Wednesday, 11th December 2024

ನೀ ಮಾಯೆಯೊಳಗೋ? ನಿನ್ನೊಳು ಮಾಯೆಯೋ …?

ಯಶೋ ಬೆಳಗು
yashomathy@gmail.com

ಸಾಮಾನ್ಯವಾಗಿ ಮಠಗಳ ಬಗ್ಗೆ, ಮಠಾಧೀಶರ ಬಗ್ಗೆ, ಅದರೊಳಗೆ ನಡೆಯುವ ಅವ್ಯವಹಾರಗಳನ್ನು ಬಯಲಿಗೆಳೆದು ಸಾಕಷ್ಟು ವಿರೋಧಗಳನ್ನು ಕಟ್ಟಿಕೊಂಡಿದ್ದರೂ, ಮಾನವೀಯ ಅಂತಃಕರಣದಿಂದ ಈಗೊಂದು ಇಪ್ಪತ್ತೈದು ವರ್ಷಗಳ ಹಿಂದೆ ಸಂಚಲನ
ಮೂಡಿಸಿದ ವಿವಾಹವೊಂದಕ್ಕೆ ಸಾಕ್ಷಿಯಾಗಲು ಹೊರಟು ನಿಂತಿದ್ದರು ರವಿ.

ಜೊತೆಯಲ್ಲಿ ನಿವೇದಿತಾ, ಕಾಫಿ ರಾಘು ಹಾಗೂ ಸಂಗಮದೇವ್ ಇದ್ದರು. ಮಳವಳ್ಳಿಯಲ್ಲಿ ಜೊತೆಯಾದ ಓದುಗ ಮಿತ್ರರೊಂದಿಗೆ ಅಲ್ಲಿಗೆ ತಲುಪುವಷ್ಟರಲ್ಲಿ ಇನ್ನೇನು ರಾತ್ರಿ ಕಳಚಿ ಹಗಲು ಅರಳುವುದರಲ್ಲಿತ್ತು. ವಿವಾಹವಾಗುತ್ತಿರುವ ರಮಾ ತಮ್ಮ ಬಳ್ಳಾರಿಯ ಮನೆಯ ಹಿಂದಿನ ಹುಡುಗಿ. ರವಿ ಕಲಿಸುತ್ತಿದ್ದ ಕಾಲೇಜಿನ ಓದಿದವರು, ಅವರ ಕುಟುಂಬದ ವರನ್ನೆಲ್ಲ ಹತ್ತಿರದಿಂದ ಬಲ್ಲವ ರಾಗಿದ್ದರು.

ಅವರ ತಂದೆ ಖ್ಯಾತ ವೈದ್ಯರಾದ ಬಿ.ಕೆ.ಶ್ರೀನಿವಾಸಮೂರ್ತಿಯವರು ರವಿಯ ತಾಯಿಗೆ ಚಿಕಿತ್ಸೆ ಮಾಡಿದವರು… ಬೆಳಗಾದರೆ ವಿವಾಹ! ವಿವಾಹವಾಗುತ್ತಿರುವುದು ಯಾವುದೋ ಪಡ್ಡೆ ಹುಡುಗನನ್ನಲ್ಲ. ತಮ್ಮ ಹದಿನೈದನೇ ವಯಸ್ಸಿಗೇ ಸನ್ಯಾಸವನ್ನು ಸ್ವೀಕರಿಸಿ ಸತತವಾಗಿ ಅದನ್ನು ಮೂವತ್ತು ವರುಷಗಳ ಕಾಲ ಪಾಲಿಸಿಕೊಂಡು ಬಂದವರು, ಸನ್ಯಾಸಿಯಾಗಿದ್ದುಕೊಂಡು ಮಠದಲ್ಲಿ ಅಪವಿತ್ರ ಕಾರ್ಯಗಳನ್ನು ಮಾಡಲಿಚ್ಛಿಸದೆ ಗೃಹಸ್ಥಾಶ್ರಮಕ್ಕೆ ಮರಳಬೇಕೆಂದು ಬಯಸಿದ ಕುಕ್ಕೆ ಸುಬ್ರಮಣ್ಯ ಮಠದ ವಿದ್ಯಾಭೂಷಣ ಸ್ವಾಮಿಯವರನ್ನು! ಇವರ ವಿವಾಹಕ್ಕೆ ಎರಡೂ ಕಡೆಯಿಂದ ಪ್ರಬಲವಾದ ವಿರೋಧ ವಿತ್ತು.

