Friday, 13th December 2024

ದುಡಿಯುವವನಿಗೆ ಸದಾ ಇದೆ ಘನತೆ ಮತ್ತು ಗೌರವ

ತನ್ನಿಮಿತ್ತ

ಬಸವರಾಜ ಎಂ.ಯರಗುಪ್ಪಿ

ಭಾರತದಲ್ಲಿ ೧೯೨೩ ನೇ ಇಸವಿಯ ಮೇ ೧ ರಂದು ಲೇಬರ್ ಕಿಸಾನ್ ಪಾರ್ಟಿ ಆಫ್ ಹಿಂದುಸ್ತಾನ್ ಸ್ಥಾಪನೆಗೊಂಡ ದಿನದಿಂದ ಕಾರ್ಮಿಕರ ದಿನಾಚರಣೆಯನ್ನು ಆಚರಣೆ ಮಾಡಲಾಗುತ್ತದೆ. ಆ ಸಮಯದಲ್ಲಿ ಇದನ್ನು ಮದ್ರಾಸ್ ಡೇ ಎಂದು ಕರೆಯ ಲಾಗುತ್ತಿತ್ತು. ೨೦ನೇ ಶತಮಾನದ ಎರಡನೆಯ ದಶಕದ ದ್ವಿತೀಯಾರ್ಧದಲ್ಲಿ-ಕಾರ್ಮಿಕ ಸಂಘ ಚಳವಳಿಯ ಪ್ರಭಾವ ಹೆಚ್ಚಿದಾಗಿನಿಂದ-ಇದರ ಆಚರಣೆ ಆರಂಭವಾಯಿತು.

ಅಂತಾರಾಷ್ಟ್ರೀಯ ಕಾರ್ಮಿಕ ದಿನದ ತನ್ನಿಮಿತ್ತ ಶ್ರಮಿಕ ವರ್ಗದ ಕೊಡುಗೆಯನ್ನು ಸ್ಮರಿಸೋಣ. ಮಾನವೀಯತೆಯನ್ನು ಉನ್ನತೀಕರಿಸಿ, ಶ್ರಮವಹಿಸಿ ದುಡಿಯುವ ಎಲ್ಲಾ ಕಾರ್ಮಿಕರಿಗೆ ಒಂದು ಘನತೆ ಇದೆ ಎಂದು ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಹೇಳಿದ ಮಾತು ಅಕ್ಷರಶಃ ಸತ್ಯ. ಮನುಷ್ಯ ತನ್ನ ಮಾನವೀಯತೆಯನ್ನು ಬಂಡವಾಳ ವಾಗಿಟ್ಟು ದುಡಿದರೆ ಜೀವನದಲ್ಲಿ ಯಾವುದೇ ಸೋಲು ಅವನನ್ನು ಹಿಂಬಾಲಿಸುವುದಿಲ್ಲ.

ದುಡಿಮೆಯೇ ದುಡ್ಡಿನ ತಾಯಿ-ಇದು ಒಂದು ಜನಪ್ರಿಯ ಗಾದೆ ಮಾತಾಗಿದ್ದು, ಗಾದೆಗಳು ವೇದಗಳಿಗೆ ಸಮ. ಗಾದೆಗಳು ಹಿರಿಯರ ಅನುಭವದ ನುಡಿಮುತ್ತು ಗಳಾಗಿವೆ. ಹೀಗಾಗಿ ದುಡಿಮೆ ಅಥವಾ ದೈಹಿಕ ಶ್ರಮ ಹಾಗೂ ಅದರ ಮಹತ್ವವೇನು ಎಂಬುದನ್ನು ತಿಳಿಸುತ್ತದೆ. ಪ್ರತಿಯೊಬ್ಬರೂ ಕಷ್ಟಪಟ್ಟು ದುಡಿದರೆ ಸುಖವಾದ ಜೀವನವನ್ನು ನಡೆಸಬಹುದು. ರೈತ ಕಷ್ಟಪಟ್ಟು ಹೊಲದಲ್ಲಿ, ತೋಟದಲ್ಲಿ ದುಡಿದರೆ ಉತ್ತಮವಾದ ಬೆಳೆಯನ್ನು ಬೆಳೆಯ ಬಹುದು. ಹಾಗೆಯೇ ವಿದ್ಯಾರ್ಥಿಗಳು ಕಷ್ಟಪಟ್ಟು ವ್ಯಾಸಂಗ ಮಾಡಿದರೆ ಉತ್ತಮವಾದ ಭವಿಷ್ಯವನ್ನು ಕಂಡುಕೊಳ್ಳಬಹುದು.

