ತನ್ನಿಮಿತ್ತ
ಲಕ್ಷ್ಮೀ ಕಿಶೋರ‍್ ಅರಸ್ ಕೂಡ್ಲೂರು
ವಿಜಯದಶಮಿಯಂದು ಆನೆಯ ಮೇಲೆ ‘ಚಿನ್ನದಂಬಾರಿಯಲ್ಲಿ’ ಕುಳಿತು ವಾದ್ಯಮೇಳ, ಸೇನಾ ತುಕಡಿ, ಅಶ್ವಪಡೆ, ಗಜಪಡೆ, ಒಂಟೆದಳ ಎಲ್ಲಾ ರೀತಿಯ ರಕ್ಷಣಾ ದಳಗಳನೊಳಗೊಂಡು ರಾಜಬೀದಿಗಳಲ್ಲಿ ಮೆರವಣಿಗೆ ಮಾಡಿ, ವಿಜಯಯಾತ್ರೆಯ ಸಂಕಲ್ಪ ವಾಗಿ ಬನ್ನಿ ಪೂಜೆ ಮಾಡುವ ಪರಿಪಾಠವನ್ನು ರಾಜ ಒಡೆಯರು ಹುಟ್ಟುಹಾಕುತ್ತಾರೆ 1610 ರಲ್ಲಿ ಪ್ರಥಮ ಬಾರಿಗೆ ದಸರಾ ಮಹೋತ್ಸವವನ್ನು ಆಚರಣೆಗೆ ತಂದ ಕೀರ್ತಿ ರಾಜ ಒಡೆಯರಿಗೆ ಸಲ್ಲುತ್ತದೆ.
ಭಾರತವಷ್ಟೇ ಅಲ್ಲ ಇಡೀ ಪ್ರಪಂಚದಾದ್ಯಂತ ಐತಿಹಾಸಿಕ, ಸಾಂಸ್ಕೃತಿಕ, ವೈಭವಪೂರಿತವಾದ ರಾಜವೈಭವವನ್ನು, ನಾಡಿನ ಸಾಂಸ್ಕೃತಿಕತೆಯನ್ನು ಬಿಂಬಿಸುವ ಏಕೈಕ ಹಬ್ಬವೆಂದು, ಮೆರವಣಿಗೆಯೆಂದು ಯಾವುದಾದರೂ ಇದ್ದರೆ ಅದು ನಮ್ಮ ಕನ್ನಡ ನಾಡಿನ ಹೆಮ್ಮೆಯ ಪ್ರತೀಕವಾದ ‘ಮೈಸೂರು ದಸರಾ’ ಮಾತ್ರ.
ದಸರಾ ಕನ್ನಡನಾಡಿನ ‘ನಾಡ ಹಬ್ಬವೆಂದೇ’ ಪ್ರಖ್ಯಾತಿ ಹೊಂದಿದೆ. ನಾಡಿನ ಪ್ರತಿಯೊಬ್ಬರು ಸಹ ಶ್ರದ್ಧಾ ಭಕ್ತಿಯಿಂದ ದಸರಾ ಹಬ್ಬವನ್ನು ಆಚರಿಸುತ್ತಾರೆ ಇಂತಹ ದಸರಾ ಹಬ್ಬವನ್ನು, ನವರಾತ್ರಿಯ ವೈಭವವನ್ನು, ದಸರಾ ಸಮಯದಲ್ಲಿ ಸಾಂಸ್ಕೃತಿಕ ಮೆರವಣಿಗೆ, ಹಲವಾರು ರೀತಿಯ ರಾಜವೈಭವದ ಕುರುಹನ್ನು, ವಿಜಯ ದಶಮಿಯಂದು ಚಿನ್ನದಂಬಾರಿಯಲ್ಲಿ ತಾಯಿ ಚಾಮುಂಡೇಶ್ವರಿ ಅಮ್ಮನವರ ಕಣ್ತುಂಬಿಕೊಳ್ಳುವ ದಸರಾ ಮಹೋತ್ಸವವನ್ನು ಮೈಸೂರು ಅರಸರು ಇಂದಿನ ಪೀಳಿಗೆಗೆ ಬಳುವಳಿಯಾಗಿ ನೀಡಿದ್ದಾರೆ ಎಂದರೆ ತಪ್ಪಾಗ ಲಾರದು.
