ವಿತ್ತಲೋಕ
ಗೋಪಾಲಕೃಷ್ಣ ಭಟ್ ಬಿ.
ಹೆಚ್ಚಿನ ಸಹಕಾರಿ ಸಂಘಗಳು/ಸಹಕಾರಿ ಬ್ಯಾಂಕುಗಳು ಲಾಗಾಯ್ತಿನಿಂದಲೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆಯಾದರೂ, ಈ ಪೈಕಿ ಕೆಲವು ಒಮ್ಮೊಮ್ಮೆ ಅತಿಹೆಚ್ಚಿನ ಬಡ್ಡಿ ನೀಡುವ ಆಮಿಷ ತೋರಿಸಿ ಠೇವಣಿದಾರರರಿಗೆ ಮೋಸಮಾಡುವುದುಂಟು, ನಾಮ ಹಾಕುವು ದುಂಟು. ಹೀಗಾಗಿ ಗ್ರಾಹಕರು ವಿವೇಚನೆಯಿಂದ ವರ್ತಿಸಬೇಕು.
ಭಾರತದಲ್ಲಿ ನಾಲ್ಕು ವಿಧದ ಸಹಕಾರಿ ಬ್ಯಾಂಕುಗಳಿವೆ. ಅವೆಂದರೆ: ೧) ಕೇಂದ್ರ ಸಹಕಾರಿ ಬ್ಯಾಂಕುಗಳು ೨) ರಾಜ್ಯ ಸಹಕಾರಿ ಬ್ಯಾಂಕುಗಳು ೩) ಪ್ರಾಥಮಿಕ ಸಹಕಾರಿ ಬ್ಯಾಂಕುಗಳು ಮತ್ತು ೪) ಭೂ ಅಭಿವೃದ್ಧಿ ಬ್ಯಾಂಕುಗಳು. ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ, ಕರ್ನಾಟಕದಲ್ಲಿ ೫೨ ಸಹಕಾರಿ ಬ್ಯಾಂಕುಗಳು, ೪೫,೯೨೬ ಸಹಕಾರಿ ಸಂಘಗಳಿವೆ. ಈ ಸಂಘಗಳ ಪೈಕಿ ೬,೦೪೦ರಷ್ಟು ಪ್ರಾಥಮಿಕ ಕೃಷಿ ಸಾಲ ಸಂಘಗಳಾಗಿವೆ ಮತ್ತು ೧೫ ಸಾವಿರಕ್ಕೂ ಅಧಿಕ ಪ್ರಾಥಮಿಕ
ಹಾಲು ಸಹಕಾರ ಸಂಘಗಳು ಕೆಎಂಎಫ್ ಗೆ ಸೇರಿವೆ.
ಇಂದು ಸಾರ್ವಜನಿಕರಲ್ಲಿ ಅನೇಕರಿಗೆ, ಸಹಕಾರಿ ಬ್ಯಾಂಕುಗಳು (ಇಟಟmಛ್ಟಿZಠಿಜಿqಛಿ ಆZho) ಮತ್ತು ಸಹಕಾರಿ ಸಂಘಗಳು (ಇಟಟmಛ್ಟಿZಠಿಜಿqಛಿ ಖಟ್ಚಜಿಛಿಠಿ ಜಿಛಿo) ಇವುಗಳ ನಡುವಿನ ಭಿನ್ನತೆಯ ಬಗ್ಗೆ ಹಲವು ಅನುಮಾನಗಳಿವೆ. ಇವುಗಳ ಪ್ರಧಾನ ಸ್ವರೂಪ, ವೈಶಿಷ್ಟ್ಯಗಳು ಮತ್ತು ಕಾರ್ಯ ವ್ಯಾಪ್ತಿಯ ಬಗ್ಗೆ ತಿಳಿಯಲು ಪ್ರಯತ್ನಿಸೋಣ.
