Friday, 13th December 2024

ಸಾಕಿನ್ನು ಅಲ್ಪಸಂಖ್ಯಾತರೆಂಬ ಹಣೆಪಟ್ಟಿ

ವೀಕೆಂಡ್ ವಿತ್‌ ಮೋಹನ್

ಮೋಹನ್ ವಿಶ್ವ

camohanbn@gmail.com

ಮುಸಲ್ಮಾನ್ ಮೂಲಭೂತವಾದಿಗಳ ಗಲಾಟೆ ಶುರುವಾದ ದಿನದಿಂದಲೂ ಹಲವರಿಗೆ ಅಲ್ಪಸಂಖ್ಯಾತರೆಂದರೆ ಯಾರು ಎಂಬ ಗೊಂದಲ ಗಳು ಶುರುವಾಗಿದೆ? ರಾಜಕೀಯವಾಗಿ ಹಲವು ಬಾರಿ ಈ ಪದ ಬಳಕೆಯಾಗುತ್ತಿರುತ್ತದೆ.

ಮೂಲತಃ ಹಿಂದೂ ಬಹುಸಂಖ್ಯಾತ ರಾಷ್ಟ್ರವಾದ ಭಾರತದಲ್ಲಿ ಅಲ್ಪಸಂಖ್ಯಾತರೆಂದರೆ ಮೋದಿ ವಿರೋಧಿಗಳಿಗೆ ನೆನಪಾಗುವುದೇ ಮುಸಲ್ಮಾನರು. ಪಾರ್ಸಿಗಳ ಬಗ್ಗೆ ಇವರು ಮಾತನಾಡುವುದಿಲ್ಲ, ಜೈನರ ಆಚರಣೆಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಮುಸಲ್ಮಾನರು ಅಲ್ಪಸಂಖ್ಯಾತರೆಂದು ಕರೆಸಿಕೊಂಡರೂ ಸಹ ಅವರ ಜನಸಂಖ್ಯೆ ಇವರೆಲ್ಲರಿಗಿಂತಲೂ ಹೆಚ್ಚಿದೆ. ಆದರೂ ಅವರನ್ನು ಮಾತ್ರ ಅಲ್ಪ ಸಂಖ್ಯಾತರೆಂದು ಕರೆಯುತ್ತಾರೆ. ಈ ಅಲ್ಪಸಂಖ್ಯಾತ ಧರ್ಮವನ್ನು ಪ್ರತಿನಿಧಿಸುವ ಬಾಲಿವುಡ್‌ನ ಖಾನ್‌ಗಳು ವರ್ಷಕ್ಕೆ ಸಾವಿರಾರು ಕೋಟಿಯ ವ್ಯವಹಾರವನ್ನು ಮಾಡುತ್ತಿದ್ದಾರೆ, ಅಷ್ಟು ವ್ಯವಹಾರ ಮಾಡಿದರೂ ಸಹ ಇವರನ್ನು ಅಲ್ಪಸಂಖ್ಯಾತರೆಂದು ಕರೆಯಲಾಗುತ್ತಿದೆ.

