Wednesday, 11th December 2024

ಮೋದಿ ಎಂಬ ಜೆಸಿಬಿಯೂ, ಕಾಂಗ್ರೆಸ್ ಎಂಬ ಪಿಕಾಸಿಯೂ !

ಬೇಟೆ

ಜಯವೀರ ವಿಕ್ರಮ ಸಂಪತ್‌ ಗೌಡ

ಮೋದಿ ಈ ದೇಶದ ಜನರ ತಲೆಕೆಡಿಸಿರುವುದಂತೂ ಸತ್ಯ. ಅವರನ್ನು ರಾಜಕೀಯವಾಗಿ ಹೇಗೆ ಸೋಲಿಸಬೇಕು ಎಂಬುದು ಅವರ ವೈರಿಗಳಿಗೆ ಗೊತ್ತಾಗುತ್ತಿಲ್ಲ.

ಹೀಗಾಗಿ ಏನೇನೋ ಕಸರತ್ತುಗಳನ್ನು ಮಾಡಿ ಮಾಡಿ ಸೋಲುತ್ತಿದ್ದಾರೆ. ಮೋದಿ ಮಾಡಿದ್ದೆಲ್ಲವೂ ಸರಿ ಎಂದು ಹೇಳುತ್ತಿಲ್ಲ. ಆದರೆ ಅವರು ಹೆಚ್ಚು ‘ಸರಿ’ಗಳನ್ನೇ ಮಾಡಿದ್ದಾರೆ. ಕೆಲವು ತಪ್ಪುಗಳಾಗಿರಬಹುದು. ಆದರೆ ಅವರು ಮಾಡಿದ್ದೆಲ್ಲವೂ ಹಾಳು ಎಂಬ ರೀತಿಯಲ್ಲಿ ಅವರ ವಿರೋಧಿಗಳು ಆಡುವುದನ್ನು ನೋಡಿದರೆ, ಕನಿಕರ ವಾಗುತ್ತದೆ.

ಕೆಲವರು ಮೋದಿ ಗುಮ್ಮನಿಂದ ಕಂಗಾಲಾಗಿರು ವುದಂತೂ ನಿಜ. ಮೋದಿ ಇರುವ ತನಕ ತಮಗೆ ಅಧಿಕಾರವಿಲ್ಲ ಎಂದು
ಅವರೇ ಭಾವಿಸಿದ್ದಾರೆ. ಅದು ನಿಜವೂ ಹೌದು. ಮೋದಿಯವರನ್ನು ವಿರೋಧಿಸಲು ಬಲವಾದ ಕಾರಣಗಳಿಲ್ಲ. ಆ ಮನುಷ್ಯ ವೈಯಕ್ತಿಕ ಜೀವನವನ್ನು ಸ್ವಚ್ಛವಾಗಿಟ್ಟು ಕೊಂಡಿರುವುದೇ ಇದಕ್ಕೆ ಸಾಕ್ಷಿ. ಅವರ ವಿರುದ್ಧ ಯಾರೂ ಬೊಟ್ಟು ಮಾಡುವಂತಿಲ್ಲ. ಇನ್ನು ಅವರ ನೀತಿ – ನಿರ್ಧಾರಗಳನ್ನು ಟೀಕಿಸಬೇಕಷ್ಟೆ.

ಅದನ್ನಾದರೂ ಸರಿಯಾಗಿ ಟೀಕಿಸುತ್ತಾರಾ, ಅದೂ ಇಲ್ಲ. ಖಾಲಿ ಪಾತ್ರೆಯಲ್ಲಿ ಲೋಟ ಹಾಕಿ ತಿರುವಿಸಿದಂತೆ ಅವರ ಮಾತುಗಳು ಕೇಳಿಸುತ್ತಿವೆ. ಆದರೆ ಮೋದಿಯವರ ಜನಪ್ರಿಯತೆಯಾಗಲಿ, ಅವರ ವರ್ಚಸ್ಸಯಾಗಲಿ ಅದರಿಂದ ಸ್ವಲ್ಪವೂ ಕುಂದಿಲ್ಲ. ಇದರಿಂದ ಅವರ ವಿರೋಧಿಗಳು ಮತ್ತಷ್ಟು ಕಂಗಾಲಾಗಿರುವುದು ಸುಳ್ಳಲ್ಲ. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಗೆ ಮೋದಿಯವರ ಬಗ್ಗೆ ಮಾತಾಡಲು ನೈತಿಕ ಹಕ್ಕಿಲ್ಲ. ಸೋನಿಯಾ ಗಾಂಧಿ ಮತ್ತು ಮೋದಿ ಅವರ ಮಧ್ಯೆ ಹೋಲಿಕೆಯೇ ಇಲ್ಲ. ಸೋನಿಯಾ ಗಾಂಧಿ ನೇತೃತ್ವದಲ್ಲಿ ಯುಪಿಎ ಸರಕಾರ ಹೇಗೆ ಹತ್ತು ವರ್ಷಗಳ ಕಾಲ ಆಡಳಿತ ನಡೆಸಿತು ಎಂಬುದು ದೇಶದ ಜನರಿಗೆ ಗೊತ್ತಿದೆ.