ಮೊದಲನೆಯದಾಗಿ, ಸಹಕಾರಿ ಬ್ಯಾಂಕುಗಳು ಸಹಕಾರಿ ಸೊಸೈಟಿ ಕಾಯ್ದೆಯಡಿಯಲ್ಲಿ ನೋಂದಾಯಿಸಲ್ಪಟ್ಟಿರುತ್ತವೆ. ಇವು ಯಾವುದೇ ವ್ಯಕ್ತಿಯೊಂದಿಗೆ
ಬ್ಯಾಂಕಿಂಗ್ ವ್ಯವಹಾರವನ್ನು ಮಾಡಲು ಭಾರತೀಯ ರಿಸರ್ವ್ ಬ್ಯಾಂಕಿನಿಂದ (ಆರ್ಬಿಐ) ಪರವಾನಗಿ ಪಡೆದಿರುತ್ತವೆ. ಇವುಗಳನ್ನು ಆರ್ಬಿಐ ನಿಯಂ ತ್ರಿಸುತ್ತದೆ. ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ ೧೯೪೯ ಮತ್ತು ಬ್ಯಾಂಕಿಂಗ್ ಕಾನೂನುಗಳು (ಸಹಕಾರಿ ಸಂಘಗಳು) ಕಾಯ್ದೆ ೧೯೫೫ರ ಮೂಲಕ ಇವನ್ನು ನಿಯಂತ್ರಿಸಲಾಗುತ್ತದೆ ಎಂಬುದು ಗಮನಾರ್ಹ.
ಸಹಕಾರಿ ಬ್ಯಾಂಕುಗಳು ಆರ್ಬಿಐ ಆದೇಶದಿಂದಾಗಿ, ಪರವಾನಗಿಗಳ ರದ್ಧತಿ/ನಿರ್ಬಂಧದ ಪರಿಣಾಮವಾಗಿ ಮುಚ್ಚಲ್ಪಟ್ಟರೆ ಅಥವಾ ದಿವಾಳಿಯಾದರೆ, ಠೇವಣಿದಾರರು ‘ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್’ನಿಂದ (ಈಐಇಎಇ) ೫ ಲಕ್ಷ ರು.ವರೆಗೆ ವಿಮೆಗೆ ಅರ್ಹರಾಗಿರುತ್ತಾರೆ. ಅದಕ್ಕೆ ತಕ್ಕಂತೆ ವಿಮೆಯ ಕಂತನ್ನು ಸಹಕಾರಿ ಬ್ಯಾಂಕುಗಳು ಈಐಇಎಇಗೆ ಪ್ರತಿ ವರ್ಷವೂ ಪಾವತಿಸಿರಬೇಕು. ಪರವಾನಗಿಗಳ ರದ್ದತಿಯ ಪರಿಣಾಮವಾಗಿ, ಇತರ ವಿಷಯಗಳ ಜತೆಗೆ ಠೇವಣಿಗಳ ಸ್ವೀಕಾರ ಮತ್ತು ಮರುಪಾವತಿಯನ್ನು ಒಳಗೊಂಡಿರುವ ಬ್ಯಾಂಕಿಂಗ್ ವ್ಯವಹಾರವನ್ನು ನಡೆಸಲು ಸಹಕಾರಿ ಬ್ಯಾಂಕು ಗಳನ್ನು ನಿಷೇಧಿಸಲಾಗುತ್ತದೆ.
ಸಹಕಾರಿ ಬ್ಯಾಂಕುಗಳು ತಮ್ಮ ನಿರ್ದಿಷ್ಟ ಸಮುದಾಯದ ಬಂಡವಾಳದ ಅಗತ್ಯಗಳನ್ನು ನೆರವೇರಿಸಲು ವ್ಯಕ್ತಿಗಳ ಗುಂಪಿನಿಂದ ಪ್ರಾರಂಭಿಸಿದ ಸಣ್ಣ ಹಣಕಾಸು ಸಂಸ್ಥೆಯನ್ನು ಉಲ್ಲೇಖಿಸುತ್ತವೆ. ಕಾರ್ಯಾಚರಣೆಗಳನ್ನು ಮೇಲ್ವಿಚಾರಣೆ ಮಾಡಲು ಮಂಡಳಿಯ ಸದಸ್ಯರನ್ನು ಪ್ರಜಾಸತ್ತಾತ್ಮಕವಾಗಿ ಆಯ್ಕೆ ಮಾಡಲಾಗುತ್ತದೆ. ‘ಒಬ್ಬ ವ್ಯಕ್ತಿ, ಒಂದು ಮತ’ ಎಂಬ ತತ್ವವನ್ನು ಇಲ್ಲಿ ಅನುಸರಿಸಲಾಗುತ್ತದೆ. ಠೇವಣಿಗಳು ಮತ್ತು ಸಾಲಗಳಿಗೆ ಕೈಗೆಟುಕುವ ಬಡ್ಡಿದರಗಳ ಮೂಲಕ ಸದಸ್ಯರನ್ನು ಅಭಿವೃದ್ಧಿಪಡಿಸು ವುದರ ಮೇಲೆ ಗಮನವನ್ನು ಕೇಂದ್ರೀಕರಿಸುವುದು ಇವು ಗಳ ಪ್ರಮುಖ ಶಕ್ತಿ. ಹಳ್ಳಿಗಳಲ್ಲಿ ಇವು ಜನರ ಜೀವನಾಡಿಯಾಗಿವೆ.
