Friday, 13th December 2024

ಮನಸುಗಳ ರಿಸೈಕ್ಲಿಂಗ್- ಆಗಲಿ ಸಂತೋಷವೇ ಪಾಲಿಸಿ

ವ್ಯಕ್ತಿತ್ವ

ಡಾ.ಶ್ವೇತಾ ಬಿ.ಸಿ

ಬುದ್ಧನ ನಾಡಿನ ಭೂತಾನಿನ ಸಂತೋಷದ ಪರಿಕಲ್ಪನೆ ಪಾಶ್ಚಿಮಾತ್ಯ ಲಿಟರೇಚರ್‌ಗಿಂತ ಬಹಳ ವಿಶಾಲವಾದದ್ದು. ಹಾಗಾಗಿ ಅವರು ಸಮುದಾಯ, ಮಾನಸಿಕ ಯೋಗಕ್ಷೇಮ, ಸ್ಥಿತಿಸ್ಥಾಪಕತ್ವ , ಉತ್ತಮ ಜೀವನಮಟ್ಟ, ಪರಿಸರ ವೈವಿಧ್ಯತೆ ಹೀಗೆ ಬದುಕನ್ನು ಬರಿಯ ಆರ್ಥಿಕ ಅಂಶಗಳು ಅಥವಾ ಮೆಟೀರಿಯಲ್ ಗೇನ್‌ಸ್‌ಗಳಿಗಷ್ಟೇ ಸೀಮಿತಗೊಳಿಸದೆ ಬದುಕಿನ ಎಲ್ಲಾ ಭಾಗಗಳಿಗೂ ಅನ್ವಯಿಸಿ ಕೊಂಡಿದ್ದಾರೆ.

ಸಂತೋಷ, ಹ್ಯಾಪಿನೆಸ್- ಈ ಪದಗಳನ್ನು ನಾವು ಕೇಳಿದ ತಕ್ಷಣವೇ ಒಂದು ಪಾಸಿಟಿ ವಿಟಿ ನಮ್ಮ ಸುತ್ತಲೂ ಮೂಡುತ್ತದೆ. ಸಂತೋಷದ ಸೆಳೆತವೇ ಹಾಗೆ. ಮ್ಯಾಜಿಕಲ್ ಮ್ಯಾಗ್ನೆಟ್ ತರ ನಮ್ಮನ್ನು ಆಕರ್ಷಿಸುತ್ತಾನೆ ಇರುತ್ತದೆ. ಸಂತೋಷವು ಒಂದು ಪಾಸಿಟಿವ್ ಪ್ಲಸೆಂಟ್ ಎಮೋಷನ್. ಬರೀ ಎಮೋಷನ್ನಾ ಅಂತ ನೋಡಿದ್ರೆ ಅಲ್ಲ – ಅದು ಮನಸ್ಸಿನ ಒಂದು ಧ್ಯಾನಸ್ಥ ಸ್ಥಿತಿ. ಈ ಹ್ಯಾಪಿನೆಸ್ ಬರಿ ಫಿಸಿಕಲ್ ಸೈಕಲಾ ಜಿಕಲ್ ಅಷ್ಟೇ ಅಲ್ಲ ಬದುಕಿನ ಎಲ್ಲ ಹಂತಗಳಿಗೂ ಬೇಕೇ ಬೇಕು.

