ವಿದೇಶ ವಾಸಿ
ಕಿರಣ್ ಉಪಾಧ್ಯಾಯ, ಬಹ್ರೈನ್
dhyapaa@gmail.com
ಇಂದಿಗೂ ಟೂತ್ ಪೇಸ್ಟ್ ಎನ್ನುವ ಬದಲು ಕೊಲ್ಗೆಟ್ ಎನ್ನುವುದಿದೆ. ಇಂದಿಗೂ ಫೋಟೊ ಕಾಪಿ ಮಶೀನ್‌ಗೆ ಝೆರಾಕ್ಸ್ ಮಶಿನ್ ಎನ್ನುವವ ರಿದ್ದಾರೆ. ಹಾಗೆಯೇ ಬ್ಯಾಕ್ ಹೋ ಎಕ್ಸ್‌ಕವೇಟರ್‌ಗೂ ಜೆಸಿಬಿ ಎನ್ನುವವರಿದ್ದಾರೆ. ಇವೆಲ್ಲ ಆಯಾ ವಸ್ತುಗಳನ್ನು ಅಥವಾ ಯಂತ್ರಗಳನ್ನು ತಯಾರಿ ಸುವ ಸಂಸ್ಥೆಗಳೇ ಹೊರತು ಅವೇ ವಸ್ತುವಿನ ಹೆಸರಲ್ಲ.
ಜೋಸೆಫ್ ಸಿರಿಲ್ ಬ್ಯಾಮ್ ಫೋರ್ಡ್ ಗೊತ್ತಲ್ಲ? ಬಹುಶಃ ಎಲ್ಲರಿಗೂ ಗೊತ್ತಿದ್ದೂ, ಗೊತ್ತಾಗದ ಹೆಸರು ಇದು. ಇತ್ತೀಚಿನ ದಿನಗಳಲ್ಲಿ ಈ ಹೆಸರು ಕೇಳ ದವರೇ ಇಲ್ಲ ಎಂದರೂ ತಪ್ಪಾಗಲಿಕ್ಕಿಲ್ಲ. ನಗರ ವಾಸಿಗಳಿಂದ ಹಿಡಿದು, ದೂರ ದ ಹಳ್ಳಿಯಲ್ಲಿರುವ ವ್ಯಕ್ತಿಗೂ ಪರಿಚಿತ ಹೆಸರು ಇದು.
1993 ರಲ್ಲಿ ಅಸೋಸಿಯೇಷನ್ ಆಫ್ ಎಕ್ವಿಪ್ಮೆಂಟ್ ಮ್ಯಾನುಫ್ಯಾಕ್ಚರರ್ಸ್ ಹಾಲ್ ಆಫ್ ಫೇಮ್ ನಲ್ಲಿ ಗೌರವಿಸ ಲ್ಪಟ್ಟ ಮೊದಲ ಬ್ರಿಟಿಷ್ ಪ್ರಜೆ ಜೋಸೆಫ್. ಸೋಜಿಗದ ಸಂಗತಿಯೆಂದರೆ, 2008 ರಲ್ಲಿ ಅವರ ಮಗ ಅಂಥೋನಿ ಈ ಪಟ್ಟಿಯಲ್ಲಿ ಸೇರ್ಪಡೆಗೊಳ್ಳುವವರೆಗೂ ಆ ಪಟ್ಟಿಯಲ್ಲಿದ್ದ ಏಕೈಕ ಬ್ರಿಟಿಷ್ ಪ್ರಜೆಯೂ ಆಗಿದ್ದರು ಜೋಸೆಫ್. ಈಗಲೂ ಅವರು ಯಾರೆಂದು ತಿಳಿಯದಿದ್ದರೆ ಚಿಂತೆಯಿಲ್ಲ, ಓದುತ್ತಾ ಹೋದಂತೆ ’ಓ… ಇವರಾ….’ ಎಂಬ ಉದ್ಘಾರ ಹೊರಬಿದ್ದರೂ ಆಶ್ಚರ್ಯವಿಲ್ಲ.
