Saturday, 14th December 2024

ಮೋದಿಯವರ ಅಭಿವೃದ್ದಿ ಮಾದರಿಯ ಪರಿಣಾಮ ನಿಚ್ಚಳವಾಗಿದೆ

ವಿಶ್ಲೇಷಣೆ

ಸಯ್ಯದ್‌ ಜಫರ್‌ ಇಸ್ಲಾಂ

ಮೋದಿಯವರ ಅಭಿವೃದ್ಧಿ ಸೂತ್ರವೇನು? ಪುರಾತನ ಪದ್ಧತಿಗಳನ್ನು ಪ್ರಸ್ತುತ ಅವಶ್ಯಕತೆಗಳಿಗೆ ತಕ್ಕಂತೆ ಬದಲಿಸಿ, ಆಶ್ವಾಸನೆಗಳನ್ನು ಈಡೇರಿಸುತ್ತ ಮುನ್ನಡೆದಿದ್ದು ಸಾಮಾನ್ಯ ಸಂಗತಿಯಲ್ಲ. ಭ್ರಷ್ಟಾಚಾರದ ಸಂಗತಿಗಳನ್ನು ಅನುಸರಣೆ ಮಾಡಲು ಹೋಗದೇ ಸಕ್ರಿಯವಾಗಿ ನಡೆದುಕೊಂಡಿದ್ದು ಉತ್ತಮ ಪ್ರಗತಿಯಲ್ಲವೇ?

ಭಾರತೀಯ ಜನತಾ ಪಕ್ಷದ ಅಭಿವೃದ್ಧಿ ಮಾದರಿಯನ್ನು ಡಿಕೋಡ್ ಮಾಡುವ ಯತ್ನದಲ್ಲಿ ಒಂದು ಲೇಖನ ಇತ್ತೀಚೆಗೆ ವೃತ್ತಪತ್ರಿಕೆಯೊಂದರಲ್ಲಿ ಪ್ರಕಟವಾಗಿತ್ತು. ಆದರೆ ಅದು ವಿಚಾರವನ್ನು ತಪ್ಪಾಗಿ ಅರ್ಥೈಸುವಲ್ಲಿ ಪರ್ಯಾವಸಾನಗೊಂಡಿತ್ತು. ಸಮಾಜವಾದ ಮತ್ತು ನವ ಉದಾರೀಕರಣದ ನೀತಿಯನ್ನು ಪಾಶ್ಚಿಮಾತ್ಯರ ದೃಷ್ಟಿಕೋನದಿಂದಾಚೆಗೆ ಪರಾಮರ್ಶೆ ಮಾಡುವಲ್ಲಿ ವಿಫಲರಾದ ವ್ಯಾಖ್ಯಾನಕಾರರು ಬಿಜೆಪಿಯ ಸಮೃದ್ಧ ತಾತ್ವಿಕ ಇತಿಹಾಸ ಮತ್ತು ಆರ್ಥಿಕಾಭಿವೃದ್ಧಿಯ ದಿಸೆಯಲ್ಲಿ ಅದಕ್ಕಿರುವ ಒಳ ನೋಟಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಸೋತಿದ್ದಾರೆ.

೨೦೧೪ರಲ್ಲಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಪ್ರಾರಂಭವಾದ ನರೇಂದ್ರ ಮೋದಿಯವರ ನೇತೃತ್ವ ಬಿಜೆಪಿಯ ಬುನಾದಿ ತತ್ವವಾದ ಅಂತ್ಯೋದಯ (ಯಾರೊಬ್ಬರನ್ನೂ ಬಿಡಲಾಗುವುದಿಲ್ಲ) ಅಭಿವೃದ್ಧಿಯ ಪಥ ದಲ್ಲಿ ಹಾಸುಹೊಕ್ಕಾಗಿತ್ತು ಮತ್ತು ನಿರಾಶಾದಾಯಕವಾಗಿದ್ದ ಸಾರ್ವಜನಿಕ ಸೇವಾ ವ್ಯವಸ್ಥೆಗೆ ಚುರುಕು ತುಂಬು ವಲ್ಲಿ ಉತ್ಸುಕವಾಗಿತ್ತು. ಬಿಜೆಪಿ ಪ್ರಾರಂಭವಾದಾಗಿನಿಂದಲೂ ಅದು ದೀನದಯಾಳ ಉಪಾಧ್ಯಾಯರ ಅಂತ್ಯೋ ದಯ ಮಂತ್ರಕ್ಕೆ ಬದ್ಧವಾಗಿದೆ. ಜತೆಗೆ ಮೋದಿಯವರ ಘೋಷಣೆ ಸಬ್ಕಾ ಸಾಥ್ ಸಬ್ಕಾ ವಿಕಾಸ್ (ಎಲ್ಲರೊಂದಿಗೆ ಎಲ್ಲರ ಅಭಿವೃದ್ಧಿ) ಎಂಬುದು ಅವರ ಉದ್ದೇಶದ ಅಂತರ್ಗತ ತತ್ವವೂ ಆಗಿದೆ.

