Wednesday, 11th December 2024

ನಮ್ಮೂರು ಶುದ್ದವೋ…ನಿಮ್ಮೂರು ಚೆಂದವೋ..

ಅಲೆಮಾರಿಯ ಡೈರಿ

mehandale100@gmail.com

ನಮ್ಮೂರು ಹಂಗೆ ನಿಮ್ಮೂರು ಹಿಂಗೆ, ನಾವೇ ಚೆಂದದ ನದಿ ಹೊಂದಿರೋದು, ನಮ್ಮೂರ ಜಲಪಾತವೇ ಫೇಮಸ್ಸು, ನಮ್ಮ ರಾಜ್ಯದ ಅಂಗಡಿ ತಿನಿಸೇ ಭಾರತದಲ್ಲಿ ವೈರಲ್ಲು, ನಮ್ಮ ಜಿಯ ಎಣ್ಣೆನೆ ಸಖತ್ ಸ್ಟ್ರಾಂಗು, ನಮ್ಮ ತಾಲೂಕು ಬಾಡೂಟವೇ ಜಗತ್ಪ್ರಸಿದ್ಧಿ, ನಮ್ಮ ಹಳ್ಳಿ ಎಣ್ಣೆನೆ ಫಾರಿನ್‌ಗೆ ಸಪ್ಲೈ ಆಗುತ್ತೆ, ಒಟ್ರಾಶಿ ನಮ್ಮೂರ ಹೋರಿಗಳೇ ಮುಂದೆ ಎಂದೆಲ್ಲ ತತ್ತೂರಿಗೆ ನಾವೆಲ್ಲ ಕಮ್ಮಿ ಇಲ್ಲ.

ಆದರೆ, ಹೀಗೆಲ್ಲ ನಮ್ಮ ನಮ್ಮ ಊರು ಕೇರಿ, ತಾಲೂಕು ಜಿಲ್ಲೆ ಇತ್ಯಾದಿಗಳ ಹೆಚ್ಚುಗಾರಿಕೆ ಮತ್ತು ಹೆಮ್ಮೆಯನ್ನು ನಾವು ಜಾಗಟೆ ಬಾರಿಸುವುದರಲ್ಲಿ ಯಾವತ್ತೂ ಹಿಂದೆ ಬಿದ್ದಿದ್ದಿಲ್ಲ. ಆದರೆ ನಮ್ಮೂರ ಓಣಿಗಳೇ ಸ್ವಚ್ಛ, ನಮ್ಮ ತಾಲೂಕೆ ಅದ್ಭುತ ಕ್ಲೀನು ನಮ್ಮ ಊರಿನ ಯಾವ ರಸ್ತೇಲೂ ಕಸವೇ ಇರುವುದಿಲ್ಲ, ನಮ್ಮ ರಸ್ತೆಯ ಮೇಲೆ ಪೇಪರ್ ತುಂಡಿಗೆ ಅವಕಾಶವೇ ಇಲ್ಲ, ನಮ್ಮೂರಲ್ಯಾರೂ ಎಣ್ಣೇನೆ ಹಾಕಲ್ಲ, ನಮ್ಮಲ್ಲಿ ಗುಟಕಾ ಪಾಕೀಟು ನೋ ಚಾ, ಸಿಗರೇಟು ಮೋಟು ಬೀಡಿ ಬಿಸಾಕುವವರಂತೂ ಇಲ್ಲವೇ ಇಲ್ಲ,  ಹೀಗೊಂದು ಜಾಗಟೆ ಯಾರಾದರೂ ಬಾರಿಸಿಕೊಂಡದ್ದು ನನಗೆ ನೆನಪಿಲ್ಲ ಮೂಲತ: ಹಾಗೆ ಹೇಳಿಕೊಳ್ಳಲು ಅವರಲ್ಲೂ ಅಂತಹದ್ದೊಂದು ಊರೂ ಇರಲಿಕ್ಕಿಲ್ಲ.