ಅಲ್ಪಸಂಖ್ಯಾತರೆಂಬ ರಕ್ಷಾ ಕವಚವನ್ನು ಮುಂದಿಟ್ಟುಕೊಂಡು ಭಾರತದ ಪ್ರತಿಯೊಂದು ರಾಜ್ಯದಲ್ಲಿಯೂ ಸರ್ಕಾರಗಳು ಕೋಟ್ಯಂತರ ರುಪಾಯಿಯ ಹಣವನ್ನು ಖರ್ಚು ಮಾಡುತ್ತಿವೆ. ಹಲವು ದಶಕಗಳಿಂದ ಕಟ್ಟಿದ ಹಿಂದೂ ದೇವಸ್ಥಾನಗಳು ಸರಕಾರದ ಮುಜರಾಯಿ ಇಲಾಖೆಯಡಿಯಲ್ಲಿ ಆಡಳಿತ ನಡೆಸುತ್ತವೆ. ಆದರೆ ಮಸೀದಿಗಳಿಗೆ ಮಾತ್ರ ಸ್ವಾತಂತ್ರ್ಯ. ಮುಸಲ್ಮಾನರು ಆರಾಽಸುವ ಅನಿಗೂ ಸಹ ಅಲ್ಪಸಂಖ್ಯಾತನೆಂಬ ಪಟ್ಟ. ಹಿಂದೂ ದೇವಸ್ಥಾನಗಳು ಕೇವಲ ಆದಾಯದ ಮೂಲವಾಗಿ ಸರ್ಕಾರಗಳಿಗೆ ಕಾಣಿಸುತ್ತಿವೆ. ಮುಜರಾಯಿ ಇಲಾಖೆಯಡಿಯಲ್ಲಿನ ಹುಂಡಿಯ ಹಣವು ನೇರವಾಗಿ ಸರಕಾರದ ಬೊಕ್ಕಸ ಸೇರಿದ ನಂತರ ಮುಸಲ್ಮಾನರ ಅಭಿವೃದ್ಧಿಗೆ ಬಳಕೆ ಯಾಗುತ್ತಿದೆ.

ಅಲ್ಪಸಂಖ್ಯಾತರನ್ನು ರಕ್ಷಣೆ ಮಾಡಬೇಕೆಂದು ಸಂವಿಧಾನದಲ್ಲಿ ಹೇಳಲಾಗಿದೆ. ಆದರೆ ಬಹುಸಂಖ್ಯಾತರ ಭಾವನೆಗಳಿಗೆ ಧಕ್ಕೆ ಬರುವಂತೆ ಅಲ್ಪಸಂಖ್ಯಾತರ ರಕ್ಷಣೆ ಮಾಡುವುದೆಷ್ಟು ಸರಿ? ಸ್ವಾತಂತ್ರ್ಯ ನಂತರ ಕಾಂಗ್ರೆಸ್ಸಿನ ನಾಯಕರುಗಳು ವೋಟಿನ ಆಸೆಗಾಗಿ, ಮುಸಲ್ಮಾನ ರಿಗೆ ಅಲ್ಪಸಂಖ್ಯಾತರೆಂಬ ಹಣೆಪಟ್ಟಿಯನ್ನು ಕಟ್ಟಿ ಹಲವು ಯೋಜನೆಗಳನ್ನು ಜಾರಿಗೆ ತಂದರು. ವಿಪರ್ಯಾಸವೆಂದರೆ 1947ರಲ್ಲಿ ಅಖಂಡ ಭಾರತ ವಿಭಜನೆಯಾದಾಗ, ಪಾಕಿಸ್ತಾನಕ್ಕೆ ಹೋದ ಹಿಂದೂಗಳು ಹೀನಾಯ ಪರಿಸ್ಥಿತಿಯಲ್ಲಿದ್ದಾರೆ.

ಪಾಕಿಸ್ತಾನದಲ್ಲಿನ ಅಲ್ಪ ಸಂಖ್ಯಾತ ಹಿಂದೂಗಳಿಗೆ ಅಲ್ಲಿನ ಸರ್ಕಾರ ಯಾವ ಸವಲತ್ತು ಗಳನ್ನೂ ನೀಡುತ್ತಿಲ್ಲ. ಬಾಯಿಬಿಟ್ಟು ಸರ್ಕಾರದ ವಿರುದ್ಧ ಒಂದು ಮಾತನ್ನೂ ಆಡುವಂತಿಲ್ಲ. ತಮ್ಮ ಹಕ್ಕುಗಳ ಬಗ್ಗೆ ಸಮಾಜದಲ್ಲಿ ಬಹಿರಂಗವಾಗಿ ಹೇಳಿಕೆಯನ್ನು ಕೊಡುವಂತಿಲ್ಲ.
ಪಾಕಿಸ್ತಾನದಲ್ಲಿನ ಸಾವಿರಾರು ದೇವಸ್ಥಾನಗಳನ್ನು ಅಲ್ಲಿನ ಸರಕಾರಿ ಪ್ರಾಯೋಜಿತ ಭಯೋತ್ಪಾದಕರೇ ನಾಶ ಮಾಡಿದ್ದಾರೆ.

