್ಕೋತಾ ಇದ್ಲು. ಖೇಮುಶ್ರೀ ಆ ಪಕ್ಕದ ಮನೆ ಹುಡುಗಿ ಗಂಡನ್ನ ಹೆಂಗೆ ರೊಮ್ಯಾಂಟಿಕ್ ಮೂಡಿಗೆ ತರ್ತಾಳೆ ಅಂತ ಯೋಚನೆ ಮಾಡ್ತಾ ಇದ್ಲು. ಒಂದಿನ ಇಬ್ಬರೂ ಮಾತಾಡೋದನ್ನ ಕದ್ದು ಕೇಳಿಸಿಕೊಳ್ಳಬೇಕು ಅಂತ ಡಿಸೈಡ್ ಮಾಡಿ ಆಕೆಯ ಗಂಡ ಆಫೀಸಿನಿಂದ ಬಂದ ಕೂಡಲೇ ಅವರು ಏನು ಮಾತಾಡ್ತಾರೆ ಅಂತ ಇಣುಕಿ ನೋಡಿದ್ಲು.

ಪಕ್ಕದ ಮನೆಯ ಗಂಡ ಬಂದ ಕೂಡಲೇ ಹೆಂಡತಿ ಬೆಡ್ ರೂಮಿಗೆ ಹೋದಳು. ಗಂಡ ೨ ನಿಮಿಷ ಬಿಟ್ಟು ರೂಮಿಗೆ ಹೋದ. ಹೆಂಡತಿಯನ್ನು ನೋಡಿ, ಡಿಯರ್ ನಾನು ಬಂದ ಕೂಡಲೇ ನಿನ್ನನ್ನ ಹುಟ್ಟುಡುಗೆಯಲ್ಲಿ ನೋಡಿದ್ರೆ ನಂಗೆ ಫುಲ್ ರೊಮ್ಯಾಂಟಿಕ್ ಮೂಡ್ ಬರುತ್ತೆ ಅಂತ ಶುರು ಹಚ್ಚಿಕೊಂಡ.

ಖೇಮುಶ್ರೀ ಇದೇ ಐಡಿಯಾ ಕಾಪಿ ಮಾಡೋಣ ಅಂತ ಡಿಸೈಡ್ ಮಾಡಿದ್ಲು. ಖೇಮು ಬಂದ ತಕ್ಷಣ ರೂಮಿಗೆ ಹೋಗಿ ಬಟ್ಟೆ ಕಳಚಿದಳು. ಖೇಮು ಬಂದು ಹೆಂಡತಿಯನ್ನು ನೋಡಿದ. ಆದರೆ ಅವನ ಮುಖದಲ್ಲಿ ಯಾವ ಭಾವನೆಯೂ ಕಾಣಲಿಲ್ಲ.
ಖೇಮು ಯಾಕ್ರೀ, ನನ್ನ ಹುಟ್ಟುಡುಗೆ ನಿಮಗೆ ಇಷ್ಟ ಅಗಲಿಲ್ವಾ ಅಂದ್ಲು. ಅದಕ್ಕೆ ಖೇಮು ಹೇಳಿದ ‘ಇಷ್ಟ ಆಯ್ತು, ಆದ್ರೆ ಐರನ್ ಮಾಡಿದ್ದಿದ್ರೆ ಚೆನ್ನಾಗಿರ್ತಿತ್ತು’.

ಲೈನ್ ಮ್ಯಾನ್
-ಸ್ಬುಕ್‌ನಲ್ಲಿ ಮಂಡಿಸುವ ಸಿದ್ಧಾಂತ
–ಸಿಸ್ಟಮ್‌
ಕೆಜಿಎಫ್ ಟೀಸರ್ ಅನ್ನು ಕದ್ದು ಬಿಡುಗಡೆ ಮಾಡಿದವರು
-ಲೀಕ್ ಮೈಂಡೆಡ್ ಪೀಪಲ್
ಈ ಹಿಂದೆ ಇಂದ್ರಜಿತ್ ಲಂಕೇಶ್ ಅವರ ಶಕೀಲಾ ಸಿನಿಮಾ ಕೂಡ ಆನ್ ಲೈನ್‌ನಲ್ಲಿ ಲೀಕ್
ಆಗಿತ್ತು
-ಅದನ್ನ ಲೀಕ್ ಆಗಿತ್ತು ಅನ್ಬೇಡ್ರಪ್ಪಾ, ಮೊದಲೇ ಶಕೀಲಾ ಸಿನಿಮಾ, ಡಬಲ್ ಮೀನಿಂಗ್ ಆಗುತ್ತೆ
ಕೆಜಿಎಫ್‌ 2 ಟೀಸರ್‌ನ ಒಂದಷ್ಟು ಮಂದಿ ಲೈಕ್ ಮಾಡಿ, ಆಮೇಲೆ ಅನ್ಲೆ ಕ್ ಮಾಡಿದ್ದಾರೆ

-ಹಾಗಂತ ಅನ್ಲೆ ಕ್ ಚಾಪ್ಟರ್ 1, ಚಾಪ್ಟರ್ 2  ಅಂತ ಹೇಳೋಕಾಗಲ್ಲ
ಕೆಜಿಎಫ್‌ ಸಿನಿಮಾಗೆ ತಂತ್ರಜ್ಞರು ಮಣ್ಣು ಹೊತ್ತಿರೋದು ಟೀಸರ್‌ನಲ್ಲಿ ಗೊತ್ತಾಗುತ್ತೆ
-ಹೌದು, ತುಂಬಾ ಮಣ್ಣು ಹೊತ್ತಿದ್ದಾರೆ, ಅದಕ್ಕೇ, ಟೀಸರ್ ತುಂಬಾ ಬರೀ ಧೂಳು
ಪ್ರಶಾಂತ್ ನೀಲ್‌ಗೆ ಸಲಾರ್ ಸಿನಿಮಾ ಸಿಕ್ಕಿದ್ದು ಹೇಗೆ?
-ಕೋಲಾರ್ ಸಿನಿಮಾದ ಸಕ್ಸಸ್ ನೋಡಿ
ಕೆಜಿಎಫ್ ಸಿನಿಮಾದಲ್ಲಿ ಯಾಕೆ ಅಷ್ಟೊಂದು ಧೂಳು
-ಯಾಕಂದ್ರೆ ಶೂಟಿಂಗ್ ಟೈಮಲ್ಲಿ ನಿರ್ದೇಶಕರು ಫೀಲ್ಡ ಕ್ಲಿಯರ್ ಮಾಡೋಕೆ ಹೇಳಿಲ್ಲ.
ಕೆಜಿಎಫ್ ಸಿನಿಮಾ ಸಕ್ಸಸ್ ಆಯ್ತು ಅನ್ನೋದನ್ನ ನಿರ್ಮಾಪಕರು ಹೆಂಗ್ ಹೇಳ್ತಾರೆ?
-ನಮ್ ಸಿನಿಮಾ ಧೂಳೆಬ್ಬಿಸಿಬಿಡ್ತು
ಪ್ರಕಾಶ್ ರೈ ಇದ್ರೆ ನಾವು ಸಿನಿಮಾ ನೋಡಲ್ಲ ಅಂದರೂ ಟೀಸರ್‌ನ ರೈ ಡೈಲಾಗ್
ತೋರಿಸಿದ ಪ್ರಶಾಂತ್
– ಅದರ ಅರ್ಥ, ಬೆದರಿಕೆಗೆ ಪ್ರಶಾಂತ್ ‘ನೀಲ್ ಡೌನ್’ ಮಾಡ್ಲಿಲ್ಲ.