ಮದುವೆಯಾದದ್ದೇ ಆದರೆ ಈ ಸ್ವಾಮಿಯನ್ನು ಚಂಡಾಲನೆಂದು ಕರೆಯಬೇಕಾಗುತ್ತದೆ. ಆತನಿಗೆ ಗೃಹಸ್ಥಾಶ್ರಮ ದೊರಕುವುದು ಸಾಧ್ಯವೇ ಇಲ್ಲ. ಆತನನ್ನು ಮೃತ ನೆಂದು ಭಾವಿಸಿ ಅಂತ್ಯ ಸಂಸ್ಕಾರಕ್ಕೆ ಅಣಿ ಮಾಡಬೇಕಾಗುತ್ತದೆ ಎಂಬುದು ಕೆಲವು ಕರ್ಮಠ ಸನಾತನವಾದಿಗಳ ಅಭಿಪ್ರಾಯವಾಗಿತ್ತು. ಮಗ ಪೀಠ ಬಿಟ್ಟು ಗೃಹಸ್ಥನಾಗುತ್ತೇನೆಂದಾಗ ಗಾಬರಿಯಾಗಿದ್ದರು ಮಂದಾಕಿನಿ ಅಮ್ಮ! ಈ ಮದುವೆ ಬೇಡವೇ ಬೇಡವೆಂದರು.

ಆದರೆ ದಿನ ಕಳೆಯುತ್ತ ಕಳೆಯುತ್ತ ಮಗನ ಮಮತೆಗೆ ಕರಗಿ ಹೋದರು. ಆದರೆ ಒಬ್ಬ ವೈದ್ಯನಾಗಿದ್ದುಕೊಂಡು ನಿನಗಿಂತ ಇಪ್ಪತ್ತೊಂದು ವರ್ಷಕ್ಕೆ ಹಿರಿಯನಾದ ವ್ಯಕ್ತಿಯೊಡನೆ ಮದುವೆಯಾಗಲು ಸಮ್ಮತಿ ನೀಡಲಾರೆ ಎಂದು ಖಡಾಖಂಡಿತವಾಗಿ ನುಡಿದಿದ್ದರು ರಮಾರ ತಂದೆ. ಎಷ್ಟೆಲ್ಲ ವಿರೋಧಗಳ ನಡುವೆಯೂ ವಿಚಲಿತರಾಗದೆ ದೃಢವಾಗಿ ನಿಂತು ನಗುನಗುತ್ತಾ ನೆಮ್ಮದಿ ಯಾಗಿ ಮೇ ಒಂದು 1997ರಂದು ಬೆಳಗ್ಗೆ ಹತ್ತು ಗಂಟೆಗೆ ಮಾರೇನಹಳ್ಳಿಯ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನದ ನಿಶ್ಶಬ್ದ ಪ್ರಾಂಗಣದಲ್ಲಿ ಅದರ ಪುರಾತನ ಕಂಬಗಳ ನವರಂಗ ಶಾಲೆಯ ನಡುವೆ, ಲಕ್ಷ್ಮೀ ನರಸಿಂಹಸ್ವಾಮಿಯ ಸಮ್ಮುಖದಲ್ಲಿ ಗೃಹಸ್ಥಾಶ್ರಮಕ್ಕೆ ಕಾಲಿರಿಸಿದ್ದರು ವಿದ್ಯಾಭೂಷಣ ಹಾಗೂ ರಮಾ!