ಕಲಿಯುವ ಖುಶಿ, ಸಮುದಾಯ ಪ್ರಜ್ಞೆ ಎಲ್ಲರನ್ನು ಒಳಗೊಳ್ಳುವಂತೆ ಬದುಕುವ ಸಹಿಷ್ಣತೆ, ಪರಿಸರ ಪ್ರಜ್ಞೆ ಎಲ್ಲ ಕಡೆ ಸಂತೋಷ ತನ್ನ ಛಾಪನ್ನು ಮೂಡಿಸುತ್ತಾ ಹೋಗುತ್ತದೆ. ನಮ್ಮ ಬದುಕನ್ನ ಇನ್ನೊಂದಿಷ್ಟು ಮತ್ತೊಂದಿಷ್ಟು ಉತ್ತಮಗೊಳಿಸಿ ಕೊಳ್ಳುವ ಪ್ರಕ್ರಿಯೆ ಈ ಸಂತೋಷ. ಎಡ್ ಡಿನರ್ ಅನ್ನುವ ಅಮೆರಿಕದ ಮನೋ ವಿಜ್ಞಾನಿಯೊಬ್ಬರು ಕಳೆದ 25 ವರ್ಷಗಳಿಂದ ಹ್ಯಾಪಿನೆಸ್ ಕುರಿತಾದ ಸಂಶೋಧನೆ ಯಲ್ಲಿ ತೊಡಗಿಸಿಕೊಂಡಿದ್ದಾರೆ.

ವೈಜ್ಞಾನಿಕವಾಗಿ ಸಂತೋಷದ ಕುರಿತಾದ ಸಂಶೋಧನೆ ಮಾಡಿರುವವರಲ್ಲಿ ಮೊದಲಿಗರು. ಇವರನ್ನು ಡಾಕ್ಟರ್ ಹ್ಯಾಪಿನೆಸ್ ಅಂತಲೂ
ಕರೆಯುತ್ತಾರೆ. ಎಡ್ ಡೀನರ್ ಸಂತೋಷದ ಆಲೋಚನೆ ಯನ್ನು ಬ್ಯೂಟಿಫುಲ್ ಆಗಿ ವ್ಯಾಖ್ಯಾನಿಸುತ್ತಾರೆ -ಜೀವನದಲ್ಲಿ ನಮಗಿರಬೇಕಾದ ದೊಡ್ಡ ಒಳನೋಟ ಯಾವುದೆಂದರೆ ಹ್ಯಾಪಿನೆಸ್ ಅನ್ನುವುದು ಕೇವಲ ಒಂದು ಸ್ಥಿತಿಯಲ್ಲ , ಆದರೆ ಅದೊಂದು ಪ್ರೊಸೆಸ್. ಮುಂದುವರಿತಾ ಹೇಳುತ್ತಾರೆ – ಬದುಕಿನ ಹೊಸ ಹೊಸ ಸವಾಲುಗಳನ್ನು ಸರಿಯಾದ ಮನೋಭಾವ ಹಾಗೂ ಚಟುವಟಿಕೆಗಳ ಮೂಲಕ ಕೊಂಡೊಯ್ಯುತ್ತ ಮುಂದುವರೆಯುವುದೇ ಹ್ಯಾಪಿನೆಸ್ ಸಂತೋಷ.

ಸಂತೋಷದ ಜೊತೆಗೆ ನಮ್ಮ ಬದುಕಿಗೆ ಕೆಲವು ಪಾಲಿಸಿ ತತ್ವಗಳು ನಾವು ಹೇಗೆ ಇರಬೇಕು ನಡೆಯಬೇಕು ಅನ್ನುವ ಸ್ಪಷ್ಟನೆಗಳನ್ನು ಕೊಡುವ ಸಂಗತಿಗಳು. ಈ ಪಾಲಿಸಿಗಳು ಒಂದು ಸಂಸ್ಥೆ ಒಂದು ದೇಶ ಒಂದು ಸರ್ಕಾರ ಹೇಗೆ ನಡೆದುಕೊಳ್ಳಬೇಕು ಎನ್ನುವ ಕನ್ಸಿಸ್ಟೆನ್ಸಿ ಯನ್ನು ಅಕೌಂಟಬಿಲಿಟಿಯನ್ನ ಎಫಿಷಿಯೆನ್ಸಿಯನ್ನ ಕ್ಲಾರಿಟಿ ಅನ್ನ ನೀಡುವ ಗೈಡ್ ಲೈನ್ಸ್‌ಗಳಾಗಿರುತ್ತವೆ, ಫಾಲೋ ಮಾಡ್ಲಿಕ್ಕೆ ಇರುವ ಪ್ರಿನ್ಸಿಪಲ್ಸ್ ಗಳಾಗಿರುತ್ತವೆ. ಹಾಗಿದ್ರೆ ಹ್ಯಾಪಿನೆಸ್ ಒಂದು ದೇಶದ ಎಕನಾಮಿಕ್ ಪಾಲಿಯಾದರೆ? ಖುಷಿ, ಸಂತೋಷ ಮನುಷ್ಯನ ಒಂದು
ಪಾಸಿಟಿವ್ ಎಮೋಷನ್. ಮನುಷ್ಯನ ಮಾನಸಿಕ ಯೋಗಕ್ಷೇಮದ ಮೇಲೆ ಬಹಳ ಪೂರಕವಾದ ಪರಿಣಾಮವನ್ನು ಉಂಟುಮಾಡುತ್ತದೆ. ಅಲ್ಟಿಮೇಟ್ಲೀ ಮನುಷ್ಯನ ಎಲ್ಲಾ ಹೋರಾಟಗಳು ತಾನು ಚೆನ್ನಾಗಿರಬೇಕು ನೆಮ್ಮದಿ ಮತ್ತು ಖುಷಿಯಾಗಿರಬೇಕು ಅನ್ನೋದು ನಮ್ಮೆಲ್ಲ ರಿಗೂ ಗೊತ್ತಿರುವ ವಿಷಯ.

