ಅಭಿಮತ
ಪ್ರಕಾಶ್ ಶೇಷರಾಘವಾಚಾರ್
ಮರಳಿ ಯತ್ನವ ಮಾಡು ಎಂಬಂತೆ ಪರ್ಯಾಯ ನಾಯಕತ್ವಕ್ಕೆ ಹೊಸ ಹೊಸ ಹೆಸರುಗಳನ್ನು ಹರಿಯ ಬಿಟ್ಚು ಅವರನ್ನೂ ಪದೇ ಪದೇ ಬದಲಾಯಿಸಿ ಮ್ಯೂಸಿಕಲ್ ಚೇರ್ ಆಟವನ್ನು ಆಡುತ್ತಿದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ ಮೋದಿಯವರು ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ಭಾರತೀಯರ ಸೇವೆಯಲ್ಲಿ ಸಂಪೂರ್ಣ ತೊಡಗಿಸಿಕೊಂಡಿದ್ದಾರೆ.
1971ರಲ್ಲಿ ಶ್ರೀಮತಿ ಇಂದಿರಾ ಗಾಂಧಿಯವರು ದೇಶದ ಅನಭಿಷಿಕ್ತ ನಾಯಕಿಯಾಗಿದ್ದರು. ಬ್ಯಾಂಕ್ ರಾಷ್ಟ್ರೀ ಕರಣ, ಕಲ್ಲಿದ್ದಲು, ಉಕ್ಕು ಹತ್ತಿ ಜವಳಿ, ತೈಲ ಸಂಸ್ಕರಣೆ ಕ್ಷೇತ್ರಗಳನ್ನು ರಾಷ್ಟ್ರೀಕರಣ ಕೈಗೊಂಡು ಜನಪ್ರಿಯತೆಯ ಉತ್ತುಂಗದಲ್ಲಿ ಇದ್ದರು.
ಇಂದಿರಾಗಾಂಧಿಯವರು ರಾಜಧನ ರದ್ದತಿ ಕೈಗೊಂಡು ದೇಶವಾಸಿಗಳನ್ನು ದಂಗು ಬಡಿಸಿದರು. ಸಿಂಹಾಸನ ಮತ್ತು ಬಿರುದು-ಬಾವಲಿಗಳನ್ನು ಕಳೆದು ಕೊಂಡ ರಾಜ ಮಹಾರಾಜರನ್ನು ಬೆಳಕು ಹರಿಯುವುದರೊಳಗೆ ಸಾಮಾನ್ಯ ನಾಗರಿಕರಾಗುವಂತೆ ಮಾಡಿದರು. 1971ರ ಭಾರತ ಪಾಕ್ ಯುದ್ದದಲ್ಲಿ ಅಮೋಘ ಜಯ ಸಾಧಿಸಿ ಬಂಗ್ಲಾದೇಶವನ್ನು ನಿರ್ಮಾಣ ಮಾಡುವುದರಲ್ಲಿ ಮಹತ್ತರ ಪಾತ್ರ ವಹಿಸಿದ್ದರು.
ಇಂದಿರಾಗಾಂಧಿಯವರ ‘ಗರೀಬಿ ಹಠಾವೋ’ ಘೋಷಣೆ ಜನ ಮೆಚ್ಚುಗೆ ಪಡೆದಿತ್ತು. ೧೯೭೧ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಪ್ರತಿಪಕ್ಷದ ಘಟಾನುಘಟಿ ನಾಯಕರೆಲ್ಲ ಒಂದಾಗಿ ಜನಸಂಘ, ಸಂಸ್ಥಾ ಕಾಂಗ್ರೆಸ್ , ಪಿಎಸ್‌ಪಿ, ಎಸ್‌ಎಸ್‌ಪಿ ಮತ್ತು ಸ್ವತಂತ್ರ ಪಾರ್ಟಿಗಳೊಗೊಂಡ ಮಹಾ ಮೈತ್ರಿಕೂಟ ರಚಿಸಿಕೊಂಡು ಸವಾಲೊಡ್ಡುತ್ತಾರೆ. ಇತ್ತ ಚುನಾವಣೆಗಾಗಿ ಒಂದಾದ ಪ್ರತಿಪಕ್ಷಗಳು, ಇಂದಿರಾ ಅವರನ್ನು ಸಮರ್ಥವಾಗಿ ಎದುರಿಸುವ ಪರ್ಯಾಯ ಕಾರ್ಯಕ್ರಮಗಳನ್ನು ನೀಡದೆ ಕೇವಲ ಇಂದಿರಾ ಗಾಂಧಿಯನ್ನು ದೂಷಿಸುವುದರಲ್ಲಿ ನಿರತರಾಗಿರುತ್ತಾರೆ.
