Friday, 13th December 2024

ಭಾರತ ಬೆಳಗಲು ಮೋದಿ ಆಡಳಿತವೇ ಕಾರಣ

ಅಭಿಮತ

ಆದರ್ಶ್ ಶೆಟ್ಟಿ ಉಪ್ಪಿನಂಗಡಿ

ಹತ್ತು ವರ್ಷಗಳ ಮೋದಿ ಆಡಳಿತದಲ್ಲಿ ಭಾರತವು ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡಿರುವುದು ಉಲ್ಲೇಖನೀಯ.

ಭಾರತ ಪ್ರಕಾಶಿಸುತ್ತಿದೆ ಎಂಬ ಶಬ್ದ ಭಾರತದಲ್ಲಿ ಮೊತ್ತಮೊದಲು ಮೊಳಗಿದ್ದೇ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರಕಾರದ ಅವಧಿಯಲ್ಲಿ. ವಾಜಪೇಯಿಯವರ ಆಡಳಿತದಲ್ಲಿ ಗ್ರಾಮ ಸಡಕ್ ರಸ್ತೆ, ಕುಡಿಯುವ ನೀರು, ಮೂಲಭೂತ ಸೌಕರ್ಯ ಸೇರಿದಂತೆ ಅಭಿವೃದ್ಧಿ
ಕಾರ್ಯಗಳು ಜನಸಾಮಾನ್ಯರ ಮನೆ ಬಾಗಿಲಿಗೆ ತಲುಪಿ, ಜನಮಾನಸದಲ್ಲಿ ಅಚ್ಚಳಿಯದೆ ಉಳಿದ ಕಾರಣಕ್ಕೆ ಇಂದಿಗೂ ಅಟಲ್ ಬಿಹಾರಿ ವಾಜಪೇಯಿ
ಹೆಸರು ಪಕ್ಷಾತೀತ, ಧರ್ಮಾತೀತವಾಗಿ ಸದಾ ಅಜರಾಮರವಾಗಿ ಉಳಿದಿದೆ.

ವಾಜಪೇಯಿ ನಂತರ ಬಂದ ಸರಕಾರಗಳು ಕೇಂದ್ರದಲ್ಲಿ ಹಗರಣಗಳ ಸುಳಿಗೆ ಸಿಲುಕಿ ನರೇಂದ್ರ ಮೋದಿಯವರ ಅಲೆಯಲ್ಲಿ ಕೊಚ್ಚಿಹೋಗಿರುವ
ಕಾರಣಕ್ಕೆ ಇಂದಿಗೂ ಚೇತರಿಕೆ ಕಂಡಿಲ್ಲ. ಕಳೆದೊಂದು ದಶಕಗಳ ಹಿಂದೆ ಗುಜರಾತ್ ನ ಮುಖ್ಯಮಂತ್ರಿಯಾಗಿ ಸಾಕಷ್ಟು ಅಭಿವೃದ್ಧಿ ಕಾರ್ಯಕ್ರಮದ ಮೂಲಕ ಅಲ್ಲಿನ ಪ್ರಶ್ನಾತೀತ ನಾಯಕರಾಗಿ ಹೊರಹೊಮ್ಮುತ್ತಲೇ ಬಂದ ಮೋದಿ ಹೆಸರು ಗೋಧ್ರಾ ಘಟನೆಯ ಸಂದರ್ಭದಲ್ಲಿ ರಾಷ್ಟ್ರ ಅಂತಾರಾ ಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಪರ ವಿರೋಧ ಚರ್ಚೆಗೆ ನಾಂದಿ ಹಾಡಿತು.

