ಪ್ರಸ್ತುತ
ರಮಾನಂದ ಶರ್ಮಾ
ramanandsharma28@gmail.com
ಟ್ವಿಟರ್‌ನ ಮುಖ್ಯಾಧಿಕಾರಿ ಎಲಾನ್ ಮಸ್ಕ್ ಯಾವ ಮುಹೂರ್ತದಲ್ಲಿ ತನ್ನ 3000 ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿದನೋ, ಇಂದು ವಿಶ್ವಾದ್ಯಂತ ಐಟಿ ವಲಯದಲ್ಲಿ ಸಿಬ್ಬಂದಿಯ ವಜಾ ಪ್ರಕ್ರಿಯೆ ಸುನಾಮಿ ಟಾಪ್ ಗೇರ್‌ನಲ್ಲಿ ಹೊರಟಿದೆ.
ಮಾಧ್ಯಮದಲ್ಲಿ ಮಾಮೂಲು ಸುದ್ದಿಗಳನ್ನು ಬದಿಗೊತ್ತಿ ಇದೀಗ ವಜಾ ಸುದ್ದಿಯೇ ಹೆಡ್‌ಲೈನ್ ಆಗುತ್ತಿದ್ದು, ವಿಶ್ವಾದ್ಯಂತ ಭಾರೀ ಚರ್ಚೆಯನ್ನು ಹುಟ್ಟು ಹಾಕಿದೆ. ಜಗತ್ತಿನಾದ್ಯಂತ 26.9 ಮಿಲಿಯನ್ ಟೆಕ್ಕಿಗಳು ಇದ್ದು, ಮುಖ್ಯವಾಗಿ ಅಮೆರಿಕದಲ್ಲಿ 4.30 ಮಿಲಿಯನ್, ಭಾರತ ದಲ್ಲಿ 5.20 ಮಿಲಿಯನ್, ಕೆನಡಾದಲ್ಲಿ 4.40 ಲಕ್ಷ, ಇಂಗ್ಲೆಂಡ್‌ನಲ್ಲಿ 4.80 ಲಕ್ಷ ಟೆಕ್ಕಿಗಳು ಕೆಲಸ ಮಾಡುತ್ತಿದ್ದಾರೆ.
ಅವರೆಲ್ಲ ನಿದ್ರೆಯನ್ನು ಕಳೆದುಕೊಂಡಿದ್ದು, ನಿನ್ನೆ ಅಲ್ಲಿ, ಇಂದು ಇಲ್ಲಿ, ನಾಳೆ ಎಲ್ಲಾ ಎನ್ನುವ ಭಯ, ನಡುಕ ಮತ್ತು ಚಿಂತೆ ಎಲ್ಲರನ್ನೂ ಕಾಡುತ್ತಿದೆ. ಸಂಪೂರ್ಣವಾಗಿ ಖಾಸಗಿ ವಲಯದಲ್ಲಿ ಇರುವ ಐಟಿ ಸೆಕ್ಟರ್‌ನಲ್ಲಿ ಉದ್ಯೋಗ ಆಭದ್ರತೆ ಹೊಸ ಬೆಳವಣಿಗೆ ಏನಲ್ಲ. ಅವರು ಯಾವುದಾದರೂ ಕಾರಣಕ್ಕೆ ಸದಾ ‘ಪಿಂಕ್ ಚೀಟಿ’ಯ ಭಯದಲ್ಲಿ ಇರುತ್ತಾರೆ ಎನ್ನುವ ಮಾತು ಐಟಿ ವಲಯದಲ್ಲಿ ಕೇಳುತ್ತಿರು ತ್ತದೆ.