ಕೇವಲ ಟೀಕೆ ಮಾಡುವುದರಿಂದ ಜನರ ವಿಶ್ವಾಸ ಗೆಲಲ್ಲು ಸಾಧ್ಯವಿಲ್ಲ ಎಂಬುದು ಪ್ರತಿಪಕ್ಷಗಳು ಮರೆತ್ತಿದ್ದವು. ಚುನಾವಣಾ ಫಲಿತಾಂಶ ಪ್ರಕಟ ವಾದಾಗ ಕಾಂಗ್ರೆಸ್ 421 ಸೀಟುಗಳಿಗೆ 352 ಸೀಟುಗಳನ್ನು ಬಾಚಿಕೊಂಡು ಪ್ರತಿಪಕ್ಷವನ್ನು ಧೂಳಿಪಟ ಮಾಡಿರುತ್ತಾರೆ. 1977ರ ಲೋಕಸಭಾ ಚುನಾವಣೆಯಲ್ಲಿ ತುರ್ತು ಪರಿಸ್ಥಿತಿಯನ್ನು ವಿರೋಧಿಸಿ ಜನತಾ ಪಾರ್ಟಿಗೆ ಜನ ಕೊಟ್ಟ ಅಧಿಕಾರವನ್ನು ಯೋಗ್ಯ ರೀತಿಯಲ್ಲಿ ಆಡಳಿತ ನಡೆಸಲು ಬಳಸದೆ ಪರಸ್ಪರ ಕಿತ್ತಾಟಕ್ಕೆ ಮೀಸಲಿಟ್ಟು ಕೇವಲ ೩ ವರ್ಷದಲ್ಲಿ ಮತ್ತೆ ಇಂದಿರಾ ಗಾಂಧಿ ಅಧಿಕಾರಕ್ಕೆ ವಾಪಸ್ ತಂದ ಕೀರ್ತಿ ದಿಗ್ಗಜ ನಾಯಕರುಗಳಿಗೆ ಸಲ್ಲುತ್ತದೆ.
1984ರಲ್ಲಿ ಇಂದಿರಾ ಹತ್ಯೆಯ ತರುವಾಯ ನಡೆದ ಚುನಾವಣೆಯಲ್ಲಿ ರಾಜೀವ್ ನೇತೃತ್ವದಲ್ಲಿ ಕಾಂಗ್ರೆಸ್ 404ಷ್ಟದಲ್ಲಿರುತ್ತದೆ. ಎನ್ ಟಿ ರಾಮರಾವ್
ಅವರ ತೆಲಗು ದೇಶಂ ಪಾರ್ಟಿ 30 ಸೀಟುಗಳಿಸಿ ಪ್ರಮುಖ ಪ್ರತಿಪಕ್ಷವಾಗಿ ಹೊರ ಹೊಮ್ಮಿರುತ್ತದೆ. ಬಿಜೆಪಿ ಹಿರಿಯ ನಾಯಕರಾಗಿದ್ದ ಜಾನ ಕೃಷ್ಣ ಮೂರ್ತಿ ವರು 84ರ ಕಾಂಗ್ರೆಸ್ ಚಂಡಮಾರುತವನ್ನು Wave from the Grave ಎಂದು ಬಣ್ಣಿಸುತ್ತಾರೆ.