ಇದಕ್ಕೆ ಸಂಬಂಧಿಸಿದಂತೆ ಹನ್ನೆರಡನೆಯ ಶತಮಾನದಲ್ಲಿಯೇ ಶಿವಶರಣರು ಕಾಯಕದ ಮಹತ್ವವನ್ನು ಸಾರಿದರು. ಕಾಯಕ ಎಂದರೆ ಪ್ರತಿಯೊಬ್ಬ ವ್ಯಕ್ತಿಯು ಏನಾದರೊಂದು ದೈಹಿಕ ಶ್ರಮದ ಮೂಲಕ ಸಂಪಾದನೆ ಮಾಡಿ ಜೀವನ ನಡೆಸಬೇಕು. ಸೋಮಾರಿಯಾಗಿ ಕಾಲ ಕಳೆಯದೆ ಕಷ್ಟಪಟ್ಟು ದುಡಿದು ಬದುಕುವುದರಿಂದ ಹಣ ಸಂಪಾದನೆ ಸಾಧ್ಯ. ‘ಕೂತು ಉಣ್ಣುವವನಿಗೆ ಕುಡಿಕೆ ಹೊನ್ನೂ ಸಾಲದು’ ಎಂಬಂತೆ ಇರುವ ಆಸ್ತಿ ಕರಗಿದ ಮೇಲೆ ಕಷ್ಟಪಡಬೇಕಾಗುತ್ತದೆ. ಆದ್ದರಿಂದ ಕಷ್ಟಪಟ್ಟರೆ ಸುಖವಿದೆ ಎಂಬುದು ಈ ಗಾದೆಯ ಆಶಯವು, ಕೆಲಸ ಮಾಡುವ ಕಾರ್ಮಿಕರಿಗೆ ಅನ್ವಯಿಸುತ್ತದೆ.

ನಾವು ತಿಳಿದಿರುವಂತೆ, ಕಾರ್ಮಿಕರು ಸಮಾಜದ ಭಾಗವಾಗಿದ್ದು, ಅದರ ಮೇಲೆ ಎಲ್ಲಾ ಆರ್ಥಿಕ ಪ್ರಗತಿಯು ನಿಂತಿದೆ. ಈಗಿನ ಯಾಂತ್ರಿಕ ಯುಗದಲ್ಲೂ ದುಡಿಮೆಯ ಮಹತ್ವ ಕಡಿಮೆಯಾಗಿಲ್ಲ ಹಾಗಾಗಿ ಕಾರ್ಮಿಕರ ಕೊಡುಗೆಗೆ ಗೌರವ ಸಲ್ಲಿಸಲು ಮತ್ತು ಸಾಮಾಜಿಕ ಆರ್ಥಿಕ ಭದ್ರತೆ ಒದಗಿಸಲು ಪ್ರಪಂಚದಾದ್ಯಂತ ಹಲವಾರು ದೇಶಗಳಲ್ಲಿ ಪ್ರತಿ ವರ್ಷ ಮೇ ೧ ರಂದು ಅಂತಾ ರಾಷ್ಟ್ರೀಯ ಕಾರ್ಮಿಕ ದಿನ ಎಂದು ಆಚರಿಸಲಾಗುತ್ತದೆ.

ಈ ದಿನವನ್ನು ಕಾರ್ಮಿಕ ಸಮುದಾಯಗಳ ಕೊಡುಗೆಗೆ ಸ್ಪಂದಿಸುವ ಜೊತೆಗೆ ಇನ್ನಷ್ಟು ಉದ್ಯೋಗಾವಕಾಶ ಸೃಷ್ಟಿಸಲು, ಕೆಲಸದ ಪರಿಸ್ಥಿತಿಗಳನ್ನು ಸುಧಾರಿಸಲು, ಸಾಮಾಜಿಕ ರಕ್ಷಣೆಯನ್ನು ನೀಡಲು ಮತ್ತು ಕಾರ್ಮಿಕರ ಹಕ್ಕುಗಳನ್ನು ರಕ್ಷಿಸಲು ಸಹಾಯ ಮಾಡುವ ಉದ್ದೇಶದಿಂದಲೂ ಆಚರಣೆಯನ್ನು ಮಾಡಲಾಗುತ್ತದೆ.ಈ ದಿನದ ಹಿನ್ನೆಲೆಯನ್ನು ಗಮನಿಸಿ ನೋಡಿದಾಗ ಇದು ಒಂದು ಅದ್ಭುತ ಹೋರಾಟ ಫಲವಾಗಿ ಕಾರ್ಮಿಕ ದಿನಾಚರಣೆ ಜಾರಿಗೆ ಬಂದಿತು ಎಂದು ಹೇಳಬಹುದು.