ಆದರೆ ಭಾರತದಲ್ಲಿ ಅಲ್ಪಸಂಖ್ಯಾತರೆಂಬ ರಕ್ಷಾ ಕವಚ ಹೊಂದಿರುವ ಮುಸಲ್ಮಾನರು ಮಾತ್ರ ಸರಕಾರಗಳು ಎಷ್ಟೇ ಯೋಜನೆಗಳನ್ನು ನೀಡಿದರೂ ಸಹ ಬಂಗಾಳದಲ್ಲಿ ರೈಲಿಗೆ ಬೆಂಕಿಯಿಡುತ್ತಾರೆ. ದೆಹಲಿಯಲ್ಲಿ ಪೊಲೀಸರ ಮೇಲೆ ಕಲ್ಲು ತೂರುತ್ತಾರೆ, ಬಸ್ಸಿಗೆ ಬೆಂಕಿಯಿ ಡುತ್ತಾರೆ. ಬೆಂಗಳೂರಿನಲ್ಲಿ ಪೊಲೀಸ್ ಸ್ಟೇಷನ್ಗೆ ನುಗ್ಗಿ ಧ್ವಂಸ ಮಾಡುತ್ತಾರೆ, ದಲಿತ ಶಾಸಕನ ಮನೆಗೆ ಬೆಂಕಿಯಿಡುತ್ತಾರೆ, ಹುಬ್ಬಳ್ಳಿಯಲ್ಲಿ
ಪೊಲೀಸ್ ಠಾಣೆಗೆ ನುಗ್ಗಿ ಗಲಭೆ ಮಾಡುತ್ತಾರೆ. ಬಹುಸಂಖ್ಯಾತ ರಾಷ್ಟ್ರ ಭಾರತದ ಹೊರಗಡೆ ಅಲ್ಪಸಂಖ್ಯಾತರಾಗಿ ಹಿಂಸೆ ಅನುಭವಿಸು ತ್ತಿರುವ ಹಿಂದೂಗಳನ್ನು ನಾವು ಕರೆಸಿಕೊಂಡರೆ, ಅಲ್ಪಸಂಖ್ಯಾತ ಮುಸಲ್ಮಾನರು ಇಲ್ಲಿನ ಸರಕಾರದ ವಿರುದ್ಧ ತಿರುಗಿ ಬೀಳುತ್ತಾರೆ.

ಹಾಗಾದರೆ ಇವರನ್ನು ಹೇಗೆ ತಾನೇ ಅಲ್ಪಸಂಖ್ಯಾತರೆಂದು ಕರೆಯಲು ಸಾಧ್ಯ? ಭಾರತ ದೇಶವು ಇಷ್ಟು ವರ್ಷಗಳ ಕಾಲ ಇವರಿಗೆ ಇಷ್ಟೊಂದು ಸೌಲಭ್ಯಗಳನ್ನು ನೀಡಿದ ನಂತರವೂ ಸಹ ಇವರ ದಾಂಧಲೆಗಳು ನಿಲ್ಲುತ್ತಿಲ್ಲವೆಂದ ಮೇಲೆ ಇವರನ್ನು ಅಲ್ಪಸಂಖ್ಯಾತರೆನ್ನು
ವುದರಲ್ಲಿ ಅರ್ಥವಿಲ್ಲ. ಚೀನಾ ದೇಶದಲ್ಲಿನ ಅಲ್ಪಸಂಖ್ಯಾತ ಮುಸಲ್ಮಾನರನ್ನು ಎಷ್ಟು ಹೀನಾಯವಾಗಿ ನಡೆಸಿಕೊಳ್ಳಲಾಗುತ್ತಿದೆಯೆಂದರೆ, ಮಸೀದಿಯೊಂದನ್ನು ನಾಶ ಮಾಡಿ ಅದರ ಮೇಲೆ ಸಿನಿಮಾ ಥೀಯೇಟರ್ ಕಟ್ಟಿದ್ದಾರೆ.