ವಿದ್ಯಾಭೂಷಣರು, ವಿವಾಹಕ್ಕೆ ಮೊದಲು ಮಠದ ಸಂಪ್ರದಾಯದ ಪ್ರಕಾರ ಪಶ್ಚಾತ್ತಾಪ ಕ್ರಿಯೆಗಳನ್ನೆಲ್ಲ ಮಾಡಿಕೊಂಡರು. ಸನ್ಯಾಸಿಯಾದವನು ಮತ್ತೆ ಹುಟ್ಟಬೇಕು. ಆ ಶಾಸ್ತ್ರಕ್ಕೆ ಗೋಗರ್ಭ ಜನನ ಎನ್ನುತ್ತಾರೆ. ತಾಯಿ ಸಮಾನವಾದದ್ದು ಗೋವು. ಅದರ ಹೊಟ್ಟೆಯಲ್ಲಿ ಹುಟ್ಟಿ ಬರಬೇಕು. ನಂತರ ವಿದ್ಯಾಭೂಷಣ ಎಂದು ನಾಮಕರಣ ಮಾಡಿಕೊಂಡರು. ಇದೇ ಹೆಸರಿಗೆ ನಿನ್ನೆಯ ತನಕ ಶ್ರೀ ಶ್ರೀ ಶ್ರೀ ಎಂಬ mಛ್ಛಿಜ್ಡಿ ಇತ್ತು.

ವಿದ್ಯಾಭೂಷಣ ತೀರ್ಥರು ಎಂಬ oಜ್ಡಿಇತ್ತು. ಅದನ್ನೆಲ್ಲ ಕಳಚಿಹಾಕಿ ವಿದ್ಯಾಭೂಷಣ ಎಂದು ಮಾತ್ರ ಉಳಿಸಿಕೊಂಡರು. ಬ್ರಹ್ಮೋಪದೇಶವಾಯಿತು. ನಂತರ ಗೃಹಸ್ಥರಾದರು! ಅದು ಎರಡನೇ ಬಾರಿ ಹುಟ್ಟುವ ಪ್ರಕ್ರಿಯೆ! ಅವರಿಗಿದು ಮೂರನೆಯ ನಾಮಕರಣ! ಮೊದಲು ಯತೀಂದ್ರಚಾರ್ಯ ಎಂದು ಹೆಸರಿಟ್ಟಾಗ ಇವರು ತೊಟ್ಟಿಲಲ್ಲಿದ್ದರು. ಅವರಿಗದು ಗೊತ್ತೇ ಆಗಿರಲಿಲ್ಲ. ನಂತರ ಹದಿನೈದನೇ ವಯಸ್ಸಿನಲ್ಲಿ ಜನಿವಾರ ಕಿತ್ತೆಸೆಯಿಸಿ ಅವರಿಗೆ ಶ್ರೀ ಶ್ರೀ ಶ್ರೀ ವಿದ್ಯಾಭೂಷಣ ತೀರ್ಥರು ಎಂದು ಹೆಸರಿಡಲಾಯಿತು.

ಆಗ ಅವರೇನೂ ಮಾಡುವಂತಿರಲಿಲ್ಲ. ಈಗ ಮೂರನೇ ನಾಮಕರಣ…. ವಿದ್ಯಾಭೂಷಣ ಎಂದು. ಅದನ್ನು ಅವರೇ ಮಾಡಿ ಕೊಂಡಿದ್ದಾರೆ: ಪ್ರೀತಿಯಿಂದ. ಕಾವಿ ಕಳಚಿ ಬರುವಾಗ ಕುಕ್ಕೆ ಸುಬ್ರಮಣ್ಯ ಮಠದಲ್ಲಿ ಅವರ ಜೀವದ ಜೀವದಂತಿದ್ದ ಸಂಪುಟ ಲಕ್ಷ್ಮೀ ನರಸಿಂಹಸ್ವಾಮಿಯ ವಿಗ್ರಹವನ್ನು ಕೊನೆಯ ಬಾರಿಗೆ ಕಣ್ತುಂಬಿ ಕೊಂಡಾಗ ಉದ್ವೇಗ ವಿಪರೀತವಾಗಿತ್ತು. ಬುದ್ಧಿ ತಿಳಿದಾಗಿ ನಿಂದಲೂ ಅವರು ತುಂಬ ಹಚ್ಚಿಕೊಂಡಿದ್ದ ದೈವವದು.

