ವಿಚಾರ ವೇದಿಕೆ
ಡಾ.ವಿಜೇಂದ್ರ ಕುಮಾರ್ ಎಸ್.ಕೆ.
ಮಹಾಭಾರತ ಯುದ್ಧದಲ್ಲಿ ಅಭಿಮನ್ಯುವಿನ ಶೌರ್ಯ, ಧೀರತ್ವ ಮತ್ತು ವಧೆ ಹಾಗೂ ಮುಂದಿನ ಚುನಾವಣೆಯಲ್ಲಿ ಬಿಜೆಪಿ/
ಮೋದಿ ಗೆಲ್ಲುವುದನ್ನು ಅನಾಮಧೇಯ ಲೇಖಕರು ಹೋಲಿಕೆ ಮಾಡಿರುವ ಸಂದೇಶ ಕೆಲವು ವಾಟ್ಸ್ಯಾಪ್ ಗ್ರೂಪ್‌ನಲ್ಲಿ ಹರಿ
ದಾಡುತ್ತಿದೆ. ವೀರರಸದಿಂದ ಹಿಡಿದು, ರೌದ್ರ, ಭಯಾನಕ, ಭೀಭತ್ಸದ ಮೂಲಕ ಹಾದುಹೋಗಿ ಕರುಣರಸದಲ್ಲಿ ಮುಕ್ತಾಯ ಗೊಳ್ಳುವ ಅಭಿಮನ್ಯುವಿನ ಸಾವು ಎಂಥಾ ಕಲ್ಲು ಹೃದಯದವರನ್ನೂ ಕಲಕುವ ಘಟನೆ.
ಕಥೆ, ಹರಿಕಥೆ ಮತ್ತು ಕಾವ್ಯಗಳಲ್ಲಿ ರಸ-ಅಲಂಕಾರಗಳಿಗೆ ಅದರದ್ದೇ ಸ್ಥಾನ-ಮಹತ್ವವಿದೆ. ಅದರ ಪರಾಮರ್ಶೆಯು ಕಾವ್ಯ ಮೀಮಾಂಸಕರಿಗೆ, ವಿಮರ್ಶಕರಿಗೆ ಸೇರಿದ್ದು, ಅದರ ಗೊಡವೆ ನಮಗೆ ಬೇಡ. ಆದರೆ ಪ್ರಸಕ್ತ ವಿದ್ಯಮಾನಗಳನ್ನು ಇತಿಹಾಸದ ಪಾತ್ರಗಳೊಂದಿಗೆ ಮರುಸೃಷ್ಟಿ ಮಾಡಹೊರಟಾಗ ಕೆಲವೊಮ್ಮೆ ಅದು ಅಪದ್ಧ-ಅಪಹಾಸ್ಯಗಳಿಗೆ ಎಡೆಮಾಡಿ ಕೊಡುತ್ತದೆ. ಈ ಲೇಖನದಲ್ಲಿ ಅಂಥ ಒಂದು ವಿಷಯವನ್ನು ವಿಶ್ಲೇಷಿಸೋಣ.
ಕುರುಕ್ಷೇತ್ರ ಯುದ್ಧದ ಸಮಯದಲ್ಲಿನ ಅಭಿಮನ್ಯುವಿನ ವೀರಮರಣವನ್ನು ನಾವು ಓದಿದಾಗ ಯಾವುದೇ ಸಂದೇಹವಿಲ್ಲದೆ ನಮ್ಮೆಲ್ಲರಿಗೂ ಕಣ್ಣಲ್ಲಿ ನೀರು ಬಂದಿರುವುದು ಸತ್ಯ. ಯುದ್ಧಗಳ ಘೋರ ಸ್ವರೂಪ, ಯುದ್ಧಾಪರಾಧಗಳು ಹಾಗೂ ಬದುಕುಳಿ ದವರ ಮೇಲಾಗುವ ಯುದ್ಧದ ಪರಿಣಾಮಗಳನ್ನು ಕುರುಕ್ಷೇತ್ರವು ಮೊದಲ ಬಾರಿಗೆ ಸ್ಪಷ್ಟವಾಗಿ ಬಹಿರಂಗಪಡಿಸಿ ವಿವರಿಸಿತು. ಹಾಗೆಯೇ ಆಧುನಿಕ ಪ್ರಜಾಪ್ರಭುತ್ವ ರಾಷ್ಟ್ರಗಳ ಚುನಾವಣೆಗಳನ್ನು ಕೂಡ ಯುದ್ಧದ ಸ್ವರೂಪಕ್ಕೆ ಹೋಲಿಸುತ್ತಾರೆ.