ಆದರೆ, ಸದಸ್ಯರಲ್ಲಿ ವೃತ್ತಿಪರತೆ ಮತ್ತು ತಾಂತ್ರಿಕ ಜ್ಞಾನದ ಕೊರತೆ, ಮೂಲ ಸೌಕರ್ಯದ ಅಲಭ್ಯತೆ ಇವು ಈ ವಲಯದ ಬ್ಯಾಂಕುಗಳ ನ್ಯೂನತೆ
ಎನ್ನಲಾಗುತ್ತದೆ. ಆದರೆ, ಸಹಕಾರಿ ಸಂಘಗಳು ಆರ್ಬಿಐನ ಅನುಮತಿ ಅಥವಾ ಪರವಾನಗಿ ಇಲ್ಲದ ಸೊಸೈಟಿಗಳಾಗಿದ್ದು, ಸಮಾಜದ ಸದಸ್ಯರೊಂದಿಗೆ ಮಾತ್ರ ಇವು ವ್ಯವಹರಿಸಬಹುದು. ಇವು ಸೊಸೈಟಿ ಕಾಯ್ದೆ ೧೯೫೯ರ ಅನುಸಾರ ನೋಂದಾಯಿಸಲ್ಪಟ್ಟಿರುತ್ತವೆ ಹಾಗೂ ಶೈಕ್ಷಣಿಕ, ಧಾರ್ಮಿಕ ಸಂಘಗಳೂ ಈ ಕಾಯ್ದೆಯ ಅಡಿಯಲ್ಲಿ ಬರುತ್ತವೆ. ಮುಖ್ಯವಾಗಿ, ಸಹಕಾರಿ ಸಂಘಗಳು ಮುಚ್ಚಲ್ಪಟ್ಟರೆ/ದಿವಾಳಿಯಾದರೆ, ಠೇವಣಿದಾರರು ‘ಡಿಐಸಿಜಿಸಿ’ ಯಿಂದ ಯಾವುದೇ ವಿಮೆಗೆ ಅರ್ಹರಿರುವುದಿಲ್ಲ ಮತ್ತು ಠೇವಣಿದಾರರಿಗೆ ಕಾನೂನುಬದ್ಧವಾಗಿ ಯಾವುದೇ ಪರಿಹಾರ ಸಿಗುವುದಿಲ್ಲ.
ಹೆಚ್ಚಿನ ಸಹಕಾರಿ ಸಂಘಗಳು/ ಸಹಕಾರಿ ಬ್ಯಾಂಕುಗಳು ಲಾಗಾಯ್ತಿನಿಂದಲೂ ಉತ್ತಮ ವಾಗಿ ಕಾರ್ಯನಿರ್ವಹಿಸುತ್ತಿವೆಯಾದರೂ, ಒಮ್ಮೊಮ್ಮೆ ಕೆಲವೊಂದು ಸಹಕಾರಿ ಸಂಘಗಳು/ಸಹಕಾರಿ ಬ್ಯಾಂಕು ಗಳು ಅತಿಹೆಚ್ಚಿನ ಬಡ್ಡಿ ನೀಡುವ ಆಮಿಷ ತೋರಿಸಿ ಠೇವಣಿದಾರರಿಗೆ ಮೋಸಮಾಡುವುದುಂಟು, ನಾಮ ಹಾಕುವುದುಂಟು. ಮತ್ತೊಂದೆಡೆ, ದೊಡ್ಡ ಮೊತ್ತದ ಸಾಲ ಗಳು ಮರುಪಾವತಿಯಾಗದಿದ್ದಲ್ಲಿ, ಇವುಗಳ ಬಂಡವಾಳ ಕ್ಷೀಣಿಸಿ ದಿವಾಳಿಯಾಗುವ ಸಂದರ್ಭಗಳೂ ಇವೆ.