ಅಂತರಾಷ್ಟ್ರೀಯ Lay Offs Tracking Site ಪ್ರಕಾರ 2022ರಲ್ಲಿ 1000ಕ್ಕಿಂತ ಹೆಚ್ಚು ಕಂಪನಿಗಳು ೧,೫೪,೩೩೬ ಉದ್ಯೋಗಿಗಳನ್ನು ಕೆಲಸ ದಿಂದ ತೆಗೆದುಹಾಕಿದ್ದು, ಈವರೆಗೆ ೩,೧೧,೫೯೨ ಟೆಕ್ಕಿಗಳು ಉದ್ಯೋಗವನ್ನು ಕಳೆದುಕೊಂಡಿದ್ದಾರಂತೆ. ಅಮೆರಿಕದಲ್ಲಿ ಸುಮಾರು ೮೦,೦೦೦ ಭಾರತೀಯ ಟೆಕ್ಕಿಗಳು ಉದ್ಯೋಗ ಕಳೆದುಕೊಂಡಿzರೆ. ಅವರು ಎಚ್ -೧ಬಿ ಮತ್ತು ಏಲ್ ೧ವಿಸಾದಲ್ಲಿ ಇದ್ದು, ವಜಾ ಅದ ೬೦ ದಿನದೊಳಗಾಗಿ ಬದಲಿ ಉದ್ಯೋಗವನ್ನು ಹುಡುಕಿಕೊಳ್ಳಬೇಕಾಗಿದೆ ಅಥವಾ ಅಲ್ಲಿಂದ ಜಾಗ ಬಿಡಬೇಕಾಗುತ್ತದೆ. ಮಾತ್ರವಲ್ಲ, ತಮ್ಮ ವಿಸಾ ಸ್ಟೇಟಸ್ ಅನ್ನು
ಬದಲಿಸಿಕೊಳ್ಳಬೇಕಾಗಿದೆ.
ಅಮೆರಿಕದಲ್ಲಿ ಇರುವ ಒಟ್ಟೂ ಟೆಕ್ಕಿಗಳಲ್ಲಿ ಸುಮಾರು ೩೦-೪೦% ಭಾರತೀಯ ಮೂಲದವವರಾಗಿದ್ದು, ಈ ಬೆಳವಣಿಗೆ ಭಾರತೀಯರನ್ನು ವಿಚಲಿತ ಗೊಳಿಸಿದೆ. ಈ ಪ್ರಕ್ರಿಯೆ ೨೦೨೩ರಲ್ಲೂ ಮುಂದುವರಿದಿದೆ. ಬೇರೆ ಹಲವು ಭಾರತೀಯ ಕಂಪನಿಗಳು ಮತ್ತು ಸ್ಟಾರ್ಟ್ ಅಪ್‌ಗಳು ಕೂಡ ಪಿಂಕ್ ಚೀಟಿ ನೀಡುತ್ತಿದ್ದು, ಜಗತ್ತಿನಾದ್ಯಂತ ೨೦೨೨ರಲ್ಲಿ ಪ್ರತಿದಿನ ೩೦೦೦ ಉದ್ಯೊಗಿಗಳು ಕೆಲಸ ಕಳೆದುಕೊಂಡಿದ್ದು, ಕಳೆದ ಮೂರು ತಿಂಗಳಿನಲ್ಲಿ ೪೦೦ ಟೆಕ್ ಕಂಪನಿಗಳು ೭೪ ಸಾವಿರ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿವೆಯಂತೆ. ೨೦೨೩ರಲ್ಲಿ ೧೭೪ ಟೆಕ್ ಕಂಪನಿಗಳು ೫೬,೫೭೦ ಉದ್ಯೋಗಿ ಗಳಿಗೆ ಕೆಂಪು ಚೀಟಿಯನ್ನು ನೀಡಿವೆಯಂತೆ.