ಅಲ್ಲಿನ ಸರಕಾರದ ವಿರುದ್ಧ ತಿರುಗಿ ಬಿದ್ದ ಅಲ್ಪಸಂಖ್ಯಾತನನ್ನು ಮುಲಾಜಿಲ್ಲದೆ ನೇಣಿಗೆ ಹಾಕಲಾಗುತ್ತದೆ. ಮಧ್ಯಪ್ರಾಚ್ಯದಲ್ಲಿ ಇಸ್ರೇಲ್ ದೇಶದ ಯಹೂದಿಗಳ ಸುತ್ತಲೂ ಮುಸ್ಲಿಮ್ ದೇಶಗಳಿವೆ. ಇಡೀ ಪ್ರಾಂತ್ಯದ ಅತ್ಯಲ್ಪಸಂಖ್ಯಾತರು ಯಹೂದಿಗಳು. ಇಂಥ ಯಹೂದಿಗಳ
ವಿರುದ್ಧ ಸುತ್ತಲೂ ಇರುವ ಮುಸ್ಲಿಮ್ ದೇಶಗಳು ಸದಾ ಕಾಲು ಕೆರೆದುಕೊಂಡು ಜಗಳಕ್ಕೆ ಹೋಗುತ್ತಿರುತ್ತವೆ. ಭಾರತ ದಲ್ಲಿ ಅಲ್ಪಸಂಖ್ಯಾತ ರೆಂದು ಕರೆಸಿಕೊಳ್ಳುವ ಮುಸಲ್ಮಾನರಿಗೆ ಯಹೂದಿಗಳ ಮೇಲೆ ಕರುಣೆಯಿಲ್ಲ.

ಭಾರತದಂತಹ ರಾಷ್ಟ್ರದಲ್ಲಿ ಅಲ್ಪಸಂಖ್ಯಾತರಿಗೆಂದೇ ಪ್ರತ್ಯೇಕ ಯೋಜನೆಗಳನ್ನು ರೂಪಿಸಿದರೂ ಸಹ ಇವರಿಗೆ ಭಾರತದ ಮೇಲೆ ತಾತ್ಸಾರ. ಬಹಿರಂಗವಾಗಿ ಸಂವಿಧಾನಕ್ಕಿಂತಲೂ ಧರ್ಮ ಮುಖ್ಯವೆಂದು ಹೇಳುತ್ತಾರೆ. ಸರಕಾರಗಳು ನೀಡುವ ಬಡಪರ ಯೋಜನೆ ಗಳಲ್ಲಿ ಅತಿ ಹೆಚ್ಚಿನ ಫಲಾನುಭವಿಗಳು ಮುಸಲ್ಮಾನರು. ಅವರಿಗೆ ಯಾವ ಸರಕಾರವು ತಮಗೆ ಯೋಜನೆಗಳನ್ನು ನೀಡುತ್ತಿದೆಯೆಂಬ ತಿಳಿವಳಿಕೆಯು ಇರುವುದಿಲ್ಲ. ಆದರೆ ಸರಕಾರದ ಪ್ರತಿಯೊಂದೂ ಯೋಜನೆಗಳು ಬೇಕು.

