Wednesday, 9th October 2024

ಸೆಳೆತಗಳ ಸಹವಾಸ ಜೀವನವೆಲ್ಲ ವನವಾಸ

ಪರಿಶ್ರಮ

ಪ್ರದೀಪ್‌ ಈಶ್ವರ್‌

parishramamd@gmail.com

ಕೆಲಸ ಇರಲ್ಲ ಬದುಕೋದೆ ಕಷ್ಟ ಆಗಿಬಿಡುತ್ತೆ. ಸ್ನೇಹಿತರು ಕೊಡಿಸೋ ಟೀ ಗೋಸ್ಕರ, ಸಿಕ್ಕಿದವರು ಯಾರೋ ಕೊಡಿಸುವ ಟಿಫನ್ ಗೋಸ್ಕರ ಬದುಕು ಕಳೆಯಬೇಕಾಗುತ್ತೆ. ಏನಂತೀರಾ ಸೆಳೆತಗಳ ಜತೆ ಸಹವಾಸ ಮಾಡ್ತೀರೋ ಇಲ್ಲ ಬದುಕೆ ವನವಾಸ ಮಾಡ್ತೀರೋ ತೀರ್ಮಾನ ನಿಮಗೆ ಬಿಟ್ಟಿದ್ದು.

ಸೆಳೆತಗಳ ಸಹವಾಸವೇ ಹಾಗೆ, ಮಾತು ಕೇಳದ ಮನಸ್ಸು. ಹಾದಿ ತಪ್ಪಿಸುವ ಪ್ರಾಯ. ಎಷ್ಟೇ ಪ್ರಯತ್ನ ಪಟ್ಟರೂ ನಿಗ್ರಹ ಸಿಗದ ಏಕಾಗ್ರತೆ ಏನೇ ಸಾಧಿಸಬೇಕೂ ಅಂತ ಎಷ್ಟೇ ಪಟ್ಟರೂ ಕಾಲೇಜ್‌ನ ಕಾರಿಡಾರ್‌ನಲ್ಲಿ, ಇಂಜಿನಿಯ ರಿಂಗ್‌ನ ಅಂಗಳದಲ್ಲಿ, ಮೆಡಿಕಲ್ ನ ಲ್ಯಾಬ್‌ಗಳಲ್ಲಿ, ಡಿಗ್ರಿಯ ಬಿಡುವಿನ ವೇಳೆಯಲ್ಲಿ ಒಂದು ಚಿಕ್ಕ ಮುಗುಳ್ನಗೆ ಬದುಕಿನ ದಿಕ್ಕನ್ನೇ ಬದಲಿಸಿಬಿಟ್ಟಿರುತ್ತೆ.

ಸಾಧಿಸಬೇಕೆಂಬ ಛಲ ಏನೋ ಅಚೀವ್ ಮಾಡಬೇಕು ಅನ್ನೋ ಗುರಿ ಎಷ್ಟೇ ಇದ್ದರೂ ಸಹ ಸೆಳೆತಗಳ ಸಹವಾ ಸಕ್ಕೆ ಸಿಗದಿರುವ ಜೀವಗಳು ಸಿಗುವುದು ತುಂಬಾ ಕಷ್ಟ. ಪಿಯುಸಿಯ ವೆಲ್ ಕಮ್ ನ, ಫೇರ್‌ವಲ್‌ನ ಸೆಳೆದ ಸೆಳೆತ, ಡಿಗ್ರಿಯ ವೆಲ್ ಕಮ್‌ನ, ಮತ್ತೆ ಕಾರ್ಯಕ್ರಮದಲ್ಲೂ, ಟ್ರಿಪ್ ಹೋದಾಗ್ಲೂ, ಕೈ ಬೀಸಿ ಕರೆದಂತಹ ಸೆಳೆತ, ಕೆಲಸಕ್ಕೆ ಸೇರಿದಾಗ ಊಟದ ಸಮಯದಲ್ಲಿ ಚಿಕ್ಕ ಪರಿಚಯವಾಗಿ ಇಳಿ ಸಂಜೆಯಲ್ಲಿ ಬಿಡದೆ ಕಾಡಿದೆ ಸೆಳೆತ, ಕೆಲಸ ಸಿಗದಿzಗ ನಿರುದ್ಯೋಗಿಗಳಾಗಿ ಅಲೆಯುವಾಗ ಅ ಪರಿಚಯವಾಗಿ ಧೈರ್ಯ ತುಂಬುವ ಅ ಜೀವದ ಸೆಳೆತ ಒಂದಾ, ಎರಡಾ, ಹೇಳಲು ಹೋದ್ರೆ ಪ್ರತಿಯೊಬ್ಬ ಯುವಕ – ಯುವತಿಯ ಕಥೆಯು ಮೊಗ್ಗಿನ ಮನಸ್ಸಿನ ಕಥೆ ಆಗುತ್ತೆ.