ಇತ್ತೀಚೆಗೆ ಗೂಗಲ್ ೧೨ ಸಾವಿರ ಉದ್ಯೋಗಿಗಳನ್ನು, ಟ್ವಿಟರ್ ೪೪೦೦ (ಭಾರತದಲ್ಲಿ ೩೦೦ರಲ್ಲಿ ೧೭೦ ಸಿಬ್ಬಂದಿ), ಮೈಕ್ರೋಸಾಫ್ಟ್ ೧೦ ಸಾವಿರ, ಅಮೆಜಾನ್ ೧೮ಸಾವಿರ, ಮೆಟಾ ೧೧ಸಾವಿರ, ಸ್ವಿಗ್ಗಿ ೩೮೦, ಸೇಲ್ಸ್ ಫೋರ್ಸ್ ೮ಸಾವಿರ, ಸಿಸ್ಕೋ ೪ಸಾವಿರ, ಸ್ಯಾಪ್ ೩ಸಾವಿರ, ಐಬಿಎಂ ೩೯೦೦, ಅಡೊಬ್ ಅಪಲ್ ೧೦೦, ವಿಪ್ರೋ ೮೦೦(ಅದರಲ್ಲಿ ೪೫೨ ಹೊಸಬರು) ಉದ್ಯೋಗಿಗಳನ್ನು ವಜಾ ಮಾಡಿವೆ. ಇದಕ್ಕೆ ಹೊರತಾಗಿ ಎಚ್‌ಪಿ ಕಂಪನಿ ೬ಸಾವಿರ ಸಿಬ್ಬಂದಿಯನ್ನು ತೆಗೆಯಲು ನಿರ್ಧರಿಸಿದ್ದು, ಇಂಟೆಲ್ ಈ ನಿಟ್ಟಿನಲ್ಲಿ ಚಿಂತನೆಯಲ್ಲಿ ಇದೆಯಂತೆ.
ಸ್ವೀಡಿಶ್ ಕಂಪನಿ ಸ್ಫೋಟಿಫೈ ೬೦೦ ಜನರನ್ನು ಲಾಗ್‌ಔಟ್ ಮಾಡಿದೆಯಂತೆ. ಯುರೋಪ್ ದೇಶಗಳಲ್ಲೂ ಈ ಪ್ರಕ್ರಿಯೆ ನಡೆದಿದ್ದು, ಇಲ್ಲೂ ಭಾರ
ತೀಯ ಟೆಕ್ಕಿಗಳು ಗಣನೀಯ ಸಂಖ್ಯೆಯಲ್ಲಿರುವುದು ಚಿಂತೆಯ ವಿಷಯವಾಗಿದೆ. ಕರೋನಾ ಸಮಯದಲ್ಲಿ ೨೦೨೦ ರ ಎರಡನೇ ತ್ರೈಮಾಸಿಕದಲ್ಲಿ ಟೆಕ್ ಕಂಪನಿಗಳು ೬೦ಸಾವಿರ ಉದ್ಯೋಗಿಗಳನ್ನು ಮನೆಗೆ ಕಳಿಸಿದ್ದವು. ಇವು ಮಾದ್ಯಮದಲ್ಲಿ ವರದಿಯಾದ ಮಾಹಿತಿಗಳಾಗಿದ್ದು, ವರದಿಯಾಗದ ವಜಾಗಳು ಎಷ್ಟು ಇವೆಯೋ? ಇತ್ತೀಚಿನವರೆಗೆ ವರ್ಷಪೂರ್ತಿ ಸಾವಿರಾರು ನೇಮಕ ಮತ್ತು ಬಿಡುಗಡೆ (attrition) ಬಗೆಗೆ ಸುದ್ದಿ ಮಾಡುತಿದ್ದ ಟೆಕ್ ಕಂಪನಿಗಳು, ದಿಢೀರ್ ಎಂದು ಉದ್ಯೋಗಿಗಳನ್ನು ವಜಾ ಮಾಡುತ್ತಿರುವುದು ಒಂದು ವಿಪರ್ಯಾಸವಾಗಿದ್ದು, ಟೆಕ್ ಉದ್ಯೋಗಿಗಳಿಗೆ, ಟೆಕ್ ಕಂಪನಿ ಗಳಲ್ಲಿ ಉದ್ಯೋಗಾಂಕ್ಷಿಗಳಿಗೆ, ಉದ್ಯಮ ವಲಯಕ್ಕೆ, ಸರ್ಕಾರಕ್ಕೆ ಆರ್ಥಿಕ ತಜ್ಞರಿಗೆ ಶಾಕ್ ಅಗಿದೆ.