ಜೊತೆಯ ಮಧ್ವಾಚಾರ್ಯರು ಕೊಟ್ಟ ವೇದವ್ಯಾಸ ಸಂಪುಟವಿತ್ತು. ಪಾಂಡುರಂಗ ವಿಠ್ಠಲನಿದ್ದ. ಮೂವತ್ತು ವರ್ಷ ಪೂಜಿಸಿ ದ್ದೇನೆ. ಬಿಟ್ಟು ಬರಬೇಕ ಎಂಬ ಸಂಕಟ. ಜೊತೆಯ ಬಿಟ್ಟು ಹೋದಷ್ಟೂ ನನ್ನ ಲಕ್ಷ್ಮೀ ನರಸಿಂಹ ಸ್ವಾಮಿಗೆ ಹತ್ತಿರಾಗುತ್ತಿದ್ದೇನೆ. ಆತ ಹಿಂದೆಂದಿಗಿಂತಲೂ ನನ್ನೊಳಗೆ ಹೆಚ್ಚಾಗಿ ನೆಲೆಗೊಳ್ಳುತ್ತಿzನೆ ಎಂಬ ದಿವ್ಯ ಸಮಾಧಾನ. ಎಲ್ಲ ಬಂಧನಗಳನ್ನು ಕಳಚಿ ಕೊಳ್ಳುವುದೇ ಸನ್ಯಾಸ ಎನ್ನುತ್ತಾರೆ. ಆ ಸನ್ಯಾಸವನ್ನು ಕಳಚಿಕೊಳ್ಳುವುದು ಕೂಡಾ ಎಷ್ಟು ಕಷ್ಟವಲ್ಲವೇ? ಮೂವತ್ತು ವರ್ಷಗಳ ಕಾಲ ತನ್ನ ದೇಹ ದೊಂದಿಗೆ ವ್ಯಕ್ತಿತ್ವದೊಂದಿಗೆ, ಪ್ರತಿ ಚಿಕ್ಕ ಕದಲಿಕೆಯೊಂದಿಗೂ ತನ್ನದೆಂದು ಗುರುತಿಸಿಕೊಂಡಿದ್ದ ಕಾವಿ ಕಳಚಿ ಹಾಕುವ ಘಳಿಗೆ.

ಸನ್ಯಾಸವೆಂಬ ಕೊನೆಯ ಆಶ್ರಮದಿಂದ ಹೊರಬಿದ್ದು ಹೊಸಹುಟ್ಟು ಪಡೆಯುವ ಪರ್ವ. ಕಾವಿ ಬಿಸುಟು ಬಿಳಿಬಟ್ಟೆ ತೊಡುವ ಸಂದರ್ಭದಲ್ಲಿ ಮಗುವಿನಂತೆ ಅತ್ತಿದ್ದರು. ಆದರೆ ಮಠದಿಂದ ಕಳಚಿಕೊಳ್ಳುವಾಗ ನನ್ನಲ್ಲಿ ವಿಷಾದವಿರಲಿಲ್ಲ. ಆನಂದವಿತ್ತು. ನಾನು ಯಾವತ್ತಿಗೂ ಸನ್ಯಾಸವನ್ನು ಮನಸಾರೆ ಇಷ್ಟಪಟ್ಟವನಲ್ಲ. ಕಾವಿಯಲ್ಲಿದ್ದಷ್ಟೂ ಹೊತ್ತೂ ಇದು ನನ್ನದಲ್ಲ. ಅಂತಲೇ ಅನ್ನಿಸುತ್ತಿತ್ತು. ಯಾರಾದರೂ ಬಂದು ಬಂದು ಕಾಲಿಗೆ ನಮಸ್ಕರಿಸುವಾಗ ಹಿಂಸೆಯಾಗುತ್ತಿತ್ತು. ಭಯವಾಗ್ತಾ ಇತ್ತು.