ಹಾಗಿದ್ರೆ ಸುಮ್ಮನೆ ಹಾಗೆ ಪೂರ್ವ ಹಿಮಾಲಯದ ಪರ್ವತಶ್ರೇಣಿಯಲ್ಲಿರುವ ಪುಟ್ಟ ದೇಶ ಭೂತಾನ್ ಕಡೆ ತಿರುಗಿ ನೋಡೋಣ. ಗ್ರಾಸ್
ನ್ಯಾಷನಲ್ ಹ್ಯಾಪಿನೆಸ್ (ಜಿಎನ್‌ಎಚ್) ಅನ್ನುವ ಈ ಪುಟ್ಟ ದೇಶದ ದೊಡ್ಡ ಆಲೋಚನೆ ಇಡೀ ಪ್ರಪಂಚವೇ ಭೂತಾನಿನೆಡೆಗೆ ತಿರುಗಿ ನೋಡುವಂತೆ ಮಾಡಿದೆ. ಗ್ರಾಸ್ ನ್ಯಾಷನಲ್ ಹ್ಯಾಪಿನೆಸ್ ಎನ್ನುವ ಪದವನ್ನು ಮೊದಲು ಭೂತಾನ್ ದೇಶದ ನಾಲ್ಕನೇಯ ದೊರೆ ಜಿಗ್ ಮೆ ಸಿಂಗ್ಯೆ ವ್ಯಾಂಗ್ ಚೂಕ್ 1972ರಲ್ಲಿ ಪರಿಚಯಿಸುತ್ತ ‘ಒಂದು ದೇಶದ ಸಮರ್ಥವಾದ ಬೆಳವಣಿಗೆ ಬರೀ ಆರ್ಥಿಕ ಚಟುವಟಿಕೆಗಳಿಗೆ
ಅಷ್ಟೆ ಸೀಮಿತಗೊಳ್ಳದೆ ಸಮಗ್ರ ಪ್ರಗತಿಯ ವಿಧಾನದ ಪರಿಕಲ್ಪನೆಯಲ್ಲಿ ರೂಪುಗೊಳ್ಳಬೇಕು’ ಎಂಬುದಾಗಿ ಪ್ರತಿಪಾದಿಸುತ್ತಾರೆ.

