Friday, 20th September 2024

ಹಿಂದೂ- ಮುಸ್ಲಿಂ ಭಾವೈಕ್ಯ ಬೆಸೆಯುವ ಮೊಹರಂ

ತನ್ನಿಮಿತ್ತ

ಜಗದೀಶ ಎಸ್.ಗಿರಡ್ಡಿ

ನಮ್ಮ ನಾಡಿನ ಸಾಮರಸ್ಯದ ಪ್ರತಿಕ ಹಿಂದೂ ಮುಸ್ಲಿಂ ಸೇರಿದಂತೆ ಎಲ್ಲ ಸಮುದಾಯದ ಜನರು ಒಗ್ಗೂಡಿ ಆಚರಿಸುವ ಈ ಹಬ್ಬ ನಮ್ಮ ನೆಲದಲ್ಲಿ ಕೋಮು ಸೌಹಾರ್ದ ಉಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ದೂರದ ನಾಡಿನಲ್ಲಿ ನಡೆದ ದುರಂತ ಒಂದರ ಸ್ಮರಣೆಗಾಗಿ ಹುಟ್ಟಿದ ಧಾರ್ಮಿಕ ಆಚರಣೆ,
ನಮ್ಮಲ್ಲಿ ಸಾಂಸ್ಕೃತಿಕ ಆಚರಣೆ ರೂಪಾಂತರ ಪಡೆದಿರುವದು ವಿಶೇಷ. ಮೂಲತಃ ಇದು ಶೋಕ ವ್ಯಕ್ತಪಡಿಸುವ ಆಚರಣೆ ಇತ್ತೀಚಿನ ದಿನಗಳಲ್ಲಿ ನಮ್ಮ
ನಾಡು ನಮ್ಮ ದೇಶದಲ್ಲಿ ಮೊಹರಂ ಉತ್ಸವ ರೂಪದಲ್ಲಿ ರಂಗು ಪಡೆದಿರುವುದು ಮತ್ತೊಂದು ವಿಶೇಷ.

ಭಾರತ ದೇಶವು ಪ್ರಾಚೀನ ಕಾಲದಿಂದಲೂ ಒಂದು ಸನಾತನ ಧರ್ಮಕ್ಕೆ ಅಂಟಿಕೊಂಡು ಒಂದೇ ಧರ್ಮದ ಆಧಾರದ ಮೇಲೆ ನಡೆದುಕೊಳ್ಳುತ್ತಿದ್ದ ಜನ ತುಂಬಾ ವಿರಳವಾಗಿತ್ತು. ರಾಜ-ಮಹಾರಾಜರ ಕಾಲದಿಂದಲೂ ಜಾತಿ ಮತ ಪಂಥ ಎನ್ನುವ ಗೊಡವಿಗೆ ಹೋಗದೆ, ಎಲ್ಲರೂ ನಮ್ಮವರು, ಎಲ್ಲರೂ ನಮ್ಮ ನೆಲದವರು ಎನ್ನುತ್ತ ಅನೇಕ ಪರಿಕೀಯರ ಹಾಗೂ ಬ್ರಿಟಿಷರ ವಿರುದ್ಧ ಹೋರಾಟಗಳಿದ್ದವೇ ಸದ್ದು ವಿನಃ ಯಾವತ್ತು ಜಾತಿ ಜಾತಿ ಎಂದು ಬಡಿದಾಡಿದ ಉದಾಹರಣೆಗಳೇ ಸಿಗುತ್ತಿರಲಿಲ್ಲ. ಆದರೆ ಜನವಾಸಿಗಳು ಅಭಿವೃದ್ಧಿಯ ಹೆಸರಿನಲ್ಲಿ ಬಲಗೊಂಡ ನಂತರ ನಮ್ಮ ನಮ್ಮಲ್ಲಿಯೇ ಜಾತಿಗಳು ಹುಟ್ಟಿಕೊಂಡು
ಇಂದು ಅಧರ್ಮ ತಾಂಡವಾಡುತ್ತಿದೆ. ನಮ್ಮ ನಮ್ಮ ಒಳಗೆ ಜಾತಿ ಭೇದಭಾವ ಪ್ರಾರಂಭವಾಯಿತೇ ವಿನಃ ಮೊದಲಿನವ ರ್ಯಾರು ಯಾವತ್ತೂ ಜಾತಿ ಭೇದ ಭಾವ ಮಾಡಿರಿ ಎಂದು ಎಲ್ಲ ದಾಖಲಿಸಿಲ್ಲ.