ನಮಸ್ಕಾರ ಮಾಡಿಸಿಕೊಳ್ಳುವಂಥಾದ್ದು ನನ್ನಲ್ಲಿ ಏನೂ ಇಲ್ಲ ಅಂತನ್ನಿಸುತ್ತಿತ್ತು. ಇದು ನಂದಲ್ಲ. ನನ್ನಲ್ಲಿ ಆ ಮಟ್ಟಿನ ವೈರಾಗ್ಯವಿಲ್ಲ ಅನ್ನಿಸುತ್ತಿತ್ತು. ಸನ್ಯಾಸವೂ ಒಂದು ದೊಡ್ಡ ಸಂಸಾರವೇ. ಸನ್ಯಾಸಿಯಾದವನಿಗೆ ಹೆಣ್ಣಿನ ಸುಖ ಪಡೆಯಲು ಅವಕಾಶವಿಲ್ಲ. ಅದು ನಮಗೆ ವರ್ಜ್ಯ. ಅದನ್ನು ಮರೆಯೋದಕ್ಕೆ ಇನ್ನೆರಡು ಆಕರ್ಷಣೆಗಳನ್ನು ಉಂಟು ಮಾಡಿದ್ದಾರೆ. ಅಧಿಕಾರ ಮತ್ತು ಕೀರ್ತಿ!

ಹೆಣ್ಣಿನ ಸುಖದಿಂದ ವಂಚಿತನಾದ ಸನ್ಯಾಸಿ ಈ ಅಧಿಕಾರ ಮತ್ತು ಕೀರ್ತಿಗಳನ್ನು ಅನುಭವಿಸಿ, ಹೆಣ್ಣನ್ನು ಮರೀತಾನೆ. ಸನ್ಯಾಸಿಯಾಗಿದ್ದುಕೊಂಡು ಅಗಾಧವಾದ ಕೆಲಸ ಮಾಡಬಹುದು ಎಂದು ನಾನು ಇಂದಿಗೂ ನಂಬುತ್ತೇನೆ. ಅದು ಸ್ಥಾಪಿತ ಸಂದರ್ಭ. ಜನರ ಸಹಾಯ ದೊರೆಯುತ್ತದೆ. ಕೆಲಸ ಮಾಡುವುದೂ ಸುಲಭವೇ. ಅಷ್ಟೊಂದು ಅಧಿಕಾರ, ಕೀರ್ತಿ, ಹಣ… ಎಲ್ಲವನ್ನೂ ಬಿಟ್ಟು ಬರುವುದು ನಿಜಕ್ಕೂ ಕಷ್ಟವೇ! ಆದರೆ ನನ್ನ ಕಾವಿಯೊಳಗೆ ಮೊದಲಿಂದಲೂ ನನ್ನ ಮನಸ್ಸು ಕೂತಿರಲೇ ಇಲ್ಲ. ನಾನು ಕಳೆದುಕೊಂಡದ್ದು, ಕಳಚಿಕೊಂಡದ್ದು ಕಾವಿಯನ್ನು ಮಾತ್ರ!

