ದಾಸ್ ಕ್ಯಾಪಿಟಲ್
ಟಿ.ದೇವಿದಾಸ್
dascapital1205@gmail.com
ಜಗತ್ತಿನಲ್ಲಿ ಯಾವುದೂ ಬದಲಾದೀತು. ತಾಲಿಬಾನಿಗಳ ಮನಸ್ಥಿತಿ ಬದಲಾಗುವುದು ಸಾಧ್ಯವೇ ಇಲ್ಲ! ಯಾಕೆಂದರೆ ಸೆಮೆಟಿಕ್ ಮತಗಳ ವಿಚಾರಗಳು ಕಾಠಿಣ್ಯ ದಿಂದ ಕೂಡಿರುತ್ತದೆ. ಮುಖ್ಯವಾಗಿ, ಈ ಸೆಮೆಟಿಕ್ ಮತಗಳು ಮೂಲಭೂತವಾದವನ್ನು ಪ್ರಕಟಿಸುತ್ತದೆ, ಪ್ರಸಾರವನ್ನೂ ಮಾಡುತ್ತದೆ.
ಮತಾಂತರ ಎಂಬುದು ಇವುಗಳಿಗೆ ಅಂಟುರೋಗ. ಮುಸ್ಲಿಂ ಮೂಲಭೂತವಾದದ ಅಪಾಯವನ್ನು ಜಗತ್ತು ಗುರುತಿಸುತ್ತಲೇ ಬಂದಿದೆ. ಅನುಭವಿಸುತ್ತಲೇ ಬಂದಿದೆ. ಆದರೆ, ಅಲ್ಪಸಂಖ್ಯಾತರಿಗೆ ಅಭದ್ರತೆ ಮತ್ತು ಭಯವನ್ನು ಹುಟ್ಟಿಸುವುದೇ ಈ ಮೂಲಭೂತವಾದ ಎಂಬ ಗ್ರಹಿಕೆ ಬುದ್ಧಿಜೀವಿಗಳಲ್ಲಿದೆ. ಮಜಾ ಏನೆಂದರೆ, ಜಗತ್ತನ್ನು ಭಯದಿಂದ ಆವರಿಸಿರುವುದು ಅಲ್ಪಸಂಖ್ಯಾತ ಸಮುದಾಯವೆಂದು ಪರಿಗಣಿತವಾದ ಮುಸ್ಲಿಂ ಭಯೋತ್ಪಾದನೆಯಿಂದ!
ಮುಸ್ಲಿಂ ಭಯೋತ್ಪಾದನೆ ಒಂದು ರಾಷ್ಟ್ರದ ರಾಷ್ಟ್ರನಿಷ್ಠೆಯನ್ನು ಅಲುಗಾಡಿಸಿ ಬಿಡುವಷ್ಟು ಇದು ಭಯವನ್ನು ತರುತ್ತಿದೆ. ಸಾರ್ವಜನಿಕ ಬದುಕನ್ನು ಅಲ-ಕಲ ಮಾಡಿಬಿಡುತ್ತಿದೆ. ಬಹುತ್ವವನ್ನು ನಾಶಮಾಡಿ ಬಿಡುತ್ತದೆ. ಜೀವನಮೌಲ್ಯಗಳನ್ನು ಸಾಯಿಸಿ ಬಿಡುತ್ತದೆ. ಸಾಂಸ್ಕೃತಿಕ ಚಿಂತನೆಯನ್ನು ಕಿತ್ತೊಗೆಯುತ್ತದೆ. ಜಾಗತೀಕರಣ ದಿಂದ ಬಲಾಢ್ಯಗೊಳ್ಳುತ್ತಿರುವ ರಾಷ್ಟ್ರಗಳನ್ನು ಮುಸ್ಲಿಂ ಮೂಲಭೂತವಾದ ತಲ್ಲಣಗೊಳಿಸುವುದನ್ನು ನೋಡು ತ್ತಿದ್ದೇವೆ. ಜತೆಗೆ ಬೌದ್ಧಿಕ ಮೂಲಭೂತವಾದವೂ ಸೇರಿಕೊಂಡಿದ್ದು ಸದ್ಯದ ದುರಂತ!
ಧರ್ಮ ರಕ್ಷಣೆಗಾಗಿ ಹೋರಾಡು ಎನ್ನುತ್ತದೆ ಕುರಾನ್. ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆ ತೋರಿಸು ಎಂದವರು ಏಸು ಕ್ರಿಸ್ತರು. ವೇದಗಳು ದೇವತೆಗಳಿಗೆ ಶರಣಾಗು ಎಂದು ಸಾರಿದರೆ, ಉಪನಿಷತ್ತುಗಳು ಅವರನ್ನು ಪ್ರಶ್ನಿಸು ಎನ್ನುತ್ತದೆ. ಮನುಸ್ಮೃತಿಯಲ್ಲೂ ಹೆಣ್ಣನ್ನು ದೇವತೆಯೆಂದರೂ ಅವಳಿಗೆ ಸ್ವಾತಂತ್ರ್ಯ ಕೊಡಲಾಗದು ಎನ್ನುತ್ತದೆ. ಇಷ್ಟೆಲ್ಲ ವೈರುದ್ಧ್ಯಗಳಿರುವಾಗ ಎಲ್ಲ ಧರ್ಮಗಳ ಸಾರ ಒಂದೇ ಎಂದು ಭಾವಿಸುವುದು ಮತ್ತು ಒಪ್ಪಿಕೊಳ್ಳುವುದು ಶುದ್ಧ ಅವಿವೇಕದ ಮಾತಾಗುತ್ತದೆ. ಹಾಗೆ ಭಾವಿಸಿ ಒಪ್ಪಿಕೊಳ್ಳುವುದಾದರೆ, ದೇವಸ್ಥಾನಗಳಲ್ಲಿ ಮುಸ್ಲಿಂರು, ಕ್ರೈಸ್ತರೇಕೆ ಪ್ರಾರ್ಥಿಸುವುದಿಲ್ಲ? ಮಸೀದಿ, ಚರ್ಚುಗಳಲ್ಲಿ ಹಿಂದೂಗಳೇಕೆ ಆರಾಧನೆ ಮಾಡುವುದಿಲ್ಲ? ಚೌತಿಯನ್ನೋ, ದೀಪಾವಳಿಯನ್ನೋ ಸತ್ಯನಾರಾಯಣ ವ್ರತವನ್ನು ಅವರ‍್ಯಾಕೆ ಮಾಡುವುದಿಲ್ಲ? ಉತ್ತರವಿಲ್ಲ.