ಸ್ಪಷ್ಟವಾಗಿ ಗಮನಿಸಿದ್ರೆ ಪ್ರತಿಯೊಬ್ಬ ಯುವಕ – ಯುವತಿಯ ಕಥೆಯು ಸಹ ಸೂಪರ್ ಹಿಟ್ ಸಿನಿಮಾ ತೆಗೆಯು ವಂತಹ ಚಿತ್ರಕಥೆ ಇರುತ್ತೆ. ಅಂತಹ ವಿಚಿತ್ರ ವಿಲಕ್ಷಣವಾದ ಕಥೆಗಳು ಪ್ರತಿಯೊಬ್ಬ ಯುವಕ – ಯುವತಿ ಯ ಬಾಳಿನಲ್ಲೂ ಇರುತ್ತೆ. ವಕ-ಯುವತಿಯರೇ ಪ್ರಾಯದ ಸೆಳೆತಗಳು ಸಹಜ. ಸೆಳೆತದಿಂದ ದೂರ ಇರುವುದು ತುಂಬಾ ಕಷ್ಟ ಇಲ್ಲಪ್ಪ ಸೆಳೆತಗಳೇ ಗೊತ್ತಿಲ್ಲ ಅದು ಹೇಗಿರುತ್ತೆ, ಅಂತ ಮುಗ್ಧವಾಗಿ ಪ್ರಶ್ನೆ ಮಾಡುವ ಯುವತಿ. ಸೆಳೆತನ ಹೇ ನನಗೆ ಅವೆ ಆಗಲ್ಲ ಅಂತ ಏನೋ ದೊಡ್ಡ ರೋಲ್ ಮಾಡಲ್ ತರಹ ಮಾತನಾಡುವ ಹುಡುಗ. ಇವರಿಬ್ಬರನ್ನೂ ಖಂಡಿತವಾಗ್ಲೂ ನಂಬಬಾರದು.

ಯಾಕೆಂದರೆ ಇವರೇ ತಮ್ಮ ಜೀವನದಲ್ಲಿ ಜಾಸ್ತಿ ಸೆಳೆತದ ತೀವ್ರಕ್ಕೆ ಒಳಪಟ್ಟಿರುತ್ತಾರೆ. ಸೆಳೆತದ ತೀವ್ರತೆ ಹೆಚ್ಚಾದಾಗ ಏಕಾಗ್ರತೆ ದಾರಿ ತಪ್ಪುತ್ತೆ. ಶ್ರದ್ಧೆ ಹೋಗುತ್ತೆ. ಸಾಧಿಸಬೇಕು ಅನ್ನೋ ಛಲ ಸತ್ತೇ ಹೋಗಿಬಿಡುತ್ತೆ. ನಾಲ್ಕು ಜನ ಮೆಚ್ಚಬೇಕು ಅಂತ ಬಯಸುವ ಪ್ರತಿ ಜೀವವು, ನಾಲ್ಕು ಜನ ಏನು ಅಂದು ಕೊಂಡರೆ ನನಗೇನು, ಅವಳೇ ಬೇಕು ಅಥವಾ ಅವನೇ ಬೇಕು, ಎಂಬ ತೀರ್ಮಾನಕ್ಕೆ ಬಂದುಬಿಡ್ತಾರೆ.