ಸೋನಿಯಾಗೆ ಮತ್ಯಾರೂ ಅಲ್ಲ, ಸ್ವತಃ ಅಳಿಯನನ್ನೇ ಯಂತ್ರಿಸಲು ಆಗಲಿಲ್ಲ. ಆ ಸಂದರ್ಭದಲ್ಲಿ ಆದ ಹಗರಣಗಳಂತೂ ಒಂದಾ, ಎರಡಾ? ಆಗ ಎಲ್ಲರೂ ಹುರಿದು ಮುಕ್ಕಿದವರೇ. ಆ ಅವಧಿಯಲ್ಲಿ ತಿನ್ನದಿದ್ದವನೇ ಪಾಪಿ. ಈ ದೇಶ ಕಂಡು ಕೇಳರಿಯದಂಥ ಭ್ರಷ್ಟಾಚಾರಗಳು ಆ ಅವಧಿಯಲ್ಲಿ ನಡೆದವು. ಜಗತ್ತಿನ ಅತಿ ಹೆಚ್ಚು ಡಿಗ್ರಿಗಳನ್ನು ಪಡೆದ, ಪ್ರಾಮಾಣಿಕ ವ್ಯಕ್ತಿ ಎಂದು ಕರೆಯಿಸಿಕೊಂಡ ಡಾ.ಮನಮೋಹನ ಸಿಂಗ್ ಪ್ರಧಾನಿಯಾಗಿದ್ದಾಗಲೇ ಈ ಎಲ್ಲಾ ಅನಾಚಾರಗಳು ನಡೆದವು.

ಡಾ.ಸಿಂಗ್ ಪ್ರಾಮಾಣಿಕರಾದರೆ, ಹಣ ತಿಂದವರು ಯಾರು? ಅದಕ್ಕೆ ಅವಕಾಶ ಮಾಡಿಕೊಟ್ಟವರಾರು?  ಇನ್ನು ಸೋನಿಯಾ ಮಗ ರಾಹುಲ್ ಗಾಂಧಿ. ಅವರಿಗೂ, ಮೋದಿಗೂ ಯಾವ ಹೋಲಿಕೆ? ರಾಹುಲ್ ಗಾಂಧಿ ದಿನ ಬೆಳಗಾದರೆ, ಮೋದಿಯವರನ್ನು ಟೀಕಿಸುತ್ತಲೇ ಇರುತ್ತಾರೆ. ಅವರ ಮಾತಿನಲ್ಲಿ ನ್ಯಾಯ ಪೈಸೆ ಹುರುಳಿಲ್ಲ. ಅವರ ಮಾತುಗಳನ್ನು ಕೇಳಿದರೆ, ಕೀಲಿ ಕೊಟ್ಟ ಗೊಂಬೆಯ ನೆನಪಾಗುತ್ತದೆ. ಪಾಪ, ಅದಕ್ಕೆ ಏನೂ ಗೊತ್ತಿಲ್ಲ. ಸ್ವಂತ ಬುದ್ಧಿಯಂತೂ ಇಲ್ಲವೇ ಇಲ್ಲ.

ಹೋಗಲಿ, ಇಷ್ಟು ವರ್ಷಗಳ ಕಾಲ, ರಾಹುಲ್ ಗಾಂಧಿ ರಾಷ್ಟ್ರ ರಾಜಕಾರಣದಲ್ಲಿ ಇದ್ದಾರಲ್ಲ, ಅವರ ಒಂದೇ ಒಂದು ಸಾಧನೆ ಯೇನು? ಅವರ ವೈಯಕ್ತಿಕ ಹಿರಿಮೆಯೇನು? ಯಾವ ಕಾರಣಕ್ಕಾಗಿ ಅವರ ನಾಯಕತ್ವ ವನ್ನು ಒಪ್ಪಿಕೊಳಬೇಕು? ರಾಹುಲ್ ಗಾಂಧಿ ಹಿಂದಿರುವ ಕಾಂಗ್ರೆಸ್ ಪಕ್ಷವನ್ನು ನೆನಪಿಸಿಕೊಂಡರೆ, ಕುರಿಮಂದೆ ಚಿತ್ರಣ ಕಣ್ಮುಂದೆ ಬರುತ್ತದೆ. ಆತನಿಗೆ ಗರ್ವವೂ ಇಲ್ಲ, ಬುದ್ಧಿಯೂ ಇಲ್ಲ. ಮೋದಿಯ ಬಗ್ಗೆ ಮಾತಾಡಿ, ಮಾತಾಡಿ, ಬಲಾಢ್ಯ ಬಾಕ್ಸರ್‌ನಿಂದ ಹೊಡೆತ ತಿಂದು ಕಣ್ಣೀರು ಹಾಕುತ್ತಾ ಮರಳುವ ಚಿಲ್ಟು ಪೋರನ ನೆನಪಾಗುತ್ತದೆ.