ಅಲ್ಲಿಂದಾಚೆಗೆ ಗ್ರಾಸ್ ನ್ಯಾಷನಲ್ ಹ್ಯಾಪಿನೆಸ್ ಭೂತಾನ್ ದೇಶದ ಆರ್ಥಿಕ ಮತ್ತು ಸಾಮಾಜಿಕ ನೀತಿಗಳ ಮೇಲೆ ಬಹಳ ಪರಿಣಾಮಕಾರಿ ಯಾದ ಪ್ರಭಾವವನ್ನು ಬೀರುತ್ತಾ ಹೋಗುತ್ತದೆ. ಭೂತಾನ್ ೨೦೦೮ರಲ್ಲಿ ಗ್ರಾಸ್ ನ್ಯಾಷನಲ್ ಹ್ಯಾಪಿನೆಸ್ ಎನ್ನುವ ಪರಿಕಲ್ಪನೆಯನ್ನು ತನ್ನ ಸಂವಿಧಾನದಲ್ಲಿ ಪ್ರತಿಷ್ಠಾಪಿಸುತ್ತದೆ. ಗ್ರಾಸ್ ನ್ಯಾಷನಲ್ ಹ್ಯಾಪಿನೆಸ್ ಎನ್ನುವ ಪರಿಕಲ್ಪನೆ ಬುದ್ಧನ ತತ್ವಗಳನ್ನು ಒಳಗೊಂಡ ಭೂತಾನಿನ ಸಮಾಜದಲ್ಲಿ ಆಳವಾಗಿ ಬೇರೂರುತ್ತ ಜನರಲ್ಲಿ ಸಹಾನುಭೂತಿ ಸಂತೃಪ್ತಿ ಹಾಗೂ ಶಾಂತತೆಯನ್ನು ಮೂಡಿಸುವುದರ ಮೇಲೆ
ಗಮನವನ್ನು ಕೇಂದ್ರೀಕರಿಸುತ್ತದೆ.

ಭೂತಾನಿಗೆ ಭೇಟಿಕೊಟ್ಟಿದ್ದ ಸ್ನೇಹಿತರೊಬ್ಬರು ಹೇಳುತ್ತಿದ್ದರು – ಭೂತಾನ್ ಪ್ರಾಜೆಕ್ಟ್ ಜಿಎನ್‌ಎಚ್, ಅಲ್ಲಿನ ಸಮಾಜದಲ್ಲಿ ಎಷ್ಟು ಆಳವಾಗಿ
ಹಾಸುಹೊಕ್ಕಾಗಿದೆ ಎಂದರೆ ಅಲ್ಲಿನ ಪ್ರತಿಯೊಂದು ಊರಿನ ದಾರಿ ಫಲಕಗಳಲ್ಲೂ ‘ಗೋಗ್ರೀನ್ ಕೀಪ್ ಅವರ್ ಗೋಬ್ಲ ಕ್ಲೀನ್’ ಸಂದೇಶ ಗಳನ್ನು ಕಾಣಬಹುದು ಅಂತ. ಇದೊಂದು ಪುಟ್ಟ ಉದಾಹರಣೆ ಅಷ್ಟೇ. ಈ ತರಹದ ಪರಿಕಲ್ಪನೆಗಳನ್ನು ಜನರಲ್ಲಿ ಮೂಡಿಸುತ್ತಾ ಹೋದರೆ ಜನ ಬರಿಯ ಆರ್ಥಿಕ ಚಟುವಟಿಕೆಗಳಿಗೆ ಅಷ್ಟೇ ತಮ್ಮನ್ನು ಸೀಮಿತಗೊಳಿಸಿಕೊಳ್ಳದೆ, ಎಕಾಲಜಿ, ಪರಿಸರ ಸಮುದಾಯ ಹೀಗೆ ಬದುಕಿನಲ್ಲಿ ಎಲ್ಲವನ್ನೂ ಒಳಗೊಳ್ಳುವ ಖುಷಿಯ ಪ್ರeಯನ್ನು ತನ್ನ ನಾಗರಿಕರಲ್ಲಿ ಮೂಡಿಸುತ್ತಾ ಇದೆ ಭೂತಾನ್.

