Saturday, 9th December 2023

ಸಿಗರೇಟ್ ಬಿಟ್ಟೆ ಅಂದಿದ್ದು on a ‘lighter’ note

ತುಂಟರಗಾಳಿ

ಸಿನಿಗನ್ನಡ 

ನಮ್ ಸಿನಿಮಾ ನಟರು ಏನ್ ಮಾಡ್ತಾ ಇzರೆ? ರಾಜ್ಯದಲ್ಲಿ ಏನಾದರೂ ತೊಂದರೆ ಆದ ಕೂಡಲೇ ಇಂಥದೊಂದು ಪ್ರಶ್ನೆ ನಮ್ಮ ಜನಗಳ ಬಾಯಲ್ಲಿ ಬರೋದು ತೀರಾ ಕಾಮನ್. ಸಿನಿಮಾ ನಟರು ನಮಗಾಗಿ ಏನು ಮಾಡಿದ್ದಾರೆ, ಅಂತ ಕೇಳೋ ಈ ಖಾಯಿಲೆ, ರಾಜ್ಯದಲ್ಲಿ ಬರ, ಪ್ರವಾಹ, ಕಾವೇರಿ ಸಮಸ್ಯೆ ಏನೇ
ಬಂದರೂ ಅವುಗಳ ಜೊತೆಗೇ ಬರುತ್ತೆ. ಕರೋನಾ ಖಾಯಿಲೆಯ ಕಾಲದಲ್ಲೂ ಬಂದಿತ್ತು. ಇದೇನೂ ಹೊಸದಲ್ಲ ಬಿಡಿ, ಮೇರು ನಟ ಡಾ.ರಾಜ್‌ಕುಮಾರ್ ಅವರಿಂದ ಹಿಡಿದು ಇಂದಿನ ಯುವಪೀಳಿಗೆಯ ನಟರನ್ನೂ ಈ ಗೀಳು ಬಿಟ್ಟಿಲ್ಲ.

ಕನ್ನಡದ ನಟರು ಸಮಸ್ಯೆ ಪೀಡಿತರಿಗೆ ಸಹಾಯ ಮಾಡಬೇಕು, ಪರಿಹಾರ ಕೊಡಬೇಕು, ಒಂದೇ ಸಲ ಎಲ್ಲ ಸಮಸ್ಯೆಗಳನ್ನೂ ತಮ್ಮ ಸಿನಿಮಾಗಳಲ್ಲಿ ವಿಲನ್ ಗಳನ್ನು ಹೊಡೆದೋಡಿಸಿದಂತೆ ಓಡಿಸಬೇಕು ಎಂಬೆಲ್ಲ ಪ್ರಲಾಪಗಳು ಶುರುವಾಗುತ್ತವೆ. ಅಂದಹಾಗೆ ನಮ್ಮ ಜನಗಳಿಗೆ ಪಾಪ, ಈ ಸಿನಿಮಾ ನಟರು ತುಂಬಾ ಸುಲಭಕ್ಕೆ ಸಿಗುವ ಮಿಕಗಳಾಗಿಬಿಡುತ್ತಾರೆ. ಈ ಸಿನಿಮಾ ನಟರು ನಮಗೇನೂ ಮಾಡಿಲ್ಲ ಎಂದು ಮುಲುಗುವ ಈ ಜನ, ತಾವು ಅವರನ್ನು ಉದ್ಧಾರ ಮಾಡಿದ್ದೇವೆ, ಅವರ ಸಿನಿಮಾಗಳನ್ನು ಹಣ ಕೊಟ್ಟು ನೋಡಿದ್ದೇವೆ, ಹಾಗಾಗಿ ಅವರು ನಮಗೆ ಸಹಾಯ ಮಾಡಬೇಕು ಎಂಬ ಮನೋಭಾವದಿಂದ ಮಾತನಾಡುತ್ತಾರೆ.

