ಚರ್ಚಾ ವೇದಿಕೆ
ಡಾ.ಸುಧಾಕರ ಹೊಸಳ್ಳಿ
ಅಂಬೇಡ್ಕರರಿಗೆ ಮುಸ್ಲಿಮರ ಅರಾಷ್ಟ್ರೀಯತೆಯ ಬಗ್ಗೆ ಸಾಂಖ್ಯಿಕ ನಂಬಿಕೆಯಿತ್ತು. ತಮ್ಮ ದೃಷ್ಟಿಕೋನಕ್ಕೆ ಸಂಶೋಧನಾತ್ಮಕ ಅಕ್ಷರರೂಪ ನೀಡಿರುವ ಅವರು ತಮ್ಮ ‘ಥಾಟ್ ಆನ್ ಪಾಕಿಸ್ತಾನ’ ಕೃತಿಯಲ್ಲಿ ‘ಮುಸ್ಲಿಮರು ಜಗತ್ತಿನಲ್ಲಿಯೇ ಸಮಾನತೆ ತತ್ವದಿಂದ ಹೊರಗೆ ನಿಂತ ಜನಾಂಗ’ ಎಂದು ದಾಖಲಿಸಿದ್ದಾರೆ.
ಮೊನ್ನೆ ಇಡೀ ಜಗತ್ತು ಅಯೋಧ್ಯೆಯ ರಾಮಮಂದಿರದ ಕಡೆಗೆ ದೃಷ್ಟಿ ನೆಟ್ಟಿದ್ದಾಗ, ಶಿವಮೊಗ್ಗದಲ್ಲಿ ಮುಸ್ಲಿಂ ಮಹಿಳೆಯೊಬ್ಬರು ರಾಮಭಕ್ತರ ಮುಂದೆ ‘ಅಲ್ಲಾಹು ಅಕ್ಬರ್’ ಎಂದು ಕೂಗಿ ವಿವಾದ ಸೃಷ್ಟಿಯಾಗಿತ್ತು. ಈ ನೆಲದ ಆದರ್ಶವಾದ ಶ್ರೀರಾಮಚಂದ್ರರ ಮಂದಿರದ ಉದ್ಘಾಟನೆಯ ಸಂದರ್ಭ ನಡೆದು ಹೋದ ಈ ಪ್ರಮಾದವನ್ನು ಸ್ವಘೋಷಿತ ಬುದ್ಧಿಜೀವಿಗಳು ಜಾತ್ಯತೀತತೆಯ ಹೆಸರಿನಲ್ಲಿ ಸಮರ್ಥಿಸಿದ್ದೂ ಉಂಟು. ಸಾಲದೆಂಬಂತೆ ಎಂದಿನಂತೆ ಸಂವಿ ಧಾನವನ್ನು ಎಳೆದು ತಂದಿದ್ದೂ ಆಯಿತು.
ಸಂವಿಧಾನಶಿಲ್ಪಿ ಅಂಬೇಡ್ಕರರಿಗೆ ವಾಸ್ತವವಾಗಿ ಮುಸ್ಲಿಮರ ಅರಾಷ್ಟ್ರೀಯತೆಯ ಬಗ್ಗೆ ಒಂದು ಸಾಂಖ್ಯಿಕವಾದ ನಂಬಿಕೆಯಿತ್ತು. ಅಂಬೇಡ್ಕರರು ತಮ್ಮ ದೃಷ್ಟಿಕೋನಕ್ಕೆ ವಸ್ತುನಿಷ್ಠವಾಗಿ ಸಂಶೋಧನಾತ್ಮಕ ಅಕ್ಷರರೂಪ ನೀಡಿದ್ದಾರೆ. ತಮ್ಮ ‘ಥಾಟ್ ಆನ್ ಪಾಕಿಸ್ತಾನ’ ಕೃತಿಯಲ್ಲಿ ‘ಮುಸ್ಲಿಮರು ಜಗತ್ತಿನಲ್ಲಿಯೇ
ಸಮಾನತೆ ತತ್ವದಿಂದ ಹೊರಗೆ ನಿಂತ ಜನಾಂಗ’ ಎಂದು ಅವರು ದಾಖಲಿಸಿದ್ದಾರೆ. ‘ದಿ ಫ್ಯೂಚರ್ ಆಫ್ ಇಂಡಿಯನ್ ಪಾಲಿಟಿಕ್ಸ್’ ಕೃತಿಯಲ್ಲಿ (ಪುಟ ಸಂಖ್ಯೆ ೩೦೧-೩೦೫) ಅವರು ಈ ಕುರಿತು ಆಧಾರ ನೀಡುತ್ತಾ ಅನಿಬೆಸೆಂಟ್‌ರವರ ಹೇಳಿಕೆಯನ್ನು ಹೀಗೆ ಉದಾಹರಿಸುತ್ತಾರೆ: ಇಡೀ ಮಹಮದೀಯರನ್ನು ಕುರಿತು ಮತ್ತೊಂದು ಗಂಭೀರ ಪ್ರಶ್ನೆಯೇಳುತ್ತದೆ. ಒಂದು ವೇಳೆ ಹಿಂದೂ- ಮುಸ್ಲಿಮರ ಸಂಬಂಧಗಳು ಲಖ್ಖೌದ ದಿನಮಾನಗಳಲ್ಲಿದ್ದ ಹಾಗೆಯೇ ಇದ್ದಿದ್ದರೆ, ಇದು ಅಷ್ಟೊಂದು ತುರ್ತಾದ ಪ್ರಶ್ನೆಯಾಗುತ್ತಿರಲಿಲ್ಲ.