1881ರ ಹೊತ್ತಿಗೆ, ಜೋಸೆಫ್ ಮುತ್ತಜ್ಜ ಹೆನ್ರಿ ಬ್ಯಾಮ್ ಫೋರ್ಡ್ ಕಬ್ಬಿಣದ ಬಿಜಾಗರಿ ಉತ್ಪಾದಿಸುವ ಕೆಲಸ ಮಾಡಿಕೊಂಡಿದ್ದರು. ಆ ಕಾಲದ ಅವರು ಹತ್ತು ಮಹಿಳೆಯರೂ ಸೇರಿದಂತೆ ಸುಮಾರು ಅರವತ್ತೈದಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿದ್ದರು. ಅವರ ಮಕ್ಕಳು ಕೃಷಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಉಪಕರಣಗಳನ್ನು ತಯಾರಿಸುವ ಬ್ಯಾಮ್-ರ್ಡ್ ಲಿಮಿಟೆಡ್ ಸಂಸ್ಥೆಯನ್ನು ಆರಂಭಿಸಿದರು. ನಂತರದ ದಿನಗಳಲ್ಲಿ ಸಂಸ್ಥೆ, ಬ್ಯಾಮ್ ಫೋರ್ಡ್ ಇಂಟರ್‌ನ್ಯಾಷನಲ್ ಫಾರ್ಮ್ ಮಶಿನರಿ ಎಂಬ ಬದಲಾದ ಹೆಸರಿನಲ್ಲಿ ದೇಶದ ಕೃಷಿಗೆ ಬೇಕಾದ ಉಪಕರಣಗಳನ್ನು ತಯಾರಿಸಿ ಹೆಸರು ವಾಸಿಯಾಯಿತು. ಆ ಕಾಲದಲ್ಲಿಯೇ ಸಂಸ್ಥೆಯ ಉಪಕರಣಗಳು ವಿದೇಶಗಳಿಗೂ ರಫ್ತಾಗುತ್ತಿದ್ದವು.
ಅಂತಹ ಹೆಸರು ವಾಸಿಯಾಗಿದ್ದ ಸಂಸ್ಥೆಯನ್ನು ನಡೆಸುವ ಪರಿವಾರದಲ್ಲಿ ಜನಿಸಿದ್ದರು ಜೋಸೆಫ್. ಜೋಸೆಫ್ ಕಾಲೇಜು ಶಿಕ್ಷಣ ಮುಗಿಸಿದ ನಂತರ
ಇಂಗ್ಲೆಂಡಿನ ಅತಿ ದೊಡ್ಡ ಯಂತ್ರೋಪಕರಣ ತಯಾರಿಸುವ ಸಂಸ್ಥೆಯಾದ ಅಲ್ರೆಡ್ ಹರ್ಬರ್ಟ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡರು. ಕೆಲವು
ತಿಂಗಳು ಆಫ್ರಿಕಾ ಖಂಡದ ಘಾನಾ ದೇಶದಲ್ಲಿ ಸಂಸ್ಥೆಯ ಪ್ರತಿನಿಧಿಯಾಗಿಯೂ ಕಾರ್ಯನಿರ್ವಹಿಸಿದರು. ಅಲ್ಲಿಂದ ಹಿಂದಿರುಗಿ, ತಮ್ಮ ಪರಿವಾರದ
ಸಂಸ್ಥೆಯನ್ನು ಸೇರಿಕೊಂಡರು. ಎರಡನೆಯ ವಿಶ್ವಮಹಾಯುದ್ಧದ ಸಂದರ್ಭದಲ್ಲಿ ಸೇವೆ ಸಲ್ಲಿಸಲು ರಾಯಲ್ ಏರ್ ಫೋರ್ಸ್‌ನಿಂದ ಕರೆ ಬಂದಾಗ,
ಆಫ್ರಿಕನ್ ಗೋಲ್ಡ್ ಕೋಸ್ಟ್‌ಗೆ ತೆರಳಿದರು.