ಈ ಹಿಂದೆ ಅಮೆರಿಕದ ಚಿಕಾಗೋ ನಗರದಲ್ಲಿ ಮೇ ೧, ೧೮೮೬ ರಲ್ಲಿ, ದಿನದ ೧೫ ಗಂಟೆಗಳ ಕೆಲಸದ ಸಮಯವನ್ನು ೮ ಗಂಟೆ ಗಳ ಅವಧಿಗೆ ತರಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟುಕೊಂಡು ಕಾರ್ಮಿಕರು ಸಹಸ್ರಾರು ಸಂಖ್ಯೆಯಲ್ಲಿ ಹೋರಾಟ ಮಾಡು ತ್ತಿದ್ದರು. ಈ ಹೋರಾಟವು ತೀವ್ರ ಸ್ವರೂಪ ಪಡೆದಿದ್ದರಿಂದ ಇದನ್ನು ಹತ್ತಿಕ್ಕುವುದಕ್ಕಾಗಿ ಮೇ ೪ ರಂದು ಪೊಲೀಸರು ಕಾರ್ಮಿಕರ ಮೇಲೆ ಗುಂಡಿನ ದಾಳಿ ನಡೆಸಿದರು. ಇದರ ಫಲವಾಗಿ ಅಂದರೆ ೧೯೧೬ ರಲ್ಲಿ ಅಮೆರಿಕ ಸರ್ಕಾರ ೮ ಗಂಟೆಗಳ ಕೆಲಸದ ಸಮಯವನ್ನು ಆದೇಶ ಮಾಡಿತು.

ಕಾರ್ಮಿಕ ಹೋರಾಟದ ಘಟನೆಯ ಸ್ವರೂಪ : ಈ ಘಟನೆಯ ಬಗ್ಗೆ ನಿಜವಾದ ಹೇಳಿಕೆ ಇಲ್ಲಿದೆ ನೋಡಿ… ‘ಎಲ್ಲಾ ಪಿಸ್ತೂಲ್ – ಷ್‌ಗಳು ರಸ್ತೆಯ ಮಧ್ಯಭಾಗದಿಂದ ಬಂದವು ಎಂದು ನಂಬಲರ್ಹ ಸಾಕ್ಷಿಗಳು ಸಾಕ್ಷ್ಯ ನೀಡಿದರು. ಆದರೆ, ಅಲ್ಲಿ ಪೊಲೀಸರು ನಿಂತಿದ್ದರು ಮತ್ತು ಜನಸಂದಣಿಯಿಂದ ಯಾವುದೂ ಇಲ್ಲ. ಇದಲ್ಲದೆ, ಆರಂಭಿಕ ವೃತ್ತಪತ್ರಿಕೆ ವರದಿಗಳು ನಾಗರಿಕರಿಂದ ಗುಂಡಿನ ದಾಳಿಯ ಬಗ್ಗೆ ಯಾವುದೇ ಉಲ್ಲೇಖವನ್ನು ಮಾಡಿಲ್ಲ. ಘಟನಾ ಸ್ಥಳದಲ್ಲಿದ್ದ ಟೆಲಿಗ್ರಾಫ್ ಕಂಬವು ಬುಲೆಟ್ ರಂಧ್ರ ಗಳಿಂದ ತುಂಬಿತ್ತು, ಎಲ್ಲವೂ ಪೊಲೀಸರ ದಿಕ್ಕಿನಿಂದ ಬಂದವು ಎಂದು ಈ ಹೋರಾಟದಲ್ಲಿ ಭಾಗವಹಿಸಿದ ಕಾರ್ಮಿಕರ ಹೇಳಿಕೆ.