ಅಲ್ಲಿಗೂ ಅದು, ಇಂದಲ್ಲ ನಾಳೆ ಸ್ವತಂತ್ರ ಭಾರತದಲ್ಲಿ ಖಂಡಿತವಾಗಿ ಏಳಬಹುದಾದ ಪ್ರಶ್ನೆಯೇ. ಆದರೆ ಖಿಲಾಫತ್ ಚಳವಳಿಯ ಬಳಿಕ ಪರಿಸ್ಥಿತಿ ಬದಲಾಗಿದೆ ಮತ್ತು ಖಿಲಾಫತ್ ಧರ್ಮಯುದ್ಧದ ಪ್ರೋತ್ಸಾಹ, ಭಾರತದ ಮೇಲಾದ ಅನೇಕ ಗಾಯಗಳಲ್ಲಿ ಒಂದಾಗಿದೆ. ಗತವರ್ಷಗಳ ಹಾಗೆಯೇ ‘ಅಪನಂಬಿಗರ’ (ಹಿಂದೂಗಳ) ವಿರುದ್ಧದ ದ್ವೇಷ ನಿರ್ಲಜ್ಜವಾಗಿ ಬೆತ್ತಲೆಯಾಗಿ ಪುಟಿದೆದ್ದಿದೆ. ವಾಸ್ತವ ರಾಜಕಾರಣಕ್ಕೆ ಹಳೆಯ ಮುಸ್ಲಿಂ ಖಡ್ಗದ ಧರ್ಮ
ಪುನರುಜ್ಜೀವನಗೊಂಡ ಮಾರ್ಗದರ್ಶಿ (ಧೋರಣೆ)ಯಾಗಿ ರುವುದನ್ನು ನಾವು ಕಂಡಿದ್ದೇವೆ. ಶತಮಾನಗಳಿಂದ ಮರೆತು ಹೋಗಿದ್ದ ಜಜೀರುತ್ ಅರಬ್ ಅಂದರೆ, ಅರೇಬಿಯಾ ದ್ವೀಪ ಅದು ಕೇವಲ ನಮಗೆ ಮಾತ್ರ ಮೀಸಲು. ಅದರ ಮೇಲೆ ನಮಗೆ ಮಾತ್ರ ಹಕ್ಕಿದೆ.
ಆ ಪವಿತ್ರ ಭೂಮಿಯ ಮೇಲೆ ಮುಸ್ಲಿಮೇತರರು ಕಾಲಿಟ್ಟು ಅದನ್ನು ಅಪವಿತ್ರಗೊಳಿಸಲು ಎಂದೂ ಬಿಡುವುದಿಲ್ಲ ಎನ್ನುವ ಹಳೆಯ ಮನೋಭಾವ
ರಭಸದಿಂದ ತಲೆಯೆತ್ತುವುದನ್ನು ಕಂಡಿದ್ದೇವೆ. ಒಂದು ವೇಳೆ ಆಫ್ಘನ್ನರು ಇಂಡಿಯಾದ ಮೇಲೆ ದಾಳಿ ಮಾಡಿದರೆ, ನಾವು ಅವರ ಜತೆಗೂಡಿ, ತಮ್ಮ ಮಾತೃಭೂಮಿಯ ಮೇಲೆ ದಾಳಿ ಮಾಡಿದ ವೈರಿಗಳ ವಿರುದ್ಧ ಹೋರಾಡುವ ಹಿಂದೂಗಳನ್ನು ಕೊಲ್ಲುತ್ತೇವೆ ಎನ್ನುವ ಮುಸ್ಲಿಂ ನಾಯಕರ ಉದ್ಘೋಷ ಗಳನ್ನು ಕೇಳಿದ್ದೇವೆ. ಮುಸಲ್ಮಾನರ ಪ್ರಥಮ ನಿಷ್ಠೆ ಇಸ್ಲಾಮಿ ದೇಶಗಳಿಗೇ ಹೊರತು, ನಮ್ಮ ಮಾತೃಭೂಮಿಗೆ ಅಲ್ಲ ಎನ್ನುವುದನ್ನು ಸ್ಪಷ್ಟವಾಗಿ ಕಂಡಿ ದ್ದೇವೆ.