ಅಲ್ಲಿ, ಯುಎಸ್ ಏರ್‌ಪೋರ್ಸ್‌ನ ವಿಮಾನಗಳನ್ನು ಮಧ್ಯಪ್ರಾಚ್ಯಕ್ಕೆ ಪೂರೈಸುವ ಲಾಜಿಸ್ಟಿಕ್ಸ್ (ಸರಕು ಸಾಮಗ್ರಿಗಳ ಪೂರೈಕೆ) ವಿಭಾಗದಲ್ಲಿ ಮೂರು ವರ್ಷ ಕೆಲಸ ಮಾಡಿದರು. 1944ರಲ್ಲಿ ಸ್ವದೇಶಕ್ಕೆ ಹಿಂತಿರುಗಿದ ನಂತರ, ಎಲೆಕ್ಟ್ರಿಕ್ ವೆಲ್ಡಿಂಗ್ ಮಷಿನ್ ತಯಾರಿಸುವ ಇಂಗ್ಲಿಷ್ ಎಲೆಕ್ಟ್ರಿಕ್ ಸಂಸ್ಥೆಗೆ ಸೇರಿ ಕೊಂಡರು. ಕೆಲವು ತಿಂಗಳ ನಂತರ ತಮ್ಮ ಪರಿವಾರದ ಸಂಸ್ಥೆಗೆ ಸೇರಿಕೊಂಡು ಕಾರ್ಯ ಆರಂಭಿಸಿದರು. ಯಾಕೋ ಅವರ ಸಂಸ್ಥೆಯಲ್ಲಿ, ಜೋಸೆ- ಮತ್ತು ಉಳಿದ ಪರಿವಾರದ ಸದಸ್ಯರ ನಡುವೆ ಹೊಯ್ದ ಅಕ್ಕಿ ಬೇಯುತ್ತಿರಲಿಲ್ಲ.
ಅವರ ಚಿಕ್ಕಪ್ಪನಂತೂ ಜೋಸೆಫ್ ನನ್ನು ದರಡಗತಿ ಕಾಣದ, ಬುರ್ನಾಸು ಯುವಕನೆಂದು ತಿಳಿದು ಕಂಪನಿಯ ಕೆಲಸದಿಂದ ಮುಕ್ತಿ ಕರುಣಿಸಿದ್ದರು.
ಅಲ್ಲಿಂದ ಹೊರಬಿದ್ದ ಯುವಕ ಜೋಸೆಫ್ ಕೆಲವು ದಿನ ಬ್ರೈಲ್‌ಕ್ರೀಂ ಮಾರಾಟ ಮಾಡಿಕೊಂಡಿದ್ದ. ಇದ್ಯಾವುದೂ ಜೋಸೆಫ್ ಗೆ ಸಮಾಧಾನ ನೀಡಿರ ಲಿಲ್ಲ. ಜೋಸೆಫ್ ಗೆ ಮೂವತ್ತು ವರ್ಷವಾಗುತ್ತಿzಗ, ಹದಿನೈದು ಚದರ ಮೀಟರ್ ಅಳತೆಯ ಒಂದು ಗ್ಯಾರೇಜ್ ಬಾಡಿಗೆಗೆ ಪಡೆದರು. ಆಗ ಅದಕ್ಕೆ ತಿಂಗಳಿಗೆ ಆರು ಪೌಂಡ್ ಬಾಡಿಗೆ ನೀಡುತ್ತಿದ್ದರು. ಯುದ್ಧದಲ್ಲಿ ಜಖಂ ಆದ ವಾಹನಗಳನ್ನು ಗುಜರಿಯಲ್ಲಿ ಖರೀದಿಸಿ, ತಮ್ಮ ಗ್ಯಾರೇಜ್ ನಲ್ಲಿ ಸಂಗ್ರಹಿಸಿ ಡುತ್ತಿದ್ದರು. ಸಮಯ ಸಿಕ್ಕಾಗಲೆಲ್ಲ ಅದರಲ್ಲಿ ಉಪಯೋಗಕ್ಕೆ ಬರಬಹುದಾದ ವಸ್ತುಗಳನ್ನು ಬೇರ್ಪಡಿಸಿ, ಯಾವುದಾದರೂ ಉಪಕರಣ ವನ್ನೋ, ಯಂತ್ರವನ್ನೋ ತಯಾರಿಸುತ್ತಿದ್ದರು. ಆಗ ಅವರ ಜೊತೆಗಿದ್ದದ್ದು, ಎರಡೂವರೆ ಪೌಂಡ್ ಕೊಟ್ಟು ಖರೀದಿಸಿದ ಒಂದು ಸೆಕೆಂಡ್ ಹ್ಯಾಂಡ್ ವೆಲ್ಡಿಂಗ್ ಮಶಿನ್ ಮತ್ತು ಅವರ ಎರಡು ಕೈಗಳು ಮಾತ್ರ.