ಪೀಠ ತ್ಯಾಗ ಮಾಡುವ ಕೊನೆಕ್ಷಣದ ತನಕ ನಾನು ಹಿಂದಕ್ಕೆ ಬಂದೇನು ಅನ್ನುವ ಆಸೆ ಪೇಜಾವರ ಶ್ರೀಗಳಿಗಿತ್ತು. ಅವರೊಂದಿಗೆ ದಶಕಗಳ ಕಾಲ ಇದ್ದಾನಲ್ಲ ಹೀಗಾಗಿ ಅವರಿಗೆ ನನ್ನ ಮೇಲೆ ವಿವರಿಸಲಾಗದ ಅನೂಹ್ಯ ಪ್ರೀತಿ. ನನ್ನ ಹಾಗೆ ಪ್ರಾಮಾಣಿಕರಾಗಿರು ವವರು ಎಲ್ಲ ಮಠಗಳಲ್ಲೂ ಇದ್ದಾರೆ. ಎಲ್ಲರನ್ನೂ ನಾನು ಗೌರವಿಸುತ್ತೇನೆ…. ಎಂದ ಮಾತುಗಳು ಅವರ ಸಾತ್ವಿಕ ಪ್ರಾಮಾಣಿಕತೆಯ ಸಾಕ್ಷಿಯಂತಿತ್ತು. ಯಾವುದೇ ಪ್ರೋತ್ಸಾಹದ ನೀರು ಹನಿಸದೆಯೂ ಅವರಿಬ್ಬರ ನಡುವೆ ಪ್ರೇಮದ ಬೆಳೆ ಬೆಳದು ನಿಂತಿತ್ತು. ಒಬ್ಬಿಬ್ಬರಲ್ಲ.

ಸುಮಾರು ಜನ ಬಂದು ರಮಾರಿಗೆ ಈ ಮದುವೆ ಬೇಡವೆಂದು ಸಲಹೆ ನೀಡಿದರು. ಮದುವೆಯೇ ಬೇಡವೆಂದರೆ ಒಪ್ಪುತ್ತೇನೆ. ನಾನು ಹಾಗೇ ಇರುತ್ತೇನೆ. ಆದರೆ ಮದುವೆ ಅಂತಾದರೆ ಅವರನ್ನೇ ಎಂದರು ದೃಢತೆಯ ಏಕಚಿತ್ತದಿಂದ. ನಾನು ಮಾಡಿದ ನಿರ್ಧಾರದ ಬಗ್ಗೆ ನನಗೆ ಪಶ್ಚಾತ್ತಾಪವಿಲ್ಲ. ಅಪ್ಪ-ಅಮ್ಮನನ್ನು ಬಿಟ್ಟುಬಂದೆ ಎಂಬ ನೋವಿದೆ, ನಿಜ. ಆದರೆ ಅವರಿಗೆ ಅವರದೇ ಆದ ಜಗತ್ತಿದೆ. ಇತರೆ ಮಕ್ಕಳಿದ್ದಾರೆ.

ವೃತ್ತಿಯಿದೆ. ಮನೆತನವಿದೆ. ಇವರಿಗ್ಯಾರಿದ್ದಾರೆ? ವೈರಾಗ್ಯ ಪೀಠದ ಮೇಲೆ ಕುಳಿತು ಪ್ರೀತಿಗೋಸ್ಕರ ಹಂಬಲಿಸಿದವರು. ನನ್ನ ತಂದೆ-ತಾಯಿ ಹೇಗೋ ನನ್ನನ್ನು ಮರೆಯುತ್ತಾರೆ. ಇವರನ್ನು ನಾನು ಬಿಟ್ಟಿದ್ದಿದ್ದರೆ ಇವರೇನಾಗಿ ಹೋಗುತ್ತಿದ್ದರು? ಹಾಗಂತಲೇ ಈ  ನಿರ್ಣಯಕ್ಕೆ ಬಂದೆ. ಬಳ್ಳಾರಿಯಿಂದ ಒಬ್ಬಳೇ ಬಂದುಬಿಟ್ಟೆ!