ದಸರಾ ಹಬ್ಬದ ಪರಿಕಲ್ಪನೆ ಶುರುವಾಗಿದ್ದು ‘ವಿಜಯನಗರದ ಅರಸರ’ ಕಾಲದಲ್ಲಿ ನವರಾತ್ರಿ ಆಚರಣೆ ವಿಜಯ ದಶಮಿ ದಿನದಂದು ವಿಜಯಯಾತ್ರೆಯ ರೀತಿಯಲ್ಲಿ ಆನೆಯ ಮೇಲೆ ಮೆರವಣಿಗೆ ನಡೆಯುತ್ತಿತ್ತು, ಶತ್ರುಗಳೊಡನೆ ಯುದ್ಧವನ್ನು ಜಯಿಸಿದ ಕುರುಹಾಗಿ ವಿಜಯಯಾತ್ರೆಯನ್ನು ಕೈಗೊಳ್ಳುತ್ತಿದ್ದರು. ವಿಜಯನಗರ ಸಾಮ್ರಾಜ್ಯದ ಪತನಾನಂತರ ದಕ್ಷಿಣದಲ್ಲಿ ಬಲಿಷ್ಠವಾಗಿ ರೂಪುಗೊಂಡ ‘ಮೈಸೂರು ಸಂಸ್ಥಾನದ ಅರಸರು’ ಈ ದಸರಾ ಆಚರಣೆಯನ್ನು ಮುಂದುವರಿಸಿದರು. ವಿಜಯನಗರದ ಶ್ರೀರಂಗ ಪಟ್ಟಣ ರಾಯಭಾರಿಯಾದ ತಿರುಮಲರಾಯ ನನ್ನು ‘ರಾಜ ಒಡೆಯರು’ ಸೋಲಿಸುತ್ತಾರೆ.
ತಿರುಮಲರಾಯ ಪರಾಕ್ರಮಿಯಾದ ರಾಜ ಒಡೆಯರ ಮುಂದೆ ಸೋತು ಮಂಡಿಯೂರಿ ಅವರಿಗೆ ಶರಣಾಗಿ ಇನ್ನು ಮುಂದೆ ದಸರಾ ವೈಭವವನ್ನು ಮುಂದುವರಿಸು ವವರು ಯಾರಾದರೂ ಇದ್ದರೆ ಅದು ಮೈಸೂರು ಸಂಸ್ಥಾನ ಮಾತ್ರ ಎಂದು ತಾನು ಮಣ್ಣಿನಲ್ಲಿ ಹೂತಿಟ್ಟಿದ್ದ ವಿಜಯನಗರ ಕಾಲದ ರತ್ನಖಚಿತ ಸಿಂಹಾಸನವನ್ನು ರಾಜ ಒಡೆಯರಿಗೆ ನೀಡುತ್ತಾನೆ. ಅಂದಿನಿಂದ ಮೈಸೂರಿನ ಪ್ರಸಿದ್ಧ ದೊರೆಗಳಾದ ಯದುಕುಲ ತಿಲಕ, ಹರಿರಾಯರಗಂಡ ಬಿರುದಾಂಕಿತ ‘ರಾಜ ಒಡೆಯರು’ ಸ್ವರ್ಣ ಸಿಂಹಾಸನದ ಮೇಲೆ ಕುಳಿತು ನವರಾತ್ರಿ ಸಂದರ್ಭದಲ್ಲಿ ದಬಾರ್ ನಡೆಸುತ್ತಾ ಕರ್ನಾಟಕರತ್ನ ಸಿಂಹಾಸನಾರೂಢರಾಗಿ, ಕರ್ನಾಟಕ ದಿವ್ಯರತ್ನ ಸಿಂಹಾ ಸನಾಧೀಶ್ವರರಾಗಿ ದಸರಾ ಹಬ್ಬಕ್ಕೆ ವಿಶೇಷ ಮೆರಗು ನೀಡಿ ನವರಾತ್ರಿಯ ಒಂಬತ್ತು ದಿನಗಳ ಕಾಲ ಆದಿಶಕ್ತಿಯನ್ನು ಪೂಜಿಸುತ್ತಾ ಆಯುಧ ಪೂಜೆಯೆಂದು ಅರಮನೆಯ ಎಲ್ಲ ವಸ್ತುಗಳನ್ನು ಪೂಜಿಸುವ ಪರಿಪಾಠವನ್ನು ರೂಢಿಸಿಕೊಂಡು ಲೋಕಕ್ಕೆ ಆಯುಧಪೂಜೆಯ ಮಹತ್ವವನ್ನು ತಿಳಿಸಿದ್ದು ಇದೇ ರಾಜ ಒಡೆಯರು.
