Friday, 13th December 2024

ವಿಚಾರ ಕ್ರಾಂತಿಯ ಕವಿಗಿಂದು ಜನುಮದಿನ

ಸ್ಮರಣೆ

ಗುರುರಾಜ್ ಎಸ್‌ ದಾವಣಗೆರೆ

ನಾನು ಅವಧೂತನಾಗಿ ಹೋಗುವುದಿಲ್ಲ, ಕನ್ನಡವು ತನ್ನ ಸ್ಥಾನಮಾನವನ್ನು ಆಧಿಕೃತವಾಗಿ ಪಡೆಯುವ ತನಕ, ತನ್ನ ಪ್ರಾಣರುವ ತನಕ ಕನ್ನಡಕ್ಕಾಗಿ ದುಡಿಯುವುದು, ಕನ್ನಡಕ್ಕಾಗಿ ದುಡಿಯಲು ವ್ಯಕ್ತಿಗಳನ್ನು ಪ್ರಚೋದಿಸುವುದು ನನ್ನ ಕರ್ತವ್ಯ. ಅದಕ್ಕಾಗಿ ಭಗವಂತನಲ್ಲಿ ಮೊರೆಯಿಡುತ್ತೇನೆ.

ನನ್ನೆಲ್ಲ ತಪಶಕ್ತಿಯನ್ನು ಅಥವಾ ಪ್ರಾರ್ಥನಾ ಶಕ್ತಿಯನ್ನು ಕನ್ನಡದ ಸೇವೆಗಾಗಿ ಮೀಸಲಿಡುತ್ತೇನೆ’. ಕನ್ನಡ ಭಾಷೆಯ ನೆಲೆ – ಬೆಲೆಗಳ ಬಗ್ಗೆ ಅತೀವ ಕಾಳಜಿಯಿಂದ ದುಡಿಯುತ್ತಿದ್ದ ರಸಖುಷಿ ಕುವೆಂಪು ಹೇಳಿದ ಮಾತುಗಳಿವು. ಮಲೆನಾಡಿನ ದಟ್ಟ ಅರಣ್ಯಗಳ, ಪರ್ವತ ಶ್ರೇಣಿಗಳ ಸೀಳು ಹಾದಿಯಿಂದ ನಡಿಗೆ ಪ್ರಾರಂಭಿಸಿದ ಕುವೆಂಪು, ನಡೆದ ಹಾದಿಯನ್ನು ಹೆದ್ದಾರಿಯಾಗಿಸಿದ್ದೇ ಅದ್ಭುತ.

ಅರಿವು ಮೂಡುವ ಮುನ್ನವೇ ತಾಯ್ತಂದೆಯರ ಸಹವಾಸದಿಂದ ವಂಚಿತರಾದ ಕುವೆಂಪು, ಹಕ್ಕಿಯ ಹಾಡಿಗೆ ದನಿಗೂಡಿಸಿ, ದಟ್ಟ ಕಾಡಿನ ಹಳ್ಳ – ಹೊಳೆಗಳಲ್ಲಿ ,ಮಿಂದು, ಗಿರಿ – ಕಂದರಗಳ ಮೌನಕ್ಕೆ ಮನಸೋತು ಅವುಗಳ ಆಳದ ಗೂಢವನ್ನು ಗ್ರಹಿಸುತ್ತಲೇ ಬೆಳೆದು ನಿಜಕ್ಕೂ ಪ್ರಕೃತಿಯ ಸಹಜ ಶಿಶುನಂತಾದರು. ಪ್ರಕೃತಿಯ ಸಜೀವ ಒಡನಾಟದ ಒಳ ಹೊರಗುಗಳನ್ನು ಆರಾಧನೆಯನ್ನಾ ಗಿಸಿಕೊಂಡ ಕುವೆಂಪು ತಮ್ಮ ಕೃತಿರಚನೆಯ ಎಲ್ಲ ಹಂತಗಳಲ್ಲಿ ಅದನ್ನು ಸಮರ್ಥವಾಗಿ ಹಿಡಿದಿಡುತ್ತ ನಿಸರ್ಗದ ಮಡಿಲ ಮಗುವಾಗಿ ಹಾಡಿದ ಕವನಗಳು ಕೋಗಿಲೆಯ ಗಾನದ ಇಂಪನ್ನು ಮೈಗೂಡಿಸಿಕೊಂಡವು.

ಹೆಚ್ಚಿನ ವಿದ್ಯಾಭ್ಯಾಸಕ್ಕೆಂದು ಮೈಸೂರಿಗೆ ಬಂದು ರಾಮಕೃಷ್ಣಾಶ್ರಮದ ಅಧ್ಯಾತ್ಮಿಕ ಪರಿಸರದಲ್ಲಿ ಒಂದಾಗಿ ಹೋಗಿ, ಸಾಹಿತ್ಯಕ್ಕೆ ಅಂಟಿಕೊಂಡೇ ಬೆಳೆಯತೊಡಗಿದರು. ಅಂದು ಇಂಗ್ಲಿಷ್ ಭಾಷೆ ಮತ್ತು ಸಾತ್ಯ ತೆರೆದು ತೋರಿಸಿದ ಜಗತ್ತು ಮಾತ್ರ ನಿಜವೆಂದು ನಂಬಿ ಅದೇ ಭಾಷೆಯಲ್ಲಿ ಪದ್ಯ ಬರೆದು ಆಂಗ್ಲ ಕಯೊಬ್ಬರಿಗೆ ತೋರಿಸಿ, ಮೂದಲಿಕೆಗೊಳಿಗಾಗಿ ಮರುಕ್ಷಣವೇ ತಳೆದ ನಿರ್ಧಾರ ಕನ್ನಡ ಸಾಹಿತ್ಯ ಸೌಧಕ್ಕೆ ಸತ್ವಯುತ ತಳಪಾಯ ಒದಗಿಸಬಲ್ಲವೆಂದು ಯಾರೂ ಊಸಿರಲಿಲ್ಲ.

ಆಯಾ ಕಾಲದ ಕರೆ ಮತ್ತು ಸ್ಥಿತ್ಯಂತರಗಳ ಹಿನ್ನೆಲೆಯಲ್ಲಿ ಪಟುತ್ವಯುತವಾಗಿ ಬರೆಯಲಾರಂಭಿಸಿದ ಕುವೆಂಪು ಕತೆ, ಕವನ,
ನಾಟಕ, ಮಹಾಕಾವ್ಯ, ಮಕ್ಕಳ ಸಾಹಿತ್ಯ ಆತ್ಮ ಕಥನ…ಇತ್ಯಾದಿ ಸಾತ್ಯದ ಎಲ್ಲ ಪ್ರಕಾರಗಳಲ್ಲಿ ದುಡಿಯುತ್ತ ಅದರಲ್ಲಿ ಆಪಾರ ಯಶಸ್ಸನ್ನೂ ಗಳಿಸಿ ಕನ್ನಡ ಭಾಷೆಗೆ ಪ್ರಪ್ರಥಮ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟರು.

ಸಮಕಾಲೀನ ಸಮಾಜದಲ್ಲಿ ನೆಲೆಗೊಂಡಿದ್ದ ಬ್ರಾಹ್ಮಣ ಮೌಲ್ಯಗಳು, ಗೊಡ್ಡು ಸಂಪ್ರದಾಯಗಳು, ಶ್ರೇಣೀಕೃತ ಜಾತಿ ವ್ಯವಸ್ಥೆ, ಕಂದಾಚಾರಗಳನ್ನು ಕಂಡು ಕುಪಿತರಾದ ಪುಟ್ಟಪ್ಪ ಶ್ರೀಸಾಮಾನ್ಯನ ನೋವು ಅಸಹಾಯಕತೆಗಳನ್ನು ಕೃತಿಗಳಲ್ಲಿ ದಟ್ಟವಾಗಿ ಬಿಂಬಿಸುತ್ತಾ, ಅಸಮಾನ ವ್ಯತ್ಯಾಸಗಳ ವಿರುದ್ಧ ಹೋರಾಡುವ ಶಕ್ತಿಯನ್ನು ತುಂಬಿದ ವೈಚಾರಿಕತೆಗೆ ಮಹತ್ವ ಕೊಟ್ಟು ಕ್ರಾಂತಿಕಾರಿ ವಿಚಾರಗಳನ್ನು ಪ್ರತಿಪಾದಿಸಿ ಆಧುನಿಕ ಕನ್ನಡ ಸಾಹಿತ್ಯದ ಮೊದಲ ಬಂಡಾಯ ಧ್ವನಿಯಾದದ್ದಲ್ಲದೆ, ಅಂದಿನ ಸಮಾಜದ ಆಧಾರಸ್ತಂಭಗಳಂತೆ ಮೆರೆಯುತ್ತಿದ್ದ ಬ್ರಾಹ್ಮಣರ ವಿರೋಧ ಕಟ್ಟಿಕೊಂಡರು.