ನಂತರ ಸರಕಾರದ ವಿರುದ್ಧ ತಿರುಗಿ ಬಿದ್ದು ರೈಲುಗಳಿಗೆ, ಬಸ್ಸುಗಳಿಗೆ ಬೆಂಕಿ ಹಚ್ಚುವುದು. ಭಾರತದಲ್ಲಿ ಅಂದಾಜು ಸುಮಾರು ೨೧ಕೋಟಿ ಮುಸಲ್ಮಾನರಿದ್ದಾರೆ. ಭಾರತದ ಒಟ್ಟಾರೆ ಜನಸಂಖ್ಯೆ ಅಂದಾಜು 138 ಕೋಟಿಯನ್ನು ತಲುಪಿದೆ. ಹೀಗಿರುವಾಗ ಹೇಗೆ ತಾನೇ ಇವರನ್ನು ಅಲ್ಪಸಂಖ್ಯಾತರೆಂದು ಪರಿಗಣಿಸಬೇಕು? ಅಲ್ಪಸಂಖ್ಯಾತರಿಂದ ಬಹುಸಂಖ್ಯಾತರಾಗುವುದೇ ಇವರ ಗುರಿಯಾಗಿರುವಾಗ ಹೇಗೆ ಇವರು ಅಪಾಯ ದಂಚಿನಲ್ಲಿದ್ದಾರೆ? ಸ್ಪೇನ್ ರಾಷ್ಟ್ರದಲ್ಲಿ ಸಾವಿರಾರು ಜನರಿದ್ದ ರಸ್ತೆಯ ಮೇಲೆ ಅಲ್ಪಸಂಖ್ಯಾತನೊಬ್ಬ ಟ್ರಕ್ ಹರಿಸಿದ್ದ, ಪ್ಯಾರಿಸ್ ಬೀದಿಗಳಲ್ಲಿ ಗುಂಡಿನ ಮಳೆಗೆರೆದವನ್ಯಾರು? ಲಂಡನ್‌ನ ಬಸ್ಸಿನಲ್ಲಿ ಬಾಂಬ್ ಇಟ್ಟವರಾರು? ಇವರೆಲ್ಲರೂ ನಿರಾಶ್ರಿತರಾಗಿ ಬಂದು ಅಲ್ಪಸಂಖ್ಯಾತರಂತೆ ಗುರುತಿಸಿಕೊಂಡವರು.

ಯೂರೋಪಿನ ಬಹುಪಾಲು ರಾಷ್ಟ್ರಗಳು ಪಾಕಿಸ್ತಾನ, ಅಫ್ಘಾನಿಸ್ತಾನ, ಇರಾನ್,ಇರಾಕ್, ಆಫ್ರಿಕಾದ ರಾಷ್ಟ್ರಗಳಿಂದ ಬಂದಂತಹ ಹಲವು ನಿರಾಶ್ರಿತರನ್ನು ತಮ್ಮೊಳಗೆ ಬಿಟ್ಟುಕೊಂಡರು. ಅವರೆಲ್ಲರೂ ಸಹ ತಾವು ಬಹುಸಂಖ್ಯಾತರಾಗಬೇಕೆಂಬ ಉದ್ದೇಶದಿಂದಲೇ ಬಂದವರು. ಒಳಗೆ ಬಂದ ನಂತರ ತಮ್ಮ ಬಾಲ ಬಿಚ್ಚಲು ಶುರು ಮಾಡಿದರು. ಈಗ ಇಡೀ ಯೂರೋಪನ್ನೇ ಅಲ್ಪಸಂಖ್ಯಾತರು ಆವರಿಸಿಕೊಂಡಿದ್ದಾರೆ. ಹೆಸರಿಗೆ ಮಾತ್ರ ನಿರಾಶ್ರಿತರು ಹಾಗೂ ಅಲ್ಪಸಂಖ್ಯಾತರೆಂಬ ಹಣೆಪಟ್ಟಿ ಆದರೆ ತಮಗೆ ಆಶ್ರಯ ನೀಡುವ ಯಾವೊಂದು ದೇಶಕ್ಕೂ
ಬಹುಪಾಲು ಅಲ್ಪಸಂಖ್ಯಾತರು ಭದ್ಧರಾಗಿರುವುದಿಲ್ಲ.