ಕೇವಲ ಒಂದು ಧರ್ಮ ಒಂದು ಜಾತಿಗೆ ಅಂಟಿಕೊಂಡು ಯಾವ ರಾಜ ಮಹಾರಾಜರು ಆಡಳಿತವನ್ನು ನಡೆಸಿದ ಉದಾಹರಣೆಗಳು ಪ್ರಾಚೀನ ಭಾರತದ ಇತಿಹಾಸದಿಂದಲೂ ಈವರೆಗೂ ಗೋಚರಿಸುವುದು ತುಂಬಾ ವಿರಳ. ಆದರೆ ಇತ್ತಿತ್ತಲಾಗಿ ನಮ್ಮ ನಮ್ಮಗಳ ಮಧ್ಯೆ ಜಾತಿ ಭೇದ ಭಾವಗಳನ್ನು ಬೆಳೆಸಿ ಕೊಂಡು ನಮ್ಮೊಳಗೆ ನಾವೇ ಬಡಿದಾಡಿ ನಮ್ಮ ಕಾಲನ್ನು ನಾವೇ ಎಳೆಯುವಂತ ಪರಿಸ್ಥಿತಿಗೆ ಬಂದಿರುವದು ತುಂಬಾ ವಿಷಾಧನೆಯೆನಿಸಿದರು ಸತ್ಯವಾದ ಮಾತು. ಆದರೆ, ಎಷ್ಟೇ ಜಾತಿ-ಧರ್ಮಗಳ ಭೇದ ಭಾವಗಳ ತಾರತಮ್ಯವಾದರು ಮೊಹರಂ ಹಬ್ಬ ಬಂದಾಗ ಮಾತ್ರ ನಮ್ಮ ಭಾರತೀಯ ಜನ
ನಾವೆಲ್ಲರೂ ಒಂದಾಗಿದ್ದೇವೆ, ಎಂದು ಮೊಹರಂ ಹಬ್ಬ ಮುಸ್ಲಿಮರ ಹಬ್ಬವಾದರೂ ಭಾರತೀಯ ಗ್ರಾಮೀಣ ಪ್ರದೇಶದಲ್ಲಿ ಹಿಂದುಗಳು ಸಂಪೂರ್ಣವಾಗಿ ಈ ಹಬ್ಬದ ನೇತೃತ್ವ ವಹಿಸಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸುತ್ತಿರುವುದು ದೇಶಾದ್ಯಂತ ಎಲ್ಲರ ಗಮನ ಸೆಳೆಯುತ್ತದೆ.