ಆದರೆ ಒಂದು ವರ್ಷದಲ್ಲಿ ಒಬ್ಬ ಸ್ಟಾರ್ ನಟನ ಒಂದು ಚಿತ್ರಕ್ಕೆ ಹೆಚ್ಚೆಂದರೆ ೨೦೦ ರುಪಾಯಿ ಕೊಟ್ಟು ಸಿನಿಮಾ ನೋಡುವ ಇವರು ತಮ್ಮ ಮಕ್ಕಳನ್ನು ಮಿನಿಮಮ್ ಎಂದರೂ ವರ್ಷಕ್ಕೆ ೫೦ ಸಾವಿರ, ೧ ಲಕ್ಷ ಕೊಟ್ಟು ಓದಿಸುವ ಸ್ಕೂಲ್ ಮ್ಯಾನೇಜ್‌ಮೆಂಟ್‌ನವರನ್ನು ಈ ರೀತಿ ಕೇಳುವುದಿಲ್ಲ, ಇವರಿಂದಲೇ ಲಕ್ಷಾಂತರ ಹಣ ಪೀಕುವ ಆಸ್ಪತ್ರೆ ಕಟ್ಟಿಸಿದವನನ್ನಾಗಲೀ ಅಥವಾ ನಮ್ಮ ಸಮಾಜದ ಇನ್ಯಾವುದೇ ಉದ್ಯಮಿಗಳನ್ನಾಗಲೀ ಇವರು ಕೇಳುವುದಿಲ್ಲ. ತಮ್ಮ ಮನೆಯ ಬಳಿಯ ಇರುವ ಕಿರಾಣಿ ಅಂಗಡಿಗೂ ಇವರು ಸಾವಿರಾರು ರುಪಾಯಿ ಬ್ಯುಸಿನೆಸ್ ಕೊಟ್ಟರೂ ಅವನನ್ನೂ ಕೇಳುವುದಿಲ್ಲ.

ಅವರೆಲ್ಲರೂ ಜನಗಳಿಂದಲೇ ಅಷ್ಟು ಶ್ರೀಮಂತರಾಗಿದ್ದರೂ ಅವರ ಗಳಿಕೆಯಲ್ಲಿ ನಮ್ಮ ಪಾಲಿದೆ ಎಂದು ಜನಗಳಿಗೆ ಅನ್ನಿಸೋದಿಲ್ಲ. ಅವರನ್ನು ಬಿಡಿ, ಸಿನಿಮಾ ಮಾಡಿ ನೂರಾರು ಕೋಟಿಗಟ್ಟಲೆ ಹಣ ಮಾಡುವ ನಿರ್ಮಾಪಕರನ್ನೂ ಇವರು ಕೇಳೋದಿಲ್ಲ. ಬದಲಾಗಿ ಅದರಲ್ಲಿ ಒಂದು ಪಾಲು ತೆಗೆದುಕೊಳ್ಳುವ ನಟರು ಇವರಿಗೆ ಬಲಿ ಕಾ ಬಕ್ರಾ ಆಗುತ್ತಾರೆ. ವಿಚಿತ್ರ ಅಂದ್ರೆ, ಈ ಜನಗಳು ನಮಗೆ ಯಾಕೆ ಏನೂ ಮಾಡಿಲ್ಲ ಅಂತ ಕೇಳಬೇಕಾದ ಸರಕಾರಗಳನ್ನೇ ಕೇಳೋದಿಲ್ಲ. ಇವರಿಗೆ ಕೇಳಬೇಕಾದ ಒಂದೇ ಪ್ರಶ್ನೆ ಅಂದ್ರೆ, ಸಿನಿಮಾ ನಟರೇನು ಬಿಟ್ಟಿ ಬಿದ್ದಿದ್ದಾರಾ?

ಅತೃಪ್ತ ರಾಜಕಾರಣಿ

ಲೂಸ್ ಟಾಕ್

ಮಿಸ್ಟರ್ ಪೊಲಿಟಿಶಿಯನ್, ಅವಕಾಶವಾದಿ ಥರ ನೀವ್ಯಾಕೆ ಪಕ್ಷಾಂತರಿ ತಳಿ ಆಗಿದ್ದು?

-ಏನ್ ಮಾಡೋಕಾಗುತ್ತೆ, ಎಲ್ರೂ ಹಂಗೇನೇ. ಒಂದು ಪಕ್ಷ, ಅವರ ಪಕ್ಷದಿಂದ ಟಿಕೆಟ್ ಸಿಗದಿದ್ದರೆ ಇನ್ನೊಂದ್ ಪಕ್ಷಕ್ಕೆ ಹೋಗ್ತಾರೆ.

