Friday, 13th December 2024

ಆರ್ಥಿಕತೆಗೆ ಮೋದಿ ಕೊಡುಗೆಯೇನು ?

ಸಾಧನಾಪಥ

ಶಶಿಕುಮಾರ‍್ ಕೆ.

ಭಾರತದ ಹಣಕಾಸು ಕ್ಷೇತ್ರದಲ್ಲಿ ನಡೆದಿರುವ ಡಿಜಿಟಲ್ ಕ್ರಾಂತಿ ಜಗತ್ತಿನ ಕಣ್ಣು ಕುಕ್ಕಿದೆ. ಜರ್ಮನಿಯಲ್ಲಿ ೧೦ ಲಕ್ಷ ಜನರಿಗೆ ಒಮ್ಮೆಲೇ ಹಣ ವಗಾಯಿಸಿದರೆ ಅಲ್ಲಿನ ತಾಂತ್ರಿಕ ವ್ಯವಸ್ಥೆ ಬ್ರೇಕ್‌ಡೌನ್ ಆಗುತ್ತದೆ; ಆದರೆ ನಮ್ಮಲ್ಲಿ ೧೦ ನಿಮಿಷದಲ್ಲಿ ೨೫ ಕೋಟಿ ಜನರಿಗೆ ಹಣ ವರ್ಗಾಯಿಸಿದರೂ ತೊಂದರೆಯಾಗುವುದಿಲ್ಲ.

ಲೋಕಸಭಾ ಚುನಾವಣೆಯ ೨ನೇ ಹಂತದ ಮತದಾನಕ್ಕೆ ಅಖಾಡವು ಸಜ್ಜಾಗುತ್ತಿದೆ. ನರೇಂದ್ರ ಮೋದಿಯವರ ನೇತೃತ್ವದ ಸರಕಾರವೇ ಸತತ ೩ನೇ ಬಾರಿಗೆ ಕೇಂದ್ರದಲ್ಲಿ ಗದ್ದುಗೆಯನ್ನು ಏರಲಿದೆ ಎಂಬುದು ಬಹುತೇಕರ ಅಭಿಪ್ರಾಯವಾಗಿದೆ. ಇದರ ಸಾಧ್ಯಾಸಾಧ್ಯತೆಗಳೇನೇ ಇರಲಿ, ಕಳೆದ ೧೦ ವರ್ಷಗಳಲ್ಲಿ ಅವರ ಸರಕಾರವು ದೇಶದ ಆರ್ಥಿಕತೆಗೆ ಏನೆಲ್ಲ ಕೊಡುಗೆಗಳನ್ನು ನೀಡಿದೆ ಎಂಬುದನ್ನು ಒಮ್ಮೆ ಅವಲೋಕಿಸೋಣ.

ಮೋದಿ ಸರಕಾರವು ೨೦೧೪ರಿಂದ ೨೦೨೪ರವರೆಗೆ ಬಂಡವಾಳ ವೆಚ್ಚಕ್ಕಾಗಿ ೪೫ ಲಕ್ಷ ಕೋಟಿ ರುಪಾಯಿಗಳನ್ನು ಖರ್ಚು ಮಾಡಿದೆ. ಇದರಲ್ಲಿ ೩೫ ಲಕ್ಷ ಕೋಟಿ ರುಪಾಯಿ ತೆರಿಗೆ ಸಂಗ್ರಹದಿಂದ ಬಂದಿದ್ದರೆ, ಉಳಿದ ೧೦ ಲಕ್ಷ ಕೋಟಿ ರುಪಾಯಿಯನ್ನು ಮಾತ್ರ ಸಾಲ ಮಾಡಲಾಗಿದೆ. ೨೦೨೩- ೨೪ರಲ್ಲಿ ಮೂಲಸೌಕರ್ಯ ವೃದ್ಧಿಗಾಗಿ ೧೦.೭ ಲಕ್ಷ ಕೋಟಿ ರು. ಮತ್ತು ರೈಲ್ವೆ ಕ್ಷೇತ್ರಕ್ಕೆ ೨.೪ ಲಕ್ಷ ಕೋಟಿ ರುಪಾಯಿಗಳನ್ನು ಹೂಡಿಕೆ ಮಾಡಲಾಗಿದೆ. ೨೦೧೩-೧೪ರ ಯುಪಿಎ ಸರಕಾರದ
ಅವಽಯಲ್ಲಿ ರೈಲ್ವೆ ವಲಯದ ಅಭಿವೃದ್ಧಿಗಾಗಿ ಹೂಡಿಕೆಯಾಗಿದ್ದು ೨೫,೮೩೮ ಕೋಟಿ ರು.ಮಾತ್ರ. ಅಂದರೆ ಪ್ರಸ್ತುತ ಮೋದಿ ಸರಕಾರವು ರೈಲ್ವೆ ವಲಯಕ್ಕೆ ೯ ಪಟ್ಟು ಅಧಿಕ ಹಣವನ್ನು ವಿನಿಯೋಗಿಸಿದೆ.