ಕಾಂಗ್ರೆಸ್ ಮತ್ತು ಇತರೆ ವಿರೋಧಪಕ್ಷಗಳು ಅಭಿವೃದ್ಧಿಯ ಕೆಲಸಗಳನ್ನು ಪರಸ್ಪರ ಕೊಡಕೊಳ್ಳುವ ವ್ಯವಹಾರ ದಂತೆ ನಡೆಸಿಕೊಂಡು ಬಂದಿದ್ದರಲ್ಲದೇ ಎಲ್ಲವನ್ನೂ ಚುನಾವಣೆಯೊಂದಿಗೆ ತಳಕುಹಾಕಿ ಲಾಭ ಪಡೆಯುವ ಪ್ರವೃತ್ತಿ ನಡೆಸಿಕೊಂಡು ಬಂದಿದ್ದರು. ಬಿಜೆಪಿಯ ಧರ್ಮ, ಬಡವರಲ್ಲಿ ಬಡವರನ್ನೂ ಉದ್ಧರಿಸುವತ್ತ ಸಾಗಿದೆ ಮತ್ತು ಯಾರನ್ನೂ ಕೈಬಿಡುವುದಿಲ್ಲ ಎಂಬ ಭರವಸೆ ತುಂಬುತ್ತಿದೆ. ಬಡತನ ನಿರ್ಮೂಲನೆಯನ್ನು ಅಭಿವೃದ್ಧಿ ಕಾರ್ಯಗಳ ಮೂಲಕವಾಗಿ ನಿವಾರಿಸಿ ನೆಮ್ಮದಿಯ ಬದುಕು ಕಟ್ಟಿಕೊಳ್ಳುವಂತೆ ಮಾಡುವುದು ಸರಕಾರದ ಕರ್ತವ್ಯ. ಇದರ ಹೊರತಾಗಿ ಕೇವಲ ಚುನಾವಣೆ ಗೆಲ್ಲಲು ತಂತ್ರಗಾರಿಕೆ ಮಾಡುವುದು ಸರಿಯಾದ ಕ್ರಮವಲ್ಲ.

2014ಕ್ಕೆ ಮೊದಲು ಲಕ್ಷಗಟ್ಟಲೆ ಜನರಿಗೆ ವಿದ್ಯುಚ್ಚಕ್ತಿ, ನೀರು, ನೈರ್ಮಲ್ಯ, ವಾಸಕ್ಕೆ ಮನೆ, ಬ್ಯಾಂಕಿಂಗ್ ಸೇರಿದಂತೆ ಅನೇಕ ಮೂಲಭೂತ ಸೌಕರ್ಯಗಳು ಇರಲೇಇಲ್ಲ. ದಶಕಗಳಿಂದ ಇಂತಹ ಸವಲತ್ತುಗಳಿಂದ ವಂಚಿತರಾಗಿದ್ದವರಿಗೆ ಅಭಿವೃದ್ಧಿಶೀಲ ಕಾರ್ಯಗಳ ಮೂಲಕ ಭರವಸೆ ತುಂಬುವ ಕೆಲಸ ಆಗಿದೆ. ಹಾಗಾಗಿ ನಾವು ಯಥಾಸ್ಥಿತಿಯನ್ನು ಮುರಿದು ಭಾರತ ಅಭಿವೃದ್ಧಿ ಪಥದಲ್ಲಿ ಮುಂದಕ್ಕೆ ಸಾಗುವುದು ನೋಡಲು ಸಾಧ್ಯವಾಗಿದೆ.