ಆದರೆ ಜಿಹಾದ್ ಬೇರೆ, ಧರ್ಮಯುದ್ಧ ಬೇರೆ ಎಂಬ ಸಾಮಾನ್ಯ ಪ್ರe ಮುಸ್ಲಿಂರಿಗೆ ಬಿಡಿ, ಭಾರತದಲ್ಲಿರುವ ಸೋ ಕಾಲ್ಡ ಬುದ್ಧಿಜೀವಿಗಳಿಗೂ, ಲೆ-ರಿಗೂ, ನಕ್ಸಲ್
ವಾದಿಗಳಿಗೂ, ಸೋಗಿನ ಜಾತ್ಯತೀತರಿಗೂ, ತಾವೇ ಮಹಾ ವಿದ್ವಾಂಸರು ಎಂದು ತೋರಿಸಿಕೊಳ್ಳುವ ವಿವಿ ಪ್ರಾಧ್ಯಾಪಕರುಗಳಿಗೂ ಅರ್ಥವಾಗಿಲ್ಲ!
ಕುರುಕ್ಷೇತ್ರ ಯುದ್ಧವಾದದ್ದು ಜಿಹಾದ್ ರೀತಿಯಲ್ಲಲ್ಲ. ಅದು ಧರ್ಮಯುದ್ಧ. ಶ್ರೀರಾಮ ರಾವಣನ ಮೇಲೆ ಮಾಡಿದ್ದು ಜಿಹಾದ್ ಅಲ್ಲ. ನಾನು ಬದುಕಬೇಕು, ನೀನು
ಸಾಯಬೇಕು ಎಂಬುದು ಧರ್ಮಯುದ್ಧದ ವ್ಯಾಖ್ಯಾನವಲ್ಲ. ಅಧರ್ಮ ತಲೆ ಎತ್ತಿದಾಗ ಧರ್ಮ ಸಂರಕ್ಷಣೆಗೆ ಯುದ್ಧವೇ ಆತ್ಯಂತಿಕವಾದರೆ ಅದು ಧರ್ಮಯುದ್ಧ. ಆದ್ದರಿಂದ ಧರ್ಮಯುದ್ಧ ಎಂಬುದು ಅಧರ್ಮ, ಅನ್ಯಾಯದ ವಿರುದ್ಧ ನಡೆಯುವಂಥದ್ದು.
ಯಾವುದು ವಿಶ್ವಮಾನ್ಯವೋ ಅದು ಧರ್ಮ. ಅಫ್ಘಾನಿಸ್ತಾನದ ಮೇಲೆ ತಾಲಿಬಾನಿಗಳು ಈಗ ನಡೆಸಿರುವ ದೌರ್ಜನ್ಯ ಧರ್ಮವೂ ಧರ್ಮಮಾರ್ಗದ್ದೂ ಅಲ್ಲ, ಧರ್ಮಯುದ್ಧವೂ ಅಲ್ಲ. ಯಾವ ಧರ್ಮವೂ ಇದನ್ನು ಒಪ್ಪುವಂಥಿಲ್ಲ. ಧರ್ಮ ಯಾವತ್ತೂ ಸಾರ್ವತ್ರಿಕವಾದ ಸತ್ಯ. ಮತಗಳು ವೈಯಕ್ತಿಕವಾದ ಸತ್ಯ. ಮತಗಳ ಉಸಿರು ಧರ್ಮದಲ್ಲಿ ಅಡಗಿರುತ್ತವೆ. ಮತ ಎಂದರೆ ಅಭಿಪ್ರಾಯ. ಹತ್ತರಲ್ಲಿ ಒಬ್ಬನನ್ನು ಆಯ್ಕೆ ಮಾಡುವುದು ಮತ. ಅಂದರೆ ಆಯ್ಕೆ ಮಾಡುವವರ ಆಯ್ಕೆಗೆ ಸಂಬಂಽಸಿದ್ದು. ಮತವೆಂದರೆ ಅಭಿಪ್ರಾಯ. ವ್ಯಕ್ತಿ ಕಂಡುಕೊಂಡ ವೈಯಕ್ತಿಕ ಸತ್ಯವೇ ಹೊರತು ಸಾರ್ವತ್ರಿಕ ಸತ್ಯವಲ್ಲ.