ವಿಶ್ವಾದ್ಯಂತ ಈ ಪರಿಸ್ಥಿತಿ ಇದ್ದು, ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ಪಕ್ಕದ ಗಲ್ಲಿಯಲ್ಲಿ ಕೋಳಿ ಕೂಗಿದರೆ, ಈ ಗಲ್ಲಿಯಲ್ಲೂ ಕೋಳಿ ಕೂಗೂವುದು ಸ್ವಾಭಾವಿಕ. ಅದಕ್ಕೂ ಮಿಗಿಲಾಗಿ ಈ ಎಲ್ಲ ಕಂಪನಿಗಳಲ್ಲಿ ಭಾರತೀಯರು ಗಮನಾರ್ಹವಾಗಿ ಇರುವುದರಿಂದ ಭಾರತದಲ್ಲೂ ಈ ಸುನಾಮಿಯ ಕಂಪನ ಕಾಣುತ್ತಿದೆ. ಭಾರತದಲಿ ೫.೧೦ ಮಿಲಿಯನ್ ಐಟಿ ಉದ್ಯೋಗಿಗಳು ಇದ್ದು, ೨೨೭ ಬಿಲಿಯನ್ ಡಾಲರ್ ಆದಾಯವನ್ನು ನೀಡುತ್ತಿದೆ. ಇದರಲ್ಲಿ ೧೮೧ಬಿಲಿ ಯನ್ ಡಾಲರ್ ಎಕ್ಸ್‌ಪೋರ್ಟ್‌ನಿಂದ ಮತ್ತು ೪೯ ಬಿಲಿಯನ್ ಡಾಲರ್ ಆಂತರಿಕವಾಗಿ ಬರುತ್ತಿದೆ.
ದೇಶದ ಜಿಡಿಪಿಯಲ್ಲಿ ಐಟಿ ಪಾಲು ೭.೪೦% ಅಗಿದ್ದು, ಅಂತೆಯೇ ದೇಶದಲ್ಲಿ ಈ ನಿಟ್ಟಿನಲ್ಲಿ ವಿವಂಚನೆಗೆ ಅರ್ಥವಿದೆ. ಐಟಿ ಆದಾಯದಲ್ಲಿ ಶೇ.೫೧ ಐಟಿ ಸರ್ವೀಸ್ ಸೆಕ್ಟರ್‌ನಿಂದ ಎನ್ನುವುದು ಗಮನಾರ್ಹ. ಬೆಂಗಳೂರಿನಲ್ಲಿ ೧೬ ಟೆಕ್ ಪಾಕ್ ಗಳು, ೬೭ಸಾವಿರ ನೋಂದಾಯಿತ ಕಂಪನಿಗಳೂ ಇವೆ.
೧೨೦೦ ಕಂಪನಿಗಳು ಪೂರ್ಣಾವಽ ಕೆಲಸ ಮಾಡುತ್ತಿದ್ದು, ೧.೫೦ ಮಿಲಿಯನ್ ನೇರ ಮತ್ತು ಪರೋಕ್ಷ ಉದ್ಯೋಗಿಗಳು ಇದ್ದಾರೆ. ಸುಮಾರು ೧.೩೦ ಕೋಟಿ ಜನಸಂಖ್ಯೆ ಇರುವ ಬೆಂಗಳೂರಿನಲ್ಲಿ ಎತ್ತರವಾದ ಕಟ್ಟಡದ ಮೆಲಿಂದ ಒಂದು ಕಲ್ಲನ್ನು ಕೆಳಗೆ ಎಸೆದರೆ, ಅದು ಒಬ್ಬ ಟೆಕ್ಕಿ ಅಥವಾ ಬಿಹಾರಿ
ತಲೆಯ ಮೇಲೆ ಬೀಳುತ್ತದೆ ಎನ್ನುವ ಮಾತು ಬೆಂಗಳೂರಿನಲ್ಲಿ ಕೇಳುತ್ತದೆ.