ಕಳೆದ ಎಂಟು ವರುಷಗಳಲ್ಲಿ ಪ್ರತಿಯೊಬ್ಬ ನಾಗರಿಕನಿಗೂ ಆತನ ಜಾತಿ, ಧರ್ಮ, ಲಿಂಗ ಅಥವಾ ಇನ್ನಾವುದೇ ಪಕ್ಷಪಾತವಿಲ್ಲದೇ, ಅರ್ಹತೆಯ ಆಧಾರದ ಮೇಲೆ ಸವಲತ್ತುಗಳನ್ನು ಪಡೆಯುವುದಕ್ಕೆ ಅವಕಾಶ ಮಾಡಿಕೊಡಲಾಗಿದೆ. ಅಭಿವೃದ್ಧಿಯ ಹಾದಿಯಲ್ಲಿ ನಾವು ಸಾಕಷ್ಟು ಮುನ್ನಡೆದಿದ್ದೇವೆ, ಯಾರೊಬ್ಬರನ್ನೂ ಹಿಂದುಳಿಯಲು ಬಿಟ್ಟಿಲ್ಲ. ಇವೆಲ್ಲವೂ ಸರಿಯಾದ ಉಪಕ್ರಮಗಳಲ್ಲವೇ? ಅಭಿವೃದ್ಧಿ ಕಾರ್ಯಗಳ ಮೂಲಕ ಗಣನೀಯವಾದ
ಫಲಿತಾಂಶ ಸಾಧಿತವಾಗಿದೆ ಮತ್ತು ಇದು ಒಟ್ಟಾರೆಯಾಗಿ ದೇಶದ ಪ್ರಗತಿಯ ಮಾನದಂಡವೂ ಆಗಿದೆ.

ಇದೆಲ್ಲವನ್ನೂ ಸಾಕಷ್ಟು ಆಳವಾದ ಅಧ್ಯಯನ ಮತ್ತು ಮೌಲ್ಯಮಾಪನದೊಂದಿಗೆ ದಾಖಲುಪಡಿಸಲಾಗಿದೆ. ಉದಾಹರಣೆಗೆ ಇತ್ತೀಚಿನ ಐ.ಎಂ.ಎಫ್. ವರದಿಯ ಪ್ರಕಾರ ಕೋವಿಡ್-೧೯ ಕಾಲದಲ್ಲಿ ಬಡತನದ ಪ್ರಮಾಣ ಅಂದುಕೊಂಡಷ್ಟು ಪರಿಣಾಮ ಬೀರಲಿಲ್ಲ. ಇದಕ್ಕೆ ಬಹುಮುಖ್ಯ ಕಾರಣವಾಗಿದ್ದು ಪ್ರಧಾನಮಂತ್ರಿಗಳ ಗರೀಬ್ ಕಲ್ಯಾಣ ಅನ್ನ ಯೋಜನೆ ಎಂಬುದರಲ್ಲಿ ಎರಡು ಮಾತಿಲ್ಲ. ವಿಶ್ವ ಸಂಪನ್ಮೂಲ ಸಂಸ್ಥೆಯ ಅಧ್ಯಯನದ ಪ್ರಕಾರ ಉಜ್ವಲ್‌ ಯೋಜನೆಯಿಂದಾಗಿ ವಾಯುಮಾಲಿನ್ಯದ ಕಾರಣದಿಂದ ಆಗುತ್ತಿದ್ದ ಸಾವಿನ ಸಂಖ್ಯೆ ಇಳಿದಿದೆ.

ಪ್ರತಿವರ್ಷ ವಾಯುಮಾಲಿನ್ಯದ ಕಾರಣದಿಂದ 150000 ಮಂದಿ ಸಾಯುತ್ತಿದ್ದರು. ಆದರೆ ಬಹುಪಾಲು ರಾಜಕೀಯ ವಿಶ್ಲೇಷಕರು ಇಂತಹ ಸತ್ವಯುತ
ವಿಚಾರಗಳಿಗೆ ಪ್ರಚಾರ ಕೊಡದೇ ಸುಮ್ಮನಾಗಿದ್ದಾರೆ. ಮೋದಿಯ ಅಭಿವೃದ್ಧಿಮಂತ್ರವೆಂದರೆ ನಾಗರಿಕರಿಗೆ ಖಾಸಗಿ ಸುವಿಧೆಗಳನ್ನು ಒದಗಿಸಿಕೊಡುವುದು ಎಂಬ ತಪ್ಪುಕಲ್ಪನೆಯೊಂದಿದೆ. ಜತೆಗೆ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳು ಕಡೆಗಣನೆಗೆ ಒಳಗಾಗಿವೆ ಎಂಬ ಮಾತೂ ಇದೆ.