ಈ ಜನ್ಮದಲ್ಲಿ ರಾಹುಲ್ ಗಾಂಧಿ ಮೋದಿಯಂತಾಗುವುದು ಸಾಧ್ಯವಿಲ್ಲ. ಮೋದಿ ಬದುಕಿದ್ದಷ್ಟು ದಿನ ಅವರು ಪ್ರಧಾನಿಯಾಗುವುದೂ ಸಾಧ್ಯವಿಲ್ಲ. ಇದು ಗೊತ್ತಿದ್ದೇ ರಾಹುಲ್ ಗಾಂಧಿ, ಮೋದಿಯವರ ಬಗ್ಗೆ ಮಾತಾಡುತ್ತಿರುವುದು ತೀರಾ ಬಾಲಿಶ ವಾಗಿದೆ. ಅವರ ಮಾತಿನಲ್ಲಿ ಯಾವ ಹುರುಳಿಲ್ಲ. ಸುಮ್ಮನೆ ಮಾತಾಡುತ್ತಾರೆ. ಅವರ ಬಳಿ ಮೋದಿಯನ್ನು ಎದುರಿಸುವ ಯಾವುದೇ ಸೈದ್ಧಾಂತಿಕ ವಿಷಯವಾಗಲಿ, ತಾತ್ವಿಕ ಸಂಗತಿಗಳಾಗಲಿ ಇಲ್ಲ.

ಹಾಗೆಂದು ಅವರು ಸುಮ್ಮನೆ ಕುಳಿತಿಲ್ಲ. ದೇಶವಿರೋಧಿ ಶಕ್ತಿಗಳ ಜತೆ ಕೈಜೋಡಿಸುತ್ತಾರೆ. ಮೋದಿ ಯವರ ಇಮೇಜನ್ನು ಹಾಳು ಮಾಡಲು ಏನೆ ಮಾಡಬಹುದೋ ಅವೆಲ್ಲವನ್ನೂ ಮಾಡುತ್ತಿದ್ದಾರೆ. ರಾಹುಲ್ ಗಾಂಧಿ ಬಕ್ಕಬೋರಲಾಗುವುದು ಇ. ಅವರಿಗೆ ಇನ್ನೂ ಮೋದಿಯವರ ಬಲ, ಪ್ಲಸ್ ಪಾಯಿಂಟ್ ಏನು ಎಂಬುದು ಗೊತ್ತಿಲ್ಲ. ಅವರ ನೆಗೆಟಿವ್ ಪಾಯಿಂಟುಗಳೂ ಗೊತ್ತಾಗಿಲ್ಲ.
ಅದಕ್ಕಿಂತ ಹೆಚ್ಚಾಗಿ ಮೋದಿಯವರನ್ನು ಯಾವ ಸಂಗತಿ ಗಳಿಂದ ವಿರೋಧಿಸಬೇಕು ಎಂಬುದು ಗೊತ್ತಾಗಿಲ್ಲ.

ಮೋದಿಯವರಿಂದ ಅಧಿಕಾರವನ್ನು ಕಸಿದುಕೊಳ್ಳುವ ಭೂಮಿಕೆಯನ್ನೇ ಅವರು ಇನ್ನೂ ಸಿದ್ಧಪಡಿಸಿಲ್ಲ. ಮೋದಿಯವರನ್ನು ಎದುರಿಸುವ ಪರಿ ಯಾವುದು ಎಂಬ ಬಗ್ಗೆ ಅವರಿಗೆ ಸ್ಪಷ್ಟತೆ ಇದ್ದಂತಿಲ್ಲ. ಕಾಂಗ್ರೆಸ್ ಸಂಪೂರ್ಣ ವಿಫಲವಾಗಲು ಇದೇ ಕಾರಣ.
ಮೋದಿಯವರು ಅಧಿಕಾರಕ್ಕೆ ಬಂದು ಏಳು ವರ್ಷಗಳಾಗುತ್ತಾ ಬಂತು. ಈ ಅವಧಿಯಲ್ಲಿ ಮೋದಿಯವರಿಂದ ತಪ್ಪುಗಳಾಗಿಲ್ಲವೇ? ಖಂಡಿತ ಆಗಿವೆ. ಆದರೆ ಲಾಭ ಪಡೆಯಲು ಕಾಂಗ್ರೆಸ್ ಸೇರಿದಂತೆ ಉಳಿದ ರಾಜಕೀಯ ಪಕ್ಷಗಳಿಗೆ ಸಾಧ್ಯವಾಗಿಲ್ಲ.

