ತುಂಟರಗಾಳಿ
ಈ ವಾರ ಬಿಡುಗಡೆ ಆದ ಶಾಖಾಹಾರಿ ಚಿತ್ರದ ನಿರ್ದೇಶಕರು ಹೊಸಬರಾದ್ರೂ ಶಾಖಾಹಾರಿ ರಂಗಾಯಣ ರಘು ಅವರು ಪ್ರಮುಖ ಪಾತ್ರದಲ್ಲಿರೋ ಸಿನಿಮಾ ಅಂತಲೇ ಹೆಸರು ಮಾಡಿದ್ದು. ಅದಕ್ಕೆ ತಕ್ಕಂತೆ ರಘು ಅವರು ಇಷ್ಟು ದಿನ ತಮ್ಮನ್ನು ಬಹುತೇಕ ಕಾಮಿಡಿ ಪಾತ್ರಗಳಲ್ಲಿ ನೋಡಿದ್ದ ಪ್ರೇಕ್ಷಕರಿಗೆ ಮತ್ತು ಚಿತ್ರರಂಗಕ್ಕೆ ಶಾಖ ಲಗಾ ಲಗಾ ಅನ್ನುವಂಥ ಅಭಿನಯ ನೀಡಿ ಬಿಸಿ ಮುಟ್ಟಿಸಿದ್ದಾರೆ.
ಕಣ್ಣ ಡ್ಯಾ ಮಾಡಿಸೋ ತಮ್ಮ ಅಭಿನಯದಲ್ಲಿ ಅಮಾಯಕತೆ, ಪ್ರೀತಿ, ಕೊಂಚ ತಮಾಷೆ, ಮಾನವೀಯತೆ, ಕೊನೆಯಲ್ಲಿ ಕಿಲಾಡಿತನ ಎಲ್ಲವನ್ನೂ ತೋರಿಸಿ ಈ ಚಿತ್ರದ ನಿಜವಾದ ರಂಗನಾಯಕ ಎನಿಸಿಕೊಂಡಿದ್ದಾರೆ ರಂಗಾಯಣ ರಘು. ನಿಜಕ್ಕೂ ಶಾಖಾಹಾರಿ ಚಿತ್ರದಲ್ಲಿ ಅವರದ್ದು ಚೇತೋಹಾರಿ ಅಭಿನಯ. ಥೇಟು ಕೆಂಪೇಗೌಡ ಚಿತ್ರದ ವಿಲನ್ ರವಿಶಂಕರ್ ಅವರಂತೆ ಏನ್ ಹಂಗ್ ನೋಡ್ತೀರಾ,,ನನ್ ಆಕ್ಟಿಂಗ್ ನೋಡಿ ಶಾಖ ಆಯ್ತಾ, ಆಗ್ಲೇಬೇಕು ಅಂತಲೇ ಈ ಸಿನಿಮಾ ಮಾಡಿದ್ದು ಅಂತಾರೆ ರಂಗಾಯಣ ರಘು. ಸಿನಿಮಾದ ನಿರೂಪಣೆ ಅತಿ ಸಹಜವಾಗಿರೋದು ಈ ಚಿತ್ರದ ಹೆಗ್ಗಳಿಕೆ. ಇಲ್ಲಿ ರಿಯ ಲಿಸ್ಟಿಕ್ ಚಿತ್ರಣಕ್ಕೆ ಹೆಚ್ಚು ಒತ್ತು ಕೊಟ್ಟಿರೋದ್ರಿಂದ ಹೊತ್ತು ಕಳೆಯೋಕೆ ಅಂತಲೇ ಇರೋ ಧಾರಾವಾಹಿಗಳ ಸೀರಿಯಲಿಸ್ಟಿಕ್ ಅನುಭವ ನಿಮಗೆ ಇಲ್ಲಿ ಆಗಲ್ಲ. ನಿರ್ದೇಶಕ ಸಂದೀಪ್ ಆಯ್ಕೆ ಮಾಡಿಕೊಂಡಿರೋ ಕಥೆ, ಅದಕ್ಕೆ ತಕ್ಕ ಪಾತ್ರಧಾರಿಗಳು ಮತ್ತು ಕನ್ನಡಕ್ಕೆ ಹೊಸದು ಅನ್ನಿಸುವಂಥ ನಿರೂಪಣೆ ಯನ್ನು ನೋಡಿದರೆ, ಶಾಖಾಹಾರಿ, ಸಿನಿಮಾ ಮಾಡಬೇಕು ಅಂತ ಹೀಟಿಗೆ ಬಂದ ಅತಿ ಉತ್ಸಾಹದ ನಿರ್ದೇಶಕರು ಮಾಡಿರೋ ಮಾಮೂಲಿ ಸಿನಿಮಾ ಅಲ್ಲ ಅನ್ನೋದು ತುಂಬಾ ಸ್ಪಷ್ಟವಾಗಿ ಗೊತ್ತಾಗುತ್ತದೆ.