ಬಿಜೆಪಿ ಎರಡು ಸೀಟು ಪಡೆದು ತಲೆಯ ಮೇಲೆ ಕೈಹೊತ್ತು ಕೂರಲಿಲ್ಲ. ಬದಲಿಗೆ ನಾಯಕರು ದೇಶಾದ್ಯಂತ್ಯ ಪ್ರವಾಸ ಕೈಗೊಂಡು ಕುಗ್ಗಿದ್ದ ಕಾರ್ಯಕರ್ತರ ಉತ್ಸಾಹವನ್ನು ಹೆಚ್ಚಿಸುವ ಕೆಲಸ ಮಾಡುತ್ತಾರೆ. ಬೆಂಗಳೂರಿನ ಕಾರ್ಯಕರ್ತರನ್ನು ದ್ದೇಶಿಸಿ ಮಾತನಾಡಿದ ವಾಜಪೇಯಿಯವರು ತಮ್ಮ ಹಿಂದಿ ಕವಿತೆ ಯನ್ನು ಉಚ್ಚರಿಸಿ ‘ನ ದೈನ್ಯಂ ನ ಪಲಾಯನಂ’ ಎಂದು ಕುಗ್ಗುವುದೂ ಇಲ್ಲ ಪಲಾಯನವನ್ನೂ ಮಾಡುವುದಿಲ್ಲ ಎಂದು ಘರ್ಜಿಸಿ ಕಾರ್ಯ ಕರ್ತರನ್ನು ಬಡಿದ್ದೇಬ್ಬಿಸುತ್ತಾರೆ.
ಯಾವ ರಾಜ್ಯದಲ್ಲೂ ಅಧಿಕಾರವಿಲ್ಲ, ಲೋಕಸಭೆಯಲ್ಲಿ ಕೇವಲ ಎರಡು ಸ್ಥಾನ. ಮುಂದಿನ ಭವಿಷ್ಯದ ಅನಿಶ್ಚಿತತೆ ದಟ್ಚವಾಗಿರುತ್ತದೆ. ಆದರೂ ಪಕ್ಷದ ನಾಯಕರು ಮುಳುಗುವ ದೋಣಿ ಎಂದು ಹಾರಿ ಹೋಗಲಿಲ್ಲ. ಕಾರ್ಯಕರ್ತರು ಉತ್ಸಾಹ ಕುಂದಿಸಿಕೊಂಡಿದ್ದರೆ ವಿನಹ ವಿಶ್ವಾಸವನ್ನಲ್ಲ. ಪುಟಿದೇಳುವ ಛಲ ಎಲ್ಲರ ಮನಸ್ಸಿನಲ್ಲಿ ತುಡಿಯುತ್ತಿತ್ತು. ವಿಚಾರದ ಆಧಾರದ ಮೇಲೆ ಸಂಸ್ಕಾರ ಪಡೆದ ಕಾರ್ಯಕರ್ತರ ಪಡೆಗೆ ಸೋಲು ಗೆಲುವು ಸ್ವೀಕರಿಸುವ ಸಮ ಚಿತ್ತತೆ ಸಂಘವು ನೀಡಿದ್ದ ಶಿಕ್ಷಣದ ಫಲ. ಬಿಜೆಪಿಯ ಸಂಖ್ಯಾ ಶಕ್ತಿ ಕುಗ್ಗಿತ್ತು ಮಾತ್ರ ಉತ್ಸಾಹವಲ್ಲ.
ಮಂದಿರ ನಿರ್ಮಾಣದ ಹೋರಾಟದ ಹಿಂದೆ ಬಿಜೆಪಿ ತನ್ನ ಶಕ್ತಿಯನ್ನು ಹಾಕಿದ ಪರಿಣಾಮ 1989ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 89 ಸೀಟು ಗಳನ್ನು ಗೆಲ್ಲುತ್ತದೆ. ಐದು ವರ್ಷಗಳ ಹಿಂದೆ ಎರಡು ಸೀಟು ಪಡೆದು ಬಿಜೆಪಿ ಕತೆ ಮುಗಿಯಿತು ಎಂದು ಭಾವಿಸಿದ್ದವರು ದಿಗ್ಭ್ರಮೆ ಆಗುವ ಹಾಗೆ ಪುಟಿದೆದ್ದು ನಿಲ್ಲುತ್ತದೆ. ಜನರ ಭಾವನೆಗನುಣವಾಗಿ ಕೈಗೊಂಡ ಹೋರಾಟಗಳು ಮತ್ತು ಕಾರ್ಯಕರ್ತರ ಪರಿಶ್ರಮದಿಂದ ಬಿಜೆಪಿ ಮತ್ತೆ ಹಿಂದಿರುಗಿ ನೋಡುವುದಿಲ್ಲ.