ಹೀಗಿರುವಾಗ ಯಾಕಿವರಿಗೆ ಅಲ್ಪಸಂಖ್ಯಾತರೆಂಬ ಪಟ್ಟ? ದೇಶದಲ್ಲಿರುವ ಇಪ್ಪತ್ತೊಂದು ಕೋಟಿ ಮುಸಲ್ಮಾನ್ ಅಲ್ಪಸಂಖ್ಯಾತರ ಮತ ಬ್ಯಾಂಕಿಗಾಗಿ ವಿರೋಧ ಪಕ್ಷಗಳು ಅದ್ಯಾವ ರೀತಿಯ ಓಲೈಕೆ ಮಾಡುತ್ತವೆಂದರೆ, ಮಮತಾ ಬ್ಯಾನರ್ಜಿ ಬಂಗಾಳದಲ್ಲಿ ಹಿಂದೂಗಳು ವಾಸಿಸುವ ಭೂಗೋಳವನ್ನೇ ಬದಲಾಯಿಸಿದ್ದಾರೆ. ಕಾಂಗ್ರೆಸ್ಸಿನ ಜಮೀರ್ ಅಹ್ಮದ್ ಖಾನ್ ಪಾದರಾಯನಪುರದ ಪುಂಡರನ್ನು ಕೆಂಪು ಹಾಸಿನ ಮೂಲಕ ಜೈಲಿನಿಂದ ಬಿಡಿಸಿಕೊಂಡು ಬಂದಿದ್ದಾಯಿತು. ಹುಬ್ಬಳ್ಳಿ ಗಲಭೆಕೋರರ ಪರವಾಗಿ ಕಾಂಗ್ರೆಸ್ ನಾಯಕ ಅಲ್ತಾಫ್ ನಿಂತಿದ್ದಾಯಿತು.

ದೇವೇಗೌಡರು ಮುಂದಿನ ಜನ್ಮದಲ್ಲಿ ಮುಸಲ್ಮಾನನಾಗಬೇಕೆಂಬ ಇಂಗಿತವನ್ನು ವ್ಯಕ್ತಪಡಿಸಿದ್ದಾಯಿತು. ಕುಮಾರಸ್ವಾಮಿ ಗಲಭೆ ಕೋರರನ್ನು ಅಮಾಯಕರೆಂದರು ಮತ್ತು ಸಿದ್ದರಾಮಯ್ಯ ಮಂಗಳೂರು ಗಲಭೆ ಕೋರರ ಮನೆಗಳಿಗೆ ಭೇಟಿ ನೀಡಿಯಾಯಿತು. ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಸಹ ಅಲ್ಪಸಂಖ್ಯಾತರಿಗೆ ಬೇಕಿರುವ ಶಿಕ್ಷಣ ನೀಡುವಲ್ಲಿ ಕಾಂಗ್ರೆಸ್ ವಿಫಲವಾಗಿದೆ. ಹಿಜಾಬ್ ವಿಚಾರದಲ್ಲಿ ಕಾಂಗ್ರೆಸ್ ಮುಸಲ್ಮಾನ್ ವಿದ್ಯಾರ್ಥಿಗಳ ಭವಿಷ್ಯದ ಪರವಾಗಿ ಚಿಂತಿಸಲಿಲ್ಲ.

ಇವರಿಗೆ ಸರಿಯಾದ ಶಿಕ್ಷಣ ನೀಡಿದರೆ ತಮಗೆ ವೋಟು ಬೀಳುವುದಿಲ್ಲವೆಂದು ಕಾಂಗ್ರೆಸ್ಸಿಗೆ ಚೆನ್ನಾಗಿ ಗೊತ್ತು. ಹಾಗಾಗಿ ಇವರಿಗೆ ಸರಿ ಯಾದ ಶಿಕ್ಷಣ ನೀಡಲಿಲ್ಲ ಮತ್ತು ಅಬ್ದುಲ್ ಕಲಾಂ ಅವರಂತಹ ಮಹಾನ್ ನಾಯಕರನ್ನು ಆದರ್ಶವಾಗಿಸಿಕೊಳ್ಳಿ ಎಂದು ಯಾವ ಮುಸಲ್ಮಾನ ನಾಯಕರೂ ಹೇಳುವುದಿಲ್ಲ. ಅಲ್ಪಸಂಖ್ಯಾತರು ದೇವರ ಹೆಸರಿನಲ್ಲಿ ಮಾಡುವ ಗಲಭೆಗಳಿಗೆ ಬೆಂಬಲ, ಅಲ್ಪಸಂಖ್ಯಾತರು ಧರ್ಮದ ಹೆಸರಿನಲ್ಲಿ ಮಾಡುವ ಗಲಭೆಗಳಿಗೆ ಬೆಂಬಲ, ಅಲ್ಪಸಂಖ್ಯಾತರು ಹಬ್ಬಗಳ ಆಚರಣೆಗಳ ಹೆಸರಿನಲ್ಲಿ ಮಾಡುವ ಗಲಭೆಗಳಿಗೆ
ಬೆಂಬಲ, ಒಟ್ಟಿನಲ್ಲಿ ಅವರು ಏನು ಮಾಡಿದರೂ ಸರಿಯೆಂಬ ಸಂದೇಶ ನೀಡುವ ಮೂಲಕ ಬಹುಸಂಖ್ಯಾತರಿಗೆ ಭಯ ಹುಟ್ಟಿಸಲಾಗುತ್ತಿದೆ.