ಬಾಲ್ಯದಲ್ಲಿಯೇ ಮೈಸೂರಿನ ರಾಮಕೃಷ್ಣಾಶ್ರಮದಲ್ಲಿ ಬೆಳೆದ ಪುಟ್ಟಪ್ಪನವರಿಗೆ ಜೀವನದ ಅಂತಿಮ ಸತ್ಯದ ಬಗ್ಗೆ ಸ್ಪಷ್ಟವಾದ ತಿಳುವಳಿಕೆ ಮತ್ತು ಬದುಕಿನ ಬಗ್ಗೆ ತಮ್ಮದೇ ಆದ ನಿಲುವುಗಳಿದ್ದವು. ಆತ್ಯಂತ ಶುದ್ಧ ವಾತಾವರಣದಲ್ಲಿ ರೂಪುಗೊಂಡಿದ್ದ ಕುವೆಂಪು ತಾವು ನಡೆದು ಬಂದ ಹಾದಿಯನ್ನು ಮರೆಯಲಿಲ್ಲ. ತಮ್ಮ ನೆಲದ ಮಲೆನಾಡಿಗರ ಬದುಕಿನ ಒಳತೋಟಿ ಆಚಾರ – ವಿಚಾರಗಳನ್ನು ತೀವ್ರವಾಗಿ ಅನುಭವಿಸಿ ಅದನ್ನು ಕೃತಿಗಳಲ್ಲಿ ಯಥಾವತ್ತಾಗಿ ಚಿತ್ರಿಸುವಲ್ಲಿ ಸಫಲರಾದರು.

ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ, ಕೊನೆಗೆ ವಿಶ್ವದ್ಯಾಲಯದ ಉಪ ಕುಲಪತಿಗಳಾಗಿ ವ್ಯವಹಾರಿಕ ಬದುಕಿನ ಔನ್ನತ್ಯಗಳನ್ನು
ಪಡೆಯುತ್ತಲೇ ಹೋದರು. ವಿವಿಧ ಅಕಾಡೆಮಿಗಳ ಪುರಸ್ಕಾರ, ಜ್ಞಾನಪೀಠ ಪ್ರಶಸ್ತಿ, ಪಂಪ ಪ್ರಶಸ್ತಿ, ರಾಷ್ಟ್ರಕವಿ ಬಿರುದು, ಕರ್ನಾಟಕ ರತ್ನ ಪ್ರಶಸ್ತಿ, ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷ ಪದವಿ ಪಡೆದ ಕುವೆಂಪು ಕೀರ್ತಿಯನ್ನು ‘ಶನಿ’ ಎಂದು ಕರೆದು ತೊಲ ಗಾಚೆ ಎಂದು ಗದರಿದರು. ಪರಮಹಂಸ, ವಿವೇಕಾನಂದ, ಮಿಲ್ಟನ್, ಪಂಪ, ಶೇಕ್ಸ್‌ಪಿಯರ್, ಭವಭೂತಿ, ಅಲ್ಲಮ… ಎಲ್ಲರ ಜೀವನ ದರ್ಶನಗಳನ್ನು ಬದುಕಿನ ನೆಲೆಯನ್ನಾಗಿಸಿಕೊಂಡ ಕುವೆಂಪು ಕಣ್ಣೆದುರಿಗೇ ಮನುಷ್ಯತ್ವದ ಸುಮ ಕಮರಿ ಹೋಗುವು ದನ್ನು ಸಹಿಸುತ್ತಿರಲಿಲ್ಲ.

ಪರಂಪರೆಯ ದೋಷಗಳನ್ನು ನಿಷ್ಟೂರವಾಗಿ ಖಂಡಿಸುತ್ತಿದ್ದ ಕುವೆಂಪು ಯಾವುದನ್ನೂ ಸುಲಭವಾಗಿ ಒಪ್ಪುತ್ತಿರಲಿಲ್ಲ.
ಪುರೋಹಿತ ವರ್ಗದವರು ಹುಟ್ಟು ಹಾಕಿದ ಭ್ರಷ್ಟ ಮೌಲ್ಯಗಳನ್ನು, ವಿನಾಶಕಾರೀ ಆಚಾರ ವಿಚಾರಗಳನ್ನು ಕಟುವಾಗಿ ಟೀಕಿಸಿ ಜಾಗೃತಿಯ ಕಹಳೆಯೂದಿ ವಿಚಾರ ಕ್ರಾಂತಿಗೆ ಆಹ್ವಾನ ನೀಡಿದರು.