ಹಾಗೆಯೇ ಒಮ್ಮೆ, ಹಳೆಯ ಜೀಪಿನ ಎಕ್ಸೆಲ್ ಬಳಸಿ ಕೃಷಿಯಲ್ಲಿ ಉಪಯೋಗಿಸಬಹುದಾದ ಎರಡು ಟ್ರೇಲರ್ ತಯಾರಿಸಿದರು. ಒಂದು ಟ್ರೇಲರ್
ನಲವತ್ತೈದು ಪೌಂಡ್‌ಗೆ ಮಾರಾಟವಾಯಿತು. ಅದು ಅವರ ಹೊಸ ಉದ್ಯಮಕ್ಕೆ ನಾಂದಿಯಾಯಿತು. ಜೋಸೆಫ್ ಕೈಯಲ್ಲಿ ಎರಡು ಟ್ರೈಲರಿ ಮಾರಿ ಬಂದಿದ್ದ ತೊಂಬತ್ತು ಪೌಂಡ್ ಇತ್ತು. ಅವರ ಪಕ್ಕದ ಊರಿನಲ್ಲಿ ಚೀಸ್ ತಯಾರಿಸುವ ಸಂಸ್ಥೆಯ ಕಾರ್ಖಾನೆಯೊಂದು ಬಂದ್ ಆಗಿತ್ತು. ಜೋಸೆಫ್
ಅಲ್ಲಿಗೆ ತಮ್ಮ ಕಾರ್ಯಕ್ಷೇತ್ರವನ್ನು ವರ್ಗಾಯಿಸಿದರು. ಆರು ಜನರನ್ನು ಕೆಲಸಕ್ಕೆ ಇಟ್ಟುಕೊಂಡರು. ಅಂದು ಆರಂಭಗೊಂಡ ಸಂಸ್ಥೆ ಮುಂದೊಂದು
ದಿನ ವಿಶ್ವದಾದ್ಯಂತ ಸದ್ದು ಮಾಡುತ್ತದೆಂದು ಆ ಕ್ಷಣದಲ್ಲಿ ಬೇರೆಯವರು ಬಿಡಿ, ಸ್ವತಃ ಜೋಸೆಫ್ ಕೂಡ ಕನಸಿನಲ್ಲಿಯೂ ಎಣಿಸಿರಲಿಕ್ಕಿಲ್ಲ.
ಜೋಸೆಫ್ ಹೊಸ ಉದ್ಯಮ ಆರಂಭಿಸುವಾಗಲೇ ಕೆಲವು ತತ್ವ ಸಿದ್ಧಾಂತಗಳನ್ನು ಇಟ್ಟುಕೊಂಡಿದ್ದರು. ಪ್ರತಿಸ್ಪರ್ಧಿಗಳ ವ್ಯವಹಾರವನ್ನು ಸ್ವಾಧೀನ ಪಡಿಸಿಕೊಳ್ಳುವ ಬದಲಾಗಿ, ನಾವು ಅವರಿಗಿಂತ ಉತ್ತಮವಾದದ್ದನ್ನು ಹೇಗೆ ಮಾಡಬಹುದು ಎಂಬುದರ ಮೇಲೆ ಗಮನ ಹರಿಸುವುದು ಅವರ ಪ್ರಮುಖ
ಸಿದ್ಧಾಂತವಾಗಿತ್ತು. ಅದರ ಜತೆಗೆ, ಹೊಸ ಅನ್ವೇಷಣೆಗಳು, ಉತ್ಪಾದನೆಯಲ್ಲಿ ನೂತನ ತಂತ್ರಜ್ಞಾನ, ಉತ್ಪನ್ನಗಳ ಅಭಿವೃದ್ಧಿಗೆ ಮರುಹೂಡಿಕೆ ಇತ್ಯಾದಿ ಗಳ ಕಡೆಗೆ ಹೆಚ್ಚಿನ ಗಮನ ಹರಿಸಿದರು. ಅವರ ಈ ತತ್ವಗಳು ಮಾರುಕಟ್ಟೆಯಲ್ಲಿ ಬಹಳಷ್ಟು ನಾವೀನ್ಯತೆಗೆ ಸಾಕ್ಷಿಯಾಯಿತು. ಪ್ರಮುಖ ಯಂತ್ರೋ ಪಕರಣಗಳು ಸರಣಿಯಲ್ಲಿ ಮಾರುಕಟ್ಟೆಗೆ ಇಳಿಯಲು ಕಾರಣವಾಯಿತು.