ಆದರೆ ಭಾರತದಲ್ಲಿ ಹಾಗೊಂದು ಚಮತ್ಕಾರ ಇದೆ ಎಂದಾದರೆ ಅರ್ಥಾತ್ ನಮ್ಮೂರ ಓಣಿಗಳೇ ಚೆಂದ ನಮ್ಮೂರಿಗೇ ಊರೇ, ಅದ್ಭುತ ಕ್ಲೀನು ಬಾಕಿ ಎಲ್ಲ ನೀವು ಏನಿದ್ದರೂ ಗಾರ್ಬೆಜೇ ಎಂದು ಗೇಲಿ ಮಾಡುವ ತಾಕತ್ತಿದ್ದರೆ ಅದು ಕೇವಲ ಅಸ್ಸಾಮಿನ ರಂಗಸಾಪಾರಾ ಎಂಬ ಹಳ್ಳಿಗೆ ಮಾತ್ರ. ಅಸ್ಸಾಮಿನ ಗೋಲ್ಪಾರಾ ಎಂಬ ಮುಖ್ಯ ಪಟ್ಟಣದಿಂದ ಒಂದಿಪ್ಪತ್ತು ಕಿ.ಮೀ. ದೂರ ಇರುವ ಈ ರಂಗ ಸಾಪಾರಾ ಇವತ್ತು ದೇಶದ ಅತ್ಯಂತ ಕ್ಲೀನ್ ವಿಜ್ ಎಂದು ಕಳೆದು ಐದು ವರ್ಷಗಳಿಂದ ಕೀರಿಟ ಹೊದ್ದು ಕೂತಿದೆ.

ಲೆಕ್ಕತಪ್ಪಿ ಜನ ಜಾತ್ರೆ ಊರು ನೋಡಲು ಅಭ್ಯಶಿಸಲು ದಾಂಗುಡಿ ಇಡುತ್ತಿದ್ದಾರೆ. ಜನ ಮಾತ್ರ ಇದೆಲ್ಲ ಏನಲ್ಲ ಬಿಡಿ ಎನ್ನುತ್ತಾ ತಮ್ಮ ಪಾಡಿಗೆ ಗzಗಿಳಿದು ಕ್ಯಾಮೆ ಮಾಡುತ್ತಾರೆ. ಕಾರಣ ಏನು ಮಾಡಿದರೇನು ಯಾವ ಪ್ರಶಸ್ತಿ ಪ್ರಶಂಸೆ ಹೊಟ್ಟೆ ತುಂಬಿಸು ವುದಿಲ್ಲವಲ್ಲ. ಹಾಗಾಗಿ ಶಿಸ್ತು ಕಾಳಜಿ ಸ್ವಚ್ಛತೆ ಹೊರತಾಗಿ ಉಳಿದಂತೆ ಊರು ಮಾಮೂಲಿನ ಮುಸುಕು ಎಳೆದುಕೊಳ್ಳುತ್ತದೆ. ಕಾರಣ ಇದೆಲ್ಲ ಕಿರೀಟಗಳ ನಂತರವೂ ಕನ ಇಲ್ಲಿನ ನೆಲ ಬಿಟ್ಟಿಲ್ಲ. ಉಳುಮೆ ಮರೆತಿಲ್ಲ ಅದೆ ವಿಶೇಷತೆ.