ಉದಾ: ಜಗತ್ತು ಮಾಯೆ, ಬ್ರಹ್ಮ ಒಂದೇ ಸತ್ಯ ಎಂಬುದು ಶಂಕರರ ಮತ. ಇದನ್ನು ಶಂಕರ ಧರ್ಮ ಎನ್ನಲಾಗದು. ಇದು ನಮಗೆ ಒಪ್ಪಿಗೆಯಾಗಲೀ ಬಿಡಲೀ, ವಿಶಾಲವಾದ ವೇದಧರ್ಮಕ್ಕೆ ಶಂಕರರು ನೀಡಿದ ವ್ಯಾಖ್ಯೆ. ಇದೇ ವಿಷಯದಲ್ಲಿ ಮಧ್ವಾಚಾರ್ಯರ ಮತ ಬೇರೆ, ರಾಮಾನುಜಾಚಾರ್ಯರ ಮತ ಬೇರೆ. ವಚನಾದಿ
ಶಿವಶರಣರ ಮತ ಬೇರೆ. ಆಯಾ ಮತಾನುಯಿಗಳು ಅವರವರ ಮತವೇ ಶ್ರೇಷ್ಠವೆಂದರೆ ಹೊರತು, ಆಕ್ರಮಣಕ್ಕೆ ಮುಂದಾಗಿ ಮತ ಪರಿವರ್ತನೆಗೆ ಮುಂದಾಗ ಲಿಲ್ಲ. ಒತ್ತಡ ಹೇರಲಿಲ್ಲ. ಹಾಗಂತ ಶ್ರೇಷ್ಠತೆಯ ವಿಚಾರವಾಗಿ ವೈಚಾರಿಕ ಸಂಘರ್ಷಗಳು ಇದ್ದೇ ಇವೆ. ಆದರೆ ಯಾವುದೂ ಜನಸಾಮಾನ್ಯರ ಬದುಕಿಗೆ ಕಂಟಕವಾಗಲಿಲ್ಲ. ಅವರವರು ನಂಬಿಕೊಂಡ ಮತದ ಸತ್ಯವನ್ನು ಕಂಡುಕೊಂಡು ಅನುಸರಿಸಿದರು. ಹಾಗೆಯೇ ಬದುಕಿದರು.
ಆತ್ಯಂತಿಕ ಸತ್ಯವನ್ನು ಸಾಕ್ಷಾತ್ಕರಿಸಿಕೊಳ್ಳಲು ಇವೆಲ್ಲ ಪಥಗಳಾದವೇ ವಿನಾ ಹಿಂಸೆಯನ್ನು ಉದ್ದೀಪಿಸಲಿಲ್ಲ. ನನ್ನ ಮತವೇ ಶ್ರೇಷ್ಠ ಎಂಬ ಹುಚ್ಚು ಅಂಧಾಭಿಮಾನ ವನ್ನು ಮಿದುಳಲ್ಲಿ ತುಂಬಿಕೊಂಡ ತಾಲಿಬಾನಿಗಳು ತಾನು ತನ್ನ ನೆಲವನ್ನು ವಶಪಡಿಸಿಕೊಂಡೆ ಎಂದುಕೊಂಡು ಅಪಘಾನಿಸ್ತಾನದಲ್ಲಿ ಸಾಧಿಸಿದ್ದಾದರೂ ಏನನ್ನು? ಪಡೆದದ್ದಾದರೂ ಏನನ್ನು? ಅಲ್ಲಿರುವ ಅವರ ಮತದ ಜನರು ತಾಲಿಬಾನಿಗಳನ್ನು ಕಂಡು ಜೀವಭಯದಿಂದ ಓಡಿದ್ಯಾಕೆ? ಮುಸ್ಲಿಮರು ಮುಸ್ಲಿಮರನ್ನೇ ಹಿಂಸಿಸಿದರು ಎಂದರೆ ಆ ಧರ್ಮದ ತಾತ್ವಿಕ ನಿಲುವಾದರೂ ಏನು? ಆದರೆ ಭಾರತೀಯರಿಗೆ ಇದು ಹೊಸತೂ ಅಲ್ಲ, ಅಚ್ಚರಿಯೂ ಅಲ್ಲ.
ಮುಸ್ಲಿಂರ ಆಡಳಿತವನ್ನು ನಾವು ಭಾರತೀಯರು ನೋಡಿದ್ದಷ್ಟು ಅನುಭವಿಸಿದ್ದಷ್ಟು ಜಗತ್ತಿನ ಯಾವ ಮುಸ್ಲಿಂಮೇತರ ರಾಷ್ಟ್ರವೂ ನೋಡಲಿಲ್ಲ, ಅನುಭವಿಸಲಿಲ್ಲ. ನಮ್ಮನ್ನು ಉದ್ಧರಿಸಲು ಮೇಲಿನಿಂದ ಕೆಳಗಿಳಿದು ಬಂದವರು ಎಂದೇ ಮೊಘಲ ರಾಜರನ್ನು, ಮುಸ್ಲಿಂ ದೊರೆಗಳನ್ನು ನಮಗೆ ಪರಿಚಯಿಸಿ ಓದಿಸಲಾಯಿತು. ದಿ ಗ್ರೇಟ್ ಎಂದು ಬಾಯಿಪಾಠ ಮಾಡಿಸಲಾಯಿತು. ಬಾಬರನ ವಂಶಸ್ಥರನ್ನು, ಘಜ್ನಿ, ಘೋರಿಗಳನ್ನು ಓದಿದ ನಮಗೆ ನಮ್ಮತನವನ್ನು ಕಳೆದುಕೊಂಡಿದ್ದು ಗೊತ್ತೇ ಆಗಲಿಲ್ಲ! ನಮ್ಮಲ್ಲಿರುವ ಕ್ಷಾತ್ರತ್ವ ಸತ್ತುಹೋದದ್ದು ತಿಳಿಯಲೇ ಇಲ್ಲ!