೨೦೧೪ರಲ್ಲಿ ಮೋದಿ ಸರಕಾರವು ಅಧಿಕಾರಕ್ಕೆ ಬರುವುದಕ್ಕೂ ಮುಂಚೆ ಮೋರ್ಗಾನ್ ಸ್ಟಾನ್ಲೆ ಎಂಬ ಸಂಸ್ಥೆಯು ಭಾರತವನ್ನು ಊZಜಜ್ಝಿಛಿ೫ ಎಂಬ ಪಟ್ಟಿಗೆ ಸೇರಿಸಿತ್ತು; ಅಂದರೆ ಈ ದೇಶದ ಆರ್ಥಿಕತೆ ಯಾವಾಗ ಬೇಕಾದರೂ ನೆಲಕಚ್ಚಬಹುದು ಎಂಬುದು ಇದರರ್ಥವಾಗಿತ್ತು. ೨೦ ರಾಷ್ಟ್ರೀಕೃತ ಬ್ಯಾಂಕುಗಳ
ಪೈಕಿ ೧೧ ಬ್ಯಾಂಕುಗಳು ಮುಳುಗಿಹೋಗುವ ಸ್ಥಿತಿಯಲ್ಲಿದ್ದ ಸಂದರ್ಭವದು. ಈ ಘಟ್ಟದಲ್ಲಿ ಅಧಿಕಾರಕ್ಕೆ ಬಂದ ಮೋದಿ ಯವರು ದೇಶದ ಆರ್ಥಿಕತೆಯನ್ನು ಗಟ್ಟಿಗೊಳಿಸಲು ಕಟಿಬದ್ಧ ರಾಗಿ, ದಿವಾಳಿತನದ ಕಾಯ್ದೆ, ಜಿಎಸ್‌ಟಿ, ಬೇನಾಮಿ ಸ್ವತ್ತುಗಳ ಕಾಯ್ದೆ, ನೋಟು ಅಮಾನ್ಯೀಕರಣದಂಥ ಗಟ್ಟಿ ನಿರ್ಧಾರಗಳನ್ನು ಕೈಗೊಂಡರು. ಕೆಲವರು ಈ ದೇಶದಲ್ಲಿ ಸಾಲ ತೆಗೆದುಕೊಂಡು ವಿದೇಶದಲ್ಲಿರುವ ಬೇರೆ ಖಾತೆಗಳಿಗೆ ಹಣ ವರ್ಗಾಯಿಸಿ, ನಂತರ ದೇಶ ಬಿಟ್ಟು ಓಡಿಹೋಗುತ್ತಿದ್ದರು.

ಇಂಥವರನ್ನು ಹಿಡಿಯಲು ಊಜಜಿಠಿಜಿqಛಿ ಉಟ್ಞಟಞಜ್ಚಿ uಛ್ಞಿbಛ್ಟಿo ಅಠಿ ಅನ್ನು ಮೋದಿ ಜಾರಿಗೆ ತಂದರು. ನಿರುದ್ಯೋಗವು ನಮ್ಮ ದೇಶದ ಅತಿದೊಡ್ಡ ಸಮಸ್ಯೆ.
ನಿರುದ್ಯೋಗ ನಿವಾರಣೆಗೂ ಕೇಂದ್ರ ಸರಕಾರ ಕ್ರಾಂತಿಕಾರಕ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ೨೦೩೦ರ ವೇಳೆಗೆ ೧೦ ಕೋಟಿ ಗಳಷ್ಟು ಉದ್ಯೋಗ ಸೃಷ್ಟಿ ಆಗಬೇಕಿದೆ. ಇದಕ್ಕಾಗಿ ಪ್ರಧಾನಿ ಯವರು ‘ಆತ್ಮನಿರ್ಭರ ಭಾರತ’ ಆರ್ಥಿಕ ನೀತಿಯನ್ನು ತಂದರು. ವಿದೇಶಿ ಬಂಡವಾಳ ಮತ್ತು ತಂತ್ರಜ್ಞಾನವನ್ನು
ಬಳಸಿಕೊಂಡು ‘ಮೇಕ್ ಇನ್ ಇಂಡಿಯಾ’ ಯೋಜನೆಯಡಿ ಭಾರತದ ಯುವಕರಿಗೆ ಕೆಲಸ ಕೊಡುತ್ತಾ, ಅಂತಾರಾಷ್ಟ್ರೀಯ ಗುಣಮಟ್ಟದ ಸರಕುಗಳನ್ನು ಭಾರತದಲ್ಲಿ ಉತ್ಪಾದಿಸಲಾಗುತ್ತಿದೆ.