ಮೊಹರಂ ಹಬ್ಬ ಎಂದರೆ ಅದಕ್ಕೆ ಕಾರಣ ಹಿಂದೂ ಮುಸ್ಲಿಮರು ಸಹೋದರರ ಬಾಂಧತ್ವ ಬೆಸೆಯುವ ಹಾಗೂ ನಾವೆಲ್ಲರೂ ಒಂದು ಎನ್ನುವ ಭಾವನೆಯಿಂದ ನಡೆದುಕೊಳ್ಳುವ ಮನೋಭಾವ ಇರುವುದರಿಂದ ಹಬ್ಬಗಳು ವಿಶೇಷವಾಗಿ ನಡೆಯುತ್ತಿರುವುದಕ್ಕೆ ಭಾರತ ಸಾಕ್ಷಿಯಾಗಿದೆ. ಕರ್ನಾಟಕ ದಲ್ಲಿಂತು ಮೊಹರಂ ಹಬ್ಬವನ್ನು ಪ್ರತಿ ಊರಿನ ಜಾತ್ರೆಯನ್ನಾಗಿ ಆಚರಣೆ ಮಾಡುವ ಪ್ರತಿತಿಯಿದೆ. ನಮ್ಮ ರಾಜ್ಯದಲ್ಲಿ ಜಾತ್ರೆಗಳು ನಡೆಯದ
ಅದೆಷ್ಟೋ ಹಳ್ಳಿಗಳು ಇವೆ ಮುಸ್ಲಿಮರೆ ವಾಸವಿಲ್ಲದ ಸಾಕಷ್ಟು ಗ್ರಾಮಗಳಲ್ಲಿ ಮೊಹರಂ ಹಬ್ಬದ ಮೆರವಣಿಗೆ ನಡೆಯಲಾರದ ಹಳ್ಳಿಗಳೇ ಇಲ್ಲ. ಹಾಗಾಗಿ ಪ್ರತಿಯೊಬ್ಬರೂ ಊರಿನ ಜಾತ್ರೆಯನ್ನಾಗಿ ಮೊಹರಂ ಹಬ್ಬವನ್ನು ಅದ್ದೂರಿಯಾಗಿ ಹಿಂದು ಮುಸ್ಲಿಂ ಎನ್ನದೆ ಎಲ್ಲರೂ ಏಕತಾಭಾವದಿಂದ ಗ್ರಾಮದ ಜಾತ್ರೆಯನ್ನಾಗಿ ಆಚರಣೆ ಮಾಡುವ ಪರಂಪರೆಯನ್ನು ಈ ಮೊದಲಿನಿಂದಲೂ ಭಾರತೀಯ ಗ್ರಾಮೀಣ ಪ್ರದೇಶದ ಜನರು ಮೈಗೂಡಿಸಿಕೊಂಡು
ಬಂದಿರುವುದು ಮೊಹರಂ ಹಬ್ಬದ ಮತ್ತೊಂದು ವಿಶೇಷ.

ಇಷ್ಟೆಲ್ಲ ಅವಿನಾಭಾವ ಸಂಬಂಧದಿಂದ ಮೊಹರಂ ಆಚರಿಸುವ ಹಿಂದೂ ಮುಸ್ಲಿಂರ ಮಧ್ಯೆ ಹುಳಿ ಹಿಂಡುವ ಕೆಲಸ ಮಾಡಿ ತಮ್ಮ ತಮ್ಮ ವೈಯಕ್ತಿಕ ಲಾಭಕ್ಕೋಸ್ಕರ ಜಾತಿಗಳನ್ನು ಬಳಸಿಕೊಂಡು ಜಾತಿ ಧರ್ಮಗಳ ಮಧ್ಯೆ ಜಗಳ ಹಚ್ಚಿ ಮೋಜು ನೋಡುವಂತ ಮನಃಸ್ಥಿತಿಗಳನ್ನು ದೂರವಿಟ್ಟರೆ ಪ್ರತಿಯೊಂದು ಹಿಂದೂ-ಮುಸ್ಲಿಂ ಹಬ್ಬಗಳನ್ನು ನೆಮ್ಮದಿಯಿಂದ ಆಚರಿಸಬಹುದು. ಮನಸ್ಸಿನಲ್ಲಿಲ್ಲದ ಜಾತಿಯನ್ನು ಮನದಲ್ಲಿ ಬೀರೂರುವಂತೆ ಪ್ರೇರೇಪಿಸಿ ಜಾತಿ ಜಾತಿಗಳ ಮಧ್ಯೆ ಸಮಸ್ಯೆಗಳನ್ನು ತಂದಿಟ್ಟು, ಆ ಸಮಸ್ಯೆಯನ್ನೇ ತಮ್ಮ ಅಸವನ್ನಾಗಿ ಮಾಡಿಕೊಂಡು ತಮ್ಮ ಲಾಭ ಮಾಡಿ ಕೊಳ್ಳು ತ್ತಿರುವ ಇಂಥಹ ಹೀನ ಮನಸ್ಥಿತಿಗಳ ಮಧ್ಯೆ ಇವತ್ತು ಜಾತಿ ಧರ್ಮ ಎಂದು ಬಡದಾಡುವಂತ ಪರಿಸ್ಥಿತಿ ನಮ್ಮ ಜನರಲ್ಲಿ ಬೇರೂರುತ್ತಿದೆ.