ಕೆ.ಜಿ.ಹಳ್ಳಿಯಲ್ಲಿ ನಡೆದ ಘಟನೆಯಿಂದ ಭಯಬಿದ್ದವರು ಬಹು ಸಂಖ್ಯಾತರು. ದೆಹಲಿಯ ಘಟನೆಯಿಂದ ಭಯಬಿದ್ದವರು ಬಹುಸಂಖ್ಯಾತರು. ಯಾರೋ ಮಾಡಿದ ಪ್ರಚೋದನೆಯಿಂದ ಸಾರ್ವಜನಿಕ ಅಸ್ತಿ ಪಾಸ್ತಿಯನ್ನು ನಾಶ ಮಾಡುವ ಮಟ್ಟಕೆ ಬೀದಿಗಿಳಿಯುತ್ತಾರೆಂದರೆ ಇವರನ್ನು ಅಲ್ಪಸಂಖ್ಯಾತರೆಂದು ಒಪ್ಪಿಕೊಳ್ಳಬೇಕಿಲ್ಲ. ಮುಲಾಜಿಲ್ಲದೆ ಅಲ್ಪಸಂಖ್ಯಾತರೆಂಬ ಹಣೆಪಟ್ಟಿಯನ್ನು ತೆಗೆದು ಇತರರ ಸಮಾನವಾಗಿ ನೋಡಬೇಕು. ದೇಶದ ಪ್ರಗತಿಯಲ್ಲಿ ಅಲ್ಪಸಂಖ್ಯಾತರು ಕಟ್ಟುವ ತೆರಿಗೆಯ ಪ್ರಮಾಣವನ್ನು ಲೆಕ್ಕ ಹಾಕಬೇಕು. ಅದರ ಅನುಪಾತದಲ್ಲಿ ಅವರಿಗೆ ಸಿಗುತ್ತಿರುವ ಸರಕಾರದ ಸವಲತ್ತುಗಳ ಲೆಕ್ಕ ಹಾಕಬೇಕು.