ನಮ್ಮದು ಧಿಡೀರನೆ ಮೊಳೆತ ಪ್ರೇಮವಲ್ಲ. ಮೊದಲು ಗುರು-ಶಿಷ್ಯೆಯರಾಗಿzವು. ನಂತರ ಗೆಳೆಯ- ಗೆಳತಿಯರಾದೆವು. ಇದು ಮೂರನೆಯ ಹಂತ. ನಾವು ಪರಸ್ಪರ ಪ್ರೇಮಿಸಿದ್ದೇವೆ. ಅವರನ್ನು ನಾನು ಪೀಠಾಧಿಪತಿಯಾಗಿ ನೋಡಲಿಲ್ಲ. ಗಾಯಕನನ್ನಾಗಿ ನೋಡಲಿಲ್ಲ. ಒಬ್ಬ ವ್ಯಕ್ತಿಯಾಗಿ, ಅವರ ವ್ಯಕ್ತಿತ್ವವನ್ನು ಇಷ್ಟಪಟ್ಟೆ. ಪ್ರೀತಿಸಿದೆ. ನಾನು ನನಗಿಂತ ತುಂಬ ದೊಡ್ಡ ವಯಸ್ಸಿನ ವರನ್ನು ಮದುವೆ ಯಾಗುತ್ತಿದ್ದೇನೆ ಅನ್ನಿಸುತ್ತಿದ್ದುದು ನಿಜವೇ. ಆದರೆ ನಿರ್ಧಾರ ಮಾಡಿಯಾಗಿತ್ತು. ಅವರನ್ನು ಕೇವಲ ಸ್ವಾಮಿಗಳು ಅಥವಾ ಸಂಗೀತಗಾರರು ಎಂದು ನೋಡುವವರಿಗೆ ಇದೆಲ್ಲ ಅರ್ಥವಾಗುವುದಿಲ್ಲ. ನಾನವರನ್ನು ಪ್ರೀತಿಸಿದ್ದೇನೆ.

SeZಠಿ ಜಿo ಠಿಜಿಞZಠಿಛಿ.ಹುಟ್ಟಿದಾಗಿನಿಂದ ನಾನು ನೋಡಿದ, ಪ್ರೀತಿಸಿದ, ಗೌರವಿಸಿದ ನನ್ನ ಅಪ್ಪ ಒಂದು ಕಡೆ, ನನ್ನನ್ನು
ಜೀವಕ್ಕಿಂತ ಮಿಗಿಲಾಗಿ ಪ್ರೀತಿಸಿದ ಇವರು ಒಂದು ಕಡೆ. ಎರಡರ ಪೈಕಿ ಒಂದನ್ನು ನಾನು ಕಳೆದುಕೊಳ್ಳಬೇಕಿತ್ತು. ಇವರನ್ನು ಹೊಂದಲು ನಿರ್ಧರಿಸಿದೆ. ಅಪ್ಪ ಕೊಟ್ಟ ಸ್ವಾತಂತ್ರ್ಯವನ್ನು ತುಂಬಾನೇ ಉಪಯೋಗಿಸಿಕೊಂಡು ಬಿಟ್ಟೆ ಎನ್ನಿಸುತ್ತಿದೆ. ಅವರನ್ನು ನೋಯಿಸಿದ್ದೇನೆ. ಅದಕ್ಕಾಗಿ ಅವರಲ್ಲಿ ಕ್ಷಮೆ ಕೇಳಿದ್ದೇನೆ. ಆದರೆ ನಾನು ತಪ್ಪು ಮಾಡಿಲ್ಲ ಎಂದು ನನಗೆ ಮನವರಿಕೆಯಾಗಿದೆ ಎನ್ನುವ ಅವರ ಆತ್ಮವಿಶ್ವಾಸದ ನುಡಿಗಳನ್ನು ಕೇಳಿದಾಗ, ಆತ ತಾನು ನಂಬಿದ ದೇವರನ್ನು ಬಿಟ್ಟು ಬಂದಿದ್ದಾರೆ: ದೇವರ ಸಮೇತ. ಈಕೆ ತನ್ನನ್ನು ಸಾಕಿ ಸಲುಹಿದ ಮನೆಯನ್ನು ಬಿಟ್ಟು ಬಂದಿದ್ದಾರೆ ಮನೆಯವರ ಸಮೇತ.

