Wednesday, 11th December 2024

ರಾಷ್ಟ್ರಹಿತ ಚಿಂತಕರಿಗೆ ಮತ- ಮನ್ನಣೆ ಸಿಗಲಿ

ಚುನಾವಣೆ ಬಂದಾಗಲೆಲ್ಲಾ ನಮ್ಮಲ್ಲಿ ಮೂಡುವ ಸಹಜಪ್ರಶ್ನೆ- ‘ನಮ್ಮ ವೋಟು ಯಾರಿಗೆ? ಅಭ್ಯರ್ಥಿಯನ್ನು ನೋಡಿ ಮತ ಹಾಕುವುದೋ ಅಥವಾ ಅಭ್ಯರ್ಥಿ ಹೇಗಾದರೂ ಇರಲಿ, ನನ್ನ ಮತ ಈ ಪಕ್ಷಕ್ಕೆ ಅಂತ ಪಕ್ಷ ನೋಡಿ ಮತ ನೀಡುವುದಾ?’ ಎಂಬುದು. ಮಾತ್ರವಲ್ಲ, ‘ಅಭ್ಯರ್ಥಿ ಬಹಳ ಒಳ್ಳೆಯವನು, ಶುದ್ಧಹಸ್ತ; ಆದರೆ ಅವನ ಪಕ್ಷದ ಸಿದ್ಧಾಂತ ಸರಿಯಿಲ್ಲ ಅಥವಾ ಅಭ್ಯರ್ಥಿ ಸುಮಾರಿನವನು, ಆದರೆ ಅವನು ಪ್ರತಿನಿಽಸುವ ಪಕ್ಷ ಯೋಗ್ಯತೆಯುಳ್ಳದ್ದು’ ಎಂಬ ದ್ವಂದ್ವಗಳೂ ಮತದಾರ
ಪ್ರಭುವಿನ ಮನದಲ್ಲಿ ಸುಳಿದಾಡುವುದೂ ಉಂಟು.

ಸಾಮಾನ್ಯವಾಗಿ ಎಲ್ಲಾ ಚುನಾವಣೆಗಳಲ್ಲೂ ನಿರ್ಣಾಯಕ ಪಾತ್ರ ವಹಿಸುವ ಗ್ರಾಮೀಣ ಭಾಗದ ಮತದಾರರು, ಮನೆಯ ಯಜಮಾನರಾದ ಅಪ್ಪ/ಗಂಡ ಹೇಳಿದವರಿಗೇ ಮತ ನೀಡುವುದು ವಾಡಿಕೆ. ಇಲ್ಲಿ ಮತದಾರನ ಸ್ವಂತ ನಿರ್ಧಾರ ಇರುವುದು ಕಡಿಮೆ. ಗ್ರಾಮೀಣ ಭಾಗದಲ್ಲಿ ಕುಟುಂಬವೊಂದು ಬಹಳ ಕಾಲ ದಿಂದಲೂ ಒಂದೇ ಪಕ್ಷವನ್ನು ಬೆಂಬಲಿಸುತ್ತಾ ಬಂದಿದೆ ಎಂದಾದಲ್ಲಿ, ಆ ಕುಟುಂಬಿಕರ ನಿಷ್ಠೆ ಬದಲಾಗುವುದು ವಿರಳ. ಅವರಿಗೆ ಮುಖ್ಯವಾಗುವುದು ಪಕ್ಷದ ಚಿಹ್ನೆಯೇ ವಿನಾ, ಅಭ್ಯರ್ಥಿಯಲ್ಲ. ಇನ್ನು, ‘ಕ್ಷೇತ್ರಕ್ಕೆ ದೊಡ್ಡ ಮಟ್ಟದಲ್ಲಿ ಕೆಲಸ ಮಾಡದಿದ್ದರೂ ಅಡ್ಡಿಯಿಲ್ಲ, ಅವನನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ’ ಎನ್ನುವ ಚಿಂತನೆಯ ಮತದಾರರೂ ಇರುತ್ತಾರೆ. ಯಾಕೆ ಹೇಳಿ? ‘ಅವನು ನಮ್ಮ ಜಾತಿಯವನು; ಮಾಡಿಕೊಳ್ಳುವುದಾದರೆ ನಮ್ಮವನೇ ಮಾಡಿಕೊಳ್ಳಲಿ ಬಿಡಿ.

ಯಾರು ಗೆದ್ದು ಬಂದರೂ ಕೆಲಸ ಮಾಡುವುದು ಅಷ್ಟರಲ್ಲೇ ಇದೆ’ ಎಂಬ ಧೋರಣೆಯೂ ಗ್ರಾಮೀಣ ಭಾಗದಲ್ಲಿ ಇರುತ್ತದೆ. ಹಾಗಾಗಿಯೇ, ಭಾರತದ ಮತದಾರರ
ಕುರಿತು, ಐbಜಿZo bಟ್ಞ’ಠಿ Zoಠಿ ಠಿeಛಿಜ್ಟಿ qಟಠಿಛಿ, ಚ್ಠಿಠಿ qಟಠಿಛಿ ಠಿeಛಿಜ್ಟಿ Zoಠಿಛಿ ಎಂಬುದೊಂದು ಮಾತಿದೆ! ಇನ್ನು ಮತದಾರರ ಮನೆಯ ಮದುವೆ-ಮುಂಜಿ
ಕಾರ್ಯಕ್ರಮಗಳಿಗೆ ಅಭ್ಯರ್ಥಿ ಬಂದು ಆತ್ಮೀಯತೆ ಗಳಿಸಿದ್ದರೆ ಅಥವಾ ಊರಜಾತ್ರೆಗೆ, ಹಬ್ಬಕ್ಕೆ ದೊಡ್ಡ ಪ್ರಮಾಣದ ದೇಣಿಗೆ ನೀಡಿದ್ದರಂತೂ ಮುಗಿಯಿತು, ಅವನಿಗೇ ಊರಿನವರ ಮತ ಖಚಿತ. ಹೀಗೆ, ಮತದಾನದ ಸಂದರ್ಭದಲ್ಲಿ ಭಾವನಾತ್ಮಕ ವಿಷಯಗಳೇ ಹಳ್ಳಿಗರ, ರೈತರ ಮತ್ತು ಶ್ರಮಜೀವಿ ಮತದಾರರ ಮೇಲೆ ಪ್ರಭಾವ ಬೀರುವುದು ಹೆಚ್ಚು. ಸಾಲ ಮನ್ನಾ, ಬಡ್ಡಿ ಮನ್ನಾ, ಕಡಿಮೆ ಬಡ್ಡಿಯ ಸಾಲ ಮತ್ತು ಉಚಿತ ಪಡಿತರ ಮುಂತಾದ ಸರಕಾರದ ಕಲ್ಯಾಣ ಯೋಜನೆಗಳ ಮೇಲೆ ಈ ವರ್ಗದ ಜನರ ಅವಲಂಬನೆ ಹೆಚ್ಚು ಇರುತ್ತದೆ.

ಹಾಗಾಗಿ, ಶ್ರೀಮಂತರು ಅಥವಾ ಸುಶಿಕ್ಷಿತರಿಗಿಂತ ಗ್ರಾಮೀಣ ಭಾಗದ ಬಡ ಹಾಗೂ ಮಧ್ಯಮ ವರ್ಗದ ಮತದಾರರು ಅತ್ಯಂತ ಸಮರ್ಪಕವಾಗಿ ಆಲೋಚಿಸಿ, ತಮ್ಮ ಬೇಕು-ಬೇಡಗಳನ್ನು ಗುಣಿಸಿ ಭಾಗಿಸಿ, ತಮಗೆ ಅನುಕೂಲ ರಾದವರಿಗೇ ಮತ ಚಲಾಯಿಸುತ್ತಾರೆ ಎಂಬುದು ಅಧ್ಯಯನ ಗಳಿಂದ ಸಾಬೀತಾಗಿರುವ ಸಂಗತಿ. ಹಾಗಾದರೆ, ಸುಶಿಕ್ಷಿತರು, ಶ್ರೀಮಂತರು ಮತ್ತು ನಗರವಾಸಿ ಮತದಾರರು ಯಾವ ಆಧಾರದ ಮೇಲೆ ಮತ ನೀಡುತ್ತಾರೆ? ಮೊದಲನೆಯದಾಗಿ,
ಅವರು ಮತದಾನ ಮಾಡುವುದೇ ಅಲ್ಪ ಪ್ರಮಾಣದಲ್ಲಿ; ಮತದಾನ ಮಾಡುವವರೂ ಮೇಲೆ ಹೇಳಿದ ಭಾವನಾತ್ಮಕ, ಸಾಂಪ್ರದಾಯಿಕ ಮತ್ತು ಜಾತಿಯ ಆಧಾರದ ಮೇಲೆಯೇ ಮತನೀಡುವ ಮನಸ್ಥಿತಿಯಿಂದ ಹೊರತಾಗಿಲ್ಲ ಎಂದು ಖೇದದಿಂದಲೇ ಹೇಳಬೇಕಾಗುತ್ತದೆ.

ಗ್ರಾಮೀಣ ಭಾಗದ ಮುಗ್ಧರು, ಬಡ-ಮಧ್ಯಮ ವರ್ಗದ ಜನರು ತಂತಮ್ಮ ಅಗತ್ಯಗಳ ಪೂರೈಕೆಗಾಗಿ ಅಥವಾ ಜೀವನಮಟ್ಟದ ಸುಧಾರಣೆ ಗಾಗಿ ಹಾಗೆ ಮಾಡಿದರೆ, ವಿಶ್ಲೇಷಣೆ ಮಾಡಿ ನಿರ್ಧರಿಸುವ ಕ್ಷಮತೆ ಇದ್ದರೂ ಬಹುಪಾಲು ಸುಶಿಕ್ಷಿತ ಶ್ರೀಮಂತವರ್ಗ ತಮ್ಮ ಮೂಲಭೂತ ಸಾಂಪ್ರದಾಯಿಕತೆಯ ಗೆರೆಯನ್ನು
ದಾಟುವುದಿಲ್ಲ. ಹಾಗಾಗಿಯೇ ನೋಡಿ, ಬಹುತೇಕವಾಗಿ ಸುಶಿಕ್ಷಿತ ನಾಗರಿಕರು ವಾಸಿಸುವ ಬೆಂಗಳೂರು ಮುಂತಾದ ಲೋಕಸಭಾ ಕ್ಷೇತ್ರಗಳನ್ನು, ‘ಇದು ಒಕ್ಕಲಿಗರ ಪಾರಮ್ಯ ಇರುವ ಕ್ಷೇತ್ರ’, ‘ಇದು ಅಲ್ಪಸಂಖ್ಯಾತರು ಮೆರೆವ ಕ್ಷೇತ್ರ’ ಎಂದೆಲ್ಲಾ ಬ್ರ್ಯಾಂಡ್ ಮಾಡಿಬಿಟ್ಟಿದ್ದಾರೆ. ಅಲ್ಲಿ ಬೇರೆ ಜಾತಿಯ/ಪಂಗಡದ ಅಭ್ಯರ್ಥಿ ಸ್ಪಽಸುವ ಮಾತೇ ಇಲ್ಲ.

ಇನ್ನು ಕೆಲವೊಮ್ಮೆ, ರಾಜ್ಯದಲ್ಲಿ ಯಾವ ಜನಪ್ರಿಯ ಸರಕಾರ ಇದೆಯೋ ಅದೇ ಪಕ್ಷದ ಅಭ್ಯರ್ಥಿಗಳಿಗೆ ಲೋಕ ಸಭೆಯ ಚುನಾವಣೆಯಲ್ಲೂ ಸಾರಾಸಗಟಾಗಿ ಮತ ನೀಡು ವುದೂ ಇದೆ. ತಮಿಳುನಾಡು, ಆಂಧ್ರ, ಕೇರಳ ಹಾಗೂ ಪಶ್ಚಿಮ ಬಂಗಾಳ ಮುಂತಾದ ರಾಜ್ಯಗಳ ಮತದಾರರಲ್ಲಿ ಈ ಪ್ರವೃತ್ತಿಯನ್ನು ನಾವು ಕಾಣಬಹುದಾಗಿದೆ. ಇನ್ನು ಕರ್ನಾಟಕ ದಂಥ ರಾಜ್ಯಗಳಲ್ಲಿನ ತಾರತಮ್ಯಜ್ಞಾನ ಇರುವ ಜಾಣ ಮತ ದಾರರು ಹೀಗೆ ಸಾರಾಸಗಟಾಗಿ ಮತ ನೀಡದೆ, ರಾಜ್ಯದಲ್ಲಿ
ಒಂದು ಪಕ್ಷಕ್ಕೆ ಮತ್ತು ಕೇಂದ್ರದಲ್ಲಿ ಇನ್ನೊಂದು ಪಕ್ಷಕ್ಕೆ ಮತ ನೀಡಿರುವುದನ್ನು ನಾವು ಕಾಣಬಹುದಾಗಿದೆ.

ಉದಾಹರಣೆಗೆ, ಸಿದ್ದರಾಮಯ್ಯನವರು ತಮ್ಮ ಹಿಂದಿನ ಅಽಕಾರಾವಽಯಲ್ಲಿ ಕರ್ನಾಟಕದಲ್ಲಿ ಸುಭದ್ರ ಮತ್ತು ಜನಪ್ರಿಯ ಸರಕಾರವನ್ನು ನೀಡಿದ್ದರ ಹೊರತಾ ಗಿಯೂ, ಆ ಕಾಲಘಟ್ಟದ ಆಸುಪಾಸಿನಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ೨೮ ಸ್ಥಾನಗಳ ಪೈಕಿ ೨೭ ಸ್ಥಾನವನ್ನು ಬಿಜೆಪಿ ಮತ್ತು ಇತರರು ಸೇರಿ
ಪಡೆದುಕೊಂಡರು; ಕಾಂಗ್ರೆಸ್ ಕೇವಲ ಒಂದು ಸ್ಥಾನಕ್ಕೆ ತೃಪ್ತಿ ಪಡುವಂತಾಯಿತು. ಕರ್ನಾಟಕದ ಮತದಾರರ ರಾಷ್ಟ್ರೀಯ ಆದ್ಯತೆಗಳು ಮತ್ತು ನಿರೀಕ್ಷೆಗಳು ಬೇರೆಯೇ ಇರುತ್ತವೆ ಎಂಬುದು ಈ ಸಂದರ್ಭದಲ್ಲಿ ಸ್ಪಷ್ಟವಾಗಿ ವ್ಯಕ್ತವಾಗಿತ್ತು. ಯಾವ ಚುನಾವಣೆಯಲ್ಲಿ ವ್ಯಕ್ತಿಗೆ ಮಹತ್ವ ನೀಡಬೇಕು ಮತ್ತು ಯಾವ ಚುನಾವಣೆಯಲ್ಲಿ ಪಕ್ಷಕ್ಕೆ ಹೆಚ್ಚು ಮನ್ನಣೆ ನೀಡಬೇಕು, ತಮ್ಮ ಮತದಿಂದ ದೇಶದ ಭವಿಷ್ಯದ ಮೇಲಾಗುವ ಪರಿಣಾಮಗಳೆಷ್ಟು ಎನ್ನುವ ತಿಳಿವಳಿಕೆ ಮತದಾರರಲ್ಲಿ
ಹೆಚ್ಚಬೇಕಿದೆ. ಪಂಚಾಯತಿ ಮಟ್ಟದ ಚುನಾವಣೆಯಲ್ಲಿ ವಡದಾರನ ಧೋರಣೆಯು ತನ್ನ ಜಾತಿ, ಕುಟುಂಬ ಮತ್ತು ಅವನೂರಿನ ಕೆಲಸ ಇವುಗಳನ್ನಷ್ಟೇ ಪರಿಗಣನೆಗೆ ತೆಗೆದು ಕೊಂಡು ಸ್ವಲ್ಪ ಸ್ವಾರ್ಥಪರವಾಗಿದ್ದರೆ ಏನೂ ತೊಂದರೆಯಿಲ್ಲ; ಆದರೆ, ವಿಧಾನಸಭೆ ಚುನಾವಣೆಯಲ್ಲಿ ಮತ ನೀಡುವಾಗ ಅವನ
ಮನೋಭಾವ ಸ್ವಲ್ಪ ವಿಶಾಲವಾಗಿರಬೇಕಾಗುತ್ತದೆ.

ಆಗ ರಾಜ್ಯದ ಹಿತಕ್ಕಾಗಿ ಕೆಲಸ ಮಾಡುವ ಸರಕಾರವನ್ನು ತರುವುದು ಮತದಾರನ ಉದ್ದೇಶವಾಗಬೇಕು. ಇನ್ನು ಲೋಕಸಭಾ ಸದಸ್ಯನ ಆಯ್ಕೆಯ ಪ್ರಶ್ನೆ ಬಂದಾಗಲಂತೂ, ದೇಶದ ಹಿತ ವೊಂದೇ ಮತದಾರನ ಮನಸ್ಸಿನಲ್ಲಿ ಇರಬೇಕಾಗುತ್ತದೆ, ಬೇರೆಲ್ಲ ವಿಚಾರಗಳು ಇಲ್ಲಿ ಗೌಣವಾಗಬೇಕಾಗುತ್ತದೆ. ಜಾತಿ, ಜನಪ್ರಿಯತೆ ಇತ್ಯಾದಿಗಳು ಈ ಸಂದರ್ಭದಲ್ಲಿ ಲೆಕ್ಕಕ್ಕೇ ಬರಬಾರದು. ದೇಶದ ಆಶೋತ್ತರಗಳನ್ನು ಈಡೇರಿಸುವಲ್ಲಿ ಪ್ರಾಮಾಣಿಕವಾಗಿ ಸ್ಪಂದಿಸುವ ಮತ್ತು ದೇಶದ ಸಂಸ್ಕೃತಿ- ಇತಿಹಾಸಗಳನ್ನು ಗೌರವಿಸುವ ಮನಸ್ಥಿತಿ ಇರುವ ಪಕ್ಷವನ್ನು ಮಾತ್ರ ಈ ವೇಳೆ ಗುರುತಿಸಬೇಕಾಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ, ದೇಶದ ರಕ್ಷಣೆ, ಅಂತಾರಾಷ್ಟ್ರೀಯ ಸಂಬಂಧ, ಆರ್ಥಿಕ ಸುಧಾರಣೆ, ಪ್ರಜಾಸ್ನೇಹಿ ನೀತಿ-ನಿಯಮಗಳ ನಿರೂಪಣೆ ಮುಂತಾಗಿ ಎಲ್ಲಾ ವಿಭಾಗಗಳಲ್ಲಿ ದೇಶವನ್ನು ಸಮರ್ಥವಾಗಿ ಮುನ್ನಡೆಸಬಲ್ಲವರಿಗೆ ಅಽಕಾರ ಸಿಗುವಂತೆ ನೋಡಿಕೊಳ್ಳಬೇಕಾಗುತ್ತದೆ. ದೇಶದಲ್ಲಿ ರಾಜಕೀಯ ಸ್ಥಿರತೆಯನ್ನು ಒದಗಿಸಬಲ್ಲ ಮತ್ತು ಪ್ರಬುದ್ಧ ನಾಯಕತ್ವವಿರುವ ಪಕ್ಷವನ್ನು ಕೇಂದ್ರದಲ್ಲಿ ಅಽಕಾರಕ್ಕೆ ತರಬೇಕಾಗುವುದರಿಂದ, ದೇಶದ ಮತ ದಾರರು ಈ ಸಂದರ್ಭದಲ್ಲಿ ಅತ್ಯಂತ ಜವಾಬ್ದಾರಿಯಿಂದ
ಮತ ನೀಡಬೇಕಾಗುತ್ತದೆ. ಲೋಕಸಭಾ ಸದಸ್ಯನಾಗುವವನಿಗೆ ಕ್ಷೇತ್ರವನ್ನು ಅಭಿವೃದ್ಧಿಪಡಿಸುವಲ್ಲಿ ಮಿತಿ ಎಂಬುದು ಇರು ತ್ತದೆ.

ರಸ್ತೆಗಳು-ಸೇತುವೆಗಳ ನಿರ್ಮಾಣ ಮುಂತಾದ ಕೆಲಸಗಳನ್ನು ಅವನಿಂದ ನಾವು ನಿರೀಕ್ಷಿಸುವಂತಿರುವುದಿಲ್ಲ. ಅದು ವಿಧಾನಸಭೆಯ ಸದಸ್ಯನ ಕೆಲಸ. ಹಾಗಂತ, ಕನಿಷ್ಠ ಅಗತ್ಯಗಳಾದ ಒಂದು ಮಟ್ಟದ ವಿದ್ಯಾಭ್ಯಾಸ, ಸರಳತೆ, ಶುದ್ಧಹಸ್ತ ಇವುಗಳನ್ನು ಲೋಕಸಭಾ ಅಭ್ಯರ್ಥಿಯಲ್ಲೂ ನೋಡಬೇಕಾದ್ದು ಸರಿಯಾದದ್ದೇ; ಆದರೆ ತಮ್ಮಾಯ್ಕೆಯ ಸರಕಾರ ವನ್ನು ಕೇಂದ್ರದಲ್ಲಿ ಪ್ರತಿಷ್ಠಾಪಿಸುವುದು ಮತದಾರರಿಗೆ ಆದ್ಯತೆಯಾಗಬೇಕು ಎನ್ನುವುದು ವಿವೇಚನಾಯುತ ಅಭಿಪ್ರಾಯ.

ಚುನಾವಣೆಯಿಂದ ಚುನಾವಣೆಗೆ ಭಾರತೀಯ ಮತದಾರರ ಮನಸ್ಥಿತಿಯಲ್ಲಿ ಸಕಾರಾತ್ಮಕ ಪರಿವರ್ತನೆಯಾಗುತ್ತಿರುವುದನ್ನು ನಾವು ಸ್ಪಷ್ಟವಾಗಿ ಕಾಣಬಹುದಾಗಿದೆ. ಸಾಂಪ್ರ ದಾಯಿಕವಾದ ಚಿಂತನೆಯಿಂದ ನಡೆಯುತ್ತಿದ್ದ ಮತದಾನವು, ಈಗ ಪ್ರತಿಯೊಬ್ಬ ಮತದಾರನ ವೈಯಕ್ತಿಕ ನಿರ್ಧಾರದಿಂದಲೇ
ಬಹುತೇಕವಾಗಿ ನಡೆಯುತ್ತಿದೆ ಎಂದು ಹೇಳಬಹುದು. ಅದರಲ್ಲೂ, ಎಲ್ಲ ವರ್ಗದ ಮಹಿಳೆಯರು ಮತ್ತು ಯುವ ಮತದಾರರು ಈ ಬದಲಾವಣೆಗಳಿಗೆ ಕಾರಣವಾಗುತ್ತಿರುವುದು ಸ್ವಲ್ಪ ಸಮಾಧಾನದ ಮತ್ತು ಸ್ವಾಗತಾರ್ಹವಾದ ಸಂಗತಿ.

(ಲೇಖಕರು ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು)