Tuesday, 10th December 2024

ಮಾಲಿನ್ಯ ನಿಯಂತ್ರಣ ಮಂಡಳಿಗೆ ಡಾ. ಆಚಾರ್ಯರಲ್ಲದೆ ಬೇರೆ ಬೇಕೆ?

ಅಭಿಪ್ರಾಯ

ಜೆ.ಎಂ. ಇನಾಂದಾರ್,

ಇತ್ತೀಚೆಗೆ ಉಚ್ಚ ನ್ಯಾಾಯಾಲಯದ ಆದೇಶ ಪಾಲಿಸಲು ಶಾಸಕ (ಅನರ್ಹ) ಸುಧಾಕರ ರಾಜೀನಾಮೆ ನೀಡಿದ್ದಾರೆ. ಹಾಗಾಗಿ ಅವರು ಕಾರ್ಯನಿರ್ವಹಿಸುತ್ತಿಿದ್ದ ಕರ್ನಾಟಕ ರಾಜ್ಯದ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಸ್ಥಾಾನಕ್ಕೆೆ ಸೂಕ್ತ ವ್ಯಕ್ತಿಿಯನ್ನು ನೇಮಕ ಮಾಡುವದು ಅತ್ಯಂತ ತುರ್ತು ಅಗತ್ಯವಾಗಿದೆ.

ಮಾಲಿನ್ಯ ನಿಯಂತ್ರಣ ಮಂಡಳಿ ಮೂರು ಮುಖ್ಯ ಕರ್ತವ್ಯಗಳನ್ನು ನಿಭಾಯಿಸುತ್ತದೆ. ಪರಿಸರ ರಕ್ಷಣೆಗಾಗಿ ಕಾನೂನುಗಳನ್ನು ರೂಪಿಸುವದು ಕಾನೂನುಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವದು. ಕಾನೂನುಗಳನ್ನು ಉಲ್ಲಂಸುವವರನ್ನು ಗುರುತಿಸಿ ಕ್ರಮ ಕೈಗೊಳ್ಳುವದು.

ಇತ್ತೀಚಿನ ಸಂಕೀರ್ಣ ವ್ಯವಸ್ಥೆೆಯಲ್ಲಿ ಪರಿಸರ ರಕ್ಷಣೆ ಅತ್ಯಂತ ಸೂಕ್ಷ್ಮ ಮತ್ತು ಸವಾಲಿನ ವಿಷಯವಾಗಿದೆ. ಪರಿಸರ ರಕ್ಷಣೆ ಹಾಗೂ ಔದ್ಯಮಿಕ ಪ್ರಗತಿಗಳು ಪರಸ್ಪರ ವಿರುದ್ಧ ದಿಕ್ಕಿಿನಲ್ಲಿ ಎಳೆಯುವ ಬಲವಾದ ಶಕ್ತಿಿಗಳಂತೆ ವರ್ತಿಸುತ್ತಿಿವೆ. ಔದ್ಯಮಿಕ ಪ್ರಗತಿಯನ್ನು ಒಂದು ನಿರಂಕುಶ ಪ್ರವೃತ್ತಿಿಯಾಗಿಸಿಬಿಟ್ಟರೆ ಅದು ಪರಿಸರ ವಿನಾಶಕ್ಕೂ ಹಾಗೂ ಕೊನೆಗೆ ಮನುಕುಲದ ಅಂತ್ಯಕ್ಕೂ ನಾಂದಿ ಹಾಡುತ್ತದೆ.

ಹಾಗೆಯೇ ಪರಿಸರ ನಾಶವಾಗದಂತೆ ಔದ್ಯಮಿಕ ಪ್ರಗತಿಯನ್ನು ಮುನ್ನಡೆಸುವುದೂ ಆಗಬೇಕಾದ ಕೆಲಸ. ಇಲ್ಲದೇ ಇದ್ದರೆ ಬೆಳೆಯುತ್ತಿಿರುವ ಜನಸಂಖ್ಯೆೆಗೆ ಅಗತ್ಯವಾದ ಸೌಲಭ್ಯಗಳು ಹಾಗೂ ಉದ್ಯೋೋಗಾವಕಾಶಗಳು ಕುಂಠಿತವಾಗುತ್ತದೆ. ಇದು ಸಮಾಜದಲ್ಲಿ ಅಶಾಂತಿಯನ್ನೂ ಕ್ಷೋಭೆಯನ್ನೂ ಹುಟ್ಟುಹಾಕುವುದು ನಿರೀಕ್ಷಿಿತ.

ಪರಿಸರದ ರಕ್ಷಣೆಯೊಂದಿಗೆ ಸಾರ್ವಜನಿಕ ಆರೋಗ್ಯದೊಂದಿಗೂ ತಳುಕು ಹಾಕಿಕೊಂಡಿರುವ ಗಂಭೀರ ವಿಷಯ ಇದಾಗಿರುವುದರಿಂದ ಮಂಡಳಿಯ ಅಧ್ಯಕ್ಷರಾಗಿರುವವರು, ರೋಗಾಣುಗಳು, ರೋಗಗಳ ವಾಹಕಗಳು ರೋಗಗಳ ಸಾಂಕ್ರಾಾಮಿಕತೆ ಇತ್ಯಾಾದಿ ವಿಷಯಗಳ ಬಗ್ಗೆೆ ತಕ್ಕ ಮಟ್ಟಿಿನ ಜ್ಞಾನವನ್ನು ಹೊಂದಿರುವದು ಅಗತ್ಯ. ಇದಲ್ಲದೆ ಬೆಂಗಳೂರಿನಂತಹ ಬೃಹತ್ ನಗರಗಳ ಕಸ ವಿರ್ವಹಣೆಯಂತಹ ವಿಷಯಗಳ ಬಗ್ಗೆೆ ಜ್ಞಾನ ಹಾಗೂ ಅನುಭವ ಹೊಂದಿರುವದು ಅತ್ಯಂತ ಅವಶ್ಯಕವಿರುತ್ತದೆ.

ಇತ್ತಿಿಚಿನ ದಿನಗಳಲ್ಲಿ ನಿಗಮ ಮಂಡಳಿಗಳ ಅಧ್ಯಕ್ಷತೆ ಒಂದು ಪ್ರತಿಷ್ಠೆೆಯ ವಿಷಯವಾಗಿದ್ದು ರಾಜಕೀಯ ಕಾರಣಗಳಿಗಾಗಿ ವ್ಯಕ್ತಿಿಗಳನ್ನು ಅಲ್ಲಿ ಪ್ರತಿಷ್ಠಾಾಪಿಸುವದು ವಾಡಿಕೆಯಾಗಿದೆ. ಇಂತಹ ನೇಮಕಗಳು (ಅರ್ಹತೆ ಇಲ್ಲದ) ನ್ಯಾಾಯಾಲಯಗಳಲ್ಲಿ ಪ್ರಶ್ನಿಿಸಲ್ಪಟ್ಟು ನಂತರ ನ್ಯಾಾಯಾಲಯದ ತೀರ್ಪಿನಂತೆ ಅಸಿಂಧು ಎಂದು ನಿರ್ಣಯಿಸಲ್ಪಟ್ಟು ಸರಕಾರಗಳನ್ನು ಮುಜುಗರಕ್ಕೀಡು ಮಾಡುತ್ತವೆ. ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಸ್ಥಾಾನವು ಒಂದು ಸಾಂವಿಧಾನಿಕ ಹುದ್ದೆಯಾಗಿದ್ದು, ಅಧ್ಯಕ್ಷರಿಗೆ ವಿಷಯ ಪರಿಣತಿ ಇರಬೇಕಾಗುತ್ತದೆ.