ಇಲ್ಲಿ ಎಂದರಲ್ಲಿ ನಿಂತು ಗಂಡಸರು ಉಚ್ಚೆ ಹೊಯ್ಯುವಂತಿಲ್ಲ, ಬೀಡಿ ಸಿಗರೇಟು ಪೂಕುವಂತಿಲ್ಲ, ಕಂಪಲ್ಸರಿ ಊರಿನ ನಿಯಮಾವಳಿ ಪಾಲಿಸಲೇಬೇಕು, ಯಾವ ಕಾರಣಕ್ಕೂ ಎಲ್ಲಾ ನಿಂತು ಏನೇನೋ ಮಾಡಿ ಅ ಗಾಡಿ ಬಿಟ್ಟು, ಕೈಲಿರೋ ರಾಪರ್ ಹರಿದು ಬಿಸಾಡಿ, ಪುಸಕ್ಕನೆ ಅರ್ಜೆಂಟಿನಲ್ಲಿ ಸಿಗರೇಟು ಎರಡ್ಮೂರೇ ದಮ್ಮು ಎಳೆದುಬಿಟ್ಟು, ಅ ನಿಂತಲ್ಲೇ ಒಂದು ಚಹ ಕುಡಿದು ಅದರ ಪೇಪರ್ ಕಪ್ಪು ಬಿಸಾಡಿ ಅಥವಾ ತೀರಿದ ನೀರಿನ ಬಾಟಲ್ ಬಿಸಾಕುವ ಉಹೂಂ.. ಅದೆಲ್ಲ ಮಾಡುವ ಮಾತೇ ಇಲ್ಲ.

ಅಕಸ್ಮಾತ್ ಯಾವನಾದರೂ ಮಾತು ಮೀರಿದರೆ ಸೀದಾ ಮಾತು ಮಾತಿಗೆ ಐದು ಸಾವಿರ ದಂಡದ ಮಿತಿ ಏರುತ್ತ ಹೋಗುತ್ತದೆ. ಸುಮಾರು ನೂರು ಮನೆಗಳು ಮತ್ತು ಐನೂರು ಜನರು ಇರುವ ಹಳ್ಳಿಯಲ್ಲಿ ಹೆಚ್ಚಾಗಿ ಕ್ರಿಶ್ಚಿಯನ್ನರೇ ಪ್ರಾಬಲ್ಯ ಹೊಂದಿದ್ದು, ಶಾಲೆ ಸರಕಾರಿ ಸಣ್ಣ ಪುಟ್ಟ ಕಚೇರಿ ಸೇರಿದಂತೆ ಐವರು ಸರಕಾರಿ ನೌಕರರನ್ನೂ ಹೊಂದಿದೆ. ಉಳಿದಂತೆ ದಿನ ನಿತ್ಯ ಎಲ್ಲ ಗದ್ದೆ ಚಾಕರಿ ಎಂದು ಹೊರಡುವ ಮುನ್ನ ಬೆಳಿಗ್ಗೆ ಒಮ್ಮೆ ಒಂದರ್ಧ ಗಂಟೆ ಸ್ವಚ್ಛತೆ ಮತ್ತು ಶಿಸ್ತಿಗೆ ಗಮನಕೊಟ್ಟು ನಡೆದು ಬಿಡುತ್ತಾರೆ.

ಮೂಲತಃ ಅಸ್ಸಾಮಿ ಮತ್ತು ಇಂಗ್ಲಿಷ್ ಚೆನ್ನಾಗಿ ಮಾತಾಡುವ ಜನತೆ, ಊರಿನ ಪ್ರತಿಯೊಂದು ಮನೆಯಲ್ಲೂ ಕಕ್ಕಸು ಇರುವಂತೆ ನೋಡಿಕೊಂಡಿzರೆ. ಅದಕ್ಕಾಗಿ ಊರಿಗೆ ಊರೇ ಶೌಚಾಲಯ ಹೊಂದುವಂತಾಗಿದೆ. ಬಿದಿರಿನ ಬುಟ್ಟಿಗಳಲ್ಲೇ ಕಸ ಸಂಗ್ರಹ, ಜೀರ್ಣವಾಗಬಲ್ಲ ಆಗದಿರುವ ಎರಡೂ ಬೇರೆ ಬೇರೆ ಸಂಗ್ರಹಣೆ ಮತ್ತು ಅದಕ್ಕೆ ಸೂಕ್ತ ವ್ಯವಸ್ಥೆ ಪ್ರಮುಖ ಅಂಶ. ಎಲ್ಲಕ್ಕಿಂತ ಮಿಗಿಲಾಗಿ ಇದೆಲ್ಲ ಮಾಡಲೇಬೇಕೆನ್ನುವ ಮನಃಸ್ಥಿತಿ ಇದರ ಹಿಂದಿದ್ದುದು ಇದಕ್ಕೆಲ್ಲ ಕಾರಣ.