ಕಾರಣ ಮೋದಿಯವರನ್ನು ಹೇಗೆ ನಿಭಾಯಿಸಬೇಕು, ಅವರನ್ನು ಹೇಗೆ ಕಟ್ಟಿ ಹಾಕಬೇಕು ಎಂಬುದು ಗೊತ್ತಾಗಿಲ್ಲ. ಸ್ವಾತಂತ್ರ್ಯ ಬಂದ ನಂತರ, ಯಾವ ನಾಯಕನಿಗೂ ಸಿಗದ ಜನಪ್ರಿಯತೆ ಮೋದಿಗೆ ಸಿಕ್ಕಿರುವುದು ಇತ್ತೀಚಿನ ‘ಇಂಡಿಯಾ ಟುಡೇ’ ಸಮೀಕ್ಷೆ ಸಾಬೀತುಪಡಿಸಿದೆ. ಮೋದಿ ಕೇವಲ ರಾಜಕೀಯ ಪಕ್ಷವೊಂದರ ನಾಯಕರಾಗಿ, ಪ್ರಧಾನಿಯಾಗಿ ಉಳಿದಿಲ್ಲ.

ಮೋದಿ ಒಂದು phenomenon ಆಗಿದ್ದಾರೆ. ಅವರ ಮೇಲೆ ಬೇಕೆಂದೇ ಕೆಸರು ಎರಚುವುದರಿಂದ, ವ್ಯಂಗ್ಯವಾಗಿ ಮಾತಾಡುವುದರಿಂದ, ಟೀಕಿಸ
ಬೇಕೆಂಬ ಕಾರಣಕ್ಕೆ ಟೀಕಿಸುವುದರಿಂದ ಏನೂ ಪ್ರಯೋಜನವಿಲ್ಲ. ಮೋದಿಯವರನ್ನು ಉಳಿದ ರಾಜಕಾರಣಿಗಳಂತೆ ನೋಡುವಂತಿಲ್ಲ  ಎಂಬ ಸರಳ ಸಂಗತಿಯೂ ಕಾಂಗ್ರೆಸ್ಸಿನವರಿಗೆ ಅರ್ಥವಾಗಿಲ್ಲ. ಮೋದಿ ಎಂಬ ಜೆಸಿಬಿಯ ಮುಂದೆ, ಕಾಂಗ್ರೆಸ್ಸಿಗರು ಹಾರೆ, ಪಿಕಾಸಿ, ಗುದ್ದಲಿ ಹಿಡಿದು ನಿಂತಿzರೆ.
ಅವರಿಗೆ ಯಾಕೆ ತಮ್ಮ ಮಾತ್ರಗಳೆ ತಿರುಮಂತ್ರವಾಗಿ ಪರಿಣಮಿಸುತ್ತಿದೆ ಎಂಬುದು ಅರ್ಥವಾಗಿಲ್ಲ.

ಕಳೆದ ಹತ್ತು ವರ್ಷಗಳಲ್ಲಿ ಜಗತ್ತು ಬದಲಾಗಿದೆ. ಭಾರತವೂ ಬದಲಾವಣೆಗೆ ತೆರೆದುಕೊಂಡಿದೆ. ಇಪ್ಪತ್ತು – ಮೂವತ್ತು ವರ್ಷಗಳ ಹಿಂದಿನ ರಾಜಕೀಯ ವರಸೆಗಳು, ಪಟ್ಟುಗಳು ಈಗ ನಡೆಯುವುದಿಲ್ಲ. ರಾಹುಲ್ ಗಾಂಽಯವರು ಇಪ್ಪತ್ತೈದು ವರ್ಷಗಳ ಹಿಂದೆ ಹುಟ್ಟಿದ್ದರೆ, ಪ್ರಧಾನಿಯಾಗುತ್ತಿದ್ದರೇನೋ? ಆದರೆ ಅವರ ಮುಂದಿರುವ ಭಾರತ ಈಗ ಬದಲಾದದ್ದು. ಹಳೆಯ ಪಟ್ಟುಗಳು ಲಾಗೂ ಆಗುವುದಿಲ್ಲ. ಒಬ್ಬ ವ್ಯಕ್ತಿಯನ್ನು ಟೀಕಿಸುವ ಮುನ್ನ, ತಾನು
ಏನು ಕಡಿದು ಕಟ್ಟೆ ಹಾಕಿದ್ದೇನೆ ಎಂಬುದನ್ನು ಜನ ನೋಡುತ್ತಾರೆ ಎಂಬ ಪರಿಜ್ಞಾನವಿದ್ದೇ ಟೀಕೆಗಿಳಿಯಬೇಕು.

