ತುಂಟರಗಾಳಿ
ಸಿನಿಗನ್ನಡ
ನಿರ್ದೇಶಕ ಮಠ ಗುರುಪ್ರಸಾದ್ ವರನ್ನು ನಟ ಗುರುಪ್ರಸಾದ್ ಅಂದ್ರೆ ಸರಿ ಅಂತ ಇತ್ತೀಚೆಗೆ ಮತ್ತೊಮ್ಮೆ ಪ್ರೂವ್ ಆಗಿದೆ. ಜಗ್ಗೇಶ್ ಅವರೊಂದಿಗಿನ ತಮ್ಮ
ಹೊಸ ಚಿತ್ರ ರಂಗನಾಯಕದ ಬಿಡುಗಡೆ ಸಮಯದಲ್ಲಿ ಮತ್ತೊಮ್ಮೆ ತಲೆಹರಟೆ ಮಾಡಲು ಹೋಗಿ ಹಲವರ ಕೆಂಗಣ್ಣಿಗೆ ಗುರಿ ಆಗಿದ್ದಾರೆ ಗುರು. ಚಿತ್ರದಲ್ಲಿ ಹಲವಾರು ಸಿನಿಮಾ ಮಂದಿಯನ್ನು ಅನವಶ್ಯಕ ವಾಗಿ ಕಾಲೆಳೆಯುವ ಸಂಭಾಷಣೆಗಳಿವೆ. ಅದು ವಿವಾದ ಆದ್ರೆ ಯಾಕೆ ಬೇಕು ಅಂತ ಆಗಾಗಲೇ ಈ ಚಿತ್ರದ ನಿರ್ಮಾಪಕರು ಮತ್ತು ಜಗ್ಗೇಶ್ ಅವರು, ಅವೆ ಏನಿದ್ರೂ ಗುರುಗೆ ಸೇರಿದ್ದು, ನಾವು ಬರೀ ಅವರು ಹೇಳಿದಂತೆ ಕೇಳಿದ್ದೀವಿ ಅಷ್ಟೇ. ಅದಕ್ಕೆ ಅವರೇ ಜವಾ ಬ್ದಾರಿ ಅಂತ ಆಂಟಿಸಿಪೇಟರಿ ಬೇಲ್ ತೆಗೆದುಕೊಂಡಿದ್ದಾರೆ. ಈ ಚಿತ್ರದಲ್ಲಿ ಆರ್. ಚಂದ್ರು ಅವರನ್ನು ಏಕವಚನದಲ್ಲಿ ಕರೆದು ಸೀಲ್ ಚಂದ್ರು ಅಂತ
ಆಡಿಕೊಂಡಿದ್ದಾರೆ ಗುರು. ಆದರೆ ಆರ್.ಚಂದ್ರು ಅವರಂತೆ ಚಿತ್ರೋದ್ಯಮಕ್ಕೆ ಹಣಕಾಸಿನ ವ್ಯವಹಾರ ಮಾಡಿಕೊಡುವಂಥ ಎಷ್ಟು ಸಿನಿಮಾಗಳನ್ನು ಗುರು ಮಾಡಿದ್ದಾರೆ ಅನ್ನೋದು ಪ್ರಶ್ನೆ.
೫ ವರ್ಷಕ್ಕೊಮ್ಮೆ ಸಿನಿಮಾ ಮಾಡೋ ಗುರು, ಒಂದೇ ಸಲಕ್ಕೆ ೫ ಸಿನಿಮಾ ಅನೌ ಮಾಡೋ ತಾಕತ್ತಿರೋ ಚಂದ್ರು ಅವರ ಬಗ್ಗೆ ಮಾತಾಡಿರೋದು ಹಾಸ್ಯಾ ಸ್ಪದ. ಇನ್ನು ಮಾತಿನ ಭರದಲ್ಲಿ ವೇದಿಕೆಯ ಮೇಲೆ ನಮ್ಮಪ್ಪನ ಹೆಸರು ರಾಜ್‌ಕುಮಾರ್‌ಅಲ್ಲ ಅಂತ ಹೇಳಿ, ರಾಜ್‌ಕುಮಾರ್ ಮಕ್ಕಳಿಗೆ ಎಲ್ಲವೂ ಸುಲಭ ಅನ್ನೋ ಥರದ ಲೂಸ್ ಟಾಕ್ ಮಾಡಿzರೆ. ಜೊತೆಗೆ ಇವರ ಎದ್ದೇಳು ಮಂಜುನಾಥ ಸಿನಿಮಾ ಬಿಡುಗಡೆ ಆಗಿ ಒಂದು ತಿಂಗಳ ನಂತರ ಬಿಡುಗಡೆ ಆದ ಪುನೀತ್ ಅವರ ರಾಜ್ ಚಿತ್ರ ದಿಂದ ನಿರ್ಮಾಪಕರಿಗೆ ೬ ಕೋಟಿ ಲಾಸ್ ಆಯ್ತು ಅಂತ ಗ್ಯಾಪಲ್ಲಿ ಸೇರಿಸಿ ಮಾತಾಡಿ ಅದಕ್ಕೂ ಹಲ್ಲು ಕಚ್ಚಿಕೊಳ್ಳುತ್ತಿದ್ದಾರೆ.
ಆದರೆ ಇದನ್ನೆ ನೋಡಿದ ಗಾಂಧಿ ನಗರದ ಮಂದಿ, ಅಯ್ಯೋ, ಇಷ್ಟೇನಾ, ಆವಯ್ಯ, ಕರೋನಾ ಟೈಮಲ್ಲಿ ಮಾತಾಡಿದ್ದು ಕೇಳಿದ್ರೆ, ಇಷ್ಟೊತ್ತಿಗೆ ಹುಚ್ಚಾ ಸ್ಪತ್ರೆಯಲ್ಲಿ ಇರ್ತಾನೆ ಅಂದ್ಕೊಂಡಿದ್ವಿ, ಹೋಗ್ಲಿ ಬಿಡಿ ಅಂತಿದ್ದಾರೆ. ಆದ್ರೆ ಅವರು ಅಂದುಕೊಂಡಿದ್ದು ನಿಜ ಆಗದೇ ಇರೋದು, ಬೇಸರದ ವಿಷಯ.
*
ರಾಮೇಶ್ವರಂ ಬಾಂಬ್ ಮ್ಯಾನ್
ಏನಪ್ಪಾ ನಿಂದು ಕಿಡಿಗೇಡಿ ಬುದ್ಧಿ? ಬೆಂಗಳೂರಲ್ಲಿ ಬಾಂಬ್ ಇಟ್ಟಿದ್ಯಂತಲ್ಲ?
– ಹೌದು ಬೆಂಗಳೂರನ್ನ ಬಾಂಬೆ’ ಮಾಡೋಣ ಅಂತ
ಈವಾಗೇನ್ ಸರಿಯಾಗ್ ಉತ್ರ ಹೇಳ್ತೀಯಾ, ಇ ಪೊಲೀಸರಿಗೆ ಹೇಳಿ ಏರೋಪ್ಲೇನ್ ಹತ್ತಿಸ್ಲಾ?
– ಎಲ್ಲಿಗೆ ಬಾಂಬೆಗಾ?
ಜಾಸ್ತಿ ಆಯ್ತು ನಿಂದು, ಸರಿಯಾಗಿ ಹೇಳು. ಅದೇನೋ ಬ್ಲ್ಯಾ ಆಗಿರೋ ಒಂದು ಬ್ಯಾಟರಿ ಸಿಕ್ಕಿದೆ ಪೊಲೀಸಿನೋರಿಗೆ ಗೊತ್ತಾ?
– ಹೌದು, ಅದನ್ನಿಟ್ಕೊಂಡು, ಬಾಂಬ್ ಇಟ್ಟಿದ್ದು ಯಾರು ಅಂತ ಬ್ಯಾಟರಿ ಹಾಕಿಕೊಂಡು ಹುಡುಕ್ತಾ ಇದ್ದಾರೆ..
ನಿಂಗೇನ್ ಭಯನೇ ಇಲ್ವಾ, ಬಾಂಬ್ ಯಾಕಿಟ್ಟೆ ಅಂತ ಹೇಳು
– ಈ ಟಿವಿ ಚಾನೆಲ್ನೋರಿಗೆ, ಸ್ಫೋಟಕ ಸುದ್ದಿ ಸಿಗಲಿ ಅಂತ ರಾಮೇಶ್ವರಂ ಮೂಲಕ ಕಾಶಿ, ರಾಮೇಶ್ವರದಲ್ಲಿ ಒಂದಷ್ಟು ಜನರ ಸಾಮೂಹಿಕ ತಿಥಿ ಮಾಡಿಸೋಕೆ ಟ್ರೈ ಮಾಡಿದೆ.
ಈಗೇನ್ ಸತ್ಯ ಹೇಳ್ತೀಯಾ ಇಲ್ವಾ?
– ಹೇಳ್ತೀನಿ ಬಿಡು ಗುರೂ. ನೀವಂದುಕೊಂಡಂಗೆ ಏನೂ ಇಲ್ಲ. ಬರೀ ಇಡ್ಲಿ, ಸಾಂಬಾರ್‌ಗೆ ಇ ದುಡ್ ಕಿತ್ಕೊತಾರಲ್ಲ ಅಂತ ಆ ಹೊಟೇಲ್‌ನೋರ ಮೇಲೆ ನಂಗೆ ಬಹಳ ದಿನಗಳಿಂದ ಸಿಟ್ಟಿತ್ತು. ಆ ಸಿಟ್ಟು ಈ ರೀತಿ ಬ್ಲ್ಯಾ ಆಯ್ತು ಅಷ್ಟೇ.
(ಕಾಲ್ಪನಿಕ ಸಂದರ್ಶನ)
*
ನೆಟ್ ಪಿಕ್ಸ್
ಖೇಮು ಒಂದಿನ ಮಧ್ಯಾಹ್ನವೇ ಬಾರಲ್ಲಿ ಕೂತು ಸರಿಯಾಗಿ ಪೆಗ್ ಏರಿಸುತ್ತಿದ್ದ, ಮುಖ, ಕೈ ಕಾಲು, ಮೈಯೆ ಗಾಯಗಳಾಗಿದ್ದವು, ಗೆಳೆಯ ಸೋಮು
ಬಂದು, ’ಏನಾಯ್ತೋ ಇಷ್ಟೊತ್ತಲ್ಲಿ ಕುಡಿತಾ ಇದೀಯಾ, ಇದೇನು ಮೈ ತುಂಬಾ ಗಾಯಗಳು?’ ಅಂತ ಕೇಳಿದ. ಅದಕ್ಕೆ ಖೇಮು, ‘ಇ ಮಗಾ, ಕೆಲವು
ವಿಷಯಗಳನ್ನು ಎಕ್ಸ್‌ಪ್ಲೈನ್ ಮಾಡೋ ಕಾಗಲ್ಲ’ ಅಂದ. ಅಂಥದೇನಾಯ್ತು? ಅಂತ ಸೋಮು ಪ್ರಶ್ನೆ.