ಸಾಮಾಜಿಕ ಜಾಲತಾಣಗಳಲ್ಲಿ ಬಹುಸಂಖ್ಯಾತ ಹಿಂದೂ ಧರ್ಮದ ಬಗ್ಗೆ ಬರೆಯುವ ಅಶ್ಲೀಲ ಪದಗಳನ್ನು ನೋಡಿ ಹಿಂದೂಗಳು ಪೊಲೀಸ್ ಠಾಣೆಗೆ ಕಲ್ಲುಗಳನ್ನು ತೂರುವುದಿಲ್ಲ. ಅಲ್ಪಸಂಖ್ಯಾತ ಮುಸಲ್ಮಾನ್ ಧರ್ಮದ ಬಗ್ಗೆ ಯಾರಾದರೂ ಬರೆದರೆ ಪೊಲೀಸ್ ಠಾಣೆ ಹೊತ್ತಿ ಉರಿಯುತ್ತದೆ. ಇವರು ತೂರಿದ ಕಲ್ಲಿನಲ್ಲಿ ಸತ್ತವರೆಷ್ಟೋ ಜನ, ಸುಟ್ಟಿದ್ದು ನೂರಾರು ವಾಹನಗಳು, ರೈಲುಗಳು. ಇವೆಲ್ಲದಕ್ಕೂ ರಾಜಕೀಯ ರಕ್ಷಾ ಕವಚ ನೀಡಿದ್ದು ಮಾತ್ರ ಮತ್ತದೇ ‘ಅಲ್ಪಸಂಖ್ಯಾತ’ರೆಂಬ ಪಟ್ಟ . ಮತಬ್ಯಾಂಕ್‌ನಿಂದ ಶುರುವಾದ ಅಲ್ಪಸಂಖ್ಯಾತ ಮುಸಲ್ಮಾನರ ರಾಜಕೀಯ ದಿನ ಕಳೆದಂತೆ ಬೇರೆಯದ್ದೇ ರೂಪ ಪಡೆದುಕೊಳ್ಳುತ್ತಿದೆ.

ಮೊದ ಮೊದಲು ಸರಕಾರದ ವಿವಿಧ ಯೋಜನೆಗಳ ಮೂಲಕ ಅಲ್ಪಸಂಖ್ಯಾತರ ಓಲೈಕೆಯಲ್ಲಿ ತೊಡಗಿದ್ದ ವಿರೋಧ ಪಕ್ಷಗಳು, ಈಗ
ಅಲ್ಪಸಂಖ್ಯಾತರು ಮಾಡಿದೆಲ್ಲವನ್ನೂ ಸರಿಯೆಂದು ರಾಜಾರೋಷವಾಗಿ ಹೇಳಲು ಶುರುಮಾಡಿವೆ. ಅವರು ಪೊಲೀಸ್ ಸ್ಟೇಷನ್ ಸುಟ್ಟರೆ ಕೋಮುಬಣ್ಣ, ಹಲಾಲ್ ಆರ್ಥಿಕ ಜಿಹಾದಿನ ಬಗ್ಗೆ ಮಾತನಾಡಿದರೆ ಕೋಮುಬಣ್ಣ, ಹಿಜಾಬಿನ ವಿಚಾರವಾಗಿ ನ್ಯಾಯಾಲಯ ತೀರ್ಪು ನೀಡಿದರೆ ಅದಕ್ಕೂ ಸಹ ಕೋಮುಬಣ್ಣ. ಮಿತಿ ಮೀರಿದ ರಾಜಕೀಯ ದುರುದ್ದೇಶಗಳಿಗೆ ಇವರನ್ನು ಬಳಸಿಕೊಂಡು ಅಲ್ಪಸಂಖ್ಯಾತರೆಂಬ ಹಣೆಪಟ್ಟಿಯನ್ನು ಕಟ್ಟಿ ರಕ್ಷಿಸಲಾಗುತ್ತಿದೆ.

ಬಹುಸಂಖ್ಯಾತ ಹಿಂದೂ ರಾಷ್ಟ್ರದಲ್ಲಿ ಅಲ್ಪಸಂಖ್ಯಾತರಿಂದ ತೊಂದರೆಗೊಳಗಾಗುತ್ತಿರುವವನು ಹಿಂದೂ ಧರ್ಮದವನೇ ಹೊರತು ಮುಸಲ್ಮಾನನಲ್ಲ. ಸಂವಿಧಾನ, ಪ್ರಜಾಪ್ರಭುತ್ವ, ಕಾರ್ಯಾಂಗ, ಶಾಸಕಾಂಗ ಹಾಗೂ ನ್ಯಾಯಾಂಗವನ್ನು ಗೌರವಿಸದವರನ್ನು ‘ಅಲ್ಪ ಸಂಖ್ಯಾತ’ರೆಂಬ ಹಣೆಪಟ್ಟಿಯಿಂದ ಕೈ ಬಿಡುವ ಕಾಲ ಬಂದಿದೆ.