‘ದೇವರ ಸಾಮ್ರಾಜ್ಯ’ ಸ್ಥಾಪನೆ ಅವರ ಅತ್ಯಂತ ಪ್ರೀತಿಯ ಆಕಾಂಕ್ಷೆಯಾಗಿರುವುದನ್ನು ತಿಳಿದಿದ್ದೇವೆ. ಅವರ ದೇವರು ಎಲ್ಲವನ್ನೂ ಪ್ರೀತಿಸುವ ವಿಶ್ವಪಿತ ನಲ್ಲ; ತನ್ನ ಆಜ್ಞೆಗಳನ್ನು ಪ್ರತಿಬಿಂಬಿಸುವ (ಹೋಲುವ) ಮುಸಲ್ಮಾನ ಅದ್ಭುತಗಳ ಪರಿಣಾಮವಾಗಿ ಮೂಡಿದ್ದು. ಪ್ರಾಚೀನ ಮುಸ್ಲಿಮರಂತೆಯೇ ಕಾದಾಡುತ್ತಿದ್ದ ಪ್ರಾಚೀನ ಹಿಬ್ರೂಗಳು ಕಂಡುಕೊಂಡ ಯೇಹೋವ (ತಮ್ಮ) ಪ್ರವಾದಿ ಕೊಟ್ಟ (ಆಜ್ಞೆ) ಧರ್ಮ ಪಾಲಿಸುವವರು ಇವರ ದೃಷ್ಟಿಯಲ್ಲಿ
ವಿಶ್ವಾಸಾರ್ಹರಲ್ಲ. ದೇವರು ತನ್ನ ಆಜ್ಞೆಗಳನ್ನು ಒಬ್ಬ (ಪ್ರವಾದಿ) ಮಾನವನ ಮೂಲಕ ನೀಡಿದ ಎನ್ನುವ ಸಿದ್ಧಾಂತ ಗಳಿಂದ ಇಂದು ಪ್ರಪಂಚ ದೂರ ಸರಿದಿದೆ, ಸಾಗಿದೆ. ಪ್ರವಾದಿ ನೀಡಿದ (ಆಜ್ಞೆ) ಕಾಯಿದೆಗಳು ತಾವು ವಾಸಿಸುವ ಯಾವುದೇ ರಾಜ್ಯದ ಕಾಯಿದೆಗಳಿಗಿಂತ ಉನ್ನತವಾದಂಥವು ಮತ್ತು
ತಾವು ಅವುಗಳನ್ನು ಪಾಲಿಸತಕ್ಕದ್ದು ಎಂದು ಹೇಳುವ ಮುಸ್ಲಿಂ ನಾಯಕರ ಹಕ್ಕು ಸಾಧನೆ, ನಾಗರಿಕ ವ್ಯವಸ್ಥೆಗೆ ಮತ್ತು ರಾಜ್ಯದ ಭದ್ರತೆಗೆ ಮಾರಕವಾಗಿದೆ.