ಆದರೆ ಇದೊಂದು ಅಪಕ್ವ ವಿಶ್ಲೇಷಣೆಯಾಗಿದೆಯಲ್ಲದೇ ಮೋದಿ ಸರಕಾರದ ಅಭಿವೃದ್ಧಿ ಯೋಜನೆಗಳನ್ನು ಸಮಗ್ರ ದೃಷ್ಟಿಕೋನದಿಂದ ನೋಡಲಾಗಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಉದಾಹರಿಸುವುದಾದರೆ ಸ್ವಚ್ಛ ಭಾರತ ಅಭಿಯಾನ ಆರೋಗ್ಯಕ್ಕೆ ಪೂರಕವಾದ ಸಂಗತಿಯಲ್ಲವೇ? ಬಯಲು ಶೌಚವನ್ನು ತಡೆಯುವ ನಿಟ್ಟಿನಲ್ಲಿ ಆದ ಕ್ರಾಂತಿಕಾರಿ ಬದಲಾವಣೆ ಯಾರ ಗಮನಕ್ಕೂ ಬರುವುದಿಲ್ಲವೇಕೆ? ಪಿ.ಎಂ. ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿಯಲ್ಲಿ ರೈತರಿಗೆ ಕೊಡಲಾದ ಅನುದಾನ ಅವರ ಮಕ್ಕಳ ವಿದ್ಯಾಭ್ಯಾಸ ಮತ್ತು ಪೌಷ್ಟಿಕತೆಯ ಉದ್ದೇಶಗಳಿಗೆ ಬಳಕೆಯಾಗಿಲ್ಲವೇ? ಆಡಳಿತದ ಅತ್ಯುತ್ತಮ ನಡೆ, ಸಾರ್ವಜನಿಕ ಸಂಪನ್ಮೂಲಗಳ ಸಮರ್ಪಕ ವಿತರಣೆಗಳನ್ನು ಕೆಲವು ವಿಶ್ಲೇಷಕರು ಮೋದಿಯ ನವ ಉದಾರ ನೀತಿ ಎಂದು ಹೇಳಿದ್ದಾರೆ.

ಹತ್ತಾರು ಲಕ್ಷ ಮಂದಿಗೆ ಶೌಚಾಲಯಗಳನ್ನು ಕಟ್ಟಿಸಿಕೊಟ್ಟರೆ ಸಾಲದು, ಅವುಗಳ ನಿರ್ವಹಣೆಯನ್ನೂ ಸರಕಾರವೇ ಮಾಡಬೇಕು ಎಂಬ ನಿರೀಕ್ಷಿಸು ವವರೂ ಇದ್ದಾರೆ. ಬಯಲುಪ್ರದೇಶಗಳಲ್ಲಿ ಶೌಚಕ್ಕೆ ಹೋಗುವ ಅನಾಗರಿಕ ಪದ್ಧತಿ ದೂರವಾಗಿ ತಮ್ಮ ತಮ್ಮ ಮನೆಗಳ ಶೌಚಾಲಯ ಹೊಂದುವುದಕ್ಕೆ ಜನರಿಗೆ ಅವಕಾಶ ಒದಗಿಸಲಾಗಿದೆ. ಇದು ಸ್ವಚ್ಛ ಭಾರತ ಯೋಜನೆಯ ಬಹುದೊಡ್ಡ ಕೊಡುಗೆ. ಕುಡಿಯುವ ನೀರಿಗಾಗಿ ಮೈಲುಗಟ್ಟಲೆ ನಡೆದು ಹೋಗ ಬೇಕಿದ್ದ ಗ್ರಾಮೀಣ ಜನರಿಗೆ ಜಲಜೀವನ ಮಿಷನ್ ಅಡಿಯಲ್ಲಿ ಒದಗಿಸಲಾದ ವ್ಯವಸ್ಥೆ ಅತ್ಯುತ್ತಮವಾದುದಲ್ಲವೇ? ಹಾಗಿದ್ದರೆ ಮೋದಿಯವರ ಅಭಿವೃದ್ಧಿ ಸೂತ್ರವೇನು? ಪುರಾತನ ಪದ್ಧತಿಗಳನ್ನು ಪ್ರಸ್ತುತ ಅವಶ್ಯಕತೆಗಳಿಗೆ ತಕ್ಕಂತೆ ಬದಲಿಸಿ, ಆಶ್ವಾಸನೆಗಳನ್ನು ಈಡೇರಿಸುತ್ತ ಮುನ್ನಡೆದಿದ್ದು ಸಾಮಾನ್ಯ ಸಂಗತಿಯಲ್ಲ.

