Friday, 13th December 2024

ಪಕ್ಷವೋ ಮುಸ್ಲಿಂ ಸಂಘಟನೆಯೋ ?

ಹಂಪಿ ಎಕ್ಸ್’ಪ್ರೆಸ್

ದೇವಿ ಮಹೇಶ್ವರ ಹಂಪಿನಾಯ್ಡು

1336hampiexpress1509@gmail.com

ಒಂದೇ ಕೋಮಿನ ಪರವಾದ ಮನಃಸ್ಥಿತಿ, ಮನುಷ್ಯ ವಿರೋಧಿ ನಡೆ, ಹಿಂದೂಗಳನ್ನು ಅಸ್ಪೃಶ್ಯರಂತೆ ಕಾಣುತ್ತಿರುವುದು ಹಿಂದೂಗಳಲ್ಲಿ ಎಂಥ ಸಂದೇಶವನ್ನು ನೀಡುತ್ತಿದೆಯೆಂದರೆ ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್ ಪಕ್ಷವು ಒಂದು ಇಸ್ಲಾಮಿಕ್ ಸಂಘಟನೆ ಮಾತ್ರ ವಷ್ಟೇ! ಎಂಬ ಚರ್ಚೆಗೆ ಪುಷ್ಟಿ ನೀಡುತ್ತಿದೆ.

ನಿಜಕ್ಕೂ ಇವರುಗಳು ಭಾರತದಲ್ಲಿ ಬದುಕಿದ್ದು, ಇದೇ ದೇಶದ ಸಂವಿಧಾನದ ಆಶಯಗಳಿಗೆ ಬದ್ಧರಾಗಿ ಸಂವಿಧನಾತ್ಮಕ ರಾಜಕೀಯ ಪಕ್ಷಗಳೆನಿಸಿ ಜ್ಯಾತ್ಯತೀತ ರಾಜಕಾರಣಿಗಳಾಗಿದ್ದರೆ ಖಂಡಿತಾ ಹೀಗೆ ಮಾಡುತ್ತಿರಲಿಲ್ಲ ಹಾಗೂ ನಡೆದುಕೊಳ್ಳುತ್ತಿರಲಿಲ್ಲ. ಇವರುಗಳು ವರ್ತಿಸುತ್ತಿರುವ ರೀತಿ, ಇವರ ಸಮಯಸಾಧಕತನ, ಅವಕಾಶವಾದ, ಪಲಾಯನವಾದದ ಕಳ್ಳಬೆಕ್ಕಿನ ಆಟಗಳನ್ನು ನೋಡುತ್ತಿದ್ದರೆ ಇವರದ್ದು ಭವ್ಯ ಪ್ರಜಾಪ್ರಭುತದ ಸಂವಿಧಾನಾತ್ಮಕ ರಾಜಕೀಯ ಪಕ್ಷವೋ ಅಥವಾ ಒಂದು ಕೋಮು ಸಂಘಟನೆ ಮಾತ್ರವೋ ಎಂಬ ಅನುಮಾನ ಹೆಚ್ಚಾಗುತ್ತಿದೆ.

ಆರು ವಿದ್ಯಾರ್ಥಿಗಳ ವ್ಯವಸ್ಥಿತ ಪೂರ್ವನಿಯೋಜಿತ ತಂತ್ರಗಳಿಂದ ಆರಂಭವಾದ ಹಿಜಾಬ್ ವಿವಾದ ಇಂದು ಕೇಸರಿ ವಸ್ತ್ರಕ್ಕೆ ಮೇಲೆ ಪ್ರಚೋದಿಸಿ, ಆ ನಂತರ ಹಿಂದುತ್ವ- ಭಗವಾಧ್ವಜ-ರಾಷ್ಟ್ರಧ್ವಜದ ಮೇಲೆ ಅಪ್ಪಳಿಸಿ ಕೊನೆಗೆ ಸಂವಿಧಾನವೋ ಧರ್ಮವೋ ಎಂಬ ಸವಾಲು ಹಾಕಿ ಸಮಾಜದ ಸಾಮರಸ್ಯವನ್ನು ಹಾಳುಮಾಡಿದೆ. ಜತೆಗೆ ಕಳೆದ ಹದಿನೈದು ದಿನಗಳಿಂದ ನಡೆಯುತ್ತಿರುವ ನ್ಯಾಯಾಲಯದಲ್ಲಿನ ಕಲಾಪಗಳನು ಗಮನಿಸುತ್ತಿದ್ದರೆ ಈ ವಿಷಯ ಎಷ್ಟು ಸೂಕ್ಷ್ಮವಾಗಿದೆ ಎಂಬುದು ಅರಿವಾಗುತ್ತಿದೆ.

ಇಂಥ ಬಿಗುವಿನ ವಾತಾವರಣವಿರುವಾಗ ಶಿವಮೊಗ್ಗದಲ್ಲಿ ಹಿಂದೂ ಕಾರ್ಯಕರ್ತ ಹರ್ಷನನ್ನು ರಾಕ್ಷಸರಂತೆ ಹತ್ಯೆಗೈದ ಕೆಡಿ ಬ್ರದರ್ಸ್‌ ಗಳು ರಾಜ್ಯದಲ್ಲಿನ ಸೌಹಾರ್ದ, ಸಹಬಾಳ್ವೆಗೆ ಕೊಳ್ಳಿಯ ನಿಟ್ಟಿದ್ದಾರೆ. ಇಂಥ ವಾತಾವರಣದಲ್ಲಿ ಭಯಾನಕ ಜಾತ್ಯತೀತ ವನ್ನು ಮತ್ತು ಸಂವಿಧಾನವನ್ನು ಪ್ರತಿನಿಧಿಸುವ ಪಕ್ಷಗಳು ಹೇಗೆ ನಡೆದುಕೊಳ್ಳಬೇಕು? ಹೇಗೆಲ್ಲ ನಡೆಕೊಂಡು ಸಮಾಜವನ್ನು ಸಮಾನತೆಯನ್ನು ಪ್ರತಿನಿಧಿಸಬೇಕೆಂಬ ಹೊಣೆಗಾರಿಕೆಯಾಗಲಿ ಕನಿಷ್ಠ ಪರಿಜ್ಞಾನವೂ ಇದ್ದಂತಿಲ್ಲ. ಮೊನ್ನೆ ಅಪಘಾತದಲ್ಲಿ ಮತಪಟ್ಟ ಬೀದಿನಾಯಿ ಯೊಂದಕ್ಕೆ ನಮಿಡಿದ ಚಿತ್ರನಟಿಂiಬ್ಬಳು ತನ್ನ ಸಂಬಂಧಿಯೇ ಸತ್ತಂತೆ ಕಣ್ಣೀರಿಟ್ಟು ಮಾನವೀಯತೆ ಮೆರೆದಿದ್ದಳು.

ನಾಯಿಯ ಮೇಲಿನ ಆಕೆಗಿರುವ ಅನುಕಂಪವೂ ಈ ರಾಜಕಾರಣಿಗಳಿಗೆ ಮನುಷ್ಯನ ಮೇಲಿಲ್ಲವಾಯಿತೇ? ಮನುಷ್ಯನ ಸಾವು ನಾಯಿಗಿಂತ ಕಡೆಯಾಯಿತೇ? ಒಂದು ಬೀದಿನಾಯಿಗೆ ಈ ಮಟ್ಟದ ದಿವ್ಯಸ್ಪಂದನೆ ಇರುವಾಗ ಒಬ್ಬ ದೇಶ ಪ್ರೇಮಿ ಯುವಕನ ಕೊಲೆಯಾದಾಗ ಒಂದಷ್ಟು ಅನುಕಂಪ ಅಂತಃಕರಣವೂ ಇಲ್ಲದಾಗಿರುವುದು ಶೋಚನೀಯ. ಕೊಲೆಯಾಗಿರುವುದು ಯಾವುದೋ ಪ್ರಾಣಿಯಲ್ಲ. ಕೊಲೆ ಯಾಗಿರುವುದು, ರೋಡ್ ರಾಬರಿ, ಸರಗಳ್ಳ, ಪಿಕ್‌ಪ್ಯಾಕೆಟರ್,  ವಾಹನಗಳ್ಳ, ಗೋಕಳ್ಳನಲ್ಲ. ಕೊಲೆಯಾಗಿರುವುದು, ಈ ದೇಶದ ಋಣದಲ್ಲಿದ್ದು ವೈರಿದೇಶ ಪಾಕಿಸ್ತಾನದ ಪರವಾದ ಚಿಂತನೆ ಹೊಂದಿದವನಲ್ಲ.

ಕೊಲೆಯಾಗಿರುವುದು, ಈ ಮಣ್ಣಿನ ಅನ್ನ-ನೀರು-ಗಾಳಿಯನ್ನು ಪಡೆದು ಜಿಹಾದಿಯಂತೆ ವಾದಿಸುವ ಟಿವಿ ಡಿಬೇಟ್ ನ ಕಾಯಂ ಅಯೋಗ್ಯ ನಲ್ಲ. ಈ ದೇಶದ ಸಂವಿಧಾನ, ನ್ಯಾಯಾಲಯವನ್ನು ಗೌರವಿಸದೇ ತನ್ನ ಧರ್ಮವೇ ಮಿಗಿಲೆಂದು ತಾಲಿಬಾನತೆಯನ್ನು ಮೈಗೂಡಿಸಿ ಕೊಂಡ ಧರ್ಮಾಂಧನೂ ಅಲ್ಲ. ಕೊಲೆಯಾಗಿರುವುದು, ಇದೇ ಸಮಾಜದ ಶಾಸಕನ ಮನೆಗೆ, ಪೊಲೀಸ್ ಠಾಣೆಗೆ ಬೆಂಕಿ ಯಿಟ್ಟು ಬ್ರದರ್ಸ್ ಎಂಬ ಬಿರುದು ಪಡೆದವನಲ್ಲ. ಕೊಲೆಯಾಗಿರುವುದು, ಭಾರತವನ್ನು ತುಕಡೆ ಮಾಡುತ್ತೇನೆಂದು ಮೈಲೇಜು ಪಡೆದು ಕಾಂಗ್ರೆಸ್ ಪಕ್ಷ ಸೇರಿದವನಲ್ಲ. ಕೊಲೆಯಾಗಿರುವುದು, ಎಂಜಿನಿಯರಿಂಗ್, ವೈದ್ಯಕೀಯ ಓದಿಕೊಂಡು ಬಾಂಬ್ ಇಟ್ಟು ಸಿಕ್ಕಿಬಿದ್ದವನಲ್ಲ. ಕೊಲೆಯಾ ಗಿರುವುದು ಆಶಾ ಕಾರ್ಯಕರ್ತೆಯರ ಮೇಲೆ ದಾಳಿ ನಡೆಸಿ ಪುಂಡಾಟ ಮೆರೆದ ಅನಕ್ಷರಸ್ಥನಲ್ಲ.

ಕೊಲೆಯಾಗಿರುವುದು ಈ ದೇಶದ ಸೈನಿಕರ ಸಾವನ್ನು ಸಂಭ್ರಮಿಸಿದ ತಾಯಿಗಂಡನಲ್ಲವೇ ಅಲ್ಲ. ಕೊಲೆಯಾಗಿರುವುದು ತನ್ನದೇ ದೇಶವನ್ನು, ತನ್ನದೇ ಪರಂಪರೆ-ಸಂಸ್ಕೃತಿಯನ್ನು ಹೆಚ್ಚಾಗಿ ಪ್ರೀತಿಸುವ, ಅಭಿಮಾನಿಸುವ ಅಪ್ಪಟ ದೇಶಪ್ರೇಮಿಯಾಗಿದ್ದ ಒಬ್ಬ ಯುವಕ. ಹೀಗಿರುವಾಗ ಜಾತ್ಯತೀತ ಸಮಾಜದಲ್ಲಿ ಎಲ್ಲರ ವೋಟುಗಳನ್ನು ಪಡೆಯುವ ರಾಜಕೀಯ ಪಕ್ಷಗಳು ಮತ್ತು ನಾಯಕರು ಇಂಥ ಸಾವಿನಲ್ಲಿ ಹೇಗೆ ನಡೆದುಕೊಳ್ಳಬೇಕು? ಮೊದಲಿಗೆ ಇದು ನಿರ್ದಯಿ ಸಾವು.

ಯಾವುದೇ ಪಕ್ಷದ ಮುಖಂಡರಿರಲಿ ಮೊದಲು ಆತನ ಮನೆಗೆ ತೆರಳಿ ಅವರ ಮನೆಯವರಿಗೆ ಸಾಂತ್ವನ ಹೇಳಿಬರುವುದು ಸಹಜ ಮನಸ್ಥಿತಿ. ಹಾಗೆ ಮಾಡಿದ್ದರೆ ಕಳೆದುಕೊಳ್ಳುವುದೇನೂ ಇರಲಿಲ್ಲ. ಸಮಾಜದ ಮೆಚ್ಚುಗೆ ಗಳಿಸುತ್ತಿದ್ದರು. ಕ್ಷಮಿಸಿ! ಇಂಥ ಮನಃಸ್ಥಿತಿಯನ್ನು ನಿರೀಕ್ಷಿಸಲು ಕಾರಣ ಮೊನ್ನೆ ಕಾಲೇಜು ವಿದ್ಯಾರ್ಥಿನಿಯೊಬ್ಬಳು ‘ಅಲ್ಹಾ ಹೋ ಅಕ್ಬರ್’ ಎಂದ ಕೂಡಲೇ ಆಕೆಯ ಮನೆಗೆ ತೆರಳಿದ ರಾಜಕೀಯ ಪಕ್ಷಗಳ ನಾಯಕರು, ಹುಟ್ಟು ಸ್ವಧರ್ಮಾಭಿಮಾನಿಗಳು ಲಂಕ್ಷಾಂತರ ರುಪಾಯಿ, ನೈತಿಕ ಬೆಂಬಲ ನೀಡಿಬಂದಿದ್ದಾರೆ. ಆದರೆ ಬಾಳಿ ಬದುಕಬೇಕಿದ್ದ ದೇಶಭಕ್ತ ಯುವಕನೊಬ್ಬನನ್ನು ಪ್ರಾಣಿಯಂತೆ ಕೊಂದಿರುವಾಗ ಇವರೆಲ್ಲರಿಗೂ ಏನೂ ಅನಿಲ್ಲ.

ಇದೆಲ್ಲ ಎಂಥ ಸಂದೇಶವನ್ನು ನೀಡುತ್ತಿದೆ ಹೇಳಿ? ಅದೇ ಮಂಗಳೂರಿನಲ್ಲಿ ಸಿಎಎ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಗೋಲಿಬಾರ್‌ ನಿಂದಾಗಿ ಮೃತರಾದ ಮುಸಲ್ಮಾನರ ಮನೆಗಳಿಗೆ ಇದೇ ಪಕ್ಷಗಳ ಮುಖಂಡರು ತೆರಳಿ ಎದೆಬಡಿದುಕೊಂಡು ಸಾಂತ್ವನ ಹೇಳಿ ಕೈಗೊಂದಿಷ್ಟು ಲಕ್ಷಗಳನ್ನು ಕೊಟ್ಟು ಬರುತ್ತಾರೆ. ಆಸ್ಪತ್ರೆಗಳಿಗೆ ತೆರಳಿ ಗಾಯಗೊಂಡ ಮುಸಲ್ಮಾನರಿಗೆ ನೈತಿಕ ಬೆಂಬಲ ನೀಡಿಬರುತ್ತಾರೆ.
ಗೋಲಿಬಾರ್‌ನಲ್ಲಿ ಮತರಾದ ಕುಟುಂಬಗಳಿಗೆ ದೂರದ ಪಶ್ಚಿಮಬಂಗಾಳ, ಕೇರಳದಿಂದೆಲ್ಲ ಆರ್ಥಿಕ ನೆರವು, ನೈತಿಕ ಸ್ಥೈರ್ಯ ದೊರಕು ತ್ತದೆ.

ನಾಡಿನ ಕಾಂಗ್ರೆಸು, ಜೆಡಿಎಸ್ ಪಕ್ಷಗಳೂ ಅವರಿಗೆ ಲಕ್ಷಗಟ್ಟಲೆ ಹಣನೀಡಿ ಬರುತ್ತವೆ. ಹೀಗೆ ಎಲ್ಲ ಧರ್ಮದವರ ಮತಭಿಕ್ಷೆಯಾಚಿಸುವ ರಾಜಕಾರಣಿಗಳೇಕೆ ಕೊಲೆಯಾದ ಹರ್ಷನ ಮನೆಗೆ ತೆರಳುವುದಿಲ್ಲ? ಅವನೂ ಒಬ್ಬ ಮತದಾರನಲ್ಲವೇ, ಆತನೂ ಈ ದೇಶದ ಪ್ರಜೆಯಲ್ಲವೇ? ಇಂಥ ಪ್ರತ್ಯೇಕ ಮನಸ್ಥಿತಿ ಇರುವು ದರಿಂದಲೇ ಇಂಥ ಪಕ್ಷಗಳು ಸಂವಿಧಾನಿಕ ರಾಜಕೀಯ ಪಕ್ಷಗಳೋ ಅಥವಾ ಕೋಮು ಸಂಘಟನೆಯೋ ಎಂಬ ಅನುಮಾನಕ್ಕೆ ಕಾರಣವಾಗಿದೆ. ಜತೆಗೆ ಇಂಥ ಕೋಮು ಪರವಾದ ಪಕ್ಷಗಳಿಗೆ ಮುಂದಿನ ಚುನಾವಣೆ ಯಲ್ಲಿ ಮತದಾರರು ಖಂಡಿತಾ ಶ್ರದ್ಧಾಂಜಲಿ ಅರ್ಪಿಸುತ್ತಾರೆಂದರೆ ಅತಿಶಯೋಕ್ತಿಯಲ್ಲ.

ಹರ್ಷನ ಬರ್ಬರ ಹತ್ಯೆಯ ನಂತರ ಇವರ ಹೇಳಿಕೆಗಳನ್ನು ಗಮನಿಸಿ. ಮೊದಲಿಗೆ ಒಂದು ಸಾವಿಗೆ ಸಂತಾಪ ವಿಷಾದ ವ್ಯಕ್ತಪಡಿಸದೇ ಸೆಕ್ಷನ್ ಗಳನ್ನು ಉಲ್ಲೇಖಿಸಿ ‘ಕರ್ಫ್ಯೂ ಜಾರಿಯಲ್ಲಿದೆ, ಶವ ಮೆರವಣಿಗೆ ಮಾಡಬಾರದಿತ್ತು, ಹತ್ಯೆಯ ನಂತರ ಹಲವರಿಗೆ ನಷ್ಟವಾಗಿದೆ, ತಲೆಗೆ ಪೆಟ್ಟು ತಿಂದಿದ್ದಾರೆ (ಅದೂ ಅಲ್ಪಸಂಖ್ಯಾತರ ಪರವಾಗಿಯೇ)’ ಎನ್ನುತ್ತಾರೆ. ಮತ್ತೊಬ್ಬ ಇದು ಸರಕಾರದ ವೈಫಲ್ಯ, ಪೊಲೀಸ್ ಇಲಾಖೆಯ ಬೇಜವಾಬ್ದಾರಿತನ, ಇದೆಲ್ಲ ಬಿಜೆಪಿ ಮತ್ತು ಸರಕಾರದ ಸಂಚು ಎನ್ನುತ್ತಾನೆ. ನರಿಪ್ರಸಾದನೊಬ್ಬ ಕೊಂದವರು ಮುಸಲ್ಮಾನ ಗೂಂಡಾಗಳೇನಾ? ಎಂಬುದಕ್ಕೆ ಅಫಿಡವಿಟ್ಟು ಕೇಳುತ್ತಾನೆ.

ದೇಶದ್ರೋಹಿ ಸಂಘಟನೆಯ ನಾಯಕ ನೊಂದಿಗೆ ಮತ್ತೊಬ್ಬ ಸುದ್ದಿವಾಹಿನಿಗಳ ಡಿಬೇಟ್ ತೊಟ್ಟಿ ಯಂತಾಗಿರುವನೊಬ್ಬ ಸತ್ತ ಯುವಕ ಒಬ್ಬ ಕ್ರಿಮಿನಲ್, ರೌಡಿಶೀಟರ್ ಆಗಿದ್ದ ಎನುವುದರ ಮೂಲಕ ಆತ ಇಂಥ ಸಾವು ಸಾಯಲು ಯೋಗ್ಯನಾಗಿದ್ದ ಎಂದು ಫರ್ಮಾನು
ಹೊರಡಿಸುತ್ತಾರೆ. ಅಂದರೆ ಇವರ ಹಿಂಬಾಲಕರೆಲ್ಲ ನೊಬೆಲ್ ಪುರಸ್ಕಾರಕ್ಕೆ ಸ್ಪಽಸಲಿರುವ ಶಾಂತಿದೂತರೇ? ಅಸಲಿಗೆ ಇವರುಗಳೇ ಮತಾಂಧರುಗಳ, ದೇಶದ್ರೋಹಿಗಳ ಹೆಡ್‌ಮಾಸ್ಟರ್ಗಳಾಗಿದ್ದಾರೆ.

ಹೀಗೆ ಇವರೆಲ್ಲರ ಕಾಂಡೋಮ್ ಸ್ಟೇಟ್‌ಮೆಂಟ್ ಗಳನ್ನು ಗಮನಿಸಿದರೆ ಯುವಕನ ಸಾವು ಇವರ ಧರ್ಮಾಂಧತೆಯಲ್ಲಿ ನಿರೀಕ್ಷಿತ ಸಾವು ಮತ್ತು ರಾಜಕೀಯ ಮನಃಸ್ಥಿತಿಯಲ್ಲಿ ಸಂಬಂಧವಿಲ್ಲದ ಸಾವು. ಆದರೆ ಇನ್ನಾವುದೇ ಮೂಲೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಹಿಂದೂಗಳು ಹತ್ಯೆ ಮಾಡಿದರಂತೂ ಇವರ ಸ್ಥಿತಿಮಾತ್ರ ಹದಯ ವಿದ್ರಾವಕ, ಕರುಣ ಚಿಂತಾಜನಕ. ಅಷ್ಟೇ ಏಕೆ ಈಗ ನಡೆಯುತ್ತಿರುವ ಯುದ್ಧದ ಉಕ್ರೇನ್ ಮುಸ್ಲಿಂ ಬಾಹುಳ್ಯ ದೇಶವಾಗಿದಿದ್ದರೆ ಇಷ್ಟೊತ್ತಿಗೆ ‘ಉಕ್ರೇನ್ ಉಳಿಸಿ’ ಎಂಬ ಹ್ಯಾಶ್‌ಟ್ಯಾಗ್‌ಗಳು ಮೇಣದಬತ್ತಿಗಳು ಜಗಮಗಿಸುತ್ತಿದ್ದವು. ಬೇರೆಲ್ಲೂ ಬೇಡ, ಶಿವಮೊಗ್ಗದಲ್ಲಿ ಉದ್ರಿಕ್ತ ಹಿಂದೂ ಯುವಕರು ಹಗೆತನದಲ್ಲಿ ಮತ್ತೊಬ್ಬನ ಸಾವಿಗೆ ಕಾರಣವಾಗಿದಿದ್ದರೆ ಇವರೆಲ್ಲರ
ಆರ್ತನಾದ ಹೇಗಿರುತ್ತಿತ್ತೆಂಬುದನು ಊಹಿಸಿ ಕೊಳ್ಳುವುದು ಕಷ್ಟವೇನಲ್ಲ.

ಇಂಥ ಒಂದೇ ಬದಿಯ ಒಂದೇ ಕೋಮಿನ ಪರವಾದ ಮನಃಸ್ಥಿತಿ, ಮನುಷ್ಯ ವಿರೋಧಿ ನಡೆ, ಹಿಂದೂಗಳನ್ನು ಅಸ್ಪೃಶ್ಯರಂತೆ ಕಾಣುತ್ತಿರು ವುದು ಬಹುಸಂಖ್ಯಾತ ಹಿಂದೂಗಳಲ್ಲಿ ಎಂಥ ಸಂದೇಶವನ್ನು ನೀಡುತ್ತಿದೆ ಯೆಂದರೆ ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್ ಪಕ್ಷವು ಒಂದು ಇಸ್ಲಾಮಿಕ್ ಸಂಘಟನೆ ಮಾತ್ರವಷ್ಟೇ! ಎಂಬ ಚರ್ಚೆಗೆ ಪುಷ್ಟಿ ನೀಡುತ್ತಿದೆ.

ಹೀಗಾಗಿ ದೇಶದಲ್ಲಿ ಶಾಂತಮೂರ್ತಿಯಾಗಿದ್ದ ಪರಮ ಪರಧರ್ಮ ಸಹಿಷ್ಣುಗಳಾಗಿದ್ದ ಹಿಂದೂಗಳ ಸಾತ್ವಿಕ ಹಿಂದೂತ್ವದ ಸಹನೆಯನ್ನು ಪರೀಕ್ಷಿಸುವಂತಾಗಿದೆ. ಇನ್ನು ಕೊಲೆಯಾದ ಹರ್ಷ ಎಷ್ಟು ಸಂಭಾವಿತ ನಾಗಿದ್ದನೆಂದು ಗಮನಿಸ ಹೊರಟರೆ, ಈ ಅಡ್ಡಕ ಸುಬಿಗಳು ಹೇಳುವಂತೆ ಆತ ಕ್ರಿಮಿನಲ್,  ರೌಡಿ ಶೀಟರ್ ಅಲ್ಲವೇ ಅಲ್ಲ. ಇದನ್ನು ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯೇ ಸ್ಪಷ್ಟಪಡಿಸಿದ್ದಾರೆ.

ಒಂದೆರಡು ಪ್ರಕರಣದಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರೂ ಸಮಾಜಘಾತಕನಾಗಿರಲಿಲ್ಲ. ಆತನ ಸಾಮಾಜಿಕ ಜಾಲತಾಣಗಳ ಪೋಸ್ಟ್‌ಗಳನ್ನು ಪರಿಶೀಲಿಸಿದರೆ ಉನ್ಮಾದ ಜಿಹಾದಿಯಂತೆ ಅಪಾಯಕಾರಿ ಧರ್ಮಾಂಧನಲ್ಲ. ಅರೆಬೆಂದ ಅನಕ್ಷರಸ್ಥನಲ್ಲ, ಗುಜರಿ ಮನಃಸ್ಥಿತಿಯ ಪುಂಡನಲ್ಲವೇ ಅಲ್ಲ. ಆತನ ಪ್ರಬುದ್ಧವಾದ ದೇಶಾಭಿಮಾನ, ರಾಷ್ಟ್ರೀಯತೆ ಪ್ರತಿಪಾದನೆ, ಅಕ್ಷರಜ್ಞಾನ, ತಿಳಿವಳಿಕೆ,
ತನ ಧರ್ಮದ ಮೇಲಿನ ಹೆಮ್ಮೆ ಪ್ರೀತಿ ಗೌರವ ಆತನಲ್ಲಿ ತುಂಬಿ ತುಳುಕುತ್ತಿರುವುದು ಕಾಣುತ್ತದೆ.

ಜತೆಗೆ ಅನ್ಯಧರ್ಮದ ಮೇಲಿನ ಆಕ್ರಮಣ ಅಹೇಳನಗಳಿಲ್ಲ. ಮುಖ್ಯವಾಗಿ ಆತನ ಮನೆಯ ಸುತ್ತಮುತ್ತಲಿನ ಮಂದಿ ಆತನನ್ನು ಗೌರವಿಸಿ ಗುಣಗಾನ ಮಾಡಿ ಪ್ರಾಮಾಣಿಕ ಕಂಬನಿ ಇಡುತ್ತಿದ್ದಾರೆ. ದೇಶದ ನೆಲ ಜಲ ಸುಖ ಅನುಭವಿಸಿ ಅನ್ಯ ದೇಶಗಳ ಪರ ಅಂತರಂಗದ ಒಲವನ್ನು ಹೊಂದಿರುವ ದೇಶದ್ರೋಹಿಗಳ ಮನಃಸ್ಥಿತಿಯ ಅನಾವರಣವನ್ನು ಇಂದು ನಾವೆಲ್ಲರೂ ನೋಡುತ್ತಿದ್ದೇವೆ. ಆದರೆ ಸ್ವಧರ್ಮ ವನ್ನು ಪ್ರೀತಿಸುವ, ಸ್ವಧರ್ಮದ ಮೇಲಿನ ದಾಳಿಗಳನ್ನು ಎದುರಿಸುವ, ಸ್ವಧರ್ಮವನ್ನು ಉಳಿಸಿಕೊಳ್ಳುವ ಗುಣಗಳನ್ನು ಬೆಳಸಿ ಕೊಳ್ಳುವುದೇ ಮಹಾ ಅಪರಾಧವೇ? ಶತಶತಮಾನಗಳಿಂದ ಹಿಂದೂ ಧರ್ಮದ ಮೇಲಾಗುತ್ತಿರುವ ಆಕ್ರಮಣಗಳು, ಹಿಂದೂ ಧರ್ಮದಲ್ಲೇ
ಇರುವ ನಾಲಾಯಕ್ಕು ನಾಯಕರು ಲದ್ದಿಜೀವಿಗಳು ವಿಚಾರ ವ್ಯಾದಿಗಳು ಡೋಂಗಿಗಳನ್ನು ಎದುರಿಸಿ ಸ್ವಧರ್ಮವನು ರಕ್ಷಿಸಿಕೊಳ್ಳುವ ನೈತಿಕ ಹಕ್ಕು ಹಿಂದೂಗಳಿಗಿಲ್ಲವೇ?.

ನೆನಪಿರಲಿ ಹಿಂದುತ್ವದ ಅಮಲು ಉನ್ಮಾದ ಅತಿರೇಖ ಕೋಮುವಾದಿತನ ಧರ್ಮಾಂಧತೆ ಇವೆಲ್ಲವೂ ಹಿಂದೂಧರ್ಮದಲ್ಲಿ ಹಿಂದೆಯೂ ಇರಲಿಲ್ಲ, ಇಲ್ಲಿಯವರೆಗೂ ಇರಲೇ ಇಲ್ಲ. ಯಾವಾಗ ಈ ಕುಲಗೆಟ್ಟ ರಾಜಕಾರಣಿಗಳ ವೋಟ್ ಬ್ಯಾಂಕ್ ಓಲೈಕೆ, ಮಲತಾಯಿ ಧೋರಣೆ,
ಹಿಂದೂಗಳ ಶೋಷಣೆ, ದಾರಿತಪ್ಪಿದ ರಾಷ್ಟ್ರನಿಷ್ಠೆ, ಇಂಥವರ ಬೆಂಬಲಪಡೆದ ರಾಷ್ಟ್ರದ್ರೋಹಿಗಳು ಹೆಚ್ಚಾಗುತ್ತ ಬಂದರೋ ಆಗಲೇ ಹಿಂದೂಗಳಲ್ಲಿ ದೇಶಾಭಿಮಾನ ಸ್ವಧರ್ಮದ ಮೇಲಿನ ಅಭಿಮಾನ ಮತ್ತು ಸ್ವಯಂ ರಕ್ಷಣೆಯ ಜಾಗೃತಿಯಾದದು.

ಇದೇ ಇಂದು ಹರ್ಷನಂಥ ಯುವಕನನ್ನು ಸೃಷ್ಟಿಸಿದ್ದು. ಯಾವ ದೇಶದಲ್ಲೂ ಇಲ್ಲದ ಅತ್ಯಂತ ಉದಾರತೆಯ ಸಂವಿಧಾನ ನಮ್ಮ ದೇಶ ದಲ್ಲಿದೆ. ಇಲ್ಲಿ ಎಲ್ಲರೂ ಸಮಾನರು ಪ್ರಭುತ್ವವುಳ್ಳ ಪ್ರಜೆಗಳು. ಸರ್ವಧರ್ಮ ಸಹಿಷ್ಣುಗಳೆಂಬುದನ್ನು ಎತ್ತಿ ಹಿಡಿದಿದೆ. ಆದರೆ ಈಗ ನಡೆಯು ತ್ತಿರುವ ಬೆಳವಣಿಗೆಗಳನ್ನು ಗಮನಿಸಿದರೆ ಧರ್ಮಾಂಧತೆ ದೈತ್ಯಾಕರ ಪಡೆದು ನ್ಯಾಯಾಲಯ ಸಂವಿಧಾನಕ್ಕೆ ಬೆಲೆಯಿಲ್ಲದಂತಾಗಿದೆ. ಕೊನೆಯದಾಗಿ ನಮ್ಮ ನಾಡಿನ ಧರ್ಮರಕ್ಷಕರಾದ ಕಾವೀಧಾರಿಗಳೊಳಗಿನ ಜಾತಿ ಮತ್ತು ರಾಜಕೀಯ ಪ್ರತಿನಿಧಿ ಸ್ವಾಮೀಜಿ ಗಳಿಗೆ ಕೊಲೆಯಾದ ಹರ್ಷನ ಜಾತಿ ಯಾವುದೆಂದು ಸರಿಯಾದ ಮಾಹಿತಿ ಇನ್ನೂ ದಕ್ಕಿದಂತಿಲ್ಲ. ಹೀಗಾಗಿ ಅವರುಗಳು ಗಾಢ ರಣ ತಪೋ ಭಂಗಿಯಲ್ಲಿದ್ದಾರೆ!!.