ಅವರ ಸ್ವಾಮಿನಿಷ್ಠೆಯ ಕೇಂದ್ರ ರಾಷ್ಟ್ರನಿಷ್ಠೆಗೆ ಹೊರತಾಗಿರುವುದರಿಂದ ಅವರು ದುಷ್ಟ ನಾಗರಿಕರಾಗುತ್ತಾರೆ. ಮುಸ್ಲಿಮರ ಪ್ರಮುಖ ನಾಯಕರಾದ ಮೌಲಾನಾ ಮಹಮ್ಮದ್ ಅಲಿ, ಷೌಕತ್ ಅಲಿ ಸಾರುವ ಧೋರಣೆಗಳನ್ನು ಅವರು ಪುರಸ್ಕರಿಸುತ್ತಿರುವವರೆಗೂ ಅವರನ್ನು ಸಹ ಇತರ ನಾಗರಿಕರು ನಂಬಲು ಸಾಧ್ಯವಿಲ್ಲ. ಭಾರತ ಸ್ವತಂತ್ರವಾದರೆ, ಮುಸ್ಲಿಂ ಸಮುದಾಯ ಭಾರತದ ಸ್ವಾತಂತ್ರ್ಯಕ್ಕೆ ತೀವ್ರ ಕಂಟಕಪ್ರಾಯವಾಗುತ್ತದೆ. ಅಫ್ಘಾನಿಸ್ತಾನ, ಬಲೂಚಿಸ್ತಾನ, ಪರ್ಷಿಯಾ, ಇರಾಕ್, ಅರೇಬಿಯಾ, ತುರ್ಕಿ, ಈಜಿಪ್ಟ್ ಮತ್ತು ಇದೇ ರೀತಿ ಮಧ್ಯ ಏಷ್ಯಾದ ಮುಸಲ್ಮಾನ ಗುಂಪುಗಳಿಗೆ ಸ್ಮಾಮಿನಿಷ್ಠರಾಗಿ,
ಇಂಡಿಯಾ ದೇಶವನ್ನು ಇಸ್ಲಾಂ ಅಧಿಪತ್ಯಕ್ಕೆ ಒಳಪಡಿಸಲು ಮುಂದಾಗುವರು. ಬ್ರಿಟಿಷ್ ಇಂಡಿಯಾದಲ್ಲಿರುವ ಎಲ್ಲ ರಾಜ್ಯಗಳ ನೆರವನ್ನು ಪಡೆದು ಭಾರತದಲ್ಲಿ ಮುಸಲ್ಮಾನ ಆಡಳಿತ ಸ್ಥಾಪಿಸುವರು.
ಇಂಡಿಯಾದ ಕೆಲವೇ ಕೆಲವು ಮುಸ್ಲಿಮರು ತಮ್ಮ ಮಾತೃಭೂಮಿಗೆ ನಿಷ್ಠರಾಗಿದ್ದಾರೆಂದು ನಮ್ಮ ಅನಿಸಿಕೆಯಾಗಿತ್ತು. ಮುಸಲ್ಮಾನರಲ್ಲಿ ಕೋಮುವಾದಿ ಭಾವನೆ ಪ್ರಚೋದನೆ ತಡೆಗಟ್ಟಲು ಕೆಲವು ಸುಶಿಕ್ಷಿತ ಮುಸ್ಲಿಂ ಗುಂಪು ಯತ್ನಿಸುತ್ತಿದೆ ಎಂಬುದು ನಮ್ಮ ನಂಬಿಕೆ. ಆದರೆ ಅಂಥವರು ಕೆಲವರಷ್ಟೇ ಇರುವು ದರಿಂದ, ಅಂಥ ಪ್ರಭಾವಶಾಲಿ ಪ್ರತಿರೋಧ ಒಡ್ಡಲಾರರು. ಅಂಥವರು ಧರ್ಮದ್ರೋಹಿ ಗಳೆಂದು ಅವರನ್ನು ಕೊಲ್ಲಲಾಗುವುದು. ಇಸ್ಲಾಂ ಆಡಳಿತ ಎನ್ನುವುದನ್ನು ಮಲಬಾರ್ ಕಲಿಸಿಕೊಟ್ಟಿದೆ. ನಮಗೆ ಪುನಃ ಭಾರತದಲ್ಲಿ ಖಿಲಾಫತ್ ರಾಜ್ಯದ ಮತ್ತೊಂದು ಮಾದರಿ ಯನ್ನು ಕಾಣುವ ಇಷ್ಟವಿಲ್ಲ. ಮೋಪ್ರಾ ಸಮುದಾಯದ ಬಗ್ಗೆ ಮಲಬಾರ್ ಹೊರಗಿನ ಮುಸ್ಲಿಮರಿಗೆ ಎಷ್ಟೊಂದು ಸಹಾನುಭೂತಿಯಿತ್ತು ಎನ್ನುವುದಕ್ಕೆ ಅವರ ಸಹ ಕೋಮಿನವರು ಮಾಡಿದ ರಕ್ಷಣಾ ಸಂಬಂಧಿ ಕ್ರಮಗಳೇ ಸಾಕ್ಷಿ.