ಒಳ್ಳೆಯವನು ಅಥವಾ ಒಳ್ಳೆಯವಳನ್ನು ಕೊಳ್ಳ ಬೇಕಾಗಿರೋ ಜನ ಯಾರು ಏನು ಅಂದುಕೊಂಡರೆ ನನಗೇನು, ನನಗೆ ಅವನು ಇದ್ರೆ ಸಾಕು ಅಥವಾ ಅವಳು ಇದ್ರೆ ಸಾಕು ಎಂಬ ತೀರ್ಮಾನಕ್ಕೆ ಬಂದುಬಿಡ್ತಾರೆ. ಒಂದಂತು ಸತ್ಯ, ಸೆಳೆತ ನಿಮ್ಮನ್ನ ಸೆಳೆದಾಗ, ಬಿಡದೆ ಕಾಡಿದಾಗ, ನಿದ್ದೆ ಕೆಡಿಸಿದಾಗ, ಅನುಕ್ಷಣ ನೆನಪಾಗುವಂತೆ ಮಾಡಿದಾಗ ಒಂದು ಯೋಚಿಸಿ. ಖಂಡಿತವಾಗ್ಲೂ ಸೆಳೆತಗಳು ಪಾಸಿಟಿವ್ ಆಗಿ ಇದ್ದರೆ ಅದು ನಿಮ್ಮನ್ನ ಐomಜ್ಟಿಛಿ ಮಾಡಿದರೆ, ಗುರಿಯ ಕಡೆ ಕೊಂಡೊಯ್ದರೆ.

ಖಂಡಿತವಾಗ್ಲೂ ಅಂತಹ ಸೆಳೆತಗಳು ನಿಮ್ಮ ಬದುಕಿನಲ್ಲಿ ಇರಲಿ. ಸಪೋಸ್ ಸೆಳೆತಗಳು ನಿಮ್ಮ ಏಕಾಗ್ರತೆಯನ್ನು ಕೆಡಿಸಿ, ನಿಮ್ಮ ಬದುಕನ್ನ ಬೀದಿಗೆ ತಂದು ನಿಲ್ಲಿಸಿ, ಅತ್ತ ಗೆಲ್ಲೋಕೂ ಆಗದೇ ಸೋಲೋದಕ್ಕೂ ಆಗದೆ ನಡು ದಾರಿಯಲ್ಲಿ ನಿಲ್ಲಿಸಿ ಬಿಟ್ರೆ ಅಂತಹ ಸೆಳೆತಗಳ ಬಗ್ಗೆ ಎಚ್ಚರಿಕೆಯಿಂದ ಇರಿ.
ಪಿಯುಸಿ ಕೆಂಗಡಿಸಿದ ಗೆಳತಿ ಗೆಳೆಯನ ಸೆಳೆತಗಳ ಬಗ್ಗೆ ಸ್ವಲ್ಪ ಎಚ್ಚರವಿರಲಿ. ಡಿಗ್ರಿಯಲ್ಲಿ ಮೂರು ವರ್ಷ, ಇಂಜಿನಿಯರಿಂಗ್‌ನಲ್ಲಿ ನಾಲ್ಕು ವರ್ಷ
ಅಥವಾ ಮೆಡಿಕಲ್‌ನಲ್ಲಿ ನಾಲ್ಕೂವರೆ ವರ್ಷ ಮುಗಿಯುವದರೊಳಗೆ ಸೆಮಿಸ್ಟರ್ ಪಾಸ್ ಆಗದೆ ಬ್ಯಾಕ್ ಲಾಗ್ ಮೇಲೆ ಬ್ಯಾಕ್ ಲಾಗ್ ಇಟ್ಕೊಂಡು ಲೈಫ್ ಎಲ್ಲ ಲ್ಯಾಗ್ ಆಗೋ ಹಾಗೆ ನೋಡಿಕೊಳ್ಳುವ ಸೆಳೆತಗಳಿಂದ ಸ್ವಲ್ಪ ದೂರವಿರಿ.