ಸಂಸ್ಥೆ 1948 ರಲ್ಲಿ ಯುರೋಪಿನ ಮೊದಲ ಹೈಡ್ರಾಲಿಕ್ ಟಿಪ್ಪಿಂಗ್ ಟ್ರೇಲರ್ ತಯಾರಿಸಿತು. ಸಂಸ್ಥೆ ತಯಾರಿಸುವ ಎಲ್ಲ ಯಂತ್ರೋ ಪಕರಣಗಳಿಗೂ ಹಳದಿ ಬಣ್ಣ ಬಳಿಯಬೇಕೆಂದು ಜೋಸೆಫ್ ಫರ್ಮಾನು ಹೊರಡಿಸಿದ್ದರು. 1953ರಲ್ಲಿ ಸಂಸ್ಥೆ ಐತಿಹಾಸಿಕ, ಅದ್ಭುತ ಉತ್ಪನ್ನವಾದ ಬ್ಯಾಕ್‌ಹೋ
ಲೋಡರ್ ತಯಾರಿಸಿತು. 1957 ರಲ್ಲಿ ಕೃಷಿ ಮತ್ತು ನಿರ್ಮಾಣ ಕಾರ್ಯ ಎರಡರಲ್ಲಿಯೂ ಉಪಯೋಗಿಸಬಹುದಾದ ’ಹೈಡ್ರಾ ಡಿಗ್ಗಾ’ ಯಂತ್ರವನ್ನು
ತಯಾರಿಸಿತು. 1960 ರಲ್ಲಿ ಸಂಸ್ಥೆಯ ಯಂತ್ರೋಪಕರಣಗಳು ಅಮೆರಿಕಕ್ಕೆ ರಫ್ತಾಗತೊಡಗಿದವು. ಅಲ್ಲಿಂದ ಸಂಸ್ಥೆಯ ಲಾಭ ವೃದ್ಧಿಸತೊಡಗಿತು. ಅದಾಗಲೇ ಸಂಸ್ಥೆ ಸುಮಾರು ಮೂರು ಸಾವಿರದಷ್ಟು ಬ್ಯಾಕ್ ಹೋ ಎಕ್ಸ್‌ಕವೇಟರ್ ತಯಾರಿಸಿತ್ತು. ಸಂಸ್ಥೆ 1929ರಲ್ಲಿ ಭಾರತದಲ್ಲೂ ಕಾರ್ಯಾರಂಭ
ಮಾಡಿತು.
ಸಂಸ್ಥೆಗೆ ಹೆಚ್ಚು ಲಾಭ ಬರಲು ಆರಂಭವಾದ ನಂತರ ಜೋಸೆಫ್ ಮಾಡಿದ ಮೊದಲ ಕೆಲಸವೆಂದರೆ ನೌಕರರ ಸಂಬಳ ಹೆಚ್ಚಿಸಿದ್ದು. ತನ್ನ ಜೊತೆಗೆ ಕೆಲಸ
ಮಾಡುವವರು ಖುಷಿ ಖುಷಿಯಾಗಿರಬೇಕೆಂದು ಅವರು ಬಲವಾಗಿ ನಂಬಿದ್ದರು. ಎಪ್ಪತ್ತು ಮತ್ತು ಎಂಬತ್ತರ ದಶಕದಲ್ಲಿ ಅವರ ಸಂಸ್ಥೆಯಲ್ಲಿ ಕೆಲಸ
ಮಾಡುವವರ ಸಂಬಳ ಎಷ್ಟಿತ್ತೆಂದರೆ, ಉಳಿದ ಉತ್ಪಾದನಾ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದವರ ಸಂಬಳಕ್ಕಿಂತ ಸುಮಾರು ಏಳು ಪಟ್ಟು ಹೆಚ್ಚಾಗಿತ್ತು.
ಅದು ಒಂದು ಕಡೆಯಾದರೆ, ಪ್ರತಿನಿತ್ಯ ಸ್ವತಃ ಬೆಳಿಗ್ಗೆ ಒಂಬತ್ತು ಗಂಟೆಯಿಂದ ರಾತ್ರಿ ಹನ್ನೊಂದ ರವರೆಗೆ, ಹದಿನಾಲ್ಕು ತಾಸು ಕೆಲಸ ಮಾಡುತ್ತಿದ್ದ ಜೋಸೆಫ್ ಅವರಿಗೆಲ್ಲ ಸೂರ್ತಿಯ ಚಿಲುಮೆಯಾಗಿದ್ದರು.