ಅ ನಿಮ್ಮ ಪಕ್ಷದಲ್ಲಿ ನಿಮ್ಮವರನ್ನೇ ಬಯ್ಕೊಂಡ್ ಓಡಾಡ್ತಾ ಇದ್ದವರಿಗೆ ಟಿಕೆಟ್ ಕೊಡ್ತಾರೆ. ನಿಮಗೆ ಕೊಡಲ್ಲ ಅಂದ್ರೆ ಅದಕ್ಕೆ ಕಾರಣ ಇರುತ್ತಲ್ವಾ?
-ಅದ್ ಹಂಗೇ. ಬಕೆಟ್ ಹಿಡಿದವರಿಗೆ ಟಿಕೆಟ್ ಕೊಡಲಿಲ್ಲ. ಆದರೆ, ಪಕ್ಷಕ್ಕೆ ಡ್ಯಾಮೇಜ್ ಮಾಡಿದವರ ಇಮೇಜ್ ಚೆನ್ನಾಗಿದೆಯಂತೆ.

ವಯಸ್ಸಾದವರಿಗೆ ಚುನಾವಣೆಯಲ್ಲಿ ಮಣೆ ಹಾಕಲ್ಲ ಅಂತ ನಿಮ್ಮ ಪಕ್ಷದವರು ಹೇಳಿದ್ದಾರಂತಲ್ಲ? 
-ಅಯ್ಯೋ, ಚುನಾವಣೆಗೆ ಬಿಡಿ, ನೆಟ್ಟಗೆ ಅವರ ಕಾಲ ಮೇಲೆ ನಿಂತ್ಕೊಳ್ಳೋಕೇ ಆಗದಿದ್ದವರಿಗೆ ಟಿಕೆಟ್ ಕೊಟ್ಟಿದ್ದಾರೆ. ಇದು ಚುನಾವಣೆ ಅಲ್ಲ ಚಿತಾವಣೆ.

ಆದ್ರೂ ಈ ವಯಸ್ಸಲ್ಲೂ ಇನ್ನೊಂದ್ ಪಕ್ಷಕ್ಕೆ ಹೋಗಿ ಏನ್ ಸಾಧನೆ ಮಾಡ್ತೀರಾ?
-ವಯಸ್ಸಾಗಿದೆ ಅಷ್ಟೇ ಆಯಾಸ ಆಗಿಲ್ಲ. ಆಯಸ್ಸು ಇನ್ನೂ ಗಟ್ಟಿ ಇದೆ. ಓಲ್ಡ ಈಸ್ ಬೋಲ್ಡ್ ಅನ್ನೋದು ರಾಜಕೀಯದಲ್ಲಿ ಫೇಮಸ್ ಮಾತು.

ಅದ್ಸರಿ, ಅತೃಪ್ತ ಶಾಸಕರೇ
-ರೀ, ನನ್ನನ್ನ ಅತೃಪ್ತ ಶಾಸಕ ಅಂತೆ ಕರೀಬೇಡ್ರೀ. ನಂದು ಸಿಡಿ ಎಲ್ಲಾ ರಿಲೀಸ್ ಆಗಿದೆ. ನಾನು ಅತೃಪ್ತ ಅಲ್ಲ, ಸಂತೃಪ್ತ

(ಕಾಲ್ಪನಿಕ ಸಂದರ್ಶನ)