ಒಂದು ಭಿನ್ನವಾದ ಆಲೋಚನೆಯಿಂದ ನಾನು ಉತ್ತಮ ಸಿನಿಮಾ ಮಾಡಿದ್ದೇನೆ ನೋಡಿ ಅಂತ ನಿರ್ದೇಶಕರು ಇಲ್ಲಿ ಬಿನ್ನಹ ಮಾಡಿದ್ದಾರೆ. ಮತ್ತು ಅದು ಹೊಸತನ್ನು ಬಯಸುವ ಪ್ರೇಕ್ಷಕನಿಗೆ ಇಷ್ಟ ಆಗುವ ಎಲ್ಲ ಸಾಧ್ಯತೆಗಳೂ ಇವೆ. ಒಟ್ಟಾರೆ ಹೇಳೋದಾದ್ರೆ, ಸಿನಿಮಾ ಹೆಸರು ಶಾಖಾಹಾರಿ ಆಗಿದ್ರೂ ಸಿನಿಮಾ ಮುಗಿದ ಮೇಲೆ ಕೆಲವರಿಗೆ ಸಿನಿಮಾದಲ್ಲಿ ಆಗಾಗ ತೋರಿಸೋ ದೋಸೆ ತಿನ್ನಬೇಕು ಅನ್ನಿಸಿದ್ರೆ, ಕೆಲವು ಪ್ರೇಕ್ಷಕರಿಗೆ ಚಿಕನ್ ಕಬಾಬ, ಬಾರ್ಬಿಕ್ಯೂ ಚಿಕನ್ ತಿನ್ನಬೇಕು ಅನ್ನಿಸಬಹುದು. ಅದಕ್ಕೆ ಕಾರಣವನ್ನ ನೀವು ಸಿನಿಮಾದ ನೋಡಬೇಕು.
ಲೂಸ್ ಟಾಕ್: ನರೇಂದ್ರ ಮೋದಿ
ನಮ್ ದೇಶದ್ ರೈತರ ಕಣ್ಣಲ್ಲಿ ನೀರು ಹಾಕಿಸುತ್ತಿದ್ದೀರಲ್ಲ.. ಸರಿನಾ?
– ಅಯ್ಯೋ.. ಪ್ರತಿಭಟನೆ ಟೈಮಲ್ಲಿ ಟಿಯರ್ ಗ್ಯಾಸ್ ಹೊಡೆದ್ವಿ ಅಷ್ಟೇ. ಅದಕ್ಕೇ ಹಿಂಗೆಲ್ಲ ಅನ್ನೋದಾ…
ಆದ್ರೂ ನಮ್ಮ ಅನ್ನದಾತರನ್ನ ಬೀದಿಗೆ ತಂದ್ ಬಿಟ್ರಿ ಅಲ್ವಾ ನೀವು?
– ನೋಡಿ, ಮತ್ತದೇ ತಪ್ಪು ತಿಳುವಳಿಕೆ. ರೈತರು ಪ್ರತಿಭಟನೆಗೆ ಅಂತ ರಸ್ತೆಗೆ ಇಳಿದಿದ್ದಾರೆ ಅಷ್ಟೇ.
ಆದ್ರೂ ದಿಲ್ಲಿಯ ಸಡಕ್ ಕಡೆ ಬರ್ತಾ ಇರೋ ಸಿಖ್ ರೈತರು ಯಾಕೋ ಸಿಕ್ಕಾಪಟ್ಟೆ ಖಡಕ್ ಆಗಿದ್ದಾರಲ್ಲ?
– ಅದಕ್ಕೆ ಕಾರಣ, ಸಿಖ್ಖರ ಹೆಸರಲ್ಲಿ ಸಿಕ್ಕ ಸಿಕ್ಕವರೆಲ್ಲ ಸಡಕ್ಗೆ ಇಳಿದಿರೋದು. ಅವರಿಗೆ ಸರಿಯಾದ ಸಬಕ್ ಸಿಖಾವೂಂಗ.
ಸರಿ, ರೈತರ ಜೊತೆಗಿನ ಮಾತುಕತೆಯಲ್ಲಿ ಏನಾದ್ರೂ ಪ್ರೋಗ್ರೆಸ್ ಆಗ್ತಾ ಇದೆಯಾ?
– ಪ್ರೋಗ್ರೆಸ್ ಆಗೋಕೆ ಈ ಕಾಂಗ್ರೆಸ್ ನೋರು ಬಿಟ್ರೆ ತಾನೇ?
ಅಂತೂ ಎಲ್ಲದಕ್ಕೂ ಕಾಂಗ್ರೆಸ್ ಕಾರಣ ಅಂತೀರಾ?