ಬೆಂಗಳೂರು ಇಂದು ಮೆಟ್ರೊಪೊಲಿಟನ್ ಮತ್ತು ಕಾಸ್ಮೋಪೊಲಿಟನ್ ನಗರವಾಗಿ ಹೆಮ್ಮೆರವಾಗಿ ಬೆಳೆಯುತ್ತಿರುವುದರ ಹಿಂದೆ ಈ ಐಟಿ ಶಕ್ತಿಯ ಅಪಾರ- ಅಸಾಧಾರಣ ಕೊಡುಗೆ ಇದೆ ಎನ್ನುವುದು ಬಹಿರಂಗ ಸತ್ಯ. ಅಂತೆಯೇ ಐಟಿ ರಂಗದಲ್ಲಿ ಯಾವುದೇ ರೀತಿಯ ಸಂಚಲನವಾದರೂ ಅದು ದೇಶವನ್ನು ಮತ್ತು ಮುಖ್ಯವಾಗಿ ಬೆಂಗಳೂರನ್ನು ಬಾಧಿಸುತ್ತದೆ. ದೇಶದಲ್ಲಿ ಐಟಿ ಕ್ರಾಂತಿಯ ನಂತರದ ದೃಶ್ಯಾವಳಿ ಬದಲಾಗಿದ್ದು, ಉದ್ಯೋ ಗಾಂಕ್ಷಿಗಳು ಐಟಿಯತ್ತ ದಾಂಗುಡಿ ಇಡುತ್ತಿದ್ದಾರೆ.
ಉತ್ತಮ ಸಂಬಳ ಸೌಲಭ್ಯ, ದೊಡ್ಡ ನಗರಗಲ್ಲಿ ಕೆಲಸ, ಸರಕಾರಿ ಮತ್ತು ಬ್ಯಾಂಕ್ ಸಿಬ್ಬಂದಿಯಂತೆ ಪ್ರತಿ ಮೂರು ಅಥವಾ ಐದು ವರ್ಷಕ್ಕೆ ವರ್ಗಾ ವರ್ಗಿಯ ಜಂಜಾಟ ಇಲ್ಲದಿರುವುದು, ಆಗೊಮ್ಮೆ ಈಗೊಮ್ಮೆ ವಿದೇಶ ದಲ್ಲಿ ಕೆಲಸ ಮಾಡುವ ಅವಕಾಶ, ಸೇವೆ ಸಮಯ ದಲ್ಲಿ ಸಾರ್ವಜನಿಕ ರೊಂದಿಗೆ ಘರ್ಷಣೆ ಇಲ್ಲದಿರುವುದು, ಆಹ್ಲಾದಕರ ಕಚೇರಿ ವಾತಾವರಣ ಮುಂತಾದವುಗಳು ಉದ್ಯೋಗಾಂಕ್ಷಿಗಳನ್ನು ಕೈ ಬೀಸಿ ಕರೆದವು. ಒಂದು ಕಾಲಕ್ಕೆ ಕನ್ಯಾ ಪಿತೃಗಳ ಆಯ್ಕೆಯಾಗಿದ್ದ ಬ್ಯಾಂಕ್ ಉದ್ಯೋಗ ಕ್ರಮೇಣ ಮೆರುಗು ಕಳೆದುಕೊಂಡು ಟೆಕ್ಕಿಗಳಿಗೆ ಲಾಗ ಇನ್ ಆಗಿದೆ ಎನ್ನುವ ಮಾತು ಕೇಳಿಬರುತ್ತಿದೆ. ಕರ್ನಾಟಕದಲ್ಲಿನ ಬ್ಯಾಂಕು ಗಳಲ್ಲಿ ಇತ್ತೀಚೆಗೆ ಕನ್ನಡಿಗ ಸಿಬ್ಬಂದಿಯ ಸಂಖ್ಯೆ ಕಡಿಮೆ ಯಾಗಿರುವುದಕ್ಕೆ ಬೆಂಗಳೂರಿನಲ್ಲಿರುವ ಐಟಿ ಕಂಪನಿ ಗಳು ಕಾರಣ ಎಂದು ಬ್ಯಾಂಕೊಂದರ ಮುಖ್ಯಾಧಿಕಾರಿ ಯೊಬ್ಬರು ಹೇಳಿದ್ದು, ಈ ಅಭಿಪ್ರಾಯದಲ್ಲಿ ಅರ್ಥವಿಲ್ಲದಿಲ್ಲ.