ಸೆಳೆತ ಬೇರೆ, ಅಟ್ರಾಕ್ಷನ್ ಬೇರೆ, infatuation ಬೇರೆ, ಪ್ರೀತಿ ಬೇರೆ, ನಿಮ್ಮದು ಯಾವುದು ಅಂತ ಪ ಅರ್ಥ ಮಾಡಿಕೊಳ್ಳಿ.ನಿಮ್ಮ ಪ್ರೀತಿ ಪರಿಶುದ್ಧ ವಾಗಿದ್ರೆ, ನಿಮ್ಮ ಪ್ರೀತಿಯ ನೈವೇದ್ಯದಲ್ಲಿ ಸ್ಪಷ್ಟತೆ ಇದ್ರೆ, ನೀವು ಆರಾಧಿಸುವ ಜೀವವನ್ನು ಪ್ರೀತಿಸುವುದು ಸತ್ಯವೇ ಆದ್ರೆ, ಮೊದಲು ಯಶಸ್ಸಿನ ಕಡೆ ಗಮನ ಕೊಡಿ. ನೀವೇನು ಅಂತ ತೋರಿಸಿ. ಗೆದ್ದು ತೋರಿಸಿ. ಕೈ ತುಂಬಾ ಹಣ, ಅಟ್ ಲೀ ಹುಡುಗಿ ಮನೆ ಕಡೆ ಕೇಳಿದಾಗ ಉತ್ತರಿಸುವಷ್ಟು ಬೇಕಾಗಿರುವ ಕರೆನ್ಸಿ, ಬೇಕಾಗಿರೋ confidence ಸಂಪಾದಿಸಿಕೊಳ್ಳಿ.

ನಂತರ ನಿಮ್ಮನ್ನ ಪಾಸಿಟಿವ್ ಆಗಿ ನಡೆಸಿದಂತಹ ಸೆಳೆತಕ್ಕೆ ಒಂದು ಥ್ಯಾಂಕ್ಸ್ ಹೇಳಿ. ಇಷ್ಟ ಪಟ್ಟವಳು ಮನೆಗೆ ಬರ್ತಾಳೆ, ಇಷ್ಟ ಪಟ್ಟವನು ಬಾಳ ಸಂಗಾತಿ ಆಗ್ತಾನೆ, ಸಪೋಸ್ ಸೆಳೆತಗಳಿಂದ ಹೆಚ್ಚು ಕಡಿಮೆಯಾದರೆ ಬದುಕು ಬೀದಿಗೆ ಬಂದು ಬಿಡುತ್ತೆ. ಕೆಲಸ ಇರಲ್ಲ ಬದುಕೋದೆ ಕಷ್ಟ ಆಗಿಬಿಡುತ್ತೆ. ಸ್ನೇಹಿ
ತರು ಕೊಡಿಸೋ ಟೀ ಗೋಸ್ಕರ, ಸಿಕ್ಕಿದವರು ಯಾರೋ ಕೊಡಿಸುವ ಟಿಫನ್ ಗೋಸ್ಕರ ಬದುಕು ಕಳೆಯಬೇಕಾಗುತ್ತೆ. ಏನಂತೀರಾ ಸೆಳೆತಗಳ ಜತೆ ಸಹವಾಸ ಮಾಡ್ತೀರೋ ಇಲ್ಲ ಬದುಕೆ ವನವಾಸ ಮಾಡ್ತೀರೋ ತೀರ್ಮಾನ ನಿಮಗೆ ಬಿಟ್ಟಿದ್ದು.