ಭಾರತದಲ್ಲಿ ಮೇ ದಿನವೇ ಕಾರ್ಮಿಕ ದಿನ : ಭಾರತದಲ್ಲಿ ೧೯೨೩ ನೇ ಇಸವಿಯ ಮೇ ೧ ರಂದು ಲೇಬರ್ ಕಿಸಾನ್ ಪಾರ್ಟಿ ಆಫ್ ಹಿಂದುಸ್ತಾನ್ ಸ್ಥಾಪನೆಗೊಂಡ ದಿನದಿಂದ ಕಾರ್ಮಿಕರ ದಿನಾಚರಣೆಯನ್ನು ಆಚರಣೆ ಮಾಡಲಾಗುತ್ತದೆ. ಆ ಸಮಯದಲ್ಲಿ ಇದನ್ನು ಮದ್ರಾಸ್ ಡೇ ಎಂದು ಕರೆಯಲಾಗುತ್ತಿತ್ತು. ೨೦ನೇ ಶತಮಾನದ ಎರಡನೆಯ ದಶಕದ ದ್ವಿತೀಯಾರ್ಧದಲ್ಲಿ-ಕಾರ್ಮಿಕ ಸಂಘ ಚಳವಳಿಯ ಪ್ರಭಾವ ಹೆಚ್ಚಿದಾಗಿನಿಂದ-ಇದರ ಆಚರಣೆ ಆರಂಭವಾಯಿತು.

ಮೇ ದಿನಾಚರಣೆಯಲ್ಲಿ ಭಾಗವಹಿಸಿದ ಮೊಟ್ಟಮೊದಲಿನ ಭಾರತೀಯ ಕಾರ್ಮಿಕರು ಇಂಗ್ಲೆಂಡಿನಲ್ಲಿದ್ದ ಭಾ ರತೀಯ
ನಾವಿಕರು. ೧೯೨೫ ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ನೀಡಬೇಕೆಂಬ ಘೋಷಣೆಯನ್ನು ಒಳಗೊಂಡ ಪ್ರದರ್ಶನ ಚಿತ್ರಗಳನ್ನು
ಹಿಡಿದು ಮೆರವಣಿಗೆಯಲ್ಲಿ ಅವರು ಹೈಡ್ ಪಾರ್ಕಿನ ಮೇ ದಿನದ ಉತ್ಸವ ಸಭೆಗೆ ಹೋದರು. ಭಾರತದಲ್ಲಿ ೧೯೨೭ ರಿಂದೀಚೆಗೆ ಪ್ರತಿವರ್ಷವೂ ಕಾರ್ಮಿಕರು ಈ ದಿನವನ್ನಾಚರಿಸುತ್ತಿದ್ದಾರೆ. ಭಾರತದಲ್ಲಿ ಈ ಉತ್ಸವದಲ್ಲಿ ಭಾಗವಹಿಸುವವರು ಕಾರ್ಮಿಕ ಸಂಘಗಳವರು, ಸಮಾಜವಾದಿಗಳು ಮತ್ತು ಕೆಲವು ಬುದ್ಧಿಜೀವಿಗಳು ಮಾತ್ರ.

೧೯೨೭ರಲ್ಲಿ ಮುಂಬಯಿಯಲ್ಲಿ ನಡೆದ ಉತ್ಸದಲ್ಲಿ ಅನೇಕ ಕಾರ್ಮಿಕ ಮುಖಂಡರು ಭಾಗವಹಿಸಿದ್ದರು. ಅದೇ ವರ್ಷ ಕಲ್ಕತ್ತದಲ್ಲಿ ಬಂಗಾಳ ಪ್ರದೇಶ ಕಾರ್ಮಿಕ ಸಂಘ ಕಾಂಗ್ರೆಸ್ ಮೇ ದಿನವನ್ನಾಚರಿಸಿದಾಗ ಪೋಲೀಸರು ಅನೇಕ ನಿರ್ಬಂಧಕಾಜ್ಞೆಗಳನ್ನು ವಿಧಿಸಿದರೆಂದು ತಿಳಿದು ಬರುತ್ತದೆ. ೧೯೨೮ ರಿಂದ ೧೯೩೪ರವರೆಗೆ ಆ ಉತ್ಸವಾಚರಣೆಯ ದಿನ ದಂದು ದಿನಾಚರಣೆಯ ಕಾರ್ಮಿ ಕರ ಅನೇಕ ಮುಷ್ಕರಗಳು ನಡೆದವು. ಎರಡನೆಯ ಮಹಾಯುದ್ಧಾನಂತರ ಆ ದಿನವನ್ನು ಹೆಚ್ಚು ವ್ಯಾಪಕವಾಗಿ ಆಚರಿಸಲು ಪ್ರಾರಂಭವಾಯಿತು. ಕಾರ್ಮಿಕರೂ ಕಾರ್ಮಿಕ ಸಂಘಗಳೂ ಅಧಿಕ ಸಂಖ್ಯೆಯಲ್ಲಿ ಭಾಗವಹಿಸತೊಡಗಿದವು.