ಎಲ್ಲದರ ಮಧ್ಯೆಯೂ ಮೊಹರಂ ಹಬ್ಬವನ್ನು ಕೆಲವೊಂದು ಪ್ರದೇಶದಲ್ಲಿ ಬಿಟ್ಟರೆ ಎಲ್ಲರೂ ಪ್ರತಿ ಗ್ರಾಮಗಳಲ್ಲೂ ಪ್ರತಿವರ್ಷ ಮೊಹರಂ ಹಬ್ಬವನ್ನು ಮುಸ್ಲಿಂರಿಗಿಂತ ಹೆಚ್ಚಾಗಿ ಹಿಂದುಗಳೇ ಆಚರಣೆ ಮಾಡುವ ಹಬ್ಬವಾಗಿದೆ. ಬಕ್ರೀದ್ ಹಾಗೂ ರಂಜಾನ್ ಹಬ್ಬದ ದಿವಸ ಸ್ವತಃ ನಡೆದಾಡುವ ದೇವರಂದೇ
ಖ್ಯಾತರಾದ ಅಭಿನವ ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು ಮುಸ್ಲಿಮರ ಮನೆಗೆ ತೆರಳಿ ಹಬ್ಬದ ಶುಭಾಶಯಗಳು ತಿಳಿಸಿ ಮತ್ತು ಉತ್ತರ ಕರ್ನಾಟಕದ ಅನೇಕ ಭಾಗಗಳಲ್ಲಿ ಮಸೀದಿಗಳನ್ನು ಉದ್ಘಾಟನೆ ಮಾಡುವುದರ ಮೂಲಕ ಹಿಂದೂ ಮುಸ್ಲಿಂ ಕ್ರೈಸ್ತ ಬೇರೆ ಬೇರೆ ಅಲ್ಲ ನಾವೆಲ್ಲರೂ ಒಂದೇ ಎನ್ನುವ ಸಂದೇಶ ನೋಡಿದ್ದಾರೆ. ಒಂದು ಗಿಡದ ಕೆಳಗೆ ಬಿಸಿಲು ಹೆಚ್ಚಾದರೆ ನಾವುಗಳು ಹೇಗೆ ಒಂದು ಗಿಡದ ಕೆಳಗೆ ನೆರಳಿನ ಆಶ್ರಯವನ್ನು ಪಡೆಯಲು ಬಂದಾಗ ನೀನು ಮುಸ್ಲಿಂ ನೀನು ಹಿಂದು ನೀನು ಕ್ರೈಸ್ತ ನನ್ನ ಹತ್ತಿರ ಬರಬೇಡ ಎಂದು ಹೇಳಿಲ್ಲ. ಪ್ರಕೃತಿಯಿಂದ ಬೆಳೆದ ಒಂದು ಗಿಡವೇ ಜಾತಿ ಬೇದ ಬಾವ ಮಾಡಲ್ಲವೆಂದರೆ ನಾವೇಕೆ ಜಾತಿ ಜಾತಿ ಅಂತ ಬಡದಾಡಬೇಕು ಅಂತ ಹೇಳುತ್ತಾ ಸಾಕಷ್ಟು ಅನೇಕ ಉದಾಹರಣೆಗಳನ್ನು ಜನರಿಗೆ ಮನಮುಟ್ಟುವಂತೆ ಪ್ರೇರೇಪಿಸಿ ಜನರ ಜನರ ಮಧ್ಯ ಇರುವ ಜಾತಿ ಭೇದಭಾವದ ತಾರತಮ್ಯವನ್ನು ಹೋಗಲಾಡಿಸುವಲ್ಲಿ ಸದಾ ಕಾಲ ಮುಂಚೂಣಿಯಲ್ಲಿ ನಡೆದಾಡುವ
ದೇವರು ಕೊಪ್ಪಳದ ಗವಿಮಠದ ಶ್ರೀಗಳು ಇದ್ದಾರೆ ಎಂದರೆ ತಪ್ಪಾಗಲಾರದು.