ಭೂತಾನಿನ ಗ್ರಾಸ್ ನ್ಯಾಷನಲ್ ಹ್ಯಾಪಿನೆಸ್ ಒಂದು ದೇಶದ ಸಾಂಪ್ರದಾಯಿಕ ವಿಷಯಗಳಾದ ಸಾಮಾಜಿಕ-ಆರ್ಥಿಕ ಕಾಳಜಿ ಗಳಾದ ಜೀವನಮಟ್ಟ ಆರೋಗ್ಯ ಶಿಕ್ಷಣಗಳನ್ನಷ್ಟೇ ಒಳಗೊಳ್ಳದೆ ಸಾಂಸ್ಕೃತಿಕ ಹಾಗೂ ಮಾನಸಿಕ ಯೋಗಕ್ಷೇಮವನ್ನು ಪ್ರಧಾನವಾಗಿರಿಸಿ ಕೊಂಡಿದೆ. ಭೂತಾನಿನ ಈ ಗ್ರಾಸ್ ನ್ಯಾಷನಲ್ ಹ್ಯಾಪಿನೆಸ್ ಪಾಲಿಸಿಯು ಅಲ್ಲಿನ ಜನರ ಸಂಪೂರ್ಣವಾದ ಸಾಮಾನ್ಯ ಯೋಗಕ್ಷೇಮ
ಅದರ ಸಮಗ್ರ ಪ್ರತಿಬಿಂಬವೇ ಆಗಿದೆ. ಭೂತಾನಿನ ಗ್ರಾಸ್ ನ್ಯಾಷನಲ್ ಹ್ಯಾಪಿನೆಸ್ ಇಲ್ಲಿ ನಾವು ಗಮನಿಸಬೇಕಾದ ಒಂದು ಅಂಶವೆಂದರೆ ಸಂತೋಷವನ್ನು ಖುಷಿಯನ್ನು ವ್ಯಕ್ತಿ ಕೇಂದ್ರಿತವಾಗಿ ಕನ್ಸಿಡರ್ ಮಾಡದೆ ತನ್ನ ದೇಶದ ಜನಸಂಖ್ಯೆಯ ಆಧಾರದಲ್ಲಿ ಗಮನಿಸುತ್ತದೆ.

ಸಂತೋಷವನ್ನು ವ್ಯಕ್ತಿಗತವಾಗಿ ಕೇಂದ್ರಿಕರಿಸುವುದು ಸಾಧ್ಯವಾಗದೇ ಇರುವ ಪ್ರಶ್ನೆ. ಹಾಗಾಗಿ ಭೂತಾನ್ ದೇಶದ ಜಿಎನ್‌ಎಚ್‌ನಲ್ಲಿ
೧) ಉತ್ತಮ ಆಡಳಿತ ೨) ಸಮರ್ಥ ಸಾಮಾಜಿಕ ಆರ್ಥಿಕ ಅಭಿವೃದ್ಧಿ ೩) ಸಾಂಸ್ಕೃತಿಕ ಸಂರಕ್ಷಣೆ ೪) ಪರಿಸರ ಸಂರಕ್ಷಣೆ ಎನ್ನುವ ನಾಲ್ಕು ಆಧಾರ ಸ್ತಂಭಗಳಿವೆ. ಈ ನಾಲ್ಕು ಆಧಾರ ಸ್ತಂಭಗಳನ್ನು ಮತ್ತೆ ೧) ಮಾನಸಿಕ ಯೋಗಕ್ಷೇಮ ೨) ಆರೋಗ್ಯ ೩) ಶಿಕ್ಷಣ ೪) ಸಮಯ ನಿರ್ವಹಣೆ ೫) ಸಾಂಸ್ಕ್ರತಿಕ ವೈವಿಧ್ಯತೆ ೬) ಉತ್ತಮ ಆಡಳಿತ ೭) ಸಮುದಾಯದ ಹುರುಪು ೮) ಪರಿಸರ ವೈವಿಧ್ಯತೆ ಹಾಗೂ ಸ್ಥಿತಿ ಸ್ಥಾಪಕತ್ವ ಹಾಗೂ ೯) ಉತ್ತಮ ಜೀವನಮಟ್ಟ ಎಂದು ವಿಂಗಡಣೆ ಮಾಡಲಾಗಿದೆ.