ಆದಾಗ್ಯೂ, ಪ್ರಸಕ್ತ ಹರಿದಾಡುತ್ತಿರುವ ಸಂದೇಶದಲ್ಲಿನ ಹೋಲಿಕೆ ಪ್ರಸ್ತುತವಲ್ಲ ಮತ್ತು ಸುಳ್ಳು ನಿರೂಪಣೆಯನ್ನು ಆಧರಿಸಿದೆ ಎಂಬುದು ನನ್ನ ಅಭಿಪ್ರಾಯವಾಗಿದೆ. ಯುದ್ಧವು ಪ್ರಜಾಪ್ರಭುತ್ವಕ್ಕೆ ಎಂದೂ ಉಪಮೆಯಾಗಲಾರದು ಎನ್ನುವುದು ವಾಸ್ತವ. ಆದರೆ ಪ್ರಸಕ್ತ ನಿರೂಪಣೆಯಲ್ಲಿ ಸಂಬಂಧವಿರದ ಎರಡು ಘಟನೆಗಳನ್ನು ಹೋಲಿಸಿ, ಅವುಗಳ ನಡುವೆ ಹೋಲಿಕೆ ಇದೆ ಎಂದು ತೋರಿಸುವ ಒಂದು ರೀತಿಯ ಭ್ರಮಾತ್ಮಕ ಸಂಬಂಧವಿದೆ; ಇಲ್ಲಿ ವಾಸ್ತವಕ್ಕಿಂತ ಭ್ರಮೆಗೆ, ಭಾವನೆಗಳಿಗೆ ತೂಕವಿರುತ್ತದೆ. ಇದನ್ನು ಬೌದ್ಧಿಕ ಪಕ್ಷಪಾತ (ಇಟಜ್ಞಜಿಠಿಜಿqಛಿ ಆಜಿZo) ಎನ್ನುತೇವೆ. ಈ ಪಕ್ಷಪಾತವನ್ನು ಅರ್ಥೈಸಿಕೊಳ್ಳಲು ಈ ಲೇಖನದ ಮೂಲಕ ಮಾಡಿರುವ ಒಂದು ಸಣ್ಣ ಪ್ರಯತ್ನವಿದು.
ಮಹಾಭಾರತದಲ್ಲಿನ ತಂತ್ರ-ಪ್ರತಿತಂತ್ರಗಳು: ದ್ರೋಣರು ಕೌರವ ಸೇನೆಯ ದಂಡನಾಯಕರಾಗಿದ್ದ ಸಂದರ್ಭ. ಯುಧಿಷ್ಠಿರನನ್ನು ಯುದ್ಧಖೈದಿಯನ್ನಾಗಿ ಪಡೆ ದರೆ ಯುದ್ಧ ಕೊನೆಗೊಂಡಂತೆ ಎಂಬ ದುರ್ಯೋಧನನ ತರ್ಕಕ್ಕೆ ದ್ರೋಣರು ಒಪ್ಪುತ್ತಾರೆ. ಇದು ಸಾಧ್ಯವಾಗುವುದು ಕೃಷ್ಣಾರ್ಜುನರನ್ನು ದೂರವಿರಿಸಿದರೆ ಮಾತ್ರ ಎಂಬ ದ್ರೋಣರ ಮಾತಿಗೆ ದುರ್ಯೋಧನನು ಒಪ್ಪಿ, ಆ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾನೆ. ಇತ್ತ ದುರ್ಯೋಧನನ ಆಣತಿಯ ಮೇರೆಗೆ ಸಂಸಪ್ತಕರು ಅರ್ಜುನನನ್ನು ಯುದ್ಧದಲ್ಲಿ
ಎದುರಿಸಲು ಸವಾಲು ಹಾಕಿ, ಅವನನ್ನು ಮುಖ್ಯ ಯುದ್ಧ ಭೂಮಿಯಿಂದ ದೂರಕ್ಕೆ, ದಕ್ಷಿಣಕ್ಕೆ ಬರುವಂತೆ ಮಾಡುತ್ತಾರೆ.