ಹೀಗೆ ಅನೇಕ ಸ್ವಾಮೀಜಿಗಳು ಜಾತಿ ಜಾತಿಗಳ ಮಧ್ಯೆ ಇರುವ ತಾರತಮ್ಯಗಳನ್ನು ತಿದ್ದುವಲ್ಲಿ ಸಾಕಷ್ಟು ಪ್ರಯತ್ನದ ಮಧ್ಯೆಯು ಸಮಾಜ ಸುಧಾರಕರಿಂದ
ಪ್ರೇರೇಪಣೆಗೊಂಡ ನಾವುಗಳು ಜಾತಿ ಜಾತಿ ಎಂದು ಬಡದಾಡದೆ ಎಲ್ಲರೂ ಒಂದಾಗಿ ಆಚರಿಸುವ ಹಬ್ಬವೇ ಮೊಹರಂ ಹಬ್ಬ. ಮೊಹರಂ ಇತಿಹಾಸ
ಅರಬ್ ರಾಜ ಅಜಿತ್ ವಿರುದ್ಧ ನಡೆದ ಯುದ್ಧದಲ್ಲಿ ತಮ್ಮ ಪ್ರಾಣ ಬಲಿದಾನ ಮಾಡಿ ಹುತಾತ್ಮರಾದ ಹಸನ್ ಅಲಿ ಹುಸೇನ್ ಅಲಿ ಅವರ ನೆನಪಿಗಾಗಿ ಆಚರಿಸುವ ಹಬ್ಬವೇ ಮೊರಂ ಹಬ್ಬವಾಗಿದೆ.

ಮಮ್ಮದ್ ಪೈಗಂಬರರ ಮಗಳು ಬಿಬಿ ಜಾನ ಅವರನ್ನು ಅಜರತ್ ಮೌಲಾ ಅಲಿ ಅವರಿಗೆ ಕೊಟ್ಟು ಮದುವೆ ಮಾಡುತ್ತಾರೆ. ಹಜರತ್ ಮೌಲಾ ಅಲಿ ಹಾಗೂ ಬಿಬಿ ಜಾನ್ ಉದರದಲ್ಲಿ ಜನಿಸಿದವರೇ ಹಸನ್ ಅಲಿ. ಹುಸೇನ ಅಲಿ ಮಹಮದ್ ಪೈಗಂಬರರ ಅಳಿಯ ಮೌಲಾ ಅಲಿ ನಾಲ್ಕನೇ ಕಲಿಪನಾಗಿ ರಾಜ್ಯಭಾರ ಮಾಡುತ್ತಿರುತ್ತಾನೆ. ಲೋಕ ರೂಢಿಯಂತೆ ಮೌಲಾ ಅಲಿ ನಂತರ ಹುಸೇನ ಅಲಿ ಕಲಿಪನಾಗಬೇಕಿತ್ತು. ಆದರೆ ಅಲ್ಲಿಯ ಸರದಾರನಾಗಿದ್ದ
ಹೆಜ್ಜೆ ಎಂಬ ದುಷ್ಟ ತನ್ನಿಷ್ಟಕ್ಕೆ ತಾನೇ ಕಲೀಪನೆಂದು ಘೋಷಿಸಿಕೊಳ್ಳುತ್ತಾನೆ. ಇಸ್ಲಾಂ ತತ್ವ ಮತ್ತು ಸಿದ್ಧಾಂತಗಳನ್ನು ತನಗೆ ಅನುಕೂಲವಾಗುವ ರೀತಿಯಲ್ಲಿ ಬದಲಾಯಿಸಿಕೊಳ್ಳುತ್ತಾನೆ. ಇದರಿಂದ ಸಿಟ್ಟಾದ ಹಸನ್ ಅಲಿ ಮತ್ತು ಹುಸೇನ್ ಅಲಿ ತಮ್ಮ ಅಜ್ಜ ಮಹಮದ್ ಪೈಗಂಬರಿಗೆ ಇಷ್ಟವಿಲ್ಲದ ತತ್ವ ಸಿದ್ಧಾಂತಗಳನ್ನು ಜಾರಿಗೆ ತರಲು ಹೆಜ್ಜೆ ಪ್ರಯತ್ನಿಸಿದಾಗ ಅಜೀದನನ್ನು ವಿರೋಧಿಸುತ್ತಾರೆ.