ವಿರಹ ನೂರು ನೂರು ತರಹ
ವಿರಹ ಅದೊಂದು ತರಹ, ನೆನಪು ಕೊಟ್ಟವಳು ದೂರವಾದರೆ ವಿರಹ, ಸನಿಹ ಇದ್ದು ಸೆಳೆದವನು ಮರೆಯಾದರೆ ವಿರಹ, ಸಾಕಾಗದ ಏಕಾಂತ ಕಲಿಸಿದ ಪ್ರೇಯಸಿ ಮುನಿಸಿ ಕೊಂಡರೆ ವಿರಹ, ಪ್ರಾಣಕ್ಕಿಂತ ನಿನ್ನ ಹೆಚ್ಚು ಪ್ರೀತಿಸ್ತೀನಿ ಅಂತ ಹೇಳಿ ಮದುವೆಯಾದ ಗಂಡ ಕಾರಣವಿಲ್ಲದೆ ನೆಗ್ಲೆಟ್ ಮಾಡಿದರೆ ವಿರಹ, ಸೌಂದರ್ಯದಿಂದ ಸೆಳೆದ ಪ್ರೇಯಸಿ ಮತ್ತೊಬ್ಬನೊಂದಿಗೆ ಸಲುಗೆಯಿಂದ ಮಾತನಾಡಿದರೆ ವಿರಹ, ನಂಬಿದವರು ಅಟ್ ಎ ಟೈಮ್ ನಂಬಿಕೆ ದ್ರೋಹ ಮಾಡಿದರೆ ವಿರಹ, ಜೀವನಪೂರ್ತಿ, ನೆನಪಿಸಿಕೊಳ್ಳುವಂತ ಮಧುರ ಕ್ಷಣಗಳನ್ನ ಕೊಟ್ಟ ಗೆಳೆಯ ಮರೆಯಾದರೆ ವಿರಹ, ಹೇಳಲಾಗದ, ವಿವರಿಸ ಲಾಗದ, ವರ್ಣಿಸಲಾಗದ ಯಾತನೆ ವಿರಹ.

ವಿರಹ ಬಂತೆಂದು ಕಣ್ಣಿರಾಕಬಾರದು, ಡಿಪ್ರೆಷನ್ ಗೆ ಒಳಗಾಗಬಾರದು, ವೇದನೆಯನ್ನು ವೇತನದಂತೆ ಸ್ವೀಕರಿಸಬಾರದು, ಬಹಳಷ್ಟು ಮಂದಿ ಸಹನೆ ಯಿಂದ ವರ್ತಿಸುತ್ತಾರೆ. ಕಾರಣ ಅವರಿಗೆ ಕಷ್ಟ ಬಂದಿಲ್ಲವೆಂದಲ್ಲ, ಕಷ್ಟವನ್ನು ಮೌನದಲ್ಲಿ ವ್ಯಕ್ತಪಡಿಸುತ್ತಾರೆ. ಏನೇ ಆಗಲಿ, ಎಷ್ಟೇ ನೋವಾಗಲಿ, ಇಷ್ಟಪಟ್ಟವರು ದೂರವಾದರೂ, ನಂಬಿದವರು ದ್ರೋಹಿಗಳಾದರೂ ಸ್ಟೇ ಕೂಲ. ಬಿಟ್ಟುಹೋದ ಪ್ರೇಯಸಿ ಇವನ್ನನ್ನ ಮಿಸ್ ಆಗಬಾರದಿತ್ತು ಎಂದು ಕೊರಗುವಂತೆ ಬದುಕಬೇಕು. ದ್ರೋಹ ಮಾಡಿದವರು ನಾನು ದೊಡ್ಡ ತಪ್ಪು ಮಾಡಿಬಿಟ್ಟೆ ಎಂದು ನರಳುವಂತೆ ಬದುಕಬೇಕು.