ವಿರೋಧಿಗಳು ಈ ವ್ಯಕ್ತಿಯನ್ನು ಸಾಕಷ್ಟು ಬಾರಿ ಸಮಾಜದ ಮುಂದೆ ಖಳ ನಾಯಕರಂತೆ ಬಿಂಬಿಸಲು ಹೊರಟರೂ, ರಾಜಕೀಯವಾಗಿ ಕಪ್ಪುಚುಕ್ಕೆ ಯನ್ನು ತರಲೆತ್ನಿಸಿದರೂ ಇದ್ಯಾವುದಕ್ಕೂ ಸೊಪ್ಪು ಹಾಕದೇ ಅಭಿವೃದ್ಧಿ ಹಾಗೂ ಸಂಘಟನಾ ಮಂತ್ರವನ್ನಷ್ಟೇ ಮೊಳಗಿಸಿದ ಕಾರಣಕ್ಕೆ ಮೋದಿ ನಾಯಕತ್ವ ವಾಜಪೇಯಿ, ಅಡ್ವಾಣಿ ಬಳಿಕ ಬಿಜೆಪಿಗೆ ಅನಿವಾರ್ಯತೆಯನ್ನು ಸೃಷ್ಟಿಸಿತು. ಸಾಮಾಜಿಕ ಮಾಧ್ಯಮ, ದೃಶ್ಯ ಮಾಧ್ಯಮ, ಕೈಗಾರಿಕಾ ರಂಗ,
ಉದ್ಯಮ ರಂಗ, ಸಿನಿಮಾ, ಕ್ರೀಡೆ, ಸಾಂಸ್ಕೃತಿಕ ಹಿನ್ನೆಲೆಯ ಪ್ರಮುಖರಿಂದ ಹಿಡಿದು ಜನಸಾಮಾನ್ಯರ ಬಾಯಲ್ಲೂ ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿಯವರನ್ನು ಕಾಣಬೇಕೆಂಬ ಹಂಬಲ,ಆಗ್ರಹ ಬಹುದೊಡ್ಡ ಪ್ರಮಾಣದಲ್ಲಿ ಅಂದು ವ್ಯಕ್ತವಾಗಿತ್ತು.

ಮೋದಿಗಾಗಿ ಲಕ್ಷಗಟ್ಟಲೆ ಯುವಕಾರ್ಯಕರ್ತರ ಪಡೆ, ಮೋದಿ ಬ್ರಿಗೇಡ್, ನಮೋ ಸೇನೆ, ನಮೋ ಭಾರತ್, ಯುವ ಭಾರತ್ ನಾನಾ ಹೆಸರುಗಳಲ್ಲಿ ಪಕ್ಷದಿಂದ ಹೊರತಾಗಿ ಸ್ವತಃ ಫೀಲ್ಡಿಗಿಳಿದು ಸ್ವಯಂಪ್ರೇರಿತವಾಗಿ ಕೆಲಸ ನಿರ್ವಹಿಸಿದ ಕಾರಣಕ್ಕೆ ಸ್ವಂತ ಬಲದಲ್ಲಿ ಬಿಜೆಪಿ ಪಕ್ಷ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಆಡಳಿ ತದ ಚುಕ್ಕಾಣಿ ಹಿಡಿಯಿತು. ಮೊದಲ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಯೋಜನೆಗಳು, ರಕ್ಷಣಾ ವ್ಯವಸ್ಥೆಯಲ್ಲಿನ ಅಮೂಲಾಗ್ರ ಬದಲಾವಣೆ, ಸೇರಿದಂತೆ ಪಾರದರ್ಶಕತೆಯ ಆಡಳಿತದ ಮೂಲಕ ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿರುವುದಲ್ಲದೆ ಎರಡನೇ ಅವಧಿಯ ಲೋಕಸಭಾ ಚುನಾವಣೆಯಲ್ಲಿ ಕೂಡ ಸ್ವಂತ ಬಲದಲ್ಲಿ ಮೋದಿ ಅಲೆಯಲ್ಲಿ ಬಾಜಾಪ ತನ್ನ ಅಧಿಕಾರದ ಗದ್ದುಗೇರಿರುವುದು ಇತಿಹಾಸ.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ, ಆಯುಷ್ಮಾನ್ ಭಾರತ್, ಜಮ್ಮು ಕಾಶ್ಮೀರದಲ್ಲಿನ ೩೭೧ವಿಽ ರದ್ದು, ಬಾಂಗ್ಲಾ ಅಕ್ರಮ ನುಸುಳುಕೋರರಿಗೆ ನಿರ್ಬಂಧ, ಪಾಕ್ ಹಾಗೂ ಚೀನಾ ಗಡಿ ಕ್ಯಾತೆಗೆ ಅಂಕುಶ, ಭವ್ಯ ರಾಮ ಮಂದಿರ ನಿರ್ಮಾಣ, ಕಾಶಿ, ಮಥುರಾ ಕಾರಿಡಾರ್ ಯೋಜನೆ, ತ್ರಿವಳಿ ತಲಾಖ್ ರದ್ದು, ಮೋದಿ ಕ್ಯಾಬಿನೆಟ್ ಕ್ಲೀನ್ ಇಮೇಜ್ ಹೀಗೆ ಸಾವಿರಾರು ಮೋದಿ ಚಿಂತನೆಯ ದೂರದೃಷ್ಟಿಯ ಅಭಿವೃದ್ಧಿ ಯೋಜನೆಗಳು ಭವ್ಯ ಭಾರತದ
ಅಡಿಪಾಯವಾಗಿದೆ.