ಯುಧಿಷ್ಠಿರನನ್ನು ಸೆರೆಹಿಡಿಯಲು ದ್ರೋಣರು ಚಕ್ರವ್ಯೂಹವನ್ನು ರಚಿಸುತ್ತಾರೆ. ಕೃಷ್ಣ, ಅರ್ಜುನ ಮತ್ತು ಪ್ರದ್ಯುಮ್ನನನ್ನು
ಹೊರತುಪಡಿಸಿ ಇತರ ಯಾವ ಮಹಾನ್ ಯೋಧರಿಗೂ ಭೇದಿಸಲಾಗದ ಚಕ್ರವ್ಯೂಹ ರಚನೆಯ ತಂತ್ರವು ಕೌರವರಿಗೆ ವಿಜಯದ
ಮುನ್ಸೂಚನೆಯಾಗಿತ್ತು. ಆದರೆ, ತನ್ನ ಪ್ರಸವಪೂರ್ವ ಬೆಳವಣಿಗೆಯಲ್ಲಿ ಈ ತಂತ್ರವನ್ನು ತಿಳಿದಿದ್ದ ಅಭಿಮನ್ಯುವು ಚಕ್ರವ್ಯೂಹ ವನ್ನು ಭೇದಿಸಬಲ್ಲೆ ಎಂದರೂ ಅದರಿಂದ ಹೊರಬರಲು ತನಗೆ ಸಾಧ್ಯವಾಗುವುದಿಲ್ಲ ಎಂದಿದ್ದ. ಇದಕ್ಕಾಗಿ ಯುಧಿಷ್ಠಿರನು ಅಭಿಮನ್ಯುವಿನ ರಕ್ಷಕರಾಗಿ ಭೀಮ, ಸಾತ್ಯಕಿ ಮತ್ತು ದೃಷ್ಟದ್ಯುಮ್ನರನ್ನು ಇರಿಸಲು ಒಪ್ಪಿಕೊಂಡ.
ಆದರೆ ಅರ್ಜುನನನ್ನು ಹೊರತುಪಡಿಸಿ ಪಾಂಡವರನ್ನು ಒಂದು ದಿನ ಮಾತ್ರ ತಡೆಯಬಹುದೆಂಬ ವರವನ್ನು ಜಯದ್ರಥನು
ಶಿವನಿಂದ ಪಡೆದಿದ್ದ. ಈ ವರದ ಕಾರಣದಿಂದ ಸಾತ್ಯಕಿ ಮತ್ತು ದೃಷ್ಟದ್ಯುಮ್ನ ಸೇರಿದಂತೆ ಪಾಂಡವರು ಚಕ್ರವ್ಯೂಹದೊಳಗೆ
ಅಭಿಮನ್ಯುವನ್ನು ಸೇರಲು ಸಾಧ್ಯವಾಗಲಿಲ್ಲ. ಇಲ್ಲಿಯವರೆಗೆ, ಯುದ್ಧವನ್ನು ನೈತಿಕವಾಗಿ, ಧರ್ಮದ ಕೆಲವು ತತ್ವಗಳನ್ನು ಅನುಸರಿಸಿ ನಡೆಸಲಾಗುತ್ತಿತ್ತು. ಕೌರವರಲ್ಲಿ ಅಧರ್ಮಿಗಳಾಗಿದ್ದ ಕೆಲವರು ಮತ್ತು ನಾಗರಿಕ ಸಮಾಜದ ಮೇಲೆ ಅಸಂಖ್ಯಾತ ಅಸಮರ್ಥನೀಯ ಕ್ರಮಗಳನ್ನು ನಡೆಸಿದ್ದ ಹೆಚ್ಚಿನವರು, ವರಗಳನ್ನು ಪಡೆದವರು ಅಥವಾ ಧರ್ಮ ಯುದ್ಧದಲ್ಲಿ ಅಜೇಯರು ಎಂಬ ವೈಯಕ್ತಿಕ ಸಾಮರ್ಥ್ಯವನ್ನು ಹೊಂದಿದವರಾಗಿದ್ದರು.