ಅದಕ್ಕೆ ಖೇಮು ಶುರು ಮಾಡಿದ ‘ಇವತ್ತು ಬೆಳಗ್ಗೆ ಕೊಟ್ಟಿಗೆಯಲ್ಲಿ ಹಾಲು ಕರೀತಾ ಇದ್ನಾ? ಹಸು ತನ್ನ ಎಡಗಾಲಿನಿಂದ ನನ್ನ ಜಾಡಿಸಿ ಒದ್ದುಬಿಡ್ತು’. ಅದಕ್ಕೆ ಸೋಮು ‘ಇದು ಸಣ್ಣ ವಿಷಯ. ಅದಕ್ಕೆ ಇಷ್ಟೆಲ್ಲ ಬೇಜಾರ್ಯಾಕೆ?’ ಅಂದ. ಖೇಮು ಹೇಳಿದ ‘ಇ ಮಗಾ ಕೆಲವು ವಿಷಯಗಳನ್ನು ಎಕ್ಸ್‌ಪ್ಲೈನ್
ಮಾಡೋಕಾಗಲ್ಲ’. ಮತ್ತಿನ್ನೇ ನಾಯ್ತು? ಸೋಮು ಪ್ರಶ್ನೆ. ‘ನಾನು ಅದರ ಎಡಗಾಲನ್ನು ಒಂದು ಹಗ್ಗದಿಂದ ಪಕ್ಕದ ಇದ್ದ ಕಂಬಕ್ಕೆ ಕಟ್ಟಿ, ಹಾಲು
ಕರೆಯೋಕೆ ಶುರು ಮಾಡಿದೆ. ಅದು ಈ ಬಾರಿ ತನ್ನ ಬಲಗಾಲಿನಿಂದ ನನಗೆ ಹೊಡೀತು’ ಅಂದ ಖೇಮು, ಸರಿ ಇದೂ ಸಣ್ಣ ವಿಷಯಾನೇ ಅಂದ
ಸೋಮು, ಖೇಮು ಮತ್ತೆ ಹೇಳಿದ ‘ಇ ಮಗಾ ಕೆಲವು ವಿಷಯ ಗಳನ್ನು ಎಕ್ಸ್‌ಪ್ಲೈನ್ ಮಾಡೋಕಾಗಲ್ಲ’ ಮತ್ತಿನ್ನೇನಾಯ್ತು? ಸೋಮು ಪ್ರಶ್ನೆ, ಖೇಮು ಮತ್ತೆ ಕಂಟಿನ್ಯೂ ಮಾಡಿದ ‘ಈ ಬಾರಿ ಹಾಲೇನೋ ಕರೆದೆ, ಆದ್ರೆ ಕೊನೆಗೆ ಅದು ತನ್ನ ಬಾಲದಿಂದ ಬಕೆಟ್‌ನಲ್ಲಿದ್ದ ಹಾಲನ್ನೆ ಚೆಲ್ಲಿ ಬಿಡುಡ್ತು’, ‘ಒಂದ್ ಬಕೆಟ್ ಹಾಲು ಹೋಯ್ತು ಅಷ್ಟೇ ತಾನೆ’ ಅಂದ ಸೋಮು.
ಅದಕ್ಕೆ ಖೇಮು ಹೇಳಿದ ‘ಆಮೇಲೆ ಅದರ ಬಾಲವನ್ನು ಹಿಡಿದು, ಪಕ್ಕದಲ್ಲೂ ಹಗ್ಗಸಿಗದ ಕಾರಣ ನನ್ನ ಪ್ಯಾಂಟ್‌ಗೆ ಹಾಕಿದ್ದ ಬೆಲ್ಟ್ ಬಿಚ್ಚಿ ಅದನ್ನು ಕೊಟ್ಟಿಗೆಯ ಚಾವಣಿಗೆ ಕಟ್ಟಿದೆ. ಇನ್ನೇನು ಹಾಲು ಕರೆಯೋಣ ಎಂದು ಕೊಳ್ಳುವಷ್ಟರಲ್ಲಿ ನನ್ನ ಪ್ಯಾಂಟ್ ಸೊಂಟ ದಿಂದ ಕೆಳಗೆ ಜಾರಿಬಿಡ್ತು. ಅದೇ ಸಮಯಕ್ಕೆ ಸರಿಯಾಗಿ ನನ್ನ ಹೆಂಡತಿ ಕೊಟ್ಟಿಗೆಗೆ ಬಂದು ನನ್ನನ್ನು ನೋಡಿ ದಳು. ನಾನ್ ಆವಾಗ್ಲೆ ಹೇಳೇ ಅಲ್ವಾ…ಕೆಲವು ವಿಷಯಗಳನ್ನು ಎಕ್ಸ್‌ಪ್ಲೈನ್
