Wednesday, 11th December 2024

ತನಿಖೆಯಾಗಬೇಕಿದೆ ಮತಾಂತರಗಳ ಕುತಂತ್ರ

ಹಂಪಿ ಎಕ್ಸ್’ಪ್ರೆಸ್ 

ದೇವಿ ಮಹೇಶ್ವರ ಹಂಪಿನಾಯ್ಡು

ಭಯೋತ್ಪಾದನೆ ಮತ್ತು ಮತಾಂತರ ನಮ್ಮ ದೇಶಕ್ಕೆ ತಟ್ಟಿದ ಎರಡು ಘನಘೋರ ಶಾಪಗಳು. ಶತಮಾನಗಳಿಂದಲೂ ಮತಾಂಧ ಮುಸ್ಲಿಂ ರಾಜರುಗಳ ಇಸ್ಲಾಂ ಭಯೋತ್ಪಾದನೆಯ ಆಕ್ರಮಣ, ಅತ್ಯಾಚಾರ, ಹತ್ಯೆ, ರಕ್ತಪಾತಗಳಿಗೆ ಕೋಟ್ಯಂತರ ಹಿಂದೂಗಳು ಹೆಣವಾಗಿ ಹೋದರು.

ಅತ್ಯಮೂಲ್ಯ ದೇವಾಲಯಗಳನ್ನು ಕೆಡವಿ ಅದರ ಮೇಲೆ ಸಮಾಧಿಗಳನ್ನು ಕಟ್ಟಿದರು. ಈಗಲೂ ಸುತ್ತಮುತ್ತಲಿನ ದೇಶಗಳಲ್ಲಿನ ಮತ್ತು ದೇಶದೊಳಗಿನ ಭಯೋತ್ಪಾದನಾ ಮನಸ್ಥಿತಿಗಳಿಗೆ ಹಿಂದೂಗಳ ಮೇಲೆ ದಾಳಿನಡೆಸಿ ಮಾರಣಹೋಮ ಮಾಡುವ ಏಕೈಕ ಬಯಕೆ ನಿರಂತರವಾಗಿದೆ. ಇಂಥ ಭಯೋತ್ಪಾದನೆ ಹಿಂದೂಗಳನ್ನು ಕೊಲ್ಲುತ್ತಿದ್ದರೆ ಕ್ರಿಶ್ಚಿಯನ್ ಮತಾಂತರದ ಕುತಂತ್ರದ ಕೃತ್ಯಗಳು ಹಿಂದುತ್ವವನ್ನೇ ಕೊಲ್ಲುತ್ತಿವೆ.

ಭಯೋತ್ಪಾದನೆಯಿಂದ ಹಿಂದೂಗಳು ಸತ್ತರೆ ಮತಾಂತರದಿಂದ ಹಿಂದೂಗಳು ಬದುಕಿದ್ದೂ ಸತ್ತಂತಾಗಿದೆ. ಒಬ್ಬ ಹಿಂದೂ ಮತಾಂತರವಾದರೆ ಒಬ್ಬ ಶತ್ರು ಹುಟ್ಟಿಕೊಂಡಂತೆ. ಆದರೆ ಎಲ್ಲದಕ್ಕೂ ಒಂದು ಕೊನೆ ಇದ್ದೇ ಇರುತ್ತದೆ. ಭಯೋತ್ಪಾದನೆಯನ್ನು ಮಟ್ಟಹಾಕಲು ಕೇಂದ್ರದಲ್ಲಿ ‘ಗಂಡು’ ಸರಕಾರ ಅಸ್ತಿತ್ವದಲ್ಲಿದೆ. ಆದರೆ ಈ ಮತಾಂತರವೆಂಬುದು ಥೇಟು ಬೀಷ್ಮನ ಮುಂದೆ ನಿಂತ
ಶಿಖಂಡಿಯಂತೆ. ನೇರವಾಗಿ ಎದುರಿಸಲೂ ಆಗುವುದಿಲ್ಲ. ಸಹಿಸಿಕೊಂಡು ಸುಮ್ಮನಿರಲೂ ಆಗುವುದಿಲ್ಲ. ಏಕೆಂದರೆ ಮತಾಂತರ ವೆಂಬುದು ಏಕಾಏಕಿ ಕಾನೂನಿನ ವ್ಯಾಪ್ತಿಯಲ್ಲಿ ತಂದು ದೂರು ದಾಖಲಿಸಿ ಬಂಧಿಸಲೂ ಆಗುವುದಿಲ್ಲ.

ಕೆಣಕಿದರೆ ಇದು ನಮ್ಮಿಷ್ಟ ನಮ್ಮ ಹಕ್ಕು ದೇಶದಲ್ಲಿ ಯಾವುದೇ ವ್ಯಕ್ತಿ ಯಾವುದೇ ಧರ್ಮವನ್ನು ಸ್ವೀಕರಿಸ ಬಹುದೆಂದು ತಿರುಗಿ ದಬಾಯಿಸುವುದೇ ಹೆಚ್ಚು. ಇದಕ್ಕೆ ದೇಶಗಳಿಂದ ಮತ್ತು ವೋಟಿಗಾಗಿ ಎಂಥ ಹೊಲಸನ್ನೂ ತಿನ್ನುವ ಸ್ಥಳೀಯ ರಾಜಕೀಯ ನಾಯಕರು ಕುಮ್ಮಕ್ಕು ನೀಡುತ್ತಲೇ ಬರುತ್ತಿದ್ದಾರೆ. ಇದೊಂದು ರೀತಿ ಭ್ರಷ್ಟಾಚಾರದಂತೆ. ಕಂಡರೂ ಕಾಣದಂತೆ ನಡೆದುಕೊಂಡು ಬರುತ್ತಿದೆ. ಆದರೆ ನಮ್ಮ ಸವೋಚ್ಚ ನ್ಯಾಯಾಲಯ ಅಂದರೆ ಸುಪ್ರೀಂ ಕೋರ್ಟ್ ಹೇಳವುದೇನು ಗೊತ್ತೇ? ಭಾರತದ ಸಂವಿಧಾನ ದಲ್ಲಿ ಒಬ್ಬ ವ್ಯಕ್ತಿ ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ಸ್ವಇಚ್ಛೆಯಿಂದ ಮತಾಂತರಗೊಳ್ಳುವುದನ್ನು ಒಪ್ಪಿದೆಯೇ ಹೊರತು ಇನ್ನೊಂದು ಧರ್ಮಕ್ಕೆ ಮತಾಂತರಿಸುವುದನ್ನು ಒಪ್ಪುವುದಿಲ್ಲ.

ಯಾವುದೇ ಧರ್ಮದ ಯಾವುದೇ ವ್ಯಕ್ತಿಯು ತನ್ನ ಧರ್ಮವನ್ನು ಪೂಜಿಸುವುದು ಪರಧರ್ಮವನ್ನು ಪ್ರೀತಿಸುವುದು ನೀತಿಧರ್ಮ. ಆದರೆ ಒಂದು ಧರ್ಮ ಮತ್ತೊಂದು ಧರ್ಮದ ಮೇಲೆ ಹುನ್ನಾರದಿಂದ ಆಕ್ರಮಣ ಮಾಡುವುದು ವಿಶ್ವದ ಯಾವುದೇ ಮೂಲೆ ಯಲ್ಲೂ ಅಕ್ರಮ ಮತ್ತು ಅಪರಾಧವೆನಿಸಿಕೊಳ್ಳುತ್ತದೆ. ಹಾಗೇ ಬಲವಂತ ಅಥವಾ ಆಮಿಷ, ಮತಾಂತರ ಅಥವಾ ಪ್ರಚೋಧನಾ ತ್ಮಕ ಮತಾಂತರ ಕಾನೂನಿನ ದೃಷ್ಟಿಯಲ್ಲಿ ಅಕ್ರಮ ಮತ್ತು ಅಪರಾಧ. ಒಬ್ಬ ವ್ಯಕ್ತಿ ಬೈಬಲನ್ನು ಓದಿ ಅದರಿಂದ ಪ್ರೇರಿತನಾಗಿ ಕ್ರೈಸ್ತಮತಕ್ಕೆ ಮತಾಂತರವಾಗಲೂ ಬಹುದು.

ಆದರೆ ಬೈಬಲ್ ಒತ್ತೊಟ್ಟಿಗಿರಲಿ ಬದುಕು ಏನೆಂಬುದನ್ನೇ ಅರಿಯದ ಮುಗ್ಧ ಹಿಂದೂಗಳನ್ನು ಅನೇಕ ಆಮಿಷಗಳಿಂದ ಮೂಢ ನಂಬಿಕೆಗಳನ್ನು ಬಿತ್ತುವುದರಿಂದ ಅವರ ತಲೆಯನ್ನು ಕೆಡಿಸಿ ಮತಾಂತರ ಮಾಡಿಬಿಡುತ್ತಾರೆ. ಇದನ್ನ ಹೇಳಬೇಕಾದವರು ಸ್ವಾರ್ಥಿಗಳಾಗಿ ವೋಟ್ ಬ್ಯಾಂಕ್‌ಗಾಗಿ ಬೇಲಿಯೊಳಗೆ ಹಿಂದೂಗಳೆಂಬ ಹೊಲವನ್ನು ಮೇಯಲು ನರಿ ನಾಯಿಗಳನ್ನು ಒಳಗೆ ಬಿಟ್ಟಂತೆ ಮಿಷನರಿಗಳವರಿಗೆ ಸಹಾಯ ಮಾಡುತ್ತಾ ಏನೂ ತಿಳಿಯದಂತೆ ಸುಮ್ಮನಿರುತ್ತಾರೆ. ಅಸಲಿಗೆ ಕ್ರಿಶ್ಚಿಯನ್ ಧರ್ಮ ನಮ್ಮ ದೇಶದಲ್ಲಿ ಕಾಲಿಟ್ಟಿದ್ದೇ ಬ್ರಿಟಿಷರ ಗುಲಾಮಗಿರಿಯೊಂದಿಗೆ.

ಇಲ್ಲಿನ ಮುಗ್ಧ ಹಿಂದೂಗಳಿಗೆ ಬ್ರಿಟಿಷ್ ಸರಕಾರದಲ್ಲಿ ಕೆಲಸ ನೀಡುವ, ಗುಲಾಮಗಿರಿಯಲ್ಲಿ ದಂಡಿಸದಾ, ಅಥವಾ ಬೆದರಿಕೆಯ ಮೂಲಕ ಅಸಂಖ್ಯಾತ ಜನರನ್ನು ಮತಾಂತರ ಮಾಡಿಬಿಟ್ಟರು. ಇಂದು ಅಲ್ಪಸಂಖ್ಯಾತ ಹೆಸರಿನಲ್ಲಿ ಯಾರು ಕ್ರಿಶ್ಚಿಯನ್ ‌ಗಳಿದ್ದಾರೆ. ಅವರಲ್ಲಿ ತೊಂಬತ್ತರಷ್ಟು ಭಾಗದ ಮೂರನೇ ತಲೆಮಾರಿನ ಪೂರ್ವಜರೆಲ್ಲಾ ಹಿಂದೂಗಳೇ ಹೊರತು ಇಲ್ಲಿಂದಲೇ
ಉದ್ಭಸಿದ ಕ್ರಿಶ್ಚಿಯನ್ನರುಗಳಲ್ಲ. ಇನ್ನುಳಿದ ಹತ್ತರಷ್ಟು ಭಾಗ ಯಾರೆಂದರೆ, ಅಂದಿನ ಬ್ರಿಟಿಷರ ಸರಕಾರದಲ್ಲಿದ್ದ ಆಂಗ್ಲರು
ಇಲ್ಲಿನ ಸಮಾಜದಲ್ಲಿ ಬೆರೆತು ಭಾರತೀಯರೊಂದಿಗೇ ವಿವಾಹವಾಗಿ ತಮ್ಮ ಕ್ರಿಶ್ಚಿಯನ್ ಧರ್ಮವನ್ನು ಮುಂದುವರಿಸಿಕೊಂಡು ಬಂದವರು.

ಇಂಥ ಕ್ರಿಶ್ಚಿಯನ್ನರನ್ನು ನೋಡಿದ ಕೂಡಲೇ ಇವರು ಅಸಲಿ ಕ್ರಿಶ್ಚಿಯನ್ ಎಂದು ತಳಿಯುತ್ತದೆ. ಆದರೆ ಅದಕ್ಕಿಂತಲೂ  ಸ್ಪಷ್ಟ ವಾಗಿ ತಿಳಿಯುವುದೇನೆಂದರೆ ನೋಡಿದ ಕೂಡಲೇ ಈತ ಹಿಂದೂ ಆಗಿದ್ದು ಮತಾಂತರಗೊಂಡ ಕ್ರಿಶ್ಚಿಯನ್ ಎಂದು ತಿಳಿದು ಬಿಡುತ್ತದೆ. ಇಂಥವರೇ ತಮ್ಮ ಮನೆಯ ಮತ್ತು ವಾಹನಗಳ ಮೇಲೆ ‘ಯೇಸು ಬರುತ್ತಾನೆ’ ‘ಯೇಸು ನಿನ್ನ ರಕ್ತದಲ್ಲಿ’ ‘ಯೇಸು ನನ್ನ ನಂಬಿಕೆ’ ಎಂದೆಲ್ಲಾ ಅಗತ್ಯಕ್ಕಿಂತ ಹೆಚ್ಚಾಗಿ ನಂಬಿರುವಂತೆ ಕಾಣಸಿಗುತ್ತಾರೆ.

ಮಿಷನರಿಗಳ ಹುಚ್ಚಾಟಗಳು ಒಂದಾ ಎರಡಾ, ಪ್ರಾರ್ಥನೆಯ ನೆಪದಲ್ಲಿ ಸೇರಿಸಿಕೊಳ್ಳುವ ಮಂದಿಗಳನ್ನು ಅಸಹಜವಾಗಿ ವಿಕೃತವಾಗಿ ಅರಚುವಂತೆ, ಬಿದ್ದು ಉರುಳಾಡುವಂತೆ ಉನ್ಮಾದಕ್ಕೆ ತಳ್ಳುತ್ತಾರೆ. ತಿಕ್ಕಲು ಸಮ್ಮೋಹನಕ್ಕೆ ಒಳಪಡಿಸಿ ಪ್ರಾಣಿಗಳಂತೆ ಮಾಡುತ್ತಾರೆ. ಹಿಂದೂ ದೇವಾಲಯಗಳಲ್ಲಿನ ಆಚಾರ ಪದ್ಧತಿ ಸಂಪ್ರದಾಯಗಳು, ಸಂಗೀತ, ಕೀರ್ತನೆ ಇವುಗಳಲೆಲ್ಲಾ ಯೇಸಪ್ಪನ ಮಹಿಮೆಯನ್ನು ನಾಟಕೀಯವಾಗಿ ತುರುಕುತ್ತಾರೆ. ರಂಗೋಲಿಯಿಂದ ಹಿಡಿದು ‘ದೇವಾಲಯ’ ಎಂಬ ಚರ್ಚಿನಲ್ಲಿ ದೀಪಸ್ತಂಭ ಅರ್ಚನೆ, ಪ್ರಾರ್ಥನೆಗಳೆಲ್ಲವೂ ಯೇಸುಮಯ.

ಕೊನೆಗೆ ಯೇಸಪ್ಪನಿಗೇ ಈಶ್ವರ, ಸುಬ್ರಹ್ಮಮಣ್ಯ, ಕೃಷ್ಣ, ಗಣೇಶ ದೇವರ ರೂಪಗಳನ್ನು ನೀಡಿ ತಮ್ಮೊಂದಿಗೆ ಸಾಕ್ಷಾತ್ ಯೇಸು ವನ್ನೇ ಮತಾಂತರಿಸಿ ಕೃತಾರ್ಥರಾಗಿಬಿಡುತ್ತಾರೆ. ಹಿಂದೂ ಸಾಧುಗಳಂತೆ ಕೇಸರಿ ನಿಲುವಂಗಿಗಳನ್ನು ತೊಟ್ಟು, ಕೈಯಲ್ಲಿ ಜಪದ ರುದ್ರಾಕ್ಷಿ ಸರವನ್ನು ಹಿಡಿದು ನೋಡಿದ ಕೂಡಲೇ ಹಿಂದೂ ಸಂತರೆಂದು ನಂಬುವಂತೆ ಮತಾಂತರದ ಯುದ್ಧವನ್ನು ಗೆಲ್ಲುತ್ತಾ ಹೊರಡುತ್ತಾರೆ. ಇವರ ಜಯಗಳಲ್ಲಿ ಭರತನಾಟ್ಯ, ಕೇರಳದ ಕಥಕ್ಕಳಿ, ಮಂಗಳೂರಿನ ಯಕ್ಷಗಾನ ಎಲ್ಲವೂ ಯೇಸುಮಯವಾಗಿ ಮಾರ್ಪಟ್ಟಿದೆ.

ಬ್ರಿಟಿಷರು ಭಾರತ ಬಿಟ್ಟು ಹೋದಮೇಲೆ ಇಂಥ ಮನೆಹಾಳು ಕೆಲಸಗಳನ್ನು ಮುಂದುವರಿಸುವ ಸಲುವಾಗೇ ನಮ್ಮ ದೇಶದೊಳಗೆ ದೇಶದಿಂದ ‘ಮೇರಿಯಮ್ಮ’ನನ್ನು ಕಳಿಸಿ ಇಲ್ಲಿನ ಪಿತೃಪಕ್ಷದ ನಾಯಕನನ್ನು ತಗಲಿಕೊಂಡು ರಾಜಕೀಯ ದಾಳಗಳಾಗಿ ಬಳಸುವ ಹುನ್ನಾರವೂ ಯಶಸ್ವಿಯಾಗಿದೆ. ಮತಾಂತರ ಗೊಂಡ ರಾಜಶೇಖರ ರೆಡ್ಡಿಯ ಕೊಡುಗೆಯನ್ನು ಪಕ್ಕದ ಆಂಧ್ರದಲ್ಲಿ ಹೋಗಿ
ನೋಡಬೇಕು, ಬೆಂಗಳೂರಿನ ಸಂಡೇ ಬಜಾರಿನಲ್ಲಿ ವ್ಯಾಪಾರಿಗಳು ಕೂಗಿಕೊಳ್ಳುವಂತೆ ಬೈಬಲ್‌ಗಳನ್ನು ಮಾರಾಟಮಾಡುತ್ತಾರೆ. ಸ್ವಲ್ಪ ಅನಕ್ಷರಸ್ಥನಾಗಿ ಕಂಡರೆ ಸಾಕು ಕರೋನಾ ವೈರಸ್‌ನಂತೆ ಮತಾಂತರ ಭೂತದ ಸೋಂಕು ಏರಿಬಿಡುತ್ತದೆ. ಇದನ್ನು ಪ್ರಶ್ನಿಸಿ ಮತಾಂತರಿಗಳ ಮೇಲೆ ಸಗಣಿ ನೀರು ಸುರಿಯುವುದು, ಕೇರಿಯೊಳಗೆ ಕಾಲಿಟ್ಟರೆ ದೊಣ್ಣೆ ತೋರಿಸುತ್ತ ನಾಯಿಗಳನ್ನು ಅಟ್ಟುವಂತೆ ಅಟ್ಟುವ ಕೆಲಸ ಮಾಡಿದರೆ ಅಲ್ಲಿನ ಸರಕಾರ ಇವರ ವಿರುದ್ಧವೇ ಕೇಸು ದಾಖಲಿಸಿಬಿಡುವುದೇ ಹೆಚ್ಚು. ಇನ್ನು ಕೆಲವೇ ವರ್ಷ ಗಳಲ್ಲಿ ರಾಜಶೇಖರ್‌ರೆಡ್ಡಿ ಮತ್ತು ಆತನ ಮಗ ಜಗಮೋಹನರೆಡ್ಡಿಯಂಥವರು ರಾಜ್ಯಭಾರ ಮಾಡಿದರೆ, ಜತೆಗೆ ಓವೈಸಿಯಂಥ ಮತಾಂಧ ಗಿರಾಕಿಗಳು ಗೆದ್ದುಬಂದರೆ ಅಲ್ಲಿ ಹಿಂದೂಗಳು ಅಸಹಾಯಕರಾಗಿ ಅಲ್ಪಸಂಖ್ಯಾತರಾಗಿ ಬಿಡುವುದು ಸ್ಪಷ್ಟ. ಈಗಾಗಲೇ ತಿರುಪತಿ ತಿಮ್ಮಪ್ಪನ ಕ್ಷೇತ್ರಕ್ಕೇ ಮತಾಂತರ ಸೋಂಕು ಅಂಟಿಕೊಂಡಿದೆ.

ನಾಗಲ್ಯಾಂಡ್ ನಲ್ಲಂತೂ ಹಿಂದೂಗಳನ್ನು ಹುಡುಕಬೇಕಿದೆ. ಇನ್ನು ಕೇರಳದಲ್ಲಿ ದೇವರನಾಡು ಎಂಬುದೇ ಒಂದು ಅಸಂಬದ್ಧ.
ಏಕೆಂದರೆ ಅಲ್ಲಿ ಭಯೋತ್ಪಾದನೆ ಮತ್ತು ಮತಾಂತರ ವೆಂಬುದು ಆ ರಾಜ್ಯದ ಅಸ್ಮಿತೆಯಾಗಿದೆ. ಇನ್ನು ನಮ್ಮ ಕರ್ನಾಟಕಕ್ಕೆ ಬಂದರೆ ಕಳೆದ ಇಪ್ಪತ್ತು ವರ್ಷಗಳ ಹಿಂದೆ ಕ್ರಿಶ್ಚಿಯನ್ನರೇ ಇಲ್ಲದ ಹಲವು ಪ್ರದೇಶಗಳಲ್ಲಿ ದಿಢೀರ್ ಚರ್ಚುಗಳು ತಲೆಯೆತ್ತಿವೆ
ಯೆಂದರೆ ಅಲ್ಲಿನ ಮತಾಂತರ ‘ಶ್ರಮದ’ ಯಶಸ್ವಿ ಫಲಿತಾಂಶವೇ ಆಗಿದೆ. ಪಾಪ, ಕೆಳವರ್ಗದ ದಲಿತರು, ನಿರ್ಗತಿಕರು, ಅಸಹಾ ಯಕರು ಕೇವಲ ಹಾಲು ಬ್ರೆಡ್ ಊಟ ನೀಡುತ್ತಾರೆಂದೇ ಮತಾಂತರಿಗಳಿಗೆ ಬಲಿಯಾಗಿ ಕನ್ವರ್ಟೆಡ್ ಆಗಿ ಹೋಗಿದ್ದಾರೆ.

ಹೀಗೆ ಹೋದವರಿಗೆ ಅಲ್ಲಿ ಯೇಸಪ್ಪ ನಿಮ್ಮ ಕಾಯಿಲೆ, ಕಷ್ಟ ಕಳೆಯುತ್ತಾನೆಂದೆಲ್ಲಾ ಭ್ರಮೆ ಮೂಡಿಸಿ, ಮಾನಸಿಕವಾಗಿ, ಭಾವನಾ ತ್ಮಕವಾಗಿ ಬಳಸಿಕೊಂಡು ಅವರಲ್ಲಿ ಮೂಢನಂಬಿಕೆ ಭಯ ಹುಟ್ಟಿಸಿ ಮತಾಂತರದ ಮೊದಲ ಅಸವನ್ನು ಬಳಸುತ್ತಾರೆ. ಇಂಥವರ ರೋಲ್‌ಮಾಡಲ್ ಆಗಿ ಮದರ್‌ಥೆರೆಸಾ ಅವರನ್ನು ತೋರಿಸುತ್ತಾರೆ. ಆದರೆ ಆಕೆ ಸಮಸ್ತ ಮತಾಂತರಗಳ ಅದಿದೇವತೆ ಎಂಬುದು ತಿಳಿಯದಷ್ಟು ಬುದ್ಧಿವಂತರು ಅವರಾಗಿರುವುದಿಲ್ಲ. ಆಮೇಲೆ ನೋಡಿ ‘ನೆಟ್‌ವರ್ಕ್’ ಚಾಲ್ತಿಗೊಳ್ಳುತ್ತದೆ. ಮನೆಮನೆಗೆ ತೆರಳುವುದು ಅಲ್ಲಿ ಅಕ್ಕಪಕ್ಕದವರನ್ನು ಕರೆಸಿಕೊಂಡು ಕಷ್ಟಸುಖ ವಿಚಾರಿಸುವುದು, ಪ್ರಾರ್ಥನೆ ಮಾಡುವುದು, ಭಜನೆ ಮಾಡುವುದು, ಚರ್ಚಿಗೆ ಬರಲು ಒತ್ತಾಯ ಮಾಡುವುದು ಖರ್ಚಿಗೆ ಅಷ್ಟಿಷ್ಟು ಹಣಸಹಾಯ ಮಾಡುವುದು ಹೀಗೆ ಕಾರ್ಯತಂತ್ರ
ಸಾಗುತ್ತಾ ಹೋಗುತ್ತದೆ. ಹಣಕಾಸಿನ ಸಂಸ್ಥೆಗಳ ಸ್ಕೀಂನಂತೆ ಈ ಮತಾಂತರದ ಕಾರ್ಯಕ್ಷೇತ್ರ ವಿಸ್ತರಿಸುತ್ತಾ ಹೋಗುತ್ತದೆ.

ಎಲ್ಲಾ ಪಕ್ಷಗಳಲ್ಲೂ ಹಿಂದೂ ನಾಯಕರುಗಳಿದ್ದಾರೆ. ಆದರೆ ಬಿಜೆಪಿಯ ಕೆಲವರನ್ನು ಹೊರತುಪಡಿಸಿ ಮತಾಂತರವನ್ನು
ಯಾವನಾದರು ನಾಯಕನು ಖಂಡಿಸುವನೇ?. ಸಾಧ್ಯವೇ ಇಲ್ಲ, ಇನ್ನೂ ಅವರಿಗಾಗಿಯೇ ಬೆಟ್ಟಗಳನ್ನೇ ಬಿಟ್ಟುಕೊಟ್ಟು ಮೇಯಲು ಬಿಡುವ ದರಿದ್ರ ರಾಜಕಾರಣಿಗಳು ನಮ್ಮಲ್ಲಿದ್ದಾರೆ. ನೋಡಿ, ವೇಶ್ಯವಾಟಿಕೆ ಮಟ್ಕ ಗಾಂಜಾ ವಂಚನೆ ಕಳ್ಳತನವಾಗಲಿ ಒಂದು ಅಪರಾಧವಾಗಿ ಕಾನೂನಿನ ವ್ಯಾಪ್ತಿಯಲ್ಲಿ ದೂರು ದಾಖಲಿಸಿಕೊಳ್ಳಬಹುದು. ಆದರೆ ಮತಾಂತರ ಕುತಂತ್ರ ಅಷ್ಟು ಸುಲಭವಲ್ಲ. ನೀವು ಪೊಲೀಸ್ ಠಾಣೆಗೆ ಹೋಗಿ ಇಂಥವರು ಹೀಗೆ ಕುತಂತ್ರದ ಮತಾಂತರ ಮಾಡುತ್ತಿದ್ದಾರೆಂದು ದೂರು ನೀಡಿ, ಆಗ ಅಲ್ಲಿ
ಎದುರಾಗುವ ಮೊದಲ ಪ್ರಶ್ನೆ ‘ನೀನು ಬಿಜೆಪಿಯವನಾ,  ನೀವು ಆರೆಸ್ಸಸ್ಸಾ, ನೀವು ಹಿಂದೂ ಸಂಘಟನೆಗಳವರಾ,
ಕೋಮುವಾದಿಗಳಾ’ ಎಂದು ಪ್ರಶ್ನಿಸುತ್ತಾರೆ.

ನಿಮಗೆ ಮತಾಂತರ ಮಾಡಲು ಬಂದಿದ್ದಾರಾ, ನಿಮ್ಮ ಮನೆಗೆ ಬಂದು ಆಮಿಷವೊಡ್ಡಿ ಮತಾಂತರವಾಗಲು ಬೆದರಿಸಿದ್ದಾರಾ?
ಎಂದು ಪ್ರಶ್ನಿಸುತ್ತಾರೆ. ಏಕೆಂದರೆ ಕೂಡಲೇ ಕ್ರಮಕೈಗೊಳ್ಳಲು ಪೊಲೀಸಿನವರಿಗೇ ಕ್ಲಿಷ್ಟಕರ ವಾಗಿದೆ. ಕಾನೂನು ನಿಮಗೆ ಸಾಕ್ಷಿ
ಪುರಾವೆ ಕೇಳುತ್ತದೆ. ಅದರಲ್ಲೂ ಕೌನ್ಸಿಲರುಗಳು, ಶಾಸಕರು, ರಾಜಕೀಯ ನೀಚರ ಪರೋಕ್ಷ ಬೆಂಬಲ ಮತಾಂತರಿಗಳಿಗಿದ್ದ ರಂತೂ, ಯಾವನಿಗೆ ಬೇಕು? ಇಂಥ ಉಸಾಬರಿ ಎಂದು ವಾಪಸ್ಸಾಗಿ, ಮತಾಂತರದ ಕೃತ್ಯ ನಡೆಯುತ್ತಿದ್ದರೂ ಮೂರನ್ನೂ
(ಕಣ್ಣು ಬಾಯಿ ಕಿವಿ) ಮುಚ್ಚಿಕೊಂಡು ಸುಮ್ಮನಿರಲೇ ಬೇಕು.

ಇದು ಈ ದೇಶದಲ್ಲಿರುವ ಪರಿಸ್ಥಿತಿ. ಇನ್ನು ನಮ್ಮ ಹಿಂದೂಗಳಲ್ಲಿನ ಎಲ್ಲಾ ಜಾತಿ ಉಪಜಾತಿಗಳಿಗೆ ಸ್ವಾಮೀಜಿಗಳಿದ್ದರೂ ಅವರ ಕೆಲಸವೇನಿದ್ದರೂ ರಾಜಕಾರಣಿಗಳ ಬಳಿಯಷ್ಟೆ. ಧರ್ಮ ವನ್ನು ರಕ್ಷಿಸುವ ಮೂಲಭೂತ ಕರ್ತವ್ಯ ಹೊಂದಿರುವ ಸ್ವಾಮೀಜಿಗಳು ಅದೊಂದನ್ನು ಬಿಟ್ಟು ಉಳಿದದ್ದೆಲ್ಲವನ್ನೂ ಮಾಡಿಕೊಂಡಿರುತ್ತಾರೆ. ಐಷರಾಮಿ ಮಠಗಳು ಎಸಿ ಕಾರುಗಳನ್ನು ಓಸಿ ಸನ್ಮಾನ ಗಳನ್ನು ಬಿಟ್ಟು, ದಲಿತ ಕೇರಿಗಳಲ್ಲಿ ನಿರ್ಗತಿಕರ ಅಸಹಾಯಕರ ಪ್ರದೇಶಗಳಲ್ಲಿ ವಾರಕೊಮ್ಮೆ ಯಾದರೂ ಸಂಚರಿಸಿದರೆ ಎಷ್ಟೋ
ಮತಾಂತರಗಳನ್ನು ಹಿಮ್ಮೆಟಿಸ ಬಹುದು. ಅದಕ್ಕಿಂತ ಘನಂಧಾರಿ ಕೆಲಸ ಕಾವಿಧಾರಿಗಳಿಗೆ ಇನ್ನಾವುದಿದೆ ಹೇಳಿ.

ನಮ್ಮಲ್ಲಿ ಧರ್ಮಸ್ಥಳ – ಹೊರನಾಡು- ಸಿದ್ದಗಂಗೆಯಂಥ ಧಾರ್ಮಿಕ ಸ್ಥಾನ ಗಳಿವೆ. ನಿತ್ಯ ಸಾವಿರಾರು ಮಂದಿ ಧರ್ಮ, ಜಾತಿ ಭೇದವಿಲ್ಲದೇ ಬಂದು ಉಂಡು ಹೋದರೂ ಅವರಲ್ಲಿ ಒಬ್ಬರನ್ನೂ ‘ನಮ್ಮ ಧರ್ಮಕ್ಕೆ ಬನ್ನಿ, ಮತಾಂತರವಾಗಿ’ ಎಂದು ಹೇಳುವು ದಿಲ್ಲ. ಆದರೆ ನಮ್ಮ ಧರ್ಮದ ಮೇಲೆಯೇ ಮತಾಂತರದ ಅಟ್ಟಹಾಸ ನಡೆಯುತ್ತಿದ್ದರೆ ಧರ್ಮಪ್ರತಿನಿಧಿಗಳೆಂಬ ಸ್ವಾಮೀಜಿಗಳ ನಡೆಯೇನು? ಇನ್ನು ಈ ಮತಾಂತರದ ಬೆಳವಣಿಗೆಗೆ ನಮ್ಮಲ್ಲಿನ ಕನ್ನಡಪರ ಸಂಘಟನೆಗಳ ಕೊಡುಗೆಯೂ ಇದೆ. ಹೇಗೆಂದರೆ ಕನ್ನಡವೇ ಬೇರೆ ಸಂಸ್ಕೃತಿಯೇ ಬೇರೆ ಎಂಬುದನ್ನು ಬಿತ್ತಿ, ಸರಕಾರಿ ಕಚೇರಿಯಲ್ಲಿನ ಜಾತ್ಯಾತೀತ ನಿಯಮವನ್ನು ಕನ್ನಡದ ಸಾಂಸ್ಕೃತಿಕ ವಿಚಾರಗಳಲ್ಲಿ ಇವರುಗಳೇ ಹೆಚ್ಚಾಗಿ ಅಳವಡಿಸಿಕೊಂಡು ಅಲ್ಲಿ ಗಣೇಶ, ಭುವನೇಶ್ವರಿ, ಶ್ರೀರಾಮನ ಸ್ಮರಣೆಯನ್ನು ಮಾಡಿದರೆ ಅದು ಕೋಮುವಾದವಾಗುತ್ತದೆ, ಅದು ಕ್ರಿಶ್ಚಿಯನ್ನರು ಮುಸಲ್ಮಾನರಿಗೆ ಹೊಂದುವುದಿಲ್ಲವೆಂಬ ಮುಲಾಜನ್ನು
ಇಟ್ಟುಕೊಂಡು ಕನ್ನಡವೇ ದೇವರು ಧರ್ಮ ಜಾತಿ ಎಂದು ಹೇಳಿಕೊಂಡಿದ್ದರ ಪ್ರತಿಫಲವೇ ಮೊನ್ನೆ ಜಯನಗರದಲ್ಲಿ ‘ಬಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯ ಯೇಸು’ ಎನ್ನುತ್ತಾ ಸಾಕ್ಷಾತ್ ಕನ್ನಡತಾಯಿ, ಕರ್ನಾಟಕ ಮಾತೆ, ಭುವನೇಶ್ವರಿ ದೇವಿಗೆ ಜಾಗ ಖಾಲಿಮಾಡಿಸಿದ್ದು.

ರಾಷ್ಟ್ರಕವಿ ಕುವೆಂಪು ಅವರ ಕಾವ್ಯವನ್ನೇ ತಿದ್ದಿ, ಹಿಂದೂಗಳ ಸಾಂಸ್ಕೃತಿಕ ವಿಚಾರಗಳಿಗೆ ಕೊಳ್ಳಿಯಿಟ್ಟು ಜೈಕ್ರಿಸ್ತ ಜೈಯೇಸು
ಎಂದೆಲ್ಲಾ ಆಮಂತ್ರಣ ಪ್ರತಿ, ಫ್ಯಾಕ್ಸ್  ಬ್ಯಾನರುಗಳನ್ನಿಟ್ಟು ನೈಜ ಕನ್ನಡ ರಾಜ್ಯೋತ್ಸವವನ್ನು ‘ಕ್ರಿಶ್ಚಿಯನ್ ರಾಜ್ಯೋತ್ಸವ’
ವನ್ನಾಗಿಸಿದರಲ್ಲ, ಅಲ್ಲಿ ಕಂಡದ್ದು ಸಾಕ್ಷಾತ್ ಮತಾಂತರದ ಬೆತ್ತಲೆ ದರ್ಶನ. ಗೋವು ಸಂಸ್ಕೃತಿಯಂತೆ ಅದರ ಕ್ಷೀರ ಕನ್ನಡ ದಂತೆ ಗೋವನ್ನೇ ಕೊಂದರೆ ಕನ್ನಡ ಉಳಿಯಲು ಸಾಧ್ಯವೇ?. ಗೋವಿನ ಹಾಲನ್ನು ಬಿಟ್ಟು ಹಂದಿ, ನಾಯಿಯ ಹಾಲನ್ನು ಕುಡಿಯಲು ಸಾಧ್ಯವೇ?.

ಕನ್ನಡಿಗರು ರಾಜ್ಯೋತ್ಸವವನ್ನು ಹಬ್ಬವನ್ನಾಗಿ ಆಚರಿಸುವುದು ನಾಡಿನ ಸಾಂಸ್ಕೃತಿಕ ಮತ್ತು ಧಾರ್ಮಿಕ ಪರಂಪರೆಯನ್ನು ಹೆಮ್ಮೆಯಿಂದ ಮೆರೆಸಿ ವಿಜೃಂಭಿಸಲು. ಆದರೆ ತಾಯಿ ಭುವನೇಶ್ವರಿಯನ್ನೇ ನಿರ್ಲಕ್ಷಿಸಿದ ಇವರುಗಳು ಸಮಸ್ತ ಕನ್ನಡಿಗರ ಮೇಲೆ ಮಾಡಿದ ಸಾಂಸ್ಕೃತಿಕ ಆಕ್ರಮಣ. ಇಂಥವರನ್ನೆಲ್ಲಾ ಬೆಳೆಸುತ್ತಿರುವುದು ಹಿಂದೂಗಳೇ ಹೊರತು ಮತ್ಯಾರೂ ಅಲ್ಲ. ಸ್ಥಳೀಯ
ರಾಜಕಾರಣಿಗಳ ಬೆಂಬಲ ಮುಲಾಜು ಇವುಗಳೇ ಇಂಥ ಅನಾಗರಿಕ ಅಸಂಬದ್ಧ ತಿಕ್ಕಲು ಆಚರಣೆಗಳಿಗೆ ಕಾರಣ. ಇಷ್ಟಕ್ಕೂ ನಮ್ಮ ದೇಶದಲ್ಲಿ ಭಾಷೆಯನ್ನು ದೇವರೆಂದೇ ಭಾವಿಸುತ್ತಾರೆ.

ಅದರಲ್ಲೂ ಕನ್ನಡವು ಕೇವಲ ಭಾಷೆಯಲ್ಲ ಅದು ಇಲ್ಲಿನ ಪರಂಪರೆ ಸಂಸ್ಕೃತಿ ಧಾರ್ಮಿಕತೆಯೊಂದಿಗೆ ಅವಿನಾಭಾವ ಸೆಳೆತ, ಸಂಬಂಧ ಹೊಂದಿದೆ. ಹೀಗಿರುವಾಗ ನಿನ್ನೆಮೊನ್ನೆ ಮತಾಂತರವಾಗಿ ಕ್ರಿಶ್ಚಿಯನ್ ಆದ ಇವರಿಗೇ, ಭುವನೇಶ್ವರಿ ದೇವಿಯನ್ನೇ ಓಡಿಸುವ, ಯೇಸುವಿನ ಮೇಲೆ ಇಷ್ಟೊಂದು ಮಮಕಾರ ಅಕ್ಕರೆ ಇದ್ದರೆ, ಇಡೀ ಭೂಮಂಡಲವನ್ನೇ ಆರಾಧಿಸುತ್ತಾ ಪ್ರತಿ ಯೊಂದನ್ನೂ ಹೆಣ್ಣಿಗೆ, ತಾಯಿಗೆ ಹೋಲಿಸುತ್ತಾ ಕಣ್ಣಿಗೊತ್ತಿಕೊಂಡು ನಮಸ್ಕರಿಸಿ ಪೂಜಿಸುವ ಕನ್ನಡಿಗರಿಗೆಷ್ಟಿರಬೇಕು?. ಸರಕಾರಗಳು ನ್ಯಾಯಾಲಗಳು ಈ ಮತಾಂತರ ಮೋಸವನ್ನು ಗಂಭೀರವಾಗಿ ಪರಿಗಣಿಸಿ ಸಮಗ್ರ ತನಿಖೆ ನಡೆಸಿದರೆ ಇದರ ಅಸಲಿ ಒಳತಂತ್ರ ಬಯಲಾಗುತ್ತದೆ. ಅದಕ್ಕೆ ತಕ್ಕಂತೆ ಬಿಗಿಯಾದ ಕಾನೂನನ್ನು ತರಲೇಬೇಕಿದೆ.