೧೯೬೯ರಲ್ಲಿ ಭಾರತ ರಾಷ್ಟ್ರೀಯ ಕಾರ್ಮಿಕ ಸಂಘಗಳ ಕಾಂಗ್ರೆಸ್ ಒಂದನ್ನು ಬಿಟ್ಟು ಉಳಿದೆಲ್ಲ ಕಾರ್ಮಿಕ ಸಂಘಗಳೂ ಒಟ್ಟಾಗಿ, ತಮ್ಮ ಹಕ್ಕುಗಳನ್ನು ಸಾಧಿಸಲು ಭಾರಿ ಮೆರವಣಿಗೆಯಲ್ಲಿ ಪಾರ್ಲಿಮೆಂಟ್ ಭವನದ ಬಳಿಗೆ ಮೆರವಣಿಗೆಯಲ್ಲಿ ಹೋಗಿ ಪ್ರದರ್ಶನ ನಡೆಸಿದವು.

ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳ ಉದಯದ ದಿನ: ೧೯೬೦ ರಲ್ಲಿ ಬಾಂಬೆ ರಾಜ್ಯವನ್ನು ವಿಭಜಿಸಿ ಮಹಾರಾಷ್ಟ್ರ ಮತ್ತು ಗುಜರಾತ್ ಎಂಬ ಎರಡು ರಾಜ್ಯಗಳನ್ನು ರಚಿಸಲು ಭಾರತದಲ್ಲಿ ದಿನದ ಮತ್ತೊಂದು ಮಹತ್ವವಿದೆ ಮತ್ತು ಅದರಂತೆ ಎರಡೂ ರಾಜ್ಯಗಳು ಈ ದಿನವನ್ನು ಆಚರಿಸುತ್ತವೆ.

ಕಾರ್ಮಿಕ ದಿನಾಚರಣೆಯ ಪ್ರಾಮುಖ್ಯತೆ : ಕೆಲಸದ ಸ್ಥಳದಲ್ಲಿ ಕಾರ್ಮಿಕರು ಕಠಿಣ ಪರಿಶ್ರಮ ಹಾಕುತ್ತಾರೆ. ಕೆಲಸದ ದಕ್ಷತೆ ಮತ್ತು ಭ ವಿಷ್ಯದ ಬೆಳವಣಿಗೆಗಳನ್ನು ಸುಧಾರಿಸಲು ಅವರು ಅದ್ಭುತವಾದ ಆಲೋಚನೆಗಳನ್ನು ಹೊಂದಿದ್ದಾರೆ. ಈ ದಿನವು ಅವರ ನಿರ್ವಹಣೆ ಮತ್ತು ಸಮಾಜದಿಂದ ಅವರ ನವೀನ ಆಲೋಚನೆಗಳನ್ನು ಕೇಳಲು, ಮೌಲ್ಯೀಕರಿಸಲು ಅವಕಾಶವನ್ನು ನೀಡುತ್ತದೆ. ಅವರು ಕೇವಲ ಕಾರ್ಮಿಕರ ಟ್ಯಾಗ್‌ನೊಂದಿಗೆ ಮುದ್ರೆಯೊತ್ತುವುದಿಲ್ಲ. ಆದರೆ ಭಾಗವಹಿಸುವಿಕೆಯಿಂದ ನಿರ್ವಹ ಣೆಯ ಭಾಗವಾಗುತ್ತಾರೆ. ನಿಜವಾದ ಕೆಲಸದ ವೇದಿಕೆಯಲ್ಲಿ ತಮ್ಮ ಅನುಭವವನ್ನು ಕಾಲಾನಂತರದಲ್ಲಿ ಅಭಿವೃದ್ಧಿ ಪಡಿಸುವ ಕಾರ್ಮಿ ಕರು ಅಥವಾ ಕಾರ್ಮಿಕರ ಕೌಶಲ್ಯಗಳನ್ನು ಗುರುತಿಸುವ ದಿನವಾಗಿದೆ.