ನೆಟ್ ಪಿಕ್ಸ್

ತನ್ನ ಆಡಳಿತದಲ್ಲಿ ಪ್ರಜೆಗಳನ್ನ ಸಿಕ್ಕಾಪಟ್ಟೆ ಗೋಳು ಹೊಯ್ದುಕೊಂಡ ಒಬ್ಬ ಅತಿ ಕೆಟ್ಟ ರಾಜ ಮತ್ತು ಪ್ರಜೆಗಳನ್ನು ತನ್ನ ಮಕ್ಕಳಂತೆ ನೋಡಿಕೊಳ್ಳುತ್ತಿದ್ದ ಇನ್ನೊಬ್ಬ ರಾಜ ಇಬ್ಬರೂ ಸತ್ತು ದೇವ ಲೋಕದ ದಾರಿ ಹಿಡಿದರು. ಇನ್ನೇನು ಸ್ವರ್ಗ, ನರಕ ಎರಡೂ ಹತ್ತಿರ ಬಂದವು. ಮೊದಲು ಇಬ್ಬರೂ ಸ್ವರ್ಗದ ಬಾಗಿಲಲ್ಲಿ ಹೋಗಿ ನಿಂತರು. ಅಲ್ಲಿ ನಿಂತಿದ್ದ ಕಾವಲುಗಾರ ಖೇಮು ಇಬ್ಬರನ್ನೂ ತಡೆದು ನಿಲ್ಲಿಸಿ ಚೆಕ್ ಮಾಡೋಕೆ ಶುರು ಮಾಡಿದ. ಮೊದಲು ಕೆಟ್ಟ ರಾಜನ ಸರದಿ ಬಂತು. ಕಾವಲುಗಾರ ಖೇಮು ಅವನ ಹಿಸ್ಟರಿ ತೆಗೆದು ನೋಡಿದ. ಅವನನ್ನು ನೋಡಿ ಮುಗುಳ್ನಕ್ಕು, ಬನ್ನಿ ಸ್ವಾಮಿ ನಿಮಗೆ ಸ್ವರ್ಗದ ಬಾಗಿಲು ತೆರೆದಿದೆ ಎಂದು ಅವನಿಗೆ ಚಿನ್ನದ ಕಿರೀಟ ತೊಡಿಸಿ, ತಣ್ಣನೆಯ ಪಾನೀಯ ಕೊಟ್ಟು ಒಳಗೆ ಕರೆದುಕೊಂಡ. ಇದನ್ನೆ ನೋಡುತ್ತಿದ್ದ ಒಳ್ಳೆಯ ರಾಜ, ಅಂಥ ಕೆಟ್ಟವನಿಗೇ ಇಷ್ಟು ಮರ್ಯಾದೆ ಸಿಕ್ಕಮೇಲೆ, ನನಗೆ ಇನ್ನೆಷ್ಟು ಸಿಗಬೇಡ ಎಂದುಕೊಂಡು ಖುಷಿಯಿಂದ ಮುಂದೆ ಹೋದ. ಇವನನ್ನು ತಡೆದು ನಿಲ್ಲಿಸಿದ ಖೇಮು ಇವನ ಹಿಸ್ಟರಿ ತೆಗೆದು ನೋಡಿದ. ನಂತರ ತಲೆ ಎತ್ತಿ ಇವನ ಮುಖ ನೋಡಿದವನೇ, ತನ್ನ ಮುಖ ಸಿಂಡರಿಸಿಕೊಂಡು, ನಿನಗೆ ಇಲ್ಲಿ ಜಾಗವಿಲ್ಲ, ನೀನು ನರಕಕ್ಕೆ ಹೋಗಬಹುದು ಅಂದ.

ಈ ರಾಜನಿಗೆ ಆಶ್ಚರ್ಯ ಮತ್ತು ಸಿಟ್ಟು ಎರಡೂ ಒಟ್ಟಿಗೇ ಬಂತು. ಅದೇ ಸಿಟ್ಟಿನಲ್ಲಿ, ಇದ್ಯಾವ ನ್ಯಾಯ? ಅವನು ಪ್ರಜೆಗಳಿಗೆ ಎಷ್ಟೆ ಕಿರುಕುಳ ಕೊಟ್ಟವನು, ಅವನಿಗೆ ನೋಡಿದರೆ ಅಷ್ಟೊಂದು ಮರ್ಯಾದೆ, ಗೌರವ, ನಾನು ನನ್ನ ಪ್ರಜೆಗಳನ್ನು ಮಕ್ಕಳಂತೆ ನೋಡಿಕೊಂಡವನು. ನನಗೆ ಯಾಕೆ ಇಂಥಾ ಅನ್ಯಾಯ? ದೇವ ಲೋಕದಲ್ಲೂ ಈ ರೀತಿ ಮೋಸವೇ? ಅಂತ ಕಾವಲುಗಾರ ಖೇಮುನನ್ನು ಕೇಳಿದ. ಅದಕ್ಕೆ ಖೇಮು ಹೇಳಿದ ‘ನೋಡಪ್ಪಾ, ಇದರಲ್ಲಿ ಮೋಸ ಏನಿಲ್ಲ, ನಿನ್ನ ಆಡಳಿತದಲ್ಲಿ ಪ್ರಜೆಗಳು ನೆಮ್ಮದಿಯಾಗಿ ನಿz ಮಾಡುತ್ತಿದ್ದರು. ಆದರೆ ಅದೇ ಅವನ ಆಡಳಿತದಲ್ಲಿ ಪ್ರತಿ ಕ್ಷಣವೂ ದೇವರೇ ನಮ್ಮನ್ನ ಕಾಪಾಡು ಅಂತ ಬೇಡಿಕೊಳ್ತಾ ಇದ್ರು. ಅದಕ್ಕೇ ದೇವರಿಗೆ ಆ ರಾಜನೇ ಹೆಚ್ಚು ಇಷ್ಟ. ಕಳಕಳಿ, ಉದ್ದೇಶ, ಪ್ರಯತ್ನ ಮುಖ್ಯ ಅಲ್ಲ, ರಿಸಲ್ಟ್ ಮಾತ್ರ ಮುಖ್ಯ. ಗೊತ್ತಾಯ್ತಾ?”