ಗಾಂಧಿಯನ್ನು ಓದಿದ ನಾವು ಉದಾರವಾದದ ಸೋಗಿನಲ್ಲಿ ನಪುಂಸಕರಾದದ್ದೂ, ಅದು ನಮಗರಿವಾದದ್ದು ತಡವಾಗಿ ಇತ್ತೀಚಿನ ವರ್ಷಗಳಲ್ಲಿ! ಸಾಯಿ ಮತದ ಆದ್ಯ ಪ್ರವರ್ತಕರು ವಿಜ್ಞಾನಿಯಲ್ಲದ ಅರಿಸ್ಟಾಟಲ್ ಹೇಳಿದ ಭೂಮಿ ಚಪ್ಪಟೆಯಾಗಿದೆ ಎಂಬ ಮಾತನ್ನು ಎರವಲು ತೆಗೆದುಕೊಂಡರು. ಆದರೆ, ಅದು ಅವನ
ಮತವಾಗಿತಷ್ಟೇ. ಅದನ್ನು ಬೋಳೇ ಬಸವನಂತೆ ತಲೆಯಾಡಿಸಿ ಸ್ವೀಕರಿಸಿದವರಿಗೆ ವಿಶ್ವಕಲ್ಪನೆಗೆ ಅರಿಸ್ಟಾಟಲ್‌ನ ಈ ಮತ ಅಡ್ಡಿಯಾಗುತ್ತದೆ ಎಂಬ ಪ್ರe ಹುಟ್ಟಲೇ ಇಲ್ಲ. ಆದ್ದರಿಂದ ಅವರಲ್ಲಿ ಇಂದಿಗೂ ವಿeನ ಮುಂದುವರೆಯಲೇ ಇಲ್ಲ.
ಸ್ತ್ರೀಯರಿಗೆ ಪುರುಷರಿಗಿಂತ ಕಡಿಮೆ ಹಲ್ಲುಗಳಿವೆ; ಏಕೆಂದರೆ ಹುಟ್ಟಿನಿಂದಲೇ ಸೀಯರು ಪುರುಷರಿಗಿಂತ ಕೀಳು, ಅಧಮರು ಎಂದ ಅರಿಸ್ಟಾಟಲ್. ಈ ಮಾತು ಈಸಾಯಿಯವರಿಗೆ ವೇದವಾಕ್ಯವಾಯಿತು. ಅರಿಸ್ಟಾಟಲ್‌ನ ಮಾತಿಗೆ ಬಟ್ರೆಂಡ್ ರಸೆಲ್ ಹೀಗೆ ಬರೆದ: ‘ಅರಿಸ್ಟಾಟಲ್‌ನಿಗೆ ಇಬ್ಬರು ಹೆಂಡತಿಯರಿದ್ದರು. ಯಾರೊಬ್ಬಳ ಬಾಯನ್ನಾದರೂ ತೆರೆದು ಇವನು ಹಲ್ಲುಗಳನ್ನೆಣಿಸಿದ್ದರೆ ಸತ್ಯ ಹೊರಬೀಳುತ್ತಿತ್ತು. ಆ ತೊಂದರೆಯನ್ನು ಅವನು ತೆಗೆದುಕೊಳ್ಳಲಿಲ್ಲ, ಎಂದು! ಇಂಥ
ಕುರುಡು ನಂಬಿಕೆಗಳಿಗೆ ಗಂಟುಬಿದ್ದರೆ ಬದುಕು ದುರ್ಭರ ವಾಗುತ್ತದೆ. ಅಂಥ ಮತವೂ ಹಾಸ್ಯಾಸ್ಪದವಾಗಿ ಟೀಕೆಗೆ ಒಳಪಡುತ್ತದೆ. ಕಾಲಕ್ರಮೇಣ ಅಪಾಯಕಾರಿ ಯಾಗುತ್ತದೆ.
ಈಗ ಆದದ್ದು ಅದೇ!’ ಹಾಗೆ ನೋಡಿದರೆ ಪ್ರತಿಯೊಂದು ಮತದ ಸ್ಥಾಪನೆಯ ಹಿನ್ನೆಲೆಯಲ್ಲಿ ಅದರದ್ದೇ ಆದ ಉದ್ದೇಶವಿದೆ. ಅದು ಧರ್ಮ ಸ್ಥಾಪನೆಯೇ ಆಗಿದೆ. ಮಹಮ್ಮದ್ ಪೈಗಂಬರರ ಸಮಯದಲ್ಲಿ ಮೆಕ್ಕಾದಲ್ಲಿ ಸಾವಿರಾರು ಕಲ್ಪಿತ ದೇವರುಗಳ ಮೂರ್ತಿಗಳಿದ್ದವು. ಸಲಿಂಗರತಿ, ಕುಡಿತ, ಜನರಲ್ಲಿ ಜೂಜು ಮೊದಲಾದ ಅನಿಷ್ಟಗಳಿದ್ದವು. ಇವುಗಳನ್ನು ತಡೆಯುವುದಕ್ಕೋಸ್ಕರವೇ ಏಕದೇವೋಪಾಸನೆಯ ಹೆಸರಿನಲ್ಲಿ ಸಂಘಟನೆಯನ್ನು ಬೆಳೆಸುವ ಉಪಾಯವನ್ನು ಅವರು
ಕೈಗೊಂಡರು. ಇದನ್ನು ದೇವರ ಹೆಸರಿನ ಮಾಡಿದರು.