ಅವರಿಗೆ ಉನ್ನತ ಔಪಚಾರಿಕ ಶಿಕ್ಷಣದ ಅಗತ್ಯವಿರುವುದಿಲ್ಲ. ಆದರೆ ತಮ್ಮ ಅನುಭವಗಳನ್ನು ಕೆಲಸದ ಅಭ್ಯಾ ಸಗಳಾಗಿ
ಔಪಚಾರಿಕಗೊಳಿಸುವಂತೆ ಈ ದಿನ ಕಾರ್ಮಿಕರನ್ನು ಪ್ರೇರೇಪಿಸುತ್ತದೆ ಎಂದು ಹೇಳಿದರೆ ತಪ್ಪಾಗಲಾರದು.

೨೦೨೩ರ ಅಂತಾರಾಷ್ಟ್ರೀಯ ಕಾರ್ಮಿಕ ದಿನಾಚರಣೆಯ ಥೀಮ್ ಏನು?: ಪ್ರತಿ ಬಾರಿಯೂ ವಿಶೇಷ ಥೀಮ್ ನೊಂದಿಗೆ ಈ ದಿನವನ್ನು ಆಚರಿಸಲಾಗುತ್ತದೆ. ಈ ಬಾರಿ ಬಾಲಕಾರ್ಮಿಕತೆಯನ್ನು ಕೊನೆಗೊಳಿಸಲು ಸಾರ್ವತ್ರಿಕ ಸಾಮಾಜಿಕ ರಕ್ಷಣೆ- ಇದು ೨೦೨೩ರ ವಿಶ್ವ ಕಾರ್ಮಿಕರ ದಿನದ ಥೀಮ್ ಆಗಿದೆ. ಒಟ್ಟಾರೆಯಾಗಿ ಈ ದಿನ ಕಾರ್ಮಿಕರನ್ನು ಪ್ರೋತ್ಸಾಹಿಸುವ ದಿನವಾಗಿದೆ. ಈ ದಿನವು ಕೇವಲ ಒಂದು ದಿನದ ಆಚರಣೆಗೆ ಮಾತ್ರವಲ್ಲ, ಗುರಿಗಳನ್ನು ಅತ್ಯುತ್ತಮವಾಗಿಸಲು ಮತ್ತು ಅಭ್ಯಾಸಗಳನ್ನು ಸುಧಾರಿಸಲು ಇಡೀ ವರ್ಷ ಅವರನ್ನು ಚೆನ್ನಾಗಿ ಪರಿಗಣಿಸುತ್ತದೆ ಎಂದು ನಮಗೆ ನೆನಪಿಸುತ್ತದೆ.

ರೈತರು, ಯೋಧರು, ಕಾರ್ಮಿಕರು ನಮ್ಮ ಪ್ರಾಣವಾಯು. ಇವರಿಲ್ಲದೆ ನಮ್ಮ ಬದುಕಿಲ್ಲ. ಮಾಲೀಕ ಕೇಂದ್ರಿತ ಆರ್ಥಿಕತೆ ಯಿಂದಾಗಿ ಕಾರ್ಮಿಕರ ಬದುಕು ಅವಸಾನದ ಹಾದಿಯಲ್ಲಿದೆ. ಕಾರ್ಮಿಕ ಕೇಂದ್ರಿತ ಆರ್ಥಿಕತೆ ಮಾತ್ರ ಅವರನ್ನು ಮತ್ತು ನಮ್ಮನ್ನು ಉಳಿಸಬಹುದು. ಆದ್ದರಿಂದ ನಿಮ್ಮೆಲ್ಲರಿಗೂ ವಿಶ್ವಕಾರ್ಮಿಕ ದಿನಾಚರಣೆಯ ಶುಭಾಶಯಗಳು.