– ಹೌದು ಮತ್ತೆ, ನಾವು ಎಷ್ಟೋ ರಾಜ್ಯಗಳಲ್ಲಿ ಅಧಿಕಾರಕ್ಕೆ ಬರೋಕೂ ಅವರ ಶಾಸಕರೇ ಕಾರಣ ಅಲ್ವಾ?
(ಕಾಲ್ಪನಿಕ ಸಂದರ್ಶನ)
ಲೈನ್ ಮ್ಯಾನ್
ಖೇಮು ಹುಟ್ಟು ಕುರುಡ. ಒಮ್ಮೆ ಖೇಮು ಅಮೆರಿಕಾಕ್ಕೆ ಹೋಗಿದ್ದ. ಅಲ್ಲಿನ ದೊಡ್ಡ ರೆಸಾರ್ಟ್ ಒಂದರಲ್ಲಿ ಉಳಿದುಕೊಳ್ಳಲು ಹೋದ. ಅವನ ಸಹಾಯಕ್ಕೆ ಅಂತ ಅಲ್ಲಿ ಒಬ್ಬ ಸರ್ವೀಸ್ ಬಾಯ್ ಅನ್ನು ನೇಮಿಸಿದರು. ಸರ್ವೀಸ್ ಬಾಯ್ ಖೇಮುಗೆ ಕಾಟೇಜ್ ತೋರಿಸಲು ಕರೆದುಕೊಂಡು
ಹೋದ. ರೂಮಿನ ಒಳಗೆ ಹೋದ ಖೇಮು ಅಲ್ಲಿದ್ದ ಬೆಡ್ ಅನ್ನು ಮುಟ್ಟಿ ನೋಡಿ ಓಹ್, ಬೆಡ್ ತುಂಬಾ ದೊಡ್ಡದಿದೆ ಅಂದ. ಅದಕ್ಕೆ ಸರ್ವೀಸ್
ಬಾಯ್ ಹೇಳಿದ ಅಮೆರಿಕಾದಲ್ಲಿ ಎನೂ ದೊಡ್ಡದೇ . ಸರಿ ಖೇಮು ಫ್ರೆಷ್ ಆಗಿ ಬಂದು ನನ್ನನ್ನ ಬಾರ್ ಸೆಕ್ಷನ್ಗೆ ಕರೆದುಕೊಂಡು ಹೋಗು
ಅಂದ. ಇಬ್ಬರೂ ಬಾರ್ಗೆ ಹೋದರು.
ಅಲ್ಲಿ ಖೇಮು ಒಂದು ಪೆಗ್ ವಿಸ್ಕಿ ಆರ್ಡರ್ ಮಾಡಿದ. ಆ ವಿಸ್ಕಿ ಗ್ಲಾಸ್ ಮುಟ್ಟಿ ನೋಡಿದ ಖೇಮು ಓಹ್ ಎಷ್ಟು ದೊಡ್ಡ ಗ್ಲಾಸ್ ಅಂದ. ಅದಕ್ಕೆ
ಸರ್ವೀಸ್ ಬಾಯ್ ಹೇಳಿದ ಅಮೆರಿಕಾದಲ್ಲಿ ಎನೂ ದೊಡ್ಡದೇ. ಸರಿ ಒಂದೆರಡು ಪೆಗ್ ಆಯ್ತು. ಖೇಮು ಸ್ವಲ್ಪ ಟೈಟ್ ಆದ. ನಂತರ ಖೇಮುಗೆ ಟಾಯ್ಲೆಟ್ ಗೆ ಹೋಗಬೇಕು ಅನ್ನಿಸಿತು. ಪಕ್ಕದ ಇದ್ದ ಸರ್ವೀಸ್ ಬಾಯ್ ಅನ್ನು ಟಾಯ್ಲೆಟ್ಗೆ ಕರ್ಕೊಂಡು ಹೋಗು ಅಂದ. ಅವನೂ ಕೂಡ ಒಂದೆರಡು ಪೆಗ್ ಏರಿಸಿದ್ದ. ಹಾಗಾಗಿ ಎದ್ದು ಹೋಗಲಾರದೆ, ಹೀಗೇ ನೇರ ಹೋಗಿ, ಲೆಫ್ ನಲ್ಲಿ ಎರಡನೇ ಡೋರ್ ಅಂತ ಹೇಳಿದ. ಕುರುಡ ಖೇಮು ನಶೆಯಲ್ಲಿ
ನಡೆದುಕೊಂಡು ಹೋಗಿ, ಎರಡನೇ ಡೋರ್ ಬದಲು ಮೂರನೇ ಡೋರ್ ನಲ್ಲಿ ಎಂಟ್ರಿ ಆದ. ಅದು ಸ್ವಿಮ್ಮಿಂಗ್ ಪೂಲ್ಗೆ ಹೋಗುವ ದಾರಿ ಆಗಿತ್ತು.