ಇಂಥವರನ್ನು ಧರ್ಮಯುದ್ಧದಲ್ಲಾಗದಿದ್ದರೆ ಯಾವುದೇ ರೀತಿಯ ಕರುಣೆ ಅಥವಾ ದ್ವಂದ್ವವಿಲ್ಲದೆ ಅಧಾರ್ಮಿಕವಾಗಿಯಾದರೂ ಕೊಲ್ಲಬಹುದು ಎಂಬುದು ಕೃಷ್ಣ ನೀತಿಯಾಗಿತ್ತು. ಆದ್ದರಿಂದ ಕೃಷ್ಣನು ಒಂದು ಬಲೆಯನ್ನು ಸೃಷ್ಟಿಸಿದನು, ಅಲ್ಲಿ ಕೌರವರು ಅಧಾರ್ಮಿಕ ರೀತಿ ಯಲ್ಲಿ ಯುದ್ಧವನ್ನು ಪ್ರಾರಂಭಿಸಿದರು ಮತ್ತು ನಂತರ, ಪಾಂಡವರು ಅವರನ್ನು ನಾಶಮಾಡಲು ಮತ್ತು ಧರ್ಮವನ್ನು ಎತ್ತಿಹಿಡಿಯಲು ಅದೇ ಮಾರ್ಗದಲ್ಲಿ ಮುಂದುವರಿದರು. ಈ ವಿಶಾಲ ತತ್ವದ ಪರಿಣಾಮವಾಗಿ ಅಭಿಮನ್ಯುವು ಸಾಯಬೇಕಾಗುತ್ತದೆ. ರಾಮಾಯಣದಲ್ಲಿಯೂ ಈ ತಂತ್ರವನ್ನು ಬಳಸಿ ವಾಲಿ ಮತ್ತು ಇಂದ್ರಜಿತು ಅವರನ್ನು ಕೊಲ್ಲಲಾಯಿತು
ಎನ್ನುವುದು ಸರ್ವವಿದಿತ.
ಮೋದಿ ಮತ್ತು ಮಹಾಭಾರತದ ಸಾದೃಶ್ಯ: ನರೇಂದ್ರ ಮೋದಿಯವರು ಎಲ್ಲಾ ಚುನಾವಣೆಗಳನ್ನು ನೈತಿಕವಾಗಿ ಗೆದ್ದಿದ್ದಾರೆ. ಈ ವರ್ಷ ಮತ್ತೊಂದು ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಆದರೆ ಕೆಲವರು ಮೋದಿ ಇರುವ ಸನ್ನಿವೇಶವನ್ನು ಅಭಿಮನ್ಯುವಿನ ಘಟನೆಗೆ ಹೋಲಿಸುತ್ತಾರೆ. ಇಬ್ಬರೂ ಏಕಾಂಗಿಯಾಗಿ ಯುದ್ಧ ಮಾಡುತ್ತಿದ್ದಾರೆ, ಇದರರ್ಥ ಇಬ್ಬರನ್ನೂ ಹೋಲಿಸಲಾಗುವುದಿಲ್ಲ. ಮಹಾಭಾರತ ದಲ್ಲಿ ಅಭಿಮನ್ಯು ಮುಖ್ಯಪಾತ್ರವಲ್ಲ, ಅವನದು ಯುದ್ಧದ ನಿಯಮಗಳ ಬದಲಾವಣೆಗೆ ನಿಮಿತ್ತವಾಗಬಹುದಾದ,
ದುರಂತದಲ್ಲಿ ಕೊನೆಗೊಳ್ಳುವ ಪಾತ್ರ.
ಮೋದಿಯವರು ಅವಮಾನದ ದುರಂತಗಳ ಬೆಂಕಿಯಲ್ಲಿ ಈಗಾಗಲೇ ಮಿಂದು ಬಂದು ನಾಯಕರಾದವರು. ಭಾರತದ ರಾಜಕೀಯದಲ್ಲಿ ಮೋದಿ ಪ್ರಮುಖ ಪಾತ್ರ ವಹಿಸಿದ್ದಾರೆ ಮತ್ತು ಮುಂದೆಯೂ ವಹಿಸಲಿದ್ದಾರೆ. ಅಭಿಮನ್ಯು ತನ್ನ ಪರಾಕ್ರಮ ವನ್ನು ಸಾಬೀತುಪಡಿಸಿ ಸತ್ತನು. ಮೋದಿ ಅವರು ಈಗಾಗಲೇ ಚಕ್ರವ್ಯೂಹದಂಥ ಸಮಸ್ಯೆಯನ್ನು ಎದುರಿಸಿದ್ದಾರೆ. ಅವರು, ತಾವು ನ್ಯಾಯ ಯುತ ಮತ್ತು ಸರಿಯಾದ ಹಾದಿಯಲ್ಲಿದ್ದೇವೆ ಎಂದು ಸಾಬೀತುಪಡಿಸಿ, ಸರ್ವೋಚ್ಚ ನ್ಯಾಯಾಲಯದಿಂದ ಕ್ಲೀನ್‌ಚಿಟ್
ಪಡೆದವರು.