ಇದರ ಮೂಲ ಉದ್ದೇಶ, ಭಾರತವನ್ನು ಪ್ರಮುಖ ಉತ್ಪಾದನಾ ಕೇಂದ್ರವನ್ನಾಗಿಸಿ ೨೧ನೇ ಶತಮಾನವನ್ನು ಭಾರತದ ಶತಮಾನವನ್ನಾಗಿ ಮಾಡುವುದು.
೨೦೨೦ರಲ್ಲಿ, ಕೋವಿಡ್ ಮಹಾಮಾರಿಯು ಚೀನಾ ದಿಂದಲೇ ಹರಡಿಕೊಂಡಿದ್ದು ಎಂಬ ವಿಷಯ ತಿಳಿದ ನಂತರ, ಅಮೆರಿಕ, ಇಂಗ್ಲೆಂಡ್ ಮತ್ತು ಐರೋಪ್ಯ ರಾಷ್ಟ್ರಗಳು ಚೀನಾ ದಲ್ಲಿ ತಾವು ಮಾಡಿದ್ದ ಹೂಡಿಕೆಯ ನಿರ್ದಿಷ್ಟ ಭಾಗವನ್ನು ವಾಪಸ್ ತೆಗೆದುಕೊಂಡು ಬೇರೆ ದೇಶಗಳಲ್ಲಿ ಹೂಡಿಕೆ ಮಾಡಲು ಹೊರಟವು. ಈ ಸಂದರ್ಭವನ್ನು ಚೆನ್ನಾಗಿಯೇ ಉಪಯೋಗಿಸಿಕೊಂಡ ಮೋದಿ ಸರಕಾರ, ಭೂ ಸುಧಾರಣಾ ಕಾಯ್ದೆ, ತೆರಿಗೆ ಸುಧಾರಣಾ ಕಾಯ್ದೆಗಳ ಜತೆಗೆ Pಟbಠಿಜಿಟ್ಞ ಔಜ್ಞಿhಛಿb ಐಛ್ಞಿಠಿಜಿqಛಿ (ಪಿಐಎಲ್) ಯೋಜನೆಯನ್ನೂ ಜಾರಿಗೆ ತಂದಿತು.

ಮೊಬೈಲ್ ಹ್ಯಾಂಡ್ ಸೆಟ್‌ಗಳು, ಜವಳಿ, ಔಷಧಿಗಳು, ಆಟೋಮೊಬೈಲ್ಸ್ ಸೇರಿ ದಂತೆ ೧೪ ಕ್ಷೇತ್ರಗಳಿಗೆ ಪ್ರೋತ್ಸಾಹ ನೀಡಿ, ಈ ಬಾಬತ್ತುಗಳಿಗೆ ೧,೯೭,೦೦೦ ಕೋಟಿ ರುಪಾಯಿಗಳನ್ನು ತೆಗೆದಿರಿಸಲಾಯಿತು. ಮಾತ್ರವಲ್ಲ, ಸೆಮಿಕಂಡಕ್ಟರ್‌ಗಳ ಉತ್ಪಾದನೆಗೆ ಪ್ರೋತ್ಸಾಹಿಸಲು ೭೬,೦೦೦ ಕೋಟಿ ರುಪಾಯಿಗಳನ್ನು ಮೀಸಲಿರಿಸಲಾಯಿತು. ಉತ್ಪಾದನಾ ಕ್ಷೇತ್ರಕ್ಕೆ ಹೀಗೆ ಭಾರಿ ಪ್ರಮಾಣದಲ್ಲಿ ಒತ್ತಾಸೆ ಸಿಗಲು ಕಾರಣ, ಅತಿಹೆಚ್ಚು ಉದ್ಯೋಗಗಳು ಸೃಷ್ಟಿಯಾಗುವುದು ಈ ಕ್ಷೇತ್ರದಿಂದಲೇ. ಇಲೆಕ್ಟ್ರಾನಿಕ್ ಕ್ಷೇತ್ರಕ್ಕೆ ೪೧,೯೫೧ ಕೋಟಿ ರುಪಾಯಿಗಳನ್ನು ಮೀಸಲಿಟ್ಟ ಪರಿಣಾಮ, ಫಾಕ್ಸ್‌ಕಾನ್, ಸ್ಯಾಮ್‌ಸಂಗ್, ವಿಸ್ಟ್ರಾನ್ ಕಾರ್ಪೊರೇಷನ್
ನಂಥ ಕಂಪನಿಗಳು ಭಾರತದಲ್ಲಿ ಮೊಬೈಲ್ ಉತ್ಪಾದನಾ ಘಟಕಗಳನ್ನು ಆರಂಭಿಸುವಂತಾಯಿತು.