ಇಬ್ಬರೂ ತಮ್ಮ ತಮ್ಮ ನೆಲೆಗಳಿಂದ ಕಿತ್ತೆಸೆಯಲ್ಪಟ್ಟವರು. ಇವತ್ತು ರಾತ್ರಿ ಕಳೆದರೆ ಮುಗಿಯಿತು. ಇವರದೇ ಒಂದು ನೆಲೆ ಯಾಗುತ್ತದೆ. ಇವರು ನಂಬಿದ ದೇವರು ಇಲ್ಲೇ ನೆಲೆಸುತ್ತಾನೆ. ಇವರೇ ಇನ್ನೊಂದು ಜೀವಕ್ಕೆ ಅಪ್ಪ-ಅಮ್ಮ ಆಗುತ್ತಾರೆ! ಅನ್ನಿಸಿ ದರೂ ಮುಂದೆ ಜೀವನದ ಗತಿ? ರಮಾ ತುಂಬ ಶ್ರೀಮಂತ ಮನೆಯಲ್ಲಿ ಬೆಳೆದವರು. ರಾಜಕುಮಾರಿಯ ಹಾಗೆ. ಅವರಿಗೆ  ಕಷ್ಟವಾಗ ಬಹುದು. ಅದನ್ನೆಲ್ಲ ವಿವರಿಸಿದ್ದೆ. ಅವರೂ ಮಾನಸಿಕವಾಗಿ ಸಿದ್ಧವಾಗಿದ್ದಾರೆ.

ಬದುಕು ಪ್ರಾರಂಭಿಸ್ತೇವೆ. ನಾನು ಹಾಡುತ್ತೇನೆ. ಬೆಂಬಲಕ್ಕೆ ನೀವೆಲ್ಲ ಇದ್ದೀರಲ್ಲ? ಎಂದಾಗ, ನಕ್ಕು ನಾನೀಗ ಹೆಣ್ಣಿನ ಕಡೆಯವನಾಗಿ ಬಂದಿದ್ದೇನೆ. ರಮಾರಿಗೆ ಬೆಂಗಳೂರಿನಲ್ಲೂ ಒಂದು ತವರು ಮನೆ ಇದೆ ಎಂದು ನೆನಪಿಸಿ ವಾಪಸ್ಸಾಗಿದ್ದರು.
ಮಾಯೆ ಯಾರನ್ನೂ ಬಿಡುವುದಿಲ್ಲ. ಯಾರಿಗೆ, ಯಾವಾಗ, ಯಾರಲ್ಲಿ ಪ್ರೇಮಾಂಕುರವಾಗುತ್ತದೋ ಯಾರು ಬಲ್ಲರು? ಈ ಜಗತ್ತೇ ಒಂದು ಮಾಯಾ ಲೋಕ!

ಅದನ್ನು ಮೀರಲಾಗುವುದಿಲ್ಲ ಎಂಬ ಅರಿವಾದಾಗ ಎಷ್ಟೆಲ್ಲ ನಿಷ್ಟೂರದ ನಡುವೆಯೂ ಕಾವಿ ಕಳಚಿ, ನೆಮ್ಮದಿಯ ಗೃಹಸ್ಥ ಜೀವನ ನಡೆಸುತ್ತಿರುವ ದಂಪತಿಗಳ ಬಗ್ಗೆ ಹೆಮ್ಮೆಯೆನಿಸಿತು. ಇಂದಿಗೂ ಮಠಗಳು, ಅಲ್ಲಿಯ ಸಂಪ್ರದಾಯಗಳು ನನಗೆ
ಅಪರಿಚಿತವೇ. ಇತ್ತೀಚಿಗೆ ಮಠದದ ತಲ್ಲಣಗಳ ಸುದ್ದಿ ಕೇಳಿದಾಗ ಇದೆಲ್ಲ ನೆನಪಾಯ್ತು.