ಜೋಸೆಫ್ಗೆ ಅರವತ್ತು ವರ್ಷವಾಗುತ್ತಿದ್ದಂತೆ ತೆರಿಗೆ ವಂಚನೆಯ ಆರೋಪ ಎದುರಿಸಬೇಕಾಯಿತು. ತಮ್ಮ ಉದ್ಯಮವನ್ನು ಮಕ್ಕಳಿಗೆ ಹಸ್ತಾಂತರಿಸಿ, ಇಂಗ್ಲೆಂಡ್ ಮತ್ತು ಕಟ್ಟಿಕೊಂಡ ಹೆಂಡತಿ ಇಬ್ಬರನ್ನೂ ಬಿಟ್ಟು, ಕಾರ್ಯದರ್ಶಿಯೊಡನೆ ಸ್ವಿಡ್ಜರ್ ಲ್ಯಾಂಡ್‌ಗೆ ತೆರಳಿದರು. ಜೋಸೆಫ್ ನಿಧನರಾದಾಗ, ಸಂಸ್ಥೆಯಲ್ಲಿ ನಾಲ್ಕೂವರೆ ಸಾವಿರ ನೌಕರರಿದ್ದರು. ಅವರ ಸಂಸ್ಥೆ ಬ್ರಿಟನ್ನಿನ ಅತಿದೊಡ್ಡ ಖಾಸಗಿ ಇಂಜನಿಯರಿಂಗ್ ಸಂಸ್ಥೆ ಎಂಬ ಕೀರ್ತಿಗೆ ಪಾತ್ರ ವಾಗಿತ್ತು. ಹನ್ನೆರಡು ಕಾರ್ಖಾನೆಗಳಲ್ಲಿ ಪ್ರತಿ ವರ್ಷ ಸುಮಾರು ಮೂವತ್ತು ಸಾವಿರ ಯಂ ತ್ರೋಪಕರಣಗಳು ತಯಾರಾಗುತ್ತಿದ್ದು, ನೂರ ನಲವತ್ತು ದೇಶಗಳಲ್ಲಿ ಮಾರಾಟವಾಗುತ್ತಿತ್ತು. ಆಗಲೇ ಸಂಸ್ಥೆ ಸುಮಾರು ಎಂಟುನೂರ ಐವತ್ತು ಮಿಲಿಯನ್ ಪೌಂಡ್ ಆದಾಯ ಹೊಂದಿತ್ತು.
ಇಂದು ಸಂಸ್ಥೆಯಲ್ಲಿ ಹನ್ನೊಂದು ಸಾವಿರಕ್ಕೂ ಹೆಚ್ಚು ನೌಕರರಿದ್ದು, ನಾಲ್ಕು ಬಿಲಿಯನ್ ಪೌಂಡ್ ಗಿಂತಲೂ ಹೆಚ್ಚಿನ ಆದಾಯ ಹೊಂದಿದೆ. ಎಲ್ಲಕ್ಕಿಂತ
ಹೆಚ್ಚಾಗಿ ಸಂಸ್ಥೆಯ ಹೆಸರೇ ಯಂತ್ರದ ಹೆಸರು ಎನ್ನುವಷ್ಟರ ಮಟ್ಟಿಗೆ ಜನರ ಮನವನ್ನು ಆವರಿಸಿಕೊಂಡಿದೆ. ನಿಜ, ಅದೆಷ್ಟೋ ಮಂದಿ ಇಂದಿಗೂ ಟೂತ್
ಪೇಸ್ಟ್ ಎನ್ನುವ ಬದಲು ಕೊಲ್ಗೆಟ್ ಎನ್ನುವುದಿದೆ. ಇಂದಿಗೂ ಫೋಟೊ ಕಾಪಿ ಮಶೀನ್ ಗೆ ಝೆರಾಕ್ಸ್ ಮಶಿನ್ ಎನ್ನುವವರಿದ್ದಾರೆ. ಹಾಗೆಯೇ ಬ್ಯಾಕ್
ಹೋ ಎಕ್ಸ್‌ಕವೇಟರ್‌ಗೂ ಜೆಸಿಬಿ ಎನ್ನುವವರಿದ್ದಾರೆ. ಅಸಲಿಗೆ, ಕೊಲ್ಗೆಟ್, ಝೆರಾಕ್ಸ್, ಜೆಸಿಬಿ, ಇವೆಲ್ಲ ಆಯಾ ವಸ್ತುಗಳನ್ನು ಅಥವಾ ಯಂತ್ರಗಳನ್ನು
ತಯಾರಿಸುವ ಸಂಸ್ಥೆಗಳೇ ಹೊರತು ಅವೇ ವಸ್ತುವಿನ ಹೆಸರಲ್ಲ. ಜೆಸಿಬಿಯೂ ಅಷ್ಟೇ, ಭೂಮಿಯನ್ನು ಬಗೆಬಗೆದು, ಅಗೆದಗೆದು, ಮೊಗೆಮೊಗೆದು ಬದಿಗೆ
ಒಗೆಯಲು ಅಥವಾ ಗುಡ್ಡವನ್ನು, ಕಟ್ಟಡವನ್ನು ತಡವಿ, ಕಡಿದು, ಕೆಡವಿ ನೆಲಸಮ ಮಾಡಲು ಬಳಸುವ ಯಂತ್ರ.