ಪ್ರಸ್ತುತ ಭಾರತವು ಮೊಬೈಲ್‌ಗಳ ಉತ್ಪಾದನೆಯಲ್ಲಿ ಜಗತ್ತಿನಲ್ಲಿಯೇ ೨ನೇ ಸ್ಥಾನದಲ್ಲಿದ್ದು, ೨೮ ಶತಕೋಟಿ ಡಾಲರ್ ಮೌಲ್ಯದ ಮೊಬೈಲ್‌ಗಳು ೨೦೨೩ರಲ್ಲಿ ರ-ಗಿವೆ. ೨೦೨೬ರ ವೇಳೆಗೆ ಈ ವಲಯದಲ್ಲಿ ಮತ್ತಷ್ಟು ಸಾಧನೆಯಾಗುವುದರ ಜತೆಗೆ ೨೦ ಲಕ್ಷದಷ್ಟು ಉದ್ಯೋಗಗಳು ಸೃಷ್ಟಿಯಾಗುತ್ತವೆ ಎನ್ನುತ್ತಾರೆ ಕ್ಷೇತ್ರತಜ್ಞರು. ಇದು ಕೇವಲ ಒಂದು ಕ್ಷೇತ್ರದ ಸಾಧನೆಯಷ್ಟೇ. ಇನ್ನು, ರಾಷ್ಟ್ರೀಯ ಹೆದ್ದಾರಿ, ಬಂದರು, ರೈಲ್ವೆ, ವಿಮಾನ ನಿಲ್ದಾಣ ಮೊದಲಾದ ಮೂಲಸೌಕರ್ಯ
ಗಳಿಗಾಗಿ ೧೧೦ ಲಕ್ಷ ಕೋಟಿ ರುಪಾಯಿ ಹೂಡಿಕೆಯಾಗಿದೆ. ಇದೆಲ್ಲದರ ಪರಿಣಾಮವಾಗಿ, ಕೋವಿಡ್ ಸಂದರ್ಭದಲ್ಲಿ ಕುಸಿತ ಕಂಡಿದ್ದ ಭಾರತದ ಜಿಡಿಪಿ ಬೆಳವಣಿಗೆಯು ೨೦೨೩-೨೪ನೇ ಸಾಲಿನಲ್ಲಿ ಶೇ.೭.೬ರ ಅಭಿವೃದ್ಧಿ ದರ ದೊಂದಿಗೆ ರಾರಾಜಿಸುತ್ತಿದೆ.