ನೆನಪು ಕೊಟ್ಟು ಹೋದವಳು ಪ್ರತಿಕ್ಷಣ ನಿನ್ನ ನೆನಪಿಸಿಕೊಂಡು ಬೇಸರಪಡುವಂತೆ ಸಾಧಿಸಿ ತೋರಿಸಬೇಕು. ಪ್ರೀತಿಯ ಯುವಕ-ಯುವತಿಯರೇ ಬದುಕಿನಲ್ಲಿ ಏನೇ ಕಷ್ಟಬಂದರು, ಅದಕ್ಕೆ ನೀವು ಪ್ರತಿಕ್ರಿಯೆ ನೀಡುವ ಶೈಲಿಯಲ್ಲಿ ಭವಿಷ್ಯದ ಗೆಲುವಿರುತ್ತೆ. ಪ್ರೀತಿಯಲ್ಲಿ ಸೋತ ತಕ್ಷಣ ಹತಾಶರಾಗ ಬೇಡಿ. ಬದುಕೇ ಮುಗಿದುಹೋಯ್ತು ಎಂಬ ಲೈಫ್ ಎಂಡಿಂಗ್ ತೀರ್ಮಾನಕ್ಕೆ ಬರಬೇಡಿ. ಆಕಾಶವೇ ಮೇಲೆ ಬಿದ್ದರು ಪರವಾಗಿಲ್ಲ. ಬದುಕು ಬೀದಿಗೆ ಬಿದ್ದಾಯ್ತು ಎಂಬ ಭಾವ ಮೂಡಿದರು ಪರವಾಗಿಲ್ಲ.

ನನಗ್ಯಾರು ಇಲ್ಲ, ನನ್ನ ಯಾರೂ ಅರ್ಥ ಮಾಡಿಕೊಳ್ಳುತ್ತಿಲ್ಲ ಎಂಬ ಸಂದಿಗ್ಧತೆ ಎದುರಾದರು ಪರವಾಗಿಲ್ಲ ಬಿ ಕೂಲ್. ಪಾತಾಳಕ್ಕೆ ಬಿದ್ದಾಗಲೇ ಆಕಾಶ ವನ್ನ ಸೂಕ್ಷ್ಮವಾಗಿ ಗಮನಿಸಲು ಸಾಧ್ಯ. ಬೀದಿಗೆ ಬಿದ್ದಾಗಲೇ ಗೊತ್ತಾಗೋದು ಕಷ್ಟ ಬಂದಾಗ ಹೇಗೆ ಬದುಕಬೇಕೆಂದು. ಅವಮಾನವಾದಾಗಲೇ ಅರ್ಥ ವಾಗೋದು ನಿನ್ನ ವಿಲ್ ಪವರ್ ತಾಕತ್ತೇನೆಂದು. ನಂಬಿಕೆ ದ್ರೋಹವಾದಾಗಲೆ ಗೊತ್ತಾಗೋದು ಯಾರನ್ನ ಎಷ್ಟು ಬೇಕು ಅಷ್ಟೇ ನಂಬಬೇಕು ಅಂತ. ಎಡವಟ್ಟಾದಾಗಲೇ ಇಡುವ ಹೆಜ್ಜೆಗಳಲ್ಲಿ ಸ್ಪಷ್ಟತೆ ಬರೋದು. ಎಲ್ಲವನ್ನು ಕಳೆದುಕೊಂಡಾಗಲೇ ಅರ್ಥವಾಗೋದು ಯಾವುದನ್ನ ಹೇಗೆ ಪಡೆಯ ಬೇಕೆಂದು. ಅರ್ಥವಾಯ್ತು, ಇನ್ನಾದರೂ ಧೈರ್ಯವಾಗಿರಿ, ಪ್ರೀತಿಯಲ್ಲಿ ಸೋತ್ಹೋದೆ, ಬದುಕು ಮುಗಿದೇಹೋಯ್ತು ಅಂತ ಕೊರಗಬೇಡಿ. ತಾಕತ್ತಿದ್ದರೆ ಬದುಕಿ ತೋರಿಸಿ.