ಇಲ್ಲದಿದ್ದರೆ ಆ ಟೀಕೆಗಳೇ ಟೀಕಿಸಿದವರಿಗೆ ತಿರುಗುಬಾಣ ವಾಗುತ್ತದೆ. ಹೊಸ ಭಾರತದಲ್ಲಿ ಯಾರೂ ನಮ್ಮನ್ನು ಪರೀಕ್ಷಿಸದೇ ಸ್ವೀಕರಿಸುವುದಿಲ್ಲ ಎಂಬ ಸಾಮಾನ್ಯಜ್ಞಾನ ವಾದರೂ ನಾಯಕರಿಗಿರಬೇಕು. ಗಾಂಧಿ, ಗೌಡ ಎಂಬ ಹೆಸರುಗಳೆಲ್ಲ ಯಾವ ಮ್ಯಾಜಿಕ್ ಮಾಡುವುದಿಲ್ಲ. ಜನನಾಯಕನ ಸಾಮರ್ಥ್ಯ, ಬುದ್ಧಿವಂತಿಕೆ ನೋಡುತ್ತಾರೆ. ರಸ್ತೆ ತಡೆ, ರಾಜಭವನ ಮುತ್ತಿಗೆ, ಘೇರಾವೋ, ವಿಧಾನಸೌಧ ಮುತ್ತಿಗೆ ಮುಂತಾದ ಪ್ರತಿಭಟನೆಗಳೆ ಈಗ ವರ್ಕ್ ಆಗುವುದಿಲ್ಲ.

ಅವೆ ವಾಟಾಳ್ ನಾಗರಾಜ್ ಕಾಲದ ವರಸೆಗಳಾದವು. ಈಗ ರಸ್ತೆ ತಡೆ, ಹೆದ್ದಾರಿ ಬಂದ್ ಚಳವಳಿ ಮಾಡಿದರೆ ಜನ ತಪ್ಪಾಮಾರಾ ಬೈಯುತ್ತಾರೆ. ಚಳವಳಿಕಾರರಿಗೇ ಹಿಡಿಶಾಪ ಹಾಕುತ್ತಾರೆ. ರಾಹುಲ್ ಗಾಂಧಿ ಸೇರಿದಂತೆ, ಪ್ರತಿಪಕ್ಷಗಳ ನಾಯಕರು ದಿಲ್ಲಿಯಲ್ಲಿ ನಡೆಯುತ್ತಿರುವ ರೈತರ
ಪ್ರತಿಭಟನೆಗೆ ಬೆಂಬಲ ನೀಡಿ ಜನ ಸಾಮಾನ್ಯರ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ. ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳು ಇಷ್ಟೊಂದು ಕ್ರಿಯಾಶೀಲವಾಗಿರುವ ಈ ದಿನಗಳಲ್ಲಿ, ಪ್ರತಿಭಟನೆಯ ಉದ್ದೇಶವೇನು, ಇದರ ಹಿಂದೆ ಯಾರಿದ್ದಾರೆ, ಇದರ ಹಕೀಕತ್ತೇನು ಎಂಬುದನ್ನು ಅರ್ಥ
ಮಾಡಿಕೊಳ್ಳಲು ಕಷ್ಟಪಡಬೇಕಿಲ್ಲ.

ಕೃಷಿ ಕಾಯ್ದೆ ವಿರೋಧಿಸಿ ರೈತರು ಹೋರಾಟಕ್ಕಿಳಿದ ಎರಡನೇ ವಾರಕ್ಕೇ ಅದರ ಹಣೆಬರಹವೇನು ಎಂಬುದು ದೇಶದ ಜನರಿಗೆ ಗೊತ್ತಾಗಿಹೋಯಿತು.
ಪ್ರತಿಭಟಿಸುತ್ತಿರುವವರು ರೈತರಲ್ಲ, ರೈತರ ಸೋಗಿನಲ್ಲಿರುವ ದೇಶ ದ್ರೋಹಿಗಳು, ದೇಶ ವಿರೋಧಿಗಳು ಎಂಬುದು ಸಾಬೀತಾಗಿಹೋಯಿತು. ಇವರ ಹಿಂದಿರುವ ಶಕ್ತಿಗಳು ಯಾವವು, ಇವರನ್ನು ಪೊರೆಯುತ್ತಿರುವವರು ಯಾರು, ಇವರೆ ಮೂರು ತಿಂಗಳಿನಿಂದ ಪ್ರತಿಭಟನೆಗೆ ಕುಳಿತಿರಲು ಕಾರಣಗಳೇನು ಎಂಬುದು ಇಂದು ರಹಸ್ಯವಾಗಿ ಉಳಿದಿಲ್ಲ. ಹೀಗಾಗಿ ಈ ರೈತರ ಹೋರಾಟಕ್ಕೆ ಯಾರೂ ಸೊಪ್ಪು ಹಾಕುತ್ತಿಲ್ಲ.