ಇದರ ಉದ್ದೇಶ ಶಾಂತಿಯೆಂದು ಸಾರಿದರು. ಆದ್ದರಿಂದ ಇದು ಧರ್ಮ ಸ್ಥಾಪನೆಗಾಗಿ ಹುಟ್ಟಿಕೊಂಡ ಮತ. ಕ್ರೈಸ್ತ, ಬೌದ್ಧ, ಜೈನ ಇವೆಲ್ಲ ಹೀಗೆಯೇ ಹುಟ್ಟಿಕೊಂಡ ಮತಗಳು. ಇವು ಸಮಾಜದ ದೌರ್ಬಲ್ಯಗಳಿಗೆ, ಕಷ್ಟಗಳಿಗೆ ಸಾಂದರ್ಭಿಕವಾಗಿ ಕಂಡುಕೊಂಡ ಪರಿಹಾರಗಳಷ್ಟೇ ಆಗಿದ್ದವು. ಕಾಲಕ್ರಮೇಣ ಇದರ ಮುಂದೆ ಬೆಳೆದು ಬಂದವರು ಬದಲಾವಣೆಗಳನ್ನು ತಂದರು. ಶಾಂತಿಯ ಹೆಸರಿನಲ್ಲಿ ಸ್ಥಾಪನೆಯಾದ ಇಸ್ಲಾಂ ಮತ ಕಳೆದ ಇಷ್ಟೂ ವರ್ಷಗಳಲ್ಲಿ ಕನಿಷ್ಠ ನೂರು ವರ್ಷವನ್ನಾದರೂ
ಶಾಂತಿಯಿಂದ ಕಳೆದಿದೆಯೇ ಎಂಬುದು ಪ್ರಶ್ನೆಯಾಗಿ ಉಳಿದಿದೆ. (ಚರಿತ್ರೆಯನ್ನು ನೋಡಿದರೆ ಮುಸ್ಲಿಮರು ತಮ್ಮ ನೆಲದಲ್ಲಿ ಕಾಣದ ನೆಮ್ಮದಿಯ ಬದುಕನ್ನು ಕಂಡು ಕಟ್ಟಿಕೊಂಡದ್ದು ಭಾರತದ; ಆಗಲೂ, ಈಗಲೂ!) ಶಾಂತಿಯಿಂದ ಬದುಕುವುದಕ್ಕೆ ಅವಕಾಶವಿತ್ತಿದೆಯೇ? ಅವರಲ್ಲಿ ಈಗ ಮತ್ತೊಬ್ಬ ಮಹಮ್ಮದ್ ಪೈಗಂಬರ್ ಹುಟ್ಟಿಬರಬೇಕಾಗಿದೆ ಕುರಾನ್‌ನಲ್ಲಿಯ ಸುಧಾರಣೆಯ ಮಾತುಗಳನ್ನು ಸೇರಿಸಲು ಈ ಶತಮಾನಕ್ಕೆ ಒಪ್ಪುವಂತೆ!
ಯಾಕೆಂದರೆ, ಶ್ರೇಷ್ಠ ಚಿಂತಕ, ಕ್ರಾಂತಿಕಾರಿ ಪ್ರವಾದಿ ಪೈಗಂಬರರಂತೆಯೇ ಜನ್ಮಕ್ಕೆ ಬಂದ ಅಲ್ ಹಿಲ್ಲಜ್ ಮನ್ಸೂರ್ ಮೊದಲಾದವರನ್ನೂ ಕಡೆಗಣಿಸಿ ಕೇವಲ ಪೈಗಂಬರ್ ಮತ್ತು ಅವರು ನಿಧನ ಹೊಂದಿದ ಅನಂತರ ಬೇರೆ ಬೇರೆ ಜಾತಿ, ಉಪಜಾತಿಗಳ ವಿದ್ವಾಂಸರು ಸೇರಿ ಕ್ರೋಢೀಕರಿಸಿದ ಕುರಾನನ್ನು ಮಾತ್ರ ವೈಭವೀಕರಿಸಿ ಸಾವಿರದ ನಾಕುನೂರಕ್ಕೂ ಹೆಚ್ಚು ವರ್ಷಗಳ ಅನಂತರವೂ ಅದೇ ಮನಸ್ಥಿತಿಯಲ್ಲಿ ಸ್ತ್ರೀಯರನ್ನೂ, ಸಾಮಾನ್ಯ ಜನರ ಬದುಕನ್ನೂ ನರಕ
ಯಾತನೆಗೆ ಗುರಿಪಡಿಸುತ್ತಿರುವ ತಾಲಿಬಾನ್ ಅಂಥ ಉಗ್ರರನ್ನು ನಿಯಂತ್ರಿಸಲು ಇಂದಿನ ಮುಸ್ಲಿಂ ಮೌಲ್ವಿಗಳಿಂದ ಸಾಧ್ಯವಿಲ್ಲವಾದ್ದರಿಂದ!