ಯಡಿಯೂರಪ್ಪನವರ ಸರಕಾರಕ್ಕೆೆ ಈ ವಿಷಯದಲ್ಲಿ ತುರ್ತು ನಿರ್ಣಯ ಕೈಗೊಳ್ಳುವದು ನ್ಯಾಾಯಾಲಯದ ಸೂಚನೆಯಂತೆ ಅನಿವಾರ್ಯವಾಗಿದೆ. ಬಗಲಲ್ಲಿ ಬೆಣ್ಣೆೆಯಿಟ್ಟುಕೊಂಡು ತುಪ್ಪಕ್ಕಾಾಗಿ ಊರೆಲ್ಲ ಹುಡುಕಿದರು ಎಂಬಂತೆ ಈ ಸ್ಥಾಾನಕ್ಕೆೆ ಬಿಜೆಪಿಯಲ್ಲಿ ಎಲ್ಲ ರೀತಿಯಿಂದಲೂ ಸೂಕ್ತರಾದ ಡಾ.ವಾಮನ ಆಚಾರ್ಯ ಇದ್ದಾಾರೆ. ಡಾ.ಆಚಾರ್ಯರ ನೇಮಕವನ್ನು ಮೂರು ರೀತಿಯಾಗಿ ಸಮರ್ಥಿಸಬಹುದು. ಮೊದಲನೆಯದಾಗಿ ಅವರು ಎಂಬಿಬಿಸ್ ಪದವೀಧರರು. ಕಸ ನಿರ್ವಹಣೆಯಲ್ಲಿ ಸುಮಾರು 30 ವರ್ಷಗಳಿಂದ ವೈಯಕ್ತಿಿಕ ನೆಲೆಯಲ್ಲಿ ತೊಡಗಿಕೊಂಡಿದ್ದು ಅಪಾರ ಅನುಭವ ಹೊಂದಿದ್ದಾರೆ. ಸ್ವಂತ ಒಬ್ಬ ಉದ್ಯಮಿಯಾಗಿರುವುದರಿಂದ ಕ್ಷೇತ್ರದ ಸಮಸ್ಯೆೆಗಳನ್ನು ಬಲ್ಲವರಾಗಿದ್ದಾರೆ.

ಹಿಂದೆ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಬಿಬಿಎಂಪಿ ಇಂದಲೇ 6 ಕಸನಿರ್ವಹಣಾ ಕೇಂದ್ರಗಳ ಮೂಲ ಸೌಕರ್ಯ ನಿರ್ಮಿಸಿದ್ದರು. ಪರಿಸರ ನಿರ್ವಹಣೆಯ ಬಗೆಗಿನ ಕಾನೂನುಗಳ ಅಧ್ಯಯನ ಕೂಡ ಅವರ ಆಸಕ್ತಿಿಯ ವಿಷಯ. ಅವರ ಅಪಾರ ಅನುಭವವನ್ನು ಮನಗಂಡು ಕೇಂದ್ರ ಸರಕಾರ ದಕ್ಷಿಣ ಭಾರತದ ರಾಜ್ಯಗಳ ಪರಿಸರ ನಿರ್ವಹಣಾ ಸಮಿತಿಯಲ್ಲಿ ಸದಸ್ಯರನ್ನಾಾಗಿ ನೇಮಿಸಿದೆ.

ಆರ್‌ಎಸ್‌ಎಸ್ ಸಂಘಟನೆಯ ಹಿನ್ನೆೆಲೆ ಹಾಗೂ ಹಿರಿತನಗಳ ಅನುಕೂಲವೂ ಅವರಿಗೆ ಇದೆ. ವಾಮನಾಚಾರ್ಯರು ಶುದ್ಧಹಸ್ತರು, ಉತ್ತಮ ಚಾರಿತ್ರ್ಯ ಗಂಭೀರ ನಡೆವಳಿಕೆಯವರು, ಕರ್ನಾಟಕದಲ್ಲಿ ಬಿಜೆಪಿಯನ್ನು ಕಟ್ಟಿಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದವರೂ ಆಗಿದ್ದಾರೆ. ಆದ್ದರಿಂದ ಬಿಜೆಪಿ ಪಕ್ಷ ಸಬೂಬುಗಳನ್ನು ಹೇಳದೆ ಅವರನ್ನು ಕರ್ನಾಟಕ ಮಾಲಿನ್ಯ ಮಿಯಂತ್ರಣ ಮಂಡಳಿಯ ಅಧ್ಯಕ್ಷರನ್ನಾಾಗಿ ನೇಮಿಸಿ ಬಿಜೆಪಿಯು ಪ್ರತಿಭೆ ಹಾಗೂ ಉತ್ತಮ ಕಾರ್ಯಕರ್ತರನ್ನು ಗುರುತಿಸುವ ಪಕ್ಷವಾಗಿದೆ ಎನ್ನುವ ತನ್ನ ಕೀರ್ತಿಯನ್ನು ಉಳಿಸಿಕೊಳ್ಳಬೇಕು.