ಆದ್ದರಿಂದ, ಮಹಿಳೆಯರು ಮತ್ತು ಹಿರಿಯ ನಾಗರಿಕರು ಸೇರಿದಂತೆ ಸಾರ್ವಜನಿಕರು ತಾವು ಕಷ್ಟಪಟ್ಟು ಕಲೆಹಾಕಿದ ಜೀವಮಾನದ ಉಳಿತಾಯದ ಹಣವನ್ನು ಅಥವಾ ದೊಡ್ಡ ಮಟ್ಟದ ಠೇವಣಿಯನ್ನು ಇರಿಸುವಾಗ, ಈ ಸಹಕಾರಿ ಬ್ಯಾಂಕುಗಳು ಅಥವಾ ಸಹಕಾರಿ ಸಂಘಗಳು ಎಷ್ಟು ಸುರಕ್ಷಿತ ಮತ್ತು ವಿಶ್ವಾಸಾರ್ಹ ಎಂಬುದನ್ನು ಒಮ್ಮೆ ಪರಿಶೀಲಿಸಬೇಕಾಗುತ್ತದೆ.
ಇದಕ್ಕಾಗಿರುವ ಒಂದಷ್ಟು ಮುನ್ನೆಚ್ಚರಿಕೆಗಳನ್ನು ಗಮನಿಸೋಣ:
? ದೊಡ್ಡ ಮೊತ್ತದ ಠೇವಣಿ ಇರಿಸುವ ಮೊದಲು ಅದು ಸಹಕಾರಿ ಬ್ಯಾಂಕೋ ಅಥವಾ ಸಹಕಾರಿ ಸಂಘವೋ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಆರ್ಬಿಐ ಪರವಾನಗಿ ಹೊಂದಿದ್ದರೆ ಅವು ಸಹಕಾರಿ ಬ್ಯಾಂಕು ಎನಿಸಿಕೊಳ್ಳುತ್ತವೆ.
? ಇವು ರಾಷ್ಟ್ರೀಕೃತ ಬ್ಯಾಂಕು ಅಥವಾ ಖಾಸಗಿ ಬ್ಯಾಂಕು ಗಳಿಗಿಂತ ಸುಮಾರು ಶೇ.೩ರಿಂದ ೭ರವರೆಗೆ ಹೆಚ್ಚು ಬಡ್ಡಿ ಕೊಡುತ್ತವೆ ಅಂತಾದರೆ, ಅದು ಸ್ವಲ್ಪ
ಅನುಮಾನಕ್ಕೆ ಎಡೆಮಾಡಿಕೊಡುತ್ತದೆ.
? ಸಹಕಾರಿ ಬ್ಯಾಂಕಿನ ಮತ್ತು ಅದರ ಆಡಳಿತ ಮಂಡಳಿ ಯವರ ಬಗ್ಗೆ, ಅವರ ವಿದ್ಯಾರ್ಹತೆ, ಆರ್ಥಿಕ ಮತ್ತು ಕೌಟುಂಬಿಕ ಹಿನ್ನೆಲೆ, ವ್ಯವಹಾರ ಶೈಲಿ,
ಪ್ರಾಮಾಣಿಕತೆ/ವಿಶ್ವಾಸಾರ್ಹತೆ ಇತ್ಯಾದಿಗಳ ಬಗ್ಗೆ ಸೂಕ್ಷ್ಮವಾಗಿ ಮಾಹಿತಿ ಸಂಗ್ರಹಿಸಬೇಕು.