ಈ ಒಂಭತ್ತು ವಿಭಾಗಗಳಿಗೂ ಜೀವನ ಸಂತೃಪ್ತಿ ಸಕಾರಾತ್ಮಕ ಭಾವನೆಗಳು ಧ್ಯಾತ್ಮ ಮಾನಸಿಕ ಆರೋಗ್ಯ ಸ್ವಯಂ ಘೋಷಿತ ಆರೋಗ್ಯ ಸ್ಥಿತಿ ಆರೋಗ್ಯದ ದಿನಗಳು ಕೆಲಸ ನಿದ್ರೆ ಜ್ಞಾನ ಮೌಲ್ಯ ಸ್ಥಳೀಯ ಭಾಷೆ ಮಾತನಾಡುವಿಕೆ ಸಮುದಾಯ ಪ್ರಜ್ಞೆ ಕುಟುಂಬ ಮೂಲಭೂತ ಹಕ್ಕುಗಳು ಪರಿಸರದ ಬಗೆಗಿನ ಜವಾಬ್ದಾರಿ ನಗರೀಕರಣ ಮತ್ತು ೩೩ ಸೂಚ್ಯಂಕಗಳನ್ನು ಜೋಡಿಸಲಾಗಿದೆ. ಗ್ರಾಸ್ ನ್ಯಾಷನಲ್ ಹ್ಯಾಪಿನೆಸ್ ೪ ಪಿಲ್ಲರ್ಸ್ ೯ ಡೊಮೇನ್ ಸ್ ಹಾಗೂ ೩೩ ಇಂಡಿಕೇಟರ್ಸ್, ಇವು ಭೂತಾನ್ ಜನಸಂಖ್ಯೆಗೆ ಯೋಗಕ್ಷೇಮ ಸಂತೋಷ
ಒಳ್ಳೆಯ ಜೀವನವನ್ನು ಪೂರೈಸುವ ಕಂಡೀಷನ್ಸ್ ಗಳಾಗಿವೆ.

ಭೂತಾನಿನ ಜಿಎನ್ ಹೆಚ್ ಪಾಲಿಸಿ ಮೇಕಿಂಗ್ ಹಾಗೂ ಡಿಸಿಶನ್ ಮೇಕಿಂಗ್ ಯಾಕೆ ಮುಖ್ಯವಾಗುತ್ತದೆ ಅನ್ನೋದಕ್ಕೆ ಅಲ್ಲಿನ ಸರ್ವೆ ಪ್ರಕಾರ ಅಲ್ಲಿ ೨೦೧೨ರಲ್ಲಿ ಇದ್ದ ಬಡತನದ ಪ್ರಮಾಣ 2017ರಲ್ಲಿ 8.2 ಪರ್ಸೆಂಟ್ ಇಳಿಮುಖವಾಗಿರುವುದು ಕಂಡುಬರುತ್ತದೆ. ಜಿಎನ್‌ಎಚ್‌ನ ಉದ್ದೇಶ ಎಷ್ಟು ಪೂರಕವಾಗಿ ಕೆಲಸ ಮಾಡಿದೆ ಎಂದರೆ ಅಲ್ಲಿನ ಸರ್ಕಾರ ತನ್ನ ಜನರಿಗೆ ಉಚಿತ ಶಿಕ್ಷಣ ಆರೋಗ್ಯವನ್ನು
ನೀಡುವುದರ ಜತೆಗೆ ಗ್ರಾಮೀಣ ಜನರಿಗೆ ಉಚಿತ ವಿದ್ಯುತ್ ನೀಡಿದೆ. ದೇಶದ ೫೦ ಪರ್ಸೆಂಟ್ ಭೂಮಿಯನ್ನು ನ್ಯಾಷನಲ್ ಪಾರ್ಕ್‌ ಗಳನ್ನಾಗಿಸಿದೆ! ಅದರಲ್ಲಿ ಶೇಕಡ ಎಂಭತ್ತು ಪರ್ಸೆಂಟ್ ಸಹಜ ಕಾಡುಗಳಾಗಿವೆ.