ಐಟಿ ಉದ್ಯೋಗಿಗಳ ಸಂಬಳ- ಸೌಲಭ್ಯಗಳ ಬಗೆಗೆ ಟೆಕ್ಕಿಯೊಬ್ಬ ಹೆಮ್ಮೆಯಿಂದ ಹೇಳಿಕೊಳ್ಳುವಾಗ ಸರಕಾರಿ ನೌಕರನೊಬ್ಬ, ‘ಸಾರ್ ನೀವು ಹೊರಬಂದಾಗ, ನಿವೃತ್ತಿ ಹೊಂದಿದ ದಿನ ನಿಮ್ಮ ಸಂಬಳದ ಚಕ್ರ ನಿಲ್ಲುತ್ತದೆ. ನಮಗೆ ಬದುಕಿರುವವರೆಗೆ ಪಿಂಚಣಿ ರೂಪದಲ್ಲಿ ಕೊನೆ ಸಂಬಳದ
ಅರ್ಧ ಮೊತ್ತ ದೊರಕುತ್ತದೆ ಮತ್ತು ಅದು ಪ್ರತಿ ಸಂಬಳ ಪರಿಷ್ಕರಣೆ ಸಮಯದಲ್ಲಿ ಉನ್ನತೀಕರಣಗೊಳ್ಳುತ್ತದೆ ಕೂಡ. ನಮ್ಮ ನಂತರ (ಕೆಲವುಕಟ್ಟು ಪಾಡುಗಳೊಂದಿಗೆ) ಪತ್ನಿ ಅಥವಾ ಅವಲಂಬಿತರಿಗೆ ಕುಟುಂಬ ಪಿಂಚಣಿ ದೊರಕುತ್ತದೆ.
ನಿವೃತ್ತಿಯ ನಂತರದ ಸಂಬಳವನ್ನೂ (ಪಿಂಚಣಿ) ಲೆಕ್ಕ ಹಾಕಿದರೆ ಸಂಬಳ ಸೌಲಭ್ಯದ ದೃಷ್ಟಿಯಲ್ಲಿ ನಾವೇ ಮೇಲು’ ಎಂದು ಕಿಚಾಯಿಸುತ್ತಾನೆ. ಯಾರನ್ನೂ ಉದ್ಯೋಗದಿಂದ ಅಷ್ಟು ಸುಲಭವಾಗಿ ತೆಗೆದುಹಾಕುವಂತಿಲ್ಲ. ಕೆಲಸದಿಂದ ತೆಗೆದ ಹಾಕಲ್ಪಟ್ಟು , ಕಾನೂನು ಹೋರಾಟಮಾಡಿ ಎಷ್ಟೋ
ವರ್ಷಗಳ ನಂತರ ವಜಾಗೊಂಡ ಪಿರಿಯಡ್‌ನ ಸಂಪೂರ್ಣ ಸಂಬಳದೊಂದಿಗೆ ಪುನರ್ ನೇಮಕಗೊಂಡ ಎಷ್ಟೋ ಉದಾಹರಣೆಗಳಿವೆ. ಐಟಿ ಉದ್ಯೋಗದಲ್ಲಿ ಈ ಸಾದ್ಯತೆ ಕಡಿಮೆ ಎನ್ನುವದಕ್ಕಿಂತ ಇಲ್ಲವೇ ಇಲ್ಲ ಎನ್ನಬಹುದು. ಕೆಲಸ ಮುಗಿಸಿ ಮನೆಗೆ ಹೊರಟಾಗ ಅಥವಾ ಮಾರನೆ ದಿನ ಕೆಲಸಕ್ಕೆ ಹೋದಾಗ ಟೇಬಲ್ ಮೇಲೆ ಪಿಂಕ್ ಚೀಟಿ ಇರುತ್ತದೆ ಎನ್ನುವ ಜೋಕ್ ಕೇಳುತ್ತದೆ.