ಅದರಲ್ಲೂ ಗಣರಾಜ್ಯೋತ್ಸವದ ದಿನದಂದು ನಡೆದ ದಾಂಧಲೆಯ ಬಳಿಕ ರೈತ ಹೋರಾಟದ ಮುಖವಾಡ ಕಳಚಿ ಬಿದ್ದಿದೆ. ಅಂದು ದಾಂಧಲೆ ಸೃಷ್ಟಿಸಿ, ಗಣರಾಜ್ಯೋತ್ಸವ ದ ದಿನದಂದು ರಾಜಧಾನಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಕೋಲಾಹಲ ಸೃಷ್ಟಿಸುವುದು ಉದ್ದೇಶ ವಾಗಿತ್ತು. ಆ ಮೂಲಕ ಮೋದಿಯವರಿಗೆ ಕಪ್ಪು ಚುಕ್ಕೆ ತರುವುದು ಆಶಯವಾಗಿತ್ತು. ಅಂದು ನಡೆದ ದಾಂಧಲೆ ಯನ್ನು ನೋಡಿದರೆ, ಕನಿಷ್ಠ ನೂರು ಹೆಣಗಳು
ಉರುಳಬೇಕಿತ್ತು. ಆದರೆ ಕೇಂದ್ರ ಸರಕಾರದ ಅತೀವ ಸಂಯಮದಿಂದ ಅಂಥ ಅವಾಂತರಗಳು ನಡೆಯಲಿಲ್ಲ.

ಪೊಲೀಸರು ಅಂದು ಕೈಯಲ್ಲಿ ಶಸಾಸ ಗಳಿದ್ದರೂ ಸುಮ್ಮನಿರಬೇಕಿರಲಿಲ್ಲ. ಆದರೆ ದೇಶದ್ರೋಹಿಗಳ ಹೂಟಕ್ಕೆ ದಾಳವಾಗಬೇಕಾಗುತ್ತಿತ್ತು. ಅದು ಕೊನೆಗೆ ಮೋದಿಯವರ ಕಾಲ ಬುಡಕ್ಕೇ ಬರುತ್ತಿತ್ತು. ಆದರೆ ಕೇಂದ್ರ ಸರಕಾರ ಅಂದು ರೈತ ಹೋರಾಟವನ್ನು ನಿಷಲಗೊಳಿಸಿದ ರೀತಿ ಅನನ್ಯ.
ಕಾಂಗ್ರೆಸ್ ನಾಯಕರಿಗೆ, ಈ ದೇಶದ್ರೋಹಿಗಳ ಸಹವಾಸ ಯಾಕೆ? ರಾಷ್ಟ್ರದ ಹಿತದೃಷ್ಟಿಯನ್ನು ಕಡೆಗಣಿಸಿ ಏನೇ ಮಾಡಿದರೂ, ನಡೆದು ಹೋಗುತ್ತದೆ ಎಂಬ ಕಾಲ ಮುಗಿದು ಹೋಗಿದೆ.

ಸಂಪ್ರೀತ ರಾಜಕಾರಣ ಬಹಳ ವರ್ಷ ನಡೆಯುವುದಿಲ್ಲ. ಬಿಜೆಪಿಗೆ ಕೋಮುವಾದಿ ಎಂಬ ಹಣೆಪಟ್ಟಿ ಹಚ್ಚಿ ತಾವು ಸೆಕ್ಯುಲರ್ ಎಂದು ಹೇಳಿಕೊಳ್ಳು ತ್ತಿದ್ದ ಪ್ರತಿಪಕ್ಷಗಳ ಸೆಕ್ಯುಲರ್ ವಾದ ಮಕಾಡೆ ಮಲಗಿದೆ. ಈ ದೇಶದಲ್ಲಿ ಸೆಕ್ಯುಲರ್ ಮಂತ್ರಕ್ಕೆ ಮೊದಲಿನ ಹಾಗೆ ಮಾವಿನಕಾಯಿ ಉದುರುತ್ತಿಲ್ಲ. ಅವೆ ಶುದ್ಧ ಬೊಗಳೆ ಎಂಬುದು ಮನವರಿಕೆ ಆಗಿದೆ. ‘ಮೋದಿ ಅಧಿಕಾರಕ್ಕೆ ಬಂದರೆ ದೇಶಾದ್ಯಂತ ಗೋಧ್ರಾ’ ಎಂದು ಹೇಳುತ್ತಿದ್ದವರು ನಾಲಗೆ
ಕಚ್ಚಿಕೊಳ್ಳುತ್ತಿದ್ದಾರೆ.