ಭೂತಾನ್ ಝೀರೋ ಕಾರ್ಬನ್ ಹೆಜ್ಜೆಗುರುತುಗಳನ್ನು ಮೂಡಿಸಿದೆ. ಜಿಡಿಪಿಯ ಬದಲು ಜಿಎನ್‌ಹೆಚ್ ಅಂದಾಗ, ಸಂಪೂರ್ಣವಾಗಿ ಆರ್ಥಿಕತೆ ಮುಖ್ಯವಾಗುವುದಿಲ್ಲ ಅನ್ನೋ ಅರ್ಥವಲ್ಲ. ಆರ್ಥಿಕತೆಯು ಬಹಳ ಮುಖ್ಯವಾಗುತ್ತದೆ. ಪ್ರಪಂಚದ ಅಭಿವೃದ್ಧಿ ಹೊಂದುತ್ತಿರುವ ದೇಶದಲ್ಲಿ ಮುಂಚೂಣಿಯಲ್ಲಿರುವ ಭೂತಾನಿಗೆ ತನ್ನ ದೇಶದ ಜನರಿಗೆ ಉದ್ಯೋಗ ಒದಗಿಸುವ ಮತ್ತು ಇಂತಹ ಅನೇಕ ಬೇರೆ ಬೇರೆಯ ಹಲವು ಒತ್ತಡಗಳಿವೆ. ಇಂತಹ ಒತ್ತಡಗಳ ನಡುವೆಯೂ ಗ್ರಾಸ್ ನ್ಯಾಷನಲ್ ಹ್ಯಾಪಿನೆಸ್ ಅಲ್ಲಿನ ಸರ್ಕಾರದ ಮತ್ತು ಜನರ ಬದುಕಿನ ಮುಖ್ಯ ಭಾಗವಾಗಿದೆ.

ಗ್ರಾಸ್ ನ್ಯಾಷನಲ್ ಹ್ಯಾಪಿನೆಸ್ ಇಂಡೆಕ್ಸ್ ಭೂತಾನಿನ ಹ್ಯಾಪಿನೆಸ್ ಪಾಲಿಸಿಯನ್ನು ಕಾಲಕಾಲಕ್ಕೆ ಟ್ರ್ಯಾಕ್ ಮಾಡುತ್ತಾ ಅದರ ಮೌಲ್ಯಮಾಪನವನ್ನು ಮಾಡುತ್ತಾ ಹೋಗುತ್ತದೆ. ಇದರ ಸ್ಥಾಪಿತ ಉದ್ದೇಶ ಸರ್ಕಾರ ಸರ್ಕಾರದ ಪ್ರಾಜೆಕ್ಟ್‌ಗಳು ಹಾಗೂ ಪಾಲಿಸಿಗಳು ಸಂತೋಷವನ್ನು ಜನರ ಬದುಕಿನ ಭಾಗವಾಗಿಸಿದ್ದಾವೆಯೇ, ಗರಿಷ್ಠಗೊಳಿಸಿದ್ದಾವೆಯೇ ಎಂಬುದನ್ನು ಪತ್ತೆ ಮಾಡುವುದೇ ಆಗಿರುತ್ತದೆ. ಗ್ರಾಸ್ ನ್ಯಾಷನಲ್ ಹ್ಯಾಪಿನೆಸ್ ಪಾಲಿಸಿಯ ಬಗ್ಗೆ ತಿಳಿದ ನಮ್ಮೆಲ್ಲರ ಮನಸ್ಸಿನಲ್ಲಿ ಮೂಡುವ ಪ್ರಶ್ನೆ ಹಾಗಿದ್ರೆ ಭೂತಾನಿನ ಜನರೆಲ್ಲ ಬಹಳ
ಖುಷಿಯಾಗಿದ್ದಾರೆ ಅಂತ? ಬುದ್ಧನ ನಾಡಿನ ಭೂತಾನಿನ ಸಂತೋಷದ ಪರಿಕಲ್ಪನೆ ಪಾಶ್ಚಿಮಾತ್ಯ ಲಿಟರೇಚರ್‌ಗಿಂತ ಬಹಳ ವಿಶಾಲ ವಾದದ್ದು.