ಮುಖ್ಯವಾಗಿ, ಸೆಮೆಟಿಕ್ ರಿಲಿಜನ್ನುಗಳಿಗೆ ಇಂಥ ಒಂದು ಸ್ಪರ್ಶ ಆಗಬೇಕಿದೆ! ಕುರಾನಿನಲ್ಲಿ ದೇವರ ನಾಮವಿಶೇಷಣಗಳಿವೆ. ಉತ್ಕಟವಾದ ಚಿಂತನೆಗಳಿವೆ. ಆದರೆ, ಪರಮಾತ್ಮನ ಬಗ್ಗೆ ಚೆನ್ನಾಗಿ ವಿವರಣೆ ನೀಡುವ ಕುರಾನ್ ಮನುಷ್ಯನ ಆತ್ಮದ ಬಗ್ಗೆ ಏನೂ ಹೇಳದಿರುವುದು ಅಚ್ಚರಿಯೆನಿಸುತ್ತದೆ. ಆದ್ದರಿಂದ ಇದೊಂದು ಪರಿಪೂರ್ಣ ಗ್ರಂಥವಾಗಲಾರದು ಎಂದೇ ತಿಳಿಯಲಾಗಿದೆ. ಯಾರು ತಮಗೆ ವಿರೋಧವಾಗಿದ್ದಾರೋ, ಅವರನ್ನು ಸೋಲಿಸಿ, ಸೋತವರು ಒಪ್ಪಿದರೆ ಅವರನ್ನು
ಒಂದೋ ಮುಸ್ಲಿಮರನ್ನಾಗಿ ಮಾಡುವುದು ಇಲ್ಲವೇ ಸಾಯಿಸುವುದೇ ಜಿಹಾದ್ ಎಂದು ಮುಸ್ಲಿಂ ಪಂಡಿತರು ಮೊದಲಿಂದಲೂ ಹೇಳುತ್ತಿದ್ದರು.
ಆದರೆ ಈಗಿನ ಮುಸ್ಲಿಂ ಬುದ್ಧಿಜೀವಿಗಳ ವರಸೆ ಬದಲಾಗಿದೆ. ಶಾಂತಿಗೆ ಸ್ವ ಪರಿವರ್ತನೆ ಅಗತ್ಯ. ಇದಕ್ಕಾಗಿ ಸಮಾಜದ ಎಲ್ಲರನ್ನೂ ಪ್ರೀತಿಸುವುದು ಅಗತ್ಯ ಎನ್ನುತ್ತಿದ್ದಾರೆ. ಪೈಗಂಬರರು ಜಿಹಾದ್ ಅನ್ನು ಸರಿಯಾಗಿಯೇ ಪ್ರತಿಪಾದಿಸಿರಬೇಕು. ಆನಂತರದಲ್ಲಿ ಯಾವ್ಯಾವುದೋ ಕಾರಣಕ್ಕೆ ಜಿಹಾದಿನ ಪರಿಭಾಷೆ
ಬದಲಾಗಿರಬೇಕು. ಇದಕ್ಕೂ ಮುಸ್ಲಿಂ ಖಲೀಫರ, ಪಂಡಿತರ, ಮುಗಳ, ರಾಜರುಗಳ ಸ್ವಾರ್ಥ ಕಾರಣವಿರಬೇಕು. ಈಗಂತೂ ಅದರ ಚರ್ಯೆಯೇ ಸಂಪೂರ್ಣವಾಗಿ ದಿಕ್ಕು ತಪ್ಪಿದೆಯೆನಿಸುತ್ತಿದೆ.
ಆಲೋಚಿಸಿ ನೋಡಿ, ಮತಾಂತರಕ್ಕೆ ಪ್ರೋತ್ಸಾಹವೂ ಇದೆ, ವಿರೋಧವೂ ಇದೆ. ಸೂಕ್ಷ್ಮವಾಗಿ ನೋಡಿದರೆ ಎಲ್ಲ ಧರ್ಮಗಳೂ ಒಂದೇ ಎಂದು ಹೇಳುವುದು ಒಂದು ರೀತಿಯಲ್ಲಿ ಆತ್ಮವಂಚನೆಯಾಗುತ್ತದೆ. ಪ್ರತಿಯೊಂದರಲ್ಲೂ ನಮ್ಮ ಧರ್ಮವೇ ಶ್ರೇಷ್ಠವೆಂದು ಮನಸು ಹಪಹಪಿಸುತ್ತದೆ. ಇದರಿಂದಾಗಿಯೇ ಭಿನ್ನಾಭಿಪ್ರಾಯಗಳು ಹುಟ್ಟಿ ಸಂಘರ್ಷಗಳು ನಡೆಯುತ್ತವೆ. ಒಂದು ಕಾಲದಲ್ಲಿ ಧರ್ಮ ಎಂಬುದು ಒಂದು ದೇಶದ ಪ್ರಜೆಗಳನ್ನು ಒಗ್ಗೂಡಿಸಿತ್ತು. ಆ ಧರ್ಮಕ್ಕೆ ಆ ಕಾಲಕ್ಕೆ ಅಗತ್ಯವಾದ ಉಪದೇಶಗಳನ್ನು ಕೊಟ್ಟು ಹೋದವರು ನಮ್ಮ ಹಿರಿಯರು. ಈಗ ದೇಶ ಹಾಗಿಲ್ಲ.