‘ಕೋಮುವಾದಿ’ ಬಿಜೆಪಿಯ ಆಡಳಿತ ಅವಧಿಯಲ್ಲಿ ಕೋಮು ಗಲಭೆಗಳಾಗುತ್ತಿಲ್ಲ. ಯಾವ ಕಾರಣಕ್ಕೆ ಬಿಜೆಪಿಯನ್ನು ಜರೆಯುತ್ತಿದ್ದರೋ, ಆ ಯಾವ
ಕಾರಣಗಳೂ ಈಗ ಮೊಟ್ಟೆ ಹಾಕುತ್ತಿಲ್ಲ. ಗಣರಾಜ್ಯೋತ್ಸವ ದಿನದಂದು ಕೆಂಪುಕೋಟೆಯಲ್ಲಿ ದೊಂಬಿ, ದಾಂಧಲೆ ನಡೆಯುತ್ತಿದ್ದರೆ, ಪಾಕಿಸ್ತಾನದಲ್ಲಿ ವಿಜಯೋತ್ಸವ ನಡೆದರೆ ಅದನ್ನು ಏನೆಂದು ಅರ್ಥೈಸಿಕೊಳ್ಳಬೇಕೆಂಬುದು ದೇಶದ ಜನರಿಗೆ ಅರ್ಥವಾಗುತ್ತದೆ. ಆದರೆ ಕಾಂಗ್ರೆಸ್ ನಾಯಕರಿಗೆ
ಅರ್ಥವಾಗುವುದಿಲ್ಲ ಅಂದರೆ ಏನರ್ಥ? ರೈತ ಹೋರಾಟದ ಆರಂಭದಲ್ಲಿ ಕೆನಡಾ ಪ್ರಧಾನಿ ಅದಕ್ಕೆ ಬೆಂಬಲ ವ್ಯಕ್ತಪಡಿಸಿದಾಗಲೇ, ಇಡೀ ಹೋರಾಟದ ಹೂರಣ ವೇನೆಂಬುದು ಎಲ್ಲರಿಗೂ ಗೊತ್ತಾಗಿತ್ತು.

ಅದಾದ ಬಳಿಕ, ಬ್ರಿಟನ್ ಸಂಸತ್ತಿನಲ್ಲಿ, ಭಾರತ ಸರಕಾರದ ನಿಲುವನ್ನು ಖಂಡಿಸುವ ನಿರ್ಣಯ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದಾಗ, ಮತ್ತೊಮ್ಮೆ ಪ್ರತಿಭಟನಾಕಾರರ ಅಂತರಂಗ ಬೆತ್ತಲಾಗಿತ್ತು. ಈಗಂತೂ ಈ ಹೋರಾಟದ ಹಿಂದಿರುವ ಶಕ್ತಿಗಳು ಯಾರು ಎಂಬುದು ಗೊತ್ತಾಗಿದೆ.
ಕಾಲಕಾಲಕ್ಕೆ ಮೋದಿ ಸರಕಾರಕ್ಕೆ ಕಳಂಕ ತರುವ ಶಕ್ತಿಗಳು ಮತ್ತೆ ಮತ್ತೆ ಒಂದಾಗಿ ಕೊನೆಗೆ ಇಕ್ಕಿಸಿಕೊಳ್ಳುವ ಪ್ರಹಸನದ ಮುಂದುವರಿದ ಭಾಗ ಇದಾಗಿದೆ. ಪ್ರತಿಭಟನಾಕಾರರ ಅಸಲಿಯತ್ತೇನು ಎಂಬುದು ಗೊತ್ತಿದ್ದರೂ, ರಾಹುಲ್ ಗಾಂಧಿ ಈ ಶಕ್ತಿಗಳ ಜತೆ ಕೈ ಜೋಡಿಸಿರುವುದು ಅವರ ನಾಯಕತ್ವ  ದಿವಾಳಿ ಯೆದ್ದಿರುವುದರ ಸೂಚಕ.

ಇಂಥ ಖಾಲಿ – ಪೀಲಿ ಹೋರಾಟಗಳಿಂದ ಮೋದಿಯವರನ್ನು ಹಣಿಯಬಹುದು ಎಂದು ಅವರು ಭಾವಿಸಿದ್ದರೆ ಅದು ಅವರ ಮೂರ್ಖತನ.
ಎಡ – ಬಲಕ್ಕಿಂತ ರಾಷ್ಟ್ರವಾದದ ವಿರುದ್ಧ ಹೋಗುವುದನ್ನು ಯಾವ ಭಾರತೀಯನೂ ಸಹಿಸಲಾರ. ಹೀಗಾಗಿ ರೈತ ಹೋರಾಟ ಇಷ್ಟು ದಿನಗಳಿಂದ ಕೇಂದ್ರ ಸರಕಾರದ ಮೂಗಿನ ಅಡಿಯಲ್ಲಿ ನಡೆಯುತ್ತಿದ್ದರೂ, ಅದರಿಂದ ಯಾವ ಪುರುಷಾರ್ಥವೂ ಈಡೇರಿಲ್ಲ.