ಇದಕ್ಕೆ ಮುಖ್ಯ ಕಾರಣ ಸಿಬ್ಬಂದಿಗಳ ಕಲ್ಯಾಣಕ್ಕಾಗಿ ಹೋರಾಡುವ ಕಾರ್ಮಿಕ ಸಂಘಟನೆಗಳು ಇಲ್ಲದಿರುವುದು. ಐಟಿ ಉದ್ಯಮದಲ್ಲಿ ಕಾರ್ಮಿಕ ಸಂಘಟನೆಗಳಿಗೆ ಅವಕಾಶ ಇರುವುದಿಲ್ಲ. ಈ ನಿಟ್ಟಿನಲ್ಲಿ ಸ್ವಲ್ಪ ಪ್ರಯತ್ನ ಕಂಡರೂ ಅದು ಮುಂದೆ ಸಾಗಲಿಲ್ಲ. ಇನ್ನಿತರ ಉದ್ಯಮಗಳಲ್ಲಿ ಸಿಬ್ಬಂದಿಯ
ಸಮಸ್ಯೆಗೆ ದ್ವಿಪಕ್ಷೀಯ ಮಾತುಕತೆಗಳ ಮೂಲಕ ಮತ್ತು ಕೊಟ್ಟು -ತೆಗೆದುಕೊಳ್ಳುವ ಸೂತ್ರದ ಮೂಲಕ ಪರಿಹಾರ ಹುಡುಕಲಾಗುತ್ತದೆ. ಆದರೆ, ಐಟಿಯಲ್ಲಿ ಮ್ಯಾನೇಜ್ ಮೆಂಟ್ ನಿಲುವೇ ಅಂತಿಮ.
ಅನ್ಯಾಯವಾದರೆ, ಟೆಕ್ಕಿಗಳು ವೈಯಕ್ತಿವಾಗಿ ಹೋರಾಡಬೇಕಾಗುತ್ತದೆಯೇ ವಿನಹ, ಅವರ ಪರವಾಗಿ ಹೋರಾಡಲು ಸಂಘಟನೆಗಳು ಇರುವು
ದಿಲ್ಲ. ಸಂಘಟನೆಗಳ ಮೂಲಕ ಹೋರಾಡುವುದಕ್ಕೂ, ವೈಯಕ್ತಿಕವಾಗಿ ಹೋರಾಡುವುದಕ್ಕೂ ವ್ಯತ್ಯಾಸ ವಿರುತ್ತದೆ. ಸಂಘಟನೆಯ ಮೂಲಕ ಹೋರಾಡುವುದರಲ್ಲಿ ತೂಕ ಇರುತ್ತದೆ. ಅಂತೆಯೇ ಕಾರ್ಮಿಕರು ಸಂಘಟನೆಯೇ ಶಕ್ತಿ ಎಂದು ಮುಷ್ಟಿ ಎತ್ತಿ ಕೂಗುತ್ತಾರೆ. ಐಟಿ ವಯದಲ್ಲಿ ಈಗ
ಸುನಾಮಿಯಲ್ಲಿರುವ ವಜಾ ಪ್ರಕ್ರಿಯೆ, ಇಲ್ಲಿಯೂ ಕಾರ್ಮಿಕರ ಹಿತದೃಷ್ಟಿಯಲ್ಲಿ, ಮುಖ್ಯವಾಗಿ ಕೆಂಪು ಚೀಟಿ ನೀಡುವ ನಿಟ್ಟಿನಲ್ಲಿ ಕಾರ್ಮಿಕ ಸಂಘಟನೆಗೆ ಇಂಬು ಕೊಡಬಹುದೆನ್ನುವ ಮಾತು ಕೇಳಿಬರುತ್ತಿದೆ. ಆದರೆ, ಈ ವಜಾ ಬೆಳವಣಿಗೆ ತಾತ್ಕಾಕಾಲಿಕವೋ ಅಥವಾ ಅದು ಬ್ರೇಕ್ ಇಲ್ಲದೆ ಮುಂದು ವರಿಯುತ್ತದೆಯೋ ಎನ್ನುವುದರ ಮೇಲೆ ಅವಲಂಬಿಸಿದೆ ಎಂದು ಹೇಳಲಾಗುತ್ತಿದೆ.