ಹಾಗಾಗಿ ಅವರು ಸಮುದಾಯ, ಹುರುಪು, ಮಾನಸಿಕ ಯೋಗಕ್ಷೇಮ, ಸ್ಥಿತಿಸ್ಥಾಪಕತ್ವ , ಉತ್ತಮ ಜೀವನಮಟ್ಟ, ಪರಿಸರ ವೈವಿಧ್ಯತೆ ಹೀಗೆ ಬದುಕನ್ನ ಬರಿಯ ಮಾನಿಟರಿ ಬೆನಿಫಿಟ್ಸ ಅಥವಾ ಆರ್ಥಿಕ ಅಂಶಗಳು ಅಥವಾ ಮೆಟೀರಿಯಲ್ ಗೇನ್‌ಸ್ ಗಳಿಗಷ್ಟೇ ಸೀಮಿತ ಗೊಳಿಸದೆ ಬದುಕಿನ ಎಲ್ಲಾ ಭಾಗಗಳಿಗೂ ಅನ್ವಯಿಸಿಕೊಂಡಿದ್ದಾರೆ. ಹಾಗೆಂದು ಭೂತಾನ್ ಯಾವುದೇ ಸಮಸ್ಯೆ, ಸವಾಲುಗಳಿಲ್ಲದ ರಾಷ್ಟ್ರವೇನಲ್ಲ. ಭೂತಾನಿಗೂ ನಿರುದ್ಯೋಗ, ಬಡತನದ ಸಮಸ್ಯೆಗಳು ಕಾಡುತ್ತಿವೆ. ಈ ಸವಾಲುಗಳನ್ನು ಎದುರಿಸುತ್ತಲೇ ಇಡೀ ಜಗತ್ತಿಗೆ ತನ್ನ ದೇಶದ ಜನರ ದೈಹಿಕ ಮಾನಸಿಕ ಭಾವನಾತ್ಮಕ ಸುಸ್ಥಿರತೆಯನ್ನು ಸಮರ್ಥವಾಗಿ ನಿಭಾಯಿಸಬೇಕು ಎಂತಹುದೇ ಸಂದರ್ಭ ದಲ್ಲಿಯೂ ಖುಷಿಯಾಗಿ ಬದುಕುವುದನ್ನೂ ರೂಢಿಸಿಕೊಳ್ಳುವುದು ಹೇಗೆ ಎಂಬ ಪಾಠವನ್ನು ಕಲಿಸಿಕೊಟ್ಟಿದೆ.

ಭೂತಾನಿನ ಈ ಸುಸ್ಥಿರ ಸಮರ್ಥ ಸಮಾನತೆಯ ಬದುಕನ್ನ ನಾವು ನಮ್ಮದಾಗಿಸಿಕೊಳ್ಳೋಣ. ಸಂತೋಷವೆಂಬ ಪಾಲಿಸಿಯ ಮೂಲಕ ನಮ್ಮ ಮನಸ್ಸಿನ ಕೊಳಕುಗಳ ರಿಸೈಕ್ಲಿಂಗ್ ಆಗಲಿ. ಆಸಕ್ತಿದಾಯಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು, ಜೀವನದ ಮುಖ್ಯವಾದ ಗುರಿಗಳನ್ನು ಅನ್ವೇಷಿಸುವ ಸಕಾರಾತ್ಮಕ ಭಾವನೆಗಳನ್ನು, ಸಂವೇದನೆಗಳನ್ನು ಅನುಭವಿಸುವ, ಅನುಭಾವಿಸುವ, ನಾನು ಅನ್ನುವು ದಕ್ಕಿಂತ ‘ನಾವು’ ಎನ್ನುವ ಅಧ್ಯಾತ್ಮದ ಜತೆ ಕನೆಕ್ಟ್ ಆಗ್ತಾ ನಡೆಯೋಣ.