ಭಾರತದ ರಾಜಕೀಯವು ಚಕ್ರವ್ಯೂಹದ ಸ್ವರೂಪದಲ್ಲಿದ್ದ ಕ್ಲಿಷ್ಟ ಸಮಯದಲ್ಲಿ, ಮೋದಿಯವರು ಗುಜರಾತ್‌ನ ಮುಖ್ಯಮಂತ್ರಿ ಯಾಗಿದ್ದವರು, ಅಲ್ಲಿನ ನೈತಿಕ ಪರೀಕ್ಷೆಯಲ್ಲಿ ಗೆದ್ದು ಬಂದವರು. ಆಗ ಅವರೊಂದಿಗೆ ಇತರ ಭಾರತೀಯರು ಇರಲಿಲ್ಲ, ಹೆಚ್ಚಿನ ಭಾರತೀಯರಿಗೆ ಮೋದಿಯ ಪರಿಚಯವಾಗಿದ್ದುದು ೨೦೧೨ರ ನಂತರ. ಅಲ್ಲಿಯವರೆಗೂ ಅವರು ಏಕಾಂಗಿಯಾಗಿ ಹೋರಾಡಿ ದರು ಎಂಬುದನ್ನು ನಾವು ಗಮನಿಸಬೇಕಾಗಿದೆ. ಅಭಿಮನ್ಯು ತನ್ನ ಶೌರ್ಯವನ್ನು ಹೆಮ್ಮೆಪಡುತ್ತಿದ್ದನು. ಇದು ಆತನ ವಯೋ ಸಹಜ ಗುಣ ಮತ್ತು ಅವನಿಗಿನ್ನೂ ನಾಯಕತ್ವದ ವಿಚಾರದಲ್ಲಿ ಪಕ್ವತೆ ಇರಲಿಲ್ಲ.
ಆದರೆ ಮೋದಿಯವರು ಈಗಾಗಲೇ ವಿಶ್ವ ನಾಯಕರಾಗಿದ್ದಾರೆ. ಅವರದ್ದು ಬಾಲಿಶ ಪರಾಕ್ರಮವಲ್ಲ, ಪಳಗಿದ ಮುತ್ಸದ್ದಿಯ ನಡೆ ಮತ್ತು ಬುದ್ಧಿವಂತ ರಾಜರ್ಷಿಯ ನುಡಿ. ಕೇವಲ ಭಾವನಾತ್ಮಕವಾಗಿ ನಮಗಿಷ್ಟವಾಗುವ ಅಭಿಮನ್ಯುವಿನ ಸಾದೃಶ್ಯವನ್ನು ಮೋದಿಯವರಲ್ಲಿ ನೋಡುವ ಪರಿ ಭ್ರಮಾಽನವಾದದ್ದು. ಇಲ್ಲಿ ಕಂಡುಬರುವುದು ಕೇವಲ ಪರಸ್ಪರ ಭ್ರಮಾಧೀನವಾಗುವ (ಐoಟ್ಟqs ಇಟ್ಟ್ಟಛ್ಝಿZಠಿಜಿಟ್ಞ) ಬೌದ್ಧಿಕ ಪಕ್ಷಪಾತ, ತರ್ಕಕ್ಕೆ ಸಿಗದ ಬಾಲಿಶನಡೆ! ಸಂಖ್ಯೆಗಳು ಪ್ರಜಾಪ್ರಭುತ್ವವನ್ನು ರೂಪಿಸುತ್ತವೆ ಮತ್ತು ಮೋದಿಯವರಿಗೆ ಆ ಸಂಖ್ಯೆಯನ್ನು ತಂದುಕೊಡುವುದು ಅವರನ್ನು ಮೆಚ್ಚುವ ಮತದಾರರ ಜವಾಬ್ದಾರಿಯಾಗಿದೆ.
ಆ ಜವಾಬ್ದಾರಿಯನ್ನು ಪಾಲಿಸುವಲ್ಲಿ ಎದುರಾಗುವ ಬೌದ್ಧಿಕ ಪಕ್ಷಪಾತವನ್ನು ಕೈಬಿಟ್ಟು, ವಾಸ್ತವಿಕವಾಗಿ ಮತ್ತು ತರ್ಕಬದ್ದವಾಗಿ ಯೋಚಿಸಿ, ಅಭಿವೃದ್ಧಿಗೆ ಆಸ್ಪದ ನೀಡುವ ಪ್ರಣಾಳಿಕೆ ಹಾಗೂ ಪ್ರಾಮಾಣಿಕತೆಯನ್ನು ಗೌರವಿಸಿ ಮತ ನೀಡುವ ನಿರ್ಧಾರವು ಒಳ್ಳೆಯದು.
(ಲೇಖಕರು ಆಪ್ತ-ಸಮಾಲೋಚಕರು, ಪಿಇಎಸ್ ವಿಶ್ವವಿದ್ಯಾಲಯ)