ಇನ್ನು ಭಾರತದ ಹಣಕಾಸು ಕ್ಷೇತ್ರದಲ್ಲಿ ನಡೆದಿರುವಂಥ ಡಿಜಿಟಲ್ ಕ್ರಾಂತಿಯು ಜಗತ್ತಿನ ಕಣ್ಣು ಕುಕ್ಕುವಂತೆ ಮಾಡಿದೆ. ಜರ್ಮನಿಯಲ್ಲಿ ೧೦ ಲಕ್ಷ ಜನರಿಗೆ ಒಮ್ಮೆಲೇ ಹಣ ವರ್ಗಾವಣೆ ಮಾಡಿದರೆ, ಅಲ್ಲಿನ ತಾಂತ್ರಿಕ ವ್ಯವಸ್ಥೆ ಬ್ರೇಕ್‌ಡೌನ್ ಆಗುತ್ತದೆ; ಆದರೆ ಭಾರತದಲ್ಲಿ ೧೦ ನಿಮಿಷದಲ್ಲಿ ೨೫ ಕೋಟಿ ಜನರಿಗೆ
ಹಣ ವರ್ಗಾವಣೆಯಾದರೂ ಯಾವುದೇ ತೊಂದರೆ ಯಾಗುವುದಿಲ್ಲ. ಕಳೆದ ೩೦ ತಿಂಗಳಲ್ಲಿ ಜಗತ್ತಿನಾದ್ಯಂತದ ರಸಗೊಬ್ಬರದ ಬೆಲೆಯು ದುಪ್ಪಟ್ಟಾಗಿದೆ; ಆದರೆ ನಮ್ಮ ದೇಶದಲ್ಲಿ ಮಾತ್ರ ರೈತರಿಗೆ ರಸಗೊಬ್ಬರದ ಬೆಲೆಯ ಹೊಡೆತ ತಟ್ಟಿಲ್ಲ (ಡೈ ಅಮೋನಿಯಂ ಫಾಸೇಟ್ ೫೦ ಕೆ.ಜಿ. ರಸಗೊಬ್ಬರದ ಬೆಲೆ ೧,೨೦೦ ರುಪಾಯಿಯಷ್ಟಿತ್ತು; ಇದರಲ್ಲಿ ರೈತರು ೭೦೦ ರು. ಕೊಡುತ್ತಿದ್ದರೆ ಸರಕಾರ ೫೦೦ ರು. ಕೊಡುತ್ತಿತ್ತು. ಇದರ ಬೆಲೆ ಒಂದೇ ಬಾರಿಗೆ ೨,೪೦೦ ರುಪಾಯಿಗೆ ಏರಿಕೆಯಾದಾಗ, ಕೇಂದ್ರ ಸರಕಾರವು ರೈತರಿಗೆ ಹೊರೆಯಾಗದಂತೆ ೧,೭೦೦ ರುಪಾಯಿ ಸಬ್ಸಿಡಿ ನೀಡಲು ಆರಂಭಿಸಿತು. ಇದೊಂದು ಉದಾಹರಣೆಯಷ್ಟೇ). ಕೇಂದ್ರ ಸರಕಾರವು ೨೦೧೯-೨೦ರಲ್ಲಿ ರಸಗೊಬ್ಬರದ ಮೇಲೆ ಪಾವತಿಸಿದ ಸಬ್ಸಿಡಿ ಮೊತ್ತವು ೭೯,೯೯೬ ಕೋಟಿ ರುಪಾಯಿಗಳಾಗಿದ್ದರೆ, ೨೦೨೨-೨೩ರಲ್ಲಿ ಈ ಮೊತ್ತ ೨,೫೫,೦೦೦ ಕೋಟಿ ರುಪಾಯಿಗಳಿಗೇರಿತು.

ಇದರ ಪರಿಣಾಮವಾಗಿ, ಭಾರತದ ಕೃಷಿ ವಲಯದಲ್ಲಿ ಉತ್ಪಾದನೆಯ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮವಾಗದೆ, ರೈತರು ಹೆಚ್ಚೆಚ್ಚು ಆಹಾರ ಧಾನ್ಯಗಳನ್ನು ಬೆಳೆದು ಅನ್ಯ ದೇಶಗಳಿಗೂ ರಫ್ತು ಮಾಡುವುದು ಸಾಧ್ಯವಾಗಿದೆ. ಪ್ರಸ್ತುತ ಜಗತ್ತು ಆಹಾರ, ಇಂಧನ, ಹಣಕಾಸು ಮತ್ತು ರಸಗೊಬ್ಬರ ವಲಯಗಳಲ್ಲಿ ಬಿಕ್ಕಟ್ಟು ಗಳನ್ನು ಎದುರಿಸುತ್ತಿದೆ (ಇವನ್ನು ’೪ ಊ’ ಇಜಿoಜಿo: ಊuuಈ, ಊಖಿಉಔ, ಊಐಘೆಅಘೆಇಉ, ಊಉSಐಔಐಘಉಖ ಇಜಿoಜಿo ಎಂದೇ ಕರೆಯುವುದು ವಾಡಿಕೆ). ಆದರೆ ಭಾರತ ಮಾತ್ರ ಈ ಯಾವ ಸಮಸ್ಯೆಗಳನ್ನೂ ಎದುರಿಸದೆ ಜಗತ್ತಿನ ಐದನೇ ಬಲಾಢ್ಯ ರಾಷ್ಟ್ರವಾಗಿ ನಿಂತಿದೆ. ಮುಂಬರುವ ದಿನಗಳಲ್ಲಿ ನಮ್ಮ ದೇಶ ಮೂರನೇ ಬಲಾಢ್ಯ ರಾಷ್ಟ್ರವಾಗಿ ರೂಪುಗೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ. ಇದು ಸಾಕಾರಗೊಳ್ಳಬೇಕೆಂದರೆ ದೇಶಕ್ಕೆ ನರೇಂದ್ರ ಮೋದಿ ಯವರ ನಾಯಕತ್ವ ಬೇಕಾಗಿದೆ.

(ಲೇಖಕರು ಹವ್ಯಾಸಿ ಬರಹಗಾರರು)