? ಅವುಗಳ ಆಯವ್ಯಯ ಪಟ್ಟಿಯನ್ನು ಆಳವಾಗಿ ಪರಿಶೀಲಿಸಬೇಕು. ಸಹಕಾರಿ ಬ್ಯಾಂಕಿನ ಸ್ಥಿರಾಸ್ತಿ, ನಿವ್ವಳ ಲಾಭ, ಲಾಭಾಂಶ ಪಾವತಿಗಳು, ಸಾಲದ ಬಂಡವಾಳ, ಸುರಕ್ಷಿತ ಸಾಲ, ಅನುತ್ಪಾದಕ ಸಾಲ ಇತ್ಯಾದಿಗಳ ಬಗ್ಗೆ ವಿಶ್ಲೇಷಿಸಬೇಕು.
? ಗರಿಷ್ಠ ಸದಸ್ಯರಿಗೆ ಸಾಲದ ಮೊತ್ತದ ವಿತರಣೆಯಾಗಿರ ಬೇಕು; ದೊಡ್ಡ ಮೊತ್ತದ ಸಾಲವು ಕೆಲವೇ ಸದಸ್ಯರ/ ಆಡಳಿತ ಮಂಡಳಿಯ ಕುಟುಂಬಿಕರ/ಸಂಬಂಧಿಕರ/ ಸ್ನೇಹಿತರ ಪಾಲಾಗಿರಬಾರದು.
? ಸಹಕಾರಿ ಬ್ಯಾಂಕು ‘ಡಿಐಸಿಜಿಸಿ’ಗೆ ವಿಮೆ ಶುಲ್ಕವನ್ನು ತಪ್ಪಿಲ್ಲದಂತೆ ಪಾವತಿಸುತ್ತಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು.
ಮೇಲಿನ ಎಲ್ಲ ಅಂಶಗಳನ್ನು ಪರಿಶೀಲಿಸಿದ ಮೇಲೆ ಜನರು ತಮ್ಮ ಸ್ವಂತ ರಿಸ್ಕ್ನಲ್ಲಿ ಠೇವಣಿ ಇರಿಸಬಹುದು. ಸಹಸದಸ್ಯರಾದರೆ ಮತದಾನಕ್ಕೆ ಮತ್ತು ವಾರ್ಷಿಕ ಮಹಾ ಸಭೆಗಳಲ್ಲಿ ಭಾಗವಹಿಸುವುದಕ್ಕೆ ಯಾವುದೇ ಹಕ್ಕುಗಳು ಇರುವುದಿಲ್ಲ. ಅಷ್ಟಕ್ಕೂ, ಸಹಕಾರಿ ಬ್ಯಾಂಕುಗಳು ದಿವಾಳಿಯಾಗಿ ಮುಚ್ಚಲ್ಪ ಡುವುದೇಕೆ? ಎಂಬ ಪ್ರಶ್ನೆ ಕೆಲವರಲ್ಲಿ ಉದ್ಭವಿಸ ಬಹುದು. ಆರ್ಬಿಐನ ತಪಾಸಣೆಯ ಹೊರತಾಗಿಯೂ ಕೆಲ ಸಹಕಾರಿ ಬ್ಯಾಂಕುಗಳು ದಿವಾಳಿಯಾಗಿವೆ. ಇಲ್ಲಿ ಆರ್ಬಿಐ ಅಧಿಕಾರಿಯು ಪರಿಶೀಲನೆ/ತಪಾಸಣೆ ಮಾಡಿದಾಗ ಎಲ್ಲಾ ಲೋಪದೋಷಗಳು ಸಿಕ್ಕಿಬಿಡುತ್ತವೆ ಎಂದೇ ನಲ್ಲ.
ಕೆಲವೊಂದು ತಪ್ಪುಗಳು/ಲೋಪದೋಷಗಳು ಉದ್ದೇಶರಹಿತವಾಗಿ ಗೋಚರವಾಗದೆ ಇರಬಹುದು. ಹಿಂದೆ ತಿಳಿಸಿದ ಕಾರಣಗಳಲ್ಲದೆ ಕೆಲವು ಪ್ರಕರಣ ಗಳಲ್ಲಿ, ಮುಖ್ಯವಾಗಿ ಸಾಲ ಮಂಜೂರು ಮಾಡುವಾಗ, ಆಸ್ತಿ ಗುಣಮಟ್ಟ ಉತ್ತಮವಾಗಿರುವುದಿಲ್ಲ. ಉದಾಹರಣೆಗೆ ‘ಬಿ’ ಖಾತಾ ದಾಖಲೆಯ ಆಸ್ತಿ ಅಕ್ರಮ ವಾಗಿರುತ್ತದೆ ಅಥವಾ ಸರಕಾರದ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಅದು ಸೂಚಿಸುತ್ತದೆ. ಸಾಲದ ಅರ್ಹತೆ ಜಾಸ್ತಿ ಇರುವುದಿಲ್ಲ. ಸಿಬಿಲ್ ಸ್ಕೋರ್ ಚೆನ್ನಾಗಿರುವುದಿಲ್ಲ. ವಹಿವಾಟು ದಾಖಲೆಗಳು ಸರಿ ಇರುವುದಿಲ್ಲ. ರೂಢಿಗಳ ಪ್ರಕಾರ ಮರುಪಾವತಿ ಸಾಮರ್ಥ್ಯ ಚೆನ್ನಾಗಿರುವುದಿಲ್ಲ.