ಇತ್ತೀಚೆಗೆ ಆಂಧ್ರದಲ್ಲಿ ೬೪೦೦ ಪೊಲೀಸ್ ಹುದ್ದೆಗಳಿಗೆ ೫.೦೩,೪೮೬ ಅಕಾಂಕ್ಷಿಗಳು ಪರೀಕ್ಷೆ ಬರೆಯುತ್ತಿದ್ದಾರಂತೆ. ಅವರಲ್ಲಿ ೧೩೯೬೧ ಸ್ನಾತಕೋತ್ತರ ಪದವೀಧರರು, ೧೫೫೫೩೭ ಪದವೀಧರರು , ೫೨೮೪ ಎಮಬಿಎ, ೪೩೬೫ ಎಮಎಸ್‌ಸಿ, ೯೪ ಎಲಎಲಬಿ, ೧೦ ಪಿಎಚ್.ಡಿ, ೯೩೦ ಎಮ್ ಟೆಕ್‌ಪದವೀಧರರು ಇದ್ದಾರಂತೆ. ವಿಶ್ಲೇಷಕರ ಪ್ರಕಾರ ಇದರಲ್ಲಿ ನಿರುದ್ಯೋಗ ಸಮಸ್ಯೆಯ ಉದ್ದ, ಅಗಲ ಮತ್ತು ಆಳ ಕಂಡರೂ,
ಅರ್ಜಿದಾರರ ಹಿನ್ನೆಲೆಯನ್ನು ನೋಡಿದಾಗ ಉದ್ಯೋಗ ಭದ್ರತೆ ಅಥವಾ ಖಾತರಿಯ ಚಿಂತನೆಯು ಮುಖ್ಯಇದೆ ಎನ್ನುವುದನ್ನು ಅಲ್ಲಗೆಳೆಯಲಾಗದು. ಭಾರೀ ಹೈಪ್ ಪಡದುಕೊಂಡಿದ್ದ ಐಟಿ ಉದ್ಯೋಗದಲ್ಲಿ ಸ್ವಲ್ಪ ಮಸುಕು ಕಾಣಿಸಿದ್ದು, ಹನಿಮೂನ್ ಮುಗಿಯಿತೇ ಎನ್ನುವಂತಾಗಿದೆ.
ಹಾಗೆಯೇ ಒಂಬತ್ತು ಅಂಕೆಯವರೆಗೂ ಸಂಬಳ ಪಡೆಯುವ ಐಟಿ ಕಂಪನಿಗಳ ಹಿರಿಯ ಅಽಕಾರಿಗಳು ಸ್ವಲ್ಪ ತ್ಯಾಗ ಮಾಡಿದ್ದರೆ, ಹಲವರ ತುತ್ತಿನ ಚೀಲವನ್ನು ಉಳಿಸ ಬಹುದಾಗಿತ್ತು ಎನ್ನುವ ಮಾತು ಕೆಂಪು ಚೀಟಿ ಪಡೆದವರಿಂದ ಕೇಳುತ್ತಿದೆ. ಸಂಕಷ್ಟಗಳು ಪ್ರತಿ ಉದ್ಯಮದಲ್ಲೂ ಇರುತ್ತವೆ. ಅದರೆ ದೊಡ್ಡ ಪ್ರಮಾಣದಲ್ಲಿ ಸಿಬ್ಬಂದಿಯ ವಜಾದಂಥ ಪರಿಹಾರದ ಬದಲಿಗೆ ಬೇರೆ ಮಾರ್ಗವನ್ನು ಚಿಂತಿಸುವು ದರಲ್ಲಿ ಐಟಿ ಕಂಪನಿಗಳು ಜಾಣತನವನ್ನು ತೋರಿಸಬೇಕಾಗಿತ್ತು.
Read E-Paper click here