ಈಶಾನ್ಯ ಭಾರತದ ಆಸ್ಸಾಮಿಗಳ ಗರೋ ಜನಾಂಗೀಯರು ನಡೆಸುವ ಗಾರೋ ನೃತ್ಯ ಈ ಮೂಲಕ ಹೆಚ್ಚುವರಿ ಬೆಳಕಿಗೆ ಬಂದಿದೆಯಲ್ಲದೇ, ಪ್ರಮುಖ ಅಂಶವಾಗಿ ಜನಪ್ರಿಯ ಗೊಂಡಿದೆ ಕೂಡ. ಇದನ್ನು ವಾಂಗಲಾ ಡಾನ್ಸ್ ಅಥವಾ ವಾಂಗಲಾ ನೃತ್ಯ ಎನ್ನುವ ಈ ಪ್ರಕಾರದಲ್ಲಿ ಈಶಾನ್ಯ ಭಾರತದಲ್ಲೇ ಈ ಅಂಶ ಪ್ರಸಿದ್ಧಿಗೆ ಬರುವುದರ ಮೂಲಕ ರಂಗಸಾಪಾರಾ ಈಗ ಸ್ವಚ್ಛ ಅಭಿಯಾನ ಅಡಿಯಲ್ಲಿ ಧೃಡವಾದ ಹೆಜ್ಜೆಯ ಮೂಲಕ ತನ್ನ ಮಾನ್ಯತೆ ಗಳಿಸಿಕೊಂಡಿದೆ.

ಮೂಲತಃ ಚೆಂದ ಮನೆಗಳು ಮತ್ತು ಸುತ್ತಮುತ್ತಲಲ್ಲಿ ಸಾಲು ಸಾಲು ಪರ್ವತ ಕಣಿವೆಗಳು, ಹರಿವ ನದಿ ಅಂಚಿಗೆ ಇರುವ ಗ್ರಾಮ ಮತ್ತು ಉzನು ಉದ್ದ ಭತ್ತದ ಹಸಿರು ಗzಗಳಿಂದಾಗಿ ಆಗೀಗ ಚಿತ್ರ ನಿರ್ಮಾಣಕ್ಕೂ ಇದು ಬಳಕೆಯಾಗಿದ್ದಿತ್ತು. ಆದರೆ ಇಂಥ ಅನ್‌ಟಚ್ಡ್ ಹಸಿರು ಮಧ್ಯೆ ಇರುವ ಊರಿಗೆ ಒಂದು ಗುರುತಿನ ಸಾಲೇ ಇರಲಿಲ್ಲ. ಆದರೆ ಆಕಸ್ಮಿಕವಾಗಿ ಭಾರತದ ಪ್ರಧಾನಿಯ ಸ್ವಚ್ಛ ಭಾರತ ಅಭಿಯಾನ ಆರಂಭವಾದ್ದೆ ಎಲ್ಲ ರೀತಿ ಸಮಿತ್ತುಗಳನ್ನು ಸೇರಿಸಿಕೊಂಡು ಹಳ್ಳಿ ಎದ್ದು ನಿಂತಿತು ನೋಡಿ.

ಆಮೇಲೆ ಹಿಂದಿರುಗಿ ನೋಡಿದ್ದೇ ಇಲ್ಲ. ಅಲ್ಲಿಯವರೆಗೆ ಊರ ತುಂಬ ಕೊಳಚೆ ಮೋರಿ, ಎಂದರಲ್ಲಿ ರಾಚುತ್ತಿದ್ದ ವಿಸರ್ಜನೆ ಹೀಗೆ, ಅಲ್ಲ ಬಟ್ಟೆ ಒಗೆದ ಮೇಲೆ ನಿಲ್ಲುತ್ತಿದ್ದ ನೀರು ಮಲೆತು ಹಸಿರಾಗಿ ಎದ್ದಿರುತ್ತಿದ್ದ ರಾಡಿ, ಒಂದು ತಿಪ್ಪೆಯಂತಹ ಊರಿಗೆ ಇರಬೇಕಾದ ಎಲ್ಲ ಕ್ಯಾರೆಕ್ಟರ್‌ಗಳಾಚೆಗೆ ರಂಗಸಾಪಾರಾ ನಾರುತ್ತಿತ್ತು. ಮೊದಲು ಇದನ್ನೆಲ್ಲ ತಹಬಂದಿಗೆ ತಂದು ರಸ್ತೆಯಲ್ಲಿ ಜನ ಕನಿಷ್ಠ ಓಡಾಡುವಂತೆ ಮಾಡಲಾಯಿತಲ್ಲ.

ಊರೊಳಗೆಲ್ಲ ಸರಕಾರಿ ಅಧಿಕಾರಿಯ ಒಂದು ಗಾಡಿಯನ್ನಾದರೂ ಬರುವಷ್ಟು ನೀಟ್ ಆದ ಮೇಲೆ ಹೊರಗೆಲ್ಲೂ ಕಸ ಎಸೆಯದ, ಆದರೆ ಎಲ್ಲವನ್ನೂ ನೀಟಾಗಿ ಒಯ್ಯಲು ಅನುಕೂಲ ಮಾಡಿಕೊಡುವ ಯೋಚನೆ ಸ್ಥಳೀಯ ಶಾಸನಾಧಿಕಾರ ಮಾಡಿ ಪೂರೈಸಿತು. ಅಲ್ಲಿಂದ ನೀರು ಮತ್ತು ರಸ್ತೆಗೆ ದಾಂಗಡಿ. ಇಷ್ಟೇ ಆದರೆ ಸಾಲುತ್ತಿರಲಿಲ್ಲ. ಅದಕ್ಕಾಗಿ ರಂಗಸಾಪಾರಾದ ಜನರೆಲ್ಲ ಸೇರಿ ಮೊದಲು ಊರಿಗೆ ಪಂಚಾಯ್ತಿಯಿಂದ ಆಗಬಹುದಾದನ್ನೆಲ್ಲ ಮಾಡಿಸಿಕೊಂಡರು.

ಪಂಚಾಯಿತಿಗೂ ಸರಕಾರದ ಯೋಜನೆ ಅನುಷ್ಠಾನಗೊಳಿಸುವ ಪ್ಲಾನ್ ಇದ್ದೇ ಇತ್ತು. ಅದೂ ತನ್ನ ಶಕ್ತಿ ಮೀರಿ ಜನರಿಗೆ ಬೆಂಬಲ ಕೊಟ್ಟಿತ್ತು. ಪೂರ್ತಿ ಅಲ್ಲದಿದ್ದರೂ ಮಿನಿ ಮಮ್ ಆಚಿವ್‌ಮೆಂಟ್ ಲೆಕ್ಕಾಚಾರದಲ್ಲಿ ಆದರೂ ಅವಾರ್ಡು ಘೋಷಣೆ ಆಗುತ್ತದಲ್ಲ ಹಾಗೆ ರಂಗಸಾಪಾರಾ ಹೆಸರೂ ಲಿಸ್ಟ್‌ಗೆ ಸೇರಿ ಶಿಫಾರಸಾಯಿತು. ಹಳ್ಳಿ ಎಲ್ಲಿಂದ ಎಲ್ಲಿಗೆ ಮುಟ್ಟಿದೆ ಎನ್ನುವ ಅಧಾರದ ಮೇಲೆ ಮೊದಲ ಸ್ಥಾನಕ್ಕೆ ಹಳ್ಳಿ ಬಂದು ನಿಂತಿತು. ಕೊನೆಗೊಮ್ಮೆ ಅವಾರ್ಡು ನೀಡಿದರೆ ಇನ್ನಿಲ್ಲದ ಬೆಂಬಲ ಸಿಕ್ಕಿ ಮಾದರಿ ಆಗುವುದರಲ್ಲಿ ಸಂಶಯವಿಲ್ಲ ಎನ್ನಿಸಿ ಶಕ್ತಿ ಮೀರಿದ ಪ್ರಯತ್ನಕ್ಕೆ ಫಲ ಸಿಕ್ಕೇ ಬಿಟ್ಟಿತ್ತು.

ಯಾವಾಗ ಗೋಲ್ಪಾರಾ ಜಿಲ್ಲೆಯಲ್ಲಿ ಅತ್ಯುತ್ತಮ ಮತ್ತು ಸ್ವಚ್ಛ ಹಳ್ಳಿ ಅವಾರ್ಡು ಘೋಷಣೆಯಾಯಿತೋ ಆಗಲೇ ಅದ್ಯಾಕೋ ಇದ್ದಕ್ಕಿದ್ದಂತೆ ರಂಗಸಾಪಾರಾ ಜನತೆ ಅದರ ಹಿಂದೆ ಬಿದ್ದು ಮೊದಲು ಊರಿಗೆಲ್ಲ ಟಾಯ್ಲೆಟ್ ಮಂಜೂರು ಮಾಡಿಸಿಕೊಂಡರು. ಅದಾಗುತ್ತಿದ್ದಂತೆ ಕುಡಿಯುವ ನೀರಿಗಾಗಿ ಮತ್ತು ಬಟ್ಟೆ ಒಗೆಯುವುದಕ್ಕಾಗಿ ಊರ ಹೊರ ಬಾಗಿಲಿಗೇ, ಕೆರೆಯ ಒಡ್ಡಿನ ಕಡೆಗೇ ನುಗ್ಗುತ್ತಿದ್ದ ಹೆಂಗಸರ ನೀರಿನ ವರಾತ ಕಡಿಮೆ ಮಾಡಲು ನಾಲ್ಕೂ ದಿಕ್ಕಿಗೂ ಬೋರ್ವೆಲ್ ಹೊಡೆದು ನೀರಿನ ಬವಣೆಗೆ ಇತಿಶ್ರೀ
ಹಾಡಲಾಯಿತು. ಮನೆ ಮನೆಗೂ ನೀರಿನ ಕೊಳವೆ ಬಂದು ನಿಂತಿತು.

ಪ್ರತಿ ಮನೆಗೂ ನೀರಿನ ಅವಶ್ಯಕತೆ ಜೊತೆಗೆ ನೀರು ಸಲೀಸಾಗಿ ಮನೆಯ ಹಿಂಭಾಗದವರೆಗೂ ನಲ್ಲಿಗಳು ಬಂದು ರ್ರನೆ ಶಬ್ದಿಸತೊಡಗಿದವು. ಗೋಲಪಾರ ಜಿಲ್ಲೆ ಆಡಳಿತ ಕೂಡ ತೀರಾ ಕೊಚ್ಚೆ ಗುಂಡಿಯಂತಿದ್ದ ಗ್ರಾಮವನ್ನು ಮಾದರಿಯನ್ನಾಗಿಸಲು ಈ ಹಂತದಲ್ಲಿ ಟೊಂಕ ಕಟ್ಟಿತು. ಊರ ಜನರಿಗೆ ಯಾವ ಕಾರಣಕ್ಕೂ ದಂಡ ತಮ್ಮಿಂದಾಗಿ ಆಗಬಾರದೆನ್ನುವ ಜಾಗೃತೆ ಎಷ್ಟೆಂದರೆ ಒಬ್ಬೆ ಒಬ್ಬ ಒಂದೇ ಒಂದು ತಪ್ಪೂ ಮಾಡದೆ ಎಲ್ಲರೂ ದಂಡ ತಪ್ಪಿಸಿಕೊಂಡಿದ್ದಾರೆ.

ತಪ್ಪಿದರೆ ಐದು ಸಾವಿರದ ದುಡ್ಡು ನಿಶ್ಚಿತವಾಗಲಿದೆ. ಇಲ್ಲಿಯವರೆಗೂ ಒಬ್ಬನೂ ದಂಡ ಕೊಡದಂತೆ ಹಳ್ಳಿಯಲ್ಲಿ ಐದು ವರ್ಷದಿಂದಲೂ ನಿಯಮ ಪಾಲನೆಯ ಶಿಸ್ತು ಇದೆಯಲ್ಲ ಅದು ನಿಜಕ್ಕೂ ಪ್ರಶಂಸಾರ್ಹ. ಅದೂ ಹಾಗೆ ಆಗಲು ಕಾರಣ ಅವರಲ್ಲಿನ ಪ್ರತಿಯೊಬ್ಬನೂ ಹೆಚ್ಚು ಕಡಿಮೆ ಆರ್ಥಿಕವಾಗಿ ಅಷ್ಟಕ್ಕಷ್ಟೆ ಇರುವುದೂ ಹೌದು. ಇಂಥಾ ಪರಿಸ್ಥಿತಿ ಇದ್ದುದರಿಂದ ಗ್ರಾಮದ ಪ್ರತಿಯೊಬ್ಬನಿಗೂ ಐದು ಸಾವಿರ ಎಂದರೆ ಬಹು ದೊಡ್ಡ ಅಸೆಟ್ಟೆ. ಹಾಗಾಗಿ ಪ್ರತಿ ಗ್ರಾಮಸ್ಥನೂ ತಾವೇ ವಿಽಸಿಕೊಂಡ ಸ್ವಚ್ಛತೆಯ ಕಟ್ಟಳೆಯನ್ನು ಮೀರದೆ, ಇದ್ದುದಕ್ಕಿಂತ ಇನ್ನೇನು ಮಾಡಲು ಸಾಧ್ಯವಿದೆ ಎಂದು ಪಟ್ಟಣ ಪಂಚಾಯಿತಿ ಕಾಲಕಾಲಕ್ಕೆ ನೀಡುವ ಯೋಜನೆ ಅನುಷ್ಠಾನಗೊಳಿಸುತ್ತಾ ಸಾಗಿದೆ.

ಸದ್ಯಕ್ಕೆ ಭಾರತದಲ್ಲಿ ಅತ್ಯಂತ ಸ್ವಚ್ಛ ಮತ್ತು ಶಿಸ್ತಿನ ಹಳ್ಳಿ ಇದು. ಕಾಲಕಾಲಕ್ಕೆ ಲಭ್ಯವಾಗುವ ಗಾರೋ ನೃತ್ಯ ಮತ್ತು ಅದರ ಉತ್ಸವ ಅತ್ಯಂತ ದೊಡ್ಡ ಆಕರ್ಷಣೆಯಾಗುತ್ತ ನೃತ್ಯೋತ್ಸವ ನೋಡಲು ಬಂದವರೆಲ್ಲ ಊರನ್ನು ಹೊಗೋಳೊದು ಸಾಮಾನ್ಯವಾಗಿದೆ. ಅದರಿಂದ ಇನ್ನಿಷ್ಟು ಬೆಳೆಯುತ್ತಿದೆ ರಂಗಸಾಪಾರ. ಅಸ್ಸಾಮ್ ಪ್ರವಾಸೋದ್ಯಮಕ್ಕೂ ಹೇಗಿದ್ದರೂ -ಮಸ್ಸು.. ಇದೂ ಒಂದು ನಿಮ್ಮ ಬಕೆಟ್ ಲಿಸ್ಟ್ ಸೇರಿಸಿಕೊಳ್ಳಲಿ. ರಂಗಸಾಪಾರದಲ್ಲಿ ರಂಗು ಜಮಾಯ್ಸಿ