ಈ ಕಾರಣಗಳಿಗೋಸ್ಕರ ಹೆಚ್ಚು ಬಡ್ಡಿ ಆದರೂ ಸಾಲಗಾರರು ಸಹಕಾರಿ ಬ್ಯಾಂಕುಗಳ ಮೊರೆಹೋಗುತ್ತಾರೆ. ಹಾಗೆಯೇ ಸಹಕಾರಿ ಬ್ಯಾಂಕುಗಳು ಅಧಿಕ ಬಡ್ಡಿ ದರದಲ್ಲಿ, ಉದಾರ ನೀತಿಯಲ್ಲಿ ಸಾಲವನ್ನು ಮಂಜೂರು ಮಾಡುತ್ತವೆ. ಇಲ್ಲಿ ನಿಗದಿತ ಮಾನದಂಡಗಳ ಅನುಸರಣೆ ಆಗಿರುವುದಿಲ್ಲ. ಇಂಥ ಪರಿಸ್ಥಿತಿಗಳಲ್ಲಿ ಸಾಲಗಾರರು ಸಾಲವನ್ನು ಮರುಪಾವತಿಸದೆ, ಸಹಕಾರಿ ಬ್ಯಾಂಕುಗಳ ಅನುತ್ಪಾದಕ ಆಸ್ತಿಯ (ಎನ್ಪಿಎ) ಪ್ರಮಾಣ ಹೆಚ್ಚಾಗಿ,
ಲಾಭಾಂಶ ಇಳಿಮುಖವಾಗಿ, ಅವು ನಷ್ಟದಲ್ಲಿ ಸಿಲುಕುವ ಬ್ಯಾಂಕುಗಳಾಗಿ ಪರಿವರ್ತಿತವಾಗುತ್ತವೆ.
ಸಹಕಾರಿ ಸಂಘ/ಸಹಕಾರಿ ಬ್ಯಾಂಕುಗಳಲ್ಲಿ ಅಥವಾ ರಾಷ್ಟ್ರೀಕೃತ ಬ್ಯಾಂಕು/ಖಾಸಗಿ ಬ್ಯಾಂಕುಗಳಲ್ಲಿ ಠೇವಣಿಯಿಟ್ಟರೆ ನಿರ್ದಿಷ್ಟ ಆದಾಯವು ಬಡ್ಡಿಯ ರೂಪದಲ್ಲಿ ಸಿಗುತ್ತದೆ. ಷೇರು ಮಾರುಕಟ್ಟೆ, ಮ್ಯೂಚುವಲ್ ಫಂಡ್ ಇತ್ಯಾದಿಗಳೆಲ್ಲವೂ ‘ಮಾರ್ಕೆಟ್ ರಿಸ್ಕ್’ಗೆ ಒಳಪಟ್ಟಿವೆ. ಆದ್ದರಿಂದ ಹೂಡಿಕೆ ಮಾಡು ವಾಗ ನಾವು ವಿವೇಚನೆಯಿಂದ ವರ್ತಿಸಿ ನಮ್ಮ ಹೂಡಿಕೆ ಹಣವನ್ನು ಸುರಕ್ಷಿತವಾಗಿಸಿಕೊಳ್ಳಬೇಕು.
(ಲೇಖಕರು ನಿವೃತ್ತ ಬ್ಯಾಂಕ್ ಅಧಿಕಾರಿ)