91ರ ಲೋಕಸಭಾ ಚುನಾವಣೆಯಲ್ಲಿ 120 ಸ್ಥಾನ ಗೆದ್ದು ಮೊದಲ ಬಾರಿ ಮೂರಂಕಿಯನ್ನು ದಾಟುತ್ತದೆ. 1996ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನಗಳಿಸಿ ಕೇಂದ್ರದಲ್ಲಿ 13 ದಿನಗಳ ಕಾಲ ಅಧಿಕಾರವನ್ನೂ ಹಿಡಿಯುತ್ತದೆ. 12 ವರ್ಷಗಳ ಅವಧಿಯಲ್ಲಿ ಎರಡರಿಂದ 161 ಸೀಟು ಗಳನ್ನು ಗಳಿಸುವ ಸಾಮರ್ಥ್ಯ ಬಿಜೆಪಿ ತೋರುತ್ತದೆ. ಕಾಂಗ್ರೆಸ್ 1996ರಲ್ಲಿ ಕಳೆದುಕೊಂಡ ಅಧಿಕಾರವನ್ನು 2004ರಲ್ಲಿ ಮರಳಿ ಪಡೆಯುತ್ತದೆ. ಹತ್ತು ವರ್ಷಗಳ ಕಾಲ ಸರಕಾರ ನಡೆಸಿದ್ದರೂ, 2014ರಲ್ಲಿ ಮೋದಿಯವರು ಒಡ್ಡಿದ ಸವಾಲನ್ನು ಎದುರಿಸುವ ಶಕ್ತಿಯಾಗಲಿ ತಂತ್ರಗಾರಿಕೆಯಾಗಲಿ ಮತ್ತು ಪ್ರಬಲ ನಾಯಕತ್ವವಾಗಲೀ ಇಲ್ಲವಾಗಿ ಕೇವಲ 44 ಸೀಟು ಗೆದ್ದು ದಯನೀಯ ಸೋಲು ಅನುಭವಿಸುತ್ತಾರೆ.
1971ರಲ್ಲಿ ಅಂದಿನ ಪ್ರತಿಪಕ್ಷಗಳು ಮಾಡಿದ ತಪ್ಪನ್ನೇ 43 ವರ್ಷದ ತರುವಾಯ ಕಾಂಗ್ರೆಸ್ ಮಾಡುತ್ತಿದೆ. ಮೋದಿಯವರನ್ನು ದಿನ ಬೆಳಗಾದರೆ ಚರ್ವಿತ ಚರ್ವಣ ಭಾಷೆಯಲ್ಲಿ ಟೀಕಿಸಿ, ಹಂಗಿಸಿ ಮತ್ತು ಅಪಹಾಸ್ಯ ಮಾಡುವುದರಿಂದ ಅವರ ಜನಪ್ರಿಯತೆ ಕುಗ್ಗುತ್ತದೆ ಎಂಬ ಭ್ರಮೆಯಲ್ಲಿದ್ದಾರೆ. ರಾಜ್ಯಗಳ ನಂತರ ರಾಜ್ಯಗಳು ಬಿಜೆಪಿ ಕೈವಶವಾಗುತ್ತಿದ್ದರೆ ರಾಹುಲ್ ಗಾಂಧಿಯು ಕಷ್ಟಕರ ದಿನಗಳಲ್ಲಿ ಪಕ್ಷದೊಂದಿಗೆ ಇರದೇ ವಿದೇಶ ಪ್ರವಾಸದಲ್ಲೇ ಕಾಲ ಕಳೆಯು ತ್ತಿದ್ದಾರೆ. ಪಕ್ಷದ ನಾಯಕರುಗಳು ಒಬ್ಬೊಬ್ಬರಾಗಿ ತೊರೆದು ಹೋಗುತ್ತಿದ್ದರೂ ಅವರನ್ನು ತಡೆಯುವ ಪ್ರಯತ್ನವೇ ಇಲ್ಲ.
ಚುನಾವಣಾ ಪರಾಭವಗಳ ಆತ್ಮಾವಲೋಕನವಿಲ್ಲ. ಕೇವಲ ಗಾಂಧಿ ಕುಟುಂಬವನ್ನು ಕಾಪಾಡುವ ದೈನೇಸಿ ಸ್ಥಿತಿ. ಪಕ್ಷವನ್ನು ಪುನಃಶ್ಚೇತನಗೊಳಿಸುವ ಒಂದೂ ಕಾರ್ಯಕ್ರಮವಿಲ್ಲ. ಈ ಎಲ್ಲ ಗೊಂದಲಗಳ ನಡುವೆ ಕಾಂಗ್ರೆಸ್ ಯಾವ ಹಾದಿ ತುಳಿಯಬೇಕು ಎಂದು ತಿಳಿಯದೇ ಅಡ್ಡರಸ್ತೆಯಲ್ಲಿ ಬಂದು ನಿಂತಿದೆ. ಇತ್ತ, ಮೋದಿಯವರನ್ನು ಮಣಿಸಲು ಹೆಣಗಾಡುತ್ತಿರುವ ಮೋದಿ ವಿರೋಧಿಗಳು ಪರ್ಯಾಯ ನಾಯಕರು ಯಾರಾದರು ಸಿಗುತ್ತಾರಾ ಎಂದು 8 ವರ್ಷದಿಂದ ದುರ್ಬೀನು ಹಾಕಿಕೊಂಡು ಹುಡುಕುವ ಪ್ರಯತ್ನ ನಡೆಸುತ್ತಲೇ ಇದ್ದಾರೆ.
ಒಂದೊ ಚುನಾವಣೆಯಾದಾಗಲೂ ಒಬ್ಬೊಬ್ಬರನ್ನು ಮುನ್ನೆಲೆಗೆ ಕರತಂದು ಕೈ ಸುಟ್ಟುಕೊಳ್ಳುತ್ತಿದ್ದಾರೆ. 2014ರಲ್ಲಿ ರಾಹುಲ್ ಗಾಂಧಿಯವರು ಪ್ರಧಾನಿ
ಯಾಗಬಹುದು ಎಂದು ನಂಬಿಕೊಂಡು ಕೆಟ್ಟರು. ಇದರ ನಡುವೆ 2014ರಲ್ಲಿಯೇ ಕೇಜ್ರಿವಾಲ್ ನಾನೇ ಮೋದಿಗೆ ಪರ್ಯಾಯ ಎಂದು ಸ್ವಯಂ ಘೋಷಣೆ ಯನ್ನು ಮಾಡಿ ಕೊಂಡಿದ್ದರು. ‘ಮೋದಿ ಹಟಾವ್ ಗ್ಯಾಂಗ್’ಎಂತೆಂಥ ವ್ಯಕ್ತಿಗಳನ್ನು ಮೋದಿ ಯನ್ನು ಮಣಿಸಲು ಬೆಂಬಲಿಸುತ್ತಿದ್ದಾರೆ ಎಂದು ಪಟ್ಟಿ ನೋಡಿದರೆ ಇವರ ದಯನೀಯ ಹಾಗೂ ಹತಾಶ ಮನಃಸ್ಥಿತಿಯು ಅರಿವಾಗುತ್ತದೆ.
ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಲಾಲೂ ಪುತ್ರ ತೇಜಸ್ವಿ ಯಾದವ್ ಇವರಿಗೆ ಐಕಾನ್ ನಾಯಕನಾಗಿ ಕಾಣುತ್ತಾನೆ. ಆತನ ವಿರುದ್ದ
ದಾಖಲಾಗಿರುವ 3 ಭ್ರಷ್ಟಾಚಾರ ಪ್ರಕರಣಗಳನ್ನು ಎದುರಿಸುತ್ತಿರುವುದು ಮತ್ತು ಜಾಮೀನು ಪಡೆದು ಹೊರಗಿರುವುದು ಇವರಿಗೆ ಬಾಧಿಸುವುದೇ ಇಲ್ಲ.
ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಮೂರನೇ ಬಾರಿಗೆ ಬಿಜೆಪಿಯ ಪ್ರಬಲ ಸವಾಲನ್ನು ಎದುರಿಸಿ ಗೆದ್ದ ಕೂಡಲೆ ಆಕೆಯನ್ನು ರಾಷ್ಟ್ರ ಮಟ್ಟದ
ನಾಯಕಿ, ಬಿಜೆಪಿಗೆ ಟಿಎಂಸಿಯೇ ಪರ್ಯಾಯ ಎಂದು ಬಿಂಬಿಸಿ, ಮಮತಾ ಮುಂದಿನ ಪ್ರಧಾನಿ ಪಟ್ಟಕ್ಕೆ ಅರ್ಹಳು ಎಂಬ ಅತಿರೇಕದ ವೈಭವೀಕರಣ
ಆರಂಭವಾಗುತ್ತದೆ. ಪಶ್ಚಿಮ ಬಂಗಾಳದ ಆಕೆಯ ರಕ್ತಸಿಕ್ತ ಆಡಳಿತವಾಗಲೀ, ಮಹಿಳೆಯರ ಮೇಲಿನ ಅತ್ಯಾಚಾರ ಮತ್ತು ನ್ಯಾಯಾಲಯದ ಆದೇಶದ
ಮೇರೆಗೆ ಚುನಾವಣೋತ್ತರ ಹಿಂಸಾಚಾರದ ಕುರಿತು ನಡೆಯುತ್ತಿರುವ ತನಿಖೆಯು ಇವರ ನೈತಿಕ ಪ್ರeಯನ್ನು ಕಾಡುವುದೇ ಇಲ್ಲ.
ಟಿಎಂಸಿ, ಗೋವಾ ಮತ್ತು ತ್ರಿಪುರಾ ರಾಜ್ಯಗಳಲ್ಲಿ ಹೀನಾಯವಾಗಿ ನೆಲಕಚ್ಚಿದ ತರುವಾಯ ಮಮತಾ ಬ್ಯಾನರ್ಜಿಯೇ ಈಗ ಬಿಜೆಪಿ ಎದುರಿಸಲು ಎಲ್ಲ
ವಿರೋಧಪಕ್ಷಗಳು ಒಂದಾಗಬೇಕು ಎಂದು ಹಲುಬಲು ಆರಂಭಿಸಿದ್ದಾರೆ. ಪಾಪ, ಮೋದಿ ಎದುರಿಸಲು ಸಾಧ್ಯವಾಗದೆ ಇತರರ ಸಹಾಯಕ್ಕೆ ಅಂಗಲಾಚುವ ಪರಿಸ್ಥಿತಿ ಈಕೆಯೇ ತಲುಪಿ ಮೋದಿ ವಿರೋಧಿಗಳಿಗೆ ತುಂಬಾ ನಿರಾಶೆ ಮಾಡಿದ್ದಾರೆ. ಆಗಾಗ್ಗೆ ಶರದ್ ಪವಾರ್ ಹೆಸರು ತೇಲಿ ಬಿಡುವುದು ಅನೇಕ ವರ್ಷದಿಂದ ನಡೆದುಕೊಂಡು ಬಂದಿದೆ. ಈಗಾಗಲೇ ಇವರ ಪಕ್ಷದ ಇಬ್ಬರು ಸಚಿವರು ಭ್ರಷ್ಟಚಾರದ ಆರೋಪದಲ್ಲಿ ಕಂಬಿ ಎಣಿಸುತ್ತಿದ್ದಾರೆ.
ಇತರ 6 ಸಚಿವರ ವಿರುದ್ಧ ತನಿಖೆ ನಡೆಯುತ್ತಿದೆ. ಆದರೂ ಮೋದಿ ವಿರೋಧಿಗಳಿಗೆ ಪವಾರ್ ಪ್ರಧಾನಿ ಪಟ್ಟಕ್ಕೆ ಸೂಕ್ತ ಎಂದು ಸುದ್ದಿ ಹರಿ ಬಿಡುವ ಚಪಲ ಮಾತ್ರ ನಿಂತಿಲ್ಲ. ಉತ್ತರ ಪ್ರದೇಶ ಚುನಾವಣೆಯು ಘೋಷಣೆ ಯಾದ ಕೂಡಲೇ, ಮೋದಿ ಹಠಾವ್ ಗ್ಯಾಂಗ್ ಪ್ರಚಾರ ಆರಂಭಿಸುವ ಮೊದಲೇ ಅಖಿಲೇಶ್
ಯಾದವ್ ರನ್ನು ಅಧಿಕಾರದಲ್ಲಿ ತಂದು ಕೂಡಿಸಿಯೇ ಬಿಟ್ಟಿತ್ತು. ಈ ಬಾರಿ ಯಾದವರು ಮತ್ತು ಮುಸ್ಲಿಂರು ಒಂದಾಗುತ್ತಾರೆ; ಇದೊಂದು ಅಜೇಯ ಜೋಡಿ ಎಂಬ ವಿಶ್ಲೇಷಣೆ.
ಪ್ರಾಯಶಃ ಅಖಿಲೇಶ್ ಗೆದಿದ್ದರೆ ಈ ಯುವ ನೇತಾರ ಮುಂದಿನ ಪ್ರಧಾನಿಗೆ ಅರ್ಹ ಎಂದು ಬಿಂಬಿಸಲು ಅದೆಷ್ಟು ತಯಾರಿ ಮಾಡಿಕೊಂಡಿದ್ದರೊ ಏನೊ?
ಪಾಪ ! ಪಂಜಾಬ್ ವಿಧಾನಸಭಾ ಚುನಾವಣೆಯ ವಿಜಯದ ತರುವಾಯ ಕೇಜ್ರೀವಾಲ್ ಅವರು 2014 ರಲ್ಲಿ ಕಮರಿ ಹೋಗಿದ್ದ ಪ್ರಧಾನಿ ಕುರ್ಚಿಯ ಆಸೆ
ಮತ್ತೆ ಗರಿಗೆದರಿಸಿಕೊಂಡಿದ್ದಾರೆ. ಅವರು ಹಳೆಯ ಶೈಲಿಯ ಮಾತಿನ ವರಸೆಗೆ ಹಿಂತಿರುಗಿದ್ದಾರೆ. ಈ ಪಟ್ಟಿಗೆ ಈಗ ಹೊಸ ಸೇರ್ಪಡೆ ತೆಲಂಗಣಾ ಮುಖ್ಯಮಂತ್ರಿ ಕೆ.ಸಿ.ಚಂದ್ರಶೇಖರ್ ರಾವ್ ಅವರು.
ಮರಳಿ ಯತ್ನವ ಮಾಡು ಎಂಬಂತೆ ಪರ್ಯಾಯ ನಾಯಕತ್ವಕ್ಕೆ ಹೊಸ ಹೊಸ ಹೆಸರುಗಳನ್ನು ಹರಿಯ ಬಿಟ್ಚು ಅವರನ್ನೂ ಪದೇ ಪದೇ ಬದಲಾಯಿಸಿ
ಮ್ಯೂಸಿಕಲ್ ಚೇರ್ ಆಟವನ್ನು ಆಡುತ್ತಿದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ ಮೋದಿಯವರು ದಿನನಿತ್ಯ ತಮ್ಮ ಮೇಲೆ ನಡೆಯುತ್ತಿರುವ ವಾಗ್ದಾಳಿಯ ಬಗ್ಗೆ ಯಾಗಲಿ ಅಥವಾ ಒಂದ ಒಂದು ಪಿತೂರಿಗಳ ಕುರಿತಾಗಲೀ ಕಿಂಚಿತ್ತೂ ವಿಚಲಿತರಾಗದೆ 135 ಕೋಟಿ ಭಾರತೀಯರ ಸೇವೆಯಲ್ಲಿ ಸಂಪೂರ್ಣ ವಾಗಿ ಬದ್ಧತೆಯಿಂದ ತೊಡಗಿಸಿಕೊಂಡಿದ್ದಾರೆ. ಪ್ರತಿಕೂಲ ಪರಿಸ್ಥಿತಿಯನ್ನು ಅನೂಕೂಲಕರ ಪರಿಸ್ಥಿತಿಯನ್ನಾಗಿ ಬದಲಾಯಿಸುವ ಮೋದಿಯವರ ಜಾಣ್ಮೆಗೆ ಸಾಟಿಯೇ ಇಲ್ಲದ ‘ಮೋದಿ ಹಠಾವ್ ಗ್ಯಾಂಗ್’ ನಾಲ್ಕು ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿಯ ಜಯಭೇರಿ ಬಾರಿಸಿದ ತರುವಾಯವಂತೂ ತಲೆಯ ಮೇಲೆ ಕೈ ಹೊತ್ತು ಕೂರುವಂತಾಗಿದ್ದಾರೆ.