ಯಶೋ ಬೆಳಗು
yashomathy@gmail.com
ಎಡೆ ನವರಾತ್ರಿಯ ಸಂಭ್ರಮ!
ಪ್ರತಿ ಋತು ಬದಲಾವಣೆಯ ಆರಂಭದಲ್ಲೂ ಬದಲಾಗುವ ಆಹಾರ ಸೇವನೆಗೆ ನಮ್ಮ ದೇಹವು ಹೊಂದಿಕೊಳ್ಳುವಂತಾಗಲು ನಮ್ಮ ಪೂರ್ವಜರು 9 ದಿನಗಳ ಉಪವಾಸ ಹಾಗೂ ಅಲ್ಪಾಹಾರ ಸೇವನೆಯ ಮೂಲಕ ಶರೀರದ ಸಮತೋಲನ ಕಾಯ್ದು ಕೊಳ್ಳುವ ತಂತ್ರವಾಗಿ ಆಚರಿಸುತ್ತಿದ್ದ ನವರಾತ್ರಿ ದಿನಕಳೆದಂತೆಲ್ಲ ಅದರದೇ ಆದ ವಿಶೇಷತೆಯಿಂದ ನವವರ್ಣಗಳಲ್ಲಿ ಕಂಗೊಳಿಸುತ್ತಿದೆ.
ದುರ್ಗುಣಗಳನ್ನು ದಮನಿಸಿ ಗೆಲುವಾಗಿ ನಕ್ಕವಳು ದುರ್ಗಾ. ನಮ್ಮ ಇರುವ ದುಷ್ಟಗುಣ ಗಳನ್ನು ದಮನಿಸಿಕೊಳ್ಳುತ್ತ ಒಳ್ಳೆಯ ಗುಣಗಳನ್ನು ಅಳವಡಿಸಿಕೊಳ್ಳುತ್ತ ಶಕ್ತಿ ಸ್ವರೂಪ ವಾಗಿ ಪರಿವರ್ತಿತಗೊಂಡರೆ ಬದುಕಿಗೊಂದು ಸಾರ್ಥಕತೆ. ಆದರ್ಶಗಳನ್ನೇ ಹಾಸಿ, ಹೊದ್ದು, ಮರ್ಯಾದಾ ಪುರುಷೋತ್ತಮನಾದ ರಾಮನನ್ನು ಒಳ್ಳೆಯವನಾಗಿಯೂ, ಆತನ ಪತ್ನಿ ಯನ್ನು ಅಪಹರಿಸಿದ ಕಾರಣಕ್ಕೆ ರಾವಣನನ್ನು ಕೆಟ್ಟವನನ್ನಾಗಿಯೂ ಬಿಂಬಿಸಿ ರಾವಣ ವಧೆಯನ್ನು ವಿಜೃಂಭಣೆಯಿಂದ ಆಚರಿಸುತ್ತ ಬಂದಿದ್ದೇವೆ.
ಹಾಗೆ ನೋಡಿದರೆ ನಮ್ಮಲ್ಲಿ ಯಾರೂ ಸಂಪೂರ್ಣ ಒಳ್ಳೆಯವರೂ ಅಲ್ಲ ಅಥವಾ ಸಂಪೂರ್ಣ ಕೆಟ್ಟವರೂ ಅಲ್ಲ. ತನ್ನೆದೆಯನ್ನು ಸೀಳುತ್ತ ಒಳನುಗ್ಗಿದ ಬುಲೇಟಿನೇಟಿಗೆ ಧರೆಗುರುಳುವಾಗಲೂ ಅವರಿಂದ ಹೊರಟ ಕೊನೆಯ ಶಬ್ದ ‘ಹೇ ರಾಮ!’ ಅವರೆದೆಯೊಳಗೆ ಬುಲೆಟ್ಟು ನುಗ್ಗಿಸಿದವ ಅನ್ಯಧರ್ಮೀಯನೂ ಅಲ್ಲ, ದೇಶದ್ರೋಹಿಯೂ ಅಲ್ಲ! ಇಬ್ಬರ ಉದ್ದೇಶವೂ ದೇಶರಕ್ಷಣೆಯೇ ಆಗಿದ್ದರೂ ಆಯ್ದುಕೊಂಡ ಮಾರ್ಗಗಳು ಭಿನ್ನ.
ಅಲ್ಲದೆ, ಗಾಂಧಿಯನ್ನು ಕೊಂದಿದ್ದರಿಂದ ಗೋಡ್ಸೆಗೆ ದಕ್ಕಿದ್ದಾದರೂ ಏನು? ಎನ್ನುವ ಪ್ರಶ್ನೆ ಕಾಡತೊಡಗಿದಾಗ ಉತ್ತರವಾಗಿ ದೊರೆತದ್ದು ರವಿ ಬೆಳಗೆರೆಯವರು ಬರೆದ ‘ಗಾಂಧಿಹತ್ಯೆ ಮತ್ತು ಗೋಡ್ಸೆ’ ಪುಸ್ತಕ. ನಾನು ಗಾಂಧಿತತ್ತ್ವದ ಪರಮ ಅನುಯಾಯಿ
ಯಾಗಿದ್ದರಿಂದ ಈ ಪುಸ್ತಕವನ್ನು ಓದುವ ಯತ್ನವನ್ನೇ ಮಾಡಿರಲಿಲ್ಲ. ಓದುವಂತೆ ಅವರೂ ಯಾವತ್ತೂ ಒತ್ತಾಯಿಸಿರಲಿಲ್ಲ. ಆದರೆ ಈ ಪುಸ್ತಕವನ್ನು ಓದದೇ ಹೋಗಿದ್ದರೆ ಎಷ್ಟೆಲ್ಲ ವಿಷಯಗಳನ್ನು ತಿಳಿದುಕೊಳ್ಳದೆ ಹೋಗುತ್ತಿದ್ದಾನಲ್ಲ ಅನ್ನಿಸಿದ್ದು ಮಾತ್ರ ಸತ್ಯ!
ಅವರ ವಿವರಣೆಯಲ್ಲಿ ಗಾಂಧಿ ಹಾಗೂ ಗೋಡ್ಸೆಯನ್ನು ನಿಮ್ಮೊಂದಿಗಿಷ್ಟು ಪರಿಚಯಿಸಿಕೊಳ್ಳುವ ಪುಟ್ಟ ಪ್ರಯತ್ನ. ‘ನಾನು ಕಮ್ಯುನಿಸ್ಟ್ ಸಿದ್ಧಾಂತ ಓದಿ ಬೆಳೆದವನು. ಇವತ್ತಿಗೂ ನನ್ನಲ್ಲಿ ಎಡಪಂಥೀಯ ಒಲವುಗಳಿವೆ. ಕಮ್ಯುನಿಸ್ಟ್ ಸಿದ್ಧಾಂತ ನನಗೆ ಕಲಿಸಿದ ಅತಿದೊಡ್ಡ ಪಾಠವೆಂದರೆ, ಕಣ್ಕಾಪು ಕಿತ್ತೆಸೆದು ಎಲ್ಲವನ್ನೂ ನೋಡುವುದು. ಹಾಗೆ ನೋಡಿದುದರ ಪರಿಣಾಮವಾಗಿಯೇ ನನಗೆ ಗೋಡ್ಸೆ ಮತ್ತು ಗಾಂಧಿ ಇಬ್ಬರ ವ್ಯಕ್ತಿತ್ವಗಳನ್ನೂ ಹೆಚ್ಚು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗಿದೆ.
ನಾನು ಇತಿಹಾಸದ ವಿದ್ಯಾರ್ಥಿ. ಇತಿಹಾಸವನ್ನು ನಿಜವಾದ ಪ್ಯಾಷನ್ ಇಟ್ಟುಕೊಂಡು ಓದಲೆತ್ನಿಸಿದವನು. ಹೀಗಾಗಿ ನನಗೆ ಪುರಾಣಗಳ ರಾಮ-ರಾವಣನ ಕಲ್ಪನೆಗಳಿಗಿಂತ ಮನುಷ್ಯ ಪ್ರಪಂಚದ ಆಗುಹೋಗುಗಳು ಮತ್ತು ವ್ಯಕ್ತಿತ್ವಗಳು ಹೆಚ್ಚು ಸ್ಪಷ್ಟವಾಗಿ, ವಿಭಿನ್ನವಾಗಿ ಅರ್ಥವಾಗುತ್ತವೆ. ನಮ್ಮ ಕಲ್ಪನೆಯಲ್ಲಿ ಗಾಂಧೀಜಿ ತುಂಬ ಒಳ್ಳೆಯವರು, ಶಾಂತಿದೂತ, ಹೋರಾಟಗಾರ, ಸತ್ಯದ ಪಕ್ಷಪಾತಿ, ನ್ಯಾಯದ ಸ್ಥಿರಮೂರ್ತಿ.
ಅಂಥವರನ್ನು ಕೊಂದ ನಾಥೂರಾಮ ಗೋಡ್ಸೆ ಕೆಟ್ಟವನು, ಉನ್ಮಾದಿ, ಶಾಂತಿಸಿದ್ಧಾಂತದ ವಿರೋಧಿ. ಅಷ್ಟೆ! ಅದರಾಚೆಗೆ ನಮಗೇನೂ ಗೊತ್ತಿಲ್ಲ. ಗೊತ್ತು ಮಾಡಿಕೊಳ್ಳಲು ಸಿದ್ಧರೂ ಇಲ್ಲ. ನಾವು ರಾಮ-ರಾವಣ ಸಿದ್ಧಾಂತದ ಕಣ್ಕಾಪು ಕಟ್ಟಿಕೊಂಡೇ ಬೆಳೆದಿದ್ದೇವಾದ್ದರಿಂದ ನಾಥೂರಾಮ ಗೋಡ್ಸೆಯಲ್ಲಿ ಯಾರಾದರೂ ಒಂಚೂರು mಟoಜಿಠಿಜಿqಛಿ ಗುಣಗಳಿದ್ದವು ಎಂದು ಹೇಳಿದ ಕೂಡಲೆ ಅವರು ನಮ್ಮ ಕಣ್ಣಿಗೆ ಆರೆಸ್ಸೆಸ್ಸಿಗರಾಗಿ, ಮತಾಂಧ ಹಿಂದೂ ಆಗಿ, ಶಾಂತಿ ಸಿದ್ಧಾಂತದ ವಿರೋಧಿಯಾಗಿ ಗಾಂಧಿದ್ರೋಹಿ ಆಗಿಬಿಡುತ್ತಾರೆ.
ಮಹಾತ್ಮ ಗಾಂಧಿ ಆ ಕಾಲಘಟ್ಟದ ಬಹುದೊಡ್ಡ ವ್ಯಕ್ತಿತ್ವ. ಒಂದು ನಾಡಿನ ಭವಿತವ್ಯದ ದಿಕ್ಕು ಬದಲಿಸಿದ ಮಹನೀಯ. ಒಬ್ಬ ನಿಸ್ವಾರ್ಥ ದೇಶಪ್ರೇಮಿ. ಅದನ್ನು ಯಾರೂ ಅಲ್ಲಗಳೆಯಲಾರರು. ಆದರೆ ಗಾಂಧೀಜಿ ತಪ್ಪುಗಳನ್ನೇ ಮಾಡಲಿಲ್ಲವೆ? ಅವರ ಅಹಿಂಸಾ ಸಿದ್ಧಾಂತ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್‌ರನ್ನು ನೇರವಾಗಿ ನೇಣುಗಂಬಕ್ಕೆ ನಡೆಸಿಕೊಂಡು ಹೋದು ದನ್ನು ಸಮ್ಮತಿಸಲಿಲ್ಲವೆ? ಇಡೀ ದೇಶದ ಹಿಂದೂಗಳನ್ನು ತಮ್ಮ ಒಂದೇ ಒಂದು ಉಪವಾಸ ಮಂತ್ರದಿಂದ ಕೈಕಟ್ಟಿ ಕೂಡುವಂತೆ ಮಾಡಿದ ಬಾಪೂಜಿ, ಅದೇ ಉಪವಾಸದ ಮಂತ್ರವನ್ನು ಯಾವತ್ತಾದರೂ ಭಾರತದ ಮುಸ್ಲಿಮನೊಬ್ಬನ ಮೇಲೆ ಪ್ರಯೋಗಿಸಿ ದರಾ? ಸುಭಾಷ್‌ಚಂದ್ರ ಬೋಸ್‌ರಂಥ ದಿಟ್ಟ ನಾಯಕನನ್ನೇ ಸದ್ದಡಗಿಸಿಬಿಟ್ಟ ಬಾಪೂಜಿ, ಯಾವತ್ತಾದರೂ ಮಹಮ್ಮದ್ ಅಲಿ ಜಿನ್ನಾ ರಂತಹ ದೇಶ ವಿಭಜಕನನ್ನು ಗದರಿಸಿದರಾ? ಆರ್ಯ ಸಮಾಜದ ನಿಷ್ಪಾಪಿ ಮನುಷ್ಯ ಸ್ವಾಮಿ ಶ್ರದ್ಧಾನಂದರ ಬಳಿ ತಮ್ಮ ಸ್ವಂತ ಮಕ್ಕಳನ್ನು ಬಿಟ್ಟಿದ್ದರು ಗಾಂಧೀಜಿ.
ಶ್ರದ್ಧಾನಂದರೇ ಆ ಮಕ್ಕಳನ್ನು ಬೆಳೆಸಿದರು. ವಿದ್ಯೆ ಕಲಿಸಿದರು. ಅಂಥ ಶ್ರದ್ಧಾನಂದರನ್ನು ಬಹಿರಂಗವಾಗಿ ಟೀಕಿಸಿದರು. ಮುಂದೆ ಸ್ವಾಮಿ ಶ್ರದ್ಧಾನಂದರ ಹತ್ಯೆಯಾಯಿತು. ಮತೋನ್ಮಾದಿ ಮುಸ್ಲಿಮನೊಬ್ಬ ಸ್ವಾಮಿ ಶ್ರದ್ಧಾನಂದನನ್ನು ಕೊಂದುಹಾಕಿದ. ಅಂಥ
ನಿಷ್ಪಾಪಿಯೊಬ್ಬರನ್ನು ಕೊಂದದ್ದಕ್ಕೆ ಗಾಂಧೀಜಿ ಕಣ್ಣೀರಿಡಲಿಲ್ಲ. ಬದಲಿಗೆ ಶ್ರದ್ಧಾನಂದರನ್ನು ಕೊಲೆಗೈದ ಉನ್ಮಾದಿ ಮುಸಲ್ಮಾನನ್ನು ಅಪ್ಪಿಕೊಂಡು eಛಿ ಜಿo ಞqs ಚ್ಟಿಟಠಿeಛ್ಟಿ! ಎಂದರು.
ಭಾರತ ಇಬ್ಭಾಗವಾಗುವುದಾದರೆ, ಅದು ನನ್ನ ಹೆಣದ ಮೇಲೆಯೇ! ಎಂದು ಗುಡುಗಿದವರು ಮಹಾತ್ಮ. ಆದರೆ ನಿಜಕ್ಕೂ ಇಬ್ಭಾಗವಾಗಿ ಹೋದಾಗ ಅವರು ಅತ್ಯಂತ ನಿಸ್ಸಹಾಯಕರಾಗಿ ಕುಳಿತುಬಿಟ್ಟರು. ಹಿಂದೂ-ಮುಸ್ಲಿಂ ಹಿಂಸಾಚಾರಗಳಾದಾಗ ಪಶ್ಚಿಮ ಬಂಗಾಲದ ಕಟುಕನೆನ್ನಿಸಿಕೊಂಡಿದ್ದ ಸುಹ್ರಾವರ್ದಿಯನ್ನು ಕೇವಲ ಮುಸ್ಲಿಮನೆಂಬ ಕಾರಣಕ್ಕೆ ತಮ್ಮ ಪಕ್ಕದಲ್ಲಿ ಕೂಡಿಸಿಕೊಂಡರು. ಅವನು ಭಾರತವು ಎಂದಿಗೂ ಮರೆಯಲಾಗದ ಹಿಂದೂ ನರಮೇಧವನ್ನು ಮಾಡಿಸಿ ಬಂದು ಕುಳಿತಿದ್ದ. ಮಹಾತ್ಮ ಗಾಂಧಿಗೆ ಅದೊಂದು ಅಪರಾಧ ಅಂತ ಅನ್ನಿಸಲೇ ಇಲ್ಲ.
ಅವರ ಸಾತ್ವಿಕತೆ, ಔದಾತ್ಯ, ಮುಸ್ಲಿಂ ಪ್ರೇಮ, ಅಹಿಂಸಾ ಸಿದ್ಧಾಂತ ಎಲ್ಲವೂ ಮೇಲುನೋಟಕ್ಕೆ ಅದ್ಭುತಗಳಾಗಿಯೇ ಕಾಣುತ್ತವೆ. ಆದರೆ ನಿಜಜೀವನಕ್ಕೆ ಬಂದಾಗ ಒಂದು ದೇಶದ, ಜನಾಂಗದ, ಮನುಷ್ಯ ಸಂಕುಲದ ಅಳಿವು ಉಳಿವಿನ ಪ್ರಶ್ನೆ ಬಂದಾಗ ಮಹಾತ್ಮ ಗಾಂಧಿ ಬೋಧಿಸಿದ ಅಹಿಂಸಾ ಸಿದ್ಧಾಂತ ಶುದ್ಧ ಅವಿವೇಕ ಅನ್ನಿಸದಿರಲಾರದು.
ಪಾಕಿಸ್ತಾನದಿಂದ ಹಿಂದೂಗಳು ವಲಸೆ ಬಂದಂತೆಯೇ, ಭಾರತದಿಂದಲೂ ಮುಸ್ಲಿಮರು ವಲಸೆಹೋದರು. ಆದರೆ ನಿರಾಶ್ರಿತರಾಗಿ ಅಲ್ಲ! ಅವರು ತಮ್ಮನ್ನು ತಾವು ‘ಮೊಹಾಜಿರ್’ಗಳೆಂದು ಕರೆದುಕೊಂಡರು. ಎಲ್ಲವನ್ನೂ ಭಾರತದ ಬಿಟ್ಟು, ಎಲ್ಲವನ್ನೂ ತ್ಯಾಗ ಮಾಡಿ ಪಾಕಿಸ್ತಾನಕ್ಕೆ ಬಂದ ತಮಗೆ ವಿಶೇಷ ಸವಲತ್ತು ಬೇಕೆಂದು ಹಟಹಿಡಿದರು. ಸವಲತ್ತು ಪಡೆದುಕೊಂಡರು. ತಮ್ಮದೊಂದು ಬಲವಾದ ಪಕ್ಷ ಕಟ್ಟಿದರು. ಮೂಲ ಪಾಕ್ ನಿವಾಸಿಗಳನ್ನು ಮೀರಿ ಪ್ರಬಲರಾದರು. ಆದರೆ ಪಾಕಿಸ್ತಾನದಿಂದ ಭಾರತಕ್ಕೆ ಓಡಿಬಂದ ನಿರಾಶ್ರಿತ ಹಿಂದೂಗಳಿಗೆ ಇಲ್ಲಿ ಸಿಕ್ಕಿದ್ದಾದರೂ ಏನು? ಅವರ ಸಮಸ್ಯೆಗೆ ಯಾವ ರಾಷ್ಟ್ರನಾಯಕ ಸ್ಪಂದಿಸಿದ? ಅವರು ಆಶ್ರಯ ಪಡೆದಿದ್ದ ಮಸೀದಿ, ದರ್ಗಾಗಳಿಂದಲೂ ಅವರನ್ನು ಕಡುಚಳಿಗಾಲದಲ್ಲಿ ಹಟ ಹಿಡಿದು, ಉಪವಾಸ ಕುಳಿತು ಹೊರ ಹಾಕಿಸಿದರು.
ಮುಸ್ಲಿಮರಿಗೆ ಮಸೀದಿ ದರ್ಗಾ ಬಿಟ್ಟುಕೊಡಿ ಎಂದದ್ದು ಸರಿಯಾಗಿಯೇ ಇತ್ತು. ಆದರೆ ಬೆತ್ತಲೆ ನಿಂತ ಹಿಂದೂಗಳಿಗೆ ತಲೆಮರೆಸಿ ಕೊಳ್ಳಲು ಇನಿತು ಜಾಗಕೊಡಿ ಎಂದು ತಮ್ಮದೇ ಶಿಷ್ಯರಿಗೆ ಕರೆಕೊಡುವ ಮಟ್ಟಿಗಿನ ಔದಾರ್ಯ ಗಾಂಧೀಜಿಗೆ ಇರಲಿಲ್ಲ. ಗೋಡ್ಸೆ ಯಬ್ಬ ದಿಟವಾದ ದೇಶಭಕ್ತನಿದ್ದ. ನಿಷ್ಠನಿದ್ದ, ಪ್ರಾಮಾಣಿಕನಿದ್ದ, ಶ್ರಮಜೀವಿಯಿದ್ದ. ಇವತ್ತಿನ ಎಲ್ಲ ಜಾತ್ಯತೀತರಿಗಿಂತಲೂ ಹೆಚ್ಚಿನ ಜಾತ್ಯತೀತ ಮನಸ್ಸಿನವನಾಗಿದ್ದ. ಇತಿಹಾಸ ಓದಿಕೊಂಡವನಾಗಿದ್ದ. ಸಜ್ಜನನಾಗಿದ್ದ.
ದೇಶಭಕ್ತಿಯ ವಿಷಯದಲ್ಲಿ ಅವನು ಖಂಡಿತವಾಗ್ಯೂ ಗಾಂಧಿಗಿಂತ ಕಡಿಮೆಯವನಾಗಿರಲಿಲ್ಲ. ಆದರೆ ನಾಥೂರಾಮ ಗೋಡ್ಸೆ ಎಂಬ ಭಾವುಕನಿಗೆ ಬದಲಾದ ಕಾಲಮಾನವನ್ನು ಗುರುತಿಸುವುದು ಸಾಧ್ಯವಾಗಿರಲಿಲ್ಲ. ಗುರುಗೋವಿಂದ ಸಿಂಹ, ರಾಣಾ ಪ್ರತಾಪ, ಛತ್ರಪತಿ ಶಿವಾಜಿಯರ ಕಾಲಕ್ಕೂ ದೇಶವಿಭಜನೆಯಾದ ೧೯೪೮ರ ಕಾಲಕ್ಕೂ ಬದುಕು ಬದಲಾಗಿದೆ, ನ್ಯಾಯದ ಪರಿಕಲ್ಪನೆ
ಬದಲಾಗಿದೆ, ಜಾತಿ-ಧರ್ಮಗಳ ಪರಿಕಲ್ಪನೆ ಬದಲಾಗಿದೆ ಎಂಬ ವಿವೇಕ ನಾಥೂರಾಮನಿಗಿರಲಿಲ್ಲ.
೧೯೪೭-೧೯೪೮ರ ಮಧ್ಯೆ ಸಾಕಷ್ಟು ವಿದ್ಯಮಾನಗಳು ಬದಲಾಗಿದ್ದವು. ಅವುಗಳ ಪರಿಕಲ್ಪನೆಗಳು ಬದಲಾಗಿದ್ದವು. ಆದರೆ ಅದು ಗೋಡ್ಸೆಗೆ ಅರ್ಥವಾಗಲಿಲ್ಲ. ಹಿಂದೂ ರಾಷ್ಟ್ರೀಯವಾದಿಗಳ ಅಗ್ರನಾಯಕ ಮತ್ತು ತನ್ನ ಮಹಾಗುರು ವೀರ ಸಾವರ್ಕರ್’ರನ್ನೇ ಅವನು ಧಿಕ್ಕರಿಸಿಬಿಟ್ಟಿದ್ದ! ಅವನ ಕಣ್ಣಿಗೆ ಹಿಂದೂ ಮಹಾಸಭಾ ಕಾಂಗ್ರೆಸ್ಸಿಗರ ಕೈಗೆ ಸಿಕ್ಕು ಭ್ರಷ್ಟಗೊಂಡ ಆಟದ ಗೊಂಬೆ ಯಂತೆ ಕಂಡಿತ್ತು. ಆರೆಸ್ಸೆಸ್ ಒಂದು ನಿರುಪಯೋಗಿ ಸಂಘಟನೆಯಂತೆ ಕಂಡಿತ್ತು.
ವೀರ ಸಾವರ್ಕರ್‌ರಂಥ ನಾಯಕರು ದಾರಿ ತಪ್ಪಿದ, ದಾರಿ ತಪ್ಪಿಸುವ ಅಸಹಾಯಕ ನಾಯಕರಂತೆ ಕಂಡಿದ್ದರು. ಹಾಗೆ ವಾಸ್ತವದ ನೆಲೆ ಬಿಟ್ಟು ಹೊರಟವನ ತಿಳಿವಳಿಕೆಗೆ ಸರಿ ಅನ್ನಿಸಿದ್ದು- ಗಾಂಧೀಜಿಯನ್ನು ಈ ನೆಲದ ಮೇಲಿರದಂತೆ ಮಾಡಿಬಿಡುವಿಕೆ!
ದುರಂತವೆಂದರೆ, ಮಹಾತ್ಮ ಗಾಂಧಿಯವರು ಉದ್ದಕ್ಕೂ ಹಿಂದೂಗಳನ್ನೇ ಬೆದರಿಸಿದರು. ಅದಕ್ಕಿಂತ ದೊಡ್ಡ ದುರಂತವೆಂದರೆ, ನಾಥೂರಾಮ ಗೋಡ್ಸೆ ಕೂಡ ಅದೇ ತಪ್ಪನ್ನು ಮಾಡಿಬಿಟ್ಟ! ದೇಶ ವಿಭಜನೆಗೆ ಮುಖ್ಯ ಕಾರಣನಾದ ಮಹಮ್ಮದ್ ಅಲಿ ಜಿನ್ನಾ ಮತ್ತು ಅವನ ಸಂಗಡಿಗರನ್ನು ದಂಡಿಸುವ ಬದಲು ದೇಶ ವಿಭಜನೆಯಾಗಕೂಡದೆಂದು ಬಯಸಿದ್ದ ಬಾಪುವಿನ ಪ್ರಾಣ ತೆಗೆದುಬಿಟ್ಟ.
ತಕರಾರುಗಳಿದ್ದವೆಂಬ ಮಾತ್ರಕ್ಕೆ ಅವನು ಗಾಂಧೀಜಿಯಂತಹ ಅಮೂಲ್ಯ ಜೀವವೊಂದನ್ನು ಈ ಪ್ರಪಂಚದ ಮುಖದಿಂದಲೇ ಒರೆಸಿ ಹಾಕಿದುದು ಸರಿಯಾ? ಅಂತೆಯೇ ಗಾಂಧೀಜಿಯನ್ನು ಕೊಂದನೆಂಬ ಕಾರಣಕ್ಕೆ ನಾಥೂರಾಮ ಗೋಡ್ಸೆಯನ್ನು ರಾವಣ ಸದೃಶನೆಂದು ಚಿತ್ರಿಸುವುದು ಸರಿಯಾ? ….’ ಪುಸ್ತಕ ಓದುತ್ತ ಓದುತ್ತ ಸರಿ-ತಪ್ಪುಗಳ ನಡುವೆ ೧೯೪೮-೧೯೯೧ರ ನಡುವೆ ನಡೆದು ಹೋದ ೪ ‘ಗಾಂಧಿ’ಸಾವುಗಳು (ಮಹಾತ್ಮ ಗಾಂಧಿ, ಇಂದಿರಾ ಗಾಂಧಿ, ಸಂಜಯ್ ಗಾಂಧಿ, ರಾಜೀವ್ ಗಾಂಧಿ) ಬಿಡದಂತೆ
ಕಾಡುತ್ತಿವೆ.
ಸಮಸ್ಯೆಗಳು, ಸವಾಲುಗಳು, ಸಲಹೆಗಳು ಸಾವಿರವಿದ್ದರೂ, ಒಂದು ತಪ್ಪು ನಿರ್ಧಾರ ಹೇಗೆ ಜೀವಗಳನ್ನೇ ಬಲಿತೆಗೆದುಕೊಂಡು ಬಿಡುತ್ತದೆ ಅನ್ನುವ ಮಾತಿನ ನಡುವೆ ಗಾಂಧಿ ಜಯಂತಿಯಂದು ಬಾಪುವಿಗೊಂದು ನಮನ ಸಲ್ಲಿಸಿದೆ.