ಹಿಂದಿನ ಸರಕಾರಗಳ ಅವಧಿಯಲ್ಲಿ ಭಾರತವನ್ನು ವಿದೇಶಿಗರು ಅವಮಾನಿಸುವ ಸಂಗತಿಗಳು ಎದುರಾಗಿದ್ದರೂ ಪ್ರಸ್ತುತ ಭಾರತ ವಿಶ್ವಗುರುವಾಗುವತ್ತ, ಭಾರತದ ಕಡೆಗೆ ಭರವಸೆ ಗಳು, ವಿಶ್ವಾಸನೀಯ ಭಾವನೆಗಳು ಜಾಗತಿಕ ಮಟ್ಟದಲ್ಲಿದೆ. ಭ್ರಷ್ಟಾಚಾರ ಮುಕ್ತ ಭಾರತದ ಪರಿಕಲ್ಪನೆ ಏನಿದ್ದರೂ ಹಿಂದಿನ ಅಟಲ್ ಬಿಹಾರಿ ವಾಜಪೇಯಿ ಹಾಗೂ ಹಾಲಿ ನರೇಂದ್ರ ಮೋದಿ ಯವರ ಆಡಳಿತದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬಂದಿದೆ. ನರೇಂದ್ರ ಮೋದಿ ಎಂಬುದು ಕೇವಲ ವ್ಯಕ್ತಿಯಾಗಿರದೆ ಜಾಗತಿಕ ಮಟ್ಟದಲ್ಲಿ ಒಂದು ಬಲಾಢ್ಯ ಶಕ್ತಿಯಾಗಿ ರೂಪುಗೊಂಡಿರುವುದಕ್ಕೆ ವಿದೇಶಿ ನೆಲದಲ್ಲಿ ಮೋದಿಯವರಿಗೆ
ದೊರಕುವ ಭರಪೂರ ಅಭಿಮಾನ,ಸ್ವಾಗತವೇ ಸಾಕ್ಷೀಕರಿಸಿದೆ.

ಒಬ್ಬ ನರೇಂದ್ರ ಮೋದಿಯವರನ್ನು ಸೋಲಿಸಲು, ಒಂದು ಬಿಜೆಪಿಯನ್ನು ಸೋಲಿಸಲು ಬಹುದೊಡ್ಡ ಪ್ರಮಾಣದಲ್ಲಿ ಪ್ರತಿಪಕ್ಷಗಳು ಕಟ್ಟಿಕೊಂಡ ಕೋಟೆಯ ಹೆಸರೇ ’ಇಂಡಿಯ’. ಮತದಾರರ ಮುಂದೆ ಮೋದಿ ಹಾಗೂ ಬಿಜೆಪಿಯನ್ನು ಹಣಿಯಲು ಈ ತಂಡ ಕಂಡು ಕೊಂಡ ಮಾರ್ಗಗಳು ಹಲವು. ರಾಜತಾಂತ್ರಿಕ ವ್ಯವಸ್ಥೆಯಲ್ಲಿ ಹಲವಾರು ಮಟ್ಟದ ಟೀಕೆಗಳು, ವೈಯಕ್ತಿಕ ಮಟ್ಟದ ಟೀಕೆಗಳು, ಜಾಗತಿಕ ಮಟ್ಟದಲ್ಲಿ ಮುಜುಗರ ತರುವ ಟೀಕೆಗಳು,
ದೇಶದ ರೈತ ಹಾಗೂ ಸೈನ್ಯ ವ್ಯವಸ್ಥೆಯನ್ನು ಮುಂದಿಟ್ಟು ನಡೆಸಿದ ಟೀಕೆಗಳು ಭಾರತದ ರಾಜಕಾರಣದ ಮನಸ್ಥಿತಿಯನ್ನು ವಿದೇಶಿಯರ ಮುಂದೆಯೂ ಅನಾವರಣಗೊಳಿಸಿದ ದಿನಗಳಿತ್ತು.

ವಿರೋಧ ಪಕ್ಷಗಳ ಈ ಎಲ್ಲಾ ಪ್ರಯತ್ನಗಳು ಕಳೆದೊಂದು ದಶಕಗಳಿಂದ ನರೇಂದ್ರ ಮೋದಿ ಯವರ ಆಡಳಿತ ವೈಖರಿಯ ಎದುರು ಮಂಕಾಗಿಸಿದೆ. ಪ್ರತಿಪಕ್ಷ ಕಾಂಗ್ರೆಸ್ ಪ್ರಧಾನಿ ಅಭ್ಯರ್ಥಿ ಸಾಲಿನಲ್ಲಿ ರಾಹುಲ್ ಗಾಂಧಿ ಎಂಬ ಪ್ರಬುದ್ಧತೆಯಿಲ್ಲದ ನಾಯಕನನ್ನು ಬಿಂಬಿಸಿರುವುದು ಕೂಡ ಇದಕ್ಕೊಂದು ಕಾರಣವಾಗಿರಲಿಕ್ಕೂ ಸಾಕು. ಆಡಳಿತ ವ್ಯವಸ್ಥೆಯಲ್ಲಿ ಯಾವುದೇ ಸರಕಾರಗಳು ಉತ್ತಮ ಜನಪರ ಕೆಲಸ ಕಾರ್ಯಗಳನ್ನು ನಡೆಸಿದಾಗ ರಾಜಕೀಯ ಪಕ್ಷಗಳು ಅವುಗಳನ್ನು ಮುಕ್ತ ಮನಸ್ಸಿನಿಂದ ಸ್ವಾಗತಿಸುವಂತಿರಬೇಕು.

ಪ್ರತಿಪಕ್ಷಗಳು ಆಡಳಿತ ಪಕ್ಷದ ವೈಫಲ್ಯ, ಹುಳುಕುಗಳನ್ನು ಎತ್ತಿ ತೋರಿಸುವಂತಿರಬೇಕು. ಆದರೆ ನಮ್ಮ ದೇಶದಲ್ಲಿ ಇವೆಲ್ಲಕ್ಕಿಂತ ಭಿನ್ನ ವಿಭಿನ್ನವಾಗಿ ಕಾಣಲು ಸಾಧ್ಯ. ಆಡಳಿತಾರೂಢ ಬಿಜೆಪಿ ಅಧಿಕಾರಕ್ಕೇರಲು ಕೊರತೆಯಾಗಿದ್ದ ಎರಡಂಕೆಯ ಬಲವನ್ನು ಮಿತ್ರಪಕ್ಷಗಳ ಮೂಲಕ ನೀಗಿಕೊಂಡಿದೆ. ಪ್ರಬಲ ಪ್ರತಿಸ್ಪರ್ಧಿ ಕಾಂಗ್ರೆಸ್ ನೂರು ಸ್ಥಾನಗಳನ್ನಷ್ಟೆ ಪಡೆದಿದೆ. ಬಿಜೆಪಿ ಹಾಗೂ ಎನ್‌ಡಿಎ ಮಿತ್ರ ಪಕ್ಷಗಳು ಮೊದಲೇ ಮಾಡಿಕೊಂಡ ಒಡಂಬಡಿ
ಕೆಯಂತೆ ಶಿವಸೇನೆ, ಟಿಡಿಪಿ, ಜೆಡಿಯು ನೆರವಿನೊಂದಿಗೆ ಎನ್ ಡಿ ಎ ಮೈತ್ರಿ ಕೂಟ ಸರಕಾರ ಅಧಿಕಾರಕ್ಕೆ ಬಂದಿದೆ.

ಮೂರನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ ಅಧಿಕಾರ ಸ್ವೀಕರಿಸಿದ್ದಾರೆ. ಕಳೆದ ಎರಡು ಅವಧಿಯಲ್ಲಿ ನರೇಂದ್ರ ಮೋದಿ ಸರಕಾರ ತನ್ನ ಆಡಳಿತದಲ್ಲಿ ಈ ದೇಶಕ್ಕೆ ಯಾವುದೇ ಸರಕಾರಗಳು ನೀಡದ ಅಭಿವೃದ್ಧಿ ಕೊಡುಗೆಯನ್ನು ನೀಡುತ್ತಾ ಬಂದಿದೆ. ಭ್ರಷ್ಟಾಚಾರ ಮುಕ್ತ ಆಡಳಿತ, ದೂರ ದೃಷ್ಟಿಯ ಯೋಜನೆಗಳೊಂದಿಗೆ ಈ ದೇಶದ ಪ್ರಬುದ್ಧ ಮತದಾರ, ಹಾಗೂ ಜನಸಾಮಾನ್ಯ ಮತದಾರರು ಯಾವ ಆಶಯ, ನಿರೀಕ್ಷೆಗಳನ್ನು ಸರಕಾರದ ಮೇಲೆ ಹೊಂದಿದ್ದಾರೋ ಅದಕ್ಕೆ ಪೂರಕವಾಗಿಯೇ ಆಡಳಿತ ನಡೆಸಿದರೂ ಹಲವಾರು ಸ್ಥಾನಗಳು ಬಿಜೆಪಿಗೆ ಕೈ ತಪ್ಪಿ ಹೋಗಿರುವುದು ಈ ಬಾರಿ ಆಶ್ಚರ್ಯಕರ ಸಂಗತಿ.

ಉತ್ತರ ಪ್ರದೇಶ, ರಾಜಸ್ಥಾನ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಕರ್ನಾಟಕದಂತಹ ರಾಜ್ಯಗಳಲ್ಲಿ ತುಸು ಹಿನ್ನಡೆಯನ್ನು ಬಿಜೆಪಿ ಪಕ್ಷ ಅನುಭವಿಸಿದೆ.ಕೆಲ
ರಾಜ್ಯಗಳಲ್ಲಿ ಅಲ್ಲಿನ ಸ್ಥಳೀಯ ನಾಯಕತ್ವದ ವೈಫಲ್ಯ, ಟಿಕೆಟ್ ಹಂಚಿಕೆಯದ ಲೋಪದೋಷಗಳು,ಹಾಲಿ ಸಂಸ ದರ ಕ್ಷೇತ್ರದ ನಿರ್ಲಕ್ಷ್ಯ, ಅತಿಯಾದ ಆತ್ಮವಿಶ್ವಾಸ, ಸರಕಾರದ ಗ್ಯಾರಂಟಿ ಯೋಜನೆಗಳು,ಆಮಿಷಗಳು, ಸಂಸದರಾಗಿ ತಾವು ಕೆಲಸ ಮಾಡದಿದ್ದರೂ ಮೋದಿ ಹೆಸರಿನಲ್ಲಿ ಗೆಲ್ಲುತ್ತೇವೆ ಎಂಬ ಭ್ರಮೆ (ಈ ಮನಸ್ಥಿತಿ ಸ್ಥಳೀಯ ಸಂಸ್ಥೆ ಚುನಾವಣೆಯ ಮಟ್ಟಕ್ಕೂ ಬಂದು ನಿಂತಿದೆ)ಕಾರ್ಯಕರ್ತರ ನಿರ್ಲಕ್ಷ್ಯ ಭಾಜಾಪ ತನ್ನ ಸ್ಥಾನಗಳನ್ನು ಕಳೆದು ಕೊಳ್ಳಲು ಮೂಲ ಕಾರಣ.

ಇನ್ನು ಬಾಕಿ ಉಳಿದಂತೆ ೩೦,೦೦೦ ಹಾಗೂ ೧೫,೦೦೦ ಆಸುಪಾಸಿನಲ್ಲಿ ಸೋತ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯೂ ದೊಡ್ಡ ಪ್ರಮಾಣದಲ್ಲಿದೆ. ಇನ್ನು ಕರ್ನಾಟಕದ ಪಾಲಿಗೆ ಆಡಳಿತಾರೂಢ ಕಾಂಗ್ರೆಸ್ ಸರಕಾರ ಹಾಗೂ ಅದರ ಗ್ಯಾರಂಟಿ ಯೋಜನೆಗಳು ಒಂದು ಸ್ಥಾನಕ್ಕಿಂತ ೯ ಸ್ಥಾನಕ್ಕೆ ಏರಿಕೆ ಕಂಡು ಬಿಜೆಪಿ ಇಲ್ಲಿ ಕೆಲ ಸ್ಥಾನವನ್ನು ಕಳೆದುಕೊಳ್ಳುವಂತಾಗಿದೆ. ಲೋಕಸಭಾ ಚುನಾವಣೆ ಎಂದರೆ ಅದು ಪ್ರಾದೇಶಿಕ ವಿಚಾರ, ಸ್ಥಳಿಯ ವಿಚಾರದ ಆಧಾರ ದಲ್ಲಿ ನಡೆಯುವ ಚುನಾವಣೆಯಲ್ಲ. ಬದಲಾಗಿ ದೇಶದ ಭವಿಷ್ಯ ವನ್ನು ರೂಪಿಸುವ ಚುನಾವಣೆ. ನಮ್ಮ ಮುಂದಿನ ಪೀಳಿಗೆಯ ಉಳಿವು ಹಾಗೂ ಭವಿಷ್ಯ ಈ ಚುನಾವಣೆಯ ಹಿಂದೆ ಅಡಕವಾಗಿದೆ.

ಸಣ್ಣ ಪುಟ್ಟ ವ್ಯತ್ಯಾಸಗಳನ್ನೇ ಬಂಡವಾಳವಾಗಿಸಿ, ಇನ್ಯಾವುದೇ ವಿಚಾರಕ್ಕೆ ಬಲಿಬಿದ್ದು ಸ್ಥಾನಗಳನ್ನು ಕಳೆದುಕೊಂಡು ಅನ್ಯಪಕ್ಷಗಳ ಅಧೀನದಲ್ಲಿ  ಸರಕಾರ ನಡೆಸಬೇಕಾದ ಸ್ಥಿತಿಗೆ ನರೇಂದ್ರ ಮೋದಿಯಂತಹ ನಾಯಕರನ್ನು ತಂದು ನಿಲ್ಲಿಸಿ ಚುನಾವಣಾ ಬಳಿಕ ಪರಿತಪಿಸುವುದನ್ನು ಇತ್ತೀಚೆಗೆ ಕಂಡಿ ದ್ದೇವೆ. ಸ್ವಂತ ಬಲದಲ್ಲಿ ಆಡಳಿತ ನಡೆಸು ವುದು ಒಂದು ವಿಚಾರವಾದರೆ ಅನ್ಯಪಕ್ಷಗಳ ಬೆಂಬಲದೊಂದಿಗೆ ಸರಕಾರ ನಡೆಸುವ ಸಂದರ್ಭ ಯಾವುದೇ ಪ್ರಮುಖ ಕಾಯ್ದೆಗಳಿಗೆ, ಮಸೂದೆಗಳ ಅಂಕಿತಕ್ಕೆ ಆ ಪಕ್ಷಗಳನ್ನು ಆಶ್ರಯಿಸಬೇಕಾಗುತ್ತದೆ.

ಇದೊಂದು ರೀತಿಯಲ್ಲಿ ಸರಕಾರ ನಡೆಸುವುದು ಮುಳ್ಳಿನ ಹಾಸಿಗೆಯ ಮೇಲಿನ ನಡಿಗೆಯಂತೆಯೇ ಸರಿ. ಎಲ್ಲವನ್ನೂ ಸರಿದೂಗಿಸಿಕೊಂಡು ಒಮ್ಮತದಿಂದ ಸರಕಾರವನ್ನು ಕೊಂಡೊಯ್ಯ ಬೇಕಾದ ಎಚ್ಚರಿಕೆ ಹಾಗೂ ಅಪಾಯದ ನರೇಂದ್ರ ಮೋದಿಯವರ ಹಾದಿಯೆಂದರೂ ತಪ್ಪಾಗಲಾ ರದು. ಒಂದಂತೂ ಸತ್ಯ ನರೇಂದ್ರ ಮೋದಿ ಯೆಂದರೆ ಸ್ವಾಹ ಅಲ್ಲ,ಮೋದಿಯೆಂದರೆ ಸ್ವಜನ ಪಕ್ಷಪಾತ ಅಲ್ಲ,ಮೋದಿಯೆಂದರೆ ಭ್ರಷ್ಟಾಚಾರ ಅಲ್ಲ.ಮೋದಿಯೆಂದರೆ ಭವ್ಯ ಭಾರತದ ಕಲ್ಪನೆ ಯೊಂದಿಗೆ ಭವಿಷ್ಯದ ಭಾರತದ ಅಭಿವೃದ್ಧಿಯ ಪ್ರತಿರೂಪ.

(ಲೇಖಕರು : ಹವ್ಯಾಸಿ ಬರಹಗಾರರು)