ಕಾಲವೂ ಬದಲಾಗಿದೆ. ಒಂದು ಧರ್ಮ ದೇಶವನ್ನು ಒಗ್ಗೂಡಿಸಲು ಸಾಧ್ಯವಿಲ್ಲ. ಬಹುಧರ್ಮಗಳು ಇಲ್ಲಿವೆ. ಹೀಗಿರುವಾಗ ಮತಗಳಲ್ಲಿ ಬದಲಾವಣೆ ಬೇಕಿದೆ. ಆದರೆ ಆ ಬದಲಾವಣೆಗಳನ್ನು ಯಾರು ಮಾಡಬೇಕು? ಎಲ್ಲಿ ಹೇಗೆ ಜಾರಿಗೊಳಿಸಬೇಕು? ನಮ್ಮ ಸಂವಿಧಾನದ ೩೬೮ನೆಯ ವಿಽನಿಯಮವು ಸಂವಿಧಾನವು ಕಾಲಕಾಲಕ್ಕೆ
ತಿದ್ದುಪಡಿಯಾಗಬೇಕೆಂಬ ಸತ್ಯವನ್ನು ಹೇಳುತ್ತದೆ. ಆ ಕ್ರಮವನ್ನೂ ಸೂಚಿಸುತ್ತದೆ. ಹೀಗಿರುವಾಗ ಕಾಲಕಾಲಕ್ಕೆ ಸತ್ಯಗಳು ಬದಲಾಗುತ್ತವೆ ಎಂಬುದನ್ನು ಮತಸ್ಥಾಪಕರು ಅರಿಯದೆ ಹೋದರೇ? ಆಯಾಕಾಲಕ್ಕೆ ಅನ್ವಯಿಸಬಲ್ಲ ತತ್ವಗಳನ್ನು ಮಾತ್ರ ಹೇಳಿ ಬದಲಾವಣೆಗೆ ಅವಕಾಶವೀಯದೆ ತಪ್ಪು ಮಾಡಿದರೆ? ಸಮಾಜ ಬದಲಾಗಿದೆ.
ಆದರೆ, ಮತಧರ್ಮಗಳು ಯಾವುದೋ ಕಾಲಕ್ಕೆ ಆತುಕೊಂಡೇ ಇದೆ. ಯಾವ ಧರ್ಮದಿಂದಲೂ ಮನುಷ್ಯನನ್ನು ಬದಲಾಯಿಸಲು ಸಾಧ್ಯವಿಲ್ಲ ಎಂತಾದ ಮೇಲೆ ಧರ್ಮದ ಹಂಗೇಕೆ? ಆದ್ದರಿಂದ ಮುಖ್ಯವಾಗಿ ಬೇಕಾದುದು ಮಾನವ ಧರ್ಮ. ಅದೇ ಇಲ್ಲದೆ ಹೋದರೆ ಏನಾಗುತ್ತದೆಂಬುದಕ್ಕೆ ಈಗ ಆಗುತ್ತಿರುವ ವೈಪರೀತ್ಯಗಳು ಜ್ವಲಂತ ನಿದರ್ಶನ. ಉಳಿದ ಮತಗಳಿಗೆ ಹೋಲಿಸಿದರೆ ಮುಸ್ಲಿಂ ಮತದಲ್ಲಿ ಮುಖ್ಯವಾಗಿ ವೈಚಾರಿಕವಾದ ಕಾಠಿಣ್ಯವಿದೆ. ಇದರಿಂದಾಗಿಯೇ ಅದರಲ್ಲಿ ಗೊಂದಲ ಗಳಿವೆ. ಆ ಗೊಂದಲಗಳು ಅವರನ್ನೂ ಕಾಡುತ್ತದೆ, ಉಳಿದವರನ್ನೂ ಕಾಡುತ್ತದೆ. ಈ ಮಾತು ಆ ಮತಾನುಯಾಯಿಗಳಿಗೆ ಅಪಥ್ಯವೆನಿಸಬಹುದು. ಆದರೆ ಇದು ಸತ್ಯ! ಬೇಕಾದರೆ ಅವರಲ್ಲಿರುವ ಷರಿಯತ್, ಜಿಹಾದ್, ಫತ್ವಾ, ತಲಾಖ್ ಅನ್ನು ನೋಡಿ.
ಮುಸ್ಲಿಂ ಭಯೋತ್ಪಾದನೆ, ವಿಜ್ಞಾನದೆಡೆಗೆ ಮುಸ್ಲಿಂ ಕರ್ಮಠರ ನಿಲುವು, ಇವತ್ತು ಮುಸ್ಲಿಂ ರಾಷ್ಟ್ರಗಳು ಇತರರೆಡೆಗೆ ತಳೆದಿರುವ ರಾಜಕೀಯ ನಿಲುವುಗಳು, ಮುಗಳು ಬೋಽಸುವ ಮಡಿವಂತ ಇಸ್ಲಾಂ-ಹೇಗಿದೆಯೆಂದು ವಿಶ್ಲೇಷಿಸುವ ಅಗತ್ಯವೇ ಇಲ್ಲ. ಭಯೋತ್ಪಾದಕ ಸಂಘಟನೆಗಳನ್ನು ನೋಡಿ, ಅವೆಲ್ಲವೂ
ಮುಸ್ಲಿಮರದ್ದೇ! ಹಿಂದೂ ಭಯೋತ್ಪಾದನೆ ಸಂಘಟನೆಗಳು ಅಂತ ಎಲ್ಲೂ ಇಲ್ಲ. ಜಗತ್ತಿನ ಯಾವುದೋ ಮೂಲೆಯಲ್ಲಿ ಆಗುವ ಅವಘಡಗಳನ್ನು ಅದ್ವಾನಗಳನ್ನು ವಿಶೇಷವಾಗಿ ಅರ್ಥ ಮಾಡಿಕೊಳ್ಳಬಲ್ಲ, ವಿಶ್ಲೇಷಿಸಬಲ್ಲ ಆಕಾಶದಿಂದ ಇಳಿದುಬಂದ ನಮ್ಮ ಬುದ್ಧಿಜೀವಿಗಳು, ಕಾಂಗ್ರೆಸ್ಸಿಗರು, ಕಾಮ್ರೇಡುಗಳು, ಲೆ-ರು, ಲೆ- ಔಟರು, ಎಡಬಿಡಂಗಿ ಜಾತ್ಯತೀತರು- ಮುಸ್ಲಿಂ ಉಗ್ರವಾದ ಮತ್ತು ಭಯೋತ್ಪಾದನೆಯ ವಿಷಯಕ್ಕೆ ಬಂದರೆ ಜಾಣ ಮೌನರಾಗಿ ಬಿಡುತ್ತಾರೆ.