ಭ್ರಷ್ಟಾಚಾರದ ಸಂಗತಿಗಳನ್ನು ಅನುಸರಣೆ ಮಾಡಲು ಹೋಗದೇ ಸಕ್ರಿಯವಾಗಿ ನಡೆದುಕೊಂಡಿದ್ದು ಉತ್ತಮ ಪ್ರಗತಿಯಲ್ಲವೇ? ಹಳೆಯ ಭ್ರಷ್ಟ
ಪದ್ಧತಿಯನ್ನು ಮುರಿದು ಅಭಿವೃದ್ಧಿ ಮಂತ್ರವನ್ನು ಅನುಷ್ಠಾನಕ್ಕೆ ತರುವಲ್ಲಿ ಸಾಕಷ್ಟು ಕೆಲಸ ಆಗಿದೆ. ದೆಹಲಿಯಿಂದ ಒಂದು ರುಪಾಯಿ ಮಂಜೂರಾಗಿ ಹೋದರೆ ಅದು ಗ್ರಾಮೀಣ ಬಡವನಿಗೆ ತಲುಪುವಾಗ ಕೇವಲ ಹದಿನೈದು ಪೈಸೆಯಷ್ಟಾಗಿರುತ್ತದೆ ಎಂಬ ಮಾತನ್ನು ಹಿಂದಿನ ಪ್ರಧಾನಮಂತ್ರಿಗಳೂ ಒಪ್ಪಿಕೊಂಡಿದ್ದರು. ಆದರೆ ಸೋರಿಕೆಯನ್ನು ತಡೆಗಟ್ಟುವಲ್ಲಿ ಏನೂ ಕ್ರಮ ಆಗಿರಲಿಲ್ಲ ಆದರೆ ಮೋದಿ ಸರಕಾರದಲ್ಲಿ ಫಲಾನುಭವಿಗೆ ದಕ್ಕಬೇಕಾದ ಮೊತ್ತವನ್ನು ನೇರ ವರ್ಗಾವಣೆ (ಡೈರೆಕ್ಟ್ ಬೆನೆಫಿಟ್ ಟ್ರಾ-ರ್) ಮೂಲಕ ಮಾಡಿ ಸೋರಿಕೆ ತಡೆಗಟ್ಟುವಲ್ಲಿ ಸಾಕಷ್ಟು ಸಫಲವಾಗಿದೆ.

ಬಿಜೆಪಿಯ ಈ ಉಪಕ್ರಮ ಅನ್ಯ ಪಾರ್ಟಿಗಳ ಕ್ರಮಕ್ಕಿಂತ ಭಿನ್ನವಾಗಿದೆ. ಮೋದಿ ಪ್ರಣೀತ ಅಭಿವೃದ್ಧಿಯ ಪ್ರಗತಿ ಹೇಗಿದೆ ಮತ್ತು ಅದು ದೇಶಾದ್ಯಂತ ಹೇಗೆ ಪ್ರತಿಧ್ವನಿಸುತ್ತಿದೆ ಎಂಬುದನ್ನು ಅರಿಯಬೇಕಾದರೆ ದೆಹಲಿಯಲ್ಲಿ ಕುಳಿತಿರುವ ವಿಶ್ಲೇಷಕರು ದೇಶಾದ್ಯಂತ ಸಂಚರಿಸಬೇಕು. ಅವರು ತಮ್ಮ ಕಿವಿಗಳನ್ನು ಭೂಮಿಗಿಟ್ಟು ಆಲಿಸಬೇಕು, ಪಿ.ಎಂ.ಆವಾಸ್ ಯೋಜನೆಯ ಅಡಿಯಲ್ಲಿ ಮೂರು ಕೋಟಿ ಕುಟುಂಬಗಳು ವಾಸದ ಮನೆಗಳನ್ನು ಪಡೆದಿದ್ದಾರೆ,  ಪಿ.ಎಂ. ಕಿಸಾನ್ ಸಮ್ಮಾನ್ ನಿಧಿಯ ಫಲಾನುಭವಿಗಳ ಸಂಖ್ಯೆ ಹನ್ನೆರಡು ಕೋಟಿಯಷ್ಟಿದೆ. ಕೋವಿಡ್ ಶುರುವಾದಾಗಿನಿಂದ ಪಡಿತರ ಪಡೆಯುತ್ತಿರುವ
ಕುಟುಂಬಗಳ ಸಂಖ್ಯೆ ೮೦ ಕೋಟಿಯಷ್ಟಿದೆ.

45 ಕೋಟಿ ಜನರು ಜನಧನ ಯೋಜನೆಯಡಿಯಲ್ಲಿ ತಮ್ಮ ಬ್ಯಾಂಕ್ ಖಾತೆ ತೆರೆಯುವುದು ಸಾಧ್ಯವಾಗಿದೆ. ಉಜ್ವಲ ಯೋಜನೆಯಿಂದ ಒಂಬತ್ತು ಕೋಟಿ ಕುಟುಂಬಗಳು ತಮ್ಮ ಮೊದಲ ಎಲಪಿಜಿ ಸಿಲಿಂಡರನ್ನು ಉಚಿತವಾಗಿ ಪಡೆಯುವಂತಾಗಿದೆ.