Friday, 13th December 2024

ಬೆಳೆದಿದ್ದನ್ನ ಮಾರೋ ರೈತರ ಕಷ್ಟ – ’ಮಂಡಿ’ನೋವು

ತುಂಟರಗಾಳಿ

ಸಿನಿಗನ್ನಡ

ಸೋಷಿಯಲ್ ಮೀಡಿಯಾಗಳಲ್ಲಿ ಅದರಲ್ಲೂ ಫೇಸ್‌ಬುಕ್‌ನಲ್ಲಿ ಈಗ ದರ್ಶನ್ ಅಭಿನಯದ ಕ್ರಾಂತಿ ಸುದ್ದಿ ಮಾಡುತ್ತಿದೆ.
ನೆನಪಿರಲಿ, ನಾನು ಹೇಳಿದ್ದು, ಸೋಷಿಯಲ್ ಮೀಡಿಯಾಗಳಲ್ಲಿ ಮಾತ್ರ. ಯಾಕಂದ್ರೆ, ಎಲ್ಲರಿಗೂ ಗೊತ್ತಿರುವಂತೆ ದರ್ಶನ್ ಮೀಡಿಯಾಗಳ ಬಗ್ಗೆ ಅವಾಚ್ಯವಾಗಿ ಮಾತನಾಡಿ, ಮೀಡಿಯಾಗಳನ್ನು ಎದುರು ಹಾಕಿಕೊಂಡಿದ್ದಾರೆ.

ಮೀಡಿಯಾಗಳು ಅವರನ್ನು ಬ್ಯಾನ್ ಮಾಡಿದ್ದಾರೆ. ಆದರೆ, ದರ್ಶನ್ ಅವರೇ ಹೇಳುವಂತೆ ಇದರಿಂದ ಅವರಿಗೇನೂ ಲಾಸ್ ಆಗಿಲ್ಲ. ಆದರೆ ಅವರ ಈ ಬಿಡು ಬೀಸು ವರ್ತನೆಯಿಂದ ಲಾಸಾಗುತ್ತಿರೋದು ಮಾತ್ರ ಬೀಸು ಸುರೇಶ್ ಅವರಂಥ ದರ್ಶನ್ ಚಿತ್ರಗಳ ನಿರ್ಮಾಪಕರಿಗೆ. ದರ್ಶನ್ ಅವರೇನೋ ಈಗಲೂ ಲೋಕಲ್ ಚಾನಲ್‌ಗಳಲ್ಲಿ ಕೂತು, ನಾನ್ ಯಾರಿಗೂ ಕಾಕಾ ಹೊಡೆಯೊಲ್ಲ ಅಂತ ಸುಲಭವಾಗಿ ಹೇಳಿಬಿಡ್ತಾರೆ.

ಆದ್ರೆ, ನಮ್ಮ ಬಿ ಸುರೇಶ್ ಕಾಕಾ ಅವರಿಗೆ ಇದರಿಂದ ಎಷ್ಟು ತೊಂದರೆ ಆಗ್ತಿದೆ ಅಂತ ಅವರಿಗೇನು ಗೊತ್ತು. ಪಾಪ, ಕ್ರಾಂತಿ ನಿರ್ಮಾಪಕಿ ಶೈಲಜಾ ನಾಗ್ ಅವರು ಚಿತ್ರಕ್ಕೆ ಪ್ರಚಾರವಿಲ್ಲದೆ, ತಮ್ಮ ಚಿತ್ರವನ್ನು ಉಳಿಸ್ತಾ ಇರೋದು ನೀವು, ನಿಮಗೆಲ್ಲರಿಗೂ ಧನ್ಯವಾದ ಅಂತ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿ ಗಳಿಗೆ ಹೇಳಿ ಸಮಾಧಾನ ಮಾಡಿಕೊಳ್ತಾ ಇದ್ದಾರೆ.

ಏನೇ ಆದರೂ, ಕ್ರಾಂತಿಗೆ ಪ್ರಚಾರದ ವಿಷಯದಲ್ಲಿ ಲಾಸ್ ಆಗಿರೋದು ನಿಜ. ದರ್ಶನ್ ಅಭಿಮಾನಿಗಳು ಏನೇ ಹಬ್ಬ ಮಾಡಬಹುದು. ಆದ್ರೆ, ಇವರು ಏನೇ ಪ್ರೋಗ್ರಾಮ್ ಮಾಡಿದರೂ ಅದೆಲ್ಲವೂ ಕಾಣಿಸೋದು, ಫೇಸ್‌ಬುಕ್‌ನಲ್ಲಿ. ಯಾಕಂದ್ರೆ ಮೀಡಿಯಾಗಳು ಅದನ್ನು ಕವರ್ ಮಾಡಲ್ಲ. ಅಷ್ಟೇ ಅಲ್ಲ, ತಮ್ಮ ಚಾನೆಲ್ ನಲ್ಲಿ ಯಾರಾದ್ರೂ ದರ್ಶನ್ ಬಗ್ಗೆ ಮಾತಾಡಿದ್ರೆ, ಅದನ್ನು ‘ಕವರ್’ ಮಾಡೋ ಮಟ್ಟಕ್ಕೆ ಮೀಡಿಯಾಗಳು ದರ್ಶನ್ ಅವರನ್ನು ದೂರ ಇಟ್ಟಿವೆ.

ಹಾಗಾಗಿ, ಈಗ, ಸೋಷಿಯಲ್ ಮೀಡಿಯಾದಲ್ಲಿ ಇಲ್ಲದೇ ಇರೋರಿಗೆ ಕ್ರಾಂತಿ ಅಂತ ಒಂದ್ ಸಿನಿಮಾ ಬರ್ತಿದೆ ಗೊತ್ತಾ
ಅಂತ ಹೇಳಬೇಕಾದ ಪರಿಸ್ಥಿತಿ ಇದೆ. ದರ್ಶನ್ ಅವರೇನೋ ನಂದ್ ಯಾರೂ ಏನೂ ಕಿತ್ಕೊಳ್ಳೊಕಾಗಲ್ಲ ಅಂತ ಆರಾಮಾಗಿ ಹೇಳಿಬಿಡ್ತಾರೆ. ಆದರೆ, ದರ್ಶನ್ ಅವರ ಸಿನಿಮಾಗಳ ನಿರ್ಮಾಪಕರು ಇದರಿಂದ ಕಷ್ಟ ಅನುಭವಿಸಬೇಕಾಗಿ ಬಂದಿರೋದು ಮಾತ್ರ ನಿಜ.

ಲೂಸ್ ಟಾಕ್
ನರೇಂದ್ರ ಮೋದಿ (ಕಾಲ್ಪನಿಕ ಸಂದರ್ಶನ)
ಏನ್ ಸಾರ್, ೫ ವರ್ಷದ ಹಿಂದೆ, ಸ್ವಾತಂತ್ರೋತ್ಸವದ 75ನೇ ವರ್ಷದ ಆಚರಣೆ ಹೊತ್ತಿಗೆ, 2022ರಲ್ಲಿ, ಪ್ರಧಾನ ಮಂತ್ರಿ ಆವಾಸ್ ಯೋಜನಾ ಅಡಿಯಲ್ಲಿ ಎಲ್ಲರಿಗೂ ಸ್ವಂತ ಮನೆ ಇರುತ್ತೆ ಅಂತ ಹೇಳಿದ್ರಿ, ಏನಾಯ್ತು?
-ಅಯ್ಯೋ, ನಾನು ಏನ್ ಹೇಳಿದ್ರೂ ಅದು ಮಾತಲ್ಲಿ ಮಾತ್ರ. ಹಂಗಾಗಿ ಅವತ್ತು ನಾನು ಹೇಳಿದ್ದು, ‘ಪ್ರಧಾನ ಮಂತ್ರಿ ಆವಾಸ್’ ಯೋಜನಾ ಅಲ್ಲ, ‘ಪ್ರಧಾನಿ ಮಂತ್ರಿ ಆವಾಜ’ ಯೋಜನಾ.

ಓ, ಹಂಗೆ, ಹೌದು ಬಿಡಿ, ನಿಮಗೆ ವಾಕ್ ಸ್ವಾತಂತ್ರ್ಯ ಜಾಸ್ತಿನೇ ಇದೆ. ಅದ್ಸರಿ, ಸ್ವಾತಂತ್ರ್ಯ ದಿನಾಚರಣೆವರೆಗೂ ಎಲ್ಲರಿಗೂ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಭಾರತದ ಬಾವುಟ ಹಾಕ್ಕೊಳ್ಳೋಕೆ ಹೇಳಿದ್ದೀರಲ್ಲ ಅದೇನು ?
-ಅದು ಸ್ವತಂತ್ರ ಅಲ್ಲ, ಜನರನ್ನು ನಮ್ಮ ಬುಟ್ಟಿಗೆ ಹಾಕಿಕೊಳ್ಳೋಕೆ ನಾವು ಮಾಡೋ ತಂತ್ರ.

ಸರಿ ಹೋಯ್ತು, ಆದ್ರೆ ಡಿಪಿಯಲ್ಲಿ ನಮ್ಮ ಬಾವುಟ ಹಾಕಿಕೊಳ್ಳೋದ್ರಿಂದ ಏನು ಲಾಭ?
-ಏನು ನಷ್ಟ ಹೇಳಿ? ಯಾವಾಗ್ಲೂ ಬರೀ ಕಾಗೆ ಹಾರಿಸ್ತೀರ ಅಂತ ನಮ್ಮ ಮೇಲೆ ಆರೋಪ ಮಾಡ್ತಾರೆ. ಅದಕ್ಕೇ ಈ ಸಲ ಬಾವುಟ ಹಾರಿಸ್ತಾ ಇದ್ದೀವಿ..ತಪ್ಪಾ..?

ಹೋಗ್ಲಿ ಬಿಡಿ, ಅಂದಹಾಗೆ, ಕರ್ನಾಟಕದಲ್ಲಿ ನಡೀತಾ ಇರೋ ಕೋಮು ಗಲಭೆ ಬಗ್ಗೆ ಬಿಜೆಪಿ ಪಕ್ಷದ ಪರವಾಗಿ ಏನು ಹೇಳ್ತೀರಾ? 
-ನಂಗೇನೂ ಗೊತ್ತಿಲ್ಲ, ಸ್ವಲ್ಪ ಪ್ರಮೋದ್ ಮುತಾಲಿಕ್ ಅವರನ್ನ ಕೇಳಿ ಹೇಳ್ತೀನಿ ಇರಿ.

ಬಿಜೆಪಿ ಪಕ್ಷದ ಪರವಾಗಿ ಅವರೇನು ಹೇಳ್ತಾರೆ? ಅವರಿಗೆ ಕೊಟ್ಟ ಸೆಕ್ಯುರಿಟಿ, ಗನ್ ಪರವಾನಗಿಯನ್ನೂ ಕಿತ್ತುಕೊಂಡಿ ದ್ದೀರಂತೆ..

-ಆಪರೇಶನ್ ಗಂಗಾ ಥರ ಅದು ಆಪರೇಶನ್ ಗನ್-ಗಾ ಕಣ್ರೀ. ಅಲ್ದೇ, ಅವರೇನು ತಮ್ಮನ್ನ ಅಜಯ್ ದೇವ್‌ಗನ್ ಅಂದ್ಕೊಂಡಿzರಂತ, ಯಾವಾಗ್ಲೂ ಗನ್ ಇಟ್ಕೊಂಡ್ ಓಡಾಡೋಕೆ?

ನೆಟ್ ಪಿಕ್ಸ್
ಖೇಮು ಮತ್ತು ಖೇಮುಶ್ರೀ ಮದುವೆ ಆಗಿ 5 ವರ್ಷ ಆಗಿದ್ರೂ ಅವರಿಗೆ ಮಕ್ಕಳಾಗಿರಲಿಲ್ಲ. ಈ ವಿಷಯಕ್ಕೆ ಇಬ್ಬರೂ ತುಂಬಾ ಬೇಸರದಲ್ಲಿದ್ದರು. ಇಬ್ಬರೂ ತಮಗೆ ಗೊತ್ತಿರೋ ಎಲ್ಲಾ ಡಾಕ್ಟರ್‌ಗಳು, ಎಲ್ಲಾ ದೇವರುಗಳನ್ನೂ ಸಂಪರ್ಕ ಮಾಡಿದ್ದರು. ಆದರೆ
ಮಕ್ಕಳು ಮಾತ್ರ ಆಗಲೇ ಇಲ್ಲ. ಹೀಗೆ ಒಂದು ದಿನ ಇಬ್ಬರೂ ಮಾರ್ಕೆಟ್‌ನಲ್ಲಿ ಹೋಗುತ್ತಿರುವಾಗ ಅಲ್ಲಿ ಖೇಮುಶ್ರೀಯ ತವರು ಮನೆಗೆ ಬರುತ್ತಿದ್ದ ಪೂಜಾರಿಯೊಬ್ಬ ಆಕೆಯನ್ನು ಗುರುತು ಹಿಡಿದು ಮಾತನಾಡಿಸಿದರು.

ಎಲ್ಲಾ ಸೌಖ್ಯನೇನಮ್ಮ ಎಂದು ಅವರು ಕೇಳಿದಾಗ ಖೇಮುಶ್ರೀ, ಜೀವನದಲ್ಲಿ ಎಲ್ಲವೂ ಸರಿ ಇದೆ, ಆದ್ರೆ ಇನ್ನೂ ಮಕ್ಕಳಾಗಿಲ್ಲ ಎಂಬ ಕೊರಗನ್ನು ಹೇಳಿಕೊಂಡಳು. ಅದಕ್ಕೆ ಪೂಜಾರಿ, ಯೋಚನೆ ಮಾಡಬೇಡಮ್ಮ, ನಾನು ಕಾಶಿಗೆ ಹೋಗ್ತಾ ಇದ್ದೀನಿ, ಅಲ್ಲಿ ದೇವರ ಸನ್ನಿಽಯಲ್ಲಿ ನಿನ್ನ ಹೆಸರಲ್ಲಿ ಒಂದು ದೀಪ ಹಚ್ತೀನಿ. ಎಲ್ಲ ಸರಿ ಹೋಗುತ್ತೆ ಅಂದ್ರು. ಅದಾಗಿ 5 ವರ್ಷ ಆಯ್ತು. ಒಂದು ದಿನ ಆ ಪೂಜಾರಿಯ ಮನೆ ಬಾಗಿಲು ಯಾರೋ ಬಡಿದಂತಾಯ್ತು.

ಪೂಜಾರಿ ಎದ್ದು ಹೋಗಿ ಬಾಗಿಲು ತೆರೆದರೆ ಖೇಮು ನಿಂತಿದ್ದ. ಗುರುತು ಹಿಡಿದ ಪೂಜಾರಿ ಒಳಗೆ ಕರೆದು ಮಾತನಾಡಿಸಿದರು. ಮಕ್ಕಳಾದ್ವಾ? ಅಂತ ಪೂಜಾರ್ರ‍ು ಕೇಳಿದ ತಕ್ಷಣ ಖೇಮು ಪೂಜಾರ್ರ‍ ಕೈಯಲ್ಲಿ 25 ಸಾವಿರ ಹಣ ಇಟ್ಟು, ದಯವಿಟ್ಟು ಇನ್ನೊಮ್ಮೆ ಕಾಶಿಗೆ ಹೋಗಿ ಬನ್ನಿ ಪೂಜಾರ್ರ‍ೇ ಅಂದ. ಯಾಕಪ್ಪಾ ಇನ್ನೂ ಮಕ್ಕಳಾಗಲಿಲ್ವಾ? ಅಂತ ಕೇಳಿದ್ದಕ್ಕೆ ಖೇಮು ಹೇಳಿದ ನೀವೇನೋ ಕಾಶಿಗೆ ಹೋಗಿ ದೀಪ ಹಚ್ಚಿ ಬಂದ್ರಿ, ಆದ್ರೆ ಯಾವನೋ ಬಡ್ಡೀಮಗ ಇನ್ನೂ ಅದಕ್ಕೆ ಡೈಲಿ ಎಣ್ಣೆ ಹಾಕ್ತಾ ಇದ್ದಾನೆ ಅನ್ಸುತ್ತೆ.

ಖೇಮುಶ್ರೀ ಈಗಾಗ್ಲೇ 3 ಸಲ ಅವಳಿ ಜವಳಿ ಮಕ್ಕಳನ್ನ ಹೆತ್ತಿzಳೆ. ಇನ್ನು ನನ್ನ ಕೈಲಿ ತಡ್ಕೊಳ್ಳೋಕಾಗಲ್ಲ. ಮೊದ್ಲು, ಆ ಹೋಗಿ ಆ ದೀಪ ಆರಿಸಿ ಬನ್ನಿ.

ಲೈನ್ ಮ್ಯಾನ್

ಭೂಗೋಳ ರಹಸ್ಯ
-ಭೂಮಿ ‘ಗುಂಡು’ ಗುಂಡಾಗಿದೆಯಂತೆ…ಅದಕ್ಕೇ ಬಡ್ಡಿಮಗಂದು ಟೈಟ್ ಆಗಿ ‘ತಿರುಗುತ್ತೆ’.

ಮಿತ್ರರೇ ಅಂತ ಮಾತಾಡಿ ಮೋಸ ಮಾಡುವವರಿಗೆ
Happy fraud ship day

ಕುಡುಕರ ಸ್ವಗತ
-ಕುಡುಕರಿಗೆ ಒಂದು ಸೆಪರೇಟ್ ಧರ್ಮ ಬೇಕು..‘ಪ್ರeವಂತ’ರ ಲೋಕ ನಮಗೆ ಪರಮ ಬೋರು.

ಮನೆ ಕೆಲಸದವಳು ಪಕ್ಕದ ಮನೆಯವರ ಬಗ್ಗೆ ‘ಕಿವಿ’ ಊದಿದರೂ ಅದು..
-‘ಬಾಯಿ’ ಮಾತು

ಬ್ರೇಕ್ ಅಪ್, ಡೈವೋರ್ಸ್ ಆಗಿ ಬಿಟ್ಟು ಹೋಗುವಾಗ ಒಬ್ಬರ ಮೇಲೆ ಒಬ್ಬರು ಸಿಟ್ಟಿನಿಂದ ಆಡುವ ಮಾತುಗಳು
-Bye ಗುಳ

ರೈತರಿಗೆ ಬೆಳೆಯೋದಕ್ಕಿಂತ ಬೆಳೆದಿದ್ದನ್ನ ಮಾರೋದೇ ಕಷ್ಟ. ಅದೊಂಥರಾ..
-‘ಮಂಡಿ’ ನೋವು

ನಶೆದಾತರಿಗೆ ತೋರಿಸೋ ತಾರತಮ್ಯ
-ಎಣ್ಣೆನ ಪರಮಾತ್ಮ ಅಂತ ಗೌರವದಿಂದ ಕರೀತೀವಿ. ಆದ್ರೆ ಸಿಗರೇಟ್‌ನ ಮಾತ್ರ ಸೇದಿದ ಮೇಲೆ ಕಾಲಲ್ಲಿ ಹೊಸಕಿ ಹಾಕ್ತೀವಿ.

ಅಸಂಬದ್ಧ ಸಂಬಂಧಗಳು

-ತರಕಾರಿ ಅಂಗಡಿಯಲ್ಲಿ ನಾವು, ಅಕ್ಕಾ ಈರುಳ್ಳಿ ಹೆಂಗೆ ರೇಟು? ಅಂತೀವಿ. ಅವ್ರು ೧೦೦ ರುಪಾಯಿಗೆ ೬ ಕೆಜಿ ಅಣ್ಣಾ ಅಂತಾರೆ.

ಕಾಫಿ ನಾಡು ಚಂದುನ ಮೀಡಿಯಾ, ಸೋಷಿಯಲ್ ಮೀಡಿಯಾದಲ್ಲಿ ತೋರಿಸ್ತಾ ಇರೋ ರೀತಿ ನೋಡಿ ಅನ್ನಿಸಿದ್ದು
-ಮೊದ್ಲೆಲ್ಲ, ರಸ್ತೇಲಿ ಕೋತಿ ಆಡ್ಸಿ, ಮಜಾ ತಗೊಂಡು, ಮಜಾ ಕೊಡ್ತಿದ್ರು. ಈಗ ಇಂಥೋರನ್ನ

ಹೆಂಡ್ತಿ ಮಾಡಿದ ಕಬಾಬ್ ಚೆನ್ನಾಗಿಲ್ಲ ಅಂತ ಪತಿ ಆತ್ಮಹತ್ಯೆ
-ಅ ಹೆಂಡ್ತಿ ಊರ್ ತುಂಬಾ ಫ್ಲೆಕ್ಸ್ ಹಾಕ್ಸಿದ್ದಾಳಂತೆ, ‘ಮತ್ತೆ ಹುಟ್ಟಿ ಬಾ, ಬರ್ಬೇಕಾದ್ರೆ ಚಿಕನ್ ತಗೊಂಡ್ ಬಾ, ಈ ಸಲ ಕಬಾಬ್ ಚೆನ್ನಾಗ್ ಮಾಡ್ಕೊಡ್ತೀನಿ’