ಕಿವುಡರಾಗಿ ಬಿಡುತ್ತಾರೆ. ಇಸ್ಲಾಂ, ಕ್ರೈಸ್ತ, ಪಾರಸಿ, ಬೌದ್ಧ, ಜೈನ, ಸಿಖ್- ಎಲ್ಲ ಮತ ಧರ್ಮಗಳೂ ಸರಿ. ಹಿಂದೂ ಧರ್ಮವೊಂದು ಮಾತ್ರ ಸರಿಯಿಲ್ಲ ಎಂದು ಬಾಯಿಗೆ ಬಂದಂತೆ ಮಾತನಾಡುತ್ತಾರೆ. ವಿಚಿತ್ರ ನೋಡಿ, ಹಿಂದೂ ಪದದ ಅರ್ಥವೇ ತಿಳಿಯದೆ ಹಿಂದೂವಾಗಿದ್ದೇ ಹಿಂದುತ್ವವನ್ನು ವಿರೋಧಿಸುತ್ತಾರೆ.
ಹಿಂದೂಸ್ತಾನದಲ್ಲಿದ್ದೇ ಈ ನೆಲವನ್ನು ಕುಚೋದ್ಯ ಮಾಡುತ್ತಾರೆ. ಸ್ಥಳೀಯತೆಯನ್ನು ಒಪ್ಪುವವರು ರಾಷ್ಟ್ರೀಯತೆಯನ್ನು ವಿರೋಧಿಸುತ್ತಾರೆ. ಮುಸ್ಲಿಂ ಸಂವೇದನೆ ಯೆಂಬುದು ಮಿತಿ ಮೀರಿದೆ. ಜಾತಿನಾಶವನ್ನು ಬಯಸುವವರು ಎಲ್ಲ ಜಾತಿಗಳ ನಾಶವನ್ನೂ ಬಯಸಬೇಕು. ಸುಖಾಸುಮ್ಮನೆ ಅಲ್ಪ ಸಂಖ್ಯಾತ ಪರ ಅಂತ ಸೋಗು ಹಾಕಿಕೊಂಡು ಷೋಕಿ ಮಾಡಬಾರದು. ತಾವು ಚೆನ್ನಾಗಿದ್ದು ಜನರ ದಾರಿ ತಪ್ಪಿಸಬಾರದು.
ಕೊನೆಯ ಮಾತು
ಇಲ್ಲದ ಹಿಂದೂ ಮೂಲಭೂತವಾದ ವಿರೋಧಿಸುವವರು ಮುಸ್ಲಿಂ ಮೂಲಭೂತವಾದವನ್ನು ವಿರೋಧಿಸಬೇಕಿದೆ. ಕೇವಲ ಬಿಜೆಪಿ, ಆರ್‌ಎಸ್‌ಎಸ್, ವಿಹಿಂಪ ಅಂತ
ಹೀಗಳೆಯುವವರಿಗೆ ಸ್ವಚ್ಛಂದವಾಗಿ ತಮಗೆ ಬೇಕಾದಂತೆ ಮಾತನಾಡುತ್ತ, ಬೇಕಾದಂತೆ ಬದುಕುವುದಕ್ಕೆ ಇರುವುದು ಈ ದೇಶ ಮಾತ್ರ ಎಂಬುದು ಅರಿವಾಗ ಬೇಕಿದೆ. ಭಾರತೀಯ ಪರಂಪರೆಯಲ್ಲಿ ನಂಬಿಕೆಯನ್ನಿಟ್ಟು ಬೆಳೆದುಬಂದ ಸುಸಂಸ್ಕೃತ ಮುಸ್ಲಿಮರಿಗೆ ಇದು ಎಂದೋ ಅರ್ಥವಾಗಿದೆ. ಜಗತ್ತಿನ ಎಲ್ಲ ರಾಷ್ಟ್ರಗಳೂ ಹೆಚ್ಚು ಕಡಿಮೆ ಒಂದೇ ಕ್ರೈಸ್ತಮತವನ್ನು, ಇಲ್ಲ ಇಸ್ಲಾಂ ಮತವನ್ನು ಅಳವಡಿಸಿಕೊಂಡಿದೆ.
ನಾವು ಮಾತ್ರ ಎಲ್ಲವನ್ನೂ ಅಳವಡಿಸಿಕೊಂಡು ಅವುಗಳನ್ನು ಪ್ರೋತ್ಸಾಹಿಸುತ್ತ ಬೆಳೆಸುತ್ತ ಬಹುತ್ವದ ಭಾರತದ ನಿಜವಾದ ಸೌಹಾರ್ದದಲ್ಲಿ ಬದುಕುತ್ತಿದ್ದೇವೆ, ಬದುಕಗೊಡುತ್ತಿದ್ದೇವೆ. ಅಫಘಾನಿಸ್ತಾನ ದಲ್ಲಿ ನಡೆದುದನ್ನು ನೋಡಿದ ಮೇಲೂ ನಮ್ಮ ಔದಾರ್ಯವನ್ನು ಮಿತಗೊಳಿಸಿಕೊಳ್ಳಬೇಕಿದೆ. ಇನ್ನಾದರೂ ಅರಾಷ್ಟ್ರೀಯ ವಾದಿಗಳಿಗೆ ಬುದ್ಧಿ ಬರುವುದಿಲ್ಲ ಎಂತಾದರೆ ಬುದ್ಧಿ ಬರಿಸಬೇಕಿದೆ!