ಮೋದಿ ಪ್ರಖರತೆ ಮುಂದೆ ಸಂಪೂರ್ಣ ಮಂಕಾಗಿರು ವವರು ಕಾಂಗ್ರೆಸ್ಸಿಗರೊಂದೇ ಅಲ್ಲ, ಕಮ್ಯುನಿಷ್ಟರು ಅಪ್ರಸ್ತುತರಾಗಿದ್ದಾರೆ. ಕಾಲು ಶತಮಾನ ಕಾಲ ಆಳಿದ ನೆಲದ ಅವರು ಚುನಾವಣೆಯ ಹೊಸ್ತಿಲಲ್ಲಿ ತೆವಳುತ್ತಿದ್ದಾರೆ. ಅವರಿಗೆ ಕಾಂಗ್ರೆಸ್ ಊರುಗೋಲಾಗಿ ಪರಿಣಮಿಸಿರುವುದು, ನೂಲು ಹಿಡಿದು ಜೋಲುವವನ ಕಾಲು ಹಿಡಿದು ಜೋತಂತಾಗಿದೆ. ಕಮ್ಯುನಿಸ್ಟರ ಮುಂದೆ ಯಾವ ಹೋರಾಟದ ಭೂಮಿಕೆಯೂ ಇಲ್ಲ. ಅವರು ಶಸಾಸ
ತ್ಯಜಿಸಿದ ಮುದಿ ಯೋಧರಂತಾಗಿದ್ದಾರೆ. ಇವರೆಲ್ಲ ಮೋದಿಯವರ ವಿರುದ್ಧ ಕುರುಡು ಸೇನಾನಿಯಂತೆ ಗುಂಡು ಹಾರಿಸುತ್ತಿದ್ದಾರೆ. ಗುಂಡು ಯಾರನ್ನು ತಗುಲಬೇಕೋ, ಅವರೊಬ್ಬರನ್ನು ಬಿಟ್ಟು ಉಳಿದವರನ್ನು ಸವರಿಕೊಂಡು ಹೋಗುತ್ತಿದೆ.

ಕಮ್ಯುನಿಸ್ಟರ ಹಂಗಿನ ಮನೆಯಲ್ಲಿರುವ ಪ್ರಗತಿಪರರು, ಬುದ್ಧಿಜೀವಿಗಳ ಪಾಡಂತೂ ಶೋಚನೀಯ. ಅವರು ಪಿಂಚಣಿಗೆ ಅರ್ಜಿ ಹಾಕುವುದೊಂದು ಬಾಕಿ. ಅಷ್ಟರ ಮಟ್ಟಿಗೆ ಅಪ್ರಸ್ತುತರಾಗಿದ್ದಾರೆ. ಮೋದಿ ವಿರುದ್ಧ ಮಾತಾಡಲಾರಂಭಿಸಿದರೆ, ಮುಸುರಿ, ಧೀರೇಂದ್ರ ಗೋಪಾಲನ ಡೈಲಾಗೇ ವಾಸಿ ಎನಿಸುತ್ತದೆ. ಪ್ರಗತಿಪರರ ಹೋರಾಟಕ್ಕಿಂತ ಕಪಿಚೇಷ್ಟೆಯೇ ಮಜಾ! ಅಷ್ಟರಮಟ್ಟಿಗೆ ಅವರು ತ್ಯಾಜ್ಯ ವಸ್ತುಗಳಾಗಿದ್ದಾರೆ.

ಈ ಅಂಡೆಪಿರ್ಕಿಗಳೆಲ್ಲ ಒಂದೆಡೆ ಸೇರಿ ಈಗಲಾದರೂ ಯೋಚಿಸುವುದು ಒಳ್ಳೆಯದು. ಅವರು ತಮಗೆ ತಾವೇ ಕೆಲವು ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು. ಈ ದೇಶದ ಜನ ಮೋದಿಯ ಜತೆ ಯಾಕೆ ನಿಂತಿದ್ದಾರೆ? ಮೋದಿ ಮಾಡಿರುವ ಮೋಡಿ ಏನು? ಮೋದಿ ಅವರ ಬಲವೇನು, ಕೊರತೆಗಳೇನು? ಯಾವ ಕಾರಣಕ್ಕೆ ಜನ ಮೋದಿಯವರನ್ನು ಇಷ್ಟಪಡುತ್ತಾರೆ? ಹಾಗಾದರೆ ನಾವು ಏನು ಮಾಡಬೇಕು? ದೇಶದ ಜನರಿಗೆ ಏನು ಬೇಕು? ಮೋದಿಯವರನ್ನು ಅವರ ಅಖಾಡದ ಹಣಿಯುವುದು ಹೇಗೆ? ಅದಕ್ಕೆ ನಾವು ಯಾವ ಸಿದ್ಧಾಂತ ರೂಪಿಸಿಕೊಳ್ಳಬೇಕು? ನಮ್ಮ ಗೊಡ್ಡು ಸಿದ್ಧಾಂತ, ತತ್ವಗಳು ಯಾಕೆ ಅಪ್ರಸ್ತುತ ವಾಗಿವೆ?

ಇವನ್ನೆ ಬಿಟ್ಟು ಸುಮ್ಮನೆ ಮೋದಿಯವರನ್ನು ಟೀಕಿಸುತ್ತಿದ್ದರೆ, ಅದರಿಂದ ಗಟ್ಟಿಯಾಗುವವರು ಮೋದಿಯವರೇ. ಈಗ ಆಗುತ್ತಿರುವುದೂ ಅದೇ. ಪಿಕಾಸಿ ಹಿಡಿದು, ಜೆಸಿಬಿ ಮುಂದೆ ನಿಂತರೆ…? ರಾಹುಲ್ ಗಾಂಧಿ ಸಹಿತ ಇತರರೂ ಯೋಚಿಸಲಿ.