ಸೀದಾ ಹೋದವನೇ ಖೇಮು ಪೂಲ್ ನೊಳಗೆ ಬಿದ್ದು ಬಿಟ್ಟ. ತಕ್ಷಣ ಗಾಬರಿಯಾದ ಖೇಮು ಕಿರುಚಿಕೊಳ್ಳತೊಡಗಿದ. ಅಯ್ಯೋ ಅಮೆರಿಕಾದಲ್ಲಿ
ಎನೂ ದೊಡ್ಡದೇ. ಯಾರೂ ಫ್ಲೆಷ್ ಮಾಡಬೇಡ್ರಪ್ಪ ಪ್ಲೀಸ್.
ಲೈನ್ ಮ್ಯಾನ್
ಪಂಜಾಬಿ ರೈತರನ್ನು ಯಾವ್ ಕಾಯ್ದೆ ಅಡಿ ಬಂಧಿಸಬಹುದು?
-‘ಪೇಟಾ’ ಆಕ್ಟ್
ಮೊನ್ನೆ ರೈತರ ಹೋರಾಟಕ್ಕೆ ಸಾಥ್ ಕೊಟ್ಟವರು
-‘ಸಿಖ್’ ಮೈಂಡೆಡ್ ಪೀಪಲ್
ಅವರನ್ನ ಹಿಡಿಯೋಕೆ ಹೋದ ಪೋಲೀಸರ ಪಾಲಿಸಿ
-ಸಿಖ್ರೆ ಸಿಗ್ಲಿ, ಬಿಟ್ರೆ ಬಿಡ್ಲಿ
ಫುಡ್ ಮಾರುವ ಫುಟ್ ಪಾತ್
-ಫುಡ್ ಪಾತ್
ಇಂಡಿಯಾ ಬಾರ್ಡರ್ನಲ್ಲಿ ಚೀನಾ ಹಳ್ಳಿ ನಿರ್ಮಿಸಿದೆಯಂತೆ
-ನಾನು ಅಲ್ಲಿ ಗ್ರಾಮ ವಾಸ್ತವ್ಯ ಮಾಡಬಹುದಾ?- ಕುಮಾರಸ್ವಾಮಿ
ಎಡಗಣ್ಣು ಹೊಡಕೊಂಡ್ರೆ ಏನ್ ಮಾಡಬೇಕು?
-ಮೊನ್ನೆ ಬಲಗಣ್ಣು ಹೊಡಕೊಂಡಾಗ ಯಾವ್ ಸೀಮೆಗಿಲ್ಲದ ಒಳ್ಳೇದೂ ಆಗಿರಲಿಲ್ಲ ಬಿಡು ಅಂತ ಸಮಾಧಾನ ಮಾಡ್ಕೋಬೇಕು.
ಕನ್ನಡಿಗರ ವಿಶಾಲ ಹೃದಯದ ಬಗೆಗಿನ ಮಾತು
-ಈ ಪ್ರಪಂಚ ‘ಕನ್ನಡಿ’ಗರಿದ್ದಂತೆ. ನೀವು ಅವರನ್ನ ಬೇರೆ ಭಾಷೆಯಲ್ಲಿ ಮಾತಾಡಿಸಿದ್ರೆ ಅವರೂ ಅದೇ ಭಾಷೆಯಲ್ಲಿ ಮಾತಾಡ್ತಾರೆ.
ರವಿಕೆ ಪ್ರಸಂಗ ಅನ್ನೋ ಸಿನಿಮಾ ಮಾಡಿರೋ ನಿರ್ದೇಶಕರ ಸಾಹಸ
-ಆಪರೇಷನ್ ಡೈಮಂಡ್ ಜಾಕೆಟ್ ರವಿಕೆ ಪ್ರಸಂಗ ಚಿತ್ರ ನೋಡಬೇಕು ಅನ್ನೋ ಪ್ರೇಕ್ಷಕರ ಕುತೂಹಲ
-ಛೋಲಿ ಕೇ ಪೀಛೆ ಕ್ಯಾ ಹೈ?
ಪರಾರಿ ನಂತರ ಮತ್ತೊಂದು ಕಾಮಿಡಿ ಸಿನಿಮಾ ಮಾಡಿರೋ ನಿರ್ದೇಶಕ ಚೈತನ್ಯ
-ದ ಮಾಂಕ್ ಹೂ ಸೋಲ್ಡ ಹಿಸ್ ‘ಪರಾರಿ’
ಹಳೇ ಡವ್ ಗೋಸ್ಕರ ಫುಲ್ ಸಾಲ ಮಾಡಿರೋ ನಮ್ ಹುಡುಗ್ರು
ದ-ಲೀವ್ ಮಿ ಅ‘ಲೋನ್’