ಇವರ ವಿರೋಧವನ್ನು ಸಹಿಸಿಕೊಳ್ಳದ ಅರಬ್ ರಾಜ ಹಸನ್ ಅಲಿಯನ್ನ ವಿಷ ಹಾರ ಹಾಕಿ ಸಾಯಿಸಿದರು. ಸಹೋದರನ ಸಾವಿನ ಬಳಿಕವು ಹುಸೇನ್ ಅಲಿ ಯಜೀದನ ಆಡಳಿತವನ್ನು ವಿರೋಧಿಸುತ್ತಾ ಬರುತ್ತಾನೆ. ಇದರಿಂದ ಕುಪಿತಗೊಂಡ ಈಜಿ ರಾಜ್ಯ ಹಸನ್ ಅಲಿ ಅವರನ್ನು ಸಂವಿಧಾನಕ್ಕೆ ಕರೆದು ಮಾತನಾಡಿದಾಗ ಅಜೀದನ ಇಸ್ಲಾಂ ತತ್ವಗಳನ್ನು ಹುಸೇನ ಅಲಿ ನಿರಾಕರಿಸುತ್ತಾನೆ.

ಎಜೀದ ಮತ್ತು ಹುಸೇನ್ ಅಲಿ ಅವರ ವೈಮನಸ್ಸು ತಾರಕ್ಕೇರಿದಾಗ ಅಜೀದನು ಹೇಗಾದರೂ ಮಾಡಿ ಹಸನ್ ನಲ್ಲಿ ಅವರನ್ನು ಕೊಲ್ಲಬೇಕೆಂದು ಸಂಚು ಮಾಡಿದ. ಕಾರಣ ತನ್ನ ೭೨ ಅನುಯಾಯಿಗಳೊಂದಿಗೆ ಹುಸೇನ್ ಅಲಿ ಎಜೀದ ಉಪಟಳದಿಂದ ಬೇಸತ್ತು ಅಕ್ಕ ಮದೀನ ಕಡೆಗೆ ಸಾಗಬೇಕೆಂದು ತೆರಳುತ್ತಾನೆ. ಆದರೆ ಮೆಕ್ಕಾ ಎನ್ನುವುದು ಮುಸ್ಲಿಮರ ಪವಿತ್ರ ಕ್ಷೇತ್ರ ಅಲ್ಲಿ ಕೂಡ ಎಜೀದನು ಬಂದು ಕೊಲ್ಲುತ್ತಾನೆ. ಹಾಗಾಗಿ ನಾನು ಆ ಪ್ರದೇಶಕ್ಕೆ  ಹೋಗುವುದು ಬೇಡ ಎಂದು ಮಾರ್ಗ ಮಧ್ಯದಲ್ಲಿ ನಿರ್ಧಾರ ಬದಲಿಸಿ, ಕರ್ಬಲ್ ಕಡೆ ಹೋಗಿ ನದಿಯ ದಂಡಿಯ ಮೇಲೆ ತನ್ನ ೭೨ ಅನುಯಾಯಿ ಗಳೊಂದಿಗೆ ವಾಸವಿರುತ್ತಾನೆ. ಹುಸೇನ್ ಅಲಿ ಅವರ ಇದ್ದಲ್ಲಿಗೆ ತೆರಳಿದ ಹೆಜ್ಜೆದನ ಅನುಯಾಯಿಗಳು ಆರು ತಿಂಗಳವರೆಗೆ ಹುಸೇನ್ ಅಲಿ ಅವರಿಗೆ ಮತ್ತು ಅವರ ಸಹೋದರಿ ಸಹೋದರರಿಗೆ ಹಾಗೂ ೭೨ ಅನುಯಾಯಿಗಳಿಗೆ ಒಂದು ಹನಿ ನೀರು ಕೂಡ ಸಿಗದಂತೆ ಮಾಡುತ್ತಾರೆ.