ಮತ್ತು ನವರಾತ್ರಿಯ ಕೊನೆಯ ದಿನವಾದ ವಿಜಯದಶಮಿಯಂದು ಆನೆಯ ಮೇಲೆ ‘ಚಿನ್ನದಂಬಾರಿಯಲ್ಲಿ’ ಕುಳಿತು ವಾದ್ಯಮೇಳ, ಸೇನಾ ತುಕಡಿ, ಅಶ್ವಪಡೆ, ಗಜಪಡೆ, ಒಂಟೆದಳ ಎಲ್ಲಾ ರೀತಿಯ ರಕ್ಷಣಾ ದಳಗಳನೊಳಗೊಂಡು ರಾಜಬೀದಿಗಳಲ್ಲಿ ಮೆರವಣಿಗೆ ಮಾಡಿ, ವಿಜಯಯಾತ್ರೆಯ ಸಂಕಲ್ಪ ವಾಗಿ ಬನ್ನಿ ಪೂಜೆ (
ಶಮಿವೃಕ್ಷ ಪೂಜೆ) ಮಾಡುವ ಪರಿಪಾಠವನ್ನು ರಾಜ ಒಡೆಯರು ಹುಟ್ಟುಹಾಕುತ್ತಾರೆ 1610 ರಲ್ಲಿ ಪ್ರಥಮ ಬಾರಿಗೆ ದಸರಾ ಮಹೋತ್ಸವವನ್ನು ಆಚರಣೆಗೆ
ತಂದ ಕೀರ್ತಿ ರಾಜ ಒಡೆಯರಿಗೆ ಸಲ್ಲುತ್ತದೆ. ಮುಂದೆ ‘ಜಯಚಾಮರಾಜ ದತ್ತ ಒಡೆಯರ’ ಕಾಲದವರೆಗೂ ಚಿನ್ನದ ಅಂಬಾರಿಯಲ್ಲಿ ಮಹಾರಾಜರುಗಳೇ ಮೆರವಣಿಗೆ ಹೋಗುತ್ತಾರೆ ಆದರೆ ಪ್ರಜಾಪ್ರಭುತ್ವ ವ್ಯವಸ್ಥೆ ಬಲಿಷ್ಠಗೊಂಡ ನಂತರ 1971 ರಿಂದ ಆಚೆಗೆ ಅಂಬಾರಿಯಲ್ಲಿ ತಾಯಿ ಚಾಮುಂಡೇಶ್ವರಿ ಮೆರವಣಿಗೆ ನಡೆಯುತ್ತದೆ.
ಇಂದಿಗೂ ಇದೇ ಮುಂದುವರಿದಿದೆ 1971 ತನಕ ದಸರಾ ಮಹೋತ್ಸವವೂ ಮೈಸೂರು ಅರಮನೆಯಿಂದಲೇ ನಡೆಸಲಾಗುತ್ತಿತ್ತು ಅಂದು ಮಹಾರಾಜ
ರುಗಳು ಅಂಬಾರಿಯಲ್ಲಿ ಕೂತು ರಾಜಗಾಂಭೀರ್ಯದಿಂದ ಸಾಗುತ್ತಿದ್ದರು ಇದನ್ನು ಕಣ್ತುಂಬಿಕೊಳ್ಳಲು ಜನತೆ ಸಾಗರೋಪಾದಿಯಾಗಿ ಬರುತ್ತಿದ್ದರು. ಆದರೆ 1971 ರಲ್ಲಿ ಕೇಂದ್ರ ಸರಕಾರ ಮಹಾರಾಜರಿಗೆ ನೀಡಿದ ವಿಶೇಷ ಸವಲತ್ತುಗಳನ್ನು ರದ್ದುಗೊಳಿಸಿ ರಾಜಧನವನ್ನು ರದ್ದು ಮಾಡುತ್ತಾರೆ. ಈ ಕಾಯ್ದೆಯ ನಂತರ ಮಹಾರಾಜ ಜಯಚಾಮರಾಜ ಒಡೆಯರು ಆರ್ಥಿಕ ಮುಗ್ಗಟ್ಟನ್ನು ಅನುಭವಿಸುತ್ತಾರೆ.
ಅಂದಿನ ಕೇಂದ್ರಸರಕಾರದ ಕಿರುಕುಳದಿಂದ ಬೇಸತ್ತು ಅಲ್ಲಿಂದಾಚೆಗೆ ದಸರಾ ಹಬ್ಬವನ್ನು ಸರಕಾರ ನಡೆಸಬೇಕೆಂದು ಪತ್ರ ಬರೆಯುತ್ತಾರೆ. ಮಹಾರಾಜರ ಪತ್ರದಂತೆ ಅಂದಿನ ರಾಜ್ಯ ಸರಕಾರವು ದಸರಾ ಹಬ್ಬವನ್ನು ನಾಡಹಬ್ಬವಾಗಿ ಘೋಷಿಸಿ ಸರಕಾರದ ವತಿಯಿಂದ ಆಚರಿಸುತ್ತಾರೆ. ಮುಂದೆ ಎಲ್ಲಾ ಸರಕಾರಗಳು ನಾಡಹಬ್ಬವನ್ನು ಮುಂದುವರಿಸಿಕೊಂಡು ಹೋಗುತ್ತಿವೆ ಏನೇ ಆಗಲಿ ಸರಕಾರ ಎಷ್ಟೇ ಖರ್ಚು ಮಾಡಿದರು, ವಿಶಿಷ್ಟ ಕಾರ್ಯಕ್ರಮಗಳನ್ನು ರೂಪಿಸಿದರು ಸಹ ದಸರಾ ಮೆರಗು ಮೈಸೂರು ಮಹಾರಾಜರ ಕಾಲದಲ್ಲಿ ಜರುಗುತ್ತಿದ್ದ ರೀತಿ ಆ ರಾಜವೈಭವದ ವಿಜೃಂಭಣೆ, ಅಂಬಾರಿಯಲ್ಲಿ ಮಹಾರಾಜರ ದರ್ಶನ, ಅರಮನೆಯ ಸಂಗೀತಗಾರರ ಮೆರವಣಿಗೆ, ಗಜಪಡೆ, ಅಶ್ವಪಡೆ, ಮುಂತಾದ ಸೈನಿಕ ತುಕಡಿಗಳ ಐತಿಹಾಸಿಕ ವೈಭವದ ಮೆರವಣಿಗೆಯನ್ನು, ರಾಜಾಡಳಿತ ಕಾಲದ ದಸರಾ ಪರಂಪರೆಯನ್ನು ಸರಕಾರಗಳು ಖಂಡಿತ ನೀಡಲು ಸಾಧ್ಯವಿಲ್ಲ…
ಮೈಸೂರು ಮಹಾರಾಜರ ಕಾಲದಲ್ಲಿನ ದಸರಾ ವೈಭವ…
ರಾಜ ಒಡೆಯರ ನಂತರ ಬಂದ ಪ್ರತಿಯೊಬ್ಬ ದೊರೆಗಳು ಸಹ ಪ್ರತಿವರ್ಷ ಚಾಚೂತಪ್ಪದೆ ದಸರಾ ಮಹೋತ್ಸವವನ್ನು ವರ್ಷದಿಂದ ವರ್ಷಕ್ಕೆ ವಿಜೃಂಭಣೆಯಿಂದ ಆಚರಿಸುತ್ತಾ ಬರುತ್ತಾರೆ. ದಸರಾ ಮೆರವಣಿಗೆಯಲ್ಲಿ ನೆರೆರಾಜ್ಯಗಳ ಮಹಾರಾಜರುಗಳು ಸಹ ಭಾಗವಹಿಸಿ ‘ಮೈಸೂರು ಅರಸರನ್ನು’ ಅಂಬಾರಿಯಲ್ಲಿ ಕಂಡು ಗೌರವವನ್ನು ಸಮರ್ಪಿಸುತ್ತಿದ್ದರೂ. ಮುಂದೆ ರಣಧೀರ ಕಂಠೀರವ ನರಸರಾಜ ಒಡೆಯರು ಸ್ವಯಂ ಜಟ್ಟಿಯಾಗಿದ್ದು ತಿರುಚನಾಪಳ್ಳಿಯ ಪೈಲ್ವಾನ್ನನ್ನು ಮಣ್ಣುಮು
ಕ್ಕಿಸುತ್ತಾರೆ.
ಇವರ ಆಡಳಿತದಲ್ಲಿ ದಸರಾದಲ್ಲಿ ಪ್ರಥಮ ಬಾರಿಗೆ ವಜ್ರಮುಷ್ಟಿ ಕಾಳಗ, ಜಟ್ಟಿ ಕಾಳಗ ಗಳನ್ನು ಆಚರಣೆಗೆ ತರುತ್ತಾರೆ ಕಾಳಗದಲ್ಲಿ ಗೆದ್ದ ಜಟ್ಟಿಗಳಿಗೆ ಅರಮನೆ ಯಿಂದ ‘ಜಗದೇಕಮಲ್ಲನೆಂಬ’ ಬಿರುದು ನೀಡಿ ಗೌರವಿಸುತ್ತಾರೆ. ಇಂದಿಗೂ ಸಹ ಪ್ರತಿವರ್ಷ ಅರಮನೆಯ ಕರಿಕಲ್ಲು ತೊಟ್ಟಿಯಲ್ಲಿ ಜಟ್ಟಿ ಕಾಳಗ ನಡೆಯುವುದನ್ನು ಕಾಣಬಹುದು. ಹೀಗೆ ಬೆಳೆಯು ತ್ತಾ ದಸರಾ ಸುವಿಖ್ಯಾತವಾಗುತ್ತದೆ ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ದಸರಾ ಮಹೋ ತ್ಸವ ಹೆಚ್ಚು ವೈಭವಪೂರಿತ ವಾಗಿರುತ್ತದೆ.
ತಾಯಿ ಚಾಮುಂಡೇಶ್ವರಿಯ ದಯೆ ಮೈಸೂರು ಅರಸರ ಮೇಲಿರುವುದರಿಂದ ಹೈದರಾಲಿ ಹಾಗೂ ಟಿಪ್ಪು ಸುಲ್ತಾನರ ಕಾಲದಲ್ಲಿಯೂ ಸಹ ದಸರಾ ಮಹೋತ್ಸವ ವನ್ನು ನಿಲ್ಲಿಸಲಾಗಲಿಲ್ಲ ಅಂದಿನ ಕಾಲಘಟ್ಟದ ಲ್ಲಿಯೂ ಸಹ ದಸರಾ ಮಹೋತ್ಸವವು ನಡೆಯುತ್ತದೆ ಆದರೆ ಅದರ ಮೆರಗು ಮೊದಲಿನಂತೆ ಇರುವುದಿಲ್ಲ. ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಒಮ್ಮೆ ದಸರಾ ಸಂದರ್ಭದಲ್ಲಿ ‘ಮಿರ್ಜಾ ಇಸ್ಮಾಯಿಲ್’ ಅವರನ್ನು ಅಂಬಾರಿಯಲ್ಲಿ ನಾಲ್ವಡಿಯವರು ಜತೆಗೆ ಕೂರಿಸಿಕೊಂಡಾಗ ಪ್ರಜೆಗಳ ವಿರೋಧ ವ್ಯಕ್ತವಾಗುತ್ತದೆ. ಇದನ್ನರಿತ ಮಿರ್ಜಾ ಇಸ್ಮಾಯಿಲ್ ಅಂಬಾರಿಯಿಂದ ಇಳಿದುಬಿಡುತ್ತಾರೆ.
ನಾಡಿನ ಜನತೆ ‘ಮೈಸೂರು ಮಹಾರಾಜರನ್ನು’ ಬಿಟ್ಟು ಬೇರೆ ಯಾವ ವ್ಯಕ್ತಿಯನ್ನು ಅಂಬಾರಿಯಲ್ಲಿ ಕಾಣಲು ಒಪ್ಪುತ್ತಿರಲಿಲ್ಲ, ರಾಜಾ ಪ್ರತ್ಯಕ್ಷ ದೈವ ಎಂಬ
ಭಾವನೆಯಿಂದ ಕಾಣುತ್ತಿದ್ದರು. ಅಂಬಾರಿಯಲ್ಲಿ ಮಹಾರಾಜರು ಮಾತ್ರ ಕೂರಬೇಕು ಎಂಬ ನಂಬಿಕೆ ಜನತೆಯಲ್ಲಿ ಮನೆಮಾಡಿತ್ತು. ಅಂಬಾರಿಯಲ್ಲಿ ಕುಳಿತು ಮೆರವಣಿಗೆ ಹೊರಟ ಕೊನೆಯ ಅರಸರೆಂದರೆ ಜಯಚಾಮರಾಜ ಒಡೆಯರು ಅಲ್ಲಿಂದಾಚೆಗೆ ಸರಕಾರಗಳು ‘ತಾಯಿ ಚಾಮುಂಡೇಶ್ವರಿಯನ್ನು’ ಚಿನ್ನದ ಅಂಬಾರಿ ಯಲ್ಲಿ ಮೆರವಣಿಗೆ ಮಾಡುತ್ತಾ ಬರುತ್ತಿವೆ.
ಅಂಬಾರಿ ಹೊರುವ ಆನೆಗಳಿಗೆ ವಿಶೇಷ ಸ್ಥಾನಮಾನವಿದೆ ಅರಮನೆಯಿಂದ ಮಾವುತರಿಗೆ ಹಾಗೂ ದಸರಾ ಆನೆಗಳಿಗೆ ವಿಶೇಷ ಸೌಲಭ್ಯವನ್ನು ಮೈಸೂರು ರಾಜವಂಶಸ್ಥರು ನೀಡುತ್ತಾ ಬರುತ್ತಿzರೆ. ಇಂದಿನ ಮಹಾರಾಜರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರು ತಮ್ಮ ಪರಿವಾರದೊಂದಿಗೆ ತಾವೇ ಖುದ್ದು ಆನೆಗಳ ಬಿಡಾರಕ್ಕೆ ಭೇಟಿ ನೀಡಿ ಮಾವುತರ ಯೋಗಕ್ಷೇಮ ವಿಚಾರಿಸಿ ‘ಸರಳತೆಯ ಮಹಾಮೂರ್ತಿ’ ಎನಿಸಿಕೊಂಡಿದ್ದಾರೆ. ತಮ್ಮ ಪೂರ್ವಜರಂತೆ ಅವರು ಸಹ
‘ಜನಮಾನಸದ ಮಹಾರಾಜರಾಗಿದ್ದಾರೆ’ ಇಂದು ಮೈಸೂರು ದಸರಾ ವಿಶ್ವವಿಖ್ಯಾತಿಯನ್ನು ಹೊಂದಿ ದ್ದು ಪ್ರತಿವರ್ಷ ಲಕ್ಷಕ್ಕೂ ಅಽಕ ಸಂಖ್ಯೆಯಲ್ಲಿ ಜನರು
ದಸರಾ ನೋಡಲು ಮೈಸೂರಿಗೆ ಬರುತ್ತಾರೆ. ಈ ಸಂದರ್ಭದಲ್ಲಿ ಮೈಸೂರು ಸ್ವರ್ಗದಂತೆ ಕಂಗೊಳಿಸುತ್ತಿರುತ್ತದೆ ಇಂತಹ ವೈಭವಪೂರ್ಣವಾದ ದಸರಾ
ವನ್ನು ಕೊಡುಗೆಯಾಗಿ ನೀಡಿದ ಮೈಸೂರು ಅರಸರಿಗೆ ನಾಡಿನ ಜನತೆಯ ಪರವಾಗಿ ಅನಂತ ನಮನಗಳನ್ನು ಅರ್ಪಿಸೋಣ….