ಮಾಡೋಕಾಗಲ್ಲ’
*
ಲೈನ್ ಮ್ಯಾನ್
ಕಂಪ್ಯೂಟರ್ ಉಪಯೋಗ ಮಾಡುವಾಗಿನ ವೈರುಧ್ಯ
– ನ್ಯೂ ಫೋಲ್ಡರ್ ಕ್ರಿಯೇಟ್ ಮಾಡಿ ಅದನ್ನ ಓಲ್ಡ ಅಂತ ರೀನೇಮ್ ಮಾಡೋದು
ಚಿತ್ರಮಂದಿರಗಳ ಸಮಸ್ಯೆ ಇರೋ ಕರ್ನಾಟಕದಲ್ಲಿ ನಮ್ಮ ಸಿನಿಮಾ ಯಶಸ್ವಿಯಾಗಿ ರಿಲೀಸ್ ಆಗ್ಲಿ ಅಂತ ಸಿನಿಮಾ ಮಂದಿ ಮಾಡಬೇಕಾದ ಯಾಗ
– ಚಿತ್ರಕಾಮೇಷ್ಠಿಯಾಗ
ಸಿನಿಮಾದ ಮೊದಲ ಶೋನಲ್ಲಿ ಪತ್ರಕರ್ತರನ್ನು ಬಿಟ್ಟು ಬೇರೆ ಜನರೇ ಇಲ್ಲದಿದ್ದರೆ ಅದು
– ಜರ್ನಲಿ ಭರಿತ ಪ್ರದರ್ಶನ
ವಾಕಿಂಗ್ ಮಾಡಿ ಮಾಡಿ ಬೋರಾದ ಅನುಭವ
– ‘ವಾಕ’ರಿಕೆ
ಪರ್ಯಾಯ ಸತ್ಯ.
– ಜೇಬಿನಲ್ಲಿ ಬೆಂಕಿಪಟ್ಟಣವೂ ಇದ್ದಾಗ ಲೈಟರ್ ಸರಿಯಾಗಿಯೇ ಕೆಲಸ ಮಾಡುತ್ತದೆ.
ದುಬಾರಿ ಕಾರುಗಳನ್ನು ಇನ್ಸ್ಟಾಲ್ಮೆಂಟ್ ನ ತಗೋಬೇಕು
– ಮೊದಲು, ಟೈರು, ಆಮೇಲೆ ಸೀಟು, ನಂತರ ಸ್ಟಿಯರಿಂಗ್, ಬಾಡಿ, ಎಂಜಿನ್ ಇತ್ಯಾದಿ.
ತುಂಬಾ ಜನಪ್ರಿಯವಾದ ಬ್ಲಾಗ್ ಅನ್ನು ಏನಂತಾರೆ?
– ಬ್ಲಾಗ್‌ಬಸ್ಟರ್
ಸಿನಿಮಾದಲ್ಲಿ ದುಃಖದ ಸನ್ನಿವೇಶದಲ್ಲಿ ದೇವರ ಹಾಡುಹಾಡಿದರೆ ಅದು
– ‘ಶ್ಲೋಕ’ಗೀತೆ
ನಮೋ ಭಾರತ್ ಅಂತ ನರೇಂದ್ರ ಮೋದಿ ಬಗ್ಗೆ ಕನ್ನಡದಲ್ಲಿ ಸಿನಿಮಾ
– ಈ ಸಿನಿಮಾಗೆ ಕ್ಯಾಮೆರಾಮ್ಯಾನ್, ಟoಠ್ಠಿಞಛಿ bಛಿoಜಿಜ್ಞಛ್ಟಿಗಳು ಮೋದಿ ಕಡೆಯವರೇನಾ?
ಉಸೇನ್ ಬೋಲ್ಟ್ ಇಂಡಿಯಾದಲ್ಲಿ ಹುಟ್ಟಿದ್ದಿದ್ರೆ ಇಷ್ಟು ಫೇಮಸ್ ಆಗ್ತಿರಲಿಲ್ಲ
– ಯಾಕಂದ್ರೆ ನಮ್ಮ ಅಪ್ಪ ಅಮ್ಮಂದಿರು ಬರೀ ಓದು, ಓದು ಅಂತಾರೆ. ಓಡು ಓಡು ಅನ್ನಲ್ಲ