ಲೈನ್ ಮ್ಯಾನ್
ದೀಪಾವಳಿ ಸ್ಪೆಷಲ್
-Eco friendly ಪಟಾಕಿ ಹೊಡೀರಿ ಅಂದ್ರೆ, Echo friendly ಪಟಾಕಿ ಹೊಡೆದು ಹಬ್ಬ ಮುಗಿಸಿದ ಎಲ್ಲರಿಗೂ ಶುಭಾಶಯಗಳು.

ನಡುರಾತ್ರಿ ಜ್ಞಾನೋದಯ
-ನಿಮ್ಮ ಕನಸುಗಳನ್ನು ಆರ್ಚಿವ್ ಮಾಡಬೇಡಿ ಅಚೀವ್ ಮಾಡಿ

ನಮ್ಮವರಿಗೆ ಟಿಕೆಟ್ ಕೊಡದಿದ್ರೆ ವಿಧಾನ ಸೌಧಕ್ಕೆ ಮುತ್ತಿಗೆ ಹಾಕ್ತೀವಿ ಅನ್ನೋದು ಯಾವ ಮಠದ ಸ್ವಾಮೀಜಿ?
-ಮುತ್ತಿಗೆ ಮಠ

ಇಂದಿನ ರಾಜಕಾರಣದಲ್ಲಿ ಟಿಕೆಟ್ ಸಿಗೋಕೆ ಬರೀ ಸಜ್ಜನ ಆಗಿದ್ರೆ ಆಗಲ್ಲ

-ಅವ್ರ್ ಯಾವ್ ಜನ ಅನ್ನೋದೂ ಮುಖ್ಯ ಆಗುತ್ತೆ.

ರಾಜಕೀಯ ರಹಸ್ಯ
-‘ಎಕ್ಸ್’ ಸಿಎಂ ಗಳಾದ ಮೇಲೂ ಅವರಿಗೆ ‘ಝೆಡ್’ ಸೆಕ್ಯುರಿಟಿ ಕೊಟ್ರೂ ನಮ್ ಜನ ‘ವೈ?’ ಅಂತ ಕೇಳಲ್ಲ.

ಅಮೃತ ಕುಡಿದೂ ಸಾಯೋ ಕೆಪ್ಯಾಸಿಟಿ ಇರೋದು ಯಾರಿಗೆ?

-ಸೌತ್ ಆಫ್ರಿಕಾ ಕ್ರಿಕೆಟ್ ಟೀಮ್‌ನ ಪ್ಲೇಯರ್ಸ್‌ಗಳಿಗೆ

ಕುಡುಕರ ಪರ ಹೋರಾಟಕ್ಕೆ ಬೇಕಿರೋದು 
-ಸ್ಪಿರಿಟ್

ನೀರಿನಲ್ಲಿ ಮುಳುಗುತ್ತಿರುವ ಜನರನ್ನು ದಡ ಸೋರಿಸಲು ಹರಸಾಹಸ ಮಾಡುವ ಅಂಬಿಗ

-‘ಹುಟ್ಟು’ ಹೋರಾಟಗಾರ

ನಾನು ಬೀಡಿ ಸೇದೋದು ಬಿಟ್ಟಿದೀನಿ ಅಂತ ಸುಳ್ಳು ಹೇಳುವವರದು
-‘ಬೀಡಿ’ ನಾಟಕ

ಸಿಗರೇಟ್ ಬಿಟ್ಟೆ ಅಂತ ಹೇಳಿದ್ಯ ಮತ್ತೆ ಸೇದ್ತಾ ಇದ್ದೀಯಾ?
-Sorry I said it on a ‘lighter’ note

Leave a Reply

Your email address will not be published. Required fields are marked *

error: Content is protected !!