ಇಷ್ಟೆಲ್ಲ ಮಾಡಿದರೂ ಹುಸೇನ್ ಅಲಿಯವರು ಜನರ ಸೇವೆ ಮಾಡಬೇಕು, ಜನರಿಗಾಗಿ ನಾನು ಏನೆಲ್ಲವನ್ನು ಮಾಡಬೇಕು ಆ ಸೇವೆಯನ್ನು ನಾನು ಮುಂದುವರಿಸಿದ್ದೇನೆ ಎಂದು ತಮ್ಮ ಕಾಯಕದಲ್ಲಿ ನಿರತರಾಗಿರುತ್ತಾರೆ. ಆದರೆ ಒಂದು ದಿವಸ ನಮಾಜ್ ಮಾಡುವ ಸಮಯದಲ್ಲಿ ಎಜೀತನ ಅನು ಯಾಯಿಗಳು ಬಂದು ಹುಸೇನ್ ಅಲಿ ಅವರ ರುಂಡವನ್ನು ಕತ್ತರಿಸಿ ಹಾಕುತ್ತಾರೆ. ಹೀಗಾಗಿ ಹಸನ್ ಅಲಿ ಮತ್ತು ಹುಸೇನ್ ಅಲಿ ಅವರ ನೆನಪಿನ ಗೋಸ್ಕರ ೧೦ ದಿನಗಳ ಕಾಲ ಮೊಹರಂ ಹಬ್ಬವನ್ನು ನಮ್ಮ ಭಾರತ ದೇಶದಲ್ಲಿ ಅದರಲ್ಲೂ ದಕ್ಷಿಣ ಭಾರತದಲ್ಲಿ ವಿಶೇಷವಾಗಿ ಮೊಹರಂ ಹಬ್ಬವನ್ನು ಆಚರಿಸು ತ್ತಾರೆ. ಹೀಗಾಗಿ ಮೊರಮ್ ಹಬ್ಬವನ್ನು ಮುಸ್ಲಿಮರು ವರ್ಷದ ಮೊದಲನೇ ತಿಂಗಳ ಹಾಗೂ ಪವಿತ್ರ ತಿಂಗಳವಾಗಿದ್ದರಿಂದ ಹುಸೇನ್ ಅಲಿ ಮತ್ತು ಅಸನ್ ಅಲಿಯವರಿಗೆ ಶೋಕ ಮತ್ತು ಕಣ್ಣೀರು ಹಾಕುವುದರ ಮೂಲಕ ಹಬ್ಬವನ್ನು ಆಚರಿಸುತ್ತಾರೆ. ಈ ಹತ್ತು ದಿನಗಳ ಕಾಲ ನಡೆಯುವ ಹಬ್ಬವನ್ನು ಸುನ್ನಿ ಸಿಯಾ ಶಾಂತಿ ದುರ್ಬಲ ಹಬ್ಬ ಪಶ್ಚಾತಾಪದ ಹಬ್ಬ ಎಂದು ಕರೆಯುತ್ತಾರೆ.

(ಲೇಖಕರು: ಹವ್ಯಾಸಿ ಬರಹಗಾರರು)