ದಿವಸಗಳೇ ಬೇಕಾದ ಕೆಲಸವನ್ನು ನಿಮಿಷಗಳಲ್ಲಿ ಮಾಡುವ ಸಾಧನ ಇದು. ಇದರ ನಿಜವಾದ ಹೆಸರು ಬ್ಯಾಕ್ ಹೋ ಅಥವಾ ಎಕ್ಸ್‌ಕವೇಟರ್ ಮುಂದೆ ಮಣ್ಣು ಹೊರಲು ಅನುಕೂಲವಾದ ಬಕೆಟ್ ಇದ್ದರೆ ಅದು ಬ್ಯಾಕ್‌ಹೋ ಲೋಡರ್ ಅಥವಾ ಎಕ್ಸ್‌ಕವೇಟರ್ ಲೋಡರ್. ಇದಕ್ಕೆ ಬ್ಯಾಕ್ ಹೋ ಎಂದು ಹೆಸರಿಡಲು ಕಾರಣವೇನು? ಏಟಛಿ ಎಂದರೆ ಗುದ್ದಲಿ ಅಥವಾ ಸಲಕೆ. ಪಾಶ್ಚಾತ್ಯ ದೇಶಗಳಲ್ಲಿ ಮಣ್ಣು ಎತ್ತಲು ಉಪಯೋಗಿಸುವ ಸಲಕೆ ನಮ್ಮಲ್ಲಿ ಉಪಯೋಗಿಸುವ ಸಲಕೆಯಂತಲ್ಲ. ನಾವು ಒಳಮುಖವಾಗಿರುವ ಗುದ್ದಲಿ ಬಳಸಿದರೆ, ಅವರು ಬಳಸುವುದು ಹೊರಮುಖವಾಗಿರುವ ಅಥವಾ ಮೇಲ್ಮುಖ ವಾಗಿರುವ ಸಲಕೆಯನ್ನು. ಈ ಯಂತ್ರಗಳು ಭೂಮಿ ಯನ್ನು ಕೊರೆಯುವುದು ಒಳಮುಖವಾಗಿ ಅಥವಾ ಹಿಮ್ಮುಖವಾಗಿ. ಆದ್ದರಿಂದ ಈ ಯಂತ್ರಗಳಿಕೆ ಬ್ಯಾಕ್ ಹೋ (Backhoe) ಎಂಬ ಹೆಸರು ಬಂತು.
ಹಾಗಂತ ಈ ಯಂತ್ರವನ್ನು ಮೊದಲು ಕಂಡುಹಿಡಿದದ್ದು ಜೆಸಿಬಿ ಕಂಪನಿಯಲ್ಲ. 1947 ರಲ್ಲಿ ಮೊದಲ ಬಾರಿಗೆ ಈ ಪ್ರಯೋಗ ಮಾಡಿದವರು ವೈನೋ ಹೊಲೊಪೈನ್ ಮತ್ತು ರಾಯ್ ಹ್ಯಾಂಡಿ ಜೂನಿಯರ್. ಭೂಮಿಯನ್ನು ಅಗೆಯಬಹುದಾದ ಯಂತ್ರದ ತೋಳನ್ನು ಅವರು ಮೊದಲು ಟ್ರ್ಯಾಕ್ಟರ್ ಗೆ ಅಳವಡಿಸಿದರು. ಅವರ ಸಂಶೋಧನೆಯ ಮೊಟ್ಟ ಮೊದಲ ಹೈಡ್ರಾಲಿಕ್ ಬ್ಯಾಕ್ ಹೋ ಅವರು ಅಮೆರಿಕದ ಕನೆಕ್ಟಿಕಟ್ ಲೈಟ್ ಎಂಡ್ ಪವರ್ ಸಂಸ್ಥೆಗೆ ಏಳುನೂರ ಐವತ್ತು ಡಾಲರ್‌ಗೆ ಮಾರಿದ್ದರು ಎನ್ನುತ್ತದೆ ಇತಿಹಾಸ. (ಇಂದಿಗೂ ವೈನೋ ಹೊಲೊಪೈನನ್ನು ’ಮಿಸ್ಟರ್ ಬ್ಯಾಕ್ ಹೋ’ ಎಂದೇ ಕರೆಯ ಲಾಗುತ್ತದೆ.) ಇಬ್ಬರೂ ಸೇರಿ ವೈನ್-ರಾಯ್ ಕಾರ್ಪೊರೇಷನ್ ಸಂಸ್ಥೆ ಆರಂಭಿಸಿ, ತಾವು ಉತ್ಪಾದಿಸಿದ ಯಂತ್ರಗಳನ್ನು ಫೋರ್ಡ್ ಸಂಸ್ಥೆಗೆ ಮಾರುತ್ತಿದ್ದರು.
ಮೂರು ವರ್ಷಗಳ ನಂತರ ಫೋರ್ಡ್ ಸಂಸ್ಥೆ ಸ್ವತಃ ಯಂತ್ರಗಳನ್ನು ಉತ್ಪಾದಿಸತೊಡಗಿದ್ದು, ಕೆಲವು ವರ್ಷಗಳ ನಂತರ, ಜೆಸಿಬಿ ಮಾರುಕಟ್ಟೆಗೆ ಬಂದಾಗ,
ಅದರ ಹೊಡೆತ ತಾಳಲಾಗದೇ ನಿಲ್ಲಿಸಿದ್ದು, ಎಲ್ಲವೂ ಈಗ ಇತಿಹಾಸ. ಇಂದು Case, Caterpillar, Deere, Hitachi, Komatsu, Volvo, Kubota,
Liebherr, ಮೊದಲಾದ ಸಂಸ್ಥೆಗಳೂ ಈ ರೀತಿಯ ಯಂತ್ರಗಳನ್ನು ತಯಾರಿಸುತ್ತಿವೆ. ಭಾರತದಲ್ಲಿ BEML, LT, TATA (Hitachi ಜತೆ ಸೇರಿ) ಸಂಸ್ಥೆಗಳು ಬಾರಿ ಗಾತ್ರದ ಯಂತ್ರೋಪಕರಣಗಳನ್ನು ತಯಾರಿಸುತ್ತಿವೆ. ಆದರೆ, ಎಲ್ಲಿಯಾದರೂ ಇಂತಹ ಯಂತ್ರಗಳು ಕಂಡರೆ, ಬಾಯ ಲ್ಲಿ ಮೊದಲು ಬರುವುದು ಜೆಸಿಬಿಯ ಹೆಸರು.
ಗ್ಯಾರೇಜಿನಿಂದ ಆರಂಭಿಸಿ, ವಿಶ್ವವನ್ನೇ ಆಳಿದ ಇನ್ನೊಂದು ಕಥೆ ಇದು. ಅಂದಹಾಗೆ Joseph Cyril Byamford ತನ್ನ ಹೆಸರಿನ ಆರಂಭಿಕ ಅಕ್ಷರಗಳನ್ನಿಟ್ಟು ಕೊಂಡು ಆರಂಭಿಸಿದ ಸಂಸ್ಥೆಯೇ ಒಇಆ ಎಂದರೆ, ಓ… ಇದಾ… ವಿಷಯ ಎನ್ನಬೇಡಿ. ಅದಕ್ಕೇ ಮೊದಲು ಹೇಳಿದ್ದು, ಗೊತ್ತಿದ್ದೂ ಗೊತ್ತಾಗದ ಹೆಸರು ಇದು ಎಂದು.