ಜತೆಗೆ ಸ್ವತಃ ಗಾಂಧಿಯವರ ಅಭಿಪ್ರಾಯ: ಮುಸ್ಲಿಮರ ಈ ರೀತಿಯ ವರ್ತನೆಗೆ ಅವರು ನಂಬಿದ ಧರ್ಮ ಮತ್ತು ಅದರ ಧಾರ್ಮಿಕ ಕಲಿಕೆಯೇ ಕಾರಣ, ಇತ್ಯಾದಿ ಮಾತು ಬೇರೆ. ಆ ಮಾತು ನನಗೆ ನಿಜವೆಂದು ತೋರುವುದಿಲ್ಲ. ಯಾರ ಧರ್ಮ ಕೊಲೆ, ಸುಲಿಗೆ, ಅತ್ಯಾಚಾರ, ಬೆಂಕಿಯಿಡುವುದು ಅಥವಾ ಇತರರು ತಮ್ಮ ವಂಶಗತವಾಗಿ ನಂಬಿದ ಧರ್ಮ ತ್ಯಜಿಸಿ, ತಮ್ಮ ಧರ್ಮಕ್ಕೆ ದ್ರೋಹ ಬಗೆಯಲು ಒಪ್ಪದವರನ್ನು ದೇಶದಿಂದ ಹೊರದಬ್ಬಬೇಕು ಇತ್ಯಾದಿ ಗಳನ್ನು ಬೋಧಿಸುತ್ತದೆಯೋ ಅಂಥ ಜನರಿಗೆ ನಾಗರಿಕ ದೇಶದಲ್ಲಿ ಸ್ಥಾನವಿಲ್ಲ.
(ಶಾಲೆಯ ಪಠ್ಯ, ಬೋಧೆ ಮತ್ತು ಉದಾತ್ತ ನೀತಿ ಆದರ್ಶಗಳಲ್ಲಿ ಮೃದು, ಕಟ್ಟುನಿಟ್ಟಾದ ಕಣ್ಗಾವಲಿನಲ್ಲಿ ಕೆಲವು ಧಾರ್ಮಿಕ ತತ್ವಗಳನ್ನು ಕಲಿಸುವ ವಿನಾಯಿತಿಯಿರಬಹುದು). ಅಲ್ಪಸಂಖ್ಯಾತರಾಗಿರುವ ಕಡೆ ಅವರೆಲ್ಲರನ್ನು ಸಾಮಾಜಿಕ ಬಹಿಷ್ಕಾರದಿಂದ ದೂರವಿಟ್ಟು, ಬ್ರಿಟಿಷ್ ಆಳ್ವಿಕೆಯಲ್ಲಿ ಷಿಯಾ, ಸುನ್ನಿ, ಸೂಫಿ, ಬಹಾಯಿ ಮುಂತಾದ ಎಲ್ಲ ಪಂಗಡ ಗಳು ಸುರಕ್ಷಿತವಾಗಿವೆ. ಮುಸ್ಲಿಂ ಆಳರಸರೇ ಇರುವ ರಾಜ್ಯಗಳಲ್ಲಿ ವಾಸಿಸುವ ಮುಸಲ್ಮಾನರಿಗಿಂತ ಬ್ರಿಟಿಷ್ ಆಳ್ವಿಕೆಗೆ ಒಳಪಟ್ಟ ರಾಜ್ಯಗಳಲ್ಲಿ ಮುಸಲ್ಮಾನರು ಹೆಚ್ಚು ಸ್ವತಂತ್ರರಾಗಿದ್ದಾರೆ. ಸ್ವತಂತ್ರ ಭಾರತ ಕುರಿತು ಆಲೋಚಿಸುವಾಗ ಮಹಮ್ಮದೀಯರ ಆಳ್ವಿಕೆಯ ವಿಪತ್ತುಗಳ ಬಗೆಗೆ ವಿವೇಚಿಸಬೇಕಾಗುತ್ತದೆ.
(ಆಧಾರ: ಡಾ. ಬಾಬಾಸಾಹೇಬ್
ಅಂಬೇಡ್ಕರ್ ಅವರ ಸಮಗ್ರ ಬರಹಗಳು ಮತ್ತು
ಭಾಷಣಗಳು, ಸಂಪುಟ-೬; ಪುಟ ಸಂಖ್ಯೆ ೬೩೩-೬೩೫)
(ಲೇಖಕರು